Saturday, September 19, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    Power News | ಭಾರತ್ ಎಲೆಕ್ಟ್ರಿಕ್ ಮೊಬಿಲಿಟಿ ಸೂಚ್ಯಂಕ: ದೇಶದಲ್ಲೇ ಕರ್ನಾಟಕಕ್ಕೆ 3ನೇ ಸ್ಥಾನ

    ಗ್ರಾಮಠಾಣಾ ಆಸ್ತಿಗಳಿಗೆ ನ.1ರಿಂದ ಮನೆ ಬಾಗಿಲಿಗೇ ಇ-ಸ್ವತ್ತು ಖಾತೆ: ಈಶ್ವರ ಖಂಡ್ರೆ ಸೂಚನೆ

    ಮಂಗಳೂರಿನಲ್ಲಿ ಮೊದಲ ಸಚಿವ ಸಂಪುಟ ಸಭೆ: ₹32,611 ಕೋಟಿ ಯೋಜನೆಗಳಿಗೆ ಅನುಮೋದನೆ: ತುಳು ಎರಡನೇ ಹೆಚ್ಚುವರಿ ಆಡಳಿತ ಭಾಷೆಯಾಗಿ ಘೋಷಣೆ

    Breaking News | ನವೆಂಬರ್ ಅಂತ್ಯಕ್ಕೆ ತುಮಕೂರಿಗೆ ಎತ್ತಿನಹೊಳೆ ನೀರು: ಸಚಿವ ಚಲುವರಾಯಸ್ವಾಮಿ ಭರವಸೆ

    ಮೆಕ್ಕಾ ವಾಯುಪ್ರದೇಶದ ಬಳಿ ಹೌತಿ ಡ್ರೋನ್ ಹೊಡೆದುರುಳಿಸಿದ ಸೌದಿ ಅರೇಬಿಯಾ: ಪವಿತ್ರ ಕ್ಷೇತ್ರಗಳ ರಕ್ಷಣೆ ‘ರೆಡ್ ಲೈನ್’ ಎಂದ ರಿಯಾದ್

    ಯುಪಿಐ ಡಿಜಿಟಲ್ ವಹಿವಾಟಿನ ಸಾಂದರ್ಭಿಕ ಚಿತ್ರ

    UPI ವಹಿವಾಟಿಗೆ ಹೊಸ ನಿಯಮ: ಯಾರಿಗೆ ಶುಲ್ಕ? ಯಾರಿಗೆ ಉಚಿತ? ಇಲ್ಲಿದೆ ಸಂಪೂರ್ಣ ವಿವರ

    ಕೋಲ್ಕತ್ತಾದ ಲೆನಿನ್, ಕಾರ್ಲ್ ಮಾರ್ಕ್ಸ್ ರಸ್ತೆಗಳ ಹೆಸರು ಬದಲು? ಪಶ್ಚಿಮ ಬಂಗಾಳ ಸರ್ಕಾರದಿಂದ ಸಿದ್ಧತೆ

    Technology News | ಈಗ, ಕೂತಲ್ಲೇ ವಿಶ್ವ ಸುತ್ತಿ: Live ಕ್ಯಾಮ್ ಮ್ಯಾಪ್ ಮೂಲಕ ಜಗತ್ತನ್ನು ಕಣ್ತುಂಬಿಕೊಳ್ಳಿ!!

    ಪಿಡಬ್ಲ್ಯೂಡಿ ಲಂಚದ ಹಣ ಆಫ್ರಿಕಾದ ಚಿನ್ನದ ಗಣಿಗೆ?: ಸತೀಶ್ ಜಾರಕಿಹೊಳಿ ವಿರುದ್ಧ ಆರ್. ಅಶೋಕ್ ಗಂಭೀರ ಆರೋಪ

