Wednesday, June 24, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ವಿಧಾನಪರಿಷತ್ ಚುನಾವಣೆ: ಅಡ್ಡ ಮತದಾನ ಮಾಡಿದ ಶಾಸಕರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾದ ಹೈಕಮಾಂಡ್

    ಬೆಂಗಳೂರು: ಯಂಟಗಾನಹಳ್ಳಿ ಕೆರೆಗೆ ವೈದ್ಯಕೀಯ ತ್ಯಾಜ್ಯ ಸುರಿದ ಖಾಸಗಿ ಕ್ಲಿನಿಕ್ ವೈದ್ಯನ ವಿರುದ್ಧ ಎಫ್.ಐ.ಆರ್. ದಾಖಲು

    Science News | ​ಮುಂಗಾರಿನಾಟ: ಮಹಾರಾಷ್ಟ್ರದಲ್ಲಿ ಒಣಹವೆ, ಆದರೆ ರಾಜಸ್ಥಾನದ ಮರುಭೂಮಿಯಲ್ಲಿ ಭಾರಿ ಮಳೆ

    ಸೈಬರ್ ಕ್ರೈಮ್ ಕುರಿತ ಸಾಂದರ್ಭಿಕ ಚಿತ್ರ

    ಸೈಬರ್ ವಂಚಕರಿಗೆ ಸಿಂಹಸ್ವಪ್ನವಾದ ಕರ್ನಾಟಕ ಪೊಲೀಸ್: ಕೋಟ್ಯಂತರ ರೂಪಾಯಿ ಉಳಿಸಲು ಬ್ಯಾಂಕ್ ಖಾತೆಗಳು ಬ್ಲಾಕ್

    ಟಾಟಾ ಪವರ್ ಅರ್ಜಿಗಳು ಸಂಪೂರ್ಣ ಆಂಗ್ಲಮಯ: ಕನ್ನಡಿಗರ ಭಾಷಾ ಹಕ್ಕಿಗೆ ಧಕ್ಕೆ,  ಡಾ. ಪುರುಷೋತ್ತಮ ಬಿಳಿಮಲೆ ಕೆಇಆರ್‌ಸಿಗೆ ಪತ್ರ

    Vidhana Soudha

    IAS Transfer | ರಾಜ್ಯದಲ್ಲಿ 13 ಐಎಎಸ್ ಅಧಿಕಾರಿಗಳ ವರ್ಗಾವಣೆ

    Viral Video | 25 ಸಾವಿರದ ಆಫೀಸ್ ಕೆಲಸಕ್ಕೆ ಗುಡ್‌ಬೈ ಹೇಳಿ ಕ್ಯಾಬ್ ಡ್ರೈವರ್ ಆದ ಯುವಕ; ಈಗ ಈತನ ತಿಂಗಳ ಗಳಿಕೆ 1 ಲಕ್ಷ ರೂ.!

    ಎನ್‌ಎಸ್‌ಇಯಿಂದ ₹30,000 ಕೋಟಿ ಮೊತ್ತದ ಐಪಿಒ ಸಲ್ಲಿಕೆ: ಇದು ಭಾರತದ ಅತಿದೊಡ್ಡ ಸಾರ್ವಜನಿಕ ಷೇರು ವಿತರಣೆ

    ಕರ್ನಾಟಕದಲ್ಲಿ ತೀವ್ರ ಜಲಕ್ಷಾಮ: ಶೇ. 21ರಷ್ಟು ಮಳೆ ಕೊರತೆ, 14 ಪ್ರಮುಖ ಜಲಾಶಯಗಳಲ್ಲಿ ಕೇವಲ 23% ನೀರು ಸಂಗ್ರಹ

  • Bengaluru Focus

    15 ಲಕ್ಷ ಸಸಿ ನೆಡುವ ಬೃಹತ್ ಅಭಿಯಾನ: ಹಸಿರು ಬೆಂಗಳೂರು ನಿರ್ಮಾಣಕ್ಕೆ ಮೆಗಾ ಡ್ರೈವ್

    ಬೆಂಗಳೂರು: ಯಂಟಗಾನಹಳ್ಳಿ ಕೆರೆಗೆ ವೈದ್ಯಕೀಯ ತ್ಯಾಜ್ಯ ಸುರಿದ ಖಾಸಗಿ ಕ್ಲಿನಿಕ್ ವೈದ್ಯನ ವಿರುದ್ಧ ಎಫ್.ಐ.ಆರ್. ದಾಖಲು

    GBA Head Office Image

    GBA News | ಬೆಂಗಳೂರಿನಲ್ಲಿ ಇ-ಖಾತಾ ಸೇವೆ ಮತ್ತಷ್ಟು ಸುಲಭ: 6 ವಾರಗಳಲ್ಲಿ 6,169 ಅರ್ಜಿಗಳ ಯಶಸ್ವಿ ವಿಲೇವಾರಿ

    ಬಿಡದಿ ಟೌನ್‌ಶಿಪ್ ವಿರೋಧಿ ರೈತರ ಹೋರಾಟ 450 ದಿನಕ್ಕೆ: ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ  ನಾಳೆ ಬೃಹತ್ ಪಾದಯಾತ್ರೆ 

    Defence News | ಬೆಂಗಳೂರು: ಎಎಸ್‌ಸಿ ಸೆಂಟರ್‌ನಲ್ಲಿ 8ನೇ ಬ್ಯಾಚ್‌ನ ಅಗ್ನಿವೀರರ ನಿರ್ಗಮನ ಪಥಸಂಚಲನ ಸಂಪನ್ನ

