Monday, November 23, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire
    ಲೋಕಾಯುಕ್ತ ಕಚೇರಿಯ ಸಾಂದರ್ಭಿಕ ಚಿತ್ರ

    ಲೋಕಾಯುಕ್ತ ಕಾರ್ಯವೈಖರಿ ಬಗ್ಗೆ ಆಧಾರರಹಿತ ಟೀಕೆ: ಖಾಸಗಿ ಟಿವಿ ಚಾನಲ್ ಮುಖ್ಯಸ್ಥರಿಗೆ ನೋಟಿಸ್

    ಆಶಾ ಕಾರ್ಯಕರ್ತೆಯರ ಬೇಡಿಕೆ ಸರ್ಕಾರಕ್ಕೆ ಹೊರೆಯೇ? ಅಂಕಿಅಂಶಗಳ ಸಮೇತ ಬಯಲಾಯ್ತು ‘ಗ್ಯಾರಂಟಿ’ ಸರ್ಕಾರದ ಅಸಲಿ ಮುಖ??

    ಬಡವರಿಗೆ 15 ಲಕ್ಷ ನಿವೇಶನ ವಿತರಣೆಗೆ ವೇಗ ನೀಡಿ, 23 ಲಕ್ಷ ಪಿಂಚಣಿ ಫಲಾನುಭವಿಗಳ ಸಮಗ್ರ ಪರಿಶೀಲನೆ ನಡೆಸಿ: ಡಿಸಿಎಂ ಡಾ. ಜಿ. ಪರಮೇಶ್ವರ ಸೂಚನೆ

    KUWJ News | ನಾಡಿನ ಪತ್ರಕರ್ತರ ಸಾಂಘಿಕ ಧ್ವನಿಯಾಗಿ ಕೆಯುಡಬ್ಲ್ಯೂಜೆ ಕಾರ್ಯ: ಗಣ್ಯರ ಶ್ಲಾಘನೆ; ನವೀಕೃತ ವೆಬ್‌ಸೈಟ್ ಅನಾವರಣ

    ಜೆಟ್ಟಿಂಗ್ ಯಂತ್ರಗಳ ಮೂಲಕ ನಗರ ಸ್ವಚ್ಛತೆಗೆ ಸಚಿವ ಕೃಷ್ಣ ಬೈರೇಗೌಡ ಸೂಚನೆ; ಸಂಸ್ಕರಿಸಿದ ನೀರು ಬಳಕೆಗೆ ನಿರ್ದೇಶನ

    ಮುಂದಿನ ಸಂಪುಟ ಸಭೆಯಲ್ಲಿ ರಾಜ್ಯದ ಪ್ರತ್ಯೇಕ ನಾಗರಿಕ ವಿಮಾನಯಾನ ನೀತಿಗೆ ಅಂಗೀಕಾರ: ಎಂ.ಬಿ. ಪಾಟೀಲ ಘೋಷಣೆ

    ಭೂಗ್ಯಾರಂಟಿ ಇ-ಸ್ವತ್ತು ಅಭಿಯಾನಕ್ಕೆ ಚಾಲನೆ: ವರ್ಷಾಂತ್ಯದೊಳಗೆ 8 ಲಕ್ಷ ಗ್ರಾಮೀಣ ಆಸ್ತಿಗೆ ಇ-ಸ್ವತ್ತು

    ಮಂಗಳೂರು: ಆಹಾರ ಸುರಕ್ಷತಾ ಇಲಾಖೆ ಭರ್ಜರಿ ದಾಳಿ; ಮ್ಯಾಕ್ ಡೊನಾಲ್ಡ್ ವಿರುದ್ಧ ಕೇಸ್, ಸ್ನಾಕ್ಸ್ ಘಟಕ ಸೀಜ್

    ದೇವನಹಳ್ಳಿಯಲ್ಲಿ ದೇಶದ ಮೊದಲ ಕಾಲಿನ್ಸ್ ಏರೋಸ್ಪೇಸ್ ಎಂ.ಆರ್.ಒ ಘಟಕಕ್ಕೆ ಸಚಿವ ಎಂ.ಬಿ. ಪಾಟೀಲ ಭೂಮಿಪೂಜೆ: 2,100 ನೇರ ಉದ್ಯೋಗ ಸೃಷ್ಟಿ

