Saturday, May 16, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ​ಮೇ 26 ಕ್ಕೆ ಕೇರಳಕ್ಕೆ ಮುಂಗಾರು ಪ್ರವೇಶ: ಹವಾಮಾನ ಇಲಾಖೆ ಮುನ್ಸೂಚನೆ

    ಇಂದಿನಿಂದ ಪೆಟ್ರೋಲ್, ಡೀಸೆಲ್ ದರ ಲೀಟರ್‌ಗೆ 3 ರೂಪಾಯಿ ಏರಿಕೆ: ವಾಹನ ಸವಾರರ ಜೇಬಿಗೆ ಕತ್ತರಿ

    ಶಾಲೆ-ಕಾಲೇಜುಗಳಲ್ಲಿ ಹಿಜಾಬ್, ಜನಿವಾರಕ್ಕೆ ಮನ್ನಣೆ: 2022ರ ವಿವಾದಿತ ವಸ್ತ್ರಸಂಹಿತೆ ಆದೇಶ ವಾಪಸ್ ಪಡೆದ ರಾಜ್ಯ ಸರ್ಕಾರ

    BIG Breaking | ಬೆಂಗಳೂರಿನಲ್ಲಿ ₹2,384 ಕೋಟಿ ಮೊತ್ತದ ಬೃಹತ್ ಜಿಎಸ್‌ಟಿ ವಂಚನೆ ಪತ್ತೆ: ಇಬ್ಬರ ಬಂಧನ

    Transport News | ಸಾರಿಗೆ ನೌಕರರಿಗೆ ಸರ್ಕಾರದ ಕೊಡುಗೆ: ಶೇ. 12.5 ರಷ್ಟು ವೇತನ ಹೆಚ್ಚಳಕ್ಕೆ ಅಧಿಕೃತ ಆದೇಶ

    Gold Rate | ಚಿನ್ನ-ಬೆಳ್ಳಿ ಬೆಲೆ ಏರಿಕೆ ಬಿಸಿ: ಆಮದು ಸುಂಕ ಭರ್ಜರಿ ಶೇ. 15ಕ್ಕೆ ಹೆಚ್ಚಳ: ಇಂದಿನಿಂದಲೇ ಜಾರಿ

    NEET UG 2026 | ನೀಟ್ ಯುಜಿ 2026 ಪರೀಕ್ಷೆ ರದ್ದು: ಪೇಪರ್ ಲೀಕ್ ಬೆನ್ನಲ್ಲೇ ಕೇಂದ್ರ ಸರ್ಕಾರದಿಂದ ಕಠಿಣ ನಿರ್ಧಾರ

    ಬಡವರ ‘ಬಾಟಲಿ’ಗೆ ಬರೆ: ರಾಜ್ಯದಲ್ಲಿ ಮದ್ಯದ ದರ ಭಾರೀ ಏರಿಕೆ

    ​ಚಿಲ್ಲರೆ ಬಂಕ್‌ಗಳಲ್ಲಿ ಡೀಸೆಲ್‌ಗೆ ಮುಗಿಬಿದ್ದ ಕೈಗಾರಿಕೋದ್ಯಮಿಗಳು: ಪೂರೈಕೆಯಲ್ಲಿ ವ್ಯತ್ಯಯ, ಪ್ರಧಾನಿಗೆ ದೂರು

  • Bengaluru Focus

    GBA News | ಬೆಂಗಳೂರು: ನಾಗರಿಕರ ಅಹವಾಲುಗಳಿಗೆ ತಕ್ಷಣ ಸ್ಪಂದಿಸಿ: ಅಧಿಕಾರಿಗಳಿಗೆ ಆಯುಕ್ತ ಪೊಮ್ಮಲ ಸುನೀಲ್ ಕುಮಾರ್ ಖಡಕ್ ಸೂಚನೆ

    ಇಂದಿನಿಂದ ಪೆಟ್ರೋಲ್, ಡೀಸೆಲ್ ದರ ಲೀಟರ್‌ಗೆ 3 ರೂಪಾಯಿ ಏರಿಕೆ: ವಾಹನ ಸವಾರರ ಜೇಬಿಗೆ ಕತ್ತರಿ

    ಬನಶಂಕರಿ ಬಿಡಿಎ ವಾಣಿಜ್ಯ ನಿವೇಶನ ವಿವಾದ: 26 ವರ್ಷಗಳ ನಂತರ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