  • Bengaluru Focus

    Power News | ಭಾರತ್ ಎಲೆಕ್ಟ್ರಿಕ್ ಮೊಬಿಲಿಟಿ ಸೂಚ್ಯಂಕ: ದೇಶದಲ್ಲೇ ಕರ್ನಾಟಕಕ್ಕೆ 3ನೇ ಸ್ಥಾನ

    ​ಜೆ.ಪಿ. ನಗರದಿಂದ ಗೊಟ್ಟಿಗೆರೆವರೆಗೆ ಶೇ. 34 ರಷ್ಟು ಬೀದಿ ದೀಪ ಬಂದ್; ​ಕತ್ತಲಲ್ಲಿ ರಸ್ತೆಗಳು; ಸಚಿವ ಕೃಷ್ಣ ಬೈರೇಗೌಡ ದಿಢೀರ್ ರಾತ್ರಿ ರೌಂಡ್ಸ್

    GBA Head Office Image

    GBA News | ಬೆಂಗಳೂರು : ಜಿಬಿಎ ವ್ಯಾಪ್ತಿಯಲ್ಲಿ ಇ-ಖಾತಾ ಸೇವೆಗಳು ಮತ್ತಷ್ಟು ಸುಲಭ; ಸೆ. 21ರಿಂದ ‘ಇ-ಆಸ್ತಿ 2.0’ ನೂತನ ಇ-ಖಾತಾ ವ್ಯವಸ್ಥೆ ಜಾರಿ

    ಬೆಸ್ಕಾಂ ಕೇಂದ್ರ ಕಚೇರಿ (ಸಾಂದರ್ಭಿಕ ಚಿತ್ರ)

    Bescom News | ಬೆಸ್ಕಾಂ ಗ್ರಾಹಕರ ಗಮನಕ್ಕೆ: ಈ 20 ಪಟ್ಟಣಗಳಲ್ಲಿ 2 ದಿನ ಆನ್‌ಲೈನ್‌ ಸೇವೆಗಳು ಬಂದ್

    ಕನಕಪುರ ಹಾಸ್ಟೆಲ್‌ಗೆ ಡಿಕೆಶಿ ದಿಢೀರ್ ಭೇಟಿ: ವಿದ್ಯಾರ್ಥಿಗಳ ಜೊತೆ ಊಟ ಸವಿದ ಸಿಎಂ

    CREATOR: gd-jpeg v1.0 (using IJG JPEG v80), quality = 82?

    ಬೆಂಗಳೂರಿನ ಎಲ್ಲೆಡೆ ಗಣೇಶ ಚತುರ್ಥಿ ಸಂಭ್ರಮಾಚರಣೆ : 42 ಕೆರೆಯ ಕಲ್ಯಾಣಿಗಳು, 659 ಮೊಬೈಲ್ ಟ್ಯಾಂಕ್‌ಗಳ ಮೂರ್ತಿಗಳ ವಿಸರ್ಜನೆಗೆ ಅವಕಾಶ

    Bescom News | ​ಸಾರ್ವಜನಿಕ ಗಣೇಶೋತ್ಸವ: ಬೆಸ್ಕಾಂ ಕಟ್ಟುನಿಟ್ಟಿನ ಸುರಕ್ಷತಾ ಮಾರ್ಗಸೂಚಿ ಪ್ರಕಟ

    BIG BREAKING | ₹15 ಕೋಟಿ ಸುರಿದ ಬೆನ್ನಲ್ಲೇ ಬಿಡಿಎ ಕೇಂದ್ರ ಕಚೇರಿ ಪಾರಂಪರಿಕ ಕಟ್ಟಡ ಕೆಡವಲು ಸಂಚು: ನೌಕರರ ತೀವ್ರ ಆಕ್ರೋಶ

    GBA News | ಬೆಂಗಳೂರು ರಸ್ತೆ ಗುಂಡಿಗಳಿಗೆ ₹2 ಕೋಟಿಯ ‘ಜೆಟ್ ಪ್ಯಾಚರ್’ ಮುಲಾಮು: ಶಾಶ್ವತ ಪರಿಹಾರವೇ, ಕೇವಲ ಬೂಟಾಟಿಕೆಯೇ?

