Thursday, June 18, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ಕರ್ನಾಟಕದಲ್ಲಿ ತೀವ್ರ ಜಲಕ್ಷಾಮ: ಶೇ. 21ರಷ್ಟು ಮಳೆ ಕೊರತೆ, 14 ಪ್ರಮುಖ ಜಲಾಶಯಗಳಲ್ಲಿ ಕೇವಲ 23% ನೀರು ಸಂಗ್ರಹ

    ​ರೈಲ್ವೆ ಪದೋನ್ನತಿ ಪರೀಕ್ಷೆಯಲ್ಲಿ ಕನ್ನಡಿಗರಿಗೆ ವಂಚನೆ: ಜೂನ್ 25ರಂದು ತೀವ್ರ ಹೋರಾಟದ ಎಚ್ಚರಿಕೆ ನೀಡಿದ ಕರವೇ

    Kartavya App | ರಾಜ್ಯ ಸರ್ಕಾರದಿಂದ ಎಐ ಕ್ರಾಂತಿ: ನೌಕರರ ಪಕ್ಕಾ ಹಾಜರಾತಿಗೆ ಬಂತು ‘ಕರ್ತವ್ಯ’ ಆ್ಯಪ್: ಕೆಲಸಕ್ಕೆ ಚಕ್ಕರ್ ಹಾಕಲು ಬ್ರೇಕ್

    ಶಬರಿಮಲೆ ಯಾತ್ರೆ ಕೈಗೊಂಡ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ: ಇಂದು ಪಡಿಪೂಜೆ, ಪುಷ್ಪಾಭಿಷೇಕ

    Breaking News | ಅಮೆರಿಕ-ಇರಾನ್ ಐತಿಹಾಸಿಕ ಶಾಂತಿ ಒಪ್ಪಂದ: ಜೂ. 19ರಂದು ಜಿನೇವಾದಲ್ಲಿ ಅಧಿಕೃತ ಸಹಿ

    ಬಿಡದಿ ಟೌನ್‌ಶಿಪ್: ಸಿಎಂ ಡಿಕೆಶಿ ವಿರುದ್ಧ ಹೆಚ್.ಡಿ. ಕುಮಾರಸ್ವಾಮಿ ಆಕ್ರೋಶ, ರಿಯಲ್ ಎಸ್ಟೇಟ್ ಮಾಫಿಯಾ ಆರೋಪ

    ಕರ್ನಾಟಕ ಪೊಲೀಸ್ ಇಲಾಖೆ ಮೇಲ್ದರ್ಜೆಗೆ ಸಿಎಂ ಡಿ.ಕೆ. ಶಿವಕುಮಾರ್ ಮೆಗಾ ಪ್ಲಾನ್: ಕೇಂದ್ರ ಗೃಹ ಸಚಿವರಿಗೆ ಮನವಿ

    ವೈದ್ಯಕೀಯ ಲೋಕದ ಅದ್ವಿತೀಯ ಸಾಧನೆ: ವಯಸ್ಸಾಗುವಿಕೆಯನ್ನು ತಡೆಯುವ ಔಷಧದ ಮೊದಲ ಮಾನವ ಪ್ರಯೋಗ ಯಶಸ್ವಿ

    ಬೆಂಗಳೂರಿನ ಗೊರಗುಂಟೆಪಾಳ್ಯದಲ್ಲಿ ಭೀಕರ ಅಪಘಾತ: ಬ್ರೇಕ್ ಫೇಲಾದ ಗ್ಯಾಸ್ ಲಾರಿ ಡಿಕ್ಕಿ, ಬೈಕ್ ಸವಾರ ದಂಪತಿ ಸ್ಥಳದಲ್ಲೇ ಸಾವು

  • Bengaluru Focus

    ಕೆ.ಆರ್. ಮಾರುಕಟ್ಟೆಯಲ್ಲಿ ವಿಶೇಷ ವಿನ್ಯಾಸದ ಮಾರಾಟ ಸ್ಥಳ ನಿಗದಿ; ಮಧ್ಯವರ್ತಿಗಳಿಗೆ ಬಾಡಿಗೆ ನೀಡದಿರಿ, ಆಯುಕ್ತ ಜಗದೀಶ್ ಖಡಕ್ ಎಚ್ಚರಿಕೆ

    ​ರೈಲ್ವೆ ಪದೋನ್ನತಿ ಪರೀಕ್ಷೆಯಲ್ಲಿ ಕನ್ನಡಿಗರಿಗೆ ವಂಚನೆ: ಜೂನ್ 25ರಂದು ತೀವ್ರ ಹೋರಾಟದ ಎಚ್ಚರಿಕೆ ನೀಡಿದ ಕರವೇ

