Thursday, August 20, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ದೆಹಲಿ-ಹುಬ್ಬಳ್ಳಿ, ಬೆಳಗಾವಿ ಮಧ್ಯೆ ಅಕ್ಟೋಬರ್ 1ರಿಂದ ನಿತ್ಯ ವಿಮಾನ ಸಂಚಾರ

    ಬೆಂಗಳೂರು ಟ್ರಾಫಿಕ್ ಕಡಿತಕ್ಕೆ ಪೆಟ್ರೋಲಿಯಂ ಟ್ಯಾಂಕರ್‌ಗಳ ಮಾರ್ಗ ಬದಲಾವಣೆ: ಎನ್ ಐಪಿಡಿಎ ಪ್ರಸ್ತಾವನೆ

    Breaking News | ​ಪರಪ್ಪನ ಅಗ್ರಹಾರ ಜೈಲಿನಲ್ಲಿ ಪ್ರಜ್ವಲ್ ರೇವಣ್ಣ ಬಳಿ ಮೊಬೈಲ್ ಪತ್ತೆ: ಮೂವರು ಅಧಿಕಾರಿಗಳ ಅಮಾನತು

    ಕೌಶಲ್ಯ ಕರ್ನಾಟಕ: ವಿಶ್ವ ಯುವ ಕೌಶಲ್ಯ ದಿನಾಚರಣೆಗೆ ಸಿಎಂ ಡಿ.ಕೆ. ಶಿವಕುಮಾರ್ ಚಾಲನೆ

    Karnataka Housing Board | ಗೃಹ ಮಂಡಳಿ ನೂತನ ಅಧ್ಯಕ್ಷ ಶ್ರೀನಿವಾಸ ಮಾನೆಗೆ ಸಚಿವ ಮಧು ಬಂಗಾರಪ್ಪ ಅಭಿನಂದನೆ

    ಕೆಪಿಎಸ್‌ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌ಗೆ ಇಡಿ ಶಾಕ್: ರಾಜ್ಯದ 21 ಕಡೆ ಏಕಕಾಲದಲ್ಲಿ ಮೆಗಾ ದಾಳಿ

    ರಾಜ್ಯಾದ್ಯಂತ ಆಹಾರ ಸುರಕ್ಷತಾ ಇಲಾಖೆಯ ಬಿಗಿ ತಪಾಸಣೆ: ಸಾರ್ವಜನಿಕ ದೂರಿಗೆ ಹೊಸ QR ಕೋಡ್ ವ್ಯವಸ್ಥೆ ಜಾರಿ

    ಕಾವೇರಿ ವನ್ಯಧಾಮ ಶೂಟೌಟ್ ಪ್ರಕರಣ: ಹನೂರಿನಲ್ಲಿ ಇಂದು ಮೂವರ ಅಂತ್ಯ ಕ್ರಿಯೆ, ಚುರುಕುಗೊಂಡ ತನಿಖೆ

    ಕರ್ನಾಟಕ@2047: $3 ಟ್ರಿಲಿಯನ್ ಬೃಹತ್ ಆರ್ಥಿಕತೆಯ ನೀಲಿನಕ್ಷೆ ಅನಾವರಣಗೊಳಿಸಿದ ಸಿಎಂ ಡಿ.ಕೆ.ಶಿವಕುಮಾರ್

  • Bengaluru Focus

    BW Reality Check | ಚಾಮರಾಜಪೇಟೆ ಹಿಂದೂ ರುದ್ರಭೂಮಿಯಲ್ಲಿ ಶವ ದಹನಕ್ಕೂ ನೂರೆಂಟು ವಿಘ್ನ: ಸಾವಿನಲ್ಲೂ ಸುಲಿಗೆ, ಅಧಿಕಾರಿಗಳ ಘೋರ ನಿರ್ಲಕ್ಷ್ಯ!

    ದೆಹಲಿ-ಹುಬ್ಬಳ್ಳಿ, ಬೆಳಗಾವಿ ಮಧ್ಯೆ ಅಕ್ಟೋಬರ್ 1ರಿಂದ ನಿತ್ಯ ವಿಮಾನ ಸಂಚಾರ

    GBA News | ​ಕ್ಲಾರೆನ್ಸ್ ಹೈಸ್ಕೂಲ್‌ಗೆ ಬೆಂಗಳೂರು ಉತ್ತರ ನಗರ ಪಾಲಿಕೆ ನೋಟಿಸ್: ಫ್ಲೂ ವದಂತಿಗೆ ಬ್ರೇಕ್

