Thursday, May 14, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ಶಾಲೆ-ಕಾಲೇಜುಗಳಲ್ಲಿ ಹಿಜಾಬ್, ಜನಿವಾರಕ್ಕೆ ಮನ್ನಣೆ: 2022ರ ವಿವಾದಿತ ವಸ್ತ್ರಸಂಹಿತೆ ಆದೇಶ ವಾಪಸ್ ಪಡೆದ ರಾಜ್ಯ ಸರ್ಕಾರ

    BIG Breaking | ಬೆಂಗಳೂರಿನಲ್ಲಿ ₹2,384 ಕೋಟಿ ಮೊತ್ತದ ಬೃಹತ್ ಜಿಎಸ್‌ಟಿ ವಂಚನೆ ಪತ್ತೆ: ಇಬ್ಬರ ಬಂಧನ

    Transport News | ಸಾರಿಗೆ ನೌಕರರಿಗೆ ಸರ್ಕಾರದ ಕೊಡುಗೆ: ಶೇ. 12.5 ರಷ್ಟು ವೇತನ ಹೆಚ್ಚಳಕ್ಕೆ ಅಧಿಕೃತ ಆದೇಶ

    Gold Rate | ಚಿನ್ನ-ಬೆಳ್ಳಿ ಬೆಲೆ ಏರಿಕೆ ಬಿಸಿ: ಆಮದು ಸುಂಕ ಭರ್ಜರಿ ಶೇ. 15ಕ್ಕೆ ಹೆಚ್ಚಳ: ಇಂದಿನಿಂದಲೇ ಜಾರಿ

    NEET UG 2026 | ನೀಟ್ ಯುಜಿ 2026 ಪರೀಕ್ಷೆ ರದ್ದು: ಪೇಪರ್ ಲೀಕ್ ಬೆನ್ನಲ್ಲೇ ಕೇಂದ್ರ ಸರ್ಕಾರದಿಂದ ಕಠಿಣ ನಿರ್ಧಾರ

    ಬಡವರ ‘ಬಾಟಲಿ’ಗೆ ಬರೆ: ರಾಜ್ಯದಲ್ಲಿ ಮದ್ಯದ ದರ ಭಾರೀ ಏರಿಕೆ

    ​ಚಿಲ್ಲರೆ ಬಂಕ್‌ಗಳಲ್ಲಿ ಡೀಸೆಲ್‌ಗೆ ಮುಗಿಬಿದ್ದ ಕೈಗಾರಿಕೋದ್ಯಮಿಗಳು: ಪೂರೈಕೆಯಲ್ಲಿ ವ್ಯತ್ಯಯ, ಪ್ರಧಾನಿಗೆ ದೂರು

    Vidhana Soudha

    ರಾಜ್ಯ ಸರ್ಕಾರಿ ನೌಕರರ ತುಟ್ಟಿಭತ್ಯೆ ಶೇ. 1.5ರಷ್ಟು ಹೆಚ್ಚಳ, ಜನವರಿ 1ರಿಂದಲೇ ಪೂರ್ವಾನ್ವಯ

    ಭಾರತದ ಬತ್ತಳಿಕೆಗೆ ಮತ್ತಷ್ಟು ಬಲ: ‘ಅಗ್ನಿ’ ಕ್ಷಿಪಣಿಯ MIRV ತಂತ್ರಜ್ಞಾನದ ಯಶಸ್ವಿ ಪರೀಕ್ಷೆ

  • Bengaluru Focus

    ಬನಶಂಕರಿ ಬಿಡಿಎ ವಾಣಿಜ್ಯ ನಿವೇಶನ ವಿವಾದ: 26 ವರ್ಷಗಳ ನಂತರ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

    BIG Breaking | ಬೆಂಗಳೂರಿನಲ್ಲಿ ₹2,384 ಕೋಟಿ ಮೊತ್ತದ ಬೃಹತ್ ಜಿಎಸ್‌ಟಿ ವಂಚನೆ ಪತ್ತೆ: ಇಬ್ಬರ ಬಂಧನ

    GBA Head Office Image

    ಬೆಂಗಳೂರಿನ 7 ಲಕ್ಷ ‘ಬಿ’ ಖಾತೆ ಆಸ್ತಿ ಮಾಲೀಕರೇ ಗಮನಿಸಿ: ಬಿ-ಖಾತಾದಿಂದ ಎ-ಖಾತಾಗೆ ಬದಲಾಯಿಸಲು ಶೇ.60ರಷ್ಟು ರಿಯಾಯಿತಿ

