Wednesday, April 29, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    KSDL News | ಕೆಎಸ್‌ಡಿಎಲ್ ಇತಿಹಾಸದಲ್ಲೇ ಅಭೂತಪೂರ್ವ ದಾಖಲೆ: ₹2,016 ಕೋಟಿ ವಹಿವಾಟು, ₹507 ಕೋಟಿ ಲಾಭ

    ಕೆ.ಎ.ಎಸ್. ಅಧಿಕಾರಿಗಳ ಸಂಘದ ಕಟ್ಟಡಕ್ಕೆ ಆಧುನಿಕ ಸ್ಪರ್ಶ: ₹15.23 ಕೋಟಿ ವೆಚ್ಚದಲ್ಲಿ ನವೀಕೃತಗೊಂಡ ಆಡಳಿತ ಸೌಧ

    ಶ್ವೇತಭವನದ ಔತಣಕೂಟದಲ್ಲಿ ಗುಂಡಿನ ಸದ್ದು: ಕೂದಲೆಳೆ ಅಂತರದಲ್ಲಿ ಪಾರಾದ ಡೊನಾಲ್ಡ್ ಟ್ರಂಪ್ ದಂಪತಿ

    BIG EXCLUSIVE| ಜನಗಣತಿ ಜಿದ್ದಾಜಿದ್ದಿ; ಜಿಬಿಎ ಅಧಿಕಾರಿಗಳು Vs ಸಚಿವಾಲಯ ಸಂಘ – ರಾಜ್ಯದ 43 ಇಲಾಖೆಗಳು ಬಂದ್ ಆಗುವ ಭೀತಿ!

    ಸರ್ಕಾರಿ ಆಸ್ಪತ್ರೆಗಳಲ್ಲಿ ಮೊಣಕಾಲು ಮತ್ತು ಸೊಂಟದ ಕೀಲು ಬದಲಿ ಶಸ್ತ್ರಚಿಕಿತ್ಸೆಗಳಿಗೆ ಬಲ: ರೋಗಿಗಳಿಗೆ ಮನೆಬಾಗಿಲಲ್ಲೇ ಗುಣಮಟ್ಟದ ಚಿಕಿತ್ಸೆ

    ಎಸ್‌ಎಸ್‌ಎಲ್‌ಸಿ ಫಲಿತಾಂಶ 2026: ಇತಿಹಾಸದಲ್ಲೇ ಮೊದಲು! 94.10% ರಷ್ಟು ಅಭೂತಪೂರ್ವ ಫಲಿತಾಂಶ; ಬಾಲಕಿಯರದ್ದೇ ಮೇಲುಗೈ

    KSIC News | ಮೈಸೂರು ರೇಷ್ಮೆ ಪರಂಪರೆಗೆ ಮಹಾ ಜಯ: ಕೆಎಸ್‌ಐಸಿ ಭೂಮಿ ಹಸ್ತಾಂತರ ಆದೇಶ ರದ್ದು

    IMPORTANT NEWS | ಭೂಪರಿವರ್ತನೆ ಇನ್ನು ಸುಲಭ: 30 ದಿನಗಳಲ್ಲಿ ವಿಲೇವಾರಿಯಾಗದಿದ್ದರೆ ‘ಪರಿಭಾವಿತ ಭೂಪರಿವರ್ತನೆ’  ಭಾಗ್ಯ

    Vidhana Soudha

    RDPR NEWS | ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಗ್ರಾಮೀಣ ಭಾಗದ ಶೈಕ್ಷಣಿಕ ಕಾರ್ಯಗಳಿಗೆ‌ 501 ಕೋಟಿ ರೂ. ಅನುದಾನ ಬಿಡುಗಡೆ

  • Bengaluru Focus

    BW SPECIAL | ಜಾತಿಗಣತಿ ಸಮೀಕ್ಷಕರಿಗೆ ಸಂಪೂರ್ಣವಾಗಿ ಸಿಕ್ಕಿಲ್ಲ ಗೌರವ ಧನ: ಈಗಿನ ಜನಗಣತಿ ಕಾರ್ಯಕ್ಕೆ ಬರಲು ಹಿಂದೇಟು? ಉಳಿದ ಅನುದಾನದ ಹಣ ಎಲ್ಲಿ ಹೋಯ್ತು?