    ಖ್ಯಾತ ಗಾಯಕಿ ಸೂರ್ಯಗಾಯತ್ರಿ ಸಂಗೀತ ಕಾರ್ಯಾಗಾರ ಯಶಸ್ವಿ: 45 ಕಲಾಭಿಮಾನಿಗಳಿಗೆ ಒಲಿದ ಅಪೂರ್ವ ಗಾಯನಾನುಭವ

    #OpenStreetsBengaluru | ಬೆಂಗಳೂರು ವಾಹನಗಳಿಗಷ್ಟೇ ಅಲ್ಲ, ಜನರಿಗಾಗಿಯೂ ಇದೆ: ‘ಓಪನ್ ಸ್ಟ್ರೀಟ್ಸ್’ ಅಭಿಯಾನಕ್ಕೆ ಸಂಸದ ತೇಜಸ್ವಿ ಸೂರ್ಯ ಕರೆ

    ಬಿಡದಿ ಟೌನ್‌ಶಿಪ್: ಸಿಎಂ ಡಿಕೆಶಿ ವಿರುದ್ಧ ಹೆಚ್.ಡಿ. ಕುಮಾರಸ್ವಾಮಿ ಆಕ್ರೋಶ, ರಿಯಲ್ ಎಸ್ಟೇಟ್ ಮಾಫಿಯಾ ಆರೋಪ

    ಬೆಂಗಳೂರಿನಲ್ಲಿ “ರೈಸ್ ಕಾನ್ ಕ್ಲೇವ್- 2026” ಉದ್ಘಾಟನೆ: ‘ವಿಕಸಿತ ಭಾರತ 2047’ಕ್ಕೆ ವಿಜ್ಞಾನ ಮತ್ತು ನಾವೀನ್ಯತೆಯೇ ಆಧಾರ – ಡಾ. ಜಿತೇಂದ್ರ ಸಿಂಗ್

    ಬನ್ನೇರುಘಟ್ಟ ಜೈವಿಕ ಉದ್ಯಾನವನ: ದಕ್ಷಿಣ ಆಫ್ರಿಕಾದ ಚೀತಾಗಳ ದರ್ಶನ, ಜೊತೆಗೆ ಮುದ್ದಾದ ಜೆಬ್ರಾ, ನೀರುಕುದುರೆ ಮರಿಗಳ ಕಲರವ!

    GBA News | ಬೆಂಗಳೂರು ಪಶ್ಚಿಮ ಮತ್ತು ದಕ್ಷಿಣ ಪಾಲಿಕೆ: ಪಾದಚಾರಿ ಮಾರ್ಗ, ತ್ಯಾಜ್ಯ ನಿರ್ವಹಣೆ ಹಾಗೂ ಮೂಲಸೌಕರ್ಯಕ್ಕೆ ಒತ್ತು

    ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ 28ನೇ ಘಟಿಕೋತ್ಸವ: 72 ಸಾವಿರ ಪದವಿ, 103 ಚಿನ್ನದ ಪದಕ ಪ್ರದಾನ

  • Public interest
  • BW Special
  • Life Style
  • Photo Gallery
  • Video
No Result
View All Result

Home BW Special

BW Special | #Bhogeshwara Elephant | ಕಬಿನಿ ಹಿನ್ನೀರಿನಲ್ಲಿ ಅತಿ ಉದ್ದದ ದಂತವಿರುವ ದೈತ್ಯಾಕಾರದ ಇನ್ನೆರಡು ಸಲಗಗಳು ಪತ್ತೆ….!!

ವನ್ಯಜೀವಿ ಪ್ರೇಮಿಗಳು, ಛಾಯಾಗ್ರಾಹಕರು, ಪ್ರವಾಸಿಗರ ನೆಚ್ಚಿನ ಆನೆ ಭೋಗೇಶ್ವರನ ಅತಿ ಉದ್ದದ ದಂತಗಳನ್ನು ಬಂಡೀಪುರ ಪ್ರಕೃತಿ ಶಿಕ್ಷಣ ಕೇಂದ್ರದಲ್ಲಿ ಪ್ರದರ್ಶನಕ್ಕಿಡಲು ಚಿಂತನೆ ನಡೆದಿದೆ. ಮೂರು ಸಾವಿ ಕೆಜಿ ತೂಕ, 23 ಅಡಿ ಉದ್ದದ ಹೊಂದಿದ ಏಷ್ಯಾ ತಳಿಯ ಆನೆಯ ಸೊಬಗೇ ವಿಶೇಷವಾಗಿತ್ತು.

