Monday, September 7, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ಮೈಸೂರು ದಸರಾ 2026: ಈ ಬಾರಿ ‘ನಿಶಾನೆ ಆನೆ’ಯಾಗಿ ಗಜಪಡೆ ಮುನ್ನಡೆಸಲಿದ್ದಾನೆ ಅಭಿಮನ್ಯು

    ಉಡುಪಿ ಶ್ರೀಕೃಷ್ಣ ಮಠ, ಬೆಂಗಳೂರು ಇಸ್ಕಾನ್ ಸೇರಿ ದೇಶಾದ್ಯಂತ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮ

    ​ಬೆಂಗಳೂರು ಆಗಸದಲ್ಲಿ ಮತ್ತೆ ಲೋಹದ ಹಕ್ಕಿಗಳ ಕಲರವ: ಫೆಬ್ರವರಿ 8 ರಿಂದ 16ನೇ ‘ಏರೋ ಇಂಡಿಯಾ 2027’ ಸಂಭ್ರಮ

    Hebbal Short Tunnel IISC Study Report | ಹೆಬ್ಬಾಳ ಕಿರು ಸುರಂಗ ಯೋಜನೆ ಅವೈಜ್ಞಾನಿಕ: ರಾಜ್ಯಪಾಲರಿಗೆ ಐಐಎಸ್ಸಿ ವರದಿ ಸಲ್ಲಿಕೆ

    ಕೆಪಿಎಸ್ ಸ್ಸಿ ಕೇಂದ್ರ ಕಚೇರಿ ಕಟ್ಟಡ

    KPSC KAS Recruitment 2026 | ಗೆಜೆಟೆಡ್ ಪ್ರೊಬೇಷನರ್ ಹುದ್ದೆಗಳ ಅರ್ಜಿ ಸಲ್ಲಿಕೆ ದಿನಾಂಕ ಸೆಪ್ಟೆಂಬರ್ 7ರವರೆಗೆ ವಿಸ್ತರಣೆ

    IST | ಒನ್ ನೇಷನ್, ಒನ್ ಟೈಮ್: 6 ತಿಂಗಳಲ್ಲಿ ದೇಶಾದ್ಯಂತ ಕಡ್ಡಾಯವಾಗಲಿದೆ ‘ಭಾರತೀಯ ಪ್ರಮಾಣಿತ ಸಮಯ’

    ಗ್ರಾ.ಪಂ ಸೇವೆ, ಇ-ಸ್ವತ್ತು ಅಹವಾಲಿಗೆ ಶೀಘ್ರವೇ ಆನ್‌ಲೈನ್ ಆ್ಯಪ್: ಸಚಿವ ಈಶ್ವರ ಖಂಡ್ರೆ ಸೂಚನೆ

    Kudremukh Neelakurinji | ​ಕುದುರೆಮುಖ ಬೆಟ್ಟಗಳಲ್ಲಿ ನೀಲಕುರಿಂಜಿ ವೈಭವ

    NEET PG-2026 | ನೀಟ್ ಪಿಜಿ-2026 ಪರೀಕ್ಷೆ ಯಶಸ್ವಿ: 2.65 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಭಾಗಿ

  • Bengaluru Focus
    Namma Metro Purple Line

    Namma Metro News | ನಮ್ಮ ಮೆಟ್ರೋ ನೇರಳೆ, ಹಸಿರು ಮಾರ್ಗಕ್ಕೆ 4 ಹೊಸ ರೈಲುಗಳು ಶೀಘ್ರದಲ್ಲೇ ಸೇರ್ಪಡೆ

    ಮೈಸೂರು ದಸರಾ 2026: ಈ ಬಾರಿ ‘ನಿಶಾನೆ ಆನೆ’ಯಾಗಿ ಗಜಪಡೆ ಮುನ್ನಡೆಸಲಿದ್ದಾನೆ ಅಭಿಮನ್ಯು

    ಬೆಂಗಳೂರಿಗೆ ಬಿಗ್ ಗಿಫ್ಟ್: ಬಿಎಂಟಿಸಿಗೆ ಹಂತ ಹಂತವಾಗಿ 4,500 ಹೊಸ ಎಲೆಕ್ಟ್ರಿಕ್ ಬಸ್‌ಗಳ ಸೇರ್ಪಡೆ

    ​ಬೆಂಗಳೂರು ಆಗಸದಲ್ಲಿ ಮತ್ತೆ ಲೋಹದ ಹಕ್ಕಿಗಳ ಕಲರವ: ಫೆಬ್ರವರಿ 8 ರಿಂದ 16ನೇ ‘ಏರೋ ಇಂಡಿಯಾ 2027’ ಸಂಭ್ರಮ

