Monday, June 22, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ಬೆಂಗಳೂರು: ಯಂಟಗಾನಹಳ್ಳಿ ಕೆರೆಗೆ ವೈದ್ಯಕೀಯ ತ್ಯಾಜ್ಯ ಸುರಿದ ಖಾಸಗಿ ಕ್ಲಿನಿಕ್ ವೈದ್ಯನ ವಿರುದ್ಧ ಎಫ್.ಐ.ಆರ್. ದಾಖಲು

    Science News | ​ಮುಂಗಾರಿನಾಟ: ಮಹಾರಾಷ್ಟ್ರದಲ್ಲಿ ಒಣಹವೆ, ಆದರೆ ರಾಜಸ್ಥಾನದ ಮರುಭೂಮಿಯಲ್ಲಿ ಭಾರಿ ಮಳೆ

    ಸೈಬರ್ ಕ್ರೈಮ್ ಕುರಿತ ಸಾಂದರ್ಭಿಕ ಚಿತ್ರ

    ಸೈಬರ್ ವಂಚಕರಿಗೆ ಸಿಂಹಸ್ವಪ್ನವಾದ ಕರ್ನಾಟಕ ಪೊಲೀಸ್: ಕೋಟ್ಯಂತರ ರೂಪಾಯಿ ಉಳಿಸಲು ಬ್ಯಾಂಕ್ ಖಾತೆಗಳು ಬ್ಲಾಕ್

    ಟಾಟಾ ಪವರ್ ಅರ್ಜಿಗಳು ಸಂಪೂರ್ಣ ಆಂಗ್ಲಮಯ: ಕನ್ನಡಿಗರ ಭಾಷಾ ಹಕ್ಕಿಗೆ ಧಕ್ಕೆ,  ಡಾ. ಪುರುಷೋತ್ತಮ ಬಿಳಿಮಲೆ ಕೆಇಆರ್‌ಸಿಗೆ ಪತ್ರ

    Vidhana Soudha

    IAS Transfer | ರಾಜ್ಯದಲ್ಲಿ 13 ಐಎಎಸ್ ಅಧಿಕಾರಿಗಳ ವರ್ಗಾವಣೆ

    Viral Video | 25 ಸಾವಿರದ ಆಫೀಸ್ ಕೆಲಸಕ್ಕೆ ಗುಡ್‌ಬೈ ಹೇಳಿ ಕ್ಯಾಬ್ ಡ್ರೈವರ್ ಆದ ಯುವಕ; ಈಗ ಈತನ ತಿಂಗಳ ಗಳಿಕೆ 1 ಲಕ್ಷ ರೂ.!

    ಎನ್‌ಎಸ್‌ಇಯಿಂದ ₹30,000 ಕೋಟಿ ಮೊತ್ತದ ಐಪಿಒ ಸಲ್ಲಿಕೆ: ಇದು ಭಾರತದ ಅತಿದೊಡ್ಡ ಸಾರ್ವಜನಿಕ ಷೇರು ವಿತರಣೆ

    ಕರ್ನಾಟಕದಲ್ಲಿ ತೀವ್ರ ಜಲಕ್ಷಾಮ: ಶೇ. 21ರಷ್ಟು ಮಳೆ ಕೊರತೆ, 14 ಪ್ರಮುಖ ಜಲಾಶಯಗಳಲ್ಲಿ ಕೇವಲ 23% ನೀರು ಸಂಗ್ರಹ

    ​ರೈಲ್ವೆ ಪದೋನ್ನತಿ ಪರೀಕ್ಷೆಯಲ್ಲಿ ಕನ್ನಡಿಗರಿಗೆ ವಂಚನೆ: ಜೂನ್ 25ರಂದು ತೀವ್ರ ಹೋರಾಟದ ಎಚ್ಚರಿಕೆ ನೀಡಿದ ಕರವೇ