    BIG Breaking | ಬೆಂಗಳೂರಿನಲ್ಲಿ ₹2,384 ಕೋಟಿ ಮೊತ್ತದ ಬೃಹತ್ ಜಿಎಸ್‌ಟಿ ವಂಚನೆ ಪತ್ತೆ: ಇಬ್ಬರ ಬಂಧನ

    GBA Head Office Image

    ಬೆಂಗಳೂರಿನ 7 ಲಕ್ಷ ‘ಬಿ’ ಖಾತೆ ಆಸ್ತಿ ಮಾಲೀಕರೇ ಗಮನಿಸಿ: ಬಿ-ಖಾತಾದಿಂದ ಎ-ಖಾತಾಗೆ ಬದಲಾಯಿಸಲು ಶೇ.60ರಷ್ಟು ರಿಯಾಯಿತಿ

    Transport News | ಸಾರಿಗೆ ನೌಕರರಿಗೆ ಸರ್ಕಾರದ ಕೊಡುಗೆ: ಶೇ. 12.5 ರಷ್ಟು ವೇತನ ಹೆಚ್ಚಳಕ್ಕೆ ಅಧಿಕೃತ ಆದೇಶ

    ಬಡವರ ‘ಬಾಟಲಿ’ಗೆ ಬರೆ: ರಾಜ್ಯದಲ್ಲಿ ಮದ್ಯದ ದರ ಭಾರೀ ಏರಿಕೆ

    ಬೆಂಗಳೂರು: ಅಪಾಯಕಾರಿ ಕಟ್ಟಡಗಳ ತೆರವಿಗೆ ಕೇಂದ್ರ ನಗರ ಪಾಲಿಕೆ ಆಯುಕ್ತ ರಾಜೇಂದ್ರ ಚೋಳನ್ ಕಟ್ಟುನಿಟ್ಟಿನ ಆದೇಶ

    ಬೆಂಗಳೂರು ಉಪನಗರ ರೈಲಿಗೆ ಹೈಟೆಕ್ ಸ್ಪರ್ಶ: 153 ಮೆಟ್ರೋ ಮಾದರಿ ಬೋಗಿಗಳ ಖರೀದಿಗೆ ಐಸಿಎಫ್‌ ಜೊತೆ ಒಪ್ಪಂದ

  • Public interest
  • BW Special
  • Life Style
  • Photo Gallery
  • Video
No Result
View All Result

Home Bengaluru Focus

Bangalore On High Alert | ದೆಹಲಿ ಸ್ಫೋಟದ ಹಿನ್ನೆಲೆ: ಬೆಂಗಳೂರು ನಗರಾದ್ಯಂತ ಹೈ ಅಲರ್ಟ್ ಘೋಷಣೆ

ರೈಲ್ವೆ, ವಿಮಾನ ನಿಲ್ದಾಣ, ಮೆಟ್ರೋ ನಿಲ್ದಾಣಗಳಲ್ಲಿ ಭದ್ರತೆ ಬಿಗಿಗೊಳಿಸಲು ಆದೇಶ; ಪೊಲೀಸರಿಂದ ವಾಹನ ತಪಾಸಣೆ ತೀವ್ರ

by Bengaluru Wire Desk
November 11, 2025
in Bengaluru Focus, Public interest
Reading Time: 1 min read
0

ಬೆಂಗಳೂರು, ನ.11 www.bengaluruwire.com : ದೇಶದ ರಾಜಧಾನಿ ದೆಹಲಿಯ ಐತಿಹಾಸಿಕ ಲಾಲ್ ಕಿಲಾ (ಕೆಂಪುಕೋಟೆ) ಪ್ರದೇಶದಲ್ಲಿ ಸೋಮವಾರ ಸಂಜೆ ನಡೆದ ಭೀಕರ ಕಾರ್ ಸ್ಫೋಟದ ಹಿನ್ನೆಲೆಯಲ್ಲಿ, ರಾಜ್ಯದ ರಾಜಧಾನಿ ಬೆಂಗಳೂರು ನಗರದಲ್ಲಿ ತಕ್ಷಣದಿಂದಲೇ ಹೈ ಅಲರ್ಟ್‌ (High Alert) ಘೋಷಿಸಲಾಗಿದೆ. 

