Friday, August 7, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire
    ಕೆಎಸ್ ಆರ್ ಟಿಸಿ ಕೇಂದ್ರ ಕಚೇರಿ ಸಾಂದರ್ಭಿಕ ಚಿತ್ರ

    ಕೆಎಸ್‌ಆರ್‌ಟಿಸಿಯಿಂದ ‘ಬೆಂಗಳೂರು-ಜೋಗ ಜಲಪಾತ’ ಪ್ಯಾಕೇಜ್ ಟೂರ್ ಆ.8ರಿಂದ ಆರಂಭ: ವೇಳಾಪಟ್ಟಿ, ಪ್ರಯಾಣದರ ವಿವರ ಇಲ್ಲಿದೆ

    ಪೆಟ್ರೋಲ್ ಬಂಕ್ ಸಾಂದರ್ಭಿಕ ಚಿತ್ರ

    ವಿಮೆ ಇಲ್ಲದ ವಾಹನಗಳಿಗೆ ಪೆಟ್ರೋಲ್, ಡೀಸೆಲ್ ಇಲ್ಲ: ಸುಪ್ರೀಂ ಕೋರ್ಟ್ ಪೈಲೆಟ್ ಯೋಜನೆ ರೂಪಿಸಲು ಕೇಂದ್ರಕ್ಕೆ ಸೂಚನೆ

    Science News | ಪ್ರೊ. ಅನ್ನಪೂರ್ಣಿ ಸುಬ್ರಮಣ್ಯಂಗೆ ‘ಕಾಸ್ಪಾರ್ ವಿಕ್ರಮ್ ಸಾರಾಭಾಯ್’ ಪ್ರಶಸ್ತಿ: ಈ ಗೌರವ ಪಡೆದ ಮೊದಲ ಭಾರತೀಯ ಮಹಿಳೆ

    ರಾಜ್ಯದಲ್ಲಿ ಅತಿವೃಷ್ಟಿ ಹಾಗೂ ಬರ ಪರಿಸ್ಥಿತಿ: ಪರಿಶೀಲನೆಗೆ ಜಿಲ್ಲಾವಾರು ಸಚಿವರ ನೇಮಕ

    ಡಿ.ಕೆ. ಶಿವಕುಮಾರ್ ಸಂಪುಟ ವಿಸ್ತರಣೆ: ಇಂದು 20 ನೂತನ ಸಚಿವರ ಪ್ರಮಾಣ ವಚನ, ಇಲ್ಲಿದೆ ಎಐಸಿಸಿ ಅಧಿಕೃತ ಪಟ್ಟಿ

    ಕರುನಾಡಲ್ಲಿ ವರುಣನ ಆರ್ಭಟ: ಭರ್ತಿಯಾಗುತ್ತಿರುವ ಜಲಾಶಯಗಳು, ಮೈದುಂಬಿ ಹರಿಯುತ್ತಿರುವ ನದಿಗಳು

    BDA News | ಬಿಡಿಎ ಲಂಚಾವತಾರ: ಎನ್‌ಪಿಕೆಎಲ್ ರೈತರಿಗೆ ನಿವೇಶನ ನೀಡಲು ಲಂಚ ಕೇಳಿದ ಎಇಇ, ನೋಟಿಸ್ ಜಾರಿ

    KEA ಗ್ರಾಮ ಆಡಳಿತ ಅಧಿಕಾರಿ ಹುದ್ದೆ: ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ

    ​ಪೇಪರ್ ಲೀಕ್ ತಡೆಗೆ ಹೊಸ ಅಸ್ತ್ರ: ಸಂಸತ್ತಿನಲ್ಲಿ ಅಂಗೀಕಾರಗೊಂಡಿತು ಕಠಿಣ ವಿಧೇಯಕ

  • Bengaluru Focus

    BW EXCLUSIVE | ಉದ್ಘಾಟನೆಯಾದ ಒಂದೇ ತಿಂಗಳಿಗೆ ಕೆಂಪೇಗೌಡ ಬಡಾವಣೆ ಎಂಎಆರ್ ಫುಟ್ ಪಾತ್ ಕಳಪೆ ಕಾಮಗಾರಿ ಬಟಾಬಯಲು: ಬಿಡಿಎ ವಿರುದ್ಧ ಜನಾಕ್ರೋಶ