  • Public interest
  • BW Special
  • Life Style
  • Photo Gallery
  • Video
No Result
View All Result

Home Bengaluru Focus

Namma Metro URJA TBM | ಭೂಮಿ ಸೀಳಿ ಸುರಂಗ ಕೊರೆದು ಹೊರಬಂದ ಊರ್ಜಾ….!

ನಮ್ಮ ಮೆಟ್ರೋ 2ನೇ ಹಂತದ ಕಾಮಗಾರಿ ಗಡುವು 2025ಕ್ಕೆ ಬದಲು, 2024ಕ್ಕೆ ಪೂರ್ಣ - ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗಡುವು.

by Bengaluru Wire Desk
September 22, 2021
in Bengaluru Focus, News Wire, Video
Reading Time: 2 mins read
0

ಬೆಂಗಳೂರು, (www.bengaluruwire.com) : ಎರಡನೇ ಹಂತದ ನಮ್ಮ ಮೆಟ್ರೊ ಸುರಂಗ ಮಾರ್ಗದ ಮೊದಲ ಟನಲ್ ಬೋರಿಂಗ್ ಮೆಷಿನ್ (ಟಿಬಿಎಮ್) ಊರ್ಜಾ ಯಂತ್ರ, ಸುರಂಗ ಕೊರೆದು ಬೆಳಗ್ಗೆ 10:16ಕ್ಕೆ ಸರಿಯಾಗಿ ಶಿವಾಜಿನಗರ ಮೆಟ್ರೋ‌ನಿಲ್ದಾಣದಲ್ಲಿ 13 ತಿಂಗಳ ಬಳಿಕ ಹೊರಬಂದಿದೆ.

ಶಿವಾಜಿನಗರದಿಂದ ಟ್ಯಾನರಿ ರಸ್ತೆ ನಿಲ್ದಾಣದವರೆಗೆ ಎರಡು ಸುರಂಗ ಮಾರ್ಗಗಳ ಪೈಕಿ ಊರ್ಜಾ ಉತ್ತರ ಮಾರ್ಗದಲ್ಲಿ 855 ಮೀಟರ್ ಉದ್ದದ ಸುರಂಗ ಮಾರ್ಗವನ್ನು ಕೊರೆದಿತ್ತು. ಅಂತಿಮವಾಗಿ ಶಿವಾಜಿನಗರ ಮೆಟ್ರೊ ಸುರಂಗ ನಿಲ್ದಾಣದಲ್ಲಿ ಸುರಂಗ ಮಾರ್ಗಕ್ಕೆ ಹಾಕಲಾಗಿದ್ದ ಕಾಂಕ್ರೀಟ್ ತಡೆಗೋಡೆಯನ್ನು ಸೀಳಿ ಆಚೆ ಬಂದಿತು.

ಟನಲ್ ಬೋರಿಂಗ್ ಮೆಷಿನ್ ಊರ್ಜಾ ಸುರಂಗ ಮಾರ್ಗದಲ್ಲಿ ನಿಂತಿರುವ ಚಿತ್ರ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಈ ಮಹತ್ತರ ಕ್ಷಣಕ್ಕೆ ಸಾಕ್ಷಿಯಾಗಿದ್ದರು. ಟಿಬಿಎಮ್ ಯಂತ್ರ ಊರ್ಜಾ ಕಾರ್ಯಾಚರಣೆ ಬಳಿಕ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬೆಂಗಳೂರು ನಗರಕ್ಕೆ ಇದೊಂದು ಪ್ರಮುಖ ಯೋಜನೆಯಾಗಿದೆ. ಮೆಟ್ರೋ ಎರಡನೇ ಹಂತದ ಕಾಮಗಾರಿ 2025 ರ ಡಿಸೆಂಬರ್ ಒಳಗೆ ಬದಲಾಗಿ 2024 ರ ಡಿಸೆಂಬರ್ ಒಳಗೆ ಪೂರ್ಣಗೊಳಿಸಲು ಕ್ರಮವಹಿಸಿ ಎಂದು ಮೆಟ್ರೊ ಅಧಿಕಾರಿಗಳಿಗೆ ಗಡುವು ನೀಡಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾರ್ಯಕ್ರಮದಲ್ಲಿ‌ ಮಾತನಾಡುತ್ತಿರುವ ದೃಶ್ಯ