by Bengaluru Wire Desk
June 13, 2022
in BW Special, Public interest
Reading Time: 2 mins read
0
ಭೋಗೇಶ್ವರ ಆನೆಯ ಸಾಂದರ್ಭಿಕ ಚಿತ್ರ 
ಕೃಪೆ : ಇಂಡಿಯಾ ಡಾಟ್ ಕಾಮ್

ಭೋಗೇಶ್ವರ ಆನೆಯ ಸಾಂದರ್ಭಿಕ ಚಿತ್ರ ಕೃಪೆ : ಇಂಡಿಯಾ ಡಾಟ್ ಕಾಮ್

ಎಚ್.ಡಿ.ಕೋಟೆ (ಮೈಸೂರು ಜಿಲ್ಲೆ), ಜು.13, www.bengaluruwire.com : ಗಜಗಾಂಭೀರ್ಯ, ಏಷ್ಯಾ ತಳಿಯ ಆನೆಗಳಲ್ಲೇ ಅತಿ ಉದ್ದದ ದಂತಗಳನ್ನು ಹೊಂದಿದ್ದ, ಸುಂದರ ನಡೆಗೆ ಹೆಸರುವಾಸಿಯಾಗಿದ್ದ ಸೌಮ್ಯ ಸ್ವಭಾವದ ವನ್ಯಪ್ರೇಮಿಗಳು ಹಾಗೂ ಪ್ರವಾಸಿಗರ ನೆಚ್ಚಿನ ಭೋಗೇಶ್ವರ ಆನೆ ಈಗ ನೆನಪು ಮಾತ್ರ. ಈ ಆನೆಯ ದಂತಗಳನ್ನು ಈಗಾಗಲೇ ಕತ್ತರಿಸಿ ಸಂರಕ್ಷಿಸಿಡಲಾಗಿದ್ದು, ಬಂಡೀಪುರ ಪ್ರಕೃತಿ ಶಿಕ್ಷಣ ಕೇಂದ್ರದಲ್ಲಿ ಪ್ರದರ್ಶನಕ್ಕಿಡಲು ಅರಣ್ಯ ಇಲಾಖೆ ಉದ್ದೇಶಿಸಿದೆ.

ನಾಗರಹೊಳೆ ಮತ್ತು ಬಂಡೀಪುರ ವ್ಯಾಪ್ತಿಯಲ್ಲಿರುವ ಕಬಿನಿ ಹಿನ್ನೀರಿನಲ್ಲಿ ಹೆಚ್ಚಾಗಿ ಕಾಣಸಿಗುತ್ತಿದ್ದ ಭೋಗೇಶ್ವರ ಆನೆಗೆ ‘ಮಿಸ್ಟರ್ ಕಬಿನಿ’ ಎಂಬ ಮತ್ತೊಂದು ಹೆಸರಿತ್ತು. 60 ವರ್ಷ ವಯಸ್ಸಿನ ಏಷ್ಯಾದ ತಳಿಯ ಆನೆಗಳ ಪೈಕಿ ಅತಿದೊಡ್ಡ ಆನೆದಂತ ಹೊಂದಿದ್ದ ಅಪರೂಪದ ಸಲಗವಾಗಿತ್ತು. ಈ ಆನೆಯು ನಡೆದು ಬರುತ್ತಿದ್ದರೆ ಅದರ ಎರಡೂ ದಂತಗಳು ನೆಲಕ್ಕೆ ತಾಕುತ್ತಿತ್ತು. ಹಾಗಾಗಿ ಈ ಆನೆಯು ನೆಲದ ಮೇಲೆ ಬೆಳೆಯುತ್ತಿದ್ದ ಹುಲ್ಲುಗಳನ್ನು ಸರಾಗವಾಗಿ ಸೇವಿಸಲು ಆಗುತ್ತಿರಲಿಲ್ಲ. ಈ ಕಾರಣಕ್ಕೆ ಭೋಗೇಶ್ವರ ಆನೆಯು ಹೆಚ್ಚು ಓಡಾಡುತ್ತಿರಲಿಲ್ಲ.