    ಕೆ.ಎ.ಎಸ್. ಅಧಿಕಾರಿಗಳ ಸಂಘದ ಕಟ್ಟಡಕ್ಕೆ ಆಧುನಿಕ ಸ್ಪರ್ಶ: ₹15.23 ಕೋಟಿ ವೆಚ್ಚದಲ್ಲಿ ನವೀಕೃತಗೊಂಡ ಆಡಳಿತ ಸೌಧ

    ಬನ್ನೇರುಘಟ್ಟ, ಮುತ್ಯಾಲಮಡುವಿಗೆ ಕೆಎಸ್‌ಟಿಡಿಸಿ ಹವಾನಿಯಂತ್ರಿತ ಬಸ್ ಪ್ರವಾಸ ಆರಂಭ

    ಕರ್ನಾಟಕ ಕೆಎಎಸ್ ಅಧಿಕಾರಿಗಳ ಸಂಘದ ಕಟ್ಟಡದ ಸಾಂದರ್ಭಿಕ ಚಿತ್ರ. (ಕೃಪೆ : KASOA)

    ಕೆ.ಎ.ಎಸ್. ಅಧಿಕಾರಿಗಳ ಸಂಘದ ನವೀಕರಿಸಿದ ಕಟ್ಟಡ ಉದ್ಘಾಟನೆ: ಏ. 27ಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ

    Science Research News | ಧ್ಯಾನದಿಂದ ಮೆದುಳಿನ ಶಕ್ತಿ ವೃದ್ಧಿ: ವಯಸ್ಸಾಗುವಿಕೆಗೆ ಬ್ರೇಕ್ ಹಾಕಲಿದೆ ಐಐಎಸ್‌ಸಿ ಸಂಶೋಧನೆ!

    GBA News | ಬೆಂಗಳೂರು ದಕ್ಷಿಣ ಪಾಲಿಕೆ ಅಭಿವೃದ್ಧಿಗೆ ತಜ್ಞರ ಸಲಹಾ ಸಮಿತಿ ರಚನೆ: ಆಯುಕ್ತ ಕೆ.ಎನ್. ರಮೇಶ್

    ಬೆಂಗಳೂರಿನ ಅಭಿವೃದ್ಧಿಗೆ ‘Airport’ ಅಡ್ಡಿ: ಕಟ್ಟಡಗಳ ಎತ್ತರ ನಿರ್ಬಂಧ ಸಡಿಲಿಕೆಗೆ ರಾಜನಾಥ್ ಸಿಂಗ್‌ಗೆ ಡಿ.ಕೆ. ಶಿವಕುಮಾರ್ ಮನವಿ

    GBA News | ಪಶ್ಚಿಮ ಬೆಂಗಳೂರಿಗರಿಗೆ ಸಿಹಿ ಸುದ್ದಿ: ಗೋವಿಂದರಾಜನಗರದಲ್ಲಿ ಶೀಘ್ರವೇ 100 ಹಾಸಿಗೆಗಳ ‘ಜಯದೇವ’ ಘಟಕ ಉದ್ಘಾಟನೆ

    ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ‘ಜನಿವಾರ’ ವಿವಾದ: ವಿದ್ಯಾರ್ಥಿಗಳ ಧಾರ್ಮಿಕ ಹಕ್ಕಿಗೆ ಚ್ಯುತಿ? ಮೂವರು ಸಸ್ಪೆಂಡ್!!

  • Public interest
  • BW Special
  • Life Style
  • Photo Gallery
  • Video
No Result
View All Result

Home Bengaluru Focus

ಬಿಬಿಎಂಪಿಯು ಕಂಠೀರವ ಸ್ಟೇಡಿಯಂನಷ್ಟು ದೊಡ್ಡದಾದ ರಸ್ತೆಗುಂಡಿ ಮುಚ್ಚಿದೆಯಂತೆ !!