  • Bengaluru Focus

    ಬೆಂಗಳೂರು: ಯಂಟಗಾನಹಳ್ಳಿ ಕೆರೆಗೆ ವೈದ್ಯಕೀಯ ತ್ಯಾಜ್ಯ ಸುರಿದ ಖಾಸಗಿ ಕ್ಲಿನಿಕ್ ವೈದ್ಯನ ವಿರುದ್ಧ ಎಫ್.ಐ.ಆರ್. ದಾಖಲು

    GBA Head Office Image

    GBA News | ಬೆಂಗಳೂರಿನಲ್ಲಿ ಇ-ಖಾತಾ ಸೇವೆ ಮತ್ತಷ್ಟು ಸುಲಭ: 6 ವಾರಗಳಲ್ಲಿ 6,169 ಅರ್ಜಿಗಳ ಯಶಸ್ವಿ ವಿಲೇವಾರಿ

    ಬಿಡದಿ ಟೌನ್‌ಶಿಪ್ ವಿರೋಧಿ ರೈತರ ಹೋರಾಟ 450 ದಿನಕ್ಕೆ: ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ  ನಾಳೆ ಬೃಹತ್ ಪಾದಯಾತ್ರೆ 

    Defence News | ಬೆಂಗಳೂರು: ಎಎಸ್‌ಸಿ ಸೆಂಟರ್‌ನಲ್ಲಿ 8ನೇ ಬ್ಯಾಚ್‌ನ ಅಗ್ನಿವೀರರ ನಿರ್ಗಮನ ಪಥಸಂಚಲನ ಸಂಪನ್ನ

    ಸೈಬರ್ ಕ್ರೈಮ್ ಕುರಿತ ಸಾಂದರ್ಭಿಕ ಚಿತ್ರ

    ಸೈಬರ್ ವಂಚಕರಿಗೆ ಸಿಂಹಸ್ವಪ್ನವಾದ ಕರ್ನಾಟಕ ಪೊಲೀಸ್: ಕೋಟ್ಯಂತರ ರೂಪಾಯಿ ಉಳಿಸಲು ಬ್ಯಾಂಕ್ ಖಾತೆಗಳು ಬ್ಲಾಕ್

    BMTC News | ಕಿಲ್ಲರ್ ಬಿಎಂಟಿಸಿಗೆ ಮತ್ತೊಂದು ಬಲಿ: ಮಂಗನಹಳ್ಳಿ ಕ್ರಾಸ್ ಬಳಿ ಎಲೆಕ್ಟ್ರಿಕ್ ಬಸ್ ಹರಿದು ಪಾದಚಾರಿ ಸಾವು: ರಸ್ತೆ ಉಬ್ಬು ಅಳವಡಿಕೆಗೆ ಆಗ್ರಹ

    BWSSB News | ವರ್ತೂರು ಎಸ್‌ಟಿಪಿ ದುರ್ಘಟನೆ: 40 ಅಡಿ ಆಳದ ಟ್ಯಾಂಕ್‌ಗೆ ಬಿದ್ದು ಇಬ್ಬರು ಕಾರ್ಮಿಕರು ಸಾವು, ಕಾರ್ಯಾಚರಣೆಗೆ ಎನ್‌ಡಿಆರ್‌ಎಫ್ ಸಾಥ್

    Vidhana Soudha

    IAS Transfer | ರಾಜ್ಯದಲ್ಲಿ 13 ಐಎಎಸ್ ಅಧಿಕಾರಿಗಳ ವರ್ಗಾವಣೆ

    GBA News | ಗ್ರೇಟರ್ ಬೆಂಗಳೂರು: ಕಸದ ಸಮಸ್ಯೆ ನಿವಾರಣೆಗೆ ಕಟ್ಟುನಿಟ್ಟಿನ ಕ್ರಮ, ವಾರ್ಡ್ ರಸ್ತೆಗಳ ಅಭಿವೃದ್ಧಿಗೆ ₹2000 ಕೋಟಿ ಅನುದಾನ

  • Public interest
  • BW Special
  • Life Style
  • Photo Gallery
  • Video
No Result
View All Result