    80ನೇ ಸ್ವಾತಂತ್ರ್ಯ ದಿನಾಚರಣೆ: ಆಗಸ್ಟ್ 9ಕ್ಕೆ ವಿಧಾನಸೌಧದಲ್ಲಿ ಭಾರತೀಯ ವಾಯುಪಡೆ ಬ್ಯಾಂಡ್ ಸಂಭ್ರಮ

    GBA News | ​ಕೆ.ಆರ್. ಮಾರುಕಟ್ಟೆ, ವಿಕ್ಟೋರಿಯಾ ಆಸ್ಪತ್ರೆ ಬಳಿಯ ಫುಟ್‌ಪಾತ್ ಒತ್ತುವರಿ ತೆರವು: 223 ಅಕ್ರಮ ಅಂಗಡಿಗಳ ನೆಲಸಮ

    ಜ್ಞಾನಭಾರತಿ ಕ್ಯಾಂಪಸ್‌ನಲ್ಲಿ ಅಪಘಾತ: ಚಿಕಿತ್ಸೆ ಫಲಿಸದೆ ವಿವಿ ವಿದ್ಯಾರ್ಥಿನಿ ಮಾನಸ ಸಾವು

    ಸರ್ಕಾರಕ್ಕೆ 1 ಕೋಟಿ ರೂ. ಡಿವಿಡೆಂಡ್ ನೀಡಿದ ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್

    GBA News | ಶಾಂತಿನಗರ ಇಇ ಕಚೇರಿಯಲ್ಲಿ 9 ಕೋಟಿ ರೂ.ಗಳ ಕಂಪ್ಯೂಟರ್ ಬಿಲ್ ಹಗರಣ: ಲೋಕಾಯುಕ್ತಕ್ಕೆ ದೂರು

    ಗಾಂಧಿನಗರ: ‘ಬೆಂಗಳೂರು ಪೇಟೆ’ ಪ್ರದೇಶದಲ್ಲಿ ಅಗ್ನಿ ಅವಘಡ ನಿಯಂತ್ರಣಕ್ಕೆ ನಗರದ ಪ್ರಥಮ ‘ಫೈರ್ ಹೈಡ್ರೆಂಟ್’ ವ್ಯವಸ್ಥೆ ಲೋಕಾರ್ಪಣೆ

  • Public interest
  • BW Special
  • Life Style
  • Photo Gallery
  • Video
No Result
View All Result

Home Bengaluru Focus

ಕಾಲ್ನಡಿಗೆ ಮೂಲಕ ಕೋರಮಂಗಲ ಸುತ್ತಮುತ್ತ 3.5 ಕಿ.ಮೀ ನಡೆದು ಪಾದಚಾರಿ ಮಾರ್ಗ- ರಸ್ತೆ ಪರಿಶೀಲಿಸಿದ ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರ ರಾವ್

ಹಲವು ವರ್ಷಗಳಿಂದ ಬಾಕಿಯಿರುವ ಈಜೀಪುರ ಮೇಲ್ಸೇತುವೆ ಕಾಮಗಾರಿ ಪರಿಶೀಲಿಸಿ ತ್ವರಿತವಾಗಿ ಪೂರ್ಣಗೊಳಿಸಲು ಸೂಚನೆ | ಪ್ರಸ್ತುತ 762 ಸೆಗ್ಮೆಂಟ್‌ಗಳಲ್ಲಿ 416 ಸೆಗ್ಮೆಂಟ್ ಕಾಸ್ಟಿಂಗ್ ಹಾಗೂ 291 ಸೆಗ್ಮೆಂಟ್ ಜೋಡಣೆಯಾಗಿದೆ

by Bengaluru Wire Desk
May 30, 2025
in Bengaluru Focus
Reading Time: 1 min read
0