ಬೆಂಗಳೂರಿನಲ್ಲಿ 21,155 ಮೆಟ್ರಿಕ್ ಟನ್ ಡಾಂಬರ್ ಹಾಕಿ ರಸ್ತೆಗುಂಡಿ ಮುಚ್ಚಲಾಗಿದೆ - ಬಿಬಿಎಂಪಿ ಅಧಿಕೃತ ಮಾಹಿತಿ | ಮಳೆ ಮತ್ತು ಹಬ್ಬದ ಕಾರಣ ಅ.6 ರಿಂದ 20 ತನಕ ಆರ್ಟಿಯಲ್ - ಸಬ್ ಆರ್ಟಿಯಲ್ ರಸ್ತೆಗೆ ಡಾಂಬರ್ ಹಾಕದ ಪಾಲಿಕೆ |

by Bengaluru Wire Desk
October 27, 2021
in Bengaluru Focus, Public interest
Reading Time: 2 mins read
0

ಬೆಂಗಳೂರು, (www.bengaluruwire.com) : ಇದನ್ನು‌ ನಂಬಬೇಕೋ? ಬಿಡಬೇಕೋ ಗೊತ್ತಾಗ್ತಿಲ್ಲ. ಬೆಂಗಳೂರಿನಲ್ಲಿನ ವರ್ತುಲ ಹಾಗೂ ಹೊರವರ್ತುಲ ರಸ್ತೆಯಲ್ಲಿ ಬಿದ್ದಿರುವ ಗುಂಡಿಯ ಪ್ರಮಾಣವನ್ನು ಲೆಕ್ಕ ಹಾಕಿದ್ರೆ ಅಂದಾಜು ಒಂದಿಡೀ ಕಂಠೀರವ ಸ್ಟೇಡಿಯಂ ಎತ್ತರ ಹಾಗೂ ವ್ಯಾಸದಷ್ಟು ಅಂದ್ರೆ 2 ಲಕ್ಷ ಚದರ ಮೀಟರ್ ನಷ್ಟು ಗುಂಡಿಗಳನ್ನು ಬಿಬಿಎಂಪಿ ಮುಚ್ಚಿದೆಯಂತೆ.

ಜು.27ನೇ ತಾರೀಖಿನಿಂದ ಅ.25ರವರೆಗೆ ನಗರದಲ್ಲಿರುವ 8 ವಲಯಗಳು, ಪಾಲಿಕೆ ಪ್ರಾಜೆಕ್ಟ್-1 ಕೈಗೊಂಡಿರುವ ಸೇತುವೆ, ವೈಟ್ ಟಾಪಿಂಗ್ ಕಾಮಗಾರಿ ಸೇರಿದಂತೆ  ಬರೋಬ್ಬರಿ 760 ಟ್ರಕ್ ಲೋಡ್ ನಷ್ಟು ಅಂದರೆ ಬರೋಬ್ಬರಿ 21,155.36 ಮೆಟ್ರಿಕ್ ಟನ್ ಡಾಂಬರ್ ಅನ್ನು ನಗರದ ರಸ್ತೆಗೆ ಹಾಕಲಾಗಿದೆ ಎಂದು ಬಿಬಿಎಂಪಿ ರಸ್ತೆ ಮತ್ತು ಮೂಲಸೌಕರ್ಯ ವಿಭಾಗದ ಎಂಜನಿಯರ್ ಗಳು ಹೇಳುತ್ತಾರೆ.

18 ಸಾವಿರ ಮೆಟ್ರಿಕ್ ಟನ್ ಗೂ ಅಧಿಕ ಡಾಂಬರ್ ಗಳನ್ನು 1434 ಕಿ.ಮೀ ಉದ್ದದ 437 ಆರ್ಟಿರಿಯಲ್ ಹಾಗೂ ಸಬ್ ಆರ್ಟಿಯಲ್ ರಸ್ತೆಗಳನ್ನು ಹೊಂದಿರುವ ಕಡೆಗಳಲ್ಲಿ ರಸ್ತೆಗುಂಡಿ ಮುಚ್ಚಲು ಬಳಕೆ ಮಾಡಲಾಗಿದೆ.‌ ಅದೂ ಅಲ್ಲದೆ ರಸ್ತೆಗುಂಡಿ ಆಳವಿದ್ದು, ಸಾಕಷ್ಟು ದೊಡ್ಡದಾಗಿದ್ದರೆ ಜಲ್ಲಿಕಲ್ಲು, ಕಲ್ಲುಪುಡಿ ಮಿಶ್ರಿತ ವೆಟ್ ಮಿಕ್ಸ್ ಮಿಶ್ರಣವನ್ನು ಹಾಕಿ ಅದರ ಮೇಲೆ ಡಾಂಬರ್ ಹಾಕಿ ಮುಚ್ಚಲಾಗಿದೆ. ಹೀಗೆ ಜು.27 ರಿಂದ ಈತನಕ 452 ಲೋಡ್ ಗೂ ಅಧಿಕ ವೆಟ್ ಮಿಕ್ಸ್ ಹಾಕಲಾಗಿದೆ ಎಂದು ಪಾಲಿಕೆ ಅಧಿಕಾರಿಗಳು ಬೆಂಗಳೂರು ವೈರ್ ಗೆ ತಿಳಿಸಿದ್ದಾರೆ.