Home Bengaluru Focus

ಬೀದಿ ನಾಯಿಗಳ ಬಾಡೂಟಕ್ಕೆ ಆಕ್ಷೇಪ: ಶಾಶ್ವತ ನೆಲೆ ಕಲ್ಪಿಸಲು ಎನ್.ಆರ್. ರಮೇಶ್ ಆಗ್ರಹ

ಬಿಬಿಎಂಪಿ ವ್ಯಾಪ್ತಿಯಲ್ಲಿರುವ 11,122 ಎಕರೆ ಸರ್ಕಾರಿ ಸ್ವತ್ತುಗಳ ಲಭ್ಯ - ಅವುಗಳಲ್ಲಿ ಕೆಲವು ಎಕರೆ ಬಳಸಿ, ಶ್ವಾನ ಆರೈಕೆ ಕೇಂದ್ರಗಳ ನಿರ್ಮಾಣಕ್ಕೆ ಒತ್ತಾಯ

by Bengaluru Wire Desk
July 21, 2025
in Bengaluru Focus
Reading Time: 1 min read
0

ಬೆಂಗಳೂರು, ಜು.21 www.bengaluruwire.com  : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿರುವ ಬೀದಿ ನಾಯಿಗಳಿಗೆ ಪ್ರತಿನಿತ್ಯ ಮಾಂಸಾಹಾರಿ ಊಟ ಒದಗಿಸಲು ₹2.80 ಕೋಟಿ ಮೊತ್ತದ ಟೆಂಡರ್ ಆಹ್ವಾನಿಸುವ ಬದಲು ಅವುಗಳಿಗೆ ಶಾಶ್ವತ ನೆಲೆಯನ್ನು ಕಲ್ಪಿಸಬೇಕೆಂದು ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎನ್.ಆರ್. ರಮೇಶ್ ಆಗ್ರಹಿಸಿದ್ದಾರೆ. 

ಈ ಕುರಿತು ಅವರು ಬಿಬಿಎಂಪಿ ಮುಖ್ಯ ಆಯುಕ್ತರು ಮತ್ತು ಆಡಳಿತಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಶೇ. 1.5ರಷ್ಟು ನಾಯಿಗಳಿಗೆ ಮಾತ್ರ ಬಾಡೂಟ ಹಾಕುವ  ಪಾಲಿಕೆ ಕ್ರಮಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಬಿಬಿಎಂಪಿಯ ಆರೋಗ್ಯ ಇಲಾಖೆಯ ವಿಶೇಷ ಆಯುಕ್ತರಾದ ವಿಕಾಸ್ ಸುರೋಳ್ಕರ್ ಕಿಶೋರ್, 5 ಸಾವಿರ ಬೀದಿ ನಾಯಿಗಳಿಗೆ ಮಾಂಸಾಹಾರಿ ಊಟ ನೀಡಲು ₹2.80 ಕೋಟಿ ಟೆಂಡರ್ ಆಹ್ವಾನಿಸಿರುವ ಬಗ್ಗೆ ಮಾಹಿತಿ ನೀಡಿದ್ದರು. 