    ದೇಶದಲ್ಲಿ ಲಕ್ಷಾಂತರ ವೈದ್ಯರಿದ್ದರೂ ನಿರುದ್ಯೋಗ ಭೀತಿ: ಮುಂದಿನ 4 ವರ್ಷಗಳಲ್ಲಿ ಉದ್ಯೋಗ ಕೊರತೆ – ಸಂಸದ ಡಾ.ಸಿ.ಎನ್. ಮಂಜುನಾಥ್ ಎಚ್ಚರಿಕೆ

    ಕರ್ನಾಟಕ@2047: $3 ಟ್ರಿಲಿಯನ್ ಬೃಹತ್ ಆರ್ಥಿಕತೆಯ ನೀಲಿನಕ್ಷೆ ಅನಾವರಣಗೊಳಿಸಿದ ಸಿಎಂ ಡಿ.ಕೆ.ಶಿವಕುಮಾರ್

  • Public interest
  • BW Special
  • Life Style
  • Photo Gallery
  • Video
No Result
View All Result

Home Bengaluru Focus

BW SPECIAL | Tree QR Code | ಬೆಂಗಳೂರಿನಲ್ಲಿ ಈಗ ಮರಗಳಿಗೂ ಬಂತು ಕ್ಯು ಆರ್ ಕೋಡ್ !! : ಮರಗಣತಿ ಆಪ್ ತಾಂತ್ರಿಕ ದೋಷದಿಂದ ಕುಂಟತ್ತಾ ಸಾಗಿದೆ ಪೈಲೆಟ್ ಯೋಜನೆ

ಬಿಬಿಎಂಪಿ ವ್ಯಾಪ್ತಿಯಲ್ಲಿನ ಮರ ಗಣತಿ ಆಪ್ ಸಿದ್ಧವಾದ ಬಳಿಕ ಟ್ರೀ ಸೆನ್ಸಸ್ ಗೆ ಟೆಂಡರ್ | ಮಾರ್ಚ್ ನಲ್ಲಿ ಪೂರ್ಣ ಪ್ರಮಾಣದ ಸೆನ್ಸಸ್ ಆರಂಭ ಅನುಮಾನ...!?

by Bengaluru Wire Desk
January 22, 2023
in Bengaluru Focus, BW Special
Reading Time: 2 mins read
0
ಮರ ಗಣತಿ ಪೈಲೆಟ್ ಯೋಜನೆಯಲ್ಲಿ ಮರದ ವಿವರಗಳನ್ನು ಹೊಂದಿರುವ ಕ್ಯೂ ಆರ್ ಕೋಡ್ ಚಿತ್ರವನ್ನು ದಾರದಿಂದ ಸುತ್ತಿ ಅಳವಡಿಸಿರುವುದು.

ಮರ ಗಣತಿ ಪೈಲೆಟ್ ಯೋಜನೆಯಲ್ಲಿ ಮರದ ವಿವರಗಳನ್ನು ಹೊಂದಿರುವ ಕ್ಯೂ ಆರ್ ಕೋಡ್ ಚಿತ್ರವನ್ನು ದಾರದಿಂದ ಸುತ್ತಿ ಅಳವಡಿಸಿರುವುದು.

ಬೆಂಗಳೂರು, ಜ.22 www.bengaluruwire.com : ನಗರದಲ್ಲಿ ಈಗಾಗಲೇ ಮೂರು ವರ್ಷಗಳ ಹಿಂದೆಯೇ ಆಗಬೇಕಿದ್ದ ಮರಗಣತಿಗೆ ಪೂರ್ವಭಾವಿಯಾಗಿ ಪೈಲೆಟ್ ಯೋಜನೆ ಎರಡು ವಾರ್ಡ್ ಗಳಲ್ಲಿ ಡಿಸೆಂಬರ್ ನಿಂದ ಆರಂಭವಾಗಿದೆ. ಆದರೂ ಪರೀಕ್ಷೆ ಹಂತದಲ್ಲಿರುವ ಟ್ರೀ ಆಪ್ ನಲ್ಲಿನ ತಾಂತ್ರಿಕ ದೋಷದ ಕಾರಣ ಪೈಲೆಟ್ ಯೋಜನೆ ಕಾರ್ಯಕ್ಕೆ ತೊಡಕಾಗಿದೆ.