“ನಗರದಲ್ಲಿ 1,434 ಕಿ.ಮೀ ಉದ್ದದ 470ಆರ್ಟಿರಿಯಲ್ ಮತ್ತು ಸಬ್ ಆರ್ಟಿರಿಯಲ್ ರಸ್ತೆಗಳಿವೆ. Pothole ಲೆಕ್ಕ ಇಡೋದು ಕಷ್ಟ ಮತ್ತು ಮಳೆಗಾಲದಲ್ಲಿ ರಸ್ತೆ ಗುಂಡಿ ಸಂಖ್ಯೆ ಹೆಚ್ಚಾಗುತ್ತೆ. ಅದೇ ಕಾರಣಕ್ಕೆ ರಸ್ತೆ ಗುಂಡಿಯನ್ನು ಕಿ.ಲೋ ಮೀಟರ್ ಉದ್ದ ಹಾಗೂ ಚದರ ಮೀಟರ್ ನಲ್ಲಿ ಡಾಂಬರು ಹಾಕಿರೋ ಲೆಕ್ಕ ಇಡುತ್ತೇವೆ. ಅದೇ ರೀತಿಯಲ್ಲಿ ಗುತ್ತಿಗೆದಾರರಿಗೆ ಹಣ ಪಾವತಿ ಮಾಡುತ್ತೇವೆ.”

– ಪ್ರಹ್ಲಾದ್ ರಾವ್, ಚೀಫ್ ಎಂಜಿನಿಯರ್, ರಸ್ತೆ ಮತ್ತು ಮೂಲಭೂತ ಸೌಕರ್ಯ ಇಲಾಖೆ, ಬಿಬಿಎಂಪಿ

ನಗರದಲ್ಲಿ ಅಕ್ಟೋಬರ್ ತಿಂಗಳಿನಲ್ಲಿ ಯರ್ರಾಬಿರ್ರಿ ಮಳೆಯಾಗಿದೆ. ಹೀಗಾಗಿ ರಸ್ತೆ ಗುಂಡಿ ಮುಚ್ಚಲು ಸಾಧ್ಯವಾಗಿರಲಿಲ್ಲ. ಜೊತೆಗೆ ಹಾಟ್ ಮಿಕ್ಸ್ ಪ್ಲಾಂಟ್ ಇರುವ ಕನ್ನೂರು ಪ್ಲಾಂಟ್ ನಲ್ಲಿಯೂ ಜಲ್ಲಿ, ಕಲ್ಲುಪುಡಿ ಒದ್ದೆಯಾಗಿತ್ತು. ಆದ್ದರಿಂದ ಅ.6 ರಿಂದ 20ನೇ ತಾರೀಖಿನವರೆಗೆ ನಗರದಾದ್ಯಂತ ರಸ್ತೆ ಗುಂಡಿ ಮುಚ್ಚುವ ಉಸಾಬರಿಗೆ ಅಧಿಕಾರಿಗಳು ಹೋಗಿರಲಿಲ್ಲ. ಈಗ ನಾಲ್ಕೈದು ದಿನಗಳಿಂದ ಆರ್ಟಿರಿಯಲ್ ಮತ್ತು ಸಬ್ ಆರ್ಟಿರಿಯಲ್ ರಸ್ತೆಗಳಲ್ಲಿನ ಬಾಯ್ತೆರೆದ ಪಾಟ್ ಹೋಲ್ ಗಳನ್ನು‌ ಮುಚ್ಚಲಾಗ್ತಿದೆ.