    Transport News | ಸಾರಿಗೆ ನೌಕರರಿಗೆ ಸರ್ಕಾರದ ಕೊಡುಗೆ: ಶೇ. 12.5 ರಷ್ಟು ವೇತನ ಹೆಚ್ಚಳಕ್ಕೆ ಅಧಿಕೃತ ಆದೇಶ

    ಬಡವರ ‘ಬಾಟಲಿ’ಗೆ ಬರೆ: ರಾಜ್ಯದಲ್ಲಿ ಮದ್ಯದ ದರ ಭಾರೀ ಏರಿಕೆ

    ಬೆಂಗಳೂರು: ಅಪಾಯಕಾರಿ ಕಟ್ಟಡಗಳ ತೆರವಿಗೆ ಕೇಂದ್ರ ನಗರ ಪಾಲಿಕೆ ಆಯುಕ್ತ ರಾಜೇಂದ್ರ ಚೋಳನ್ ಕಟ್ಟುನಿಟ್ಟಿನ ಆದೇಶ

    ಬೆಂಗಳೂರು ಉಪನಗರ ರೈಲಿಗೆ ಹೈಟೆಕ್ ಸ್ಪರ್ಶ: 153 ಮೆಟ್ರೋ ಮಾದರಿ ಬೋಗಿಗಳ ಖರೀದಿಗೆ ಐಸಿಎಫ್‌ ಜೊತೆ ಒಪ್ಪಂದ

    Vidhana Soudha

    ರಾಜ್ಯ ಸರ್ಕಾರಿ ನೌಕರರ ತುಟ್ಟಿಭತ್ಯೆ ಶೇ. 1.5ರಷ್ಟು ಹೆಚ್ಚಳ, ಜನವರಿ 1ರಿಂದಲೇ ಪೂರ್ವಾನ್ವಯ

    ಬೆಂಗಳೂರು ವೈರ್ ರಿಯಾಲಿಟಿ ಚೆಕ್: “ಕಸದ ಆಫೀಸಿನ” ಹಿತ್ತಲೇ ಗಬ್ಬು; ಊರಿಗೆ ಬುದ್ಧಿ ಹೇಳುವ ಬಿಎಸ್‌ಡಬ್ಲ್ಯುಎಂಎಲ್‌ಗೆ ಸ್ವಚ್ಛತೆ  ಮರೆತೇ ಹೋಯಿತೇ?

  • Public interest
  • BW Special
  • Life Style
  • Photo Gallery
  • Video
No Result
View All Result

Home Bengaluru Focus

#Personal2Public Transport Campaign | #ಸ್ವಂತ2ಸಾರ್ವಜನಿಕ ಸಾರಿಗೆ ಅಭಿಯಾನ ಸಮೀಕ್ಷಾ ವರದಿ : ಹೆಚ್ಚಿನವರು ಸ್ವಂತ ವಾಹನಗಳಿಂದ ಮೆಟ್ರೋಗೆ ಬದಲಾಗಲು ಉತ್ಸುಕ

ಪ್ರಶ್ನಾವಳಿಗೆ ಪ್ರತಿಕ್ರಿಯಿಸಿದ 3,855 ಪ್ರಯಾಣಿಕರಲ್ಲಿ ಶೇ.95 ಮಂದಿ ಮೆಟ್ರೋಗೆ ಬದಲಾಗಲು ಬಯಸಿದ್ದಾರೆ | ಶೇ.60ರಷ್ಟು ಪ್ರಯಾಣಿಕರು ಖಾಸಗಿ ವಾಹನಗಳನ್ನು ಪ್ರತಿದಿನದ ಪ್ರಯಾಣಕ್ಕಾಗಿ ಬಳಸುತ್ತಾರೆ. | ಅದರಲ್ಲಿ 1,172 ಪ್ರಯಾಣಿಕರು ಕಾರು ಬಳಕೆದಾರರಾಗಿದ್ದರೆ, 1,046 ಮಂದಿ ದ್ವಿಚಕ್ರ ವಾಹನ ಬಳಕೆದಾರರು.

by Bengaluru Wire Desk
September 4, 2023
in Bengaluru Focus, News Wire
Reading Time: 2 mins read
0
ನಮ್ಮ ಮೆಟ್ರೊ ರೈಲಿನ ಸಾಂದರ್ಭಿಕ ಚಿತ್ರ