ಬೆಂಗಳೂರು, ಮೇ.30 www.bengaluruwire.com : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನೂತನ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರು ಅಧಿಕಾರ ವಹಿಸಿಕೊಂಡಾಗಿನಿಂದ ನಗರದ ಪಾದಚಾರಿ ಮಾರ್ಗಗಳ ಅಭಿವೃದ್ಧಿ ಮತ್ತು ಅಡೆತಡೆಗಳ ನಿವಾರಣೆಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಇಂದು ಕೋರಮಂಗಲ ವ್ಯಾಪ್ತಿಯಲ್ಲಿ 3.5 ಕಿ.ಮೀ.ಗಳಷ್ಟು ದೂರ ಅಧಿಕಾರಿಗಳೊಂದಿಗೆ ಪಾದಯಾತ್ರೆ ನಡೆಸಿ ಪರಿಶೀಲನೆ ನಡೆಸಿದರು. ಇದೇ ವೇಳೆ, ಈಜೀಪುರ ಮೇಲುಸೇತುವೆ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಈಜೀಪುರ ಮೇಲುಸೇತುವೆ ಕಾಮಗಾರಿ ತ್ವರಿತಗೊಳಿಸಲು ಸೂಚನೆ:

ಈಜಿಪುರ ಮೇಲ್ಸೇತುವೆ ಕಾಮಗಾರಿಯನ್ನು ವೀಕ್ಷಿಸುತ್ತಿರುವ ಪಾಲಿಕೆ ಮುಖ್ಯ ಆಯುಕ್ತ ಮಹೇಶ್ವರ ರಾವ್ (ಬಲದಿಂದ ಎಡಕ್ಕೆ ಎರಡನೆಯವರು). ಗುಣನಿಯಂತ್ರಣ ವಿಭಾಗದ ಚೀಫ್ ಇಂಜಿನಿಯರ್ ಡಾ.ರಾಘವೇಂದ್ರ (ಬಲದಿಂದ ಎಡಕ್ಕೆ ಮೂರನೆಯವರು) ಇಲ್ಲಿನ ಕಾಮಗಾರಿ ಬಗ್ಗೆ ವಿವರಿಸಿದರು.

ದಕ್ಷಿಣ ವಲಯದ ಡೈರಿ ವೃತ್ತದಿಂದ ಕಾಲ್ನಡಿಗೆ ಮೂಲಕ ಪರಿಶೀಲನೆ ನಡೆಸಿದ ಮುಖ್ಯ ಆಯುಕ್ತರು, ಈಜೀಪುರ ಮೇಲುಸೇತುವೆಯ ಪ್ರಗತಿಯನ್ನು ವೀಕ್ಷಿಸಿದರು. ಕಾಮಗಾರಿಗೆ ಅಗತ್ಯವಿರುವ ಜಾಗವನ್ನು ಭೂಸ್ವಾಧೀನಪಡಿಸಿಕೊಂಡು ತ್ವರಿತವಾಗಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಮತ್ತು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಸೆಂಟ್ ಜಾನ್ಸ್ ಬಳಿ ರಾಂಪ್‌ಗೆ ಅಗತ್ಯವಿರುವ ಭೂಸ್ವಾಧೀನ ಪ್ರಕ್ರಿಯೆಯನ್ನು ಶೀಘ್ರವೇ ಪೂರ್ಣಗೊಳಿಸಿ, ರಾಂಪ್ ಕಾಮಗಾರಿ ಕೈಗೆತ್ತಿಕೊಳ್ಳಲು ಸೂಚಿಸಿದರು.