    2021ರ ಪಾರ್ಕಿಂಗ್ ನೀತಿಯಡಿ ಹೊಸ ಕರಡು ನಿಯಮ ಪ್ರಕಟ: ಕಟ್ಟಡದಲ್ಲಿ ಪಾರ್ಕಿಂಗ್ ಜಾಗ ವಾಣಿಜ್ಯ ಉದ್ದೇಶಕ್ಕೆ ಬಳಸಿದ್ರೆ ಕಠಿಣ ಕ್ರಮ

    Hebbal Short Tunnel IISC Study Report | ಹೆಬ್ಬಾಳ ಕಿರು ಸುರಂಗ ಯೋಜನೆ ಅವೈಜ್ಞಾನಿಕ: ರಾಜ್ಯಪಾಲರಿಗೆ ಐಐಎಸ್ಸಿ ವರದಿ ಸಲ್ಲಿಕೆ

    ಕಲಾಗ್ರಾಮದ ಸಮಾಧಿಗಳನ್ನು ತಕ್ಷಣ ತೆರವುಗೊಳಿಸಿ: ಹೈಕೋರ್ಟ್ ವಕೀಲ ಎನ್.ಪಿ. ಅಮೃತೇಶ್ ಸರ್ಕಾರಕ್ಕೆ ನೋಟಿಸ್

    ಬೆಂಗಳೂರಿನ ಇಸ್ಕಾನ್ ದೇವಸ್ಥಾನ

    Temple News | ​ಬೆಂಗಳೂರಿನ ಇಸ್ಕಾನ್ ದೇವಾಲಯಗಳಲ್ಲಿ ನಾಳೆಯಿಂದ ಅದ್ಧೂರಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ

    ಕೆಪಿಎಸ್ ಸ್ಸಿ ಕೇಂದ್ರ ಕಚೇರಿ ಕಟ್ಟಡ

    KPSC KAS Recruitment 2026 | ಗೆಜೆಟೆಡ್ ಪ್ರೊಬೇಷನರ್ ಹುದ್ದೆಗಳ ಅರ್ಜಿ ಸಲ್ಲಿಕೆ ದಿನಾಂಕ ಸೆಪ್ಟೆಂಬರ್ 7ರವರೆಗೆ ವಿಸ್ತರಣೆ

  • Public interest
  • BW Special
  • Life Style
  • Photo Gallery
  • Video
No Result
View All Result

Home Bengaluru Focus

BW Special | ಬೆಂಗಳೂರು: ದೂರು ನೀಡಿ 6 ತಿಂಗಳಾದರೂ ಕಾವೇರಿ ನೀರಿನ ಪೈಪ್ ರಿಪೇರಿ ಮಾಡದ BWSSB; ರಸ್ತೆಯಲ್ಲೇ ಹರಿಯುತ್ತಿದೆ ಜೀವಜಲ!

ಮೂಡಲಪಾಳ್ಯದ ನಾಗರಬಾವಿ ಮುಖ್ಯರಸ್ತೆಯಲ್ಲಿ ಆರು ತಿಂಗಳಿಂದ ಕುಡಿಯುವ ನೀರು ಪೋಲಾಗುತ್ತಿದ್ದರೂ ಎಚ್ಚೆತ್ತುಕೊಳ್ಳದ ಜಲಮಂಡಳಿ ಅಧಿಕಾರಿಗಳು.

by Bengaluru Wire Desk
July 3, 2026
in Bengaluru Focus, BW Special, Public interest
Reading Time: 1 min read
0

ಬೆಂಗಳೂರು, ಜು.03 www.bengaluruwire.com: ರಾಜಧಾನಿ ಬೆಂಗಳೂರಿನಲ್ಲಿ ಒಂದೆಡೆ ಕುಡಿಯುವ ನೀರಿಗೆ ಹಾಹಾಕಾರ ಶುರುವಾಗುವ ಭೀತಿ ಎದುರಾಗಿದ್ದರೆ, ಮತ್ತೊಂದೆಡೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಅಮೂಲ್ಯವಾದ ಕಾವೇರಿ ನೀರು ರಸ್ತೆಯಲ್ಲಿ ಪೋಲಾಗುತ್ತಿದೆ. 

ಮೂಡಲಪಾಳ್ಯ ವೃತ್ತದಿಂದ ಕೂಗಳತೆ ದೂರದಲ್ಲಿರುವ ನಾಗರಬಾವಿ ಮುಖ್ಯರಸ್ತೆಯಲ್ಲಿ ಕಾವೇರಿ ನೀರಿನ ಪೈಪ್ ಹಾಳಾಗಿ ಬರೋಬ್ಬರಿ 6 ತಿಂಗಳು ಕಳೆದಿದೆ. ಆದರೂ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಮಾತ್ರ ಕಣ್ಮುಚ್ಚಿ ಕುಳಿತಿದೆ.

