Thursday, September 10, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    CM DK Shivakumar Open Letter | ಅಧಿಕಾರಕ್ಕಿಂತ ಹೊಣೆಗಾರಿಕೆ ದೊಡ್ಡದು: 100 ದಿನ ಪೂರೈಸಿದ ಸಿಎಂ ಡಿ.ಕೆ. ಶಿವಕುಮಾರ್ ಬಹಿರಂಗ ಪತ್ರ

    Free Coaching | ಮುಖ್ಯಮಂತ್ರಿ ವಿದ್ಯಾರ್ಥಿ ಸಹಾಯ ಹಸ್ತ: 90,000 ಅಭ್ಯರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ಆನ್‌ಲೈನ್ ಕೋಚಿಂಗ್

    ಪಿಡಬ್ಲ್ಯುಡಿ ಸಚಿವ ಸತೀಶ್ ಜಾರಕಿಹೊಳಿಗೆ ಇಡಿ ಶಾಕ್: 25ಕ್ಕೂ ಹೆಚ್ಚು ಕಡೆ ದಾಳಿ

    ಆರೋಗ್ಯ ಸಂದೇಶಕ್ಕೆ ಸಾಹಿತ್ಯದ ಸ್ಪರ್ಶ: ‘ವೈದ್ಯಲೋಕ’ ಕಥೆ-ಕವನ ಸ್ಪರ್ಧೆ ಪ್ರಶಸ್ತಿ ಪ್ರದಾನ

    ಮೈಸೂರು ದಸರಾ 2026: ಈ ಬಾರಿ ‘ನಿಶಾನೆ ಆನೆ’ಯಾಗಿ ಗಜಪಡೆ ಮುನ್ನಡೆಸಲಿದ್ದಾನೆ ಅಭಿಮನ್ಯು

    ಉಡುಪಿ ಶ್ರೀಕೃಷ್ಣ ಮಠ, ಬೆಂಗಳೂರು ಇಸ್ಕಾನ್ ಸೇರಿ ದೇಶಾದ್ಯಂತ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮ

    ​ಬೆಂಗಳೂರು ಆಗಸದಲ್ಲಿ ಮತ್ತೆ ಲೋಹದ ಹಕ್ಕಿಗಳ ಕಲರವ: ಫೆಬ್ರವರಿ 8 ರಿಂದ 16ನೇ ‘ಏರೋ ಇಂಡಿಯಾ 2027’ ಸಂಭ್ರಮ

    Hebbal Short Tunnel IISC Study Report | ಹೆಬ್ಬಾಳ ಕಿರು ಸುರಂಗ ಯೋಜನೆ ಅವೈಜ್ಞಾನಿಕ: ರಾಜ್ಯಪಾಲರಿಗೆ ಐಐಎಸ್ಸಿ ವರದಿ ಸಲ್ಲಿಕೆ

    ಕೆಪಿಎಸ್ ಸ್ಸಿ ಕೇಂದ್ರ ಕಚೇರಿ ಕಟ್ಟಡ

    KPSC KAS Recruitment 2026 | ಗೆಜೆಟೆಡ್ ಪ್ರೊಬೇಷನರ್ ಹುದ್ದೆಗಳ ಅರ್ಜಿ ಸಲ್ಲಿಕೆ ದಿನಾಂಕ ಸೆಪ್ಟೆಂಬರ್ 7ರವರೆಗೆ ವಿಸ್ತರಣೆ

  • Bengaluru Focus

    BW SPECIAL | ಬೆಂಗಳೂರಿಗೆ ಆಡಳಿತ ಗ್ರಹಣ: ಮೇಯರ್, ಕಾರ್ಪೊರೇಟರ್‌ಗಳಿಲ್ಲದೆ 6 ವರ್ಷ ಪೂರ್ಣ

    ಪಿಡಬ್ಲ್ಯುಡಿ ಸಚಿವ ಸತೀಶ್ ಜಾರಕಿಹೊಳಿಗೆ ಇಡಿ ಶಾಕ್: 25ಕ್ಕೂ ಹೆಚ್ಚು ಕಡೆ ದಾಳಿ

    ಓಲಾ, ಊಬರ್ ಗೂ ಬಿಎಂಟಿಸಿ ಲೈವ್ ಟ್ರ್ಯಾಕಿಂಗ್ ಆಪ್: ಮೆಟ್ರೋಗೆ 200 ಮಿನಿ ಎಸಿ ಬಸ್ ಸಂಪರ್ಕ

    ಯಶವಂತಪುರ ಎಪಿಎಂಸಿಗೆ ಸಿಎಂ ದಿಢೀರ್ ಭೇಟಿ: ವಿಮೆ ವಂಚಿಸಿದ ಸೊಸೈಟಿ ಕಾರ್ಯದರ್ಶಿ ವಜಾಕ್ಕೆ ಡಿಕೆಶಿ ಸೂಚನೆ