ಹಸಿರು ಹೊದಿಕೆ ಸಂರಕ್ಷಣೆ ದೃಷ್ಟಿಯಿಂದ ಅತಿ ಮುಖ್ಯವಾಗಿರುವ ಬಹು ನಿರೀಕ್ಷಿತ ಮರಗಳ ಗಣತಿ (Tree Census) ಕಾರ್ಯದ ಪೈಲೆಟ್ ಯೋಜನೆ ಮಲ್ಲೇಶ್ವರ ಮತ್ತು ಮಹದೇವಪುರದ ಎಇಸಿಎಸ್ ಲೇಔಟ್ ವಾರ್ಡ್ ಗಳಲ್ಲಿ ಡಿಸೆಂಬರ್ ನಿಂದ ಆರಂಭವಾಗಿದೆ. ಆದರೆ ಬಿಬಿಎಂಪಿಯ ಅರಣ್ಯ ವಿಭಾಗವು ಟೆಂಡರ್ ಕರೆದು ಮಾರ್ಚ್ ವೇಳೆಗೆ ಮರ ಗಣತಿ ಕಾರ್ಯ ಆರಂಭಿಸಲು ನಿರ್ಧರಿಸಿದೆ. ಆದರೆ ಗಣತಿ ಕಾರ್ಯಕ್ಕೆ ಅಗತ್ಯವಾದ ಟ್ರೀ ಆಂಡ್ರಾಯ್ಡ್ ಆಪ್ ಇನ್ನೂ ಪೂರ್ಣ ರೂಪದಲ್ಲಿ ಸಿದ್ಧವಾಗದ ಕಾರಣ ಮರಗಣತಿ ಕಾರ್ಯ ಮತ್ತೆ ವಿಳಂಬವಾಗುವ ಸಾಧ್ಯತೆಯಿದೆ.

ಕೆಎಸ್ ಆರ್ ಎಸ್ಎಸಿ ನಿರ್ಮಾಣದ ಆಪ್ ನಲ್ಲಿ ತಾಂತ್ರಿಕ ದೋಷ :

ಬಿಬಿಎಂಪಿ ಅರಣ್ಯ ವಿಭಾಗದ ಅಧಿಕಾರಿಗಳು ಮರಗಣತಿ ಕಾರ್ಯವನ್ನು ಪೈಲೆಟ್ ಯೋಜನೆ ಮೂಲಕ ಮಲ್ಲೇಶ್ವರ ವಾರ್ಡ್ ಹಾಗೂ ಮಹದೇವಪುರದಲ್ಲಿರುವ ಎಇಸಿಎಸ್ ಲೇಔಟ್ ವಾರ್ಡ್ ನಲ್ಲಿ ಡಿಸೆಂಬರ್ ನಲ್ಲಿ ಮರಗಣತಿಯನ್ನು ಡಿಸೆಂಬರ್ ಮೂರನೇ ವಾರದಿಂದ ಆರಂಭಿಸಿದೆ. ಆದರೆ ಕರ್ನಾಟಕ ರಿಮೋಟ್ ಸೆನ್ಸಿಂಗ್ ಅಪ್ಲಿಕೇಶನ್ ಸೆಂಟರ್ (KSRSAC) ನಿರ್ಮಿಸಿರುವ ಮರಗಣತಿ ಆಪ್ ಆಗಾಗ ಹ್ಯಾಂಗ್ ಹಾಗೂ ದಾಖಲಿಸಿದ ಮಾಹಿತಿ ಅಂತರ್ಜಾಲದ ಮೂಲಕ ಅಪಲೋಡ್ ಆಗಲು ಸಾಕಷ್ಟು ವಿಳಂಬ ಆಗುತ್ತಿರುವ ಕಾರಣ ಹೆಚ್ಚು ಮರಗಳ ಗಣತಿ ಕಾರ್ಯ ವಿಳಂಬವಾಗುತ್ತಿದೆ ಎಂದು ಬಿಬಿಎಂಪಿ ಹಿರಿಯ ಅಧಿಕಾರಿಯೊಬ್ಬರು ಬೆಂಗಳೂರು ವೈರ್ ಗೆ ತಿಳಿಸಿದ್ದಾರೆ.