    ಸೈಬರ್ ಕ್ರೈಮ್ ಕುರಿತ ಸಾಂದರ್ಭಿಕ ಚಿತ್ರ

    ಸೈಬರ್ ವಂಚಕರಿಗೆ ಸಿಂಹಸ್ವಪ್ನವಾದ ಕರ್ನಾಟಕ ಪೊಲೀಸ್: ಕೋಟ್ಯಂತರ ರೂಪಾಯಿ ಉಳಿಸಲು ಬ್ಯಾಂಕ್ ಖಾತೆಗಳು ಬ್ಲಾಕ್

    BMTC News | ಕಿಲ್ಲರ್ ಬಿಎಂಟಿಸಿಗೆ ಮತ್ತೊಂದು ಬಲಿ: ಮಂಗನಹಳ್ಳಿ ಕ್ರಾಸ್ ಬಳಿ ಎಲೆಕ್ಟ್ರಿಕ್ ಬಸ್ ಹರಿದು ಪಾದಚಾರಿ ಸಾವು: ರಸ್ತೆ ಉಬ್ಬು ಅಳವಡಿಕೆಗೆ ಆಗ್ರಹ

    BWSSB News | ವರ್ತೂರು ಎಸ್‌ಟಿಪಿ ದುರ್ಘಟನೆ: 40 ಅಡಿ ಆಳದ ಟ್ಯಾಂಕ್‌ಗೆ ಬಿದ್ದು ಇಬ್ಬರು ಕಾರ್ಮಿಕರು ಸಾವು, ಕಾರ್ಯಾಚರಣೆಗೆ ಎನ್‌ಡಿಆರ್‌ಎಫ್ ಸಾಥ್

    Vidhana Soudha

    IAS Transfer | ರಾಜ್ಯದಲ್ಲಿ 13 ಐಎಎಸ್ ಅಧಿಕಾರಿಗಳ ವರ್ಗಾವಣೆ

  • Public interest
  • BW Special
  • Life Style
  • Photo Gallery
  • Video
No Result
View All Result

Home BW Special

#Ganagapura Clean | ಸ್ವಚ್ಛತೆಯತ್ತ ಸಾಗುತ್ತಿದೆ ಗಾಣಗಾಪುರದ ಸಂಗಮ ದತ್ತಕ್ಷೇತ್ರ : ಗ್ರಾಮೀಣ ನೈರ್ಮಲ್ಯ ಇಲಾಖೆ ಮುಂದಾಳತ್ವ

ಭೀಮಾ–ಅಮರ್ಜಾ ನದಿ ಸಂಗಮಗಳ ಮಧ್ಯೆ ಇರುವ ಈ ಪವಿತ್ರ ಕ್ಷೇತ್ರದಲ್ಲಿ ಉಟ್ಟಬಟ್ಟೆಗಳನ್ನೇ ನದಿ ದಡದಲ್ಲಿ ಬಿಸಾಡುತ್ತಿರುವುದರಿಂದ, ಎಲ್ಲೆಂದರಲ್ಲಿ ತ್ಯಾಜ್ಯ ಬಿಸಾಡುತ್ತಿರುವುದರಿಂದ ಸಂಗಮ ಕ್ಷೇತ್ರ ಮಲಿನ | ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಇದನ್ನೇ ಸವಾಲಾಗಿ ಸ್ವೀಕರಿಸಿ ಈ ಪರಿಸರದಲ್ಲಿ ಸ್ವಚ್ಛತೆ ಕಾರ್ಯ, ಅರಿವು ಕಾರ್ಯಕ್ರಮ ರೂಪಿಸಿ ಶೇ.70ರಷ್ಟು ಯಶಸ್ವಿಯಾಗಿದೆ

by Bengaluru Wire Desk
January 11, 2023
in BW Special, News Wire, Public interest
Reading Time: 2 mins read
0
ಗಾಣಗಾಪುರ ಸಂಗಮ ಕ್ಷೇತ್ರದ  ನದಿ ದಂಡೆಯಲ್ಲಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿರುವ ಕಾರ್ಯಕರ್ತರು

ಗಾಣಗಾಪುರ ಸಂಗಮ ಕ್ಷೇತ್ರದ ನದಿ ದಂಡೆಯಲ್ಲಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿರುವ ಕಾರ್ಯಕರ್ತರು

ಗಬ್ಬೆದ್ದು ನಾರುತ್ತಿದ್ದ ಕಲಬುರಗಿ ಜಿಲ್ಲೆಯಲ್ಲಿಯ ಅಫಜಲಪೂರು ತಾಲೂಕಿನ ಗಾಣಗಾಪುರ ಶ್ರೀ ಗುರು ದತ್ತಾತ್ರೇಯ ಕ್ಷೇತ್ರದಲ್ಲಿನ ನದಿ ಸಂಗಮ ಸ್ಥಳವು ಕಳೆದ ಕೆಲವು ದಿನಗಳಿಂದ ಸ್ವಚ್ಛತೆಯ ಹಾದಿಯತ್ತ ಮರುಳುತ್ತಿದೆ.