ನಮ್ಮ ಮೆಟ್ರೊ ರೈಲಿನ ಸಾಂದರ್ಭಿಕ ಚಿತ್ರ

ಬೆಂಗಳೂರು, ಸೆ.4 www.bengaluruwire.com : ರಾಜಧಾನಿಯಲ್ಲಿ ಪೀಕ್ ಹವರ್ ಟ್ರಾಫಿಕ್ ನಲ್ಲಿ ಖಾಸಗಿ ವಾಹನಗಳ ಸವಾರರು ಓಡಾಡಿ ಹೈರಾಣಾಗಿದ್ದಾರೆ. ಇದಕ್ಕೆ ಬೆಂಗಳೂರಿಗರು #ಸ್ವಂತ2ಸಾರ್ವಜನಿಕ ಸಾರಿಗೆ ಅಭಿಯಾನದಲ್ಲಿ ನೀಡಿದ ಅಭಿಪ್ರಾಯವೇ ಸಾಕ್ಷಿಯಾಗಿದೆ. ನಗರದಲ್ಲಿ ಪ್ರಸ್ತುತ ಕಚೇರಿಗಳನ್ನು ತಲುಪಲು ಖಾಸಗಿ ವಾಹನಗಳನ್ನು ಬಳಸುತ್ತಿರುವ 3855 ಜನರಲ್ಲಿ 95% ಪ್ರತಿಶತದಷ್ಟು ಪ್ರಯಾಣಿಕರು ತಮ್ಮ ಪ್ರಯಾಣವನ್ನು ಖಾಸಗಿ ವಾಹನಗಳಿಂದ ಮೆಟ್ರೋಗ ಬದಲಾಗಲು ಸಿದ್ಧರಿದ್ದಾರೆ ಎಂಬುದು ಅಭಿಯಾನದಲ್ಲಿ ನೀಡಿದ ಪ್ರಶ್ನಾವಳಿಯಿಂದ ತಿಳಿದು ಬಂದಿದೆ.

ನಗರದಲ್ಲಿ ಸೋಮವಾರ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ವಿವಿಧ ನಾಗರೀಕರ ಸಂಘಟನೆಗಳು, ಕಾರ್ಪೊರೇಟ್ ಸಂಸ್ಥೆಗಳು, ಆಟೋ ಚಾಲಕ ಸಂಘಟನೆಗಳು ಜಂಟಿಯಾಗಿ ಕೈಗೊಂಡ #ಸ್ವಂತ2ಸಾರ್ವಜನಿಕ ಸಾರಿಗೆ ಅಭಿಯಾನದ ಮುಖ್ಯಾಂಶಗಳನ್ನು ಬಿಡುಗಡೆ ಮಾಡಲಾಯಿತು.

ಬಿ.ಪ್ಯಾಕ್ ಗೌರವ ವ್ಯವಸ್ಥಾಪಕ ಟ್ರಸ್ಟಿ ಮತ್ತು ಸಿಇಒ ರೇವತಿ ಅಶೋಕ್ ಮಾತನಾಡಿ, “ಈ ಸಮೀಕ್ಷೆಯಿಂದ ದೊರೆತಿರುವ ಉತ್ತರಗಳು ನಾಗರಿಕರು ತಮ್ಮ ದೈನಂದಿನ ಪ್ರಯಾಣದ ವಾಸ್ತವತೆಯನ್ನು ತಿಳಿಸುತ್ತದೆ. ಬೆಂಗಳೂರಿನ ನಾಗರಿಕರು ಖಾಸಗಿ ವಾಹನಗಳಿಂದ ದೂರ ಸರಿದು ಸಾರ್ವಜನಿಕ ಸಾರಿಗೆಯಲ್ಲಿ ತಮ್ಮ ಕೆಲಸದ ಸ್ಥಳಗಳಿಗೆ ಪಯಾಣಿಸಲು ಸಿದ್ಧರಿದ್ದಾರೆ ಎಂದು ಬೆಂಗಳೂರು ಪ್ರಯಾಣಿಕರ ಸಮೀಕ್ಷೆಯ ಫಲಿತಾಂಶಗಳು ಮತ್ತೊಮ್ಮೆ ಸ್ಪಷ್ಟವಾಗಿ ಸಾಬೀತುಪಡಿಸಿವೆ. ಸರ್ಕಾರಿ ಸಂಸ್ಥೆಗಳು ಜೊತೆಗೂಡಿ ಮೊದಲ ಮತ್ತು ಕೊನೆಯ ಮೈಲಿ ಮುಖ್ಯಸ್ಥರ ಗಮನಕ್ಕೆ ತರುತ್ತೇವೆ. ಹಾಗೂ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಒತ್ತಾಯಿಸುತ್ತೇವೆ. ಆಗ ಸಂಪರ್ಕ, ತಡೆರಹಿತ, ಊಹಿಸಬಹುದಾದ ಮತ್ತು ಆರಾಮದಾಯಕ ಪ್ರಯಾಣವನ್ನು ನಾಗರೀಕರಿಗೆ ಆದಷ್ಟು ಶೀಘ್ರದಲ್ಲಿ ಒದಗಿಸಬೇಕಿದೆ. ಸಮೀಕ್ಷೆಯಿಂದ ಹೊರಹೊಮ್ಮಿದ ಅಂಶಗಳನ್ನು ಸರ್ಕಾರದ ಅಂಗಸಂಸ್ಥೆಗಳಿಗೆ ನೀಡಲಿದ್ದೇವೆ. ಆಗ ಮಾತ್ರ ಬೆಂಗಳೂರಿಗರ ನಿರೀಕ್ಷೆಗಳನ್ನು ಪೂರೈಸಬಹುದು” ಎಂದು ಹೇಳಿದರು.

