Wednesday, August 5, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire
    ಕೆಎಸ್ ಆರ್ ಟಿಸಿ ಕೇಂದ್ರ ಕಚೇರಿ ಸಾಂದರ್ಭಿಕ ಚಿತ್ರ

    ಕೆಎಸ್‌ಆರ್‌ಟಿಸಿಯಿಂದ ‘ಬೆಂಗಳೂರು-ಜೋಗ ಜಲಪಾತ’ ಪ್ಯಾಕೇಜ್ ಟೂರ್ ಆ.8ರಿಂದ ಆರಂಭ: ವೇಳಾಪಟ್ಟಿ, ಪ್ರಯಾಣದರ ವಿವರ ಇಲ್ಲಿದೆ

    ಪೆಟ್ರೋಲ್ ಬಂಕ್ ಸಾಂದರ್ಭಿಕ ಚಿತ್ರ

    ವಿಮೆ ಇಲ್ಲದ ವಾಹನಗಳಿಗೆ ಪೆಟ್ರೋಲ್, ಡೀಸೆಲ್ ಇಲ್ಲ: ಸುಪ್ರೀಂ ಕೋರ್ಟ್ ಪೈಲೆಟ್ ಯೋಜನೆ ರೂಪಿಸಲು ಕೇಂದ್ರಕ್ಕೆ ಸೂಚನೆ

    Science News | ಪ್ರೊ. ಅನ್ನಪೂರ್ಣಿ ಸುಬ್ರಮಣ್ಯಂಗೆ ‘ಕಾಸ್ಪಾರ್ ವಿಕ್ರಮ್ ಸಾರಾಭಾಯ್’ ಪ್ರಶಸ್ತಿ: ಈ ಗೌರವ ಪಡೆದ ಮೊದಲ ಭಾರತೀಯ ಮಹಿಳೆ

    ರಾಜ್ಯದಲ್ಲಿ ಅತಿವೃಷ್ಟಿ ಹಾಗೂ ಬರ ಪರಿಸ್ಥಿತಿ: ಪರಿಶೀಲನೆಗೆ ಜಿಲ್ಲಾವಾರು ಸಚಿವರ ನೇಮಕ

    ಡಿ.ಕೆ. ಶಿವಕುಮಾರ್ ಸಂಪುಟ ವಿಸ್ತರಣೆ: ಇಂದು 20 ನೂತನ ಸಚಿವರ ಪ್ರಮಾಣ ವಚನ, ಇಲ್ಲಿದೆ ಎಐಸಿಸಿ ಅಧಿಕೃತ ಪಟ್ಟಿ

    ಕರುನಾಡಲ್ಲಿ ವರುಣನ ಆರ್ಭಟ: ಭರ್ತಿಯಾಗುತ್ತಿರುವ ಜಲಾಶಯಗಳು, ಮೈದುಂಬಿ ಹರಿಯುತ್ತಿರುವ ನದಿಗಳು

    BDA News | ಬಿಡಿಎ ಲಂಚಾವತಾರ: ಎನ್‌ಪಿಕೆಎಲ್ ರೈತರಿಗೆ ನಿವೇಶನ ನೀಡಲು ಲಂಚ ಕೇಳಿದ ಎಇಇ, ನೋಟಿಸ್ ಜಾರಿ

    KEA ಗ್ರಾಮ ಆಡಳಿತ ಅಧಿಕಾರಿ ಹುದ್ದೆ: ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ

    ​ಪೇಪರ್ ಲೀಕ್ ತಡೆಗೆ ಹೊಸ ಅಸ್ತ್ರ: ಸಂಸತ್ತಿನಲ್ಲಿ ಅಂಗೀಕಾರಗೊಂಡಿತು ಕಠಿಣ ವಿಧೇಯಕ

  • Bengaluru Focus

    ಸರ್ಕಾರಕ್ಕೆ 1 ಕೋಟಿ ರೂ. ಡಿವಿಡೆಂಡ್ ನೀಡಿದ ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್