ಗುಣನಿಯಂತ್ರಣ ವಿಭಾಗದ ಮುಖ್ಯ ಅಭಿಯಂತರರಾದ ಡಾ.ರಾಘವೇಂದ್ರ ಈ ಕುರಿತು ಮಾಹಿತಿ ನೀಡಿ, ಈಜಿಪುರ ಮೇಲ್ಸೇತುವೆಯ ಬಾಕಿ ಉಳಿದ ಕಾಮಗಾರಿಯನ್ನು ಬಿ.ಎಸ್.ಸಿ.ಪಿ.ಎಲ್ ಇನ್ಫ್ರಾಸ್ಟ್ರಕ್ಚರ್ ಲಿ. ಗುತ್ತಿಗೆದಾರರಿಂದ ನಡೆಸಲಾಗುತ್ತಿದೆ. ಪ್ರಸ್ತುತ 762 ಸೆಗ್ಮೆಂಟ್‌ಗಳಲ್ಲಿ 416 ಸೆಗ್ಮೆಂಟ್ ಕಾಸ್ಟಿಂಗ್ ಹಾಗೂ 291 ಸೆಗ್ಮೆಂಟ್ ಜೋಡಣೆ ಮಾಡಲಾಗಿದೆ ಎಂದು ವಿವರಿಸಿದರು.

ರಸ್ತೆ ಮತ್ತು ಪಾದಚಾರಿ ಮಾರ್ಗಗಳ ನಿರ್ವಹಣೆಗೆ ಆದ್ಯತೆ:

ಮೇಲ್ಸೇತುವೆಯ ಕೆಳಭಾಗದ ರಸ್ತೆಯನ್ನು ಸರಿಯಾಗಿ ನಿರ್ವಹಿಸಲು ಮತ್ತು ರಸ್ತೆಯ ಎರಡೂ ಬದಿಯ ಪಾದಚಾರಿ ಮಾರ್ಗಗಳನ್ನು ಕೂಡಲೇ ದುರಸ್ತಿಪಡಿಸಲು ಮುಖ್ಯ ಆಯುಕ್ತರು ಸೂಚನೆ ನೀಡಿದರು. ಅಲ್ಲದೆ, ಮಳೆ ನೀರು ಚರಂಡಿಗಳಿಗೆ ಸರಾಗವಾಗಿ ಹರಿದು ಹೋಗುವಂತೆ ವ್ಯವಸ್ಥೆ ಮಾಡಲು ಗುತ್ತಿಗೆದಾರರಿಗೆ ಸೂಚಿಸಿದರು.

ತ್ಯಾಜ್ಯ ನಿರ್ವಹಣೆ ಮತ್ತು ಸ್ವಚ್ಛತೆಗೆ ಒತ್ತು:

ಮಡಿವಾಳ ಬಸ್ ಪಿಕ್ ಅಪ್ ಪಾಯಿಂಟ್ ಬಳಿ ರಸ್ತೆ ಬದಿಯಲ್ಲಿ ಸಾಕಷ್ಟು ತ್ಯಾಜ್ಯ ಬಿಸಾಡಿರುವುದನ್ನು ಗಮನಿಸಿದ ಮಹೇಶ್ವರ್ ರಾವ್, ಈ ಪ್ರದೇಶದಲ್ಲಿ ಕಾರ್ಯನಿರ್ವಹಿಸುವ ಪೌರಕಾರ್ಮಿಕರು ಪ್ರತಿದಿನ ಬೆಳಿಗ್ಗೆ 6 ಗಂಟೆಗೆ ಬಂದು ಸ್ವಚ್ಛತಾ ಕಾರ್ಯ ಕೈಗೊಳ್ಳುವಂತೆ ನಿರ್ದೇಶನ ನೀಡಿದರು. ಹೆಚ್ಚು ಜನ ಸಂಚರಿಸುವ ಸ್ಥಳವಾದ್ದರಿಂದ ಸದಾ ಸ್ವಚ್ಛತೆ ಕಾಪಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ತಿಳಿಸಿದರು.