ನಗರದಲ್ಲಿ ವಿವಿಧ ನಾಗರೀಕರ ಸಂಘಟನೆಗಳು, ಕಾರ್ಪೊರೇಟ್ ಸಂಸ್ಥೆಗಳು, ಆಟೋ ಚಾಲಕ ಸಂಘಟನೆಗಳು ಜಂಟಿಯಾಗಿ ಕೈಗೊಂಡ #ಸ್ವಂತ2ಸಾರ್ವಜನಿಕ ಸಾರಿಗೆ ಅಭಿಯಾನ ಸಮೀಕ್ಷಾ ವರದಿಯನ್ನು ಸೋಮವಾರ ಬಿಡುಗಡೆ ಮಾಡಲಾಯಿತು.

ಡಬ್ಲ್ಯುಆರ್‌ಐ ಇಂಡಿಯಾದ ಶ್ರೀನಿವಾಸ್ ಅಲವಿಲ್ಲಿ ಮಾತನಾಡಿ, “ಸಂಚಾರ ಸಮಸ್ಯೆಗೆ ಏಕೈಕ ದೀರ್ಘಕಾಲೀನ ಪರಿಹಾರವೆಂದರೆ ಸಾರ್ವಜನಿಕ ಸಾರಿಗೆಯನ್ನು ಬಲಪಡಿಸುವುದು. ವೈಟ್‌ಫೀಲ್ಡ್ ಅನ್ನು ನಗರದ ಇತರ ಭಾಗಗಳಿಗೆ ಮೆಟ್ರೋ ಸಂಪರ್ಕಿಸುವುದರಿಂದ 2023 ಬ್ರಾಂಡ್ ಬೆಂಗಳೂರಿಗೆ ಮೈಲಿಗಲ್ಲು ವರ್ಷವಾಗಲಿದೆ. ನಗರದ ಹೊರವರ್ತುಲ ರಸ್ತೆಯು ಗರಿಷ್ಠ  ಸಂಖ್ಯೆಯ ದೈನಂದಿನ ಪ್ರಯಾಣಿಕರನ್ನು ಹೊಂದಿರುವುದರಿಂದ, ನೇರಳ ಮಾರ್ಗದ ಮೆಟ್ರೋ ನಿಲ್ದಾಣಗಳಿಂದ ಹೊರವರ್ತುಲ ರಸ್ತೆಯಲ್ಲಿ ನೆಲೆಸಿರುವ ಟೆಕ್‌ ಪಾರ್ಕ್ಸಳಿಗೆ ಫೀಡರ್‌ ಬಸ್ ಗಳ ಸಂಪರ್ಕವನ್ನು ಕಲ್ಪಿಸುವುದರಿಂದ ಸಕಾರಾತ್ಮಕ ಬದಲಾವಣೆ ಕಂಡುಬರುವ ನಿರೀಕ್ಷೆಯಿದೆ. ಪ್ರಯಾಣಿಕರಿಗೆ ನಮ್ಮ ಪ್ರಾಮಾಣಿಕ ಮನವಿಯೆಂದರೆ, ವಾರದಲ್ಲಿ ಕನಿಷ್ಠ ಎರಡು ದಿನಗಳಾದರೂ ನಿಮ್ಮ ಪ್ರಯಾಣಕ್ಕಾಗಿ ಸಾರ್ವಜನಿಕ ಸಾರಿಗೆಯನ್ನು ಬಳಸಿ ಎಂಬುದಾಗಿದೆ ಎಂದು ಅವರು ತಿಳಿಸಿದರು.

