Friday, November 6, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    BIG NEWS | ಬೆಂಗಳೂರಿಗೆ ದಿಢೀರ್ ಭೇಟಿ ನೀಡಿದ ಸೂಪರ್‌ಸ್ಟಾರ್ ರಜನಿಕಾಂತ್: ಆಸ್ಪತ್ರೆಯಲ್ಲಿರುವ ಅಣ್ಣ ಸತ್ಯನಾರಾಯಣ ರಾವ್ ಆರೋಗ್ಯ ವಿಚಾರಣೆ

    ಡೀಸೆಲ್ ನೆಪ, ಜನರ ಜೇಬಿಗೆ ಕತ್ತರಿ: ಬಸ್ ದರ ಏರಿಕೆಯ ಹಿಂದಿನ ಕಹಿ ಸತ್ಯವೇನು?

    BW SPECIAL | ಅಕ್ಕಿ ದರ ಭಾರಿ ಏರಿಕೆ: ಗ್ರಾಹಕರಿಗೆ ಬರೆ: ಕೆಜಿ ದರ ಸರಾಸರಿ ಜೂನ್ ನಿಂದ ನವೆಂಬರ್ ಗೆ ₹22 ಹೆಚ್ಚಳ

    ನೈಋತ್ಯ ರೈಲ್ವೆ ಐತಿಹಾಸಿಕ ಸಾಧನೆ: ಅಕ್ಟೋಬರ್‌ನಲ್ಲಿ ₹928 ಕೋಟಿ ಆದಾಯ, ಸರಕು ಸಾಗಣೆಯಲ್ಲಿ ಸಾರ್ವಕಾಲಿಕ ದಾಖಲೆ

    GST News | ಸರಕು ಮತ್ತು ಸೇವಾ ತೆರಿಗೆ ಸಂಗ್ರಹದಲ್ಲಿ ಸಾರ್ವಕಾಲಿಕ ದಾಖಲೆ: ಅಕ್ಟೋಬರ್‌ನಲ್ಲಿ ₹2.31 ಲಕ್ಷ ಕೋಟಿ ತೆರಿಗೆ ಸಂಗ್ರಹ

    ರಾಜ್ಯೋತ್ಸವಕ್ಕೆ ‘HMT ಕನ್ನಡಿಗ’ ವಾಚ್ ಬಿಡುಗಡೆ: ಕನ್ನಡಿಗರಿಗೆ ಹೆಚ್‌ಡಿಕೆ ವಿಶೇಷ ಉಡುಗೊರೆ

    ರಾಜ್ಯದಲ್ಲಿ ನವೆಂಬರ್ 7ರವರೆಗೆ ಭಾರಿ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ

    ಶ್ರೀಗಂಧ ರಕ್ಷಣೆಯ ಬೂಟಾಟಿಕೆ: ಕಳ್ಳಸಾಗಾಣಿಕೆ ಸಿಂಡಿಕೇಟ್‌ಗಳ ಅಟ್ಟಹಾಸಕ್ಕೆ ನಡುಗುತ್ತಿದೆಯೇ ಗಂಧದ ನಾಡು?

    ವಂದೇ ಭಾರತ್ ಸ್ಲೀಪರ್ ನ.2ರಿಂದ ವಾಣಿಜ್ಯ ಸಂಚಾರ ಆರಂಭ: ವೇಗಕ್ಕಷ್ಟೇ ಜೈ, ಜೇಬಿಗೆ ಕತ್ತರಿ

  • Bengaluru Focus

    ಸೂರ್ಯನ ರಹಸ್ಯ ಭೇದಿಸಿದ ಆದಿತ್ಯ-L1: ಸೌರ ಸ್ಫೋಟದ ಅಸಲಿ 3D ರೂಪ ಬಯಲು

    ಬೆಂಗಳೂರು ವರ್ತುಲ ರಸ್ತೆಗೆ ₹1,118 ಕೋಟಿ ಹೆಚ್ಚುವರಿ ಅನುದಾನ

    BIG NEWS | ಬೆಂಗಳೂರಿಗೆ ದಿಢೀರ್ ಭೇಟಿ ನೀಡಿದ ಸೂಪರ್‌ಸ್ಟಾರ್ ರಜನಿಕಾಂತ್: ಆಸ್ಪತ್ರೆಯಲ್ಲಿರುವ ಅಣ್ಣ ಸತ್ಯನಾರಾಯಣ ರಾವ್ ಆರೋಗ್ಯ ವಿಚಾರಣೆ