    ಆರೋಗ್ಯ ಸಂದೇಶಕ್ಕೆ ಸಾಹಿತ್ಯದ ಸ್ಪರ್ಶ: ‘ವೈದ್ಯಲೋಕ’ ಕಥೆ-ಕವನ ಸ್ಪರ್ಧೆ ಪ್ರಶಸ್ತಿ ಪ್ರದಾನ

    Railway News | ಶಿವಮೊಗ್ಗ-ಬೆಂಗಳೂರು-ತಿರುಪತಿ ವಂದೇ ಭಾರತ್ ಎಕ್ಸ್‌ಪ್ರೆಸ್‌ ಶೀಘ್ರ?

    GBA News | ಕೋರಮಂಗಲದಲ್ಲಿ ಅತ್ಯಾಧುನಿಕ ಘನ ತ್ಯಾಜ್ಯ ಕಲಿಕಾ ಕೇಂದ್ರ ಆರಂಭ: ‘ಕಸದಿಂದ ರಸ’ಕ್ಕೆ ಸಚಿವ ರಾಮಲಿಂಗಾರೆಡ್ಡಿ ಚಾಲನೆ

    ಕಾವೇರಿ 6ನೇ ಹಂತ: “₹7,000 ಕೋಟಿ ಲೂಟಿಗೆ ಸ್ಕೆಚ್” –  ಆರ್.ಅಶೋಕ್ ಗಂಭೀರ ಆರೋಪ

    Namma Metro Purple Line

    Namma Metro News | ನಮ್ಮ ಮೆಟ್ರೋ ನೇರಳೆ, ಹಸಿರು ಮಾರ್ಗಕ್ಕೆ 4 ಹೊಸ ರೈಲುಗಳು ಶೀಘ್ರದಲ್ಲೇ ಸೇರ್ಪಡೆ

  • Public interest
  • BW Special
  • Life Style
  • Photo Gallery
  • Video
No Result
View All Result

Home Bengaluru Focus

BESCOM DLMS Meter | ಬೆಂಗಳೂರಿನ ವಿದ್ಯುತ್ ಗ್ರಾಹಕರೇ ಗಮನಿಸಿ : ಪ್ರತಿಯೊಂದು ಮನೆಯಲ್ಲಿನ ವಿದ್ಯುತ್ ಮೀಟರ್ ಬದಲಾಗಲಿದೆ – ಈ ಅಂಶಗಳನ್ನು ನೀವು ತಿಳಿಯಲೇಬೇಕು!!

ಬೆಂಗಳೂರಿನ ಬೆಸ್ಕಾಂ ಬಿಎಂಎಜೆಡ್ ವ್ಯಾಪ್ತಿಯಲ್ಲಿದೆ ಒಟ್ಟು 17,68 ಲಕ್ಷ ಮೀಟರ್ ಗಳು | ಹೊಸ ಮೀಟರ್ ಬಳಕೆಯಿಂದ ಹಲವು ಉಪಯೋಗಗಳಿವೆ | ಬೆಸ್ಕಾಂ 4 ವೃತ್ತಗಳಲ್ಲಿ ಈತನಕ (ಡಿ.6) 6.22 ಲಕ್ಷ ಮೀಟರ್ ಬದಲಾವಣೆ ಮಾಡಲಾಗಿದೆ

by Bengaluru Wire Desk
December 19, 2022
in Bengaluru Focus, BW Special
Reading Time: 2 mins read
21
ಡಿಎಲ್ ಎಂಎಸ್ ಸ್ಟಾಟಿಕ್ ಡಿಜಿಟಲ್ ಮೀಟರ್ ಚಿತ್ರ