  • Bengaluru Focus
    ಲೋಕಾಯುಕ್ತ ಕಚೇರಿಯ ಸಾಂದರ್ಭಿಕ ಚಿತ್ರ

    ಲೋಕಾಯುಕ್ತ ಕಾರ್ಯವೈಖರಿ ಬಗ್ಗೆ ಆಧಾರರಹಿತ ಟೀಕೆ: ಖಾಸಗಿ ಟಿವಿ ಚಾನಲ್ ಮುಖ್ಯಸ್ಥರಿಗೆ ನೋಟಿಸ್

    ಚಿನ್ನದ ಬೆಲೆ ಕುಸಿತದ ಹಿಂದೆ ‘ಕಲಬೆರಕೆ’ ಕರಿನೆರಳು: ಮೈಮರೆತರೆ ಬಂಗಾರದ ಬದಲು ‘ರೀನಿಯಂ-ಇರಿಡಿಯಂ’ ಗ್ಯಾರಂಟಿ

    ಬೆಂಗಳೂರು: ಬೆಳ್ಳಂಬೆಳಗ್ಗೆ ರೌಡಿಗಳಿಗೆ ಖಾಕಿ ಶಾಕ್; ಪೂರ್ವ ಆಯುಕ್ತ ಡಾ. ಹರ್ಷ ಖಡಕ್ ವಾರ್ನಿಂಗ್

    BIG NEWS | ಹೆಬ್ಬಾಳ ಸುರಂಗ ರಸ್ತೆ ಯೋಜನೆ ಕೈಬಿಡಿ: ರಾಹುಲ್ ಗಾಂಧಿಗೆ ಹಿರಿಯ ಪರಿಸರವಾದಿ ಡಾ. ಎ.ಎನ್. ಯಲ್ಲಪ್ಪ ರೆಡ್ಡಿ ಪತ್ರ

    GBA Head Office Image

    ಜಿಬಿಎ ವ್ಯಾಪ್ತಿಯಲ್ಲಿ ಪ್ರತಿ ಶನಿವಾರ ‘ಪ್ರಜಾ ಸೇವಾ ಅಭಿಯಾನ ಜನಸಭೆ’: ಸ್ಥಳದಲ್ಲೇ ಸಮಸ್ಯೆಗಳಿಗೆ ಪರಿಹಾರ

    ಭೂಗ್ಯಾರಂಟಿ ಇ-ಸ್ವತ್ತು ಅಭಿಯಾನಕ್ಕೆ ಚಾಲನೆ: ವರ್ಷಾಂತ್ಯದೊಳಗೆ 8 ಲಕ್ಷ ಗ್ರಾಮೀಣ ಆಸ್ತಿಗೆ ಇ-ಸ್ವತ್ತು

    ದೇವನಹಳ್ಳಿಯಲ್ಲಿ ದೇಶದ ಮೊದಲ ಕಾಲಿನ್ಸ್ ಏರೋಸ್ಪೇಸ್ ಎಂ.ಆರ್.ಒ ಘಟಕಕ್ಕೆ ಸಚಿವ ಎಂ.ಬಿ. ಪಾಟೀಲ ಭೂಮಿಪೂಜೆ: 2,100 ನೇರ ಉದ್ಯೋಗ ಸೃಷ್ಟಿ

  • Public interest
  • BW Special
  • Life Style
  • Photo Gallery
  • Video
No Result
View All Result

ಕಾರ್ಯಕ್ರಮವೊಂದರಲ್ಲಿ ಸಂಸ್ಥೆಯ ಘನತೆಗೆ ಧಕ್ಕೆ ತರುವ ಹೇಳಿಕೆ ಪ್ರಸಾರ ಹಿನ್ನೆಲೆ; ನವೆಂಬರ್ 30ರಂದು ಖುದ್ದು ಹಾಜರಾಗಿ ವಿವರಣೆ ನೀಡಲು ಸೂಚನೆ

by Bengaluru Wire Desk
November 23, 2026
in Bengaluru Focus, News Wire, Public interest
Reading Time: 1 min read
0
ಲೋಕಾಯುಕ್ತ ಕಚೇರಿಯ ಸಾಂದರ್ಭಿಕ ಚಿತ್ರ

