ಬೆಂಗಳೂರು, (www.bengaluruwire.com) : ರಾಜ್ಯ ಸರ್ಕಾರವು ಗುರುವಾರ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಮುಖ್ಯ ಆಯುಕ್ತರಾಗಿದ್ದ ಗೌರವ್ ಗುಪ್ತಾ ಸೇರಿದಂತೆ 17 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. 1993ರ ಬ್ಯಾಚಿನ ಐಎಎಸ್ ಅಧಿಕಾರಿ ಹಾಗೂ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಯಾಗಿದ್ದ ತುಷಾರ್ ಗಿರಿನಾಥ್ ಅವರನ್ನು ಗೌರವ್ ಗುಪ್ತಾ ಅವರು ನಿಭಾಯಿಸಿದ್ದ ಪಾಲಿಕೆಯ ಮುಖ್ಯ ಆಯುಕ್ತರ ಹುದ್ದೆಗೆ ವರ್ಗಾಯಿಸಲಾಗಿದೆ.

ಗೌರವ್ ಗುಪ್ತಾ ಅವರು ಬಿಬಿಎಂಪಿಗೆ ಸೆಪ್ಟೆಂಬರ್ 2020ರಂದು ಆಡಳಿತಗಾರರಾಗಿ ಬಂದು 2021ರ ಏಪ್ರಿಲ್ ನಿಂದ ಮುಖ್ಯ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿದ್ದರು. ಒಟ್ಟಾರೆಯಾಗಿ ಆಡಳಿತಾಗರರು ಮತ್ತು ಮುಖ್ಯ ಆಯುಕ್ತರಾಗಿ ಒಂದೂವರೆ ವರ್ಷಕ್ಕೂ ಅಧಿಕ ಕಾಲ ಸೇವೆ ಸಲ್ಲಿಸಿದ್ದರು.
ಉಳಿದಂತೆ ವಿವಿಧ ಸ್ಥಳಗಳಿಗೆ ವರ್ಗಾವಣೆಯಾದ ಐಎಎಸ್ ಅಧಿಕಾರಿಗಳ ವಿವರ ಈ ಕೆಳಗಿನಂತಿದೆ :
ಗೌರವ್ ಗುಪ್ತಾ- ಅಪರ ಮುಖ್ಯ ಕಾರ್ಯದರ್ಶಿ, ಮೂಲಸೌಕರ್ಯ ಅಭಿವೃದ್ಧಿ ಇಲಾಖೆ, ಮನೋಜ್ ಜೈನ್ – ಕಾರ್ಮಿಕ ಇಲಾಖೆಯ ಕಾರ್ಯದರ್ಶಿ, ಟಿ.ಕೆ.ಅನಿಲ್ಕುಮಾರ್- ಪ್ರಧಾನ ಕಾರ್ಯದರ್ಶಿ, ಕಂದಾಯ, ವಿ.ಪೊನ್ನುರಾಜು- ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಇ- ಆಡಳಿತ), ಖುಷ್ಬೂ ಜಿ. ಚೌಧರಿ- ಉಪ ಸ್ಥಾನಿಕ ಆಯುಕ್ತರು, ನವದೆಹಲಿಯ ಕರ್ನಾಟಕ ಭವನ, ಡಾ. ರಾಜೇಂದ್ರ ಕೆ. – ಕಾರ್ಯದರ್ಶಿ, ಕೆಪಿಎಸ್ಸಿ, ಎಂ.ಜಿ.ಹಿರೇಮಠ್ – ವ್ಯವಸ್ಥಾಪಕ ನಿರ್ದೇಶಕ, ಕೆಆರ್ ಐಡಿಎಲ್, ಡಾ. ನವೀನ್ ಭಟ್ ವೈ. – ನಿರ್ದೇಶಕ, ಕೆಎಸ್ ಆರ್ ಟಿಸಿ, ಡಾ.ದಿಲೀಶ್ ಸಸಿ – ನಿರ್ದೇಶಕ, ಎಲೆಕ್ಟ್ರಾನಿಕ್ ಡೆಲಿವರಿ ಸಿಟಿಜನ್ ಸರ್ವೀಸಸ್ (EDCS), ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಇ- ಆಡಳಿತ),

ನಿತೇಶ್ ಪಾಟೀಲ್ – ಜಿಲ್ಲಾಧಿಕಾರಿ, ಬೆಳಗಾವಿ, ಗುರುದತ್ತ ಹೆಗ್ಡೆ – ಜಿಲ್ಲಾಧಿಕಾರಿ, ಧಾರವಾಡ, ಭೂಬಾಲನ್ ಟಿ. – ಜಿಲ್ಲಾಧಿಕಾರಿ, ಬಾಗಲಕೋಟೆ, ಭರತ್ ಎಸ್ – ವ್ಯವಸ್ಥಾಪಕ ನಿರ್ದೇಶಕ, ವಾಯುವ್ಯ ಸಾರಿಗೆ ಇಲಾಖೆ, ಶಿಲ್ಪಾ.ಎಂ – ವ್ಯವಸ್ಥಾಪಕ ನಿರ್ದೇಶಕಿ, ನಗರ ಮೂಲಸೌಕರ್ಯ ಅಭಿವೃದ್ಧಿ, ಪ್ರಸನ್ನ.ಹೆಚ್- ಸಿಇಒ, ಜಿಲ್ಲಾ ಪಂಚಾಯತ್, ಉಡುಪಿ
ಗಿರೀಶ್ ದಿಲೀಪ್ ಬಡೋಲೆ – ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಜಿಲ್ಲಾ ಪಂಚಾಯಿತಿ, ಕಲಬುರಗಿ.






