ದೇಶದ ಹಲವು ರಾಜ್ಯಗಳಿಂದ ಮುಜರಾಯಿ ಇಲಾಖೆಯ ಸುಪರ್ದಿಯಲ್ಲಿರುವ ಈ ದೇವಸ್ಥಾನಕ್ಕೆ ಲಕ್ಷಾಂತರ ಭಕ್ತ ಗಣವು ಬರುವ ಶ್ರೀ ಕ್ಷೇತ್ರದಲ್ಲಿ ಸ್ವಚ್ಛತೆಯದ್ದೇ ಬಹುದೊಡ್ಡ ಸಮಸ್ಯೆಯಾಗಿತ್ತು. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಹಾಗೂ ಕಲಬುರುಗಿ ಜಿಲ್ಲಾ ಪಂಚಾಯ್ತಿ ಅಧಿಕಾರಿಗಳು, ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಿರಂತರವಾಗಿ ಸಭೆ, ಭಕ್ತರು, ವ್ಯಾಪಾರಸ್ಥರಿಗೆ ಸ್ವಚ್ಛತೆ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ಹಾಗೂ ಸ್ವಚ್ಛಗೊಳಿಸುವ ಕಾರ್ಯದಿಂದ ಈ ಸಂಗಮ ಪವಿತ್ರ ಕ್ಷೇತ್ರದಲ್ಲಿನ ಕಸ, ಪ್ಲಾಸ್ಟಿಕ್ ಮತ್ತಿತರ ತ್ಯಾಜ್ಯಗಳ ರಾಶಿಯು ಕಡಿಮೆಯಾಗುತ್ತಿದೆ. ಶೇ.70ರಷ್ಟು ಸ್ವಚ್ಛತೆ ಕಾರ್ಯವನ್ನು ಕೈಗೊಳ್ಳುವಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯು ಯಶಸ್ವಿಯಾಗಿದೆ.

ಸಂಗಮ ಪುಣ್ಯ ಕ್ಷೇತ್ರದ ಹಿನ್ನಲೆ :

ಗಾಣಗಾಪುರದಲ್ಲಿರುವ ಶ್ರೀದತ್ತ ಕ್ಷೇತ್ರ ದೇವಸ್ಥಾನದ ಸಾಂದರ್ಭಿಕ ಚಿತ್ರ

ಕಲ್ಯಾಣ ಕರ್ನಾಟಕದ ಭಾಗದಲ್ಲಿನ ಇತಿಹಾಸ ಪ್ರಸಿದ್ಧ ಗಾಣಗಾಪುರ ಶ್ರೀ ದತ್ತ ಸುಕ್ಷೇತ್ರ ದೇಶ ವ್ಯಾಪಿ ಭಕ್ತರಿಗೆ ಜನಜನಿತವಾದ ಪುಣ್ಯ ಸ್ಥಳವಾಗಿದೆ. ಈ ಕ್ಷೇತ್ರವು ಗಾಣಗಾಪುರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿದ್ದು, ಕಲಬುರಗಿ ಜಿಲ್ಲಾ ಕೇಂದ್ರದಿಂದ 40 ಕೀ ಮೀ ದೂರದಲ್ಲಿದೆ. ಈ ಸಂಗಮ ಕ್ಷೇತ್ರದಲ್ಲಿ ತ್ರೀಮೂರ್ತಿ ಸ್ವರೂಪಿಗಳಾದ ಶ್ರೀ ದತ್ತಾತ್ರೇಯವರು ನೆಲೆಸಿದ್ದಾರೆ ಎನ್ನುವುದಕ್ಕೆ ಅವರ ನಂತರ ಅವತಾರ ಪುರುಷರಾದ ನರಸಿಂಹ ಸರಸ್ವತಿಯವರು ಗಾಣಗಾಪುರದಲ್ಲಿ ನೆಲೆಸಿದ್ದಕ್ಕೆ, ಅವರ ಮಾಡಿದ ಅನೇಕ ಪವಾಡಗಳು ಸಾಕ್ಷಿಯಾಗಿವೆ. ಮುಖ್ಯವಾಗಿ ಭೀಮಾ ಹಾಗೂ ಅಮರ್ಜಾ ನದಿಗಳ ಸಂಗಮ ಕೇತ್ರಕ್ಕೆ ಬಹಳಷ್ಟು ಮಹತ್ವವಿದೆ. ಇಲ್ಲಿ ನರಸಿಂಹ ಸರಸ್ವತಿಯವರ ನಿರ್ಗುಣ ಪಾದುಕೆಗಳು ಹಾಗೂ ಅವರು ಮಾಡಿದ ಪವಾಡಗಳು ಇಂದಿಗೂ ಜನರ ಬಾಯಲ್ಲಿ ಅಚ್ಚಳಿಯದ ಹಾಗೆ ಇದೆ. ವಿಶೇಷವಾಗಿ ಗುರು ಪೂರ್ಣಿಮೆ, ದತ್ತ ಜಯಂತಿ ಹಾಗೂ ಪ್ರತಿ ಗುರುವಾರ ಲಕ್ಷಾಂತರ ಜನರು ಸಂಗಮ ಕ್ಷೇತ್ರಕ್ಕೆ ಭೇಟಿ ನೀಡಿ ಪುನೀತರಾಗುತ್ತಾರೆ.

