ಬೆಂಗಳೂರು, ಜು.07 www.bengaluruwire.com : ನಗರದ ಪ್ರತಿಷ್ಠಿತ ‘ ಪ್ರೆಸ್ ಕ್ಲಬ್ ಆಫ್ ಬೆಂಗಳೂರಿಗೆ’ ಭಾನುವಾರ ನಡೆದ ಚುನಾವಣೆಯಲ್ಲಿ ಹಿರಿಯ ಪತ್ರಕರ್ತರಾದ ಆರ್. ಶ್ರೀಧರ್ ಅಧ್ಯಕ್ಷರಾಗಿ ಪುನರ್ ಆಯ್ಕೆಯಾದರು. ಮೋಹನ್ ಕುಮಾರ್ ಉಪಾಧ್ಯಕ್ಷರಾಗಿ ಚುನಾಯಿತರಾದರೆ, ಶಿವಕುಮಾರ್ ಬೆಳ್ಳಿ ತಟ್ಟೆ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದರು.
ಪ್ರೆಸ್ ಕ್ಲಬ್ ನ ಅಧ್ಯಕ್ಷ ಸ್ಥಾನಕ್ಕಾಗಿ ಆರ್. ಶ್ರೀಧರ್, ಧ್ಯಾನ್ ಪೂಣಚ್ಚ ಹಾಗೂ ಸುಭಾಷ್ ಹೂಗಾರ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಆದರೆ, ಅಂತಿಮವಾಗಿ ಆರ್. ಶ್ರೀಧರ್ ಹೆಚ್ಚಿನ ಮತ ಗಳಿಸುವುದರೊಂದಿಗೆ ಮತ್ತೆ ಅಧ್ಯಕ್ಷರಾಗಿ ಆಯ್ಕೆಯಾದರು.
ಬೆಂಗಳೂರು ಪ್ರೆಸ್