ಬೆಂಗಳೂರು, ಆ.05 www.bengaluruwire.com: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (KSRTC) ಬೆಂಗಳೂರು ಕೇಂದ್ರೀಯ ವಿಭಾಗವು ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ “ಬೆಂಗಳೂರು-ಜೋಗ ಜಲಪಾತ” ನೂತನ ಪ್ಯಾಕೇಜ್ ಟೂರ್ ಸಾರಿಗೆಯನ್ನು ಪ್ರಕಟಿಸಿದೆ.
ಈ ವಾರಾಂತ್ಯದ ಪ್ಯಾಕೇಜ್ ಪ್ರವಾಸವು ಆಗಸ್ಟ್ 8ರಿಂದ ಅಧಿಕೃತವಾಗಿ ಆರಂಭಗೊಳ್ಳಲಿದ್ದು, ಶಿವಮೊಗ್ಗ ಹಾಗೂ ಸಾಗರ ಮಾರ್ಗವಾಗಿ ಸಂಚರಿಸಲಿದೆ.
ಸಾರ್ವಜನಿಕ ಪ್ರಯಾಣಿಕರಿಗೆ ಅನುಕೂಲವಾಗುವಂತೆ ನಾನ್ ಎಸಿ ಸ್ಲೀಪರ್ (Non A/C Sleeper) ವಾಹನದ ಮೂಲಕ ಈ ಸೇವೆ ಒದಗಿಸಲಾಗುತ್ತಿದ್ದು, ಪ್ರತಿ ವಾರಾಂತ್ಯದ ದಿನಗಳಲ್ಲಿ (ಶುಕ್ರವಾರ ಮತ್ತು ಶನಿವಾರ) ಬೆಂಗಳೂರಿನಿಂದ ಬಸ್ಸುಗಳು ಹೊರಡಲಿವೆ. ಒಟ್ಟು 840 ಕಿಲೋಮೀಟರ್ ದೂರದ ಈ ಪ್ಯಾಕೇಜ್‌ನಲ್ಲಿ ಬೆಳಗಿನ ಉಪಹಾರ, ಮಧ್ಯಾಹ್ನದ ಊಟ ಹಾಗೂ ರಾತ್ರಿಯ ಊಟದ ಸೌಲಭ್ಯಗಳನ್ನು ಸೇರಿಸಲಾಗಿದೆ.
ಪ್ರವಾಸದ ವೇಳಾಪಟ್ಟಿ ಮತ್ತು ಭೇಟಿ ನೀಡುವ ಸ್ಥಳಗಳು:

ಈ ಪ್ಯಾಕೇಜ್ ಟೂರ್‌ನಲ್ಲಿ ಜೋಗ ಜಲಪಾತದ ಜೊತೆಗೆ ಸುತ್ತಮುತ್ತಲಿನ ಹಲವು ಐತಿಹಾಸಿಕ ಹಾಗೂ ಧಾರ್ಮಿಕ ಸ್ಥಳಗಳ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ:
ಬೆಂಗಳೂರಿನಿಂದ ಸಾಗರ: ರಾತ್ರಿ 22:30 ರಿಂದ ಬೆಳಿಗ್ಗೆ 05:30
ಹೋಟೆಲ್‌ನಲ್ಲಿ ವಿಶ್ರಾಂತಿ ಹಾಗೂ ಫ್ರೆಶ್‌ಅಪ್: ಬೆಳಿಗ್ಗೆ 05:30 ರಿಂದ 07:00
ಉಪಹಾರ: ಬೆಳಿಗ್ಗೆ 07:00 ರಿಂದ 07:15
ಸಾಗರದಿಂದ ವರದಹಳ್ಳಿ: ಬೆಳಿಗ್ಗೆ 07:15 ರಿಂದ 07:30
ವರದಹಳ್ಳಿಯಿಂದ ವರದಮೂಲ: ಬೆಳಿಗ್ಗೆ 08:30 ರಿಂದ 09:00
ವರದಮೂಲದಿಂದ ಇಕ್ಕೇರಿ: ಬೆಳಿಗ್ಗೆ 09:15 ರಿಂದ 09:30
ಇಕ್ಕೇರಿಯಿಂದ ಕೆಳದಿ: ಬೆಳಿಗ್ಗೆ 10:30 ರಿಂದ 11:00
ಕೆಳದಿಯಿಂದ ಸಾಗರ: ಮಧ್ಯಾಹ್ನ 12:00 ರಿಂದ 12:30
ಮಧ್ಯಾಹ್ನದ ಊಟ: ಮಧ್ಯಾಹ್ನ 12:45 ರಿಂದ 13:15
ಸಾಗರದಿಂದ ಜೋಗ ಜಲಪಾತ: ಮಧ್ಯಾಹ್ನ 13:30 ರಿಂದ 14:15
ಜೋಗ ಜಲಪಾತದಿಂದ ಸಾಗರ: ಸಂಜೆ 18:15 ರಿಂದ 19:00
ಶಾಪಿಂಗ್ ಸಮಯ: ರಾತ್ರಿ 19:00 ರಿಂದ 20:00
ರಾತ್ರಿ ಊಟ: ರಾತ್ರಿ 20:30 ರಿಂದ 20:45
ಸಾಗರದಿಂದ ಬೆಂಗಳೂರು (ವಾಪಸ್): ರಾತ್ರಿ 22:00 ರಿಂದ ಬೆಳಿಗ್ಗೆ 05:00
ಪ್ರಯಾಣ ದರದ ವಿವರಗಳು:
ಈ ಪ್ಯಾಕೇಜ್ ದರದಲ್ಲಿ ಊಟೋಪಹಾರ, ಗೈಡ್ ಶುಲ್ಕ (ರೂ. 500/ದಿನ), ಜೋಗ ಜಲಪಾತದ ಪ್ರವೇಶ ಶುಲ್ಕ (ರೂ. 10), ಟೋಲ್ ಶುಲ್ಕ (ರೂ. 63) ಹಾಗೂ ಮುಂಗಡ ಶುಲ್ಕ (ರೂ. 20) ಸೇರಿರುತ್ತವೆ.
ಪ್ರಯಾಣಿಕರ ವಿವರ ಮತ್ತು ಪ್ರಯಾಣ ದರ ಹೀಗಿದೆ: ವಯಸ್ಕರು (Adults) ₹ 3,300.00 ಹಾಗೂ ಮಕ್ಕಳು (6 ರಿಂದ 12 ವರ್ಷ) ₹ 3,000.00 ಗಳಾಗಿರುತ್ತದೆ.
ಟಿಕೆಟ್ ಬುಕಿಂಗ್ ಮತ್ತು ಸಂಪರ್ಕ ಮಾಹಿತಿ:
ಸಾರ್ವಜನಿಕ ಪ್ರಯಾಣಿಕರು ಈ ಪ್ಯಾಕೇಜ್ ಟೂರ್ ಸೌಲಭ್ಯಕ್ಕಾಗಿ ಟಿಕೆಟ್‌ಗಳನ್ನು ಮುಂಗಡವಾಗಿ ಕಾಯ್ದಿರಿಸಲು ಕೆಎಸ್‌ಆರ್‌ಟಿಸಿ ಅಧಿಕೃತ ವೆಬ್‌ಸೈಟ್‌ಗಳಾದ www.ksrtc.in ಹಾಗೂ www.ksrtc.karnataka.gov.in ಗೆ ಭೇಟಿ ನೀಡಬಹುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆಗಳು: 080-26252625, 7760990100, 7760990560, ಅಥವಾ 7760990287 ಅನ್ನು ಸಂಪರ್ಕಿಸಬಹುದು.



