ಡಿಎಲ್ ಎಂಎಸ್ ಸ್ಟಾಟಿಕ್ ಡಿಜಿಟಲ್ ಮೀಟರ್ ಚಿತ್ರ

ಬೆಂಗಳೂರು, ಡಿ.10 www.bengaluruwire.com : ರಾಜಧಾನಿ ಬೆಂಗಳೂರಿನ ಮೆಟ್ರೋಪಾಲಿಟನ್ ಪ್ರದೇಶ ವಲಯದಲ್ಲಿನ (BMAZ)  ಎಲೆಕ್ಟ್ರೋ ಮೆಕಾನಿಕಲ್ ಮೀಟರ್ ಗಳನ್ನು ಡಿಜಿಟಲ್ ಮೀಟರ್ ಗೆ ಬದಲಿಸುವ ಕಾರ್ಯ ನಡೆಯುತ್ತಿದೆ. ಈತನಕ ಒಟ್ಟು 6,22,418 ಎಲೆಕ್ಟ್ರೋ ಮೆಕಾನಿಕಲ್ ಮೀಟರ್ ಗಳನ್ನು ಸ್ಟಾಟಿಕ್ ಡಿಜಿಟಲ್ ಮೀಟರ್ ಗೆ ಬದಲಾಯಿಸಲಾಗಿದೆ.

ಹತ್ತು ವರ್ಷಗಳ ಹಿಂದೆ ಅಳವಡಿಸಿರುವ ಎಲೆಕ್ಟ್ರೋ ಮೆಕಾನಿಕಲ್ ಮೀಟರ್ ಗಳನ್ನು ಡಿಎಲ್ಎಮ್ಎಸ್  ಸ್ಟ್ಯಾಟಿಕ್ (Device Language Message Specification – DLMS) ಡಿಜಿಟಲ್ ಮಾಪನಗಳಿಗೆ ಬದಲಾಯಿಸುವ ಕಾರ್ಯ ಜುಲೈ ತಿಂಗಳಲ್ಲಿ ಆರಂಭಗೊಂಡಿತ್ತು. ಅಕ್ಟೋಬರ್ 17ರ ತನಕ ನಗರದಲ್ಲಿ 2,85,941 ಹೊಸ ಡಿಜಿಟಲ್ ಮೀಟರ್ ಗಳನ್ನು ಹಳೆಯ ಮೀಟರ್ ತೆಗೆದು ಬದಲಾಯಿಸಲಾಗಿದೆ. ಅದಾಗಿ 50 ದಿನಗಳಲ್ಲಿ 3,36,477 ಡಿಎಲ್ ಎಮ್ಎಸ್ ಡಿಜಿಟಲ್ ಮೀಟರ್ ಗಳನ್ನು ಬೆಸ್ಕಾಂ ತನ್ನ ಗ್ರಾಹಕರ ಕಟ್ಟಡಗಳಿಗೆ ಅಳವಡಿಸಿದೆ.

ಯಾವ್ಯಾವ ವೃತ್ತಗಳಲ್ಲಿ ಎಷ್ಟೆಷ್ಟು ಮೀಟರ್ ಬದಲಾಯಿಸಲಾಗಿದೆ? :

 ಬೆಂಗಳೂರು ಮೆಟ್ರೋಪಾಲಿಟನ್‌ ಪ್ರದೇಶ ವಲಯದಲ್ಲಿ ಬರುವ ಬೆಸ್ಕಾಂನ ಉತ್ತರ, ದಕ್ಷಿಣ, ಪೂರ್ವ ಮತ್ತು ಪಶ್ಚಿಮ ವೃತ್ತಗಳಲ್ಲಿ ಡಿಜಿಟಲ್‌ ಮೀಟರ್‌ ಅಳವಡಿಸಲಾಗುತ್ತಿದೆ. ಈ ವರ್ಷದ ಡಿಸೆಂಬರ್ 6ರ ವೇಳೆಗೆ ಉತ್ತರ ವೃತ್ತದಲ್ಲಿ – 1,78,722 ಕಟ್ಟಡಗಳಿಗೆ, ಪಶ್ಚಿಮ ವೃತ್ತದಲ್ಲಿ -1,73,085, ದಕ್ಷಿಣ ವೃತ್ತ- 87,408 ಮತ್ತು ಪೂರ್ವ ವೃತ್ತದ ವ್ಯಾಪ್ತಿಯಲ್ಲಿನ 1,83,203 ಸೇರಿ ಒಟ್ಟು 6,22,418 ಡಿಎಲ್‌ಎಮ್‌ ಎಸ್‌ ಸ್ಟ್ಯಾಟಿಕ್‌ ಸಿಂಗಲ್‌ ಫೇಸ್‌ ಮೀಟರ್‌ ಗಳನ್ನು ಅಳವಡಿಸಲಾಗಿದೆ ಎಂದು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬೀಳಗಿ ತಿಳಿಸಿದ್ದಾರೆ.