“ನಗರದಲ್ಲಿ ಜುಲೈ ಅಂತ್ಯದಿಂದ ಪಾಲಿಕೆ ವ್ಯಾಪ್ತಿಯಲ್ಲಿ ರಸ್ತೆಗುಂಡಿ ಮುಚ್ಚಿದರೂ ಭಾರತೀಯ ರೋಡ್ ಕಾಂಗ್ರೆಸ್ ನಿಯಮಾವಳಿ ರೀತಿ ರಸ್ತೆಗುಂಡಿ ಮುಚ್ಚಲಾಗುತ್ತಿಲ್ಲ. ಹಾಗಾಗಿ ಪದೇ ಪದೇ ನಗರದ ರಸ್ತೆಯಲ್ಲಿ ಗುಂಡಿ ಕಾಣಿಸಿಕೊಳ್ಳುತ್ತಿದೆ. ರಸ್ತೆಗೆ ಬಳಸುವ ಡಾಂಬರ್ ನಲ್ಲಿ ಟಾರ್ ಅಥವಾ ಬಿಟುಮಿನಸ್ ಪ್ರಮಾಣ ಶೇ.5.5ರಷ್ಟಿರಬೇಕು. ಆದರೆ ಅಧಿಕಾರಿಗಳು ಮತ್ತು ಗುತ್ತಿಗೆದಾರರ ಜೋಬು ತುಂಬಿಸಲು ಕೇವಲ ಶೇ.2 ರಿಂದ 3 ರಷ್ಟು ಟಾರ್ ಅಗ್ರಿಗೇಟ್ ಜೊತೆ ಸೇರಿಸಲಾಗುತ್ತಿದೆ. ಆದ್ದರಿಂದ ಎರಡು ವರ್ಷ ಬಾಳಿಕೆ ಬರಬೇಕಾದ ರಸ್ತೆ ನವೀಕರಣ ಕಾಮಗಾರಿ ಎರಡು ತಿಂಗಳೂ ಬಾಳಿಕೆ ಬರುತ್ತಿಲ್ಲ”

– ಫ್ರೊ.ಶ್ರೀಹರಿ, ಸಂಚಾರ ತಜ್ಞರು

ಯಾವುದೇ ರಸ್ತೆಗುಂಡಿ ಮುಚ್ಚುವ ಮೊದಲು ಟಾಕ್ ಕೋಟ್ ಬಳಸಿ ಹಾಟ್ ಪ್ಲಾಂಟ್ ಮಿಕ್ಸ್ ಅನ್ನು ಮೂರು ಹಂತದಲ್ಲಿ ಹಾಕಿ ಡಾಂಬರ್ ಅನ್ನು ಸರಿಯಾಗಿ ಕೂರಿಸಿ ಮೇಲಿಂದ ಕಬ್ಬಿಣದ ಸಮತಟ್ಟು ರಾಡ್ ನಿಂದ ಗುದ್ದಬೇಕು. ತದನಂತರ ರಸ್ತೆಗುಂಡಿಯ ಎಲ್ಲಾ ಬಿರುಕುಗಳನ್ನು ತುಂಬಬೇಕು. ಅದಾದ ಬಳಿಕ ಕಲ್ಲುಪುಡಿ ಅಥವಾ ಎಂ.ಸ್ಯಾಂಡ್ ಅನ್ನು ಡಾಂಬರ್ ಹಾಕಿ ಮುಚ್ಚಿದ ಸ್ಥಳದ ಮೇಲೆ ಹರಡಿ ಮತ್ತೆ ಮೇಲಿಂದ ಕಬ್ಬಿಣದ ಸಮತಟ್ಟು ರಾಡ್ ನಿಂದ ಹದವಾಗಿ ಗುದ್ದಬೇಕು. ಇದರಿಂದ ಡಾಂಬರ್ ಹಾಕಿ ಮುಚ್ಚಿದ ರಸ್ತೆ ಬಹಳ ಕಾಲ ಬಾಳಿಕೆ ಬರುತ್ತದೆ.

