Saturday, April 25, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ಸರ್ಕಾರಿ ಆಸ್ಪತ್ರೆಗಳಲ್ಲಿ ಮೊಣಕಾಲು ಮತ್ತು ಸೊಂಟದ ಕೀಲು ಬದಲಿ ಶಸ್ತ್ರಚಿಕಿತ್ಸೆಗಳಿಗೆ ಬಲ: ರೋಗಿಗಳಿಗೆ ಮನೆಬಾಗಿಲಲ್ಲೇ ಗುಣಮಟ್ಟದ ಚಿಕಿತ್ಸೆ

    ಎಸ್‌ಎಸ್‌ಎಲ್‌ಸಿ ಫಲಿತಾಂಶ 2026: ಇತಿಹಾಸದಲ್ಲೇ ಮೊದಲು! 94.10% ರಷ್ಟು ಅಭೂತಪೂರ್ವ ಫಲಿತಾಂಶ; ಬಾಲಕಿಯರದ್ದೇ ಮೇಲುಗೈ

    KSIC News | ಮೈಸೂರು ರೇಷ್ಮೆ ಪರಂಪರೆಗೆ ಮಹಾ ಜಯ: ಕೆಎಸ್‌ಐಸಿ ಭೂಮಿ ಹಸ್ತಾಂತರ ಆದೇಶ ರದ್ದು

    IMPORTANT NEWS | ಭೂಪರಿವರ್ತನೆ ಇನ್ನು ಸುಲಭ: 30 ದಿನಗಳಲ್ಲಿ ವಿಲೇವಾರಿಯಾಗದಿದ್ದರೆ ‘ಪರಿಭಾವಿತ ಭೂಪರಿವರ್ತನೆ’  ಭಾಗ್ಯ

    Vidhana Soudha

    RDPR NEWS | ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಗ್ರಾಮೀಣ ಭಾಗದ ಶೈಕ್ಷಣಿಕ ಕಾರ್ಯಗಳಿಗೆ‌ 501 ಕೋಟಿ ರೂ. ಅನುದಾನ ಬಿಡುಗಡೆ

    ಸಂಭ್ರಮದ ಪಾರ್ಟಿಯಲ್ಲಿ ದುರಂತ: ಗಂಟಲಲ್ಲಿ ಚಿಕನ್ ಮೂಳೆ ಸಿಲುಕಿ ಯುವಕ ಸಾವು

    Wildlife News | ಬನ್ನೇರುಘಟ್ಟಕ್ಕೆ ದಕ್ಷಿಣ ಆಫ್ರಿಕಾದ ‘ಸಿವಂಗಿ’ಗಳು (ಚೀತಾ) ಆಗಮನ; ಚಾರಣಿಗರ ಸುರಕ್ಷತೆಗೆ ಹೊಸ ಕಠಿಣ ‘SOP’ ಬಿಡುಗಡೆ

    ಹೆಸರಘಟ್ಟದ ಮತ್ಕೂರು ಗ್ರಾಮದ ಕೋಳಿ ಸಾಕಾಣಿಕೆ ತರಬೇತಿ ಕೇಂದ್ರದಲ್ಲಿ ಎಚ್5ಎನ್1 ಹಕ್ಕಿಜ್ವರ ಭೀತಿ ಹಿನ್ನಲೆಯಲ್ಲಿ ಪಶುಪಾಲನೆ ಇಲಾಖೆ ನೇತೃತ್ವದಲ್ಲಿ ವೈಜ್ಞಾನಿಕವಾಗಿ ವಿಲೇವಾರಿ ಮಾಡಿದ್ದಾರೆ.

