Monday, October 19, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    Defence News | ಹಿಮಾಲಯ ಸೀಳಿ 16,700 ಅಡಿ ಎತ್ತರದಲ್ಲಿ ‘ನಿಮ್ಮು–ಪದಮ್–ದಾರ್ಚಾ’ ರಸ್ತೆ ಲೋಕಾರ್ಪಣೆ: ಇತಿಹಾಸ ಬರೆದ ಬಿಆರ್‌ಒ

    ಮೈಸೂರು ದಸರಾದಲ್ಲಿ ಐತಿಹಾಸಿಕ ಕಂಬಳ ಉದ್ಘಾಟಿಸಿದ ಸಿಎಂ ಡಿ.ಕೆ. ಶಿವಕುಮಾರ್: ದಸರಾ ರೀಲ್ಸ್ ಸ್ಪರ್ಧೆ ಘೋಷಣೆ

    ಗುತ್ತಿಗೆ, ಹೊರಗುತ್ತಿಗೆ ನೌಕರರಿಗೂ ಇನ್ಮುಂದೆ ‘ಕರ್ತವ್ಯ’ ಆ್ಯಪ್ ಹಾಜರಾತಿ ಕಡ್ಡಾಯ: ಆ್ಯಪ್ ಬಳಸದಿದ್ದರೆ ವೇತನ ಕಡಿತ

    ಸಕಾಲ ಸೇವೆ ವಿಳಂಬಕ್ಕೆ ಅಧಿಕಾರಿಗಳಿಗೆ 1,500 ರೂ. ದಂಡ: ಸುಳ್ಳು ದೂರು ಕೊಟ್ಟರೆ ನಾಗರಿಕರಿಗೂ ತಪ್ಪಿದ್ದಲ್ಲ ಬರೆ

    ಕ್ಯಾನ್ಸರ್ ರೋಗಿಗಳಿಗೆ ಕೇಂದ್ರದಿಂದ ಬಿಗ್ ರಿಲೀಫ್: 137 ಔಷಧಗಳ ದರ ಶೇ.70 ರಷ್ಟು ಇಳಿಕೆ!

    ಬೆಂಗಳೂರಿನ ಪಕ್ಷಿನೋಟ ಸಾಂದರ್ಭಿಕ ಚಿತ್ರ

    ಬೆಂಗಳೂರಿನ ಜಂಟಿ ಆಸ್ತಿ ಮಾಲೀಕರೇ ಇನ್ನು ಮುಂದೆ ಇ-ಆಸ್ತಿ 2.0 ನಲ್ಲಿ ನಿವೇಶನ ಉಪ-ವಿಭಜನೆಗೆ ಅವಕಾಶ

    ಕೆಆರ್‌ಎಸ್‌ನಲ್ಲಿ ಎರಡನೇ ವರ್ಷದ ಕಾವೇರಿ ಮಾತೆಗೆ ಆರತಿ ಕಾರ್ಯಕ್ರಮಕ್ಕೆ ಅದ್ಧೂರಿ ಚಾಲನೆ: ಭಕ್ತಿಭಾವದಲ್ಲಿ ಮಿಂದೆದ್ದ ಬೃಂದಾವನ

    ಹಾರುವ ‘ಟೆಸ್ಲಾ ರೋಡ್‌ಸ್ಟರ್’ ಕಾರು ಅನಾವರಣ: ಗಾಳಿಯಲ್ಲಿ ಪಲ್ಟಿ ಹೊಡೆದು ಸೇಫ್ ಲ್ಯಾಂಡಿಂಗ್

    ಹಬ್ಬದ ಸೀಸನ್‌ನಲ್ಲಿ ಆಹಾರ ಸುರಕ್ಷತಾ ಇಲಾಖೆ ಭರ್ಜರಿ ಕಾರ್ಯಾಚರಣೆ: 80 ಸಿಹಿ ತಿಂಡಿ ಮಳಿಗೆಗಳ ಮೇಲೆ ದಾಳಿ, 10 ಘಟಕಗಳಿಗೆ ನೋಟಿಸ್