ಲೋಕಾಯುಕ್ತ ಕಚೇರಿಯ ಸಾಂದರ್ಭಿಕ ಚಿತ್ರ

ಬೆಂಗಳೂರು, ನ.23 www.bengaluruwire.com: ಕರ್ನಾಟಕ ಲೋಕಾಯುಕ್ತ ಸಂಸ್ಥೆಯ ಕಾರ್ಯವೈಖರಿ ಹಾಗೂ ದಾಳಿಗಳ ಕುರಿತು ಆಧಾರರಹಿತ ಅಂಕಿ-ಅಂಶಗಳನ್ನು ಉಲ್ಲೇಖಿಸಿ, ಸಂಸ್ಥೆಯ ಘನತೆಗೆ ಧಕ್ಕೆ ತರುವಂತಹ ಹೇಳಿಕೆಗಳನ್ನು ಪ್ರಸಾರ ಮಾಡಿದ ಹಿನ್ನೆಲೆಯಲ್ಲಿ ಖಾಸಗಿ ಟಿವಿ ಚಾನಲ್ ಮುಖ್ಯಸ್ಥರು ಹಾಗೂ ವರದಿಗಾರರಿಗೆ ಲೋಕಾಯುಕ್ತ ಸಂಸ್ಥೆ ನೋಟಿಸ್ ಜಾರಿಗೊಳಿಸಲು ಮುಂದಾಗಿದೆ. 

ನವೆಂಬರ್ 18ರಂದು ರಾತ್ರಿ 9 ಗಂಟೆಗೆ ಪ್ರಸಾರವಾದ ಸುದ್ದಿ ಕಾರ್ಯಕ್ರಮವೊಂದರಲ್ಲಿ ಸಂಸ್ಥೆಯ ಕುರಿತು ತಪ್ಪು ಅಭಿಪ್ರಾಯ ಮೂಡಿಸುವ ರೀತಿಯಲ್ಲಿ ಟೀಕೆ ಮಾಡಲಾಗಿತ್ತು ಎಂದು ಲೋಕಾಯುಕ್ತ ಪ್ರಕಟಣೆ ತಿಳಿಸಿದೆ.

“ಲೋಕಾಯುಕ್ತ ಸಂಸ್ಥೆಯು ಅನುಪಯುಕ್ತವಾಗಿದೆ, ಅದರ ಚಟುವಟಿಕೆಗಳಿಂದ ಪರಿಣಾಮಕಾರಿ ಫಲಿತಾಂಶ ದೊರೆಯುತ್ತಿಲ್ಲ ಮತ್ತು ದಾಳಿಗಳ ಮೂಲಕ ಕೇವಲ ಪ್ರಚಾರ ಪಡೆಯಲಾಗುತ್ತಿದೆ ಎಂಬರ್ಥ ಬರುವಂತೆ ಕಾರ್ಯಕ್ರಮದಲ್ಲಿ ಅಪಹಾಸ್ಯ ಮಾಡಲಾಗಿತ್ತು. ಸಂಸ್ಥೆಯ ಅಧಿಕೃತ ಮಾಹಿತಿ ಅಥವಾ ಅಂಕಿ-ಅಂಶಗಳನ್ನು ಪರಿಶೀಲಿಸದೆ ಏಕಪಕ್ಷೀಯವಾಗಿ ನೀಡಿರುವ ಈ ಹೇಳಿಕೆಗಳನ್ನು ಲೋಕಾಯುಕ್ತ ಸಂಸ್ಥೆ ಗಂಭೀರವಾಗಿ ಪರಿಗಣಿಸಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಲೋಕಾಯುಕ್ತ ಕಾಯ್ದೆ, 1984ರ ಕಲಂ 17 ಹಾಗೂ 17-ಎ ಅಡಿಯಲ್ಲಿ ಮುಂದಿನ ಕಾನೂನು ಕ್ರಮದ ಬಗ್ಗೆ ಪರಿಶೀಲಿಸಲು ವಿವರಣೆ ಕೇಳಲಾಗಿದೆ. ಅದರಂತೆ, ನವೆಂಬರ್ 30ರಂದು ಮಧ್ಯಾಹ್ನ 3.30 ಗಂಟೆಗೆ ಲೋಕಾಯುಕ್ತರ ಮುಂದೆ ಖುದ್ದಾಗಿ ಹಾಜರಾಗಿ ಆಕ್ಷೇಪಾರ್ಹ ಹೇಳಿಕೆಗಳ ಕುರಿತು ಸ್ಪಷ್ಟನೆ ನೀಡುವಂತೆ ಸೂಚಿಸಿ ನೋಟಿಸ್ ನೀಡಲು ಕ್ರಮ ಕೈಗೊಳ್ಳಲಾಗಿದೆ”.