ಆದರೆ, ಎರಡು ವರ್ಷಗಳ ಹಿಂದೆ ಡಾ. ತ್ರಿಲೋಕ್ ಚಂದ್ರ ಅವರು ನಡೆಸಿದ ಸಮೀಕ್ಷೆ ಪ್ರಕಾರ, ಬಿಬಿಎಂಪಿ ವ್ಯಾಪ್ತಿಯಲ್ಲಿ ಸುಮಾರು 3.40 ಲಕ್ಷಕ್ಕೂ ಹೆಚ್ಚು ಬೀದಿ ನಾಯಿಗಳಿವೆ. ಇವುಗಳಲ್ಲಿ ಕೇವಲ 5 ಸಾವಿರ ನಾಯಿಗಳಿಗೆ ಮಾತ್ರ ಬಾಡೂಟ ನೀಡಲು ಮುಂದಾಗಿರುವ ಕ್ರಮ ಹಾಸ್ಯಾಸ್ಪದ ಎಂದು ರಮೇಶ್ ಬಣ್ಣಿಸಿದ್ದಾರೆ. “ಒಂದು ಮನೆಯಲ್ಲಿ ಎಲ್ಲ ಸದಸ್ಯರಿಗೂ ಒಂದೇ ರೀತಿಯಾದ ಮತ್ತು ಒಂದೇ ಪ್ರಮಾಣದ ಆಹಾರ ಸಿಗಬೇಕಿರುವುದು ನ್ಯಾಯವಾದುದಲ್ಲವೇ?” ಎಂದು ಅವರು ಪ್ರಶ್ನಿಸಿದ್ದಾರೆ.

ಸರ್ಕಾರಿ ಸ್ವತ್ತುಗಳ ಸಮರ್ಪಕ ಬಳಕೆ ಮಾಡಿ:

ಬಿಬಿಎಂಪಿ ವ್ಯಾಪ್ತಿಯಲ್ಲಿ ಅಪಾರ ಪ್ರಮಾಣದ ಸರ್ಕಾರಿ ಸ್ವತ್ತುಗಳಿರುವುದು ರಮೇಶ್ ಅವರ ಮನವಿಯಲ್ಲಿ ಬೆಳಕಿಗೆ ಬಂದಿದೆ. ಆರ್.ಟಿ.ಐ. ಕಾಯ್ದೆಯಡಿ ಪಡೆದಿರುವ ದಾಖಲೆಗಳ ಪ್ರಕಾರ, ಹಳೆಯ 3 ವಲಯಗಳನ್ನು ಹೊರತುಪಡಿಸಿ, ಹೊಸ 5 ವಲಯಗಳಾದ ಮಹದೇವಪುರ, ಯಲಹಂಕ, ದಾಸರಹಳ್ಳಿ, ರಾಜರಾಜೇಶ್ವರಿ ನಗರ ಮತ್ತು ಬೊಮ್ಮನಹಳ್ಳಿ ವ್ಯಾಪ್ತಿಯಲ್ಲಿ ಸುಮಾರು 6,712 ಎಕರೆ ಗೋಮಾಳ ಜಮೀನುಗಳು ಮತ್ತು 4,410 ಎಕರೆ ‘ಬಿ’ ಖರಾಬು ಜಮೀನುಗಳು ಸೇರಿದಂತೆ ಒಟ್ಟು 11,122 ಎಕರೆ ಸರ್ಕಾರಿ ಸ್ವತ್ತುಗಳಿವೆ.

ಈ ಜಮೀನುಗಳ ಪೈಕಿ ಬಿಬಿಎಂಪಿಯ ಉತ್ತರ, ದಕ್ಷಿಣ, ಪೂರ್ವ ಮತ್ತು ಪಶ್ಚಿಮ ಭಾಗಗಳಲ್ಲಿ ತಲಾ 25 ಎಕರೆಗಳಷ್ಟು ಜಮೀನನ್ನು ರಾಜ್ಯ ಸರ್ಕಾರದ ಅನುಮತಿ ಪಡೆದು, ತಲಾ ₹2 ಕೋಟಿ ವೆಚ್ಚದಲ್ಲಿ ಶಾಶ್ವತ ಬೇಲಿ ಹಾಗೂ ತಲಾ 3-4 ಐಸಿಯು ಘಟಕಗಳು ಮತ್ತು ಆಪರೇಷನ್ ಥಿಯೇಟರ್‌ಗಳನ್ನು ಹೊಂದಿರುವ ಶ್ವಾನ ವೈದ್ಯಶಾಲೆಗಳು ಮತ್ತು ಬೀದಿ ನಾಯಿಗಳ ಆರೈಕೆ ಕೇಂದ್ರಗಳನ್ನು ನಿರ್ಮಿಸುವಂತೆ ರಮೇಶ್ ಒತ್ತಾಯಿಸಿದ್ದಾರೆ. ಇದರಿಂದ ಮಕ್ಕಳ ಮತ್ತು ನಾಗರಿಕರ ಮೇಲಿನ ನಾಯಿಗಳ ದಾಳಿಯನ್ನು ತಡೆಯಬಹುದು ಎಂದು ಅವರು ಹೇಳಿದ್ದಾರೆ.