​ಗುತ್ತಿಗೆದಾರನ ಬೇಜವಾಬ್ದಾರಿತನ, ಇಂಜಿನಿಯರ್‌ಗಳ ಕುರುಡುತನ:

​ಕೆಲವು ದಿನಗಳ ಹಿಂದಷ್ಟೇ ಪೈಪ್ ಹಾಳಾದ ಜಾಗದ ಮೇಲೆಯೇ ರಸ್ತೆ ಕೊರೆದು ಹೊಸದೊಂದು ಪೈಪ್ ಅಳವಡಿಕೆ ಮಾಡಲಾಗಿದೆ. ಆದರೆ, ಈ ವೇಳೆ ಮೊದಲೇ ಒಡೆದು ಹೋಗಿದ್ದ ನೀರಿನ ಪೈಪ್ ಸರಿಪಡಿಸುವ ಕನಿಷ್ಠ ಜವಾಬ್ದಾರಿಯನ್ನೂ ಗುತ್ತಿಗೆ ಪಡೆದ ಕಾಂಟ್ರಾಕ್ಟರ್ ತೋರಿಲ್ಲ. ಒಡೆದ ಪೈಪ್‌ ಅನ್ನು ಹಾಗೆಯೇ ಬಿಟ್ಟು, ಅದರ ಮೇಲೆಯೇ ಹೊಸ ಪೈಪ್ ಅಳವಡಿಸಿ, ಗುಂಡಿ ಮುಚ್ಚಿ, ಜಲ್ಲಿ ಹಾಕಿ ಕಾಮಗಾರಿ ಮುಗಿಸಿ ಕೈತೊಳೆದುಕೊಂಡು ಹೋಗಿದ್ದಾನೆ.

​ಹೊಸ ಪೈಪ್ ಅಳವಡಿಸುವಾಗ ಜಲಮಂಡಳಿಯ ಪ್ರಕಾಂಡ ಎಂಜಿನಿಯರ್‌ಗಳು ಸ್ಥಳದಲ್ಲೇ ಇದ್ದು ಕಾಮಗಾರಿಯನ್ನು ಪರಿಶೀಲಿಸಿದ್ದರೆ, ಒಡೆದ ಪೈಪ್ ಅನ್ನು ಸರಿಪಡಿಸುತ್ತಿದ್ದರೋ ಏನೋ. ಅಥವಾ ವಿಷಯ ತಿಳಿದಿದ್ದರೂ ಅದರ ಮೇಲೆ ಹೊಸ ಪೈಪ್ ಅಳವಡಿಸಿ ಕಣ್ಣೊರೆಸುವ ತಂತ್ರ ಮಾಡಿದ್ದಾರಾ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.

​ದೂರು ನೀಡಿದರೂ ಕ್ಯಾರೇ ಎನ್ನದ ಜಲಮಂಡಳಿ:

​ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಮುಂಗಾರು ಕೈಕೊಟ್ಟು, ನಗರಕ್ಕೆ ನೀರು ಪೂರೈಸುವ ಕಾವೇರಿ ಕೊಳ್ಳದ ಜಲಾಶಯಗಳಲ್ಲಿ ನೀರಿನ ಮಟ್ಟ ಗಣನೀಯವಾಗಿ ಕುಸಿಯುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಕುಡಿಯುವ ನೀರು ವ್ಯರ್ಥವಾಗಿ ಹರಿಯುತ್ತಿರುವ ಬಗ್ಗೆ ಸ್ಥಳೀಯರು ಇದೇ ವರ್ಷದ ಜನವರಿ 8ರಂದೇ ಅಧಿಕಾರಿಗಳಿಗೆ ದೂರು ನೀಡಿದ್ದರು (Complaint number: 269089). ದೂರು ನೀಡಿ ಆರು ತಿಂಗಳು ಕಳೆದರೂ, ಜಲಮಂಡಳಿಯ ಸಂಬಂಧಪಟ್ಟ ಇಂಜಿನಿಯರ್‌ಗಳು ಇತ್ತ ತಿರುಗಿಯೂ ನೋಡಿಲ್ಲ.

