ಬೆಂಗಳೂರು, ನ.18 www.bengaluruwire.com: ರಾಜ್ಯದ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಪೊಲೀಸ್ ಇಲಾಖೆಯಲ್ಲಿ ಭಾರಿ ಬದಲಾವಣೆ ಮಾಡಿದೆ. ಒಟ್ಟು 30 ಹಿರಿಯ ಐಪಿಎಸ್ (IPS) ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (DPAR) ನ.18, ರಂದು ಅಧಿಕೃತ ಅಧಿಸೂಚನೆ ಹೊರಡಿಸಿದೆ.
ವಿಶೇಷವೆಂದರೆ, ಬೆಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯನ್ನು ವಿಸ್ತರಿಸಿ ಹೊಸದಾಗಿ ಸೃಜಿಸಲಾದ ಕೇಂದ್ರ, ಪೂರ್ವ, ಪಶ್ಚಿಮ, ಉತ್ತರ ಮತ್ತು ದಕ್ಷಿಣ ವಿಭಾಗಗಳಿಗೆ ಪ್ರತ್ಯೇಕ ಪೊಲೀಸ್ ಆಯುಕ್ತರನ್ನು (Commissioners of Police) ನೇಮಿಸಲಾಗಿದೆ.
ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿದ್ದ ಸೀಮಂತ್ ಕುಮಾರ್ ಸಿಂಗ್ ಅವರನ್ನು ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ವಿಭಾಗದ ಎಡಿಜಿಪಿಯಾಗಿ ವರ್ಗಾಯಿಸಲಾಗಿದ್ದು, ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿಯಾಗಿದ್ದ ಆರ್. ಹಿತೇಂದ್ರ ಅವರನ್ನು ಬೆಂಗಳೂರು ನಗರದ ನೂತನ ‘ಮುಖ್ಯ ಪೊಲೀಸ್ ಆಯುಕ್ತರಾಗಿ’ (Chief Commissioner of Police) ನೇಮಕ ಮಾಡಲಾಗಿದೆ.

ವರ್ಗಾವಣೆಗೊಂಡ ಪ್ರಮುಖ ಐಪಿಎಸ್ ಅಧಿಕಾರಿಗಳ ಸಂಪೂರ್ಣ ಪಟ್ಟಿ ಇಲ್ಲಿದೆ:

ಆರ್. ಹಿತೇಂದ್ರ (IPS 1996): ಎಡಿಜಿಪಿ ಮತ್ತು ಮುಖ್ಯ ಪೊಲೀಸ್ ಆಯುಕ್ತರು, ಬೆಂಗಳೂರು ನಗರ.
ಸೀಮಂತ್ ಕುಮಾರ್ ಸಿಂಗ್ (IPS 1996): ಎಡಿಜಿಪಿ, ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳು.
ಬಿಜಯ್ ಕುಮಾರ್ ಸಿಂಗ್ (IPS 1996): ಎಡಿಜಿಪಿ, ಕಾನೂನು ಮತ್ತು ಸುವ್ಯವಸ್ಥೆ (ಆರ್. ಹಿತೇಂದ್ರ ಅವರ ಸ್ಥಾನಕ್ಕೆ).
ಎಸ್. ಮುರುಗನ್ (IPS 1997): ಎಡಿಜಿಪಿ, ಕರ್ನಾಟಕ ಲೋಕಾಯುಕ್ತ.
ಮನೀಶ್ ಕರ್ಬಿಕರ್ (IPS 1998): ಎಡಿಜಿಪಿ, ಸಂವಹನ, ಲಾಜಿಸ್ಟಿಕ್ಸ್ ಮತ್ತು ಆಧುನೀಕರಣ, ಬೆಂಗಳೂರು.
ಹೇಮಂತ್ ಎಂ. ನಿಂಬಾಳ್ಕರ್ (IPS 1998): ಬೆಂಗಳೂರು ನಗರ ಸಂಚಾರ ವಿಭಾಗದ ಪೊಲೀಸ್ ಆಯುಕ್ತರು (ಜೊತೆಗೆ ರೌಡಿ ನಿಗ್ರಹ ದಳದ ಆಯುಕ್ತರಾಗಿ ಹೆಚ್ಚುವರಿ ಹೊಣೆ).