ದೈತ್ಯಾಕಾರದ ಗಾಂಭೀರ್ಯ ವದನ ಭೋಗೇಶ್ವರನ ಆಕರ್ಷಕ ಚಿತ್ರ

ಮೂರು ಸಾವಿ ಕೆಜಿ ತೂಕ, 23 ಅಡಿ ಉದ್ದದ ಆನೆ :

ಸುಮಾರು ಒಂಭತ್ತೂವರೆ ಎತ್ತರವಿದ್ದ ಈ ಸುಂದರ ಗಂಡಾನೆಯ ದಂತವು ಒಂದು 8.43 ಅಡಿ ಹಾಗೂ ಮತ್ತೊಂದು ದಂತವು 7.68 ಅಡಿ ಉದ್ದವಿತ್ತು. ಆ ದಂತಗಳ ಸರಾಸರಿ ಸುತ್ತಳತೆ .38 ಮೀಟರ್ (1.24 ಅಡಿ)  ಈ ಸಲಗವು ಸುಮಾರು 3 ಸಾವಿರ ಕೆಜಿ ತೂಕ ಹೊಂದಿತ್ತು. 22.89 ಅಡಿ ಉದ್ದವಿದ್ದ ಭೋಗೇಶ್ವರ ಆನೆಯ ಭುಜದ ಎತ್ತರ 11.11 ಅಡಿಯಾಗಿತ್ತು. ತನ್ನ ನಿಲುವು, ಸೌಮ್ಯ ಸ್ವಭಾವದಿಂದ ಹೆಸರಾಗಿದ್ದ ಆನೆಯು ಸದಾ ತನ್ನ ಪಾಡಿಗೆ ತಾನಿರುತ್ತಿತ್ತು. ಬೇರೆ ವನ್ಯಪ್ರಾಣಿ, ಮನುಷ್ಯರ ಮೇಲೆ ದಾಳಿ ನಡೆಸಿದ ಉದಾಹರಣೆಗಳಿರಲಿಲ್ಲ. ಆ ಆನೆಯ ಹಲ್ಲುಗಳು ನೈಸರ್ಗಿಕವಾಗಿ ಉದುರಿ ಹೋಗಿ, ತನ್ನ ದೈನಂದಿನ ಆಹಾರ ತಿನ್ನಲು ಕಷ್ಟಪಡುತಿತ್ತು. ವಯೋಸಹಜ ಕಾರಣದಿಂದ ಈ ಆನೆ ಮೃತಪಟ್ಟಿದೆ. ಸಾಮಾನ್ಯವಾಗಿ ಆನೆಗಳು ಮುದಿ ವಯಸ್ಸು ಸಮೀಪಿಸುತ್ತಿದ್ದಂತೆ ಅವುಗಳ ನೆತ್ತಿ, ಕಿವಿ, ಹಣೆ ಭಾಗದ ಮೇಲೆ ಬಿಳಿ- ಕೆಂಪು ಬಣ್ಣದ ಕಲೆಗಳು ಮೂಡುತ್ತವೆ. ಅಲ್ಲದೆ ಕಿವಿಯ ಭಾಗದ ಬಳಿ ಚರ್ಮ ಮಡಚುತ್ತವೆ. ಇವುಗಳನ್ನು ನೋಡಿ ಆ ಆನೆಗಳ ವಯಸ್ಸನ್ನು ಲೆಕ್ಕಹಾಕಲಾಗುತ್ತದೆ ಎನ್ನುತ್ತಾರೆ ಹಿರಿಯ ಅರಣ್ಯಾಧಿಕಾರಿಯೊಬ್ಬರು.

ಅತಿ ಉದ್ದನೆಯ ದಂತಗಳಿರುವ ಇನ್ನೆರಡು ಆನೆಗಳು ಪತ್ತೆ :

“ಭೋಗೇಶ್ವರ ಆನೆಯ ರೀತಿಯಲ್ಲಿಯೇ 50 ವರ್ಷ ಮೇಲ್ಪಟ್ಟ ಉದ್ದವಾದ ದಂತಗಳನ್ನು ಹೊಂದಿದ್ದ ಮತ್ತೆರಡು ಆನೆಗಳು ಕಬಿನಿ ಹಿನ್ನೀರ ಪ್ರದೇಶದಲ್ಲಿವೆ. ಅವುಗಳು ಆಗಾಗ ಅರಣ್ಯ ಸಿಬ್ಬಿಂದಿಗೆ ಕಾಣಸಿಗುತ್ತವೆ. ಇನ್ನು ಐದು ವರ್ಷಗಳಾದರೆ ಈ ಎರಡು ಆನೆಗಳ ದಂತವು ಭೋಗೇಶ್ವರ ಆನೆಯ ದಂತದ ರೀತಿ ಅತಿ ಉದ್ದವಾಗಿ ಬೆಳೆಯಬಹುದು. ಆದರೆ ಆ ಆನೆಗಳ ದಂತದ ಉದ್ದದ ಖಚಿತ ಅಳತೆಯ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿಲ್ಲ. 2017ರಲ್ಲಿ ಅರಣ್ಯ ಇಲಾಖೆ ವತಿಯಿಂದ ಮಾಡಿದ ಆನೆ ಗಣತಿಯ ಪ್ರಕಾರ 1,036 ಚದರ ಕಿ.ಮೀ ವಿಸ್ತೀರ್ಣ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಪ್ರತಿ ಚದರ ಕಿ.ಮೀನಲ್ಲಿ 1.5 ನಂತೆ ಒಟ್ಟಾರೆ 1,600 ಆನೆಗಳಿರುವುದನ್ನು ಗುರುತಿಸಲಾಗಿತ್ತು. ಈಗ ಅವುಗಳ ಸಂಖ್ಯೆ ಕೊಂಚ ಏರಿಕೆಯಾಗಿದೆ” ಎಂದು ಹೇಳುತ್ತಾರೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕ ಡಾ.ರಮೇಶ್.