ಮೆಟ್ರೊ ಹೆಚ್ಚಿನ ಕಾರ್ಮಿಕರು, ಅಧಿಕಾರಿಗಳು ಹಾಗೂ ಯಂತ್ರೋಪಕರಣ ಮತ್ತಿತರ ಸಂಪನ್ಮೂಲ ಬಳಸಿ ಗಡುವಿಗಿಂತ ಒಂದು ವರ್ಷ ಮುಂಚೆ ಕಾಮಗಾರಿ ಮುಗಿಸಲಿ. ಇದರಿಂದ ನಗರದ ಮೇಲಿನ ಸಂಚಾರದ ಒತ್ತಡ ಕಡಿಮೆಯಾಗಲಿದೆ. ಸುರಂಗ ಮಾರ್ಗ ನಿರ್ಮಾಣ ಬಹಳ ಸವಾಲಿನ ಕೆಲಸ. ಮೊದಲ ಹಂತದ ಸುರಂಗ ಮಾರ್ಗ ನಿರ್ಮಾಣ ಮಾಡುವಾಗ ಮೆಜಿಸ್ಟಿಕ್ ನಲ್ಲಿಬಟಿಬಿಎಮ್ ಯಂತ್ರ ಸಿಲುಕಿ ಕಾಮಗಾರಿಗೆ ಸಾಕಷ್ಟು ಅಡಚಣೆ ಆಗಿತ್ತು. ಆದರೆ ಅದನ್ನು ಸವಾಲಾಗಿ ಸ್ವೀಕರಿಸಿ ಕೆಲಸ ಪೂರ್ಣಗೊಳಿಸಲಾಗಿತ್ತು.

ಹಿಂದಿನ ಅನುಭವದ ಆಧಾರದ ಮೇಲೆ ಎರಡನೇ ಹಂತದಲ್ಲಿ ಸುರಂಗ ಮಾರ್ಗ ನಿರ್ಮಾಣ ಕೆಲಸವನ್ನು ಯಶಸ್ವಿಯಾಗಿ ನಮ್ಮ ಮೆಟ್ರೊ ಪೂರ್ಣಗೊಳಿಸಲಿ. ಊರ್ಜಾ ಯಂತ್ರ ಯಶಸ್ವಿಯಾಗಿ ಕಾರ್ಯಾಚರಣೆ ಮುಗಿಸಿದ್ದು, ಮುಂದೆ ಕಂಟೋನ್ಮೆಂಟ್ ನಿಂದ ಪಾಟರಿ ಟೌನ್ ಸುರಂಗ ನಿಲ್ದಾಣದ ತನಕ ಸುರಂಗ ಕೊರೆಯಲು ಬಳಕೆಯಾಗಲಿದೆ ಎಂದು ಸಿಎಂ ಹೇಳಿದರು.

ಮೆಟ್ರೊ ಗೆ ಬೆಂಗಳೂರಿನ ಜನ ಸಹಕಾರ ಮಾಡಿದ್ದಾರೆ. ಈ ಕಾಮಗಾರಿಗಳಿಂದ ಸಂಚಾರ ಅಡಚಣೆ ಮತ್ತಿತರ ತೊಂದರೆ ಆದರೂ ಸಹಿಸಿಕೊಂಡಿದ್ದಾರೆ. ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಏರ್ ಪೋರ್ಟ್ 2ಬಿ ಮಾರ್ಗದ ಕಾಮಗಾರಿಗೆ ಸದ್ಯದಲ್ಲೇ ಚಾಲನೆ ನೀಡಲಿದ್ದೇವೆ. ಎರಡನೇ ಹಂತ ಪೂರ್ಣಗೊಂಡ ಬಳಿಕ ಮೂರನೇ ಹಂತದ ಕಾಮಗಾರಿ ಕಾರ್ಯಾರಂಭ ಮಾಡಲಿದೆ. ಮೂರು ಹಂತ ಪೂರ್ಣ ಗೊಂಡಾಗ ನಗರ ಸಾರಿಗೆಯಲ್ಲಿ ಮೆಟ್ರೋ ಲೈಫ್ ಲೈನ್ ಆಗಲಿದೆ ಎಂದು ಮುಖ್ಯಮಂತ್ರಿಗಳು ವಿಶ್ಲೇಷಿಸಿದರು.