ಭಕ್ತರ ನಿರ್ಲಕ್ಷ್ಯದಿಂದ ಪವಿತ್ರ ಸಂಗಮ ಪ್ರದೇಶ ಮಲಿನ :

ಭೀಮಾ–ಅಮರಜಾ ನದಿ ಸಂಗಮಗಳ ಮಧ್ಯೆ ಇರುವ ಈ ಪವಿತ್ರ ಕ್ಷೇತ್ರವು ಸದಾ ಭಕ್ತರಿಂದ ತುಂಬಿ ತುಳುಕುತ್ತಿರುತ್ತದೆ. ಇಲ್ಲಿಗೆ ಆಂಧ್ರಪ್ರದೇಶ, ಮಹಾರಾಷ್ಟ್ರ ಮತ್ತು ತೆಲಂಗಾಣದಿಂದ ಲಕ್ಷಾಂತರ ಭಕ್ತರು ಈ ಪವಿತ್ರ ನದಿಯಲ್ಲಿ ಸ್ನಾನ ಮಾಡಿದರೆ ತಮ್ಮ ಪಾಪ ಪರಿಹಾರವಾಗುತ್ತದೆ ಎನ್ನುವ ನಿಟ್ಟಿನಲ್ಲಿ ಸ್ನಾನ ಮಾಡುತ್ತಾರೆ. ಆದರೆ ಸ್ನಾನ ಮಾಡುವಾಗ ತಾವು ಉಟ್ಟ ಬಟ್ಟೆಯನ್ನು ನದಿಯಲ್ಲೆ ಬೀಡುತ್ತಿರುವುದರಿಂದ ನದಿ ಮಲೀನವಾಗುತ್ತಿದೆ. ಅದಲ್ಲದೆ ಸ್ನಾನ ಮಾಡಿದ ನಂತರ ನದಿಗೆ ಕಾಯಿ-ಕರ್ಪೂರ-ಹೂವುಗಳನ್ನು ಹಾಕುತ್ತಿರುವುದರಿಂದ ನದಿ ಮಲಿನವಾಗುತ್ತಿದೆ. ಈ ಕುರಿತು ಬರುವ ಭಕ್ತಾದಿಗಳಿಗೆ ಸಾಕಷ್ಟು ತಿಳುವಳಿಕೆ ನೀಡಿದರೂ ನದಿಯಲ್ಲಿ ಬೇಡದ ವಸ್ತುಗಳನ್ನು ಹಾಕಿ ಹಾಳುಗೆಡುವುತಿದ್ದಾರೆ.

ಸ್ವಚ್ಛತೆ ಪ್ರಾರಂಭಕ್ಕೆ ನಾಂದಿ :

  • ಗಾಣಗಾಪುರ ಶ್ರೀದತ್ತ ದೇವಾಸ್ಥನದ ಬಳಿಯ ಸಂಗಮ ಕ್ಷೇತ್ರ ಸ್ವಚ್ಛತಾ ಕಾರ್ಯಕ್ರಮದ ಮುಂಚೆ ಬಟ್ಟೆ ಮತ್ತಿತರ ತ್ಯಾಜ್ಯ ವಸ್ತುಗಳಿಂದ ಮಲಿನವಾಗಿದ್ದಾಗಿನ ಚಿತ್ರ
  • ಶ್ರಮದಾನ ಮತ್ತು ಸ್ವಚ್ಛತಾ ಕಾರ್ಯ ಕೈಗೊಳ್ಳುತ್ತಿರುವ ಕಾರ್ಯಕರ್ತರು
  • ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಸಂಗಮ ಕ್ಷೇತ್ರದ ಸುತ್ತಮುತ್ತ ಸ್ವಚ್ಛತೆ ಕುರಿತಂತೆ ಜಾಗೃತಿ ಗೋಡೆ ಬರಹ ಬರೆಸಿರುವುದು
  • ಸಂಗಮ ತೀರ ಪ್ರದೇಶದಲ್ಲಿ ಭಕ್ತರು ಎಲ್ಲೆಂದರಲ್ಲಿ ಕಾಯಿಗಳನ್ನು ಎಸೆದು ಹೋಗಿರುವುದನ್ನು ಸ್ವಚ್ಛಗೊಳಿಸುತ್ತಿರುವ ಕಾರ್ಯಕರ್ತರು
  • ಸ್ವಚ್ಛಗೊಂಡ ನಂತರ ಕಂಡು ಬಂದಿರುವ ನದಿ ತೀರ ಪ್ರದೇಶದ ಸ್ಥಳ.