    GBA News | ಶಾಂತಿನಗರ ಇಇ ಕಚೇರಿಯಲ್ಲಿ 9 ಕೋಟಿ ರೂ.ಗಳ ಕಂಪ್ಯೂಟರ್ ಬಿಲ್ ಹಗರಣ: ಲೋಕಾಯುಕ್ತಕ್ಕೆ ದೂರು

    ಗಾಂಧಿನಗರ: ‘ಬೆಂಗಳೂರು ಪೇಟೆ’ ಪ್ರದೇಶದಲ್ಲಿ ಅಗ್ನಿ ಅವಘಡ ನಿಯಂತ್ರಣಕ್ಕೆ ನಗರದ ಪ್ರಥಮ ‘ಫೈರ್ ಹೈಡ್ರೆಂಟ್’ ವ್ಯವಸ್ಥೆ ಲೋಕಾರ್ಪಣೆ

    ಮತದಾರರ ಪಟ್ಟಿ ಪರಿಶೀಲನೆ ಸಾಂದರ್ಭಿಕ ಚಿತ್ರ

    GBA News | ಮತದಾರರ ಪಟ್ಟಿ ಪರಿಷ್ಕರಣೆ: ಆಗಸ್ಟ್ 8 ಕಡೇ ದಿನ, ಸಮಸ್ಯೆ ಇದ್ದರೆ 1950ಗೆ ಕರೆ ಮಾಡಿ

    GBA News | ​ಕಗ್ಗದಾಸಪುರದಲ್ಲಿ ಟ್ರಾಫಿಕ್ ಜಾಮ್‌ಗೆ ಮುಕ್ತಿ: ಪೂರ್ವ ಪಾಲಿಕೆಯಿಂದ ಇ.ಇ.ಎಫ್.ಸಿ ಯೋಜನೆ ಯಶಸ್ವಿ

    Lokayukta News | ಪಾಲಿಕೆಯೇ ಟಿಪ್ಪರ್ ಖರೀದಿಸಿ ಕಸ ವಿಲೇವಾರಿ ಮಾಡಲಿ: 5 ನಗರ ಪಾಲಿಕೆಗಳಿಗೆ ಲೋಕಾಯುಕ್ತರ ಖಡಕ್ ಸೂಚನೆ

    BDA News | ಬಿಡಿಎ ಲಂಚಾವತಾರ: ಎನ್‌ಪಿಕೆಎಲ್ ರೈತರಿಗೆ ನಿವೇಶನ ನೀಡಲು ಲಂಚ ಕೇಳಿದ ಎಇಇ, ನೋಟಿಸ್ ಜಾರಿ

  • Public interest
  • BW Special
  • Life Style
  • Photo Gallery
  • Video
No Result
View All Result

Home Bengaluru Focus

BW SPECIAL | ಗ್ರೇಟರ್ ಬೆಂಗಳೂರಲ್ಲಿ ರಸ್ತೆ ಮೂಲಭೂತ ಸೌಕರ್ಯ ₹3605 ಕೋಟಿ ಕಾಮಗಾರಿಗೆ ಹಿಡಿದಿದೆ ಗ್ರಹಣ : ವಾಹನ ಸವಾರರಿಗೆ ನಿತ್ಯ ನರಕ ಯಾತನೆ

ಕಾಮಗಾರಿ ಹಣಕಾಸು ಪ್ರಗತಿ ಶೇ.10ರ ಆಸುಪಾಸು ;ರಸ್ತೆ ಸುಧಾರಣೆಗೆ ಬಿದ್ದಿದೆ ಬ್ರೇಕ್ ; ಕಾಮಗಾರಿ ವಿಳಂಬದಿಂದ ವಾಹನ ಸವಾರರಿಗೆ ತಪ್ಪದ ಗೋಳು

by Bengaluru Wire Desk
August 6, 2025
in Bengaluru Focus, BW Special, Public interest
Reading Time: 1 min read
0
ಬಿಬಿಎಂಪಿ ಕಾಮಗಾರಿಗಳ ಸಾಂದರ್ಭಿಕ ಚಿತ್ರ

ಬಿಬಿಎಂಪಿ ಕಾಮಗಾರಿಗಳ ಸಾಂದರ್ಭಿಕ ಚಿತ್ರ

ಬೆಂಗಳೂರು, ಆ.06 www.bengaluruwire.com : ಬೆಂಗಳೂರು ನಗರದ ರಸ್ತೆ ಮತ್ತು ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕೈಗೊಂಡಿರುವ 97 ವಿವಿಧ ಕಾಮಗಾರಿಗಳು ನಿರೀಕ್ಷಿತ ಮಟ್ಟದಲ್ಲಿ ಪ್ರಗತಿ ಸಾಧಿಸಿಲ್ಲ. 