    ಬೆಂಗಳೂರಿನಲ್ಲಿ ಹಕ್ಕಿಜ್ವರ ಭೀತಿ: 7400ಕ್ಕೂ ಅಧಿಕ ಕೋಳಿಗಳ ಹನನ; ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದ ಆರೋಗ್ಯ ಸಚಿವ

    ಲೋಕಾಯುಕ್ತ ಕಚೇರಿಯ ಸಾಂದರ್ಭಿಕ ಚಿತ್ರ

    Karnataka Lokayukta | ಕರ್ನಾಟಕ ಲೋಕಾಯುಕ್ತಕ್ಕೆ 40ರ ಸಂಭ್ರಮ: ಏಪ್ರಿಲ್ 18ರಂದು ಸಾರ್ಥಕ ಪಯಣದ ಕಾರ್ಯಕ್ರಮ

  • Bengaluru Focus

    ಬೆಂಗಳೂರಿನ ಅಭಿವೃದ್ಧಿಗೆ ‘Airport’ ಅಡ್ಡಿ: ಕಟ್ಟಡಗಳ ಎತ್ತರ ನಿರ್ಬಂಧ ಸಡಿಲಿಕೆಗೆ ರಾಜನಾಥ್ ಸಿಂಗ್‌ಗೆ ಡಿ.ಕೆ. ಶಿವಕುಮಾರ್ ಮನವಿ

    GBA News | ಪಶ್ಚಿಮ ಬೆಂಗಳೂರಿಗರಿಗೆ ಸಿಹಿ ಸುದ್ದಿ: ಗೋವಿಂದರಾಜನಗರದಲ್ಲಿ ಶೀಘ್ರವೇ 100 ಹಾಸಿಗೆಗಳ ‘ಜಯದೇವ’ ಘಟಕ ಉದ್ಘಾಟನೆ

    ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ‘ಜನಿವಾರ’ ವಿವಾದ: ವಿದ್ಯಾರ್ಥಿಗಳ ಧಾರ್ಮಿಕ ಹಕ್ಕಿಗೆ ಚ್ಯುತಿ? ಮೂವರು ಸಸ್ಪೆಂಡ್!!

     ‘ಅಣ್ಣಾವ್ರ’ 97ನೇ ಜನ್ಮದಿನೋತ್ಸವ: ದೊಡ್ಮನೆ ಕುಟುಂಬ ಹಾಗೂ ಅಭಿಮಾನಿಗಳಿಂದ ಭಕ್ತಿಯ ನಮನ

    ಎಸ್‌ಎಸ್‌ಎಲ್‌ಸಿ ಫಲಿತಾಂಶ 2026: ಇತಿಹಾಸದಲ್ಲೇ ಮೊದಲು! 94.10% ರಷ್ಟು ಅಭೂತಪೂರ್ವ ಫಲಿತಾಂಶ; ಬಾಲಕಿಯರದ್ದೇ ಮೇಲುಗೈ

    ಕಾಲೇಜು ಕ್ಯಾಂಪಸ್‌ಗಳಲ್ಲಿ ಮತ್ತೆ ಚುನಾವಣಾ ರಂಗು: ವಿದ್ಯಾರ್ಥಿ ಸಂಘಗಳ ಚುನಾವಣೆ ನಡೆಸಲು ಸರ್ಕಾರ ಮುಂದು

    GBA News | ಇಬ್ಲೂರು ಜಂಕ್ಷನ್ ಸಂಚಾರ ದಟ್ಟಣೆಗೆ ಮುಕ್ತಿ: ಹೆಚ್ಚುವರಿ ಮೇಲ್ಸೇತುವೆ ನಿರ್ಮಾಣಕ್ಕೆ ಜಿಬಿಎ ಮುಂದು

    BWSSB News | ತ್ಯಾಜ್ಯವೇ ಈಗ ಜಲಮಂಡಳಿಯ ‘ಚಿನ್ನ’: ಬೆಂಗಳೂರಿನಲ್ಲಿ ಕೊಳಚೆ ನೀರಿನಿಂದ ದೇಶದಲ್ಲೇ ದೊಡ್ಡ ಪ್ರಮಾಣದಲ್ಲಿ ಬಯೋ-ಗ್ಯಾಸ್ ಉತ್ಪಾದನೆ