    Viral Video | ಕನಕಪುರ ರಸ್ತೆ ಫೋರಂ ಮಾಲ್‌ನಲ್ಲಿ ಆಘಾತಕಾರಿ ಘಟನೆ: ಬಳಸಿ ಬಿಸಾಕಿದ ಪೇಪರ್ ಕಪ್‌ನಲ್ಲಿ ಜ್ಯೂಸ್ ಮಾರಾಟ, ಸಿಬ್ಬಂದಿಗೆ ತರಾಟೆ

    ಡೀಸೆಲ್ ನೆಪ, ಜನರ ಜೇಬಿಗೆ ಕತ್ತರಿ: ಬಸ್ ದರ ಏರಿಕೆಯ ಹಿಂದಿನ ಕಹಿ ಸತ್ಯವೇನು?

    BW SPECIAL | ಅಕ್ಕಿ ದರ ಭಾರಿ ಏರಿಕೆ: ಗ್ರಾಹಕರಿಗೆ ಬರೆ: ಕೆಜಿ ದರ ಸರಾಸರಿ ಜೂನ್ ನಿಂದ ನವೆಂಬರ್ ಗೆ ₹22 ಹೆಚ್ಚಳ

    ಟಿಡಿಆರ್ ಡಿಜಿಟಲೀಕರಣ: ಬೆಂಗಳೂರಿನ ಟ್ರಾಫಿಕ್ ಕಂಟಕಕ್ಕೆ ಮದ್ದು ನೀಡಲಿದೆಯೇ ಆನ್‌ಲೈನ್ ಮಂತ್ರ?

    ರಾಜ್ಯೋತ್ಸವಕ್ಕೆ ‘HMT ಕನ್ನಡಿಗ’ ವಾಚ್ ಬಿಡುಗಡೆ: ಕನ್ನಡಿಗರಿಗೆ ಹೆಚ್‌ಡಿಕೆ ವಿಶೇಷ ಉಡುಗೊರೆ

    ರಾಜ್ಯದಲ್ಲಿ ನವೆಂಬರ್ 7ರವರೆಗೆ ಭಾರಿ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ

  • Public interest
  • BW Special
  • Life Style
  • Photo Gallery
  • Video
No Result
View All Result

Karnataka Election 2023 | ರಾಜ್ಯದಲ್ಲಿ ಮತದಾರರಿಗೆ ಆಮಿಷವೊಡ್ಡಿದರೆ ಹುಷಾರ್…! : ವಿವಿಧ ತನಿಖಾ ಸಂಸ್ಥೆಗಳಿಂದ 57.72 ಕೋಟಿ ರೂ. ಮೌಲ್ಯದ ನಗದು, ವಸ್ತು ವಶ – 1985 ಎಫ್ ಐಆರ್ ದಾಖಲು

ಪೊಲೀಸ್ ಇಲಾಖೆ, ಅಬಕಾರಿ ಇಲಾಖೆ, ವಾಣಿಜ್ಯ ತೆರಿಗೆ ಇಲಾಖೆ, ಮಾದಕವಸ್ತು ನಿಗ್ರಹ ಬ್ಯೂರೊ, ಕೇಂದ್ರೀಯ ಸುಂಕ ಹಾಗೂ ಪರೋಕ್ಷ ತೆರಿಗೆ ಮಂಡಳಿ, ರಾಜ್ಯ ನಾಗರೀಕ ವಿಮಾನಯಾನದಿಂದ ವಿಚಕ್ಷಣೆ, ಕಾರ್ಯಾಚರಣೆ ಮೂಲಕ ಚುನಾವಣಾ ಅಕ್ರಮಗಳ ಮೇಲೆ ಹದ್ದಿನ ಕಣ್ಣು

by Bengaluru Wire Desk
March 29, 2023
in News Wire
Reading Time: 1 min read
0
ಚಿನ್ನ, ನಗದು ವಸ್ತುವಿನ ಸಾಂದರ್ಭಿಕ ಚಿತ್ರ