ಬೆಂಗಳೂರು ವೈರ್ ಗೆ ಲಭ್ಯವಾದ ದಾಖಲೆಗಳಲ್ಲಿ 2025ರ ಜುಲೈ 29ರ ವರೆಗಿನ ಮಾಹಿತಿ ಪ್ರಕಾರ, ಒಟ್ಟು 3605.7 ಕೋಟಿ ರೂ. ಅಂದಾಜು ವೆಚ್ಚದ ಕಾಮಗಾರಿಗಳಿಗೆ 3011.87 ಕೋಟಿ ರೂ. ಮೊತ್ತದ ಗುತ್ತಿಗೆ ನೀಡಲಾಗಿದ್ದರೂ, ಈವರೆಗೆ ಕೇವಲ 346.77 ಕೋಟಿ ರೂ. ಮಾತ್ರ ಹಣಕಾಸು ಪ್ರಗತಿ ಕಂಡಿದೆ. ಇದು ಒಟ್ಟು ಅಂದಾಜು ವೆಚ್ಚದ ಶೇ. 9.6ರಷ್ಟು ಮಾತ್ರ ಎಂದು ತಿಳಿಸಲಾಗಿದೆ.

ಬೆಂಗಳೂರಿನ ರಸ್ತೆ ಅಭಿವೃದ್ಧಿ (Bangalore Road Development)ಪಡಿಸುವ ಸಾಂದರ್ಭಿಕ ಚಿತ್ರ.

ಬಿಬಿಎಂಪಿ ರಸ್ತೆ ಮೂಲಸೌಕರ್ಯ ವಿಭಾಗದಡಿ ಕೈಗೊಂಡಿರುವ ಈ ಕಾಮಗಾರಿಗಳಲ್ಲಿ ಹೈಡೆನ್ಸಿಟಿ ಕಾರಿಡಾರ್ (High Density Corridor), ಪಾದಚಾರಿ ಮಾರ್ಗ (Non Motorized Transport), ಜಂಕ್ಷನ್ ಸುಧಾರಣೆ, ಗ್ರೇಡ್ ಸಪರೇಟರ್‌ಗಳು, ಮೇಲ್ಸೇತುವೆಗಳು, ರಸ್ತೆ ಅಗಲೀಕರಣ, ವೈಟ್ ಟಾಪಿಂಗ್ ಹಾಗೂ ಬ್ಲಾಕ್ ಟಾಪಿಂಗ್ ಪ್ರಮುಖವಾಗಿವೆ. ಇವುಗಳಲ್ಲಿ ಹಲವು ಕಾಮಗಾರಿಗಳು ಗುತ್ತಿಗೆ ನೀಡಿದ ಹಲವು ತಿಂಗಳುಗಳ ನಂತರವೂ ಆರಂಭವಾಗಿಲ್ಲ, ಇನ್ನೂ ಕೆಲವು ಭೂ ಸ್ವಾಧೀನ ಅಥವಾ ಇತರೆ ತಾಂತ್ರಿಕ ಕಾರಣಗಳಿಂದ ನಿಂತುಹೋಗಿವೆ. ಕೆಲವು ಯೋಜನೆ ಆರಂಭವಾಗಿ ಹಲವು ವರ್ಷಗಳೇ ಕಳೆದಿವೆ. 