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಹೆಡಿಯಾಲ ಉಪವಿಭಾಗದ ಗುಂಡ್ರೆ ವಲಯದ ಹೊಸಹಳ್ಳಿ ಶಾಖೆಯ ನಾಯಿಹಳ್ಳ ಗಸ್ತಿನ ಸುತ್ತನಹಳ್ಳ ಎಂಬ ಕಬಿನಿ ಹಿನ್ನೀರ ಪ್ರದೇಶದಲ್ಲಿ ಜು.11ರಂದು ಬೆಳಗ್ಗೆ 9.30ರ ಸಂದರ್ಭದಲ್ಲಿ ಅರಣ್ಯ ಸಿಬ್ಬಂದಿ ಗಸ್ತಿನಲ್ಲಿದ್ದಾಗ ಭೋಗೇಶ್ವರ ಆನೆಯು ಮೃತಪಟ್ಟಿರುವುದು ತಿಳಿದು ಬಂದಿದೆ. ಆ ಆನೆಯ ಮರಣೋತ್ತರ ಪರೀಕ್ಷೆ ನಡೆಸಿದ ಅರಣ್ಯ ಇಲಾಖೆಯ ಪಶುವೈದ್ಯಾಧಿಕಾರಿಗಳು, ಈ ಆನೆಗೆ 60 ವರ್ಷ ವಯಸ್ಸಾಗಿದ್ದು, ನೈಸರ್ಗಿಕವಾಗಿ ಮೃತಪಟ್ಟಿದೆ. ಇದರ ಮೈಮೇಲೆ ಯಾವುದೇ ಗಾಯದ ಗುರುತಾಗಲಿ, ಬೇರೆ ಆನೆಗಳ ಜೊತೆ ಕಾದಾಟದಿಂದ ಅಥವಾ ವಿಷಪ್ರಾಶನದಿಂದಾಗಿ ಸತ್ತಿರುವುದು ಮೇಲ್ನೋಟಕ್ಕೆ ಕಂಡು ಬಂದಿಲ್ಲ ಎಂದಿದ್ದಾರೆ.

ಭೋಗೇಶ್ವರ ಆನೆಯನ್ನು ನೋಡಲೆಂದೇ ಅಲ್ಲಿಗೆ ಹೋಗುತ್ತಿದ್ದೆವು :

ಭೋಗೇಶ್ವರ ಆನೆಯ ಕಳೆಬರಹದ ಚಿತ್ರ

“ಡಿ.ಬಿ.ಕುಪ್ಪೆ ವಲಯದಲ್ಲಿರುವ ಅರಣ್ಯ ಪ್ರದೇಶದ ಭೋಗೇಶ್ವರ ದೇವಸ್ಥಾನ ಸಮೀಪದಲ್ಲಿ ಈ ಆನೆಯು ಹೆಚ್ಚಾಗಿ ವಾಸಿಸುತ್ತಿತ್ತು. ಹಾಗಾಗಿ ಆ ಆನೆಗೆ ಭೋಗೇಶ್ವರ ಎಂಬ ಹೆಸರು ಬಂದಿತ್ತು. ನಾವೆಲ್ಲ ಆನೆ ಗಣತಿ ಮಾಡುವ ಸಂದರ್ಭದಲ್ಲಿ ಈ ವಲಯದಲ್ಲಿ ಹೆಚ್ಚಾಗಿ ವಾಸಿಸುತ್ತಿದ್ದಿದ್ದನ್ನು ಗಮನಿಸಿದ್ದೆವು. ಕಬಿನಿ ಹಿನ್ನೀರ ಪ್ರದೇಶದಲ್ಲಿ ಸಫಾರಿಗೆ ಬರುವ ಪ್ರವಾಸಿಗರು, ವನ್ಯ ಛಾಯಾಗ್ರಾಹಕರಿಗೆ ಕಾಣಸಿಗುತ್ತಿತ್ತು. ಆನೆ ಗಣತಿ ಸಂದರ್ಭದಲ್ಲಿ ಬಿಡುವಾದಾಗ ಭೋಗೇಶ್ವರ ಆನೆಯನ್ನು ನೋಡಲೆಂದೇ ಹೋಗುತ್ತಿತ್ತು. ಅಂತಹ ಆಕರ್ಷಕ ಮೈಕಟ್ಟು, ಸೌಮ್ಯ ಸ್ವಭಾವ ಹೊಂದಿದ್ದ ಆನೆ ಈಗ ಮೃತಪಟ್ಟಿದೆ ಅನ್ನೋದನ್ನು ಅರಗಿಸಿಕೊಳ್ಳಲಾಗುತ್ತಿಲ್ಲ.” ಎಂದು ಹೇಳುತ್ತಾರೆ ವನ್ಯಜೀವಿ ಕಾರ್ಯಕರ್ತ ವಲ್ಲೀಶ್.