ಸ್ಟ್ಯಾಟಿಕ್ ಮೀಟರ್ ನಿಂದ ಗ್ರಾಹಕರಿಗೇನು ಉಪಯೋಗ? :

ತಮ್ಮ ಬಳಕೆಯ ವಿದ್ಯುತ್‌ ಕುರಿತು ಗ್ರಾಹಕರಿಗೆ ನಿಖರ ಮಾಹಿತಿ ಸಿಗಲಿದೆ. ಜೊತೆಗೆ ತಾವು 2 ವರ್ಷದ ಹಿಂದಿನ ವರೆಗೆ ಬಳಸಿರುವ ವಿದ್ಯುತ್‌ ಬಳಕೆಯ ವಿವರಗಳನ್ನು ಡಿಜಿಟಲ್‌ ಸ್ಟ್ಯಾಟಿಕ್‌ ಮೀಟರ್‌ ಸಹಾಯದಿಂದ ಗ್ರಾಹಕರು ಉಪ ವಿಭಾಗ ಕಚೇರಿಯಲ್ಲಿ ಅರ್ಜಿ ಸಲ್ಲಿಸಿ ಪಡೆಯಬಹುದಾಗಿದೆ. ಹೀಗೆ ಪಡೆದ ಮಾಹಿತಿಯನ್ನು ಬೆಸ್ಕಾಂ ಕಛೇರಿಯಿಂದ ಪಡೆದು ಅದನ್ನು ವಿದ್ಯುತ್ ಬಿಲ್ ಜೊತೆ ತುಲನೆ ಮಾಡಿ ತಾವು ಈಗ ಬಳಸಿರುವ ವಿದ್ಯುತ್ ಪ್ರಮಾಣ ಸರಿಯಾಗಿದೆಯೇ ಎಂದು ತಿಳಿಯಬಹುದಾಗಿದೆ.  ಮ್ಯಾಕಾನಿಕಲ್‌ ಮೀಟರ್‌ ಕೆಲವೊಮ್ಮೆ  ತಾಂತ್ರಿಕ ದೋಷಕ್ಕೀಡಾಗಿ ವಿದ್ಯುತ್‌ ಬಳಕೆ ಪ್ರಮಾಣದ ಮಾಹಿತಿ ಸಿಗುತ್ತಿರಲಿಲ್ಲ. ಇದೀಗ ನಿಖರ ಮಾಹಿತಿ ಬೆಸ್ಕಾಂ ಗೆ ದೊರೆಯಲಿದೆ.

ಬೆಸ್ಕಾಂ ಕೇಂದ್ರ ಕಚೇರಿ (ಸಾಂದರ್ಭಿಕ ಚಿತ್ರ)

ಮೀಟರ್ ಬದಲಾಯಿಸುವ ಕಾರ್ಯದಲ್ಲಿ ವಿಳಂಬ? :