ಕಾಮಗಾರಿ ವಿಭಾಗವಾರು ಪ್ರಗತಿ ಇಲ್ಲಿದೆ:

 * ಗ್ರೇಡ್ ಸಪರೇಟರ್‌ಗಳು (Grade separators): ಒಟ್ಟು 8 ಕಾಮಗಾರಿಗಳ ಪೈಕಿ ಮೂರು ಕಾಮಗಾರಿಗಳು ಸ್ಥಗಿತಗೊಂಡಿವೆ. ನಾಯಂಡಹಳ್ಳಿ ಜಂಕ್ಷನ್ ಮತ್ತು ಎಚ್‌ಎಂಟಿ ರಸ್ತೆಯ ಜಂಕ್ಷನ್ ಕಾಮಗಾರಿಗಳು ಕ್ರಮವಾಗಿ ಮೆಟ್ರೋ ಕಾಮಗಾರಿ ಮತ್ತು ಟಿಡಿಆರ್ ಸಮಸ್ಯೆಗಳಿಂದ ನಿಲ್ಲಿಸಲಾಗಿದೆ. ರಾಜರಾಜೇಶ್ವರಿ ನಗರದಲ್ಲಿನ ಸಿಗ್ನಲ್-ಫ್ರೀ ರೋಟರಿ ಕಾಮಗಾರಿ ಕೂಡ ಭೂ ಸ್ವಾಧೀನದ ಸಮಸ್ಯೆಯಿಂದ ಸ್ಥಗಿತಗೊಂಡಿದೆ.

ಬೆಂಗಳೂರಿನ ರಸ್ತೆ ಅಭಿವೃದ್ಧಿ ಯೋಜನೆ (Bangalore Road Development Project) ಪ್ರಾತಿನಿಧಿಕ ಚಿತ್ರ.

 * ರಸ್ತೆ ಅಗಲೀಕರಣ (Road Widening): 16 ಕಾಮಗಾರಿಗಳ ಪೈಕಿ ಕೆಲವು ಪೂರ್ಣಗೊಂಡಿದ್ದರೆ, ಬೇಗೂರು ರಸ್ತೆಯ ಅಗಲೀಕರಣ ಕಾಮಗಾರಿ 2020ರ ಏಪ್ರಿಲ್‌ನಲ್ಲೇ ಆರಂಭವಾಗಿದ್ದರೂ, ಪ್ರಗತಿ ಶೇ. 55ರಷ್ಟಿದೆ. ಪಾದರಾಯನಪುರ ಮತ್ತು ಕನಕಪುರ ರಸ್ತೆ ವಿಸ್ತರಣೆ ಕಾಮಗಾರಿಗಳು ಇಂದಿಗೂ ಟೆಂಡರ್ ಪ್ರಕ್ರಿಯೆಯಲ್ಲಿವೆ.

 * ವೈಟ್ ಟಾಪಿಂಗ್ (White Topping): ರಾಜ್ಯ ಸರ್ಕಾರದ ಅನುದಾನದಡಿ ಕೈಗೊಂಡ ₹800 ಕೋಟಿ ಮೊತ್ತದ 8 ವೈಟ್ ಟಾಪಿಂಗ್ ಕಾಮಗಾರಿಗಳಲ್ಲಿ ಹಣಕಾಸು ಪ್ರಗತಿ ಕೇವಲ 41.90 ಕೋಟಿ ರೂ.ಗಳು. ಬಿಬಿಎಂಪಿ ಅನುದಾನದಡಿ ಕೈಗೊಂಡ 900 ಕೋಟಿ ರೂ.ಗಳ 8 ಕಾಮಗಾರಿಗಳಲ್ಲಿ ಹಣಕಾಸು ಪ್ರಗತಿ ಸೊನ್ನೆ. ಒಂದು ಕಾಮಗಾರಿಯ ಬದಲಾವಣೆಗಾಗಿ ಸರ್ಕಾರದ ಅನುಮೋದನೆಗೆ ಕಳುಹಿಸಲಾಗಿದೆ.

 * ಬ್ಲಾಕ್ ಟಾಪಿಂಗ್ (Black Topping): ಬ್ರ್ಯಾಂಡ್ ಬೆಂಗಳೂರು ಯೋಜನೆಯಡಿ ₹694 ಕೋಟಿ ಮೊತ್ತದ 26 ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಆದರೆ, ಬಹುತೇಕ ಕಾಮಗಾರಿಗಳ ಹಣಕಾಸು ಪ್ರಗತಿ ಶೇ. 0 ರಷ್ಟಿದೆ. ಹಲವು ಕಾಮಗಾರಿಗಳಿಗೆ ಕಾರ್ಯಾದೇಶ ನೀಡಿದರೂ, ಕೆಲಸ ಆರಂಭವಾಗಿಲ್ಲ.