ಕಾಲೇಜು ವಿದ್ಯಾರ್ಥಿಗಳು ಮರ ಗಣತಿ ಕಾರ್ಯದಲ್ಲಿ ತೊಡಗಿರುವ ಚಿತ್ರ

ಪಾಲಿಕೆಯಿಂದ ಈತನಕ 2,053 ಮರಗಣತಿ :

ಡಿಸೆಂಬರ್ ತಿಂಗಳನಲ್ಲಿ ಮೊದಲಿಗೆ ಮಹಾರಾಷ್ಟ್ರದ ಸಸ್ಯಶಾಸ್ತ್ರದ ವಿದ್ಯಾರ್ಥಿಗಳು ಒಂದು ವಾರಗಳ ಕಾಲ ತಾವೇ ಅಭಿವೃದ್ಧಿಪಡಿಸಿದ ಆಪ್ ನಲ್ಲಿ ಮಲ್ಲೇಶ್ವರದಲ್ಲಿ 2,000 ಮರಗಳ ಗಣತಿ ಕಾರ್ಯವನ್ನು ಕೈಗೊಂಡಿದ್ದರು. ಆದರೆ ಕೆಎಸ್ ಆರ್ ಎಸ್ಎಸಿ ಡೆವಲಪ್ ಮಾಡಿದ ಟ್ರೀ ಆಪ್ ನಲ್ಲಿ ಆ ದಾಖಲಿಸಿದ ವಿವರಗಳನ್ನು ವರ್ಗಾಯಿಸಲು ತಾಂತ್ರಿಕ ತೊಂದರೆಯಾಗಿ ಈ ವಿಧ್ಯಾರ್ಥಿಗಳು ತಮ್ಮ ಗಣತಿ ಕಾರ್ಯವನ್ನು ಅಲ್ಲಿಗೇ ಕೈಬಿಟ್ಟರು. ತದನಂತರ ಬಿಬಿಎಂಪಿಯ ಅರಣ್ಯ ವಿಭಾಗದ ಸಿಬ್ಬಂದಿ ಪಾಲಿಕೆಯ ಮರಗಣತಿ ಆಪ್  ಮೂಲಕ ಈತನಕ 453 ಮರಗಳನ್ನು ಗಣತಿ ಮಾಡಿ ಅವುಗಳ ವಿವರಗಳನ್ನು ಹೊಸ ಆಪ್ ನಲ್ಲಿ ದಾಖಲಿಸಿದ್ದಾರೆ. ಹಿಂದೆ ವಿದ್ಯಾರ್ಥಿಗಳು ನಡೆಸಿದ 2 ಸಾವಿರ ಮರಗಳ ಗಣತಿ ಕಾರ್ಯ ನೀರಲ್ಲಿ ಹೋಮ ಮಾಡಿದಂತಾಗಿದೆ. ಇನ್ನು ಮಹದೇವಪುರದ ಎಇಸಿಎಸ್ ಲೇಔಟ್ ವಾರ್ಡ್ ನಲ್ಲಿ ಸದ್ಯ ಡಿ.25ರಿಂದ ಜ್ಯೋತಿ ನಿವಾಸ್ ಕಾಲೇಜಿನ ವಿದ್ಯಾರ್ಥಿಗಳ ಮೂಲಕ ಈವರೆಗೆ 1,600 ಮರಗಳ ಗಣತಿ ಕಾರ್ಯವನ್ನು ಕೈಗೊಳ್ಳಲಾಗಿದೆ.

ಮರಗಣತಿ ಪೈಲೆಟ್ ಯೋಜನೆ ಮೇಲ್ವಿಚಾರಣೆಗೆ ಸಿಬ್ಬಂದಿ ಕೊರತೆ?:

ಕೆಎಸ್ ಆರ್ ಎಸ್ಎಸಿ ಅಭಿವೃದ್ಧಿಪಡಿಸಿದ ಆಪ್ ನಲ್ಲಿ ಮರಗಣತಿ ಆಪ್ ನಲ್ಲಿ ಮಾಹಿತಿ, ಮರದ ಚಿತ್ರ ಎಲ್ಲ ವಿವರಗಳನ್ನು ದಾಖಲಿಸಿ ಅಪಲೋಡ್ ಮಾಡಲು ಕನಿಷ್ಠ 5ರಿಂದ 10 ನಿಮಿಷ ಸಮಯ ಹಿಡಿಯುತ್ತಿದೆ. ಕೆಲವೊಮ್ಮೆ ಆಪ್ ಹ್ಯಾಂಗ್ ಆಗುತ್ತಿದೆ. ಅದು ಅಲ್ಲದೆ ಪಾಲಿಕೆಯ ಅರಣ್ಯ ವಿಭಾಗದಲ್ಲಿ ಸದ್ಯ ಇರುವ ಅಧಿಕಾರಿ ಮತ್ತು ಸಿಬ್ಬಂದಿ ಬೆರಳೆಣಿಕೆಯಷ್ಟಿದೆ. ಮರಗಣತಿಯಂತಹ ಸಂಕೀರ್ಣ ಹಾಗೂ ದೊಡ್ಡ ಯೋಜನೆಯನ್ನು ಕಾರ್ಯಗತಗೊಳಿಸಲು ಅಗತ್ಯ ಸಿಬ್ಬಂದಿ ಕೊರತೆಯು ಎದುರಾಗಿದೆ. ಸದ್ಯ ಪೈಲೆಟ್ ಯೋಜನೆ ಕಾರ್ಯಗತಗೊಳಿಸಲು ಅರಣ್ಯ ವಿಭಾಗದಲ್ಲಿ ನಿಗಧಿತ ಸಿಬ್ಬಂದಿ ಪೂರ್ಣರೂಪದಲ್ಲಿ ತೊಡಗಿಸಲು ಆಗುತ್ತಿಲ್ಲ.