  • Bengaluru Focus

    ಪ್ರತಿವರ್ಷ ಅಕ್ಟೋಬರ್ 21ಕ್ಕೆ ‘ಶ್ರೀ ಮಧ್ವಾಚಾರ್ಯ ಜಯಂತಿ’: ರಾಜ್ಯ ಸರ್ಕಾರದಿಂದ ಅಧಿಕೃತ ಆದೇಶ

    ಜೆಡಿಎಸ್ ಸೋಶಿಯಲ್ ಮೀಡಿಯಾ ಹುಡುಗನನ್ನು ಪೊಲೀಸ್ ವಶಕ್ಕೆ: ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಕಿಡಿ

    Railway News | ಹಾಸನಾಂಬ ಜಾತ್ರೆ: ಬೆಂಗಳೂರು-ಹಾಸನ ನಡುವೆ ವಿಶೇಷ ರೈಲು ಸೇವೆ ಆರಂಭ

    ಕರ್ನಾಟಕದ ನೂತನ ರಾಜ್ಯಪಾಲರಾಗಿ ಸುಧಾ ಯಾದವ್ ನೇಮಕ

    ಆಸ್ಪತ್ರೆ ಬಿಲ್ ಬಾಕಿ: ಮೃತದೇಹ ನೀಡದಿದ್ದರೆ ಕಠಿಣ ಕಾನೂನು ಕ್ರಮ

  • Public interest
  • BW Special
  • Life Style
  • Photo Gallery
  • Video
No Result
View All Result

Home News Wire

ಮೈಸೂರು ದಸರಾದಲ್ಲಿ ಐತಿಹಾಸಿಕ ಕಂಬಳ ಉದ್ಘಾಟಿಸಿದ ಸಿಎಂ ಡಿ.ಕೆ. ಶಿವಕುಮಾರ್: ದಸರಾ ರೀಲ್ಸ್ ಸ್ಪರ್ಧೆ ಘೋಷಣೆ

ಕಂಬಳ ಟ್ರ್ಯಾಕ್‌ಗೆ ಇಳಿದು ಕೋಣಗಳಿಗೆ ಬಾರಕೋಲು ಬೀಸಿ ಸಂಭ್ರಮಿಸಿದ ಸಿಎಂ | ದಸರಾ ಕುರಿತು ಉತ್ತಮ ರೀಲ್ಸ್ ಮಾಡುವ 100 ಮಂದಿಗೆ ವಿಶೇಷ ಬಹುಮಾನ ಘೋಷಣೆ

by Bengaluru Wire Desk
October 19, 2026
in News Wire, Public interest
Reading Time: 1 min read
0

ಮೈಸೂರು, ಅ.19 www.bengaluruwire.com: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ-2026ರ ಅಂಗವಾಗಿ ಇದೇ ಮೊದಲ ಬಾರಿಗೆ ಸಾಂಸ್ಕೃತಿಕ ನಗರಿಯಲ್ಲಿ ಆಯೋಜಿಸಲಾಗಿರುವ ತುಳುನಾಡಿನ ಐತಿಹಾಸಿಕ ಜಾನಪದ ಕ್ರೀಡೆ ‘ಮೈಸೂರು ಕಂಬಳ’ವನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಭಾನುವಾರ ಉದ್ಘಾಟಿಸಿದರು.

ನಗರದ ಹೊರವರ್ತುಲ ರಸ್ತೆಯ ಸಾತಗಳ್ಳಿ ಸಮೀಪದ ವಿಟಿಯು (VTU) ಕಾಲೇಜು ಪಕ್ಕದ ಮೈದಾನದಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ಈ ಕಂಬಳದಲ್ಲಿ ಕನೆ ಹಲಗೆ, ಅಡ್ಡಹಲಗೆ, ಹಗ್ಗ ಹಾಗೂ ನೇಗಿಲು ವಿಭಾಗದ ಜೋಡಿ ಕೋಣಗಳ ಮೈನವಿರೇಳಿಸುವ ಓಟವನ್ನು ಸಿಎಂ ಕಣ್ತುಂಬಿಕೊಂಡರು.