ಬಂಡೀಪುರದಲ್ಲಿ ಪ್ರಕೃತಿ ಶಿಕ್ಷಣ ಕೇಂದ್ರ ಸ್ಥಾಪನೆಗೆ ಚಿಂತನೆ :

“ಏಷ್ಯಾದಲ್ಲೇ ಅತಿ ಉದ್ದದ ದಂತಗಳನ್ನು ಹೊಂದಿದ್ದ ಭೋಗೇಶ್ವರ ಸಲಗದ ದಂತಗಳನ್ನು ಈಗಾಗಲೇ ಕತ್ತರಿಸಿ ಸಂರಕ್ಷಿಡಲಾಗಿದೆ. ಇದನ್ನು ಬಂಡೀಪುರದಲ್ಲಿ ಕಾಡಿನ ಪ್ರಕೃತಿ ಶಿಕ್ಷಣ ಕೇಂದ್ರ (interpretation Center)ವನ್ನು ಸ್ಥಾಪಿಸಿ, ಅಲ್ಲಿಗೆ ಬರುವ ಪ್ರವಾಸಿಗರಿಗಾಗಿ ಆ ಕೇಂದ್ರದಲ್ಲಿ ಪ್ರದರ್ಶನಕ್ಕೆ ಇಡಲು ನಿರ್ಧರಿಸಿದ್ದೇವೆ. ಇಡೀ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ಭೌಗೋಳಿಕ ಪ್ರದೇಶದ ಚಿಕ್ಕ ಪ್ರತಿರೂಪಗಳನ್ನಿಟ್ಟು ಕಾಡಿನ ಬಗ್ಗೆ ಮಾಹಿತಿ ನೀಡುವ ಉದ್ದೇಶವಿದೆ. ಆನೆ, ಹುಲಿ ವಿವಿಧ ವನ್ಯಪ್ರಾಣಿಗಳ ಸಂರಕ್ಷಿತ ಭಾಗಗಳು ಹಾಗೂ ತದ್ರೂಪುಗಳ ಪ್ರದರ್ಶನ, ಈ ಕಾಡಿನ ಪ್ರದೇಶದಲ್ಲಿ ಕಂಡು ಬರುವ ವಿಶೇಷ ಸಸ್ಯ- ಮರಗಿಡಗಳ ಪ್ರಬೇಧಗಳು, ಪಕ್ಷಿ, ಕೀಟ ಮತ್ತು ಸರೀಸೃಪಗಳ ಬಗ್ಗೆ ಮಾಹಿತಿಯನ್ನು ಬಂಡೀಪುರ ಸಫಾರಿಗೆ ಬರುವ ಪ್ರವಾಸಿಗರಿಗಾಗಿ ಪ್ರಕೃತಿ ಶಿಕ್ಷಣ ಕೇಂದ್ರದಲ್ಲಿ ನೀಡುವ ಉದ್ದೇಶ ಹೊಂದಲಾಗಿದೆ. ಈ ಕುರಿತಂತೆ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲು ಚಿಂತನೆ ನಡೆಸಲಾಗಿದೆ” ಎಂದು ಡಾ.ರಮೇಶ್ ಬೆಂಗಳೂರು ವೈರ್ ಗೆ ತಿಳಿಸಿದ್ದಾರೆ.