 * ಹೈಡೆನ್ಸಿಟಿ ಕಾರಿಡಾರ್‌ಗಳು (High Density Corridors): ₹96 ಕೋಟಿ ವೆಚ್ಚದ 3 ಕಾಮಗಾರಿಗಳ ಹಣಕಾಸು ಪ್ರಗತಿ ಕೂಡ ಸೊನ್ನೆಯಾಗಿದೆ.

 * ಸೈಕಲ್ ಪಥ ಹಾಗೂ ಪಾದಚಾರಿ ಮಾರ್ಗಗಳು (Non Motorized Transport): ₹13 ಕೋಟಿ ವೆಚ್ಚದ 2 ಕಾಮಗಾರಿಗಳ ಹಣಕಾಸು ಪ್ರಗತಿಯೂ ಶೂನ್ಯ.

 * ಕೊನೆಯ ಮೈಲು ತನಕದ ಸಂಪರ್ಕ ಕಲ್ಪಿಸುವಿಕೆ (Last Mile Connectivity) : ₹90 ಕೋಟಿ ಮೊತ್ತದ ಮೂರು ಕಾಮಗಾರಿಗಳಲ್ಲಿ ಸಾಧಿಸಿದ ಹಣಕಾಸು ಪ್ರಗತಿಯೂ ಸೊನ್ನೆಯಾಗಿದೆ.

ಒಟ್ಟಾರೆಯಾಗಿ, ಬಿಬಿಎಂಪಿ ರಸ್ತೆ ಮತ್ತು ಮೂಲಭೂತ ಸೌಕರ್ಯಗಳ ಕಾಮಗಾರಿಗಳು ಹಣಕಾಸು ಪ್ರಗತಿಯಲ್ಲಿ ಭಾರೀ ಹಿಂದುಳಿದಿವೆ. ಬಹುತೇಕ ಕಾಮಗಾರಿಗಳು ನಿಧಾನಗತಿಯಲ್ಲಿ ಸಾಗುತ್ತಿರುವುದು ಅಥವಾ ಸ್ಥಗಿತಗೊಂಡಿರುವುದು ಬೆಂಗಳೂರಿನ ನಾಗರಿಕರಿಗೆ, ವಿಶೇಷವಾಗಿ ವಾಹನ ಸವಾರರು ಮತ್ತು ಪಾದಚಾರಿಗಳಿಗೆ ತೀವ್ರ ಅನನುಕೂಲ ಉಂಟುಮಾಡುತ್ತಿದೆ. ಸರ್ಕಾರದ ಹಾಗೂ ಪಾಲಿಕೆಯ ನಿರ್ಲಕ್ಷ್ಯ ಈ ಪ್ರಮುಖ ಕಾಮಗಾರಿಗಳ ಮೇಲೆ ಕರಿನೆರಳು ಬೀರಿರುವಂತಿದೆ.

WhatsApp Join our WhatsApp Channel
Previous Post

Lalbagh Flower Show | ಲತೆಯಲ್ಲಿ ಅರಳುತ್ತಿದೆ ಕಿತ್ತೂರು ಕೋಟೆ ; ಕಣ್ತುಂಬಿಕೊಳ್ಳಿ ವೀರರಾಣಿ ಚೆನ್ನಮ್ಮನ ಸಾಹಸಗಾಥೆ

Next Post

BW SPECIAL | ಬೆಂಗಳೂರು ಬ್ಯುಸಿನೆಸ್ ಕಾರಿಡಾರ್‌-2ಕ್ಕೆ ಆರು ಹೊಸ ಬಡಾವಣೆ: 6,217 ಎಕರೆ ಭೂಸ್ವಾಧೀನ ಅಧಿಸೂಚನೆಗೆ ಸರ್ಕಾರ ಅನುಮತಿ