ಮೀಟರ್‌ ಅಳವಡಿಕೆ ಕಾರ್ಯವನ್ನು ರಾಜೇಶ್ವರಿ ಇಲೆಕ್ಟ್ರಿಕಲ್ಸ್‌ ಮತ್ತು ವಿ.ಆರ್. ಪಾಟೀಲ್‌ ಎಲೆಕ್ಟ್ರಿಕಲ್ಸ್‌ ಕಂಪನಿಗಳಿಗೆ ಗುತ್ತಿಗೆ ನೀಡಲಾಗಿದೆ. ಇದೀಗ ಸಿಂಗಲ್‌ ಫೇಸ್‌ ಡಿಜಿಟಲ್‌ ಮೀಟರ್‌ ಅಳವಡಿಸಲಾಗುತ್ತಿದ್ದು, 3 ಫೇಸ್‌ ಮಿಟರ್‌ ಅಳವಡಿಕೆ ಕಾರ್ಯವನ್ನು ಬೆಸ್ಕಾಂ ಇನ್ನಷ್ಟೆ ಕೈಗೆತ್ತಿಕೊಳ್ಳಲಿದೆ. ಡಿಜಿಟಲ್‌ ಮೀಟರ್‌ ಅಳವಡಿಕೆ ಕಾರ್ಯದ ಪ್ರಗತಿಯನ್ನು ಪರಿಶೀಲಿಸಲಾಗುತ್ತಿದ್ದು, ಎರಡೂ ಕಂಪನಿಗಳಿಗೆ ದಿನಕ್ಕೆ ಸರಾಸರಿ 12000 ಸಿಂಗಲ್‌ ಫೇಸ್‌ ಮೀಟರ್‌ ಗಳನ್ನು ಅಳವಡಿಸಲು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಂತೇಶ ಬೀಳಗಿ ಸೂಚನೆ ನೀಡಿದ್ದಾರೆ. ಆದರೆ ಡಿ.6ರ ದತ್ತಾಂಶವನ್ನು ಪರಿಶೀಲಿಸಿದಾಗ ಈ ಎರಡು ಸಂಸ್ಥೆಗಳು 6,491 ಮೀಟರ್ ಗಳನ್ನಷ್ಟೇ ಆ ದಿನ ಬದಲಾಯಿಸಿರುವುದು ಕಂಡು ಬಂದಿದೆ.  

ಬೆಂಗಳೂರಿನಲ್ಲಿ 17.68 ಲಕ್ಷ ವಿದ್ಯುತ್ ಮೀಟರ್ ಗಳಿವೆ :

ಬೆಂಗಳೂರಿನ ಬೆಸ್ಕಾಂ ವ್ಯಾಪ್ತಿಯಲ್ಲಿ ಒಟ್ಟು 17,68,000 (17.68 ಲಕ್ಷ) ಎಲೆಕ್ಟ್ರೊ ಮೆಕಾನಿಕಲ್ ಮೀಟರ್ ಗಳನ್ನು ಡಿಎಲ್ಎಮ್ಎಸ್ ಸ್ಟ್ಯಾಟಿಕ್  ಡಿಜಿಟಲ್ ಮೀಟರ್ ಗೆ ಬದಲಾವಣೆ ಮಾಡುವ ಯೋಜನೆಗೆ ಒಟ್ಟು 116.69 ಕೋಟಿ ರೂ. ಹಣವನ್ನು ಬೆಸ್ಕಾಂ ವೆಚ್ಚ ಮಾಡುತ್ತಿದೆ. ಬೆಸ್ಕಾಂನ ಬೆಂಗಳೂರು ಗ್ರಾಮಾಂತರ ಪ್ರದೇಶ ಮತ್ತು ಚಿತ್ರದುರ್ಗ ಪ್ರದೇಶ ವಲಯಗಳಲ್ಲಿ ಸುಮಾರು 9 ಲಕ್ಷ ಡಿಜಿಟಲ್‌ ಮೀಟರ್‌ ಅಳವಡಿಕೆಗೆ ಟೆಂಡರ್‌ ಪ್ರಕ್ರಿಯೆ ನಡೆಯುತ್ತಿದೆ. ಗ್ರಾಹಕರಿಗೆ ತಾವು ಬಳಸುವ ವಿದ್ಯುತ್ ಪ್ರಮಾಣದ ನಿಖರ ಮಾಹಿತಿ ತಿಳಿದುಕೊಳ್ಳಲು ಡಿಎಲ್ಎಮ್ಎಸ್  ಸ್ಟ್ಯಾಟಿಕ್  ಡಿಜಿಟಲ್ ಮಾಪನಗಳಿಂದ ಸಾಧ್ಯವಾಗಲಿದೆ.

ಪ್ರತಿ ಸಿಂಗಲ್ ಫೇಸ್ – ತ್ರಿಫೇಸ್ ಮೀಟರ್ ಬೆಲೆ ಎಷ್ಟು? :

