Thursday, November 19, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ಮುಂದಿನ ಸಂಪುಟ ಸಭೆಯಲ್ಲಿ ರಾಜ್ಯದ ಪ್ರತ್ಯೇಕ ನಾಗರಿಕ ವಿಮಾನಯಾನ ನೀತಿಗೆ ಅಂಗೀಕಾರ: ಎಂ.ಬಿ. ಪಾಟೀಲ ಘೋಷಣೆ

    ಭೂಗ್ಯಾರಂಟಿ ಇ-ಸ್ವತ್ತು ಅಭಿಯಾನಕ್ಕೆ ಚಾಲನೆ: ವರ್ಷಾಂತ್ಯದೊಳಗೆ 8 ಲಕ್ಷ ಗ್ರಾಮೀಣ ಆಸ್ತಿಗೆ ಇ-ಸ್ವತ್ತು

    ಮಂಗಳೂರು: ಆಹಾರ ಸುರಕ್ಷತಾ ಇಲಾಖೆ ಭರ್ಜರಿ ದಾಳಿ; ಮ್ಯಾಕ್ ಡೊನಾಲ್ಡ್ ವಿರುದ್ಧ ಕೇಸ್, ಸ್ನಾಕ್ಸ್ ಘಟಕ ಸೀಜ್

    ದೇವನಹಳ್ಳಿಯಲ್ಲಿ ದೇಶದ ಮೊದಲ ಕಾಲಿನ್ಸ್ ಏರೋಸ್ಪೇಸ್ ಎಂ.ಆರ್.ಒ ಘಟಕಕ್ಕೆ ಸಚಿವ ಎಂ.ಬಿ. ಪಾಟೀಲ ಭೂಮಿಪೂಜೆ: 2,100 ನೇರ ಉದ್ಯೋಗ ಸೃಷ್ಟಿ

    ವಲಗೇರಹಳ್ಳಿ ಕೆರೆ ಮಾಲಿನ್ಯ: ಅಧಿಕಾರಿಗಳಿಗೆ ಲೋಕಾಯುಕ್ತರ ಚಾಟಿ; ಜಂಟಿ ಪರಿಶೀಲನೆಗೆ ಆದೇಶ

    ಪರಿಶಿಷ್ಟ ಪಂಗಡದ ಯುವಕರಿಗೆ ಫುಡ್ ಕಿಯೋಸ್ಕ್ ಆರಂಭಿಸಲು ಸರ್ಕಾರದಿಂದ ₹4 ಲಕ್ಷದವರೆಗೆ ಸಹಾಯಧನ: ಇಲ್ಲಿದೆ ಮಾಹಿತಿ

    ಬೆಂಗಳೂರು ಮೆಟ್ರೋ ಪಿಂಕ್ ಲೈನ್‌ಗೆ ಪ್ರಧಾನಿ ಮೋದಿ ಚಾಲನೆ; ಅಭಿವೃದ್ಧಿಯಲ್ಲಿ ಸಹಭಾಗಿತ್ವಕ್ಕೆ ಸಿಎಂ ಡಿಕೆಶಿ ಕರೆ

    ಶಿಕ್ಷಕರ ವರ್ಗಾವಣೆ ನಿಯಮಗಳಿಗೆ ತಿದ್ದುಪಡಿ: ರಾಜ್ಯಪತ್ರದಲ್ಲಿ ಕರಡು ಅಧಿಸೂಚನೆ ಪ್ರಕಟ, 15 ದಿನಗಳ ಒಳಗೆ ಆಕ್ಷೇಪಣೆಗೆ ಅವಕಾಶ

    ನಮ್ಮ ಮೆಟ್ರೋ ಪಿಂಕ್ ಮಾರ್ಗ ಉದ್ಘಾಟನೆಗೂ ಮುನ್ನ ರಾಜಕೀಯ ಜಟಾಪಟಿ: ವೆಚ್ಚದ ಲೆಕ್ಕ ಬಿಚ್ಚಿಟ್ಟ ರಾಮಲಿಂಗಾರೆಡ್ಡಿ, ಭಾಷಣ ಕಟ್ ಆಗಿದ್ದಕ್ಕೆ ಕೃಷ್ಣ ಬೈರೇಗೌಡ ಕಿಡಿ