    ಬಿಟ್‌ಕಾಯಿನ್ ಹಗರಣದ ಕಿಚ್ಚು: ಶಾಸಕ ಎನ್.ಎ. ಹ್ಯಾರಿಸ್ ಮತ್ತು ಪುತ್ರರ ನಿವಾಸದ ಮೇಲೆ ಇಡಿ ದಾಳಿ, ಪರಿಶೀಲನೆ

  • Public interest
  • BW Special
  • Life Style
  • Photo Gallery
  • Video
No Result
View All Result

Home Life Style

ಓಲಾ, ಊಬರ್, ಸ್ವಿಗ್ಗಿಯಂತಹ ಅಸಂಘಟಿತ ವಲಯದ ಲಕ್ಷಾಂತರ ಕಾರ್ಮಿಕರ ರಕ್ಷಣೆಗೆ ರಾಜ್ಯ ಸರ್ಕಾರದಿಂದ ಹೊಸ ಕಾನೂನು ಜಾರಿ

ಗಿಗ್ ಕಾರ್ಮಿಕರ ಕಾರ್ಮಿಕರ ಸಾಮಾಜಿಕ ಭದ್ರತೆ, ಪಿಂಚಣಿ, ಆರೋಗ್ಯ, ವಿಮೆ, ಸುರಕ್ಷತೆ ಮತ್ತು ಕ್ಷೇಮಾಭಿವೃದ್ಧಿಗೆ ಸುಗ್ರೀವಾಜ್ಞೆ ಮೂಲಕ ಬೃಹತ್ ಹೆಜ್ಜೆ

by Bengaluru Wire Desk
May 28, 2025
in Life Style, Public interest
Reading Time: 1 min read
0

ಬೆಂಗಳೂರು, ಮೇ.28 www.bengaluruwire.com : ಓಲಾ, ಊಬರ್ ಸ್ವಿಗ್ಗಿಯಂತಹ ಅಸಂಘಟಿತ ವಲಯದ ಲಕ್ಷಾಂತರ ಅಸಂಘಟಿತ ಕಾರ್ಮಿಕರ ಅನುಕೂಲಕ್ಕಾಗಿ ರಾಜ್ಯ ಸರ್ಕಾರ ‘ಕರ್ನಾಟಕ ವೇದಿಕೆ ಆಧಾರಿತ ಗಿಗ್ ಕಾರ್ಮಿಕರ (ಸಾಮಾಜಿಕ ಭದ್ರತೆ ಮತ್ತು ಕ್ಷೇಮಾಭಿವೃದ್ಧಿ) ಸುಗ್ರೀವಾಜ್ಞೆ-2025’ ಅನ್ನು ಜಾರಿಗೆ ತಂದಿದೆ.

ರಾಜ್ಯದಲ್ಲಿ ಗಿಗ್ ಕಾರ್ಮಿಕರಾಗಿ ದುಡಿಯುತ್ತಿರುವ ಲಕ್ಷಾಂತರ ವೇದಿಕೆ ಆಧಾರಿತ ಗಿಗ್ ಕಾರ್ಮಿಕರ ಹಕ್ಕುಗಳ ರಕ್ಷಣೆ, ಸಾಮಾಜಿಕ ಭದ್ರತೆ, ಆರೋಗ್ಯ, ಸುರಕ್ಷತೆ, ಕಾರ್ಮಿಕರ ಕೌಶಲಾಭಿವೃದ್ಧಿ, ಅಂತ್ಯ ಸಂಸ್ಕಾರ ಧನ ಸಹಾಯ ನೀಡಲು ಅಗ್ರಿಗೇಟರ್ ಗಳು ಮಡೆಸುವ ಪ್ರತಿ ವಹಿವಾಟಿನ ಮೇಲೆ ಶೇ.1ರಿಂದ ಶೇ.2ರಷ್ಟು ಮೀರದಂತೆ ಕ್ಷೇಮಾಭಿವೃದ್ಧಿ ಶುಲ್ಕ ಸಂಗ್ರಹಿಸಲು ಸರ್ಕಾರದ ಈ ಸುಗ್ರೀವಾಜ್ಞೆಯು ಅವಕಾಶ ಕಲ್ಪಿಸಲಿದೆ. ಇದು ರಾಜ್ಯದ ಲಕ್ಷಾಂತರ ಗಿಗ್ ಕಾರ್ಮಿಕರಿಗೆ ಹೊಸ ಆಶಾಕಿರಣ ಮೂಡಿಸಿದೆ.