ಡಿಎಲ್ಎಮ್ಎಸ್ ಸ್ಟ್ಯಾಟಿಕ್  ಮೀಟರ್ ಗ್ರಾಹಕ ಸ್ನೇಹಿಯಾಗಿದ್ದು ಸಿಂಗಲ್ ಫೇಸ್ ಅಥವಾ 3 ಫೇಸ್ ಮೀಟರ್ ಅಳವಡಿಸಿಕೊಂಡಿರುವ ಗ್ರಾಹಕರಿಗೆ ವಿದ್ಯುತ್ ವೊಲ್ಟೇಜ್ ಮತ್ತು ಬಳಕೆ ಕುರಿತು ಮಾಹಿತಿ ಪಡೆಯಬಹುದಾಗಿದೆ. ಈ ಡಿಜಿಟಲ್ ಮೀಟರ್‌ ಗಳನ್ನು ಉಚಿತವಾಗಿ ಅಳವಡಿಸಲಾಗುತ್ತಿದ್ದು ಗ್ರಾಹಕರಿಂದ ಯಾವುದೇ ಶುಲ್ಕವನ್ನು ಪಡೆಯುವುದಿಲ್ಲ. ಸಿಂಗಲ್ ಫೇಸ್ ಡಿಜಿಟಲ್ ಮೀಟರ್ ಗೆ ತೆರಿಗೆ,  ವೈರಿಂಗ್‌ ಮತ್ತು ಅಳವಡಿಕೆ ವೆಚ್ಚ ಸೇರಿ 1,497 ರಿಂದ 1,507 ರೂಪಾಯಿ ಮತ್ತು 3 ಫೇಸ್ ಮೀಟರ್ ಗೆ 3,612 ರಿಂದ 3,652 ರೂಪಾಯಿಗಳಾಗಲಿದ್ದು ಈ ವೆಚ್ಚವನ್ನು ಬೆಸ್ಕಾಂ ಭರಿಸುತ್ತದೆ.ಬೆಸ್ಕಾಂ ತಿಳಿಸಿದೆ.

ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಂತೇಶ ಬೀಳಗಿ

ಹೊಸ ಡಿಜಿಟಲ್ ಮೀಟರ್ ಬದಲಾವಣೆ ಸಂಪೂರ್ಣ ಉಚಿತ :

“2024ರ ವೇಳೆಗೆ ಎಲೆಕ್ಟ್ರೋ ಮೆಕಾನಿಕಲ್ ಮೀಟರ್ ಗಳನ್ನು ಡಿಜಿಟಲ್ ಮೀಟರ್ ಗೆ ಬದಲಿಸುವ ಕಾರ್ಯ ಪೂರ್ಣಗೊಳ್ಳಲಿದೆ.  ಗ್ರಾಹಕರು ಡಿಜಿಟಲ್‌ ಮೀಟರ್‌ ಗೆ ಹಣ ಪಾವತಿಸಬೇಕಾಗಿಲ್ಲ. ಏಜೆನ್ಸಿ ಕಡೆಯಿಂದ ಡಿಜಿಟಲ್‌ ಮೀಟರ್‌ ಇನ್‌ ಸ್ಟಾಲ್‌ ಮಾಡುವ ಸಂದರ್ಭದಲ್ಲಿ ಹಣಕ್ಕೆ ಬೇಡಿಕೆ ಇಟ್ಟರೆ ಬೆಸ್ಕಾಂ ಸಹಾಯವಾಣಿ (1912)ಗೆ ದೂರು ನೀಡಲು ಕೋರಲಾಗಿದೆ. ಅಲ್ಲದೆ ಉಪ ವಿಭಾಗ ಕಚೇರಿಗೆ ದೂರು ನೀಡಲು ವಿನಂತಿಸಲಾಗಿದೆ.”

–           ಮಹಂತೇಶ ಬೀಳಗಿ, ವ್ಯವಸ್ಥಾಪಕ ನಿರ್ದೇಶಕರು, ಬೆಸ್ಕಾಂ

Sharing is Caring

  • Share on WhatsApp (Opens in new window) WhatsApp
  • Print (Opens in new window) Print
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Share on LinkedIn (Opens in new window) LinkedIn

Like this:

Like Loading…
WhatsApp Join our WhatsApp Channel
Previous Post

Defence News | ಸೇನಾಪಡೆಯ ಎಎಸ್ ಸಿ ಸಂಸ್ಥಾಪನಾ ದಿನದ ಅಂಗವಾಗಿ ಯೋಧರ ರೋಚಕ ಸಾಹಸ ಪ್ರದರ್ಶನ

Next Post

#Viral Video | ಆಸ್ಟ್ರೇಲಿಯಾ ಬಳಿಯಿದೆ ಹೊರಜಗತ್ತಿನ ಜೊತೆ ಸಂಪರ್ಕವೇ ಇಲ್ಲದ ಪ್ರಾಚೀನ ಬುಡಕಟ್ಟು ಜನಾಂಗದ ವಿಶಿಷ್ಟ ದ್ವೀಪ..!