#ಸ್ವಂತ2ಸಾರ್ವಜನಿಕ ಸಾರಿಗೆ ಅಭಿಯಾನ ನಡೆದಿದ್ದು ಹೇಗೆ? :

ಖಾಸಗಿ ವಾಹನಗಳಿಂದ ಸಾರ್ವಜನಿಕ ಸಾರಿಗೆಯತ್ತ ಬದಲಾಗುವ ಪ್ರಯತ್ನದಲ್ಲಿ ಪ್ರಯಾಣಿಕರು ಎದುರಿಸುವ ಪ್ರಮುಖ ಸಮಸ್ಯೆಗಳನ್ನು ಮತ್ತು ಪ್ರಯಾಣಿಕರ ಸಾರಿಗೆ ಮಾದರಿಗಳನ್ನು ತಿಳಿಯಲು 2023 ಜುಲೈನಲ್ಲಿ ಈ ಪ್ರಶ್ನಾವಳಿಯನ್ನು ಬಿಡುಗಡೆಗೊಳಿಸಲಾಯಿತು. ಈ ಪ್ರಶ್ನಾವಳಿಯು ನಗರದ ಎಲ್ಲಾ ನಾಗರೀಕರಿಗೆ ಪ್ರತಿಕ್ರಿಯಿಸುವ ಅವಕಾಶ ಕಲ್ಪಿಸಲಾಗಿತ್ತು. ಆದರೆ ನಿರ್ದಿಷ್ಟವಾಗಿ ವೈಟ್‌ಫೀಲ್ಡ್, ಮಹದೇವಪುರ, ಎಲೆಕ್ಟ್ರಾನಿಕ್ ಸಿಟಿ ಮತ್ತು ಹೊರ ವರ್ತುಲ ರಸ್ತೆ, (ಒಆರ್‌ಆ‌) ಪ್ರದೇಶಗಳಲ್ಲಿನ ಪ್ರಯಾಣಿಕರು ಮತ್ತು ನಿವಾಸಿಗಳು ಸಮೀಕ್ಷೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಭಾಗವಹಿಸಿರುವುದು ಕಂಡುಬಂದಿರುತ್ತದೆ. ನಗರದ ಈ ಪ್ರದೇಶಗಳಲ್ಲಿ ಸರಿ ಸುಮಾರು 10 ಲಕ್ಷ ಕ್ಕೂ ಹೆಚ್ಚು ಉದ್ಯೋಗಿಗಳು ನಲೆಸಿದ್ದಾರೆ ಹಾಗೂ ಈ ಪ್ರದೇಶಗಳು ಮುಂಬರುವ ದಿನಗಳಲ್ಲಿ ಮೆಟ್ರೋ ಮಾರ್ಗಗಳ ಸಂಪರ್ಕವನ್ನು ಹೊಂದಲಿವೆ.

ಬೆಂಗಳೂರಿನ ಪಕ್ಷಿನೋಟ ಸಾಂದರ್ಭಿಕ ಚಿತ್ರ

ಪ್ರಶ್ನಾವಳಿಗೆ ಪ್ರತಿಕ್ರಿಯಿಸಿದ 3,855 ಪ್ರಯಾಣಿಕರಲ್ಲಿ ಶೇ.60ರಷ್ಟು ಪ್ರಯಾಣಿಕರು ಖಾಸಗಿ ವಾಹನಗಳನ್ನು ಪ್ರತಿದಿನದ ಪ್ರಯಾಣಕ್ಕಾಗಿ ಬಳಸುತ್ತಾರೆ. ಅದರಲ್ಲಿ 1,172 ಪ್ರಯಾಣಿಕರು ಕಾರು ಬಳಕೆದಾರರಾಗಿದ್ದರೆ, 1,046 ಮಂದಿ ದ್ವಿಚಕ್ರ ವಾಹನ ಬಳಕೆದಾರರು. ಈ ಹಿಂದೆ ತಿಳಿಸಿದ ಪ್ರದೇಶಗಳಿಗೆ ತೆರಳುವಾಗ, ಒಂದು ದಿಕ್ಕಿನ ಪ್ರಯಾಣವನ್ನು ಖಾಸಗಿ ದ್ವಿಚಕ್ರ ಮತ್ತು ಕಾರಿನಲ್ಲಿ ಕ್ರಮಿಸಿದರೆ 1 ರಿಂದ 1.5 ಗಂಟೆಗಳ ಸಮಯ ತೆಗೆದುಕೊಳ್ಳುತ್ತದೆ. ಇದೇ ಪ್ರಯಾಣ ಮೆಟ್ರೋ ಮೂಲಕವಾದರೆ 45 ನಿಮಿಷಗಳಿಂದ 1 ಗಂಟೆಯಲ್ಲಿ ಕ್ರಮಿಸಬಹುದು ಎಂಬುದು ಪ್ರಶ್ನಾವಳಿಯ ಪ್ರತಿಕ್ರಿಯೆಗಳಲ್ಲಿ ಕಂಡುಬಂದಿರುತ್ತದೆ. ಕಾರು ಮತ್ತು ದ್ವಿಚಕ್ರ ವಾಹನ ಬಳಕೆದಾರರು ಮನೆಯಿಂದ ಕಚೇರಿಗೆ ಕ್ರಮಿಸುವ ದೈನಂದಿನ ಪ್ರಯಾಣದ ಸಮಯ ಈಗಿರುವ ಸ್ಥಿತಿಗಿಂತ ಕಡಿಮೆಯಾಗುವುದಾದರೆ, ಮೆಟ್ರೋ ಮೂಲಕ ಕ್ರಮಿಸಲು ಒಪ್ಪಿಗೆ ಸೂಚಿಸಿರುವ ಅಂಶ ಕಂಡುಬಂದಿದೆ.