ಎಂತಹ ಮರಗಳನ್ನು ಮರಗಣತಿ ಮಾಡಲಾಗುತ್ತಿದೆ? :

1.5 ಮೀಟರ್ ಎತ್ತರ, 18 ಸೆಂಟಿಮೀಟರ್ ಸುತ್ತಳತೆ ಹೊಂದಿರುವ ಮರಗಳನ್ನಷ್ಟೇ ಮರ ಗಣತಿ ಮಾಡಲಾಗುತ್ತದೆ. ಸಾಮಾನ್ಯವಾಗಿ ಸಾಮಾನ್ಯ ಎತ್ತರವಿರುವ ವ್ಯಕ್ತಿಯ ಎದೆಯ ಎತ್ತರದಲ್ಲಿ ಅಂದರೆ 1.37 ಸೆಂ.ಮೀ ಎತ್ತರಕ್ಕೆ ಸರಿಯಾಗಿ ಬೆಳೆದಿರುವ ಮರದ ಸುತ್ತಳತೆ ತೆಗೆದುಕೊಳ್ಳಲಾಗುತ್ತದೆ.

ಮರಗಣತಿ ಮಾಡುವ ವಿಧಾನ ಹೇಗೆ? :

ಮಲ್ಲೇಶ್ವರದಲ್ಲಿ ನಡೆಯುತ್ತಿರುವ ಮರ ಗಣತಿ ಕಾರ್ಯದ ಒಂದು ನೋಟ

ಮರಗಣತಿ ಆಪ್ ನಲ್ಲಿ ವಿವಿಧ ಜಾತಿಯ ಮರಗಳ ವಿವರ, ಸುತ್ತಳತೆ, ಎತ್ತರ, ಮರವಿರುವ ಸ್ಥಳದ ಭೌಗೋಳಿಕ ಸ್ಥಿತಿಗತಿ ದಾಖಲಿಸಲು ಅವಕಾಶವಿರುವಂತೆ ಈ ಮೊದಲೇ ವಿನ್ಯಾಸ ಮಾಡಲಾಗಿದೆ. ಮರವಿರುವ ಸ್ಥಳಕ್ಕೆ ತೆರಳುವ ಬಿಬಿಎಂಪಿ ಅರಣ್ಯ ಸಿಬ್ಬಂದಿ ಅಥವಾ ಕಾರ್ಯಕರ್ತರು, ಮರದ ಫೊಟೋ ಹೊಡೆದು, ಮರಗಳ ಎತ್ತರ, ಸುತ್ತಳತೆ, ಮರದ ಆರೋಗ್ಯ ಸೇರಿದಂತೆ ಮತ್ತಿತರ ವಿವರಗಳನ್ನು ದಾಖಲಿಸುತ್ತಾರೆ. ಇಂತಹ ಗಣತಿಯಾದ ಮರಗಳಿಗೆ, ಅವುಗಳ ಸಂಪೂರ್ಣ ವಿವರ ಹೊಂದಿರುವ ಕ್ಯೂಆರ್ ಕೋಡ್ ಉಬ್ಬು ಚಿತ್ರದ ಅಲ್ಯೂಮಿನಿಯ್ ಶೀಟ್ ಅನ್ನು ಹೊಡೆಯಲಾಗುತ್ತದೆ. ಮರಕ್ಕೆ ಮೊಳೆ ಹೊಡೆದು ಕ್ಯೂ ಆರ್ ಕೋಡ್ ಶೀಟ್ ಹಾಕಲು ಹೈಕೋರ್ಟ್ ಅನುಮತಿ ಕೋರಲಾಗಿದೆ. ಪ್ರಸ್ತುತ ಪೈಲೆಟ್ ಯೋಜನೆಯಲ್ಲಿ ಮರಕ್ಕೆ ದಾರದಿಂದ ಕ್ಯೂ ಆರ್ ಕೋಡ್ ಮಾಹಿತಿಯ ಫಲಕವನ್ನು ಕಟ್ಟಲಾಗುತ್ತಿದೆ. ಎಂದು ಬಿಬಿಎಂಪಿ ಮೂಲಗಳು ಬೆಂಗಳೂರು ವೈರ್ ಗೆ ತಿಳಿಸಿದೆ.