ಜಂಕ್ಷನ್ ಅಭಿವೃದ್ಧಿಗೆ ಸೂಚನೆ:

ಮಡಿವಾಳ ಕೆಳಸೇತುವೆಯ ಮೇಲ್ಭಾಗದಲ್ಲಿರುವ ಜಂಕ್ಷನ್ ಬಳಿ ಪಾದಚಾರಿ ಮಾರ್ಗಗಳು, ರಸ್ತೆ ಅಭಿವೃದ್ಧಿ ಸೇರಿದಂತೆ ಜಂಕ್ಷನ್‌ನ ಸಮಗ್ರ ಅಭಿವೃದ್ಧಿ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಂಕ್ಷನ್‌ನಲ್ಲಿರುವ ಪೊಲೀಸ್ ಚೌಕಿಯಿಂದ ಪಾದಚಾರಿಗಳ ಓಡಾಟಕ್ಕೆ ಸಮಸ್ಯೆಯಾಗುತ್ತಿರುವುದನ್ನು ಸರಿಪಡಿಸುವಂತೆ ತಿಳಿಸಿದರು.

3.5 ಕಿ.ಮೀ ಪಾದಯಾತ್ರೆ ಮೂಲಕ ಪರಿಶೀಲನೆ:

ಡೈರಿ ಸರ್ಕಲ್ ಬಳಿಯಿರುವ ಕ್ರೈಸ್ಟ್ ಕಾಲೇಜು ಬಳಿಯಿಂದ ಸೆಂಟ್ ಜಾನ್ಸ್ ಕಾಲೇಜು ಜಂಕ್ಷನ್, ಮಡಿವಾಳ ಕೆಳಸೇತುವೆ, ಕೋರಮಂಗಲ 100 ಅಡಿ ರಸ್ತೆ, ಕೇಂದ್ರೀಯ ಸದನ, ಈಜೀಪುರ ಮೇಲ್ಸೇತುವೆ ರಸ್ತೆ, ಸೋನಿ ಜಂಕ್ಷನ್ ವರೆಗೆ ಸುಮಾರು 3.5 ಕಿ.ಮೀ ನಡಿಗೆ ಮೂಲಕ ರಸ್ತೆ ಮತ್ತು ಪಾದಚಾರಿ ಮಾರ್ಗಗಳನ್ನು ಪರಿಶೀಲನೆ ನಡೆಸಿದರು. ಉತ್ತಮ ರಸ್ತೆಗಳ ನಿರ್ಮಾಣದ ಜೊತೆಗೆ ಪಾದಚಾರಿ ಮಾರ್ಗಗಳನ್ನು ಸಮರ್ಪಕವಾಗಿ ನಿರ್ವಹಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಈ ಸಂದರ್ಭದಲ್ಲಿ ವಲಯ ಆಯುಕ್ತರಾದ ದಿಗ್ಜಯ್ ಬೋಡ್ಕೆ, ಮುಖ್ಯ ಅಭಿಯಂತರರಾದ ಡಾ. ರಾಘವೇಂದ್ರ ಪ್ರಸಾದ್, ರಾಜೇಶ್, ಕಾರ್ಯಪಾಲಕ ಅಭಿಯಂತರರು ಸೇರಿದಂತೆ ಇನ್ನಿತರ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.

WhatsApp Join our WhatsApp Channel
Previous Post

BW EXCLUSIVE | ಬೆಂಗಳೂರು ಮಾಸ್ಟರ್ ಪ್ಲಾನ್ ತಿದ್ದುಪಡಿ -2025 ಅಧಿಸೂಚನೆ : ಹೊಸದಾಗಿ ಕಟ್ಟಡ ನಿರ್ಮಿಸುವ ಸಾರ್ವಜನಿಕರಿಗೆ ಲಾಭವೇ? ನಷ್ಟವೇ?