​ಅಧಿಕಾರಿಗಳ ಈ ಅಕ್ಷಮ್ಯ ನಿರ್ಲಕ್ಷ್ಯಕ್ಕೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಈ ಬಗ್ಗೆ ಉನ್ನತ ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ಕ್ರಮ ಕೈಗೊಳ್ಳಬೇಕು ಹಾಗೂ ಪೈಪ್ ದುರಸ್ತಿ ಮಾಡಬೇಕೆಂದು ನಾಗರಿಕರು ಆಗ್ರಹಿಸಿದ್ದಾರೆ.

Sharing is Caring

  • Share on WhatsApp (Opens in new window) WhatsApp
  • Print (Opens in new window) Print
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Share on LinkedIn (Opens in new window) LinkedIn

Like this:

Like Loading…
WhatsApp Join our WhatsApp Channel
Previous Post

Gurha Jyothi | ಗೃಹ ಜ್ಯೋತಿ ಯೋಜನೆ: ಜಾತಿ ಪ್ರಮಾಣಪತ್ರ ಮಾಹಿತಿ ಖಡ್ಡಾಯವಲ್ಲ, ಬೆಸ್ಕಾಂ ಸ್ಪಷ್ಟನೆ

Next Post

BW IMPACT | ಆರು ತಿಂಗಳಲ್ಲಿ ಆಗದ ಕೆಲಸ 3.45 ಗಂಟೆಯಲ್ಲಾಯ್ತು: ಮೂಡಲಪಾಳ್ಯ ಬಳಿ ಕಾವೇರಿ ನೀರಿನ ಪೈಪ್ ರಿಪೇರಿಯಾಯ್ತು!!

Next Post

BW IMPACT | ಆರು ತಿಂಗಳಲ್ಲಿ ಆಗದ ಕೆಲಸ 3.45 ಗಂಟೆಯಲ್ಲಾಯ್ತು: ಮೂಡಲಪಾಳ್ಯ ಬಳಿ ಕಾವೇರಿ ನೀರಿನ ಪೈಪ್ ರಿಪೇರಿಯಾಯ್ತು!!

ಎರಡು ಬಿಎಂಟಿಸಿ ಬಸ್‌ಗಳ ನಡುವೆ ಭೀಕರ ಅಪಘಾತ: 5 ಪ್ರಯಾಣಿಕರಿಗೆ ಗಾಯ, ಚಿಕಿತ್ಸಾ ವೆಚ್ಚ ಸರ್ಕಾರ ಭರಿಸಲಿದೆ ಎಂದ ಸಚಿವ ಬೈರತಿ ಸುರೇಶ್

Please login to join discussion

Like Us on Facebook

Follow Us on Twitter

Recent News

ವಿಧಾನಸೌಧದ ಸಾಂದರ್ಭಿಕ ಚಿತ್ರ

“ವೈದ್ಯರಂತೆ ಶಿಕ್ಷಕರ ಹೆಸರಿನ ಮುಂದೆ ‘Tr’ ಗೌರವನಾಮ ಬಳಸಲು ಸರ್ಕಾರ ಅಧಿಕೃತ ಆದೇಶ”

September 6, 2026
Namma Metro Purple Line

Namma Metro News | ನಮ್ಮ ಮೆಟ್ರೋ ನೇರಳೆ, ಹಸಿರು ಮಾರ್ಗಕ್ಕೆ 4 ಹೊಸ ರೈಲುಗಳು ಶೀಘ್ರದಲ್ಲೇ ಸೇರ್ಪಡೆ

September 5, 2026
Bengaluru Wire, Kannada News, latest News in Kannada

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video
ವಿಧಾನಸೌಧದ ಸಾಂದರ್ಭಿಕ ಚಿತ್ರ

“ವೈದ್ಯರಂತೆ ಶಿಕ್ಷಕರ ಹೆಸರಿನ ಮುಂದೆ ‘Tr’ ಗೌರವನಾಮ ಬಳಸಲು ಸರ್ಕಾರ ಅಧಿಕೃತ ಆದೇಶ”

September 6, 2026
Namma Metro Purple Line

Namma Metro News | ನಮ್ಮ ಮೆಟ್ರೋ ನೇರಳೆ, ಹಸಿರು ಮಾರ್ಗಕ್ಕೆ 4 ಹೊಸ ರೈಲುಗಳು ಶೀಘ್ರದಲ್ಲೇ ಸೇರ್ಪಡೆ

September 5, 2026

ಮೈಸೂರು ದಸರಾ 2026: ಈ ಬಾರಿ ‘ನಿಶಾನೆ ಆನೆ’ಯಾಗಿ ಗಜಪಡೆ ಮುನ್ನಡೆಸಲಿದ್ದಾನೆ ಅಭಿಮನ್ಯು

September 4, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group
%d