ದಾಳಿ ಹಾಗೂ ಶಿಕ್ಷೆಯ ಪ್ರಮಾಣದ ಅಧಿಕೃತ ಅಂಕಿ-ಅಂಶಗಳು: ಸಂಸ್ಥೆಯ ಕಾರ್ಯಕ್ಷಮತೆಯ ಬಗ್ಗೆ ಎದ್ದಿರುವ ಟೀಕೆಗಳಿಗೆ ಉತ್ತರವಾಗಿ ಲೋಕಾಯುಕ್ತವು 10.09.2022ರಿಂದ 15.11.2026ರವರೆಗಿನ ಅಧಿಕೃತ ಅಂಕಿ-ಅಂಶಗಳನ್ನು ಬಿಡುಗಡೆ ಮಾಡಿದೆ. ಈ ಅವಧಿಯಲ್ಲಿ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ 322 ದಾಳಿ ಪ್ರಕರಣಗಳು, 976 ಟ್ರ್ಯಾಪ್ ಪ್ರಕರಣಗಳು ಹಾಗೂ 138 ಇತರೆ ಪ್ರಕರಣಗಳು ದಾಖಲಾಗಿವೆ. ಅಲ್ಲದೆ, ರದ್ದುಗೊಂಡ ಭ್ರಷ್ಟಾಚಾರ ನಿಗ್ರಹ ದಳದಿಂದ (ACB) 2,159 ಪ್ರಕರಣಗಳು ಸಂಸ್ಥೆಗೆ ವರ್ಗಾವಣೆಯಾಗಿವೆ. ಈ ಅವಧಿಯಲ್ಲಿ ಒಟ್ಟು 952 ಪ್ರಕರಣಗಳಲ್ಲಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಲಾಗಿದ್ದು, ವಿಚಾರಣೆ ಮುಕ್ತಾಯಗೊಂಡ 697 ಪ್ರಕರಣಗಳ ಪೈಕಿ 153 ಪ್ರಕರಣಗಳಲ್ಲಿ ಆರೋಪಿತರಿಗೆ ಶಿಕ್ಷೆಯಾಗಿದೆ.

ದೂರುಗಳ ವಿಲೇವಾರಿ ಮತ್ತು ಇಲಾಖಾ ವಿಚಾರಣೆ ವಿವರ: ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ಅವರು ಲೋಕಾಯುಕ್ತರಾಗಿ ಅಧಿಕಾರ ವಹಿಸಿಕೊಂಡ 2022ರ ಜೂ.15ರಿಂದ 2026ರ ನ.15ರವರೆಗೆ ಕರ್ನಾಟಕ ಲೋಕಾಯುಕ್ತ ಕಾಯ್ದೆಯಡಿ ಒಟ್ಟು 46,298 ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ 29,242 ಪ್ರಕರಣಗಳ ತನಿಖೆಯನ್ನು ಪೂರ್ಣಗೊಳಿಸಿ ಮುಕ್ತಾಯಗೊಳಿಸಲಾಗಿದೆ. 

ಇದೇ ಅವಧಿಯಲ್ಲಿ 1,115 ಇಲಾಖಾ ವಿಚಾರಣಾ ಪ್ರಕರಣಗಳು ದಾಖಲಾಗಿದ್ದು, ಒಟ್ಟು 2,052 ಇಲಾಖಾ ವಿಚಾರಣಾ ಪ್ರಕರಣಗಳಲ್ಲಿ ಅಂತಿಮ ವರದಿಗಳನ್ನು ಸಕ್ಷಮ ಪ್ರಾಧಿಕಾರಕ್ಕೆ ಸಲ್ಲಿಸಲಾಗಿದೆ. ಇತರೆ ವಿಭಾಗಗಳಿಗೆ ಸಂಬಂಧಿಸಿದಂತೆ 22,097 ಪ್ರಕರಣಗಳು ದಾಖಲಾಗಿದ್ದು, ವಿವಿಧ ವರ್ಗಗಳ ಒಟ್ಟು 14,160 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ.