ಎನ್‌ಜಿಒ, ಹೋಟೆಲ್‌ಗಳಿಂದ ನೆರವು:

ಬಿಬಿಎಂಪಿ ವ್ಯಾಪ್ತಿಯಲ್ಲಿ ನೂರಾರು ಸರ್ಕಾರೇತರ ಸಂಸ್ಥೆಗಳು (ಎನ್‌ಜಿಒ) ಬೀದಿ ನಾಯಿಗಳಿಗೆ ಉಚಿತವಾಗಿ ಊಟ ನೀಡಲು ಮುಂದೆ ಬಂದಿವೆ. ಅಲ್ಲದೆ, 2,600ಕ್ಕೂ ಹೆಚ್ಚು ಕಲ್ಯಾಣ ಮಂಟಪಗಳು ಮತ್ತು 30,000ಕ್ಕೂ ಹೆಚ್ಚು ಹೋಟೆಲ್‌ಗಳಲ್ಲಿ ಪ್ರತಿನಿತ್ಯ ಉಳಿಯುವ ಹತ್ತಾರು ಟನ್ ಊಟವನ್ನು ಇಂತಹ ಶ್ವಾನ ಕೇಂದ್ರಗಳಿಗೆ ಉಚಿತವಾಗಿ ಸಾಗಿಸಲು ನೂರಾರು ಸಂಸ್ಥೆಗಳು ಸ್ವಯಂಪ್ರೇರಿತವಾಗಿ ಮುಂದೆ ಬಂದಿವೆ ಎಂದು ರಮೇಶ್ ತಿಳಿಸಿದ್ದಾರೆ.

ಆದ್ದರಿಂದ, ₹10-15 ಕೋಟಿ ವೆಚ್ಚದಲ್ಲಿ ನಾಲ್ಕು ದಿಕ್ಕುಗಳಲ್ಲಿ ತಲಾ 25 ಎಕರೆ ಪ್ರದೇಶದಲ್ಲಿ “ಬೀದಿ ಶ್ವಾನಗಳ ಆರೈಕೆ ಕೇಂದ್ರ”ಗಳನ್ನು ಪ್ರಾರಂಭಿಸಿ, ಶಾಶ್ವತ ನೆಲೆ ಕಲ್ಪಿಸುವ ಮೂಲಕ ವಸತಿ ಪ್ರದೇಶಗಳಲ್ಲಿ ನಾಯಿಗಳ ಹಾವಳಿಯನ್ನು ತಪ್ಪಿಸಲು ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಎನ್.ಆರ್. ರಮೇಶ್ ಬಿಬಿಎಂಪಿ ಆಡಳಿತಕ್ಕೆ ಮನವಿ ಮಾಡಿದ್ದಾರೆ.

WhatsApp Join our WhatsApp Channel
Previous Post

ಸಿಐಡಿ ತನಿಖೆ : ವೈ.ಎಸ್. ಜಗನ್ ಮೋಹನ್ ರೆಡ್ಡಿ ವಿರುದ್ಧ ₹3,500 ಕೋಟಿ ಅಕ್ರಮ ಮದ್ಯ ಹಗರಣದ ಕಿಕ್ ಫಲಾನುಭವಿ ಆರೋಪ