ಏನಿದು ಗಿಗ್ ಕಾರ್ಮಿಕರು? :

ಇಂದಿನ ಡಿಜಿಟಲ್ ಯುಗದಲ್ಲಿ, “ಗಿಗ್ ಕಾರ್ಮಿಕರು” ಎಂಬುದು ಹೊಸ ಪರಿಭಾಷೆಯಾಗಿದ್ದು, ಇವರು ಸಾಂಪ್ರದಾಯಿಕ ಉದ್ಯೋಗ ಸಂಬಂಧಗಳ ಹೊರತಾಗಿ, ಡಿಜಿಟಲ್ ವೇದಿಕೆಗಳ ಮೂಲಕ ಅಲ್ಪಾವಧಿ ಅಥವಾ ನಿರ್ದಿಷ್ಟ ಕಾರ್ಯಗಳ ಆಧಾರದ ಮೇಲೆ ಕೆಲಸ ಮಾಡುವವರನ್ನು ಸೂಚಿಸುತ್ತದೆ. ಇವರಿಗೆ ಸಾಮಾನ್ಯವಾಗಿ ಯಾವುದೇ ನಿರ್ದಿಷ್ಟ ಮಾಲೀಕರೇ ಇರುವುದಿಲ್ಲ. ಬದಲಿಗೆ ಬೇಡಿಕೆಯ ಆಧಾರದ ಮೇಲೆ ಸೇವೆಗಳನ್ನು ಒದಗಿಸುತ್ತಾರೆ.

ಉದಾಹರಣೆಗೆ:

 * ಓಲಾ, ಊಬರ್ ಚಾಲಕರು: ಇವರು ತಮ್ಮ ವಾಹನಗಳನ್ನು ಬಳಸಿ ಸವಾರರನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ತಲುಪಿಸುತ್ತಾರೆ. ಇವರು ಕಂಪನಿಯ ನೇರ ಉದ್ಯೋಗಿಗಳಲ್ಲ, ಬದಲಿಗೆ ಆ್ಯಪ್ ಆಧಾರಿತ ವೇದಿಕೆಯ ಮೂಲಕ ಸೇವೆ ಒದಗಿಸುತ್ತಾರೆ.

 * ಸ್ವಿಗ್ಗಿ, ಜೊಮಾಟೊ ಡೆಲಿವರಿ ಏಜೆಂಟ್‌ಗಳು: ಇವರು ಗ್ರಾಹಕರಿಗೆ ಆಹಾರ ಮತ್ತು ದಿನಸಿ ವಸ್ತುಗಳನ್ನು ತಲುಪಿಸುವ ಕಾರ್ಯ ಮಾಡುತ್ತಾರೆ. ಇವರೂ ಸಹ ವೇದಿಕೆಯ ಮೂಲಕವೇ ಕಾರ್ಯನಿರ್ವಹಿಸುತ್ತಾರೆ.

 * ಅರ್ಬನ್ ಕಂಪನಿ ಸೇವಾ ತಂತ್ರಜ್ಞರು: ಮನೆಗೆ ಬಂದು ರಿಪೇರಿ ಕೆಲಸ ಮಾಡುವವರು, ಸೌಂದರ್ಯ ತಜ್ಞರು ಮುಂತಾದವರು ಸಹ ಗಿಗ್ ಕಾರ್ಮಿಕರ ವ್ಯಾಪ್ತಿಗೆ ಬರುತ್ತಾರೆ.