ಬಿಬಿಎಂಆರ್ ಸಿಎಲ್ ಎಂಡಿ ಅಂಜುಮ್ ಪರ್ವೇಜ್

ಬಳಿಕ ಮಾತನಾಡಿದ ಬಿಎಂಆರ್ ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್, ಇವತ್ತು ಬಿಎಂಆರ್ಸಿಎಲ್ ಗೆ ಖುಷಿಯ ದಿನ. ಮೊದಲ ಹಂತ ಯಶಸ್ವಿ ಬಳಿಕ ಎರಡನೇ ಹಂತದ ಸುರಂಗ‌ ಮಾರ್ಗದಲ್ಲಿ‌ ಮೊದಲ ಟಿಬಿಎಮ್ ಊರ್ಜಾ ತನ್ನ ಪಾಲಿನ ಒಂದು ಹಂತದ ಕಾರ್ಯಾಚರಣೆ ಮುಗಿಸಿದೆ. ಆರ್ ವಿ ರಸ್ತೆ – ಬೊಮ್ಮಸಂದ್ರ ಮೆಟ್ರೊ ಮಾರ್ಗ ಹಾಗೂ ಡೈರಿ ಸರ್ಕಲ್ , ಕಂಟೋನ್ಮೆಂಟ್ ಸುರಂಗ ಮಾರ್ಗ ಸವಾಲಿನ  ಮಾರ್ಗ ಆಗಿದೆ.

2ನೇ ಹಂತದ ಮೆಟ್ರೊ ಸುರಂಗ ಮಾರ್ಗದಲ್ಲಿ ಶೇ.60 ಕಲ್ಲುಗಳಿವೆ :

ಪ್ರತಿನಿತ್ಯ 9 ಟಿಬಿಎಂ ಗಳು ಮೂರೂವರೆ ಕಿಲೋ ಮೀಟರ್ ಸುರಂಗ ಕೊರೆಯುತ್ತವೆ. ಮುಖ್ಯಮಂತ್ರಿಗಳು ನೀಡಿದ ಗಡುವಿನಂತೆ ಮೆಟ್ರೊ ಟಾರ್ಗೆಟ್ ಗಿಂತ ಒಂದು ವರ್ಷ ಮೊದಲೇ ಎರಡನೇ ಹಂತದ ಕಾಮಗಾರಿ ಕೆಲಸ ಮುಗಿಸಲು ಬದ್ಧರಾಗಿದ್ದೇವೆ. 13.9 ಕಿ.ಮೀ ಸುರಂಗ ಮಾರ್ಗದಲ್ಲಿ ಶೇ.60 ರಷ್ಟು ಕಠಿಣವಾದ ಬಂಡೆಗಲ್ಲು, ಮೆದುಗಲ್ಲು ಸೇರಿದಂತೆ ವಿವಿಧ ಬಗೆಯ ಕಲ್ಲುಗಳಿರುವುದು ಭೌಗೋಳಿಕ ಸಮೀಕ್ಷೆ‌ ನಡೆಸಿದಾಗ ತಿಳಿದು ಬಂದಿದೆ. ಟಿಬಿಎಂ ದಿನದ 24 ಗಂಟೆ ಕಾರ್ಯಾಚರಣೆ ನಡೆಸುತ್ತವೆ ಎಂದು ಹೇಳಿದರು.