ನಗರದಲ್ಲಿ ಈ ತನಕ ಪಾಲಿಕೆಯು ದಶಕಗಳಿಂದ ಲಕ್ಷಾಂತರ ಸಸಿಗಳನ್ನು ನೆಟ್ಟಿದೆ. ಆದರೆ ಎಷ್ಟು ಸಸಿಗಳು ಬೆಳೆದು ಮರಗಳಾಗಿದೆ. ಅದರಲ್ಲಿ ಎಷ್ಟು ಸಸಿಗಳು ಉಳಿದಕೊಂಡಿವೆ ಎಂಬುದರ ಬಗ್ಗೆ ನಿಖರ ಮಾಹಿತಿಯನ್ನು ಹೊಂದಿಲ್ಲ. ಸಿಲಿಕಾನ್ ಸಿಟಿಯಲ್ಲಿ ವೈವಿಧ್ಯಮಯ ರೀತಿಯ ಮರಗಳಿವೆ. ಕಾಲಾಂತರದಲ್ಲಿ ಬೆಂಗಳೂರಿನ ಅಭಿವೃದ್ಧಿ, ಮೂಲಸೌಕರ್ಯ ಕಲ್ಪಿಸಲು ಸಾವಿರಾರು ಮರಗಳಿಗೆ ಕೊಡಲಿಪೆಟ್ಟು ಬಿದ್ದು ಧರಾಶಾಹಿಯಾಗಿದೆ. ಆದರೆ ನಮ್ಮಲ್ಲಿ ಬಲಯುತವಾದ ಮರಗಳೆಷ್ಟು? ಯಾವ್ಯಾವ ಭಾಗದಲ್ಲಿ ಯಾವ ರೀತಿಯ ಮರಗಳಿವೆ? ಅವುಗಳ ಸ್ಥಿತಿಗತಿಗಳೇನು? ಇವುಗಳೆಲ್ಲ ಮಾಹಿತಿಯನ್ನು ವೈಜ್ಞಾನಿಕವಾಗಿ ಗಣತಿ ಮಾಡುವ ನಿಟ್ಟಿನಲ್ಲಿ ಮರ ಗಣತಿ ಅತಿ ಅಗತ್ಯವಾಗಿದೆ.

ಈ ಹಿಂದೆ ಮರ ಗಣತಿ ಪ್ರಾರಂಭಿಸಲು ತಯಾರಿಸಲಾದ ಆಂಡ್ರಾಯ್ಡ್ ಆಪ್ ಗೆ ಕೆಲವೊಂದು ಬದಲಾವಣೆ ತಂದು, ಇಂಗ್ಲಿಷ್ ನಲ್ಲಷ್ಟೇ ಇದ್ದ ಆಪ್ ಅನ್ನು ಕನ್ನಡ ಭಾಷೆಯಲ್ಲೂ ಲಭ್ಯವಾಗುವಂತೆ ಹಾಗೂ ಜನ ಬಳಕೆಗೆ ಯೋಗ್ಯವಾಗುವ ನಿಟ್ಟಿನಲ್ಲಿ ಆಪ್ ಅಭಿವೃದ್ಧಿಪಡಿಸುವ ಕಾರ್ಯ ಮುಗಿದಿದ್ದು, ಆಪ್ ಪರೀಕ್ಷಾ ಹಂತದಲ್ಲಿದೆ ಎಂದು ಬಿಬಿಎಂಪಿ ಅರಣ್ಯ ವಿಭಾಗದ ಅಧಿಕಾರಿಗಳು ಬೆಂಗಳೂರು ವೈರ್ ಗೆ ತಿಳಿಸಿದ್ದಾರೆ.