  • Bengaluru Focus

    ಭೂಗ್ಯಾರಂಟಿ ಇ-ಸ್ವತ್ತು ಅಭಿಯಾನಕ್ಕೆ ಚಾಲನೆ: ವರ್ಷಾಂತ್ಯದೊಳಗೆ 8 ಲಕ್ಷ ಗ್ರಾಮೀಣ ಆಸ್ತಿಗೆ ಇ-ಸ್ವತ್ತು

    ದೇವನಹಳ್ಳಿಯಲ್ಲಿ ದೇಶದ ಮೊದಲ ಕಾಲಿನ್ಸ್ ಏರೋಸ್ಪೇಸ್ ಎಂ.ಆರ್.ಒ ಘಟಕಕ್ಕೆ ಸಚಿವ ಎಂ.ಬಿ. ಪಾಟೀಲ ಭೂಮಿಪೂಜೆ: 2,100 ನೇರ ಉದ್ಯೋಗ ಸೃಷ್ಟಿ

    GBA News | ಅಮಾನತು ಆದೇಶ ಹಿಂಪಡೆಯದಿದ್ದರೆ ಡಿ.1ರಿಂದ ಪಂಚಪಾಲಿಕೆ ಬಂದ್: ನೌಕರರ ಎಚ್ಚರಿಕೆ

    ವಲಗೇರಹಳ್ಳಿ ಕೆರೆ ಮಾಲಿನ್ಯ: ಅಧಿಕಾರಿಗಳಿಗೆ ಲೋಕಾಯುಕ್ತರ ಚಾಟಿ; ಜಂಟಿ ಪರಿಶೀಲನೆಗೆ ಆದೇಶ

    ಬೆಂಗಳೂರು-ಗೋವಾ ವಂದೇ ಭಾರತ್ ಎಕ್ಸ್‌ಪ್ರೆಸ್ ವಾಣಿಜ್ಯ ಸಂಚಾರ ಇಂದಿನಿಂದ ಆರಂಭ; ವೇಳಾಪಟ್ಟಿ, ನಿಲುಗಡೆ ಹಾಗೂ ಟಿಕೆಟ್ ದರದ ಸಂಪೂರ್ಣ ವಿವರ ಇಲ್ಲಿದೆ

    ನಮ್ಮ ಮೆಟ್ರೋ ಹಳದಿ ಮಾರ್ಗದ ಪ್ರಯಾಣಿಕರಿಗೆ ಗುಡ್ ನ್ಯೂಸ್: ನ.16ರಿಂದ ಹೆಚ್ಚುವರಿ ರೈಲು ಸಂಚಾರ, ಕಾಯುವ ಸಮಯ ಇನ್ನಷ್ಟು ಇಳಿಕೆ

    Environment News | ಹೆಬ್ಬಾಳ ಕೆರೆ ಉಳಿಸಿ: ಕೀಟಗಳ ವೇಷ ಧರಿಸಿ ಮಕ್ಕಳ ವಿನೂತನ ಜಾಗೃತಿ ಅಭಿಯಾನ

    ಬೆಂಗಳೂರು ಮೆಟ್ರೋ ಪಿಂಕ್ ಲೈನ್‌ಗೆ ಪ್ರಧಾನಿ ಮೋದಿ ಚಾಲನೆ; ಅಭಿವೃದ್ಧಿಯಲ್ಲಿ ಸಹಭಾಗಿತ್ವಕ್ಕೆ ಸಿಎಂ ಡಿಕೆಶಿ ಕರೆ

    ಶಿಕ್ಷಕರ ವರ್ಗಾವಣೆ ನಿಯಮಗಳಿಗೆ ತಿದ್ದುಪಡಿ: ರಾಜ್ಯಪತ್ರದಲ್ಲಿ ಕರಡು ಅಧಿಸೂಚನೆ ಪ್ರಕಟ, 15 ದಿನಗಳ ಒಳಗೆ ಆಕ್ಷೇಪಣೆಗೆ ಅವಕಾಶ

  • Public interest
  • BW Special
  • Life Style
  • Photo Gallery
  • Video
No Result
View All Result

ಉಡಾನ್ ಯೋಜನೆ ವೈಫಲ್ಯಕ್ಕೆ ಕೇಂದ್ರವೇ ಹೊಣೆ, ಎಚ್‌ಡಿಕೆ ಆರೋಪ ಆಧಾರರಹಿತ ಎಂದ ಮೂಲಸೌಕರ್ಯ ಸಚಿವರು

by Bengaluru Wire Desk
November 18, 2026
in News Wire, Public interest
Reading Time: 1 min read
0