ಈ ಪವಿತ್ರ ಕ್ಷೇತ್ರದಲ್ಲಿನ ನದಿಪಾತ್ರವನ್ನು ಹಾಗೂ ನದಿಯನ್ನು ಸ್ವಚ್ಛಗೊಳಿಸಿ, ಜನಜಾಗೃತಿ ಮೂಡಿಸಲು ನವೆಂಬರ್ 11ರಂದು ಕಲಬುರಗಿ ಜಿಲ್ಲಾ ಪಂಚಾಯತ್ ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ ಸಂಯುಕ್ತಾಶ್ರಯದಲ್ಲಿ “ಜಲ ಜೀವನ್ ಮಿಷನ್” ಯೋಜನೆಯ ಐ.ಎಸ್.ಆರ್.ಎ ಮತ್ತು ಐ.ಎಸ್.ಎ ಸಂಸ್ಥೆಗಳ ಸಿಬ್ಬಂದಿ ಪ್ರಗತಿ ಪರಿಶೀಲನಾ ಸಭೆ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಐಸ್ಎ ನಿರ್ದೇಶಕರಾದ ಶೀತಲ್ ಸಿಂಗ್ ರವರು ಅಫಜಲಪೂರ ತಾಲೂಕಿನ ಗಾಣಗಾಪೂರ ಪಂಚಾಯತ್ ಅಧೀನದಲ್ಲಿ ಬರುವ ಸ್ವಚ್ಛ ಸಂಕೀರ್ಣ ಘಟಕ ಹಾಗೂ ಸಂಗಮ ಕ್ಷೇತ್ರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿ ಕಂಡು ಬಂದ ಸ್ವಚ್ಛತೆಯಿಲ್ಲದ ಪರಿಸರದ ಕುರಿತು ಗಾಣಗಾಪೂರು ಗ್ರಾಮ ಪಂಚಾಯತಿಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳೊಂದಿಗೆ ಚರ್ಚಿಸಿದಾಗ ಪ್ರತಿ ವಾರ ದೇವಸ್ಥಾನಕ್ಕೆ ಬರುವ ಭಕ್ತಾದಿಗಳು ಗಲೀಜು ಮಾಡುತ್ತಿದ್ದಾರೆ. ಇದರಿಂದ ಸ್ವಚ್ಛತೆ ಅರಿವು ಮೂಡಿಸಲು ಮತ್ತು ಸ್ವಚ್ಛತೆ ಕೈಗೊಳ್ಳಲು ತೊಂದರೆಯಾಗುತ್ತಿದೆ ಎಂಬ ವಿಷಯವನ್ನು ಆ ಅಧಿಕಾರಿಗಳ ಗಮನಕ್ಕೆ ತಂದರು.

ಇದನ್ನು ಗಂಭೀರವಾಗಿ ಪರಿಗಣಿಸಿದ ಐಎಸ್‌ಎ ನಿದೇರ್ಶಕರು ಐ.ಎಸ್.ಆರ್.ಎ ಮತ್ತು ಐ.ಎಸ್.ಎ ಸಂಸ್ಥೆಗಳ ಮತ್ತು ಎಸ್.ಬಿ.ಎಂ. ಸಿಬ್ಬಂದಿ ಜೊತೆ ಸಭೆ ನಡೆಸಿ ಒಂದು ತಿಂಗಳ ಒಳಗೆ ಸಂಗಮ ಕ್ಷೇತ್ರ ಸ್ವಚ್ಛತೆ ಮತ್ತು ವಿವಿಧ ಜಾಗೃತಿ ಚಟುವಟಿಕೆಗಳನ್ನು ಹಮ್ಮಿಕೊಂಡು ಸ್ವಚ್ಛತೆ ಕೈಗೊಳ್ಳುವಂತೆ ಸಭೆಯಲ್ಲಿ ಸೂಚನೆ ನೀಡಿದರು.

ಬಳಿಕ ನ.7ರಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳೊಂದಿಗೆ ಹಾಗೂ ದೇವಸ್ಥಾನ ಸಮಿತಿ ಯವರೊಂದಿಗೆ ಮಾತನಾಡಿದರು. ತದನಂತರ ನ.11ರಂದು ಸಂಗಮ ದೇವಸ್ಥಾನದ ಆವರಣ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳುವ ಬಗ್ಗೆ ಪೂರ್ವಸಿಧ್ಧತೆಗಾಗಿ ಕ್ಷೇತ್ರ ವೀಕ್ಷಣೆಗಾಗಿ ತೆರಳಿದ ಸಂದರ್ಭದಲ್ಲಿ, ಪ್ರಥಮವಾಗಿ ರೂಪು ರೇಷೆಗಾಗಿ ಅಲ್ಲಿಯ ವಾತವಾರಣ ಹಾಗೂ ಚಟುವಟಿಕೆ ಕುರಿತು ವೀಕ್ಷಿಸಲಾಯಿತು. ನ.22 ರಂದು ಅಲ್ಲಿಯ ಸ್ವಚ್ಛತಾ ಸಿಬ್ಬಂದಿಯೊಂದಿಗೆ ಈ ತಂಡವು ಸಭೆ ನಡೆಸಿ ಅಲ್ಲಿನ ಸಾಧಕ ಬಾಧಕಗಳನ್ನು ಕೇಳಿ ತಿಳಿದುಕೊಂಡಿತು. ಸಂಗಮ ಕ್ಷೇತ್ರದಲ್ಲಿ ಯಾವ ಕ್ರಮಗಳನ್ನು ಕೈಗೊಂಡರೆ ಆ ಪ್ರದೇಶವು ಸ್ವಚ್ಛವಾಗುತ್ತದೆ ಎನ್ನುವ ಬಗ್ಗೆ ವಿಚಾರಿಸಿದಾಗ ಈ ಕೆಳಕಂಡ ಅಂಶಗಳತ್ತ ಗಮನಹಿಸಿದರೆ ಸಂಗಮ ಕ್ಷೇತ್ರ ನಿತ್ಯ ಸ್ವಚ್ಛತೆಯಿಂದ ಇರುತ್ತದೆ ಎಂಬ ಮಾಹಿತಿ ಲಭ್ಯವಾಯಿತು.