ಮಾರ್ಚ್ ತಿಂಗಳಿನಿಂದ ಮರಗಣತಿ ಕಾರ್ಯ ಆರಂಭ? :

“ಮರಗಣತಿ ಕಾರ್ಯಕ್ಕೆ ಟೆಂಡರ್ ಕರೆಯುವ ಮುನ್ನ ಮರಗಣತಿ ಆಪ್ ಅಭಿವೃದ್ಧಿಪಡಿಸಿದ್ದು, ಪರೀಕ್ಷೆಗಳು ನಡೆಯುತ್ತಿದ್ದು, ಅಂತಿಮ ಹಂತದಲ್ಲಿದೆ. ಇಂಗ್ಲಿಷ್ ಹಾಗೂ ಕನ್ನಡದಲ್ಲೂ ಆಪನ್ನು ಡೆವಲಪ್ ಮಾಡಿದೆ.  ಗಣತಿ ಬಗ್ಗೆ ವಿಶ್ವದ ಬೇರೆ ಭಾಗಗಳಲ್ಲಿನ ಉತ್ತಮ ಅಂಶವನ್ನು ಅಳವಡಿಸಿಕೊಳ್ಳಲಾಗುವುದು.ಇದರ ಜೊತೆ ಜೊತೆಗೆ ಮರ ಗಣತಿ ಕಾರ್ಯ ನಡೆಸಲು ಅಂದಾಜು ದರ ಪಟ್ಟಿಯನ್ನು ಆಹ್ವಾನಿಸಲಾಗಿತ್ತು. ಹಲವು ಏಜನ್ಸಿಗಳು ದರಪಟ್ಟಿಯನ್ನು ಸಲ್ಲಿಸಿವೆ. ಇವುಗಳಲ್ಲಿ ಕಡಿಮೆ ವೆಚ್ಚದಲ್ಲಿ, ಗುಣಮಟ್ಟದ ಕಾರ್ಯ ಕೈಗೊಳ್ಳುವಂತಹ ಅಂಶಗಳನ್ನು ಪರಿಗಣಿಸಿ ಟೆಂಡರ್ ತಯಾರಿಸುತ್ತೇವೆ. ಬಳಿಕ ಟೆಂಡರ್ ಆಹ್ವಾನಿಸಿ ಅರ್ಹ ಸಂಸ್ಥೆಗೆ ಮರಗಣತಿ ಕಾರ್ಯ ನೀಡುತ್ತೇವೆ. ಮಾರ್ಚ್ ವೇಳೆಗೆ ಬೆಂಗಳೂರಿನಲ್ಲಿ ಮರಗಣತಿ ಆರಂಭವಾಗಲಿದೆ.”

– ಸರಿನಾ ಸಿಗ್ಗಲಿಗರ್, ಉಪ ಅರಣ್ಯ ಸಂರಕ್ಷಣಾಧಿಕಾರಿ, ಬಿಬಿಎಂಪಿ

ವಿಧಾನಸಭಾ ಚುನಾವಣೆ ಘೋಷಣೆಯಾದಲ್ಲಿ ಗಣತಿಗೆ ಗ್ರಹಣ ಸಾಧ್ಯತೆ? :

2019ರಲ್ಲಿ ಹೈಕೋರ್ಟ್ ನಗರದಲ್ಲಿ ಮರಗಳ ಗಣತಿ ನಡೆಸುವಂತೆ ಆದೇಶಿಸಿತ್ತು. ಆ ಬಳಿಕ ಪಾಲಿಕೆಯು ಭಾರತೀಯ ಮರ ವಿಜ್ಞಾನ (Indian Wood Science)ಸಂಸ್ಥೆ ಯ ಮೂಲಕ ಮರ ಗಣತಿ ಮಾಡುವುದಾಗಿ ತಿಳಿಸಿ 2 ವರ್ಷಗಳ ಕಾಲ ವಿಳಂಬ ಮಾಡಿತ್ತು. ಆದಾದ ನಂತರ ಬೆಂಗಳೂರಿನ ಕೃಷಿ ವಿಶ್ವ ವಿದ್ಯಾಲಯ (GKVK) ಒಂದು ವರ್ಷಗಳ ಕಾಲ ಅಧ್ಯಯನ ನಡೆಸಿ ಮರಗಣತಿ ಆರಂಭಿಸುವುದಾಗಿ ತಿಳಿಸಿತ್ತು. ಆದರೆ ಸಾಧ್ಯವಾಗಲಿಲ್ಲ. ಇದರಿಂದ ಮೂರು ವರ್ಷಗಳ ಕಾಲ ಗಣತಿ ಆರಂಭಿಸಲು ವಿಳಂಬವಾಯಿತು. ಈಗ ಕೆಎಸ್ ಆರ್ ಎಸ್ಎಸಿ ಡೆವಲಪ್ ಮಾಡಿದ ಟ್ರೀ ಆಪ್ ನಲ್ಲಿನ ತಾಂತ್ರಿಕ ದೋಷಗಳನ್ನು ಆದಷ್ಟು ಶೀಘ್ರವಾಗಿ ನಿವಾರಿಸಿ ಮರ ಗಣತಿ ಕಾರ್ಯ ಆರಂಭಿಸಬೇಕಿದೆ. ತಡವಾದರೆ, ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಘೋಷಣೆಯಾದ ಬಳಿಕ ಅಧಿಕಾರಿ, ಸಿಬ್ಬಂದಿಯನ್ನು ಚುನಾವಣಾ ಕಾರ್ಯಕ್ಕೆ ಬಳಸಿದರೆ ಮರ ಗಣತಿ ಕಾರ್ಯದ ಉಸ್ತುವಾರಿ ಕೆಲಸಗಳಿಗೆ ತೊಂದರೆಯಾಗುವ ಸಾಧ್ಯತೆಯಿದೆ.