ಎರಡನೇ ಹಂತದಲ್ಲಿ ಮರಗಳ ಕಡಿತ ವಿಚಾರದ ಅಡ್ಡಿ ನಿವಾರಣೆ :
ಎರಡನೇ ಹಂತದಲ್ಲಿ ಕಾಮಗಾರಿ ನಡೆಯುವ ಮಾರ್ಗದಲ್ಲಿ‌ ಮರಗಳ ವಿಚಾರದಲ್ಲಿ ಇದ್ದ ಅಡ್ಡಿ ಆತಂಕಗಳನ್ನು ಹೈಕೋರ್ಟ್ ನಿವಾರಿಸಿದೆ. ಏರ್ ಪೋರ್ಟ್ 2ಬಿ ಮಾರ್ಗ ನಿರ್ಮಾಣದ ವಿಚಾರದಲ್ಲಿ ಇದ್ದ ಸಮಸ್ಯೆ ನಿವಾರಣೆಯಾಗಿದೆ. ಏರ್ ಪೋರ್ಟ್ ಮೆಟ್ರೊ ಮಾರ್ಗ ಪೂರ್ಣಗೊಳಿಸಲು‌ 2025ರ ಡಿಸೆಂಬರ್ ಗುರಿಯಿದ್ದರೂ ಒಂದು ವರ್ಷ ಮೊದಲೇ ಕಾಮಗಾರಿ ಮುಗಿಸುತ್ತೇವೆ ಎಂದು ಮೆಟ್ರೋ ಎಂಡಿ ಅಂಜುಂ ಪರ್ವೇಜ್ ಭರವಸೆ ನೀಡಿದರು.

ಮೆಟ್ರೊ ಎರಡನೇ ಹಂತದ ಕಾಮಗಾರಿಗಳ ಪೈಕಿ ಗೊಟ್ಟಗೆರೆಯಿಂದ ನಾಗಾವಾರದ ತನಕ ಒಟ್ಟು 21 ಕಿ.ಮೀ ಮೆಟ್ರೋ ಮಾರ್ಗವಿದೆ. ಆ ಪೈಕಿ 13.9 ಕಿ.ಮೀ ಮಾರ್ಗ ಸುರಂಗ ಮಾರ್ಗವಾಗಿದ್ದು ಒಟ್ಟು 4 ಪ್ಯಾಕೇಜ್ ಗಳಲ್ಲಿ ಮೂರು ಕಂಪನಿಗಳು ಕಾರ್ಯಾಚರಣೆ ನಡೆಸುತ್ತಿದೆ.

ಊರ್ಜಾ ಟಿಬಿಎಮ್ ಯಂತ್ರ ಬರಮಾಡಿಕೊಳ್ಳುವ ಕಾರ್ಯಕ್ರಮದಲ್ಲಿ ಸಂಸದ ಪಿ.ಸಿ.ಮೋಹನ್, ಸಹಕಾರ ಸಚಿವ ಎಸ್.ಟಿ.ಸೋಮಶೇಖರ್, ಶಾಸಕ ರಿಜ್ವಾನ್ ಅರ್ಷದ್, ವಿಧಾನ ಪರಿಷತ್ ಸದಸ್ಯರು ಹಾಗೂ ಮೆಟ್ರೋ ಅಧಿಕಾರಿಗಳು ಪಾಲ್ಗೊಂಡಿದ್ದರು.

ಸುರಂಗ ಮಾರ್ಗ ನಿರ್ಮಾಣದ ಬಗ್ಗೆ ಅಧಿಕಾರಿಗಳ ಅನುಭವ :