ಯಾವ ಕ್ರಮ ಕೈಗೊಂಡರೆ ಶ್ರೀಕ್ಷೇತ್ರ ಸ್ವಚ್ಛಗೊಳ್ಳುತ್ತದೆ? :

ಸ್ವಚ್ಛತೆ ಕುರಿತು ಜಾಗೃತಿ ಮೂಡಿಸಲು ಪ್ರಚಾರ ಫಲಕಗಳನ್ನು ಕೈಗೊಳ್ಳಬೇಕು, ಕಸ ಹಾಕುವುದಕ್ಕೆ ಕಸದ ಬುಟ್ಟಿಗಳ  ವ್ಯವಸ್ಥೆ ಮಾಡಬೇಕು, ನದಿಯಲ್ಲಿ ಬಿಡುವ ಬಟ್ಟೆಗಳನ್ನು ಸಿಮೆಂಟ್ ರಿಂಗ್ (ಗುಂಡಿಯಲ್ಲಿ)ನಲ್ಲಿ ಹಾಕುವ ವ್ಯವಸ್ಥೆ ಮಾಡಬೇಕು. ನದಿಯ ಎರಡು ಬದಿಗೆ ಇಬ್ಬರು ಸೆಕ್ಯುರಿಟಿ ಗಾರ್ಡ್ ಗಳನ್ನು ನಿರಂತರವಾಗಿ ನಿಯೋಜಿಸಬೇಕು. ಸಿಸಿ ಟಿವಿ ಕ್ಯಾಮರಾ ಅಳವಡಿಕೆ, ಧ್ವನಿ ವರ್ಧಕಗಳ ಮೂಲಕ ಮರಾಠಿ, ತೆಲಗು, ಕನ್ನಡ ಭಾಷೆಯ ಮೂಲಕ ನಿರಂತರವಾಗಿ ಸ್ವಚ್ಛತೆ ಕುರಿತು ಘೋಷಣೆ ಮಾಡಲು ಕ್ರಮ ಕೈಗೊಳ್ಳಬೇಕು. ಪಾರ್ಕಿಂಗ್ ಪ್ರದೇಶ ಮತ್ತು ನದಿಯ ದಂಡೆಯ ಸುತ್ತಮುತ್ತ ಮಲ ವಿಸರ್ಜನೆ, ಮೂತ್ರ ವಿಸರ್ಜನೆ ಮಾಡದಂತೆ ಕ್ರಮ ಕೈಗೊಳ್ಳಬೇಕು. ಈ ಸೂಚನೆಯನ್ನು ಉಲ್ಲಂಘಿಸುವವರಿಗೆ ಮುಲಾಜಿಲ್ಲದೆ ದಂಡ ವಿಧಿಸಬೇಕು.

ಬೀದಿ ವ್ಯಾಪಾರಿಗಳಿಗೆ ತಮ್ಮ ದಿನ ನಿತ್ಯದ ಕಸವನ್ನು ರಸ್ತೆಗೆ ಹಾಕದೆ ಕಸದ ಗುಂಡಿಗೆ ಕಸವನ್ನು ಹಾಕಲು ಸೂಚನೆ ನೀಡಬೇಕು. ಇಲ್ಲಿ ತರುವ ಶವದ ಅಸ್ಥಿಯನ್ನು ನದಿಯಲ್ಲಿ ವಿರ್ಸಜಿಸುವುದನ್ನು ನಿಷೇಧಿಸಿಬೇಕು ಹಾಗೂ ಇದನ್ನು ಇತರೆಡೆ ವಿಸರ್ಜಿಸಲು ವ್ಯವಸ್ಥೆ  ಮಾಡಬೇಕು. ಭಕ್ತಾದಿಗಳಿಗೆ ಪಾದರಕ್ಷೆಗಳನ್ನು ಬಿಡಲು, ವಾಹನಗಳನ್ನು ನಿಲ್ಲಿಸಲು ಸೂಕ್ತ ಸ್ಥಳ ನಿಗಧಿಪಡಿಸಬೇಕು. ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಶ್ರೀ ದತ್ತಕ್ಷೇತ್ರದಲ್ಲಿ ಸ್ವಚ್ಛೆ ಕಾಪಾಡುವ ಕುರಿತು ಬೀದಿ ವ್ಯಾಪಾರಿಗಳ ಸಭೆ ಕರೆದು, ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರಿಗೆ ತಿಳುವಳಿಕೆ ಹೇಳುವುದು. ಮಾನಸಿಕ ಅಸ್ವಸ್ಥರಿಗೆ, ವೃಧ್ಧರಿಗೆ ವೃದ್ಧಾಶ್ರಮಕ್ಕೆ ಕಳಿಸುವ ವ್ಯವಸ್ಥೆ ಮಾಡಬೇಕು. ಹೊಳೆ ದಂಡೆಯಲ್ಲಿ ಹಾಗೂ ಪಾರ್ಕಿಂಗ್ ಏರಿಯಾದಲ್ಲಿ ಬೀದಿ ದೀಪ ಸೌಕರ್ಯ, ಸುಮಾರು 10 ರಿಂದ 15 ಘಟಕಗಳಿರುವ ಸಾರ್ವಜನಿಕ ಶೌಚಾಲಯ ನಿರ್ಮಾಣ, ಪ್ರತಿ ತಿಂಗಳು ಅಥವಾ ಅಗತ್ಯ ತಕ್ಕಂತೆ ದೇವಸ್ಥಾನದ ಸಮಿತಿ ಸಭೆ ಜರುಗಿಸಬೇಕು. ಇಷ್ಟೆಲ್ಲಾ ಸೌಕರ್ಯ, ವ್ಯವಸ್ಥೆಗಳಾದಲ್ಲಿ ಗಾಣಗಾಪುರ ಶ್ರೀ ದತ್ತ ಸುಕ್ಷೇತ್ರ ಈಗಾಗಲೇ ಪಡೆದಿರುವ ಪ್ರಸಿದ್ಧಿಗೆ ಸಾರ್ಥಕವಾಗುತ್ತದೆ ಎಂಬುದು ಸಭೆ ನಡೆಸಿದ ಬಳಿಕ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಅಧಿಕಾರಿಗಳಿಗೆ ಮನದಟ್ಟಾಯಿತು.