ಚಿನ್ನ, ನಗದು ವಸ್ತುವಿನ ಸಾಂದರ್ಭಿಕ ಚಿತ್ರ

ಬೆಂಗಳೂರು, ಮಾ.29 www.bengaluruwire.com : ರಾಜ್ಯದಲ್ಲಿ ಮತದಾರರ ಮೇಲೆ ಪ್ರಭಾವ ಬೀರುವ ಚುನಾವಣಾ ಅಕ್ರಮಗಳ ವಿಷಯದಲ್ಲಿ ವಿವಿಧ ಪ್ರಕರಣದಲ್ಲಿ ಹಲವು ಇಲಾಖೆಗಳ ತಂಡಗಳು ಮಾ.27ರ ತನಕ 57.72 ಕೋಟಿ ರೂ. ಮೊತ್ತದ ನಗದು, ಮದ್ಯ, ಚಿನ್ನ ಬೆಳ್ಳಿ ಸೇರಿದಂತೆ ವಿವಿಧ ವಸ್ತುಗಳನ್ನು ವಶಪಡಿಸಿಕೊಂಡಿದೆ. ಚುನಾವಣೆಯಲ್ಲಿ ಅಭ್ಯರ್ಥಿಗಳು, ಪಕ್ಷಗಳು ಅಥವಾ ವಿವಿಧ ಸಂಸ್ಥೆಗಳು ಮತದಾರರಿಗೆ ಆಮಿಷವೊಡ್ಡಿದರೆ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳುವಂತೆ ಚುನಾವಣಾ ಆಯೋಗ ಖಡಕ್ ಸೂಚನೆ ನೀಡಿದೆ.

ರಾಜ್ಯ ಚುನಾವಣಾ ಆಯೋಗವು ಸಾರ್ವತ್ರಿಕ ವಿಧಾನಸಭಾ ಚುನಾವಣೆಯ ವೇಳಾಪಟ್ಟಿಯನ್ನು ಈಗಾಗಲೇ ಪ್ರಕಟಿಸಿದ್ದು, ಒಟ್ಟಾರೆ 58,282 ಮತಗಟ್ಟೆಗಳಲ್ಲಿ ಚುನಾವಣೆ ನಡೆಸಲು ಅಗತ್ಯ ಕ್ರಮ ಕೈಗೊಂಡಿದೆ. ಇದರ ನಡುವೆ ಮತದಾರರ ಮೇಲೆ ಆಮೀಷವೊಡ್ಡಲು ರಾಜಕೀಯ ಪಕ್ಷಗಳ ಮುಖಂಡರು ಅವರ ಹಿಂಬಾಲಕರು, ಚುನಾವಣಾ ಆಕಾಂಕ್ಷಿಗಳು ಮತ್ತಿತರರು ನಗದು, ಉಡುಗೊರೆ, ಕೊಡುಗೆಗಳನ್ನು ನೀಡುವ ಬಗ್ಗೆ ಆಯೋಗವು ವಿಚಕ್ಷಣೆಗಾಗಿ ಫ್ಲೈಯಿಂಗ್ ಸ್ಕ್ವಾಡ್, ಸ್ಥಿರ ವಿಚಕ್ಷಣಾ ತಂಡಗಳನ್ನು ರಚಿಸಿದೆ. ಅಲ್ಲದೆ ವಿವಿಧ ತನಿಖಾ ತಂಡಗಳು ಚುನಾವಣಾ ಭ್ರಷ್ಟಾಚಾರಗಳ ಮೇಲೆ ವಿಚಕ್ಷಣೆ ನಡೆಸಿ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿತ್ತು.