ಸಾರ್ವಜನಿಕ ಹಿತಾಸಕ್ತಿ ಕಾರ್ಯಗಳು: ಭ್ರಷ್ಟಾಚಾರ ನಿಯಂತ್ರಣಕ್ಕೆ ಮಾತ್ರ ಸೀಮಿತವಾಗದೆ, ಕೆರೆಗಳ ಸಂರಕ್ಷಣೆ ಮತ್ತು ಒತ್ತುವರಿ ತೆರವು, ಕಸ ವಿಲೇವಾರಿ, ಪಡಿತರ ವ್ಯವಸ್ಥೆಯ ಅವ್ಯವಹಾರ, ಕಂದಾಯ ಇಲಾಖೆ ಲೋಪಗಳು, ಬೀದಿ ನಾಯಿಗಳ ಸಮಸ್ಯೆ, ಸಾರಿಗೆ ಇಲಾಖೆ, ಉಪನೋಂದಣಾಧಿಕಾರಿ ಹಾಗೂ ತಹಶೀಲ್ದಾರ್ ಕಚೇರಿಗಳು, ವಿದ್ಯಾರ್ಥಿ ನಿಲಯಗಳು ಮತ್ತು ಸರ್ಕಾರಿ ಶಾಲೆಗಳ ಕಾರ್ಯನಿರ್ವಹಣೆಯ ಮೇಲ್ವಿಚಾರಣೆ ನಡೆಸುವ ಮೂಲಕ ಸಾರ್ವಜನಿಕ ಹಿತಾಸಕ್ತಿ ಕಾಪಾಡಲಾಗುತ್ತಿದೆ. ವಾಸ್ತವಾಂಶ ಮತ್ತು ನಿಖರ ಮಾಹಿತಿಯ ಆಧಾರದ ಮೇಲೆ ಮಾಡುವ ರಚನಾತ್ಮಕ ಟೀಕೆಗಳನ್ನು ಸಂಸ್ಥೆ ಸದಾ ಸ್ವಾಗತಿಸುತ್ತದೆ ಎಂದು ಲೋಕಾಯುಕ್ತ ಸಂಸ್ಥೆಯು ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ.

Sharing is Caring

  • Share on WhatsApp (Opens in new window) WhatsApp
  • Print (Opens in new window) Print
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Share on LinkedIn (Opens in new window) LinkedIn

Like this:

Like Loading…
WhatsApp Join our WhatsApp Channel
Previous Post

ಚಿನ್ನದ ಬೆಲೆ ಕುಸಿತದ ಹಿಂದೆ ‘ಕಲಬೆರಕೆ’ ಕರಿನೆರಳು: ಮೈಮರೆತರೆ ಬಂಗಾರದ ಬದಲು ‘ರೀನಿಯಂ-ಇರಿಡಿಯಂ’ ಗ್ಯಾರಂಟಿ

Please login to join discussion

Like Us on Facebook

Recent News

ಲೋಕಾಯುಕ್ತ ಕಚೇರಿಯ ಸಾಂದರ್ಭಿಕ ಚಿತ್ರ

ಲೋಕಾಯುಕ್ತ ಕಾರ್ಯವೈಖರಿ ಬಗ್ಗೆ ಆಧಾರರಹಿತ ಟೀಕೆ: ಖಾಸಗಿ ಟಿವಿ ಚಾನಲ್ ಮುಖ್ಯಸ್ಥರಿಗೆ ನೋಟಿಸ್

November 23, 2026

ಚಿನ್ನದ ಬೆಲೆ ಕುಸಿತದ ಹಿಂದೆ ‘ಕಲಬೆರಕೆ’ ಕರಿನೆರಳು: ಮೈಮರೆತರೆ ಬಂಗಾರದ ಬದಲು ‘ರೀನಿಯಂ-ಇರಿಡಿಯಂ’ ಗ್ಯಾರಂಟಿ

November 23, 2026
Bengaluru Wire, Kannada News, latest News in Kannada

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video
ಲೋಕಾಯುಕ್ತ ಕಚೇರಿಯ ಸಾಂದರ್ಭಿಕ ಚಿತ್ರ

ಲೋಕಾಯುಕ್ತ ಕಾರ್ಯವೈಖರಿ ಬಗ್ಗೆ ಆಧಾರರಹಿತ ಟೀಕೆ: ಖಾಸಗಿ ಟಿವಿ ಚಾನಲ್ ಮುಖ್ಯಸ್ಥರಿಗೆ ನೋಟಿಸ್

November 23, 2026

ಚಿನ್ನದ ಬೆಲೆ ಕುಸಿತದ ಹಿಂದೆ ‘ಕಲಬೆರಕೆ’ ಕರಿನೆರಳು: ಮೈಮರೆತರೆ ಬಂಗಾರದ ಬದಲು ‘ರೀನಿಯಂ-ಇರಿಡಿಯಂ’ ಗ್ಯಾರಂಟಿ

November 23, 2026

ಬೆಂಗಳೂರು: ಬೆಳ್ಳಂಬೆಳಗ್ಗೆ ರೌಡಿಗಳಿಗೆ ಖಾಕಿ ಶಾಕ್; ಪೂರ್ವ ಆಯುಕ್ತ ಡಾ. ಹರ್ಷ ಖಡಕ್ ವಾರ್ನಿಂಗ್

November 22, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group
%d