ಕರಾವಳಿ ಸಂಸ್ಕೃತಿಯ ಅನಾವರಣ: 

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಿಎಂ ಡಿ.ಕೆ. ಶಿವಕುಮಾರ್, “ನಾಡದೇವತೆ ತಾಯಿ ಚಾಮುಂಡೇಶ್ವರಿಯ ಅನುಗ್ರಹದಿಂದ ಕರಾವಳಿಯ ಕೃಷಿ ಬದುಕು ಹಾಗೂ ಧಾರ್ಮಿಕ ನಂಬಿಕೆಯೊಂದಿಗೆ ಬೆಸೆದುಕೊಂಡಿರುವ ಕಂಬಳವನ್ನು ಮೈಸೂರಿಗೆ ತರಲಾಗಿದೆ. ಸುಮಾರು 800 ವರ್ಷಗಳ ಇತಿಹಾಸ ಹೊಂದಿರುವ ಈ ಕ್ರೀಡೆಗೆ ಕಾನೂನಿನ ಮಾನ್ಯತೆಯೂ ದೊರೆತಿದೆ. ನಾವು ಕೇವಲ ಕಂಬಳವನ್ನು ಮಾತ್ರ ಇಲ್ಲಿಗೆ ತಂದಿಲ್ಲ, ಬದಲಾಗಿ ಕರಾವಳಿಯ ಶ್ರೀಮಂತ ಪರಂಪರೆಯನ್ನು ಇಡೀ ನಾಡಿಗೆ ಪರಿಚಯಿಸುತ್ತಿದ್ದೇವೆ. ಟೀಕೆಗಳು ಸಾಯುತ್ತವೆ, ಸತ್ಯ ಮತ್ತು ಸಂಸ್ಕೃತಿ ಉಳಿಯುತ್ತವೆ” ಎಂದು ಮಾರ್ಮಿಕವಾಗಿ ನುಡಿದರು.

ಕಂಬಳ ಕೂಟಗಳಿಗೆ ತಲಾ 5 ಲಕ್ಷ ರೂ. ಅನುದಾನ: “ವಿಜಯನಗರ ಸಾಮ್ರಾಜ್ಯದ ಕಾಲದಲ್ಲೂ ದಸರಾದಲ್ಲಿ ಕೋಣಗಳನ್ನು ಪೂಜಿಸಿ ಪ್ರದರ್ಶಿಸಲಾಗುತ್ತಿತ್ತು. ಕೃಷಿ ಮಣ್ಣಿನಿಂದ ಹುಟ್ಟಿರುವ ಈ ಕ್ರೀಡೆಯನ್ನು ಉಳಿಸಲು ನಮ್ಮ ಸರ್ಕಾರ ಬದ್ಧವಾಗಿದ್ದು, ರಾಜ್ಯದ 23 ಕಂಬಳ ಕೂಟಗಳಿಗೆ ತಲಾ 5 ಲಕ್ಷ ರೂಪಾಯಿ ಅನುದಾನ ನೀಡಲಾಗುತ್ತಿದೆ. ಕಂಬಳ ಓಟಗಾರರಿಗೆ ಸೂಕ್ತ ತರಬೇತಿ ನೀಡಿದರೆ ಅಥ್ಲೆಟಿಕ್ಸ್‌ನಲ್ಲಿ ದೇಶಕ್ಕೆ ಪದಕ ತರುವ ಸಾಮರ್ಥ್ಯ ಅವರಲ್ಲಿದೆ” ಎಂದು ಸಿಎಂ ಶ್ಲಾಘಿಸಿದರು.