1.94 ಲಕ್ಷ ಚ.ಮೀ ರಸ್ತೆಗುಂಡಿ ಮುಚ್ಚಲು 7 ಕೋಟಿ ರೂ. ವೆಚ್ಚ :

1,434 ರಸ್ತೆಗಳಲ್ಲಿ ಇಂತಹ ಯಾವುದೇ ಸ್ಯಾಂಡರ್ಡ್ ಪದ್ಧತಿಯನ್ನು ಬಿಬಿಎಂಪಿ ರಸ್ತೆ ಮತ್ತು ಮೂಲಸೌಕರ್ಯ ವಿಭಾಗ ಅನುಸರಿಸುತ್ತಿಲ್ಲ ಎಂದು ತಜ್ಞರು, ಸಾರ್ವಜನಿಕರು ಆರೋಪಿಸುತ್ತಿದ್ದಾರೆ. ನಗರದಲ್ಲಿ ಜು.27ರಿಂದ ಬರೋಬ್ಬರಿ 1.94 ಲಕ್ಷ ಚರದ ಮೀಟರ್ ವಿಸ್ತೀರ್ಣದಷ್ಟು ರಸ್ತೆಗುಂಡಿಯನ್ನು ಡಾಂಬರ್ ಹಾಕಿ ಮುಚ್ಚಲಾಗಿದೆ. ಇದಕ್ಕೆ ಬರೋಬ್ಬರಿ 7 ಕೋಟಿ ರೂ. ಕರ್ಚಾಗಿದೆ ಎಂದು ಪಾಲಿಕೆ ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ ಹಣ ಕರ್ಚು ಮಾಡಿದಷ್ಟು ರಸ್ತೆಗುಂಡಿ ರಿಪೇರಿಯಾಗಿಲ್ಲ, ಗುಣಮಣ್ಣ ಕಾಪಾಡಿಲ್ಲ ಎಂಬುದು ಸೂರ್ಯನಷ್ಟೆ ಸತ್ಯವಾಗಿದೆ.

ರಸ್ತೆಗುಂಡಿ ಮೋಸದ ಜಾಲಕ್ಕೆ ಹೀಗೆ ಕಡಿವಾಣ ಹಾಕಿ :

ರಸ್ತೆಗುಂಡಿ ಮೋಸದ ಜಾಲಕ್ಕೆ ಕಡಿವಾಣ ಹಾಕಬೇಕಾದರೆ ಪಾಟ್ ಹೋಲ್ ಫಿಲ್ಲಿಂಗ್ ಮಾಡುವ ಸಂದರ್ಭದಲ್ಲಿ ಮೂರನೇ ಸಂಸ್ಥೆಯ ಲ್ಯಾಬ್ ನಿಂದ ಗುಂಡಿಮುಚ್ಚುವ ಡಾಂಬರ್ ಹಾಟ್ ಮಿಕ್ಸ್ ನಲ್ಲಿ ಶೇಕಡ ಎಷ್ಟು ಪ್ರಮಾಣದ ಬಿಟುಮಿನ್ ಬಳಸಲಾಗಿದೆ? ಎಂಬುದನ್ನು ಪರೀಕ್ಷೆಗೆ ಒಳಪಡಿಸಬೇಕು. ತಜ್ಞರಿಂದ ರಸ್ತೆಗುಂಡಿ ಮುಚ್ಚಿದ ಕಡೆಗಳಲ್ಲಿ ಯಾದೃಚ್ಛಿಕವಾಗಿ ಪರೀಕ್ಷೆ ಕೈಗೊಳ್ಳಬೇಕು. ಇವುಗಳ ಆಧಾರದ ಮೇಲೆ ಕಾಂಟ್ರಾಕ್ಟರ್ ಗಳಿಗೆ ಕಾಮಗಾರಿ ಬಿಲ್ ಪಾವತಿಸಬೇಕು.‌ ಆಗ ಗುತ್ತಿಗೆದಾರರು ಜವಾಬ್ದಾರಿಯಿಂದ ಕಾರ್ಯನಿರ್ವಹಿಸುತ್ತಾರೆ ಎಂದು ಹೇಳುತ್ತಾರೆ ಸಂಚಾರಿ ಮತ್ತು ನಗರಯೋಜನಾ ತಜ್ಞರು.