ಬಹಳ ಸೌಮ್ಯ ಸ್ವಭಾವದ ಮಿಸ್ಟರ್ ಕಬಿನಿ :

Bhogeshwar, India’s Elephant With Longest Tusks, Dies Of Old Age At Bandipur National Park #Bhogeshwar #Elephant #LongestTusks #BandipurNationalPark pic.twitter.com/Ahlqaie29T

— India.com (@indiacom) June 12, 2022
ಇಂಡಿಯಾ ಡಾಟ್ ಕಾಮ್ ಟ್ವಿಟರ್ ನಲ್ಲಿ ಶೇರ್ ಮಾಡಿದ ಭೋಗೇಶ್ವರನ ವಿಡಿಯೋ ತುಣುಕು

“2010ರಲ್ಲಿ ತಾವು ನಾಗರಹೊಳೆಯಲ್ಲಿ ಎಸಿಎಫ್ ಆಗಿ ಪ್ರೊಬೇಷನರಿ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗ ಮೊದಲಿಗೆ ಭೋಗೇಶ್ವರ ಆನೆಯನ್ನು ಬಹಳ ಹತ್ತಿರದಿಂದ ಕಂಡಿದ್ದೆ. ಆ ಆನೆಯ ಹತ್ತಿರಕ್ಕೆ ಹೋದಾಗಲೂ ಒಮ್ಮೆಯೂ ಏನು ಮಾಡಿರಲಿಲ್ಲ. ಕಾಡಿನಲ್ಲಿದ್ದರೂ ಬೇರೆ ಸಲಗದಂತಿರಲಿಲ್ಲ. ಬಹಳ ಸೌಮ್ಯ ಸ್ವಭಾವ ಹೊಂದಿತ್ತು. ಆಗೆಲ್ಲ ಈ ಆನೆಗೆ ಭೋಗೇಶ್ವರ, ಮಿಸ್ಟರ್ ಕಬಿನಿ ಅಂತೆಲ್ಲಾ ಹೆಸರಿರಲಿಲ್ಲ. ಆ ಆನೆಯ ಸುಂದರ ಫೊಟೋಗಳು ನನ್ನ ಕ್ಯಾಮರಾದಲ್ಲಿ ಭದ್ರವಾಗಿದೆ. ಅದೊಂದು ಸುಂದರ ನೆನಪಾಗಿ ತಮ್ಮ ಬಳಿ ಉಳಿದಿದೆ” ಎಂದು ಭೋಗೇಶ್ವರ ಆನೆಯ ಜೊತೆಯ ಒಡನಾಟವನ್ನು ನೆನೆಸಿಕೊಂಡಿದ್ದಾರೆ ಡಾ.ರಮೇಶ್.

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಆನೆ, ಹುಲಿಯಂತಹ ದೊಡ್ಡ ದೊಡ್ಡ ವನ್ಯಪ್ರಾಣಿಗಳ ಕಳ್ಳಬೇಟೆ ನಿಯಂತ್ರಣಕ್ಕೆ ಬಂದಿದೆ. 1995-96ರಲ್ಲಿದ್ದ ಪರಿಸ್ಥಿತಿ ಈಗ ಇಲ್ಲ. 1036 ಚದರ ಕಿ.ಮೀ ವಿಸ್ತೀರ್ಣ ಬಂಡೀಪುರ ಕಾಡಿನಲ್ಲಿ 53 ಕಳ್ಳಬೇಟೆ ನಿಗ್ರಹ ಕ್ಯಾಂಪ್ ಗಳಿವೆ. ಆನೆ, ಹುಲಿ ಮತ್ತಿತರ ಪ್ರಾಣಿಗಳಿಗೆ ಗುಂಡೇಟಿನಿಂದ ಸಾಯಿಸುವುದು ಕಷ್ಟಸಾಧ್ಯ. ಅಷ್ಟರ ಮಟ್ಟಿಗೆ ಅರಣ್ಯ ಇಲಾಖೆಯು ಕಾಡಿನ ಸಂರಕ್ಷಣೆಯಲ್ಲಿ ಅಲರ್ಟ್ ಇರುತ್ತೆ. ಹೀಗಿದ್ದರೂ, ಅಲ್ಲಲ್ಲಿ ಜಿಂಕೆ, ಹಂದಿ ಮತ್ತಿತರ ಸಣ್ಣಪುಟ್ಟ ಪ್ರಾಣಿಗಳ ಕಳ್ಳಬೇಟೆ ಪ್ರಕರಣಗಳು ನಡೆಯುತ್ತಿರುತ್ತದೆ. ಕೆಲವು ಕಡೆ ಉರುಳು ಹಾಕಿ ಪ್ರಾಣಿಗಳನ್ನು ಹಿಡಿಯುತ್ತಾರೆ. ಇಂತಹ ಪ್ರಕರಣಗಳು ಸಂಪೂರ್ಣವಾಗಿ ನಿಲ್ಲಬೇಕು ಎಂಬುದು ವನ್ಯಪ್ರೇಮಿಗಳ ಆಗ್ರಹವಾಗಿದೆ.