ಕಂಬಳ ಟ್ರ್ಯಾಕ್‌ನಲ್ಲಿ ಸಿಎಂ ಸಂಚಾರ: 

ಇದೇ ವೇಳೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸ್ವತಃ ಕಂಬಳದ ಕೆಸರು ಗದ್ದೆಯ ಟ್ರ್ಯಾಕ್‌ಗೆ ಇಳಿದು ನೆರೆದಿದ್ದ ಸಾರ್ವಜನಿಕರಿಗೆ ಅಭಿನಂದನೆ ಸಲ್ಲಿಸಿದರು. ಕೈಯಲ್ಲಿ ಬಾರಕೋಲು ಹಿಡಿದು ಕೋಣಗಳಿಗೆ ಚಾಟಿ ಬೀಸುವ ಮೂಲಕ ಹುರುಪು ತುಂಬಿದ ಅವರು, ಕೋಣಗಳ ಮಾಲೀಕರು ಹಾಗೂ ಓಟಗಾರರೊಂದಿಗೆ ಫೋಟೋ ತೆಗೆಸಿಕೊಂಡು ಗಮನ ಸೆಳೆದರು.

ದಸರಾ ರೀಲ್ಸ್ ಮಾಡಿ ಬಹುಮಾನ ಗೆಲ್ಲಿ: 

ಯುವಜನತೆ ಹಾಗೂ ಛಾಯಾಗ್ರಾಹಕರಿಗೆ ವಿಶೇಷ ಆಫರ್ ನೀಡಿದ ಸಿಎಂ, “ದಸರಾ ಉದ್ಘಾಟನೆ, ದೀಪಾಲಂಕಾರ, ಜಂಬೂಸವಾರಿ, ಕ್ರೀಡೆ, ಆಹಾರ ಮೇಳ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಕುರಿತು ಆಕರ್ಷಕ ರೀಲ್ಸ್ (Reels) ಮಾಡಿ ಅಧಿಕೃತ ದಸರಾ ವೆಬ್‌ಸೈಟ್‌ಗೆ (Mysuru dasara.2026) ಕಳುಹಿಸಿ. ಇದರಲ್ಲಿ ಅತ್ಯುತ್ತಮ ರೀಲ್ಸ್ ಮಾಡುವ 100 ಮಂದಿಗೆ ಪ್ರಶಸ್ತಿ ಹಾಗೂ ವಿಶೇಷ ಬಹುಮಾನ ನೀಡಲಾಗುವುದು” ಎಂದು ಘೋಷಿಸಿದರು.

ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ, “ಸಿಎಂ ನಿರ್ದೇಶನದಂತೆ ಮೈಸೂರಿನಲ್ಲಿ ಕಂಬಳ ಆಯೋಜಿಸಲಾಗಿದೆ. ಕಂಬಳಕ್ಕೆ ಪೂಜೆ ಸಲ್ಲಿಸಿದ ದಿನದಿಂದ ಮೈಸೂರು ಭಾಗದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಬರದ ಛಾಯೆ ಮರೆಯಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಕುಟುಂಬ ಸಮೇತರಾಗಿ ಬಂದು ಕಂಬಳ ವೀಕ್ಷಿಸಬೇಕು” ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಸಚಿವರಾದ ಚೆಲುವರಾಯಸ್ವಾಮಿ, ಪುಟ್ಟರಂಗಶೆಟ್ಟಿ, ಶಾಸಕರಾದ ಜಿ.ಟಿ. ದೇವೇಗೌಡ, ತನ್ವೀರ್ ಸೇಠ್, ಕೆ. ಹರೀಶ್ ಗೌಡ, ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷ ಸಿ. ನರೇಂದ್ರ, ರಾಜ್ಯ ಕಂಬಳ ಸಮಿತಿ ಅಧ್ಯಕ್ಷ ದೇವಿ ಪ್ರಸಾದ್ ಶೆಟ್ಟಿ, ಬೋವಿ ನಿಗಮದ ಅಧ್ಯಕ್ಷ ರಾಮಪ್ಪ, ಮಾಜಿ ಶಾಸಕ ನರೇಂದ್ರ ಬಾಬು, ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ್ ರೆಡ್ಡಿ, ಸಿಇಒ ಎಸ್. ಯುಕೇಶ್ ಕುಮಾರ್, ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