ಮುನ್ನೆಚ್ಚರಿಕಾ ಕ್ರಮವಾಗಿ ನಗರ ಪೊಲೀಸ್ ಇಲಾಖೆಯು ಮಹತ್ವದ ಪ್ರದೇಶಗಳಲ್ಲಿ ಭದ್ರತೆಯನ್ನು ತೀವ್ರಗೊಳಿಸಿದ್ದು, ಸಾರ್ವಜನಿಕರ ಸಹಕಾರ ಕೋರಿದೆ.

ಸೋಮವಾರ ಸಂಜೆ ನಡೆದ ದುರಂತದ ವಿವರ :

ದೆಹಲಿಯ ಐತಿಹಾಸಿಕ ಕೆಂಪುಕೋಟೆ ಬಳಿ ಚಾಂದಿನಿ ಚೌಕ್‌ನ ಲಾಲ್ ಕಿಲಾ ಸಮೀಪ ಸೋಮವಾರ ಸಂಜೆ 6.52ರ ಸುಮಾರಿಗೆ ಚಲಿಸುತ್ತಿದ್ದ ಹ್ಯುಂಡೈ ಐ-20 (Hyundai i20) ಕಾರಿನಲ್ಲಿ ಭಾರೀ ಸ್ಫೋಟ ಸಂಭವಿಸಿದೆ. ಈ ದುರ್ಘಟನೆಯಲ್ಲಿ ಕನಿಷ್ಠ 9 ಮಂದಿ ಮೃತಪಟ್ಟು, 24ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. 

ನಿಧಾನವಾಗಿ ಚಲಿಸುತ್ತಿದ್ದ ಹ್ಯುಂಡೈ ಐ-20 ಕಾರು ಸ್ಫೋಟಗೊಂಡು ರಕ್ತದೋಕುಳಿ ಹರಿದ ಸ್ಥಳ.

ಸ್ಫೋಟದ ತೀವ್ರತೆಗೆ ಸಮೀಪದಲ್ಲಿದ್ದ ಹಲವಾರು ವಾಹನಗಳು ಬೆಂಕಿಗೆ ಆಹುತಿಯಾಗಿದ್ದು, ಇಡೀ ಪ್ರದೇಶದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಸ್ಫೋಟದ ತೀವ್ರತೆಗೆ ಸುತ್ತಮುತ್ತಲಿನ ಕಟ್ಟಡಗಳು ಅಲುಗಾಡುವಷ್ಟಿತ್ತು ಎನ್ನಲಾಗಿದೆ.  ಈ ಘಟನೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಯುಎಪಿಎ (UAPA) ಮತ್ತು ಸ್ಫೋಟಕ ಕಾಯ್ದೆ (Explosives Act) ಅಡಿಯಲ್ಲಿ ಪ್ರಕರಣ ದಾಖಲಿಸಿ, ತನಿಖೆಯನ್ನು ತೀವ್ರಗೊಳಿಸಿದ್ದಾರೆ.

ನಿಷೇಧಿತ ಉಗ್ರ ಸಂಘಟನೆ ಜೈಷ್-ಎ-ಮೊಹಮ್ಮದ್ (JEM) ಹಾಗೂ ಅನ್ಸಾರ್ ಗಜ್ವತ್-ಉಲ್-ಹಿಂದ್ ಸಂಘಟನೆಗಳೊಂದಿಗೆ ಸಂಬಂಧ ಹೊಂದಿದ್ದ ಅಂತರರಾಜ್ಯ ಮತ್ತು ಅಂತರರಾಷ್ಟ್ರೀಯ ಉಗ್ರ ಸಂಘಟನೆಯ ಜಾಲವನ್ನು ಜಮ್ಮು ಮತ್ತು ಕಾಶ್ಮೀರದ ಪೊಲೀಸರು ಭೇದಿಸಿದ ಕಲವೇ ಗಂಟೆಗಳಲ್ಲಿ ಈ ಭೀಕರ ಸ್ಫೋಟ ಸಂಭವಿಸಿದೆ. ಈ ಕೃತ್ಯದ ಬಗ್ಗೆ ಉನ್ನತ ಮಟ್ಟದ ಹಾಗೂ ನಿಷ್ಪಕ್ಷಪಾತವಾದ ತನಿಖೆ ನಡೆಸಬೇಕು ಎಂದು ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ಆಗ್ರಹಿಸಿವೆ.