ಈ ಕಾರ್ಮಿಕರಿಗೆ ಸಾಂಪ್ರದಾಯಿಕ ಉದ್ಯೋಗದಂತೆ ನಿಗದಿತ ಸಂಬಳ, ವಿಮೆ, ಪಿಂಚಣಿ ಅಥವಾ ಇತರ ಸಾಮಾಜಿಕ ಭದ್ರತಾ ಸೌಲಭ್ಯಗಳು ಇರುವುದಿಲ್ಲ. ಈ ಕೊರತೆಯನ್ನು ನೀಗಿಸಲು ರಾಜ್ಯ ಸರ್ಕಾರ ಈ ಮಹತ್ವದ ಸುಗ್ರೀವಾಜ್ಞೆಯನ್ನು ಅನುಷ್ಠಾನಕ್ಕೆ ತಂದಿದೆ.

ಸುಗ್ರೀವಾಜ್ಞೆಯ ಪ್ರಮುಖ ಅಂಶಗಳು:

ಈ ಸುಗ್ರೀವಾಜ್ಞೆಯು ಗಿಗ್ ಕಾರ್ಮಿಕರ ಹಕ್ಕುಗಳ ರಕ್ಷಣೆ, ಅವರ ಸಾಮಾಜಿಕ ಭದ್ರತೆ ಮತ್ತು ಕ್ಷೇಮಾಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳಲು ಹಲವು ಕ್ರಮಗಳನ್ನು ಒಳಗೊಂಡಿದೆ. ಇದು ಆರೋಗ್ಯ, ಸುರಕ್ಷತೆ, ಪಿಂಚಣಿ, ಭವಿಷ್ಯ ನಿಧಿ ಮತ್ತು ಇತರ ಸೌಲಭ್ಯಗಳನ್ನು ಒದಗಿಸಲು ಕಾನೂನು ಚೌಕಟ್ಟನ್ನು ಸೃಷ್ಟಿಸುತ್ತದೆ. ಗಿಗ್ ಕೆಲಸವನ್ನು ಒದಗಿಸುವ ವೇದಿಕೆಗಳು (ಅಗ್ರಿಬೇಟರ್‌ಗಳು) ಕಾರ್ಮಿಕರ ಕಲ್ಯಾಣಕ್ಕಾಗಿ ನಿಧಿ ಸಂಗ್ರಹಿಸಲು ಮತ್ತು ಸೌಲಭ್ಯಗಳನ್ನು ಒದಗಿಸಲು ಜವಾಬ್ದಾರರಾಗಿರುತ್ತಾರೆ.

ಈ ಹೊಸ ಕಾನೂನು, ಅಸಂಘಟಿತ ವಲಯದಲ್ಲಿ ದುಡಿಯುವ ಲಕ್ಷಾಂತರ ಗಿಗ್ ಕಾರ್ಮಿಕರಿಗೆ ನೆಮ್ಮದಿ ನೀಡುವ ನಿರೀಕ್ಷೆಯಿದೆ. ರಾಜ್ಯ ಸರ್ಕಾರವು ಕಾರ್ಮಿಕರ ಕಲ್ಯಾಣಕ್ಕೆ ಬದ್ಧವಾಗಿದೆ ಎಂಬುದನ್ನು ಈ ಕ್ರಮವು ತೋರಿಸುತ್ತದೆ ಎಂದು ಕಾರ್ಮಿಕ ಸಂಘಟನೆಗಳು ಇದನ್ನು ಸ್ವಾಗತಿಸಿವೆ. ಮುಂಬರುವ ದಿನಗಳಲ್ಲಿ ಈ ಸುಗ್ರೀವಾಜ್ಞೆಯನ್ನು ಕಾಯಿದೆಯಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ.