ಶ್ರೀಕ್ಷೇತ್ರದಲ್ಲಿ ಕಂಡು ಬಂದಿದೆ ಶೇ.70ರಷ್ಟು ಸ್ವಚ್ಛತೆ:

ಸಂಗಮ ಕ್ಷೇತ್ರದಲ್ಲಿ ಸ್ವಚ್ಛತಾಯ ಕಾರ್ಯ ಹಾಗೂ ಜಾಗೃತಿ ಕಾರ್ಯಕ್ರಮ ಕೈಗೊಂಡ ಬಳಿಕ ಸ್ವಚ್ಛಗೊಳಿಸದ ನದಿ ದಂಡೆಯ ಮೆಟ್ಟಿಲಿನ ಚಿತ್ರ

ನ.22ರಂದು ನಡೆಸಿದ ಸಭೆಯಂತೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಹಾಗೂ ದೇವಸ್ಥಾನದ ಕಮಿಟಿ ಸಿಬ್ಬಂದಿ ಸ್ಪಂದಿಸಿದ ಹಿನ್ನಲೆಯಲ್ಲಿ ಎಲ್ಲರೂ ಒಗ್ಗೂಡಿ ಡಿ.3ರಿಂದ ಪ್ರತಿ ಶುಕ್ರವಾರ ಸ್ವಚ್ಛ ಭಾರತ ಮಿಷನ್ ಕಾರ್ಯಕ್ರಮದಡಿ ‘ಸ್ವಚ್ಛ ಶುಕ್ರವಾರ’ ಕಾರ್ಯಕ್ರಮ ಆಯೋಜಿಸಿ ಸ್ವಚ್ಛತೆ ಮಾಡಲಾಯಿತು. ಅಲ್ಲದೆ ಡಿ.5ರಂದು ಬೀದಿ ವ್ಯಾಪಾರಿಗಳ ಸಭೆ ಕರೆದು ಸಂಗಮ ಕ್ಷೇತ್ರದ ಸ್ವಚ್ಛತೆಗೆ ಸಭೆ ನಡೆಸಲಾಯಿತು. ಇದರ ಜೊತೆಗೆ ಡಿ.12 ಹಾಗೂ 22ನೇ ತಾರೀಖಿನಂದು ಶ್ರೀಕ್ಷೇತ್ರದ ಸಂಗಮ ಸ್ಥಳದಲ್ಲಿ ಸ್ವಚ್ಛತೆ ಕಾರ್ಯ ಕೈಗೊಳ್ಳಲಾಯಿತು. ಪ್ರಾರಂಭದಲ್ಲಿ ಅಲ್ಲಿನ ಸಾರ್ವಜನಿಕರು, ಗ್ರಾಮ ಪಂಚಾಯತಿ ಸದಸ್ಯರು ಸ್ವಚ್ಛತೆಗೆ ಸ್ಪಂದಿಸುತ್ತಿರಲಿಲ್ಲ. ಆದರೆ ತದನಂತರ ಕಲಬುರುಗಿಯ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆವತಿಯಿಂದ ಸ್ವಚ್ಛತೆ ಕಾರ್ಯ ಕೈಗೊಂಡಾಗ ಎಲ್ಲರೂ ಕೈ ಜೋಡಿಸಿದರು. ಬಳಿಕ ಇಲಾಖೆ ಕಡೆಯಿಂದ ಆ ಭಾಗದಲ್ಲಿ ಸ್ವಚ್ಛತೆ ಕುರಿತಂತೆ ಗೋಡೆ ಬರಹ ಬರೆಸಲಾಯಿತು. ಇದೆಲ್ಲ ಕಾರ್ಯಗಳನ್ನು ಕೈಗೊಂಡ ಕಾರಣ ಗಾಣಗಾಪುರ ಶ್ರೀ ದತ್ತ ಸಂಗಮ ಕ್ಷೇತ್ರದಲ್ಲಿ ಶೇ.70ರಷ್ಟು ಅರಿವು ಮೂಡಿದೆ. ಈ ನಿಟ್ಟಿನಲ್ಲಿ ಪೂರ್ಣ ಪ್ರಮಾಣದಲ್ಲಿ ಸ್ವಚ್ಛತೆ ಮತ್ತು ನೈರ್ಮಲ್ಯ ಕಾರ್ಯಗಳು ಯಶಸ್ವಿಯಾಗಬೇಕಾದರೆ, ದೇವಸ್ಥಾನ ಸಮಿತಿಯವರು ಈ ಮೇಲಿನ ಅಂಶಗಳನ್ನು ಅಳವಡಿಸಿಕೊಳ್ಳಬೇಕಾಗುತ್ತದೆ.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ನಿರ್ದೇಶಕರಾದ ಡಾ.ಗಂಗಾಧರ್, ಐಸ್ಎ ನಿರ್ದೇಶಕರಾದ ಶೀತಲ್ ಸಿಂಗ್ ನೇತೃತ್ವದಲ್ಲಿ ಈ ಸ್ವಚ್ಛತೆ ಮತ್ತು ಅರಿವು ಮೂಡಿಸುವ ಕಾರ್ಯ ಗಾಣಗಾಪುರ ಸೇರಿದಂತೆ ರಾಜ್ಯದೆಲ್ಲೆಡೆ ನಿರಂತರವಾಗಿ ಸ್ವಚ್ಛತಾ ಕಾರ್ಯಕ್ರಮಗಳನ್ನು ಹಾಕಿಕೊಂಡು ಕೈಗೊಳ್ಳಲಾಗುತ್ತಿದೆ.