ಪೊಲೀಸ್ ಇಲಾಖೆ 34.36 ಕೋಟಿ ರೂ. ಮೌಲ್ಯದ ವಸ್ತು, 14.24 ಕೋಟಿ ರೂ. ನಗದು, 530 ಕೆಜಿ ಡ್ರಗ್ಸ್, 15 ಕೆಜಿ ಚಿನ್ನ,  135 ಕೆಜಿ ಬೆಳ್ಳಿ ಸೇರಿದಂತೆ 11.20 ಕೋಟಿ ರೂ. ಮೌಲ್ಯದ ಉಚಿತ ಉಡುಗೊರೆ ಹಾಗೂ ಕೊಡುಗೆಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದೆ. ಇನ್ನು ಅಬಕಾರಿ ಇಲಾಖೆಯು 6.84 ಕೋಟಿ ರೂ. ಮೌಲ್ಯದ 1,38,847 ಲೀಟರ್ ಮದ್ಯ ಹಾಗೂ 43 ಕೆಜಿ ಡ್ರಗ್ಸ್ ವಶಪಡಿಸಿಕೊಂಡಿದೆ. ಆದಾಯ ತೆರಿಗೆ ಇಲಾಖೆಯು ಒಟ್ಟು 1.16 ಕೋಟಿ ರೂ. ನಗದನ್ನು ವಶಪಡಿಸಿಕೊಂಡಿದೆ.

ಇನ್ನು ವಾಣಿಜ್ಯ ತೆರಿಗೆ ಇಲಾಖೆಯು ಒಟ್ಟು 5.02 ಕೋಟಿ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದೆ. ಕಂದಾಯ ಗುಪ್ತಚರ ನಿರ್ದೇಶನಾಲಯ (Directorate of Revenue Intelligence)ವು ವಿವಿಧ ಪ್ರಕರಣಗಳಲ್ಲಿ ಮತದಾರರಿಗೆ ಆಮಿಷವೊಡ್ಡಲು, ಅನುಮಾನಸ್ಪದವಾಗಿ ಕೊಂಡೊಯ್ಯುತ್ತಿದ್ದ, ಮಾರಾಟ ಮಾಡುತ್ತಿದ್ದ ಇನ್ನಿತರ ಪ್ರಕರಣಗಳಲ್ಲಿ 1.03 ಕೋಟಿ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದೆ. ಮಾದಕವಸ್ತು ನಿಗ್ರಹ ದಳ (NCB) 57.15 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಹಾಗೂ ಕೇಂದ್ರೀಯ ಸುಂಕ ಹಾಗೂ ಪರೋಕ್ಷ ತೆರಿಗೆ ಮಂಡಳಿ (CBIC) 3.97 ಕೋಟಿ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದೆ. ಅದೇ ರೀತಿ ರಾಜ್ಯ ನಾಗರೀಕ ವಿಮಾನಯಾನದಿಂದ 69.40 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದೆ.

ಒಟ್ಟಾರೆ ಮಾ.9ರಿಂದ 27ನೇ ತಾರೀಖಿನ ಅವಧಿಯಲ್ಲಿ ರಾಜ್ಯ ಚುನಾವಣಾ ಆಯೋಗದ ನಿರ್ದೇಶನದ ಹಿನ್ನಲೆಯಲ್ಲಿ ವಿವಿಧ ತನಿಖಾ ತಂಡಗಳು ಚುನಾವಣಾ ಅಕ್ರಮಗಳನ್ನು ಪತ್ತೆಹಚ್ಚಿ ಒಟ್ಟಾರೆ 1,985 ಎಫ್ ಐಆರ್ ಗಳನ್ನು ದಾಖಲಿಸಿದೆ. ವಿಧಾನಸಭಾ ಚುನಾವಣೆಯಲ್ಲಿ ಪ್ರತಿ ಅಭ್ಯರ್ಥಿಯ ಚುನಾವಣಾ ವೆಚ್ಚದ ಒಟ್ಟಾರೆ ಮಿತಿಯನ್ನು ಚುನಾವಣಾ ಆಯೋಗವು 40 ಲಕ್ಷ ರೂ.ಗಳಿಗೆ ನಿಗದಿಪಡಿಸಲಾಗಿದೆ. ಅಭ್ಯರ್ಥಿಗಳ ಚುನಾವಣಾ ವೆಚ್ಚದ ಮೇಲೆ ಕಣ್ಣಿಡಲು 234 ಸಹಾಯಕ ವೆಚ್ಚ ನಿರೀಕ್ಷಕರನ್ನು ಚುನಾವಣಾ ಆಯೋಗ ನೇಮಿಸಿದೆ.