“ಬಿಎಂಆರ್ ಸಿಎಲ್ ನೇತೃತ್ವದಲ್ಲಿ ನಡೆಯುತ್ತಿರುವ ಸುರಂಗ ಮಾರ್ಗ ನಿರ್ಮಾಣ ಕಾರ್ಯದಲ್ಲಿ ಊರ್ಜಾ ಟಿಬಿಎಮ್ ಯಂತ್ರ ಹಳೆಯ ಪ್ರದೇಶ ಹಾಗೂ ಹಳೆಯ ಕಟ್ಟಡಗಳಿರುವ ಭೂಮಿಯಡಿ ಜನರಿಗೆ ತೊಂದರೆಯಾಗದಂತೆ ಕಾರ್ಯನಿರ್ವಹಿಸಿದೆ. ಈ ಭಾಗದಲ್ಲಿ ಟಿಬಿಎಮ್ ಯಂತ್ರದ ಮೇಲೆ ಹೆಚ್ಚಿನ ಒತ್ತಡ ಇರಲಿಲ್ಲ.‌ ಯಂತ್ರದ ವೈಬ್ರೇಷನ್ ಜಾಸ್ತಿ ಬಂದಿರಲಿಲ್ಲ. ಶಿವಾಜಿನಗರ – ಟ್ಯಾನರಿ ರಸ್ತೆ ಮಾರ್ಗದಲ್ಲಿ 14 ಬೋರ್ ವೆಲ್ ಗಳ ಪೈಕಿ 3 ಬೋರ್ ವೆಲ್ ಬಳಕೆಯಾಗುತ್ತಿರಲಿಲ್ಲ. ಉಳಿದ ಬೋರ್ ವೆಲ್ ಮಾಲೀಕರಿಗೆ ಪರಿಹಾರ ನೀಡಿ ಅದನ್ನು ಬಂದ್ ಮಾಡಿ ಕೆಲಸ ಮಾಡಿದ್ದೇವೆ.”

– ಮಜರ್, ಎಇಇ, ಬಿಎಂಆರ್ ಸಿಎಲ್

ರೋಹಿತ್, ಎಲ್ ಅಂಡ್ ಟಿ ಟನಲ್ ಸೇಫ್ಟಿ ಮ್ಯಾನೇಜರ್

“ಕಳೆದ ಒಂದು ವರ್ಷದಿಂದ ಊರ್ಜಾ ಟಿಬಿಎಮ್ ಬಳಸಿ ದಿನದ 24 ಗಂಟೆ ಕೆಲಸ ಮಾಡಿ ಬುಧವಾರ ಯಶಸ್ವಿಯಾಗಿ ಶಿವಾಜಿನಗರ ನಿಲ್ದಾಣಕ್ಕೆ ಈ ಯಂತ್ರ ಬಂದು ನಿಂತಿದೆ. ಒಂದೊಂದು ಶಿಫ್ಟ್ ನಲ್ಲಿ ತಲಾ 60 ಜನ ಕಾರ್ಮಿಕರು ಸೇರಿದಂತೆ ಎರಡು ಶಿಫ್ಟ್ ನಲ್ಲಿ 120 ಮಂದಿ ಕಾರ್ಯ ನಿರ್ವಹಿಸಿ ಎದುರಾದ ಸವಾಲುಗಳನ್ನು ನಿವಾರಿಸಿ ಯಶಸ್ವಿಯಾಗಿದ್ದೇವೆ. ಸುರಂಗ ಕಾಮಗಾರಿ ಸ್ಥಳದಲ್ಲಿ ಆಮ್ಲಜನಕ ಸಿಲಿಂಡರ್, ವೈದ್ಯರು ಸೂಕ್ತ ಔಷಧಿ ಹಾಗೂ ವೈದ್ಯೋಪಕರಣಗಳೊಂದಿಗೆ ಸದಾ ಲಭ್ಯವಿರುತ್ತಾರೆ. ಆ ಮೂಲಕ ಕಾರ್ಮಿಕರ ಸುರಕ್ಷತೆಗೆ ಆದ್ಯ ಗಮನ ನೀಡಿ ಭೂಮಿ ಮೇಲಿನ ಕಟ್ಟಡಗಳಿಗೆ ಹಾನಿಯಾಗದಂತೆ ಊರ್ಜಾ ಕೆಲಸ ಮಾಡಿದೆ.”