Next Post

ನ್ಯಾಯಕ್ಕೆ ಸಿಕ್ಕ ಜಯ: ಬೈರತಿ ಸುರೇಶ್ – ಸುಪ್ರೀಂ ತೀರ್ಪಿನಿಂದ ವಿಪಕ್ಷಗಳಿಗೆ ತಕ್ಕ ಪಾಠ

Next Post

ನ್ಯಾಯಕ್ಕೆ ಸಿಕ್ಕ ಜಯ: ಬೈರತಿ ಸುರೇಶ್ – ಸುಪ್ರೀಂ ತೀರ್ಪಿನಿಂದ ವಿಪಕ್ಷಗಳಿಗೆ ತಕ್ಕ ಪಾಠ

ಹೆಬ್ಬಾಳ ಜಂಕ್ಷನ್ ಸಮಗ್ರ ಅಭಿವೃದ್ಧಿಗೆ ಮಹೇಶ್ವರ್ ರಾವ್ ಸೂಚನೆ: ಮಹದೇವಪುರ ವಲಯದಲ್ಲಿ ಅನಧಿಕೃತ ಮಳಿಗೆಗಳಿಗೆ ನೋಟಿಸ್

Please login to join discussion

Like Us on Facebook

Follow Us on Twitter

Recent News

Technology News | ಆಪಲ್‌: 2026-27ರಲ್ಲಿ ಬರಲಿವೆ ಮಡಚುವ ಐಫೋನ್, AI ಗ್ಲಾಸ್ ಸೇರಿ ಹಲವು ಅಚ್ಚರಿಯ ಗ್ಯಾಜೆಟ್‌ಗಳು

June 22, 2026
ಅಯೋಧ್ಯೆಯ ಶ್ರೀ ರಾಮ ಮಂದಿರದಲ್ಲಿ ಅಲಂಕಾರಭೂಷಿತನಾಗಿ ವಿರಾಜಮಾನನಾಗಿರುವ ಬಾಲರಾಮ. (ಚಿತ್ರ ಕೃಪೆ : ಶ್ರೀ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್.)

ಸಿಎಂ ಯೋಗಿ ಆದಿತ್ಯನಾಥ್ ಕೈಸೇರಿದ ಅಯೋಧ್ಯೆ ಕಳ್ಳತನ ಹಾಗೂ ನಿಧಿ ದುರ್ಬಳಕೆ ಪ್ರಕರಣದ ಪ್ರಾಥಮಿಕ ತನಿಖಾ ವರದಿ

June 22, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

Technology News | ಆಪಲ್‌: 2026-27ರಲ್ಲಿ ಬರಲಿವೆ ಮಡಚುವ ಐಫೋನ್, AI ಗ್ಲಾಸ್ ಸೇರಿ ಹಲವು ಅಚ್ಚರಿಯ ಗ್ಯಾಜೆಟ್‌ಗಳು

June 22, 2026
ಅಯೋಧ್ಯೆಯ ಶ್ರೀ ರಾಮ ಮಂದಿರದಲ್ಲಿ ಅಲಂಕಾರಭೂಷಿತನಾಗಿ ವಿರಾಜಮಾನನಾಗಿರುವ ಬಾಲರಾಮ. (ಚಿತ್ರ ಕೃಪೆ : ಶ್ರೀ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್.)

ಸಿಎಂ ಯೋಗಿ ಆದಿತ್ಯನಾಥ್ ಕೈಸೇರಿದ ಅಯೋಧ್ಯೆ ಕಳ್ಳತನ ಹಾಗೂ ನಿಧಿ ದುರ್ಬಳಕೆ ಪ್ರಕರಣದ ಪ್ರಾಥಮಿಕ ತನಿಖಾ ವರದಿ

June 22, 2026

ಬೆಂಗಳೂರು: ಯಂಟಗಾನಹಳ್ಳಿ ಕೆರೆಗೆ ವೈದ್ಯಕೀಯ ತ್ಯಾಜ್ಯ ಸುರಿದ ಖಾಸಗಿ ಕ್ಲಿನಿಕ್ ವೈದ್ಯನ ವಿರುದ್ಧ ಎಫ್.ಐ.ಆರ್. ದಾಖಲು

June 21, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group