ಮತ್ತೊಂದು ಮುಖ್ಯ ಅಂಶವೇನೆಂದರೆ, ಪ್ರಯಾಣದ ವೆಚ್ಚಕ್ಕಿಂತ ಕಡಿಮೆ ಸಮಯದಲ್ಲಿ ಕ್ರಮಿಸುವ ವ್ಯವಸ್ಥೆ ಮತ್ತು ಸಮಗ್ರ ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳನ್ನು ಬಯಸುತ್ತಿರುವುದು. ಪ್ರಸ್ತುತ ಸಾರ್ವಜನಿಕ ಸಾರಿಗೆಯನ್ನು ಬಳಸುವವರಲ್ಲಿ 62% ರಷ್ಟು ಜನರು ಉತ್ತಮ ಪಾದಚಾರಿ ಮಾರ್ಗಗಳನ್ನು ಬಯಸುತ್ತಿದ್ದಾರೆ. ಅವರಲ್ಲಿ 33% ರಷ್ಟು ಜನರು ನಿಯಮಿತ ಬಸ್‌ಗಳ ಪ್ರಮಾಣವನ್ನು ಹೆಚ್ಚಿಸಲು ನಿರೀಕ್ಷಿಸಿದ್ದಾರೆ. ತಡರಹಿತ ಬಹು ಮಾದರಿ ಏಕೀಕರಣದೊಂದಿಗೆ, ಮೊದಲ ಮತ್ತು ಕೊನೆಯ ಮೈಲಿ ಸಂಪರ್ಕವನ್ನು ಬಲಪಡಿಸಿದರೆ ಹೆಚ್ಚಿನ ಜನರನ್ನು ಸಾರ್ವಜನಿಕ ಸಾರಿಗೆಯತ್ತ ಪ್ರೋತ್ಸಾಹಿಸುತ್ತದೆ ಎಂದು ಸಾರ್ವಜನಿಕ ಸಾರಿಗೆ ಬಳಸುತ್ತಿರುವವರು ಮತ್ತು ಬಳಕೆದಾರರಲ್ಲದವರು ನಿಸ್ಸಂಶಯವಾಗಿ ಹೇಳಿದ್ದಾರೆ.

ಮಹಿಳಾ ಪ್ರಯಾಣಿಕರ ಅಭಿಪ್ರಾಯವೇನು? :

ವಾಹನ ಸಂಚಾರ ದಟ್ಟಣೆಯ ಸಾಂದರ್ಭಿಕ ಚಿತ್ರ.