WhatsApp Join our WhatsApp Channel
Previous Post

BBMP News | ಬಿಬಿಎಂಪಿ ಕೋಟಿ ವೃಕ್ಷ ಅಭಿಯಾನ-2023ಕ್ಕೆ ಚಾಲನೆ : ನಗರದಲ್ಲಿ ಈ ವರ್ಷ 2 ಲಕ್ಷ ಸಸಿ ನೆಡಲು ತೀರ್ಮಾನ!!

Next Post

Viral Video | ಭವ್ಯನೋಟ : ದೆಹಲಿ-ಕುಲು ವಿಮಾನದಿಂದ ಹಿಮಾಚಲ ಪ್ರದೇಶದ ಬೆಟ್ಟಗಳ ವೈಮಾನಿಕ ನೋಟ – ವಿಡಿಯೋ ವೈರಲ್

Next Post

Viral Video | ಭವ್ಯನೋಟ : ದೆಹಲಿ-ಕುಲು ವಿಮಾನದಿಂದ ಹಿಮಾಚಲ ಪ್ರದೇಶದ ಬೆಟ್ಟಗಳ ವೈಮಾನಿಕ ನೋಟ - ವಿಡಿಯೋ ವೈರಲ್

ಬೆಂಗಳೂರು : ಇಳಕಲ್ ಸೀರೆ ಖದರ್- ಮಲ್ಲಕಂಬ ಸಾಹಸ ಪ್ರದರ್ಶನ ; ಮೇಳೈಸಿದ ಉತ್ತರ ಕರ್ನಾಟಕ ವೈಭವ

Please login to join discussion

Like Us on Facebook

Follow Us on Twitter

Recent News

BW Reality Check | ಚಾಮರಾಜಪೇಟೆ ಹಿಂದೂ ರುದ್ರಭೂಮಿಯಲ್ಲಿ ಶವ ದಹನಕ್ಕೂ ನೂರೆಂಟು ವಿಘ್ನ: ಸಾವಿನಲ್ಲೂ ಸುಲಿಗೆ, ಅಧಿಕಾರಿಗಳ ಘೋರ ನಿರ್ಲಕ್ಷ್ಯ!

August 20, 2026

ದೆಹಲಿ-ಹುಬ್ಬಳ್ಳಿ, ಬೆಳಗಾವಿ ಮಧ್ಯೆ ಅಕ್ಟೋಬರ್ 1ರಿಂದ ನಿತ್ಯ ವಿಮಾನ ಸಂಚಾರ

August 20, 2026
Bengaluru Wire, Kannada News, latest News in Kannada

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

BW Reality Check | ಚಾಮರಾಜಪೇಟೆ ಹಿಂದೂ ರುದ್ರಭೂಮಿಯಲ್ಲಿ ಶವ ದಹನಕ್ಕೂ ನೂರೆಂಟು ವಿಘ್ನ: ಸಾವಿನಲ್ಲೂ ಸುಲಿಗೆ, ಅಧಿಕಾರಿಗಳ ಘೋರ ನಿರ್ಲಕ್ಷ್ಯ!

August 20, 2026

ದೆಹಲಿ-ಹುಬ್ಬಳ್ಳಿ, ಬೆಳಗಾವಿ ಮಧ್ಯೆ ಅಕ್ಟೋಬರ್ 1ರಿಂದ ನಿತ್ಯ ವಿಮಾನ ಸಂಚಾರ

August 20, 2026

GBA News | ​ಕ್ಲಾರೆನ್ಸ್ ಹೈಸ್ಕೂಲ್‌ಗೆ ಬೆಂಗಳೂರು ಉತ್ತರ ನಗರ ಪಾಲಿಕೆ ನೋಟಿಸ್: ಫ್ಲೂ ವದಂತಿಗೆ ಬ್ರೇಕ್

August 19, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group