Next Post

ಮಣಿವಣ್ಣನ್ ಅವರಿಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರ ಹೆಚ್ಚುವರಿ ಜವಾಬ್ದಾರಿ

Next Post

ಮಣಿವಣ್ಣನ್ ಅವರಿಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರ ಹೆಚ್ಚುವರಿ ಜವಾಬ್ದಾರಿ

ಬಿಬಿಎಂಪಿಯ ಆಟೋ ಟಿಪ್ರರ್ ನಿಂದ ಕಾಂಪ್ಯಾಕ್ಟರ್ ಗೆ ಘನತ್ಯಾಜ್ಯ ವರ್ಗಾವಣೆ ಮಾಡುತ್ತಿರುವ ಸಾಂದರ್ಭಿಕ ಚಿತ್ರ

BBMP News | ಕಸ ವಿಲೇವಾರಿಗೆ ಬಿಬಿಎಂಪಿ ಮಹತ್ವದ ಹೆಜ್ಜೆ: 7 ವರ್ಷಗಳ ಗುತ್ತಿಗೆಗೆ ₹4500 ಕೋಟಿ ಟೆಂಡರ್ ಆಹ್ವಾನ

Please login to join discussion

Like Us on Facebook

Follow Us on Twitter

Recent News

BW EXCLUSIVE | ಉದ್ಘಾಟನೆಯಾದ ಒಂದೇ ತಿಂಗಳಿಗೆ ಕೆಂಪೇಗೌಡ ಬಡಾವಣೆ ಎಂಎಆರ್ ಫುಟ್ ಪಾತ್ ಕಳಪೆ ಕಾಮಗಾರಿ ಬಟಾಬಯಲು: ಬಿಡಿಎ ವಿರುದ್ಧ ಜನಾಕ್ರೋಶ

August 6, 2026

GI Tag | ಭಾರತದಲ್ಲಿ ಜಿಐ ಟ್ಯಾಗ್‌ ಕ್ರಾಂತಿ: ಪಟ್ಟಿಯಲ್ಲಿ ಕರ್ನಾಟಕಕ್ಕೆ 4ನೇ ಸ್ಥಾನ, ಚನ್ನಪಟ್ಟಣ ಬೊಂಬೆ ಸೇರಿ 49 ಉತ್ಪನ್ನಗಳಿಗೆ ಜಾಗತಿಕ ಮಾನ್ಯತೆ

August 6, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

BW EXCLUSIVE | ಉದ್ಘಾಟನೆಯಾದ ಒಂದೇ ತಿಂಗಳಿಗೆ ಕೆಂಪೇಗೌಡ ಬಡಾವಣೆ ಎಂಎಆರ್ ಫುಟ್ ಪಾತ್ ಕಳಪೆ ಕಾಮಗಾರಿ ಬಟಾಬಯಲು: ಬಿಡಿಎ ವಿರುದ್ಧ ಜನಾಕ್ರೋಶ

August 6, 2026

GI Tag | ಭಾರತದಲ್ಲಿ ಜಿಐ ಟ್ಯಾಗ್‌ ಕ್ರಾಂತಿ: ಪಟ್ಟಿಯಲ್ಲಿ ಕರ್ನಾಟಕಕ್ಕೆ 4ನೇ ಸ್ಥಾನ, ಚನ್ನಪಟ್ಟಣ ಬೊಂಬೆ ಸೇರಿ 49 ಉತ್ಪನ್ನಗಳಿಗೆ ಜಾಗತಿಕ ಮಾನ್ಯತೆ

August 6, 2026

80ನೇ ಸ್ವಾತಂತ್ರ್ಯ ದಿನಾಚರಣೆ: ಆಗಸ್ಟ್ 9ಕ್ಕೆ ವಿಧಾನಸೌಧದಲ್ಲಿ ಭಾರತೀಯ ವಾಯುಪಡೆ ಬ್ಯಾಂಡ್ ಸಂಭ್ರಮ

August 6, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group