Sharing is Caring

  • Share on WhatsApp (Opens in new window) WhatsApp
  • Print (Opens in new window) Print
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Share on LinkedIn (Opens in new window) LinkedIn

Like this:

Like Loading…
WhatsApp Join our WhatsApp Channel
Previous Post

Karnataka Assembly Election 2023 | ಕರ್ನಾಟಕದಲ್ಲಿ ಇಂದಿನಿಂದ ಚುನಾವಣಾ ನೀತಿಸಂಹಿತೆ ಜಾರಿ : ಮೇ.10 ಮತದಾನ – ಮೇ.13ಕ್ಕೆ ಮತ ಎಣಿಕೆ

Next Post

Ksheera Bhagya No Milk |11 ಜಿಲ್ಲೆಗಳ ಮಕ್ಕಳಿಗಿಲ್ಲ ಕ್ಷೀರಭಾಗ್ಯ ಯೋಜನೆ : ಹಾಲಿನ ಪೌಡರ್ ಪೂರೈಕೆಗೆ ಆಹಾರ ನಮ್ಮ ಹಕ್ಕು ಆಗ್ರಹ

Next Post

Ksheera Bhagya No Milk |11 ಜಿಲ್ಲೆಗಳ ಮಕ್ಕಳಿಗಿಲ್ಲ ಕ್ಷೀರಭಾಗ್ಯ ಯೋಜನೆ : ಹಾಲಿನ ಪೌಡರ್ ಪೂರೈಕೆಗೆ ಆಹಾರ ನಮ್ಮ ಹಕ್ಕು ಆಗ್ರಹ

14Th BIFFES Film Festival | 14ನೇ ಬೆಂಗಳೂರು ಚಲನ ಚಿತ್ರೋತ್ಸವ ಸಮಾರೋಪ : "ನಾನು ಕುಸುಮ" ಕನ್ನಡದ ಅತ್ಯುತ್ತಮ ಚಿತ್ರ

Please login to join discussion

Like Us on Facebook

Follow Us on Twitter

Recent News

ಸೂರ್ಯನ ರಹಸ್ಯ ಭೇದಿಸಿದ ಆದಿತ್ಯ-L1: ಸೌರ ಸ್ಫೋಟದ ಅಸಲಿ 3D ರೂಪ ಬಯಲು

November 6, 2026

ಬೆಂಗಳೂರು ವರ್ತುಲ ರಸ್ತೆಗೆ ₹1,118 ಕೋಟಿ ಹೆಚ್ಚುವರಿ ಅನುದಾನ

November 5, 2026
Bengaluru Wire, Kannada News, latest News in Kannada

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

ಸೂರ್ಯನ ರಹಸ್ಯ ಭೇದಿಸಿದ ಆದಿತ್ಯ-L1: ಸೌರ ಸ್ಫೋಟದ ಅಸಲಿ 3D ರೂಪ ಬಯಲು

November 6, 2026

ಬೆಂಗಳೂರು ವರ್ತುಲ ರಸ್ತೆಗೆ ₹1,118 ಕೋಟಿ ಹೆಚ್ಚುವರಿ ಅನುದಾನ

November 5, 2026

BIG NEWS | ಬೆಂಗಳೂರಿಗೆ ದಿಢೀರ್ ಭೇಟಿ ನೀಡಿದ ಸೂಪರ್‌ಸ್ಟಾರ್ ರಜನಿಕಾಂತ್: ಆಸ್ಪತ್ರೆಯಲ್ಲಿರುವ ಅಣ್ಣ ಸತ್ಯನಾರಾಯಣ ರಾವ್ ಆರೋಗ್ಯ ವಿಚಾರಣೆ

November 5, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group
%d