ಬೆಂಗಳೂರು, ನ.18 www.bengaluruwire.com: ರಾಜ್ಯದಲ್ಲಿ ವೈಮಾನಿಕ ಮತ್ತು ಏರೋಸ್ಪೇಸ್ ಕ್ಷೇತ್ರದ ತ್ವರಿತ ಬೆಳವಣಿಗೆಗಾಗಿ, ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಕರ್ನಾಟಕದ ಪ್ರತ್ಯೇಕ ‘ನಾಗರಿಕ ವಿಮಾನಯಾನ ನೀತಿ’ಗೆ (Civil Aviation Policy) ಅಂಗೀಕಾರ ನೀಡಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಭೂತ ಸೌಕರ್ಯಗಳ ಸಚಿವ ಎಂ.ಬಿ. ಪಾಟೀಲ ಬುಧವಾರ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯದ ಹೊಸ ವಿಮಾನಯಾನ ನೀತಿ, ಶಿವಮೊಗ್ಗ ವಿಮಾನ ನಿಲ್ದಾಣದ ಸ್ಥಗಿತ, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಆರೋಪಗಳು ಹಾಗೂ ಸೆಮಿಕಂಡಕ್ಟರ್ ಹೂಡಿಕೆ ವಿಚಾರಗಳ ಕುರಿತು ಸಮಗ್ರವಾಗಿ ಪ್ರತಿಕ್ರಿಯಿಸಿದರು.

ವಿಮಾನ ನಿಲ್ದಾಣಗಳ ಬಳಕೆ ಹಾಗೂ ಎಂಆರ್‌ಒ (MRO) ವಲಯಕ್ಕೆ ಆದ್ಯತೆ:

ರಾಜ್ಯದಲ್ಲಿ ಸಾವಿರಾರು ಕೋಟಿ ರೂಪಾಯಿ ವೆಚ್ಚ ಮಾಡಿ ನಿರ್ಮಿಸಿರುವ ವಿಮಾನ ನಿಲ್ದಾಣಗಳು ನಿಷ್ಕ್ರಿಯವಾಗಿ ಉಳಿಯಬಾರದು. ಅವುಗಳ ಮೂಲಕ ಸಾರ್ವಜನಿಕರಿಗೆ ಮತ್ತು ಕೈಗಾರಿಕಾ ವಲಯಕ್ಕೆ ನಿರಂತರ ವಿಮಾನ ಸೇವೆಗಳು ದೊರೆಯಬೇಕು ಎಂಬುದು ಸರ್ಕಾರದ ಉದ್ದೇಶವಾಗಿದೆ ಎಂದರು. 

ಪ್ರಸ್ತುತ ವಿಮಾನಯಾನ ಕ್ಷೇತ್ರದಲ್ಲಿ ಎಂ.ಆರ್.ಒ (ನಿರ್ವಹಣೆ, ದುರಸ್ತಿ ಮತ್ತು ಕೂಲಂಕುಷ ಪರೀಕ್ಷೆ) ಸೇವೆಗಳಿಗೆ ಭಾರಿ ಬೇಡಿಕೆಯಿದೆ. ಹೀಗಾಗಿ ನೂತನ ನೀತಿಯಲ್ಲಿ ವಿಮಾನ ತಯಾರಿಕೆಯ ಜತೆಗೆ ಬಿಡಿಭಾಗಗಳ ಉತ್ಪಾದನೆ ಮತ್ತು ಸಂಪೂರ್ಣ ಪೂರೈಕೆ ಸರಪಳಿಯ (Supply Chain) ಬೆಳವಣಿಗೆಗೆ ವಿಶೇಷ ಆದ್ಯತೆ ನೀಡಲಾಗಿದೆ. ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೂ (GIM) ಮುನ್ನವೇ ‘ಪೂರೈಕೆದಾರರ ಸಮಾವೇಶ’ ನಡೆಸಲಾಗುವುದು ಎಂದು ಪಾಟೀಲ ವಿವರಿಸಿದರು.

ಫ್ರಾನ್ಸ್‌ನಲ್ಲಿ ಮತ್ತೊಂದು ಸುತ್ತಿನ ರೋಡ್-ಶೋ: ರಾಜ್ಯದಲ್ಲಿ ಈಗಾಗಲೇ ಕಾಲಿನ್ಸ್ ಏರೋಸ್ಪೇಸ್, ಡೈನಮ್ಯಾಟಿಕ್ಸ್, ಸಾಫ್ರಾನ್, ಏಕಸ್, ಬೆಲಾಟ್ರಿಕ್ಸ್‌ನಂತಹ ಪ್ರತಿಷ್ಠಿತ ವೈಮಾಂತರಿಕ್ಷ ಕಂಪನಿಗಳು ಕಾರ್ಯನಿರ್ವಹಿಸುತ್ತಿವೆ. ಫ್ರಾನ್ಸ್ ಸೇರಿದಂತೆ ಜಾಗತಿಕ ಮಟ್ಟದಲ್ಲಿ ರಾಜಕೀಯ ಪರಿಸ್ಥಿತಿ ಬದಲಾಗಿರುವ ಹಿನ್ನೆಲೆಯಲ್ಲಿ, ಹೂಡಿಕೆದಾರರ ಸಮಾವೇಶಕ್ಕೂ ಮೊದಲು ಅಥವಾ ನಂತರ ಫ್ರಾನ್ಸ್‌ನಲ್ಲಿ ಮತ್ತೊಂದು ಸುತ್ತಿನ ರೋಡ್-ಶೋ ನಡೆಸಿ ಹೆಚ್ಚಿನ ಬಂಡವಾಳ ಆಕರ್ಷಿಸಲಾಗುವುದು ಎಂದು ತಿಳಿಸಿದರು.

ಶಿವಮೊಗ್ಗ ಏರ್‌ಪೋರ್ಟ್: ಸಂಸದ ಬಿ.ವೈ. ರಾಘವೇಂದ್ರಗೆ ತಿರುಗೇಟು:

ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ವಿಮಾನ ಸೇವೆ ಸ್ಥಗಿತವಾಗಿರುವುದಕ್ಕೆ ರಾಜ್ಯ ಸರ್ಕಾರ ಹೊಣೆಯಲ್ಲ; ಕೇಂದ್ರ ಸರ್ಕಾರದ ದೋಷಪೂರಿತ ‘ಉಡಾನ್’ (UDAN) ನೀತಿಯೇ ಇದಕ್ಕೆ ನೇರ ಕಾರಣ ಎಂದು ಎಂ.ಬಿ. ಪಾಟೀಲ ಸ್ಪಷ್ಟಪಡಿಸಿದರು. 

“ನಮ್ಮ ವಿರುದ್ಧ ಪದೇಪದೆ ಆರೋಪ ಮಾಡುವ ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಅವರು ಈ ವಾಸ್ತವವನ್ನು ಅರ್ಥ ಮಾಡಿಕೊಳ್ಳಬೇಕು. ಉಡಾನ್ ಯೋಜನೆಯ ಅವಧಿಯನ್ನು 3 ವರ್ಷಗಳಿಂದ 5 ವರ್ಷಗಳಿಗೆ ವಿಸ್ತರಿಸಬೇಕು. ಇದಾದ ಬಳಿಕದ ಮುಂದಿನ 5 ವರ್ಷಗಳಿಗೆ ತಗಲುವ ವೆಚ್ಚದಲ್ಲಿ ಶೇ.50ರಷ್ಟನ್ನು ಭರಿಸಲು ರಾಜ್ಯ ಸರ್ಕಾರ ಸಿದ್ಧವಿದೆ. ರಾಘವೇಂದ್ರ ಅವರು ಈ ವಿಚಾರವನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ವಿಮಾನಯಾನ ಸಚಿವ ರಾಮಮೋಹನ್ ನಾಯ್ಡು ಅವರಿಗೆ ಮನದಟ್ಟು ಮಾಡಿಕೊಡಲಿ” ಎಂದು ಆಗ್ರಹಿಸಿದರು.

ಸಹಾಯ ಮಾಡಲು ಸಾಧ್ಯವಾಗದಿದ್ದರೆ ಎಚ್‌ಡಿಕೆ ಸುಮ್ಮನಿರಲಿ:

ರಾಜ್ಯದಲ್ಲಿ ಕೈಗಾರಿಕೆಗಳಿಗೆ ಹಿನ್ನಡೆಯಾಗುತ್ತಿದೆ ಎಂಬ ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಹೇಳಿಕೆ ಸಂಪೂರ್ಣ ಆಧಾರರಹಿತ ಎಂದು ಪಾಟೀಲ ಕಿಡಿಕಾರಿದರು. “ಕೇಂದ್ರ ಸಚಿವರಾಗಿ ಅವರಿಗೆ ರಾಜ್ಯಕ್ಕೆ ಸಹಾಯ ಮಾಡಲು ಸಾಧ್ಯವಾಗದಿದ್ದರೆ ಸುಮ್ಮನಾದರೂ ಇರಲಿ. ನಮ್ಮ ಕೈಗಾರಿಕಾ ನೀತಿಯ ನಿಯಮಾವಳಿ ಪ್ರಕಾರ ಶೇ.35 ರಿಂದ 40ರವರೆಗೆ ರಿಯಾಯಿತಿ ನೀಡಲು ಅವಕಾಶವಿದ್ದು, ಫಾಕ್ಸ್‌ಕಾನ್ ಕಂಪನಿಗೆ ಇದನ್ನು ನೀಡಿದ್ದೇವೆ. 

ಆದರೆ, ಲೆನ್ಸ್‌ಕಾರ್ಟ್‌ನಂತಹ ಕಂಪನಿ ತಾನು ಹೂಡಿಕೆ ಮಾಡುವ ಬಂಡವಾಳಕ್ಕಿಂತಲೂ ಹೆಚ್ಚಾಗಿ ಶೇ.120ರಷ್ಟು ಪ್ರೋತ್ಸಾಹಧನ ಕೇಳಿತ್ತು. ಅಷ್ಟೊಂದು ನೀಡಲು ಸಾಧ್ಯವಿಲ್ಲ. ಬೇರೆ ರಾಜ್ಯಗಳು ಶೇ.50-55ರಷ್ಟು ನೀಡಬಹುದು, ಆದರೆ ನಮಗೆ ಅಂತಹ ಅನಿವಾರ್ಯತೆ ಇಲ್ಲ” ಎಂದರು.

ಸೆಮಿಕಂಡಕ್ಟರ್ ಯೋಜನೆ ಹಾಗೂ ಬರ ಪರಿಹಾರದ ಪ್ರಸ್ತಾಪ:

 ಹಲವು ಸೆಮಿಕಂಡಕ್ಟರ್ ಕಂಪನಿಗಳು ಕರ್ನಾಟಕಕ್ಕೆ ಬರಲು ಆಸಕ್ತಿ ತೋರಿದ್ದವು. ಆದರೆ, ಕೇಂದ್ರ ಸರ್ಕಾರ ₹50 ಸಾವಿರ ಕೋಟಿ ಮತ್ತು ಗುಜರಾತ್ ಸರ್ಕಾರ ₹30 ಸಾವಿರ ಕೋಟಿ ಪ್ರೋತ್ಸಾಹ ಅನುದಾನ ನೀಡಿ ಆ ಕಂಪನಿಗಳನ್ನು ಗುಜರಾತ್‌ಗೆ ಕರೆದುಕೊಂಡು ಹೋದವು. 

ಇದರ ನಡುವೆಯೂ ಲ್ಯಾಮ್ ರೀಸರ್ಚ್ ಮತ್ತು ಅಪ್ಲೈಡ್ ಮೆಟೀರಿಯಲ್ಸ್‌ನಂತಹ ಜಾಗತಿಕ ಕಂಪನಿಗಳನ್ನು ನಾವು ರಾಜ್ಯಕ್ಕೆ ತಂದಿದ್ದೇವೆ. ಹೀರೋ ಕಂಪನಿಯ ವಿಚಾರದಲ್ಲಿ ಕುಮಾರಸ್ವಾಮಿ ಸುಳ್ಳು ಹೇಳಿ ಜನರ ದಾರಿ ತಪ್ಪಿಸಿದ್ದಾರೆ; ವಾಸ್ತವದಲ್ಲಿ ಆ ಕಂಪನಿಯವರು ಇವರನ್ನು ಭೇಟಿಯೇ ಆಗಿಲ್ಲ ಎಂದು ಪಾಟೀಲ ತಿರುಗೇಟು ನೀಡಿದರು. ಇದೇ ವೇಳೆ, ರಾಜ್ಯದಲ್ಲಿ ತೀವ್ರ ಬರಗಾಲವಿದ್ದು, ಕೇಂದ್ರ ಸರ್ಕಾರ ತಾರತಮ್ಯ ಮಾಡದೆ ತಕ್ಷಣವೇ ಬರ ಪರಿಹಾರ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

Sharing is Caring

  • Share on WhatsApp (Opens in new window) WhatsApp
  • Print (Opens in new window) Print
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Share on LinkedIn (Opens in new window) LinkedIn

Like this:

Like Loading…
WhatsApp Join our WhatsApp Channel
Previous Post

ಭೂಗ್ಯಾರಂಟಿ ಇ-ಸ್ವತ್ತು ಅಭಿಯಾನಕ್ಕೆ ಚಾಲನೆ: ವರ್ಷಾಂತ್ಯದೊಳಗೆ 8 ಲಕ್ಷ ಗ್ರಾಮೀಣ ಆಸ್ತಿಗೆ ಇ-ಸ್ವತ್ತು

Next Post

ರಾಜ್ಯ ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ: ಬೆಂಗಳೂರಿಗೆ ನೂತನ ಮುಖ್ಯ ಆಯುಕ್ತರಾಗಿ ಆರ್. ಹಿತೇಂದ್ರ ನೇಮಕ, 5 ವಲಯಗಳಿಗೆ ಪ್ರತ್ಯೇಕ ಕಮಿಷನರ್

Next Post

ರಾಜ್ಯ ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ: ಬೆಂಗಳೂರಿಗೆ ನೂತನ ಮುಖ್ಯ ಆಯುಕ್ತರಾಗಿ ಆರ್. ಹಿತೇಂದ್ರ ನೇಮಕ, 5 ವಲಯಗಳಿಗೆ ಪ್ರತ್ಯೇಕ ಕಮಿಷನರ್

Please login to join discussion

Like Us on Facebook

Recent News

ರಾಜ್ಯ ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ: ಬೆಂಗಳೂರಿಗೆ ನೂತನ ಮುಖ್ಯ ಆಯುಕ್ತರಾಗಿ ಆರ್. ಹಿತೇಂದ್ರ ನೇಮಕ, 5 ವಲಯಗಳಿಗೆ ಪ್ರತ್ಯೇಕ ಕಮಿಷನರ್

November 18, 2026

ಮುಂದಿನ ಸಂಪುಟ ಸಭೆಯಲ್ಲಿ ರಾಜ್ಯದ ಪ್ರತ್ಯೇಕ ನಾಗರಿಕ ವಿಮಾನಯಾನ ನೀತಿಗೆ ಅಂಗೀಕಾರ: ಎಂ.ಬಿ. ಪಾಟೀಲ ಘೋಷಣೆ

November 18, 2026
Bengaluru Wire, Kannada News, latest News in Kannada

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

ರಾಜ್ಯ ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ: ಬೆಂಗಳೂರಿಗೆ ನೂತನ ಮುಖ್ಯ ಆಯುಕ್ತರಾಗಿ ಆರ್. ಹಿತೇಂದ್ರ ನೇಮಕ, 5 ವಲಯಗಳಿಗೆ ಪ್ರತ್ಯೇಕ ಕಮಿಷನರ್

November 18, 2026

ಮುಂದಿನ ಸಂಪುಟ ಸಭೆಯಲ್ಲಿ ರಾಜ್ಯದ ಪ್ರತ್ಯೇಕ ನಾಗರಿಕ ವಿಮಾನಯಾನ ನೀತಿಗೆ ಅಂಗೀಕಾರ: ಎಂ.ಬಿ. ಪಾಟೀಲ ಘೋಷಣೆ

November 18, 2026

ಭೂಗ್ಯಾರಂಟಿ ಇ-ಸ್ವತ್ತು ಅಭಿಯಾನಕ್ಕೆ ಚಾಲನೆ: ವರ್ಷಾಂತ್ಯದೊಳಗೆ 8 ಲಕ್ಷ ಗ್ರಾಮೀಣ ಆಸ್ತಿಗೆ ಇ-ಸ್ವತ್ತು

November 18, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group
%d