ಬೆಂಗಳೂರಿನ 5 ನೂತನ ಕಮಿಷನರೇಟ್ ವಲಯಗಳ ಆಯುಕ್ತರು:
ಲಾಭು ರಾಮ್ (IPS 2004): ಪೊಲೀಸ್ ಆಯುಕ್ತರು, ಕೇಂದ್ರ ಬೆಂಗಳೂರು ನಗರ (ನೂತನ ಹುದ್ದೆ).
ಡಾ. ಪಿ.ಎಸ್. ಹರ್ಷ (IPS 2004): ಪೊಲೀಸ್ ಆಯುಕ್ತರು, ಪೂರ್ವ ಬೆಂಗಳೂರು ನಗರ (ನೂತನ ಹುದ್ದೆ).
ವಿಕಾಶ್ ಕುಮಾರ್ ವಿಕಾಶ್ (IPS 2004): ಪೊಲೀಸ್ ಆಯುಕ್ತರು, ಪಶ್ಚಿಮ ಬೆಂಗಳೂರು ನಗರ (ನೂತನ ಹುದ್ದೆ).
ಡಾ. ಎಂ.ಬಿ. ಬೋರಲಿಂಗಯ್ಯ (IPS 2008): ಪೊಲೀಸ್ ಆಯುಕ್ತರು, ಉತ್ತರ ಬೆಂಗಳೂರು ನಗರ (ನೂತನ ಹುದ್ದೆ).
ಸಿ. ವಂಶಿ ಕೃಷ್ಣ (IPS 2008): ಜಂಟಿ ಪೊಲೀಸ್ ಆಯುಕ್ತರು (ಆಡಳಿತ), ಬೆಂಗಳೂರು ನಗರ ಹಾಗೂ ದಕ್ಷಿಣ ಬೆಂಗಳೂರು ನಗರದ ಪೊಲೀಸ್ ಆಯುಕ್ತರಾಗಿ (ನೂತನ ಹುದ್ದೆ) ಹೆಚ್ಚುವರಿ ಹೊಣೆ.
ಇತರ ಪ್ರಮುಖ ಐಜಿಪಿ ಮತ್ತು ಡಿಐಜಿ ಮಟ್ಟದ ವರ್ಗಾವಣೆಗಳು:
ಎನ್. ಶಶಿಕುಮಾರ್ (IPS 2007): ಐಜಿಪಿ, ಪಶ್ಚಿಮ ವಲಯ, ಮಂಗಳೂರು.
ಅನುಪಮ್ ಅಗರ್ವಾಲ್ (IPS 2008): ಐಜಿಪಿ, ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆ (KSRP).
ಡಾ. ಶರಣಪ್ಪ ಎಸ್.ಡಿ (IPS 2009): ಡಿಐಜಿ, ರೈಲ್ವೆ ವಿಭಾಗ.
ಕುಲದೀಪ್ ಕುಮಾರ್ ಆರ್. ಜೈನ್ (IPS 2011): ಡಿಐಜಿ ಮತ್ತು ಪೊಲೀಸ್ ಆಯುಕ್ತರು, ಕಲಬುರಗಿ ನಗರ.
ಎಂ. ಪುಟ್ಟಮಾದಯ್ಯ (IPS 2012): ಡಿಐಜಿ, ದಕ್ಷಿಣ ವಲಯ, ಮೈಸೂರು.
ಡಾ. ಎಂ. ಅಶ್ವಿನಿ (IPS 2012): ಡಿಐಜಿ, ನೇಮಕಾತಿ ವಿಭಾಗ, ಬೆಂಗಳೂರು.
ಜೆ.ಕೆ. ರಶ್ಮಿ (IPS 2012): ಡಿಐಜಿ, ಜಾಗೃತ ದಳ, ಜಲಸಂಪನ್ಮೂಲ ಇಲಾಖೆ.