ಸಮೀಕ್ಷೆಯಲ್ಲಿ ಭಾಗವಹಿಸಿದ್ದ ಸುಮಾರು 50% ಮಹಿಳಾ ಪ್ರತಿಕ್ರಿಯೆದಾರರು ತಮ್ಮ ಪ್ರಯಾಣಕ್ಕಾಗಿ ಖಾಸಗಿ ಸಾರಿಗೆಗಳಿಗಿಂತ ಲಭ್ಯವಿರುವ ಸಾರ್ವಜನಿಕ ಸಾರಿಗೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸುತ್ತಾರೆ. ಮಹಿಳಾ ಪ್ರಯಾಣಿಕರು ಆಪ್ ಆಧಾರಿತ ಆಟೋ ಮತ್ತು ಕಾರ್ ಸೇವೆಗಳಿಗಿಂತ ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಸಲು ಹೆಚ್ಚಿನ ಆದ್ಯತೆ ನೀಡುತ್ತಾರೆ ಎಂಬ ಅಂಶ ಕಂಡುಬಂದಿದೆ. 40% ಮಹಿಳಾ ಪ್ರತಿಕ್ರಿಯೆದಾರರು ಈಗಿರುವ ಸಾರಿಗೆ ವ್ಯವಸ್ಥೆಯಲ್ಲಿ ಬಹುಮುಖ್ಯವಾಗಿ ಕಂಡುಬಂದಿರುವ ನ್ಯೂನ್ಯತೆಗಳನ್ನು ಸೂಚಿಸಿದ್ದು ಅವು ಹೀಗಿವೆ: ವಿಶ್ವಾಸಾರ್ಹ ಮೊದಲ ಮತ್ತು ಕೊನೆಯ ಮೈಲಿ ಸೇವೆಗಳ ಕೊರತೆ, ತಡೆರಹಿತ ಸಂಪರ್ಕ, ಒಂದೇ ಟಿಕೆಟ್‌ನಲ್ಲಿ ವಿವಿಧ ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಸುವ ಅವಕಾಶವಿಲ್ಲದಿರುವುದು.

#ಸ್ವಂತ2ಸಾರ್ವಜನಿಕ ಸಾರಿಗೆ ಅಭಿಯಾನವು ವಾರಕ್ಕೆ ಕನಿಷ್ಠ ಎರಡು ಬಾರಿ ಸಾರ್ವಜನಿಕ ಸಾರಿಗೆಯನ್ನು ಬಳಸಲು ಪ್ರಯಾಣಿಕರನ್ನು ಪ್ರೇರೇಪಿಸುವ ಗುರಿಯನ್ನು ಹೊಂದಿದೆ. ಇದು ನಾಗರಿಕ ನೇತೃತ್ವದ ಉಪಕ್ರಮವಾಗಿದ್ದು, ಬೆಂಗಳೂರು ರಾಜಕೀಯ ಕ್ರಿಯಾ ಸಮಿತಿ (BPAC – ಬಿ.ಪ್ಯಾಕ್), ಡಬ್ಲ್ಯುಆರ್‌ಐ ಇಂಡಿಯಾ (WRI India) ಸೇರಿದಂತೆ 5 ಕಾರ್ಪೊರೇಟ್ ಸಂಸ್ಥೆಗಳು, 27 ನಾಗರಿಕ ಮತ್ತು ಅಪಾರ್ಟೆಂಟ್ ಸಂಘಗಳು, ಎರಡು ಆಟೋ ಚಾಲಕ ಸಂಘಗಳು ಮತ್ತು ಭಾರತೀಯ ವಿಜ್ಞಾನ ಸಂಸ್ಥೆಯ ಸುಸ್ಥಿರ ಸಾರಿಗೆ ಪ್ರಯೋಗಾಲಯ ಈ ಅಭಿಯಾನಕ್ಕೆ ಸಹಕಾರ ನೀಡಿವೆ.

ವೈಟ್‌ಫೀಲ್ಡ್ ಮತ್ತು ಎಲೆಕ್ಟ್ರಾನಿಕ್ ಸಿಟಿಗೆ ಸಂಪರ್ಕ ಕಲ್ಪಿಸುವ ಬಹುನಿರೀಕ್ಷಿತ ಮೆಟ್ರೋ ಮಾರ್ಗಗಳು ಸೆಪ್ಟೆಂಬರ್ 2023 ಹಾಗೂ ಜನವರಿ 2024 ರಲ್ಲಿ ಕಾರ್ಯಾರಂಭಿಸುವ ನಿರೀಕ್ಷೆಯಿದ್ದು, ನಗರದಲ್ಲಿ ಮೆಟ್ರೋ ಜಾಲ -93 ಕಿಮೀಗೆ ಹೆಚ್ಚಾಗಲಿದೆ. ನಗರದಲ್ಲಿ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವ ಪ್ರಯತ್ನದ ಭಾಗವಾಗಿ ಸಾರ್ವಜನಿಕ ಸಾರಿಗೆಯ ಬಳಕೆಯನ್ನು ಉತ್ತೇಜಿಸಲು ಇದು ಸೂಕ್ತ ಸಮಯವಾಗಿದೆ.