“ದೆಹಲಿ ಸ್ಫೋಟ ಘಟನೆಯನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಹೆಚ್ಚಿನ ಜಾಗರೂಕತೆಯನ್ನು ಕಾಯ್ದುಕೊಳ್ಳುವಂತೆ ನಾನು ಪೊಲೀಸ್ ಮಹಾನಿರ್ದೇಶಕರಿಗೆ ನಿರ್ದೇಶನ ನೀಡಿದ್ದೇನೆ. ಜನದಟ್ಟಣೆ ಇರುವ ಸಾರ್ವಜನಿಕ ಸ್ಥಳಗಳಲ್ಲಿ ಭದ್ರತೆಯನ್ನು ಬಲಪಡಿಸಲು ಮತ್ತು ಜನರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲು ಗೃಹ ಇಲಾಖೆಗೆ ಸೂಚನೆ ನೀಡಲಾಗಿದೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಬಿಗಿ ಭದ್ರತೆ :

ಬೆಂಗಳೂರಿನ ಪ್ರಮುಖ ಸ್ಥಳಗಳಲ್ಲಿ ಪೊಲೀಸರಿಂದ ವಾಹನ ತಪಾಸಣೆ ಹಾಗೂ ಬಿಗಿ ಭದ್ರತೆ ಹೆಚ್ಚಿಸಲಾಗಿದೆ.

ದೆಹಲಿಯ ಸ್ಫೋಟದ ಹಿನ್ನೆಲೆಯಲ್ಲಿ, ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಛೇರಿಯಿಂದ ಪತ್ರಿಕಾ ಪ್ರಕಟಣೆ ಹೊರಡಿಸಲಾಗಿದ್ದು, ನಗರಾದ್ಯಂತ ಹೈ ಅಲರ್ಟ್ ಜಾರಿಗೊಳಿಸಲಾಗಿದೆ.

ಪ್ರಮುಖ ಸ್ಥಳಗಳಲ್ಲಿ ಭದ್ರತೆ: ನಗರದ ಪ್ರಮುಖ ಸಾರ್ವಜನಿಕ ಸ್ಥಳಗಳು ಹಾಗೂ ಅಗತ್ಯ ಮೂಲಸೌಕರ್ಯ ಪ್ರದೇಶಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ.

 ಪ್ರಮುಖ ಕೇಂದ್ರಗಳು: ರೈಲ್ವೆ ನಿಲ್ದಾಣಗಳು, ಬಸ್ ನಿಲ್ದಾಣಗಳು, ವಿಮಾನ ನಿಲ್ದಾಣ, ಮೆಟ್ರೋ ನಿಲ್ದಾಣಗಳು, ಶಾಪಿಂಗ್ ಮಾಲ್‌ಗಳು ಮತ್ತು ವ್ಯವಹಾರಿಕ ಕೇಂದ್ರಗಳಲ್ಲೂ ಹೆಚ್ಚಿನ ನಿಗಾ ಇಡಲಾಗಿದೆ.

ಪೊಲೀಸರಿಗೆ ಸೂಚನೆ: ಪೊಲೀಸರು ಕಟ್ಟುನಿಟ್ಟಿನ ನಿಗಾ ವಹಿಸಲು ಮತ್ತು 24 ಗಂಟೆಗಳ ಕಾಲ ಮೇಲ್ವಿಚಾರಣೆ ನಡೆಸಲು ಸೂಚನೆ ನೀಡಲಾಗಿದೆ.

ಬಿರುಸುಗೊಂಡ ವಾಹನ ತಪಾಸಣೆ: ಭದ್ರತಾ ಸಿದ್ಧತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ನಗರದ ಪ್ರಮುಖ ರಸ್ತೆಗಳ ಮೇಲೆ ಬ್ಯಾರಿಕೇಡ್‌ಗಳನ್ನು ಅಳವಡಿಸಿ, ಎಲ್ಲಾ ವಾಹನಗಳ ಸಮಗ್ರ ತಪಾಸಣೆ ನಡೆಸಲಾಗುತ್ತಿದೆ.

 ಹೆಚ್ಚುವರಿ ತಂಡಗಳ ನಿಯೋಜನೆ: ಅನುಮಾನಾಸ್ಪದ ವ್ಯಕ್ತಿಗಳನ್ನು ಗುರುತಿಸಿ, ಪರಿಶೀಲಿಸಲು ಹೆಚ್ಚುವರಿ ಭದ್ರತಾ ತಂಡಗಳನ್ನು ನಿಯೋಜಿಸಲಾಗಿದೆ.