ಡಿಸಿಪಿ (DCP) ಹಂತದ ಪ್ರಮುಖ ಬದಲಾವಣೆಗಳು:
ಡಾ. ಅನೂಪ್ ಎ. ಶೆಟ್ಟಿ: ಡಿಸಿಪಿ (ಸಂಚಾರ), ಪೂರ್ವ ಬೆಂಗಳೂರು ನಗರ.
ಲಕ್ಷ್ಮಣ್ ನಿಂಬರಗಿ: ಡಿಸಿಪಿ, ನಗರ ಸಶಸ್ತ್ರ ಮೀಸಲು ಪಡೆ (CAR), ಕೇಂದ್ರ ಬೆಂಗಳೂರು ನಗರ (ಕೇಂದ್ರ ಕಚೇರಿ).
ಚನ್ನಬಸವಣ್ಣ ಲಂಗೋಟಿ: ಡಿಸಿಪಿ, ಇಂದಿರಾನಗರ, ಕೇಂದ್ರ ಬೆಂಗಳೂರು ನಗರ.
ನಾಗೇಶ್ ಡಿ.ಎಲ್: ಡಿಸಿಪಿ, ಯಶವಂತಪುರ, ಉತ್ತರ ಬೆಂಗಳೂರು ನಗರ.
ಲೋಕೇಶ್ ಭರಮಪ್ಪ ಜಗಲಾಸರ್: ಡಿಸಿಪಿ (ಸಂಚಾರ), ಕೇಂದ್ರ ಬೆಂಗಳೂರು ನಗರ.
ಯತೀಶ್ ಎನ್: ಡಿಸಿಪಿ, ಕೆಂಗೇರಿ (ನೈಋತ್ಯ), ಪಶ್ಚಿಮ ಬೆಂಗಳೂರು ನಗರ.
ಸೈದುಲು ಅಡಾವತ್: ಎಸ್‌ಪಿ, ಆಂತರಿಕ ಭದ್ರತಾ ವಿಭಾಗ, ಬೆಂಗಳೂರು.
ಶ್ರೀಹರಿ ಬಾಬು ಬಿ.ಎಲ್: ಡಿಸಿಪಿ, ವೈಟ್‌ಫೀಲ್ಡ್, ಪೂರ್ವ ಬೆಂಗಳೂರು ನಗರ.
ಡಾ. ಗೀತಾ ಎಂ.ಎಸ್: ಡಿಸಿಪಿ, ಪೂರ್ವ ಬೆಂಗಳೂರು ನಗರ.
ರಂಜಿತ್ ಕುಮಾರ್ ಬಂಡಾರು: ಡಿಸಿಪಿ (ಆಡಳಿತ), ಬೆಂಗಳೂರು ನಗರ.
ಅಶೋಕ್ ಕೆ.ವಿ: ಡಿಸಿಪಿ, ಪೀಣ್ಯ, ಪಶ್ಚಿಮ ಬೆಂಗಳೂರು ನಗರ.
ಅಮತೆ ವಿಕ್ರಮ್: ಡಿಸಿಪಿ, ಉತ್ತರ ಬೆಂಗಳೂರು ನಗರ.
ಲಕ್ಷ್ಮಿ ಗಣೇಶ್ ಕೆ: ಡಿಸಿಪಿ, ಗಾಂಧಿನಗರ, ಕೇಂದ್ರ ಬೆಂಗಳೂರು ನಗರ.
ಪಿ.ವಿ. ಸ್ನೇಹಾ: ಡಿಸಿಪಿ (ಸಂಚಾರ), ಪಶ್ಚಿಮ ಬೆಂಗಳೂರು ನಗರ.
ಈ ಎಲ್ಲಾ ಅಧಿಕಾರಿಗಳು ತಕ್ಷಣದಿಂದ ಜಾರಿಗೆ ಬರುವಂತೆ ತಮ್ಮ ನೂತನ ಹುದ್ದೆಗಳಲ್ಲಿ ಕರ್ತವ್ಯಕ್ಕೆ ಹಾಜರಾಗುವಂತೆ ಸರ್ಕಾರದ ಅಧೀನ ಕಾರ್ಯದರ್ಶಿ ಅಕ್ಷಯ್ ಶ್ರೀಧರ್ ಅವರು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.

