WhatsApp Join our WhatsApp Channel
Previous Post

#Namma Metro News | NewYear2023 | ಹೊಸ ವರ್ಷದ ಸಂಭ್ರಮಾಚರಣೆಗೆ ಡಿ.31ರಂದು ಮಧ್ಯರಾತ್ರಿ 2ರವರೆಗೆ ಮೆಟ್ರೋ ರೈಲು ಸೇವೆ ವಿಸ್ತರಣೆ

Next Post

#Viral Video | ರೇಷ್ಮೆ ಸೀರೆಯನ್ನು ನೋಡಿರುತ್ತೀರಿ, ರೇಷ್ಮೆಯ ರೀತಿಯ ಕೂದಲನ್ನು ಹೊಂದಿದ ಈ ಸಿಂಹದ ವೈರಲ್ ವಿಡಿಯೋ ನೋಡಿ…!

Next Post
ರೇಷ್ಮೆಯಂತಹ ಕೂದಲನ್ನು ಹೊಂದಿದ ಶಾಂತರೂಪಿಯಾಗಿ ಭವ್ಯ ಭಂಗಿಯಲ್ಲಿ ಕುಳಿತ ಸಿಂಹದ ವೈರಲ್ ವಿಡಿಯೋದ ಚಿತ್ರ

#Viral Video | ರೇಷ್ಮೆ ಸೀರೆಯನ್ನು ನೋಡಿರುತ್ತೀರಿ, ರೇಷ್ಮೆಯ ರೀತಿಯ ಕೂದಲನ್ನು ಹೊಂದಿದ ಈ ಸಿಂಹದ ವೈರಲ್ ವಿಡಿಯೋ ನೋಡಿ...!

ಇಸ್ಕಾನ್ ದೇವಾಲಯದಲ್ಲಿ ಶ್ರೀ ವೆಂಕಟೇಶ್ವರನಿಗೆ ವೈಕುಂಠ ಏಕಾದಶಿಯ ಪ್ರಯುಕ್ತ ಮಾಡಿರುವ ಹೂವಿನ ಅಲಂಕಾರದ ಚಿತ್ರ

Vaikunta Ekadasi | ಬೆಂಗಳೂರಿನ ಹಲವು ಕಡೆ ಅದ್ಧೂರಿ ವೈಕುಂಠ ಏಕಾದಶಿ ಆಚರಣೆ : ಪ್ರಮುಖ ದೇವಸ್ಥಾನಗಳ ಅಲಂಕಾರ ಹೇಗಿತ್ತು? ಇಲ್ಲಿದೆ ಚಿತ್ರ ಸಹಿತ ಮಾಹಿತಿ

Please login to join discussion

Like Us on Facebook

Follow Us on Twitter

Recent News

ವಿಧಾನಪರಿಷತ್ ಚುನಾವಣೆ: ಅಡ್ಡ ಮತದಾನ ಮಾಡಿದ ಶಾಸಕರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾದ ಹೈಕಮಾಂಡ್

June 23, 2026

DNA Data Storage | “ಭಾರತ ಇನ್ನೂ ಸಿದ್ಧವಾಗಿಲ್ಲ”: ಬೆಂಗಳೂರಿನ ಕಾರ್ಯಾಚರಣೆ ಸ್ಥಗಿತಗೊಳಿಸಿ ಅಮೆರಿಕಾಗೆ ಹಾರಿದ ‘ಬಯೋಕಂಪ್ಯೂಟ್’ ಸಂಸ್ಥಾಪಕಿ ಅನಘಾ ರಾಜೇಶ್

June 23, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

ವಿಧಾನಪರಿಷತ್ ಚುನಾವಣೆ: ಅಡ್ಡ ಮತದಾನ ಮಾಡಿದ ಶಾಸಕರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾದ ಹೈಕಮಾಂಡ್

June 23, 2026

DNA Data Storage | “ಭಾರತ ಇನ್ನೂ ಸಿದ್ಧವಾಗಿಲ್ಲ”: ಬೆಂಗಳೂರಿನ ಕಾರ್ಯಾಚರಣೆ ಸ್ಥಗಿತಗೊಳಿಸಿ ಅಮೆರಿಕಾಗೆ ಹಾರಿದ ‘ಬಯೋಕಂಪ್ಯೂಟ್’ ಸಂಸ್ಥಾಪಕಿ ಅನಘಾ ರಾಜೇಶ್

June 23, 2026

15 ಲಕ್ಷ ಸಸಿ ನೆಡುವ ಬೃಹತ್ ಅಭಿಯಾನ: ಹಸಿರು ಬೆಂಗಳೂರು ನಿರ್ಮಾಣಕ್ಕೆ ಮೆಗಾ ಡ್ರೈವ್

June 23, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group