WhatsApp Join our WhatsApp Channel
Previous Post

ನಮ್ಮ ಮೆಟ್ರೋ ಸಂಸ್ಥೆಯಿಂದ ವಿಶ್ವ ಪರಿಸರ ದಿನಾಚರಣೆ ಸಪ್ತಾಹ ನಿಮಿತ್ತ ಸೈಕಲ್ ಜಾಥಾ

Next Post

BW SPECIAL | BDA Land Acquisition Section Corruption Part-2 | ಸರ್ವೆ ಇಲಾಖೆ ವಾಪಸ್ ಕರೆಸಿಕೊಂಡ್ರೂ ಬಿಡಿಎ ಬಿಟ್ಟು ಹೋಗದ ಸರ್ವೆಯರ್ ಗಳು ; ಕಮಾಯಿಗಾಗಿ ಬೃಹತ್ ಡಿಮ್ಯಾಂಡ್ ಅಥಾರಿಟಿಯಾಗಿದ್ಯಾ ಬಿಡಿಎ?

Next Post
ಬಿಡಿಎ ಕೇಂದ್ರ ಕಚೇರಿ ಚಿತ್ರ

BW SPECIAL | BDA Land Acquisition Section Corruption Part-2 | ಸರ್ವೆ ಇಲಾಖೆ ವಾಪಸ್ ಕರೆಸಿಕೊಂಡ್ರೂ ಬಿಡಿಎ ಬಿಟ್ಟು ಹೋಗದ ಸರ್ವೆಯರ್ ಗಳು ; ಕಮಾಯಿಗಾಗಿ ಬೃಹತ್ ಡಿಮ್ಯಾಂಡ್ ಅಥಾರಿಟಿಯಾಗಿದ್ಯಾ ಬಿಡಿಎ?

ಡ್ರಿಲ್ ಮಾಡುತ್ತಿರುವ ಸೇನಾ ಯೋಧರ ಸಾಂದರ್ಭಿಕ ಚಿತ್ರ

Opportunities In Telecom For Agniveers | ಭವಿಷ್ಯದಲ್ಲಿ ಮೂರು ಸೇನೆಗಳ ಅಗ್ನಿವೀರರ ಸೇವೆ ಬಳಸಿಕೊಳ್ಳಲು ದೂರಸಂಪರ್ಕ ಸಚಿವಾಲಯ ಮಹತ್ವದ ಸಭೆ

Please login to join discussion

Like Us on Facebook

Follow Us on Twitter

Recent News

BW SPECIAL| 2 ಲಕ್ಷಕ್ಕೂ ಅಧಿಕ ಸರ್ಕಾರಿ ನೌಕರರಿಂದ ‘ಕರ್ತವ್ಯ’ ಆ್ಯಪ್‌ ಕಡೆಗಣನೆ: 7 ದಿನದ ಗಡುವು ನೀಡಿದ ಸರ್ಕಾರ

June 17, 2026

ಕರ್ನಾಟಕದಲ್ಲಿ ತೀವ್ರ ಜಲಕ್ಷಾಮ: ಶೇ. 21ರಷ್ಟು ಮಳೆ ಕೊರತೆ, 14 ಪ್ರಮುಖ ಜಲಾಶಯಗಳಲ್ಲಿ ಕೇವಲ 23% ನೀರು ಸಂಗ್ರಹ

June 17, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

BW SPECIAL| 2 ಲಕ್ಷಕ್ಕೂ ಅಧಿಕ ಸರ್ಕಾರಿ ನೌಕರರಿಂದ ‘ಕರ್ತವ್ಯ’ ಆ್ಯಪ್‌ ಕಡೆಗಣನೆ: 7 ದಿನದ ಗಡುವು ನೀಡಿದ ಸರ್ಕಾರ

June 17, 2026

ಕರ್ನಾಟಕದಲ್ಲಿ ತೀವ್ರ ಜಲಕ್ಷಾಮ: ಶೇ. 21ರಷ್ಟು ಮಳೆ ಕೊರತೆ, 14 ಪ್ರಮುಖ ಜಲಾಶಯಗಳಲ್ಲಿ ಕೇವಲ 23% ನೀರು ಸಂಗ್ರಹ

June 17, 2026

Space News | ಬಾನಂಗಳದಲ್ಲಿ ಇಂದು ವಿಸ್ಮಯ: ಗುರು, ಶುಕ್ರನ ನಡುವೆ ಬಾಲಚಂದ್ರನ ದರ್ಶನ, ಬರಿಗಣ್ಣಿನಿಂದಲೇ ಕಣ್ತುಂಬಿಕೊಳ್ಳಿ

June 17, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group