WhatsApp Join our WhatsApp Channel
Previous Post

Clinic Seizures | ಆಯುರ್ವೇದ ವೈದ್ಯರಿಂದ ಅಕ್ರಮವಾಗಿ ಗರ್ಭಪಾತ – ಜಿಲ್ಲಾಡಳಿತದಿಂದ ನಾರಾಯಣ ಹೆಲ್ತ್ ಕೇರ್ ಕ್ಲಿನಿಕ್ ಸೀಜ್

Next Post

Wild Life News | ಬೆಂಗಳೂರಿನಲ್ಲಿ ಅಪರೂಪದ ಚಿಪ್ಪುಹಂದಿ ಪ್ರತ್ಯಕ್ಷ !!

Next Post

Wild Life News | ಬೆಂಗಳೂರಿನಲ್ಲಿ ಅಪರೂಪದ ಚಿಪ್ಪುಹಂದಿ ಪ್ರತ್ಯಕ್ಷ !!

ತಿರುಪತಿ ದೇವಸ್ಥಾನದ ಒಂದು ನೋಟ

TTD NEWS | ಟಿಕೆಟ್ ಇಲ್ಲದ 1300 ಭಕ್ತರಿಗೆ ತಿರುಪತಿ ವೆಂಕಟೇಶ್ವರನ ದರ್ಶನ ಮಾಡಿಸಿದ ಟಿಟಿಡಿ ಸದಸ್ಯ ಎಸ್.ಆರ್.ವಿಶ್ವನಾಥ್

Please login to join discussion

Like Us on Facebook

Follow Us on Twitter

Recent News

KSDL News | ಕೆಎಸ್‌ಡಿಎಲ್ ಇತಿಹಾಸದಲ್ಲೇ ಅಭೂತಪೂರ್ವ ದಾಖಲೆ: ₹2,016 ಕೋಟಿ ವಹಿವಾಟು, ₹507 ಕೋಟಿ ಲಾಭ

April 28, 2026

BW SPECIAL | ಜಾತಿಗಣತಿ ಸಮೀಕ್ಷಕರಿಗೆ ಸಂಪೂರ್ಣವಾಗಿ ಸಿಕ್ಕಿಲ್ಲ ಗೌರವ ಧನ: ಈಗಿನ ಜನಗಣತಿ ಕಾರ್ಯಕ್ಕೆ ಬರಲು ಹಿಂದೇಟು? ಉಳಿದ ಅನುದಾನದ ಹಣ ಎಲ್ಲಿ ಹೋಯ್ತು?

April 28, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

KSDL News | ಕೆಎಸ್‌ಡಿಎಲ್ ಇತಿಹಾಸದಲ್ಲೇ ಅಭೂತಪೂರ್ವ ದಾಖಲೆ: ₹2,016 ಕೋಟಿ ವಹಿವಾಟು, ₹507 ಕೋಟಿ ಲಾಭ

April 28, 2026

BW SPECIAL | ಜಾತಿಗಣತಿ ಸಮೀಕ್ಷಕರಿಗೆ ಸಂಪೂರ್ಣವಾಗಿ ಸಿಕ್ಕಿಲ್ಲ ಗೌರವ ಧನ: ಈಗಿನ ಜನಗಣತಿ ಕಾರ್ಯಕ್ಕೆ ಬರಲು ಹಿಂದೇಟು? ಉಳಿದ ಅನುದಾನದ ಹಣ ಎಲ್ಲಿ ಹೋಯ್ತು?

April 28, 2026

ಕೆ.ಎ.ಎಸ್. ಅಧಿಕಾರಿಗಳ ಸಂಘದ ಕಟ್ಟಡಕ್ಕೆ ಆಧುನಿಕ ಸ್ಪರ್ಶ: ₹15.23 ಕೋಟಿ ವೆಚ್ಚದಲ್ಲಿ ನವೀಕೃತಗೊಂಡ ಆಡಳಿತ ಸೌಧ

April 27, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group