ಸಾರ್ವಜನಿಕರಿಗೆ ಮನವಿ :

ಪರಿಶೀಲನಾ ಕ್ರಮಗಳ ವೇಳೆ ಸಾರ್ವಜನಿಕರು ಶಾಂತವಾಗಿ ಪೊಲೀಸರೊಂದಿಗೆ ಸಹಕರಿಸಬೇಕು ಎಂದು ಬೆಂಗಳೂರು ನಗರ ಪೊಲೀಸ್ ಇಲಾಖೆ ಮನವಿ ಮಾಡಿದೆ. ಯಾವುದೇ ಅನುಮಾನಾಸ್ಪದ ಚಟುವಟಿಕೆಗಳು ಕಂಡುಬಂದರೆ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡುವಂತೆ ಕೋರಲಾಗಿದೆ.

WhatsApp Join our WhatsApp Channel
Previous Post

KUWJ News | ಕೆಯುಡಬ್ಲೂಜೆ ನೂತನ ಪದಾಧಿಕಾರಿಗಳ ಅಧಿಕಾರ ಸ್ವೀಕಾರ: ಶಿವಾನಂದ ತಗಡೂರು ನೇತೃತ್ವದ ತಂಡಕ್ಕೆ ಅಧಿಕೃತ ಚಾಲನೆ

Next Post

ಕೆಂಪುಕೋಟೆ ಬಳಿ ಸ್ಫೋಟ: ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಉನ್ನತ ಮಟ್ಟದ ಭದ್ರತಾ ಪರಿಶೀಲನಾ ಸಭೆ

Next Post

ಕೆಂಪುಕೋಟೆ ಬಳಿ ಸ್ಫೋಟ: ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಉನ್ನತ ಮಟ್ಟದ ಭದ್ರತಾ ಪರಿಶೀಲನಾ ಸಭೆ

Bollywood News | ಬಾಲಿವುಡ್‌ನ 'ಹೀ-ಮ್ಯಾನ್' ಧರ್ಮೇಂದ್ರ ನಿಧನದ ಸುದ್ದಿ ಸುಳ್ಳು: ಕುಟುಂಬದಿಂದ ಸ್ಪಷ್ಟನೆ, ನಟ ಆಸ್ಪತ್ರೆಯಲ್ಲಿ ಚೇತರಿಕೆ

Please login to join discussion

Like Us on Facebook

Follow Us on Twitter

Recent News

​ಮೇ 26 ಕ್ಕೆ ಕೇರಳಕ್ಕೆ ಮುಂಗಾರು ಪ್ರವೇಶ: ಹವಾಮಾನ ಇಲಾಖೆ ಮುನ್ಸೂಚನೆ

May 16, 2026

ಕೆ.ಎಸ್.ಆರ್ ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ ಎನ್‌ಎಸ್‌ಜಿ ಕಮಾಂಡೋಗಳ ಅಬ್ಬರ: ಉಗ್ರರ ದಾಳಿಗೆ ಪ್ರತ್ಯುತ್ತರದ ಅಣಕು ಪ್ರದರ್ಶನ

May 15, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

​ಮೇ 26 ಕ್ಕೆ ಕೇರಳಕ್ಕೆ ಮುಂಗಾರು ಪ್ರವೇಶ: ಹವಾಮಾನ ಇಲಾಖೆ ಮುನ್ಸೂಚನೆ

May 16, 2026

ಕೆ.ಎಸ್.ಆರ್ ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ ಎನ್‌ಎಸ್‌ಜಿ ಕಮಾಂಡೋಗಳ ಅಬ್ಬರ: ಉಗ್ರರ ದಾಳಿಗೆ ಪ್ರತ್ಯುತ್ತರದ ಅಣಕು ಪ್ರದರ್ಶನ

May 15, 2026

GBA News | ಬೆಂಗಳೂರು: ನಾಗರಿಕರ ಅಹವಾಲುಗಳಿಗೆ ತಕ್ಷಣ ಸ್ಪಂದಿಸಿ: ಅಧಿಕಾರಿಗಳಿಗೆ ಆಯುಕ್ತ ಪೊಮ್ಮಲ ಸುನೀಲ್ ಕುಮಾರ್ ಖಡಕ್ ಸೂಚನೆ

May 15, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group