– ರೋಹಿತ್, ಎಲ್ ಅಂಡ್ ಟಿ ಟನಲ್ ಸುರಕ್ಷತಾ ಮ್ಯಾನೇಜರ್

Sharing is Caring

  • Share on WhatsApp (Opens in new window) WhatsApp
  • Print (Opens in new window) Print
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Share on LinkedIn (Opens in new window) LinkedIn

Like this:

Like Loading…
WhatsApp Join our WhatsApp Channel
Previous Post

NAMMA METRO 2ND PHASE TUNNEL | ಭೂಮಿಯಡಿಯ ಮೆಟ್ರೊ ಸುರಂಗಮಾರ್ಗದಿಂದ ಹೊರಬರಲಿದೆ ಊರ್ಜಾ ಟಿಬಿಎಮ್ ಯಂತ್ರ….!

Next Post

BBMP TREE BRANCH MISHAP | ಮರದಕೊಂಬೆ ಬಿದ್ದು ಸಾವನ್ನಪ್ಪಿದ ಕುಟುಂಬಕ್ಕೆ 1 ವರ್ಷವಾದರೂ ಪರಿಹಾರ ನೀಡದ ಬಿಬಿಎಂಪಿ

Next Post

BBMP TREE BRANCH MISHAP | ಮರದಕೊಂಬೆ ಬಿದ್ದು ಸಾವನ್ನಪ್ಪಿದ ಕುಟುಂಬಕ್ಕೆ 1 ವರ್ಷವಾದರೂ ಪರಿಹಾರ ನೀಡದ ಬಿಬಿಎಂಪಿ

ಎತ್ತಿನಗಾಡಿ ಆಯ್ತು, ಸೈಕಲ್ ಜಾಥಾ ಮುಗೀತು ಈಗ ಕುದುರೆ ಟಾಂಗ ಏರಿದ ಕಾಂಗ್ರೆಸ್ ಮುಖಂಡರು

Please login to join discussion

Like Us on Facebook

Follow Us on Twitter

Recent News

Power News | ಭಾರತ್ ಎಲೆಕ್ಟ್ರಿಕ್ ಮೊಬಿಲಿಟಿ ಸೂಚ್ಯಂಕ: ದೇಶದಲ್ಲೇ ಕರ್ನಾಟಕಕ್ಕೆ 3ನೇ ಸ್ಥಾನ

September 19, 2026

ಗ್ರಾಮಠಾಣಾ ಆಸ್ತಿಗಳಿಗೆ ನ.1ರಿಂದ ಮನೆ ಬಾಗಿಲಿಗೇ ಇ-ಸ್ವತ್ತು ಖಾತೆ: ಈಶ್ವರ ಖಂಡ್ರೆ ಸೂಚನೆ

September 19, 2026
Bengaluru Wire, Kannada News, latest News in Kannada

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

Power News | ಭಾರತ್ ಎಲೆಕ್ಟ್ರಿಕ್ ಮೊಬಿಲಿಟಿ ಸೂಚ್ಯಂಕ: ದೇಶದಲ್ಲೇ ಕರ್ನಾಟಕಕ್ಕೆ 3ನೇ ಸ್ಥಾನ

September 19, 2026

ಗ್ರಾಮಠಾಣಾ ಆಸ್ತಿಗಳಿಗೆ ನ.1ರಿಂದ ಮನೆ ಬಾಗಿಲಿಗೇ ಇ-ಸ್ವತ್ತು ಖಾತೆ: ಈಶ್ವರ ಖಂಡ್ರೆ ಸೂಚನೆ

September 19, 2026

​ಜೆ.ಪಿ. ನಗರದಿಂದ ಗೊಟ್ಟಿಗೆರೆವರೆಗೆ ಶೇ. 34 ರಷ್ಟು ಬೀದಿ ದೀಪ ಬಂದ್; ​ಕತ್ತಲಲ್ಲಿ ರಸ್ತೆಗಳು; ಸಚಿವ ಕೃಷ್ಣ ಬೈರೇಗೌಡ ದಿಢೀರ್ ರಾತ್ರಿ ರೌಂಡ್ಸ್

September 19, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group
%d