“ಬೆಂಗಳೂರು ವೈರ್” ಡಿಜಿಟಲ್ ವೆಬ್ ನ್ಯೂಸ್ ಪೋರ್ಟೆಲ್ಲಿನ ಸೋಶಿಯಲ್ ಮೀಡಿಯಾ ಪೇಜ್ ಹಾಗೂ Google News ಗಳಿಗೆ ಉಚಿತವಾಗಿ Subscribe ಆಗಲು Facebook, Telegram, Twitter, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

WhatsApp Join our WhatsApp Channel
Previous Post

Karnataka Draught Situation | ರಾಜ್ಯದ 134 ತಾಲೂಕುಗಳಲ್ಲಿ ಜಂಟಿ ಸಮೀಕ್ಷೆ ವರದಿಗೆ ಒಂದು ವಾರದ ಗಡುವು :  ಇದರ ಆಧಾರದಲ್ಲಿ ಬರ ಘೋಷಣೆ – ಸಚಿವ ಸಂಪುಟ ಉಪಸಮಿತಿ

Next Post

BESCOM UG Transformer | ವಿಶ್ವದಲ್ಲೇ ಮೊದಲ ಬಾರಿಗೆ ಮಲ್ಲೇಶ್ವರಂ ಬೆಸ್ಕಾಂ ವಿಭಾಗದಲ್ಲಿ ಭೂಗತ ಪರಿವರ್ತಕ ಕೇಂದ್ರ ಲೋಕಾರ್ಪಣೆ

Next Post

BESCOM UG Transformer | ವಿಶ್ವದಲ್ಲೇ ಮೊದಲ ಬಾರಿಗೆ ಮಲ್ಲೇಶ್ವರಂ ಬೆಸ್ಕಾಂ ವಿಭಾಗದಲ್ಲಿ ಭೂಗತ ಪರಿವರ್ತಕ ಕೇಂದ್ರ ಲೋಕಾರ್ಪಣೆ

ಅತ್ಯಾಧುನಿಕ ಎಂಆರ್ ಐ ಸ್ಕ್ಯಾನಿಂಗ್ ಯಂತ್ರದ ಚಿತ್ರ.

Victoria Hospital | ಶಿಕ್ಷಕರ ದಿನಾಚರಣೆಯಂದೇ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನೋವಿನ ಕ್ಲೀನಿಕ್ ಆರಂಭ : 2ನೇ ಹೊಸ ಎಂಆರ್ ಐ ಯಂತ್ರಕ್ಕೆ ಚಾಲನೆ ನೀಡಿದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್

Please login to join discussion

Like Us on Facebook

Follow Us on Twitter

Recent News

ಬನಶಂಕರಿ ಬಿಡಿಎ ವಾಣಿಜ್ಯ ನಿವೇಶನ ವಿವಾದ: 26 ವರ್ಷಗಳ ನಂತರ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

May 14, 2026

ಶಾಲೆ-ಕಾಲೇಜುಗಳಲ್ಲಿ ಹಿಜಾಬ್, ಜನಿವಾರಕ್ಕೆ ಮನ್ನಣೆ: 2022ರ ವಿವಾದಿತ ವಸ್ತ್ರಸಂಹಿತೆ ಆದೇಶ ವಾಪಸ್ ಪಡೆದ ರಾಜ್ಯ ಸರ್ಕಾರ

May 14, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

ಬನಶಂಕರಿ ಬಿಡಿಎ ವಾಣಿಜ್ಯ ನಿವೇಶನ ವಿವಾದ: 26 ವರ್ಷಗಳ ನಂತರ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

May 14, 2026

ಶಾಲೆ-ಕಾಲೇಜುಗಳಲ್ಲಿ ಹಿಜಾಬ್, ಜನಿವಾರಕ್ಕೆ ಮನ್ನಣೆ: 2022ರ ವಿವಾದಿತ ವಸ್ತ್ರಸಂಹಿತೆ ಆದೇಶ ವಾಪಸ್ ಪಡೆದ ರಾಜ್ಯ ಸರ್ಕಾರ

May 14, 2026

ಕೇರಳದಲ್ಲಿ ಇಂಧನ ಪಡಿತರ ಜಾರಿ: ಕರ್ನಾಟಕಕ್ಕೂ ತಟ್ಟಲಿದೆಯೇ ತೈಲ ಕಂಪನಿಗಳ ‘ಕಠಿಣ’ ನಿಯಮದ ಬಿಸಿ?

May 14, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group