Tuesday, June 23, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ವಿಧಾನಪರಿಷತ್ ಚುನಾವಣೆ: ಅಡ್ಡ ಮತದಾನ ಮಾಡಿದ ಶಾಸಕರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾದ ಹೈಕಮಾಂಡ್

    ಬೆಂಗಳೂರು: ಯಂಟಗಾನಹಳ್ಳಿ ಕೆರೆಗೆ ವೈದ್ಯಕೀಯ ತ್ಯಾಜ್ಯ ಸುರಿದ ಖಾಸಗಿ ಕ್ಲಿನಿಕ್ ವೈದ್ಯನ ವಿರುದ್ಧ ಎಫ್.ಐ.ಆರ್. ದಾಖಲು

    Science News | ​ಮುಂಗಾರಿನಾಟ: ಮಹಾರಾಷ್ಟ್ರದಲ್ಲಿ ಒಣಹವೆ, ಆದರೆ ರಾಜಸ್ಥಾನದ ಮರುಭೂಮಿಯಲ್ಲಿ ಭಾರಿ ಮಳೆ

    ಸೈಬರ್ ಕ್ರೈಮ್ ಕುರಿತ ಸಾಂದರ್ಭಿಕ ಚಿತ್ರ

    ಸೈಬರ್ ವಂಚಕರಿಗೆ ಸಿಂಹಸ್ವಪ್ನವಾದ ಕರ್ನಾಟಕ ಪೊಲೀಸ್: ಕೋಟ್ಯಂತರ ರೂಪಾಯಿ ಉಳಿಸಲು ಬ್ಯಾಂಕ್ ಖಾತೆಗಳು ಬ್ಲಾಕ್

    ಟಾಟಾ ಪವರ್ ಅರ್ಜಿಗಳು ಸಂಪೂರ್ಣ ಆಂಗ್ಲಮಯ: ಕನ್ನಡಿಗರ ಭಾಷಾ ಹಕ್ಕಿಗೆ ಧಕ್ಕೆ,  ಡಾ. ಪುರುಷೋತ್ತಮ ಬಿಳಿಮಲೆ ಕೆಇಆರ್‌ಸಿಗೆ ಪತ್ರ

    Vidhana Soudha

    IAS Transfer | ರಾಜ್ಯದಲ್ಲಿ 13 ಐಎಎಸ್ ಅಧಿಕಾರಿಗಳ ವರ್ಗಾವಣೆ

    Viral Video | 25 ಸಾವಿರದ ಆಫೀಸ್ ಕೆಲಸಕ್ಕೆ ಗುಡ್‌ಬೈ ಹೇಳಿ ಕ್ಯಾಬ್ ಡ್ರೈವರ್ ಆದ ಯುವಕ; ಈಗ ಈತನ ತಿಂಗಳ ಗಳಿಕೆ 1 ಲಕ್ಷ ರೂ.!

    ಎನ್‌ಎಸ್‌ಇಯಿಂದ ₹30,000 ಕೋಟಿ ಮೊತ್ತದ ಐಪಿಒ ಸಲ್ಲಿಕೆ: ಇದು ಭಾರತದ ಅತಿದೊಡ್ಡ ಸಾರ್ವಜನಿಕ ಷೇರು ವಿತರಣೆ

    ಕರ್ನಾಟಕದಲ್ಲಿ ತೀವ್ರ ಜಲಕ್ಷಾಮ: ಶೇ. 21ರಷ್ಟು ಮಳೆ ಕೊರತೆ, 14 ಪ್ರಮುಖ ಜಲಾಶಯಗಳಲ್ಲಿ ಕೇವಲ 23% ನೀರು ಸಂಗ್ರಹ

  • Bengaluru Focus

    15 ಲಕ್ಷ ಸಸಿ ನೆಡುವ ಬೃಹತ್ ಅಭಿಯಾನ: ಹಸಿರು ಬೆಂಗಳೂರು ನಿರ್ಮಾಣಕ್ಕೆ ಮೆಗಾ ಡ್ರೈವ್

    ಬೆಂಗಳೂರು: ಯಂಟಗಾನಹಳ್ಳಿ ಕೆರೆಗೆ ವೈದ್ಯಕೀಯ ತ್ಯಾಜ್ಯ ಸುರಿದ ಖಾಸಗಿ ಕ್ಲಿನಿಕ್ ವೈದ್ಯನ ವಿರುದ್ಧ ಎಫ್.ಐ.ಆರ್. ದಾಖಲು