Next Post
BDA PRR Road

BW SPECIAL | ಬೆಂಗಳೂರು ಬ್ಯುಸಿನೆಸ್ ಕಾರಿಡಾರ್‌-2ಕ್ಕೆ ಆರು ಹೊಸ ಬಡಾವಣೆ: 6,217 ಎಕರೆ ಭೂಸ್ವಾಧೀನ ಅಧಿಸೂಚನೆಗೆ ಸರ್ಕಾರ ಅನುಮತಿ

Jan Aushadhi Kendra | ಜನೌಷಧಿ ಕೇಂದ್ರಗಳನ್ನು ರಾಜ್ಯದಲ್ಲಿ ಮುಚ್ಚಿಲ್ಲ: ದಿನೇಶ್ ಗುಂಡೂರಾವ್ ಸ್ಪಷ್ಟನೆ, ವಿಕ್ಟೋರಿಯಾ ಆಸ್ಪತ್ರೆಗೆ ಸಿಎಂ ದಿಢೀರ್ ಭೇಟಿ

Please login to join discussion

Like Us on Facebook

Follow Us on Twitter

Recent News

ಕೆಎಸ್ ಆರ್ ಟಿಸಿ ಕೇಂದ್ರ ಕಚೇರಿ ಸಾಂದರ್ಭಿಕ ಚಿತ್ರ

ಕೆಎಸ್‌ಆರ್‌ಟಿಸಿಯಿಂದ ‘ಬೆಂಗಳೂರು-ಜೋಗ ಜಲಪಾತ’ ಪ್ಯಾಕೇಜ್ ಟೂರ್ ಆ.8ರಿಂದ ಆರಂಭ: ವೇಳಾಪಟ್ಟಿ, ಪ್ರಯಾಣದರ ವಿವರ ಇಲ್ಲಿದೆ

August 5, 2026
ಪೆಟ್ರೋಲ್ ಬಂಕ್ ಸಾಂದರ್ಭಿಕ ಚಿತ್ರ

ವಿಮೆ ಇಲ್ಲದ ವಾಹನಗಳಿಗೆ ಪೆಟ್ರೋಲ್, ಡೀಸೆಲ್ ಇಲ್ಲ: ಸುಪ್ರೀಂ ಕೋರ್ಟ್ ಪೈಲೆಟ್ ಯೋಜನೆ ರೂಪಿಸಲು ಕೇಂದ್ರಕ್ಕೆ ಸೂಚನೆ

August 5, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video
ಕೆಎಸ್ ಆರ್ ಟಿಸಿ ಕೇಂದ್ರ ಕಚೇರಿ ಸಾಂದರ್ಭಿಕ ಚಿತ್ರ

ಕೆಎಸ್‌ಆರ್‌ಟಿಸಿಯಿಂದ ‘ಬೆಂಗಳೂರು-ಜೋಗ ಜಲಪಾತ’ ಪ್ಯಾಕೇಜ್ ಟೂರ್ ಆ.8ರಿಂದ ಆರಂಭ: ವೇಳಾಪಟ್ಟಿ, ಪ್ರಯಾಣದರ ವಿವರ ಇಲ್ಲಿದೆ

August 5, 2026
ಪೆಟ್ರೋಲ್ ಬಂಕ್ ಸಾಂದರ್ಭಿಕ ಚಿತ್ರ

ವಿಮೆ ಇಲ್ಲದ ವಾಹನಗಳಿಗೆ ಪೆಟ್ರೋಲ್, ಡೀಸೆಲ್ ಇಲ್ಲ: ಸುಪ್ರೀಂ ಕೋರ್ಟ್ ಪೈಲೆಟ್ ಯೋಜನೆ ರೂಪಿಸಲು ಕೇಂದ್ರಕ್ಕೆ ಸೂಚನೆ

August 5, 2026

Science News | ಪ್ರೊ. ಅನ್ನಪೂರ್ಣಿ ಸುಬ್ರಮಣ್ಯಂಗೆ ‘ಕಾಸ್ಪಾರ್ ವಿಕ್ರಮ್ ಸಾರಾಭಾಯ್’ ಪ್ರಶಸ್ತಿ: ಈ ಗೌರವ ಪಡೆದ ಮೊದಲ ಭಾರತೀಯ ಮಹಿಳೆ

August 4, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group