View this post on Instagram

Sharing is Caring

  • Share on WhatsApp (Opens in new window) WhatsApp
  • Print (Opens in new window) Print
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Share on LinkedIn (Opens in new window) LinkedIn

Like this:

Like Loading…
WhatsApp Join our WhatsApp Channel
Previous Post

ಗುತ್ತಿಗೆ, ಹೊರಗುತ್ತಿಗೆ ನೌಕರರಿಗೂ ಇನ್ಮುಂದೆ ‘ಕರ್ತವ್ಯ’ ಆ್ಯಪ್ ಹಾಜರಾತಿ ಕಡ್ಡಾಯ: ಆ್ಯಪ್ ಬಳಸದಿದ್ದರೆ ವೇತನ ಕಡಿತ

Next Post

Defence News | ಹಿಮಾಲಯ ಸೀಳಿ 16,700 ಅಡಿ ಎತ್ತರದಲ್ಲಿ ‘ನಿಮ್ಮು–ಪದಮ್–ದಾರ್ಚಾ’ ರಸ್ತೆ ಲೋಕಾರ್ಪಣೆ: ಇತಿಹಾಸ ಬರೆದ ಬಿಆರ್‌ಒ

Next Post

Defence News | ಹಿಮಾಲಯ ಸೀಳಿ 16,700 ಅಡಿ ಎತ್ತರದಲ್ಲಿ ‘ನಿಮ್ಮು–ಪದಮ್–ದಾರ್ಚಾ’ ರಸ್ತೆ ಲೋಕಾರ್ಪಣೆ: ಇತಿಹಾಸ ಬರೆದ ಬಿಆರ್‌ಒ

Please login to join discussion

Like Us on Facebook

Follow Us on Twitter

Recent News

Defence News | ಹಿಮಾಲಯ ಸೀಳಿ 16,700 ಅಡಿ ಎತ್ತರದಲ್ಲಿ ‘ನಿಮ್ಮು–ಪದಮ್–ದಾರ್ಚಾ’ ರಸ್ತೆ ಲೋಕಾರ್ಪಣೆ: ಇತಿಹಾಸ ಬರೆದ ಬಿಆರ್‌ಒ

October 19, 2026

ಮೈಸೂರು ದಸರಾದಲ್ಲಿ ಐತಿಹಾಸಿಕ ಕಂಬಳ ಉದ್ಘಾಟಿಸಿದ ಸಿಎಂ ಡಿ.ಕೆ. ಶಿವಕುಮಾರ್: ದಸರಾ ರೀಲ್ಸ್ ಸ್ಪರ್ಧೆ ಘೋಷಣೆ

October 19, 2026
Bengaluru Wire, Kannada News, latest News in Kannada

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

Defence News | ಹಿಮಾಲಯ ಸೀಳಿ 16,700 ಅಡಿ ಎತ್ತರದಲ್ಲಿ ‘ನಿಮ್ಮು–ಪದಮ್–ದಾರ್ಚಾ’ ರಸ್ತೆ ಲೋಕಾರ್ಪಣೆ: ಇತಿಹಾಸ ಬರೆದ ಬಿಆರ್‌ಒ

October 19, 2026

ಮೈಸೂರು ದಸರಾದಲ್ಲಿ ಐತಿಹಾಸಿಕ ಕಂಬಳ ಉದ್ಘಾಟಿಸಿದ ಸಿಎಂ ಡಿ.ಕೆ. ಶಿವಕುಮಾರ್: ದಸರಾ ರೀಲ್ಸ್ ಸ್ಪರ್ಧೆ ಘೋಷಣೆ

October 19, 2026

ಗುತ್ತಿಗೆ, ಹೊರಗುತ್ತಿಗೆ ನೌಕರರಿಗೂ ಇನ್ಮುಂದೆ ‘ಕರ್ತವ್ಯ’ ಆ್ಯಪ್ ಹಾಜರಾತಿ ಕಡ್ಡಾಯ: ಆ್ಯಪ್ ಬಳಸದಿದ್ದರೆ ವೇತನ ಕಡಿತ

October 18, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group
%d