Next Post
ಆಸ್ಟ್ರೇಲಿಯಾ ಕಡಲ ತೀರದಿಂದ ನೂರಾರು ಕಿ.ಮೀ ದೂರವಿರುವ ವನವಾಟು ದ್ವೀಪದ ಸಮೂಹದಲ್ಲಿನ ಕ್ವಾಕಿಯಾ ಎಂಬ ನಿಗೂಢ ಮತ್ತು ಅಭೇದ್ಯ ದ್ವೀಪದ ಪ್ರಾಚೀನ ಬುಡಕಟ್ಟು ಜನಾಂಗ (ಕೃಪೆ : ಯೂಟ್ಯೂಬ್ ಚಿತ್ರ)

#Viral Video | ಆಸ್ಟ್ರೇಲಿಯಾ ಬಳಿಯಿದೆ ಹೊರಜಗತ್ತಿನ ಜೊತೆ ಸಂಪರ್ಕವೇ ಇಲ್ಲದ ಪ್ರಾಚೀನ ಬುಡಕಟ್ಟು ಜನಾಂಗದ ವಿಶಿಷ್ಟ ದ್ವೀಪ..!

ಬೆಂಗಳೂರಿನ ಮನೆಯೊಂದರ ಮೇಲ್ಛಾವಣಿ ಮೇಲೆ ಸೌರ ಫಲಕ ಅಳವಡಿಸಿರುವ ಸಾಂದರ್ಭಿಕ ಚಿತ್ರ (ಕೃಪೆ : ಬೆಸ್ಕಾಂ)

Bescom News | ಮಾಸಿಕ ದುಬಾರಿ ವಿದ್ಯುತ್ ಬಿಲ್ ಕಟ್ಟಿ ಚಿಂತೆಯಾಗಿದ್ಯಾ? ಮನೆ ಮೇಲೆ ಸೋಲಾರ್ ಅಳವಡಿಸಿ – ಬೆಸ್ಕಾಂ ಮೂಲಕ ಬೇಗ ಸಬ್ಸೀಡಿ ಪಡೆಯಿರಿ : ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್

Please login to join discussion

Like Us on Facebook

Follow Us on Twitter

Recent News

CM DK Shivakumar Open Letter | ಅಧಿಕಾರಕ್ಕಿಂತ ಹೊಣೆಗಾರಿಕೆ ದೊಡ್ಡದು: 100 ದಿನ ಪೂರೈಸಿದ ಸಿಎಂ ಡಿ.ಕೆ. ಶಿವಕುಮಾರ್ ಬಹಿರಂಗ ಪತ್ರ

September 10, 2026

BW SPECIAL | ಬೆಂಗಳೂರಿಗೆ ಆಡಳಿತ ಗ್ರಹಣ: ಮೇಯರ್, ಕಾರ್ಪೊರೇಟರ್‌ಗಳಿಲ್ಲದೆ 6 ವರ್ಷ ಪೂರ್ಣ

September 10, 2026
Bengaluru Wire, Kannada News, latest News in Kannada

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

CM DK Shivakumar Open Letter | ಅಧಿಕಾರಕ್ಕಿಂತ ಹೊಣೆಗಾರಿಕೆ ದೊಡ್ಡದು: 100 ದಿನ ಪೂರೈಸಿದ ಸಿಎಂ ಡಿ.ಕೆ. ಶಿವಕುಮಾರ್ ಬಹಿರಂಗ ಪತ್ರ

September 10, 2026

BW SPECIAL | ಬೆಂಗಳೂರಿಗೆ ಆಡಳಿತ ಗ್ರಹಣ: ಮೇಯರ್, ಕಾರ್ಪೊರೇಟರ್‌ಗಳಿಲ್ಲದೆ 6 ವರ್ಷ ಪೂರ್ಣ

September 10, 2026

Free Coaching | ಮುಖ್ಯಮಂತ್ರಿ ವಿದ್ಯಾರ್ಥಿ ಸಹಾಯ ಹಸ್ತ: 90,000 ಅಭ್ಯರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ಆನ್‌ಲೈನ್ ಕೋಚಿಂಗ್

September 9, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group
%d