WhatsApp Join our WhatsApp Channel
Previous Post

ಡಿಜಿಟಲ್ ವೈಯುಕ್ತಿಕ ದತ್ತಾಂಶ ಸಂರಕ್ಷಣಾ ಕಾಯಿದೆ ರದ್ದುಪಡಿಸಲು ಕೇಂದ್ರಕ್ಕೆ ಕೆಯುಡಬ್ಲ್ಯೂಜೆ ಒತ್ತಾಯ

Next Post

ಅಮೆರಿಕಕ್ಕೆ ವಿದೇಶಿ ವಿದ್ಯಾರ್ಥಿಗಳ ಪ್ರವೇಶಕ್ಕೆ ಡೊನಾಲ್ಡ್ ಟ್ರಂಪ್ ಅಡ್ಡಿ: ವೀಸಾ ಸಂದರ್ಶನ ಅಮಾನತು

Next Post

ಅಮೆರಿಕಕ್ಕೆ ವಿದೇಶಿ ವಿದ್ಯಾರ್ಥಿಗಳ ಪ್ರವೇಶಕ್ಕೆ ಡೊನಾಲ್ಡ್ ಟ್ರಂಪ್ ಅಡ್ಡಿ: ವೀಸಾ ಸಂದರ್ಶನ ಅಮಾನತು

ರಾಜ್ಯದಲ್ಲಿ ₹15,441.17 ಕೋಟಿ ಬಂಡವಾಳ ಹೂಡಿಕೆಗೆ ಉನ್ನತಾಧಿಕಾರ ಸಮಿತಿ ಒಪ್ಪಿಗೆ

Please login to join discussion

Like Us on Facebook

Follow Us on Twitter

Recent News

ಬೆಂಗಳೂರಿನ ಅಭಿವೃದ್ಧಿಗೆ ‘Airport’ ಅಡ್ಡಿ: ಕಟ್ಟಡಗಳ ಎತ್ತರ ನಿರ್ಬಂಧ ಸಡಿಲಿಕೆಗೆ ರಾಜನಾಥ್ ಸಿಂಗ್‌ಗೆ ಡಿ.ಕೆ. ಶಿವಕುಮಾರ್ ಮನವಿ

April 24, 2026

GBA News | ಪಶ್ಚಿಮ ಬೆಂಗಳೂರಿಗರಿಗೆ ಸಿಹಿ ಸುದ್ದಿ: ಗೋವಿಂದರಾಜನಗರದಲ್ಲಿ ಶೀಘ್ರವೇ 100 ಹಾಸಿಗೆಗಳ ‘ಜಯದೇವ’ ಘಟಕ ಉದ್ಘಾಟನೆ

April 24, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

ಬೆಂಗಳೂರಿನ ಅಭಿವೃದ್ಧಿಗೆ ‘Airport’ ಅಡ್ಡಿ: ಕಟ್ಟಡಗಳ ಎತ್ತರ ನಿರ್ಬಂಧ ಸಡಿಲಿಕೆಗೆ ರಾಜನಾಥ್ ಸಿಂಗ್‌ಗೆ ಡಿ.ಕೆ. ಶಿವಕುಮಾರ್ ಮನವಿ

April 24, 2026

GBA News | ಪಶ್ಚಿಮ ಬೆಂಗಳೂರಿಗರಿಗೆ ಸಿಹಿ ಸುದ್ದಿ: ಗೋವಿಂದರಾಜನಗರದಲ್ಲಿ ಶೀಘ್ರವೇ 100 ಹಾಸಿಗೆಗಳ ‘ಜಯದೇವ’ ಘಟಕ ಉದ್ಘಾಟನೆ

April 24, 2026

ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ‘ಜನಿವಾರ’ ವಿವಾದ: ವಿದ್ಯಾರ್ಥಿಗಳ ಧಾರ್ಮಿಕ ಹಕ್ಕಿಗೆ ಚ್ಯುತಿ? ಮೂವರು ಸಸ್ಪೆಂಡ್!!

April 24, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group