    GBA Head Office Image

    GBA News | ಬೆಂಗಳೂರಿನಲ್ಲಿ ಇ-ಖಾತಾ ಸೇವೆ ಮತ್ತಷ್ಟು ಸುಲಭ: 6 ವಾರಗಳಲ್ಲಿ 6,169 ಅರ್ಜಿಗಳ ಯಶಸ್ವಿ ವಿಲೇವಾರಿ

    ಬಿಡದಿ ಟೌನ್‌ಶಿಪ್ ವಿರೋಧಿ ರೈತರ ಹೋರಾಟ 450 ದಿನಕ್ಕೆ: ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ  ನಾಳೆ ಬೃಹತ್ ಪಾದಯಾತ್ರೆ 

    Defence News | ಬೆಂಗಳೂರು: ಎಎಸ್‌ಸಿ ಸೆಂಟರ್‌ನಲ್ಲಿ 8ನೇ ಬ್ಯಾಚ್‌ನ ಅಗ್ನಿವೀರರ ನಿರ್ಗಮನ ಪಥಸಂಚಲನ ಸಂಪನ್ನ

    ಸೈಬರ್ ಕ್ರೈಮ್ ಕುರಿತ ಸಾಂದರ್ಭಿಕ ಚಿತ್ರ

    ಸೈಬರ್ ವಂಚಕರಿಗೆ ಸಿಂಹಸ್ವಪ್ನವಾದ ಕರ್ನಾಟಕ ಪೊಲೀಸ್: ಕೋಟ್ಯಂತರ ರೂಪಾಯಿ ಉಳಿಸಲು ಬ್ಯಾಂಕ್ ಖಾತೆಗಳು ಬ್ಲಾಕ್

    BMTC News | ಕಿಲ್ಲರ್ ಬಿಎಂಟಿಸಿಗೆ ಮತ್ತೊಂದು ಬಲಿ: ಮಂಗನಹಳ್ಳಿ ಕ್ರಾಸ್ ಬಳಿ ಎಲೆಕ್ಟ್ರಿಕ್ ಬಸ್ ಹರಿದು ಪಾದಚಾರಿ ಸಾವು: ರಸ್ತೆ ಉಬ್ಬು ಅಳವಡಿಕೆಗೆ ಆಗ್ರಹ

    BWSSB News | ವರ್ತೂರು ಎಸ್‌ಟಿಪಿ ದುರ್ಘಟನೆ: 40 ಅಡಿ ಆಳದ ಟ್ಯಾಂಕ್‌ಗೆ ಬಿದ್ದು ಇಬ್ಬರು ಕಾರ್ಮಿಕರು ಸಾವು, ಕಾರ್ಯಾಚರಣೆಗೆ ಎನ್‌ಡಿಆರ್‌ಎಫ್ ಸಾಥ್

    Vidhana Soudha

    IAS Transfer | ರಾಜ್ಯದಲ್ಲಿ 13 ಐಎಎಸ್ ಅಧಿಕಾರಿಗಳ ವರ್ಗಾವಣೆ

  • Public interest
  • BW Special
  • Life Style
  • Photo Gallery
  • Video
No Result
View All Result

Home Bengaluru Focus

ಬೃಹತ್ ಪ್ರತಿಭಟನೆಗೆ ಸಜ್ಜಾದ ರಾಜ್ಯದ 10 ಮಹಾನಗರ ಪಾಲಿಕೆ ನೌಕರರು : ಜುಲೈ 8 ರಂದು ಸಾಮೂಹಿಕ ರಜೆ

ಹಲವು ಸಂಘಟನೆಗಳಿಂದ ಬೆಂಬಲ; ಖಾಲಿ ಹುದ್ದೆ ಭರ್ತಿ ಸೇರಿ 12ಕ್ಕೂ ಹೆಚ್ಚು ಬೇಡಿಕೆಗಳ ಈಡೇರಿಕೆಗೆ ಆಗ್ರಹ | ಕಚೇರಿಗೆ ಬರದಂತೆ ಉಚಿತ ಪ್ರವಾಸ, ಸಿನಿಮಾ ಟಿಕೆಟ್ ಆಫರ್

by Bengaluru Wire Desk
July 7, 2025
in Bengaluru Focus, News Wire
Reading Time: 1 min read
0

ಬೆಂಗಳೂರು, ಜು.7 www.bengaluruwire.com : ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಕರ್ನಾಟಕ ರಾಜ್ಯ ಮಹಾನಗರ ಪಾಲಿಕೆ ನೌಕರರ ಸಂಘದ 10 ಮಹಾನಗರ ಪಾಲಿಕೆಗಳ ಅಧಿಕಾರಿ ಮತ್ತು ನೌಕರರು ಜುಲೈ 8 ರಂದು ಬೃಹತ್ ಪ್ರತಿಭಟನೆಗೆ ಸಿದ್ಧತೆ ನಡೆಸಿದ್ದಾರೆ.

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ, ಬಿಬಿಎಂಪಿ ಅಧಿಕಾರಿಗಳು ಮತ್ತು ನೌಕರರು ಸಾಮೂಹಿಕ ರಜೆ ಹಾಕಿ ಫ್ರೀಡಂ ಪಾರ್ಕ್‌ನಲ್ಲಿ ನಡೆಯುವ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಕರ್ನಾಟಕ ರಾಜ್ಯ ಮಹಾನಗರ ಪಾಲಿಕೆ ನೌಕರರ ಸಂಘಗಳ ಪರಿಷತ್ತಿನ ರಾಜ್ಯಾಧ್ಯಕ್ಷ ಎ.ಅಮೃತ್ ರಾಜ್ ತಿಳಿಸಿದ್ದಾರೆ.

ನಗರದ ಫ್ರೀಡಂ ಪಾರ್ಕ್‌ನಲ್ಲಿ ನಡೆಯಲಿರುವ ಈ ಹೋರಾಟದಲ್ಲಿ ಬಿಬಿಎಂಪಿ ಅಧಿಕಾರಿ, ನೌಕರರ ಜೊತೆಗೆ ರಾಜ್ಯದ ಇತರ ಮಹಾನಗರ ಪಾಲಿಕೆ ನೌಕರರೂ ಪಾಲ್ಗೊಳ್ಳಲಿದ್ದಾರೆ. ಈ ಪ್ರತಿಭಟನೆಗೆ ಕರ್ನಾಟಕ ರಾಜ್ಯ ನಗರ ಪಾಲಿಕೆ, ನಗರಸಭೆ, ಪುರಸಭೆ ಪೌರಕಾರ್ಮಿಕರ ಮಹಾಸಂಘ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗಳ ಸ್ವಚ್ಛತಾ ಕಾರ್ಮಿಕರ ಮಹಾಸಂಘವು ಸಂಪೂರ್ಣ ಬೆಂಬಲ ನೀಡಿದೆ. 

“ಕಳೆದ ಹಲವು ದಿನಗಳಿಂದ 12ಕ್ಕೂ ಹೆಚ್ಚು ಬೇಡಿಕೆಗಳನ್ನು ಈಡೇರಿಸುವಂತೆ ಹಲವಾರು ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ, ಈಗ ಹೋರಾಟಕ್ಕೆ ಇಳಿಯಲು ತೀರ್ಮಾನಿಸಲಾಗಿದೆ. ನಾಳೆ ನಮ್ಮ ಬೇಡಿಕೆಗಳ ಈಡೇರಿಕೆ ಸರ್ಕಾರದ ವತಿಯಿಂದ ಯಾವುದೇ ಪ್ರತಿಕ್ರಿಯೆ ಲಭ್ಯವಾಗದಿದ್ದರೆ, ನಮ್ಮ ಪ್ರತಿಭಟನೆ ಮುಂದುವರೆಯಲಿದೆ” ಎಂದು ಅಮೃತ್ ರಾಜ್ ಸ್ಪಷ್ಟಪಡಿಸಿದ್ದಾರೆ. 

ರಾಜ್ಯದ ವಿವಿಧ 10 ಮಹಾನಗರ ಪಾಲಿಕೆಗಳ ಕಚೇರಿ ಎದುರು ಪ್ರತಿಭಟನೆಗೆ ಪೂರ್ವಸಿದ್ಧತೆ ಭರದಿಂದ ಸಾಗಿದೆ.

ನಾಳೆ ಪ್ರತಿ ಮಹಾನಗರ ಪಾಲಿಕೆಗಳ ಎದುರು ಕರ್ತವ್ಯಕ್ಕೆ ಹಾಜರಾಗದೆ ಅಧಿಕಾರಿ ಮತ್ತು ನೌಕರರು ತಮಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಪ್ರತಿಭಟನೆ ನಡೆಸಲಿದ್ದಾರೆ. ಇನ್ನು ಬೆಂಗಳೂರಿನ ಫ್ರೀಡಮ್ ಪಾರ್ಕಿನಲ್ಲಿ ಮತ್ತೊಂದು ಸಂಘಟನೆಗೂ ಧರಣಿ ನಡೆಸಲು ಅವಕಾಶ ನೀಡಿರುವುದರಿಂದ 2 ರಿಂದ 3 ಸಾವಿರ ನಮ್ಮ ಪಾಲಿಕೆ ಅಧಿಕಾರಿ ಹಾಗೂ ನೌಕರರು ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ. ಇದಕ್ಕಾಗಿ ಎಲ್ಲಾ ರೀತಿಯ ಸಿದ್ಧತೆಗಳು ಅಂತಿಮ ಹಂತದಲ್ಲಿದೆ ಎಂದರು.

ಪ್ರಮುಖ ಬೇಡಿಕೆಗಳೇನು? :

ಪ್ರತಿಭಟನಾಕಾರರ ಪ್ರಮುಖ ಬೇಡಿಕೆಗಳು ಈ ಕೆಳಗಿನಂತಿವೆ:

 * 6000 ಖಾಲಿ ಹುದ್ದೆಗಳ ಭರ್ತಿ: ಸುಮಾರು 6000 ಖಾಲಿ ಇರುವ ಹುದ್ದೆಗಳನ್ನು ತಕ್ಷಣವೇ ಭರ್ತಿ ಮಾಡಿಕೊಳ್ಳಬೇಕು.

 * ಇಲಾಖಾ ವಿಚಾರಣೆ ಕೈಬಿಡುವಿಕೆ: ಸಿಬ್ಬಂದಿಯ ಮೇಲೆ ಅಸಮರ್ಪಕ ಕಾರಣಗಳಿಗಾಗಿ ನಡೆಸುತ್ತಿರುವ ಕಾನೂನುಬಾಹಿರ ಇಲಾಖಾ ವಿಚಾರಣೆಗಳನ್ನು ಕೈಬಿಡಬೇಕು.

 * ವಿಶೇಷ ಆಯುಕ್ತರ ನೇಮಕಾತಿ ನಿಲುಗಡೆ: ಯಾವುದೇ ವಲಯಕ್ಕೆ ವಿಶೇಷ ಆಯುಕ್ತರನ್ನು ನೇಮಿಸಬಾರದು.

 * ಎರವಲು ಸೇವೆ ಅಧಿಕಾರಿಗಳ ವಾಪಸಾತಿ: ಕಾನೂನುಬಾಹಿರವಾಗಿ ಎರವಲು ಸೇವೆ ಮೇಲೆ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ ಮತ್ತು ನೌಕರರನ್ನು ಕೂಡಲೇ ಅವರ ಮಾತೃ ಇಲಾಖೆಗಳಿಗೆ ಹಿಂತಿರುಗಿಸಬೇಕು.

 * ಆರೋಗ್ಯ ಸೌಲಭ್ಯ ಯೋಜನೆ ವಿಸ್ತರಣೆ: ಸರ್ಕಾರಿ ನೌಕರರಿಗೆ ಜಾರಿಗೊಳಿಸಲಾಗಿರುವ ಆರೋಗ್ಯ ಸೌಲಭ್ಯ ಯೋಜನೆಯನ್ನು ಜಿಬಿಎ ಅಧಿಕಾರಿ ಮತ್ತು ನೌಕರರಿಗೂ ವಿಸ್ತರಿಸಬೇಕು.

ಅಮಾನತು ಆದೇಶ ರದ್ದುಪಡಿಸಲು ಆಗ್ರಹ :

ಕಂದಾಯ ಇಲಾಖೆಯ ಅಧಿಕಾರಿ ಮತ್ತು ನೌಕರರು ತೀವ್ರ ಒತ್ತಡದಲ್ಲಿದ್ದು, ವ್ಯವಸ್ಥಿತವಾಗಿ ಸಮೀಕ್ಷೆ ನಡೆಸಲು ಕಾರ್ಯಯೋಜನೆ ರೂಪಿಸಬೇಕಾಗಿತ್ತು. ಆದರೆ, ಐಎಎಸ್ ಅಧಿಕಾರಿಗಳು ದಿನಕ್ಕೊಂದು ಹೊಸ ಕಾನೂನು ತಂದು ಗೊಂದಲ ಸೃಷ್ಟಿಸಿದ್ದಾರೆ. ಜಾತಿಗಣತಿ ಸಮೀಕ್ಷೆ ಗೊಂದಲವಾಗಲು ಅಧಿಕಾರಿಗಳೇ ಕಾರಣ ಎಂದು ಆರೋಪಿಸಲಾಗಿದೆ. 

ಮೇಲಾಧಿಕಾರಿಗಳ ದಬ್ಬಾಳಿಕೆಯಿಂದ ನೌಕರರು ಬೇಸತ್ತಿದ್ದಾರೆ. ಆದ್ದರಿಂದ, ಅಮಾನತು ಮಾಡಲಾದ ಕಂದಾಯ ಇಲಾಖೆಯ ನೌಕರರ ಆದೇಶಗಳನ್ನು ತಕ್ಷಣವೇ ರದ್ದುಪಡಿಸಬೇಕು ಎಂದು ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಅಮೃತ್ ರಾಜ್ ತೀವ್ರವಾಗಿ ಆಗ್ರಹಿಸಿದ್ದಾರೆ.

ಕಚೇರಿಗೆ ಬರದಂತೆ ಉಚಿತ ಪ್ರವಾಸ, ಸಿನಿಮಾ ಟಿಕೆಟ್ ಆಫರ್ :

ಬಿಬಿಎಂಪಿಯ ಅಧಿಕಾರಿ ಹಾಗೂ ನೌಕರರು ಜು.08ರಂದು ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತಿದ್ದರೆ, ಹಿರಿಯ ಅಧಿಕಾರಿಗಳು ಕಚೇರಿಗೆ ಕರೆತರಲು ಬಿಬಿಎಂಪಿಯ ಚಾಲಕರು ಅಗತ್ಯ ಹಾಗೂ ಕಚೇರಿಗಳಲ್ಲಿ ಅಧಿಕಾರಿಗಳ ಕೆಲಸಕ್ಕೆ ಜರೂರಾಗಿ ನಾಲ್ಕನೇ ದರ್ಜೆ ನೌಕರರು ಅವಶ್ಯಕ. 

ಈ ಹಿನ್ನಲೆಯಲ್ಲಿ ಅವರುಗಳು ನಾಳೆ ಪರೋಕ್ಷವಾಗಿ ಸಂಘದ ಧರಣಿಗೆ ಬೆಂಬಲ ಸೂಚಿಸಿ ಕರ್ತವ್ಯಕ್ಕೆ ಹಾಜರಾಗದಂತೆ ನಿಯಂತ್ರಿಸಲು ಸಂಘದ ವತಿಯಿಂದ ಖಾಯಂ ಚಾಲಕರು ಹಾಗೂ ನಾಲ್ಕನೇ ದರ್ಜೆ ನೌಕರರಿಗೆ ನಿಮಿಷಾಂಭ  ದೇವಸ್ಥಾನ, ಶ್ರೀರಂಗಪಟ್ಟಣ ರಂಗನಾಥ ಸ್ವಾಮಿ ದೇವಸ್ಥಾನ, ಮೇಲುಕೋಟೆ ಚೆಲುವ ನಾರಾಯಣ ಸ್ವಾಮಿ ದೇವಸ್ಥಾನಗಳಿಗೆ ಒಂದು ದಿನದ ಉಚಿವ ಪ್ರವಾಸ ಏರ್ಪಡಿಸಿದೆ. ಇನ್ನು ಕೆಲವು ನೌಕರರಿಗೆ ಉಚಿತ ಸಿನಿಮಾ ನೋಡಲು ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

WhatsApp Join our WhatsApp Channel
Previous Post

₹260 ಕೋಟಿ ಬಾಕಿ: ಆಹಾರ ಧಾನ್ಯ ಸಾಗಣೆ ಸ್ಥಗಿತ, ಇಂದಿನಿಂದ ಲಾರಿ ಮಾಲೀಕರಿಂದ ಅನಿರ್ದಿಷ್ಟಾವಧಿ ಪ್ರತಿಭಟನೆ

Next Post

ಹುಡುಗಿ ವಿಚಾರಕ್ಕೆ ಯುವಕನ ಮೇಲೆ ಭೀಕರ ಹಲ್ಲೆ : ‘ರೇಣುಕಾಸ್ವಾಮಿ ಪ್ರಕರಣ’ ಉಲ್ಲೇಖಿಸಿ ಥಳಿತ

Next Post

ಹುಡುಗಿ ವಿಚಾರಕ್ಕೆ ಯುವಕನ ಮೇಲೆ ಭೀಕರ ಹಲ್ಲೆ : 'ರೇಣುಕಾಸ್ವಾಮಿ ಪ್ರಕರಣ' ಉಲ್ಲೇಖಿಸಿ ಥಳಿತ

BW SPECIAL | ಅಭಿಮಾನ್ ಸ್ಟುಡಿಯೋ ವಿರುದ್ಧ ಕ್ರಮಕ್ಕೆ ಆಗ್ರಹ: ಡಾ.ವಿಷ್ಣುವರ್ಧನ್ ಪುಣ್ಯಭೂಮಿ ಟ್ರಸ್ಟ್‌ನಿಂದ ಸಿಎಂಗೆ ದೂರು

Please login to join discussion

Like Us on Facebook

Follow Us on Twitter

Recent News

ವಿಧಾನಪರಿಷತ್ ಚುನಾವಣೆ: ಅಡ್ಡ ಮತದಾನ ಮಾಡಿದ ಶಾಸಕರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾದ ಹೈಕಮಾಂಡ್

June 23, 2026

DNA Data Storage | “ಭಾರತ ಇನ್ನೂ ಸಿದ್ಧವಾಗಿಲ್ಲ”: ಬೆಂಗಳೂರಿನ ಕಾರ್ಯಾಚರಣೆ ಸ್ಥಗಿತಗೊಳಿಸಿ ಅಮೆರಿಕಾಗೆ ಹಾರಿದ ‘ಬಯೋಕಂಪ್ಯೂಟ್’ ಸಂಸ್ಥಾಪಕಿ ಅನಘಾ ರಾಜೇಶ್

June 23, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

ವಿಧಾನಪರಿಷತ್ ಚುನಾವಣೆ: ಅಡ್ಡ ಮತದಾನ ಮಾಡಿದ ಶಾಸಕರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾದ ಹೈಕಮಾಂಡ್

June 23, 2026

DNA Data Storage | “ಭಾರತ ಇನ್ನೂ ಸಿದ್ಧವಾಗಿಲ್ಲ”: ಬೆಂಗಳೂರಿನ ಕಾರ್ಯಾಚರಣೆ ಸ್ಥಗಿತಗೊಳಿಸಿ ಅಮೆರಿಕಾಗೆ ಹಾರಿದ ‘ಬಯೋಕಂಪ್ಯೂಟ್’ ಸಂಸ್ಥಾಪಕಿ ಅನಘಾ ರಾಜೇಶ್

June 23, 2026

15 ಲಕ್ಷ ಸಸಿ ನೆಡುವ ಬೃಹತ್ ಅಭಿಯಾನ: ಹಸಿರು ಬೆಂಗಳೂರು ನಿರ್ಮಾಣಕ್ಕೆ ಮೆಗಾ ಡ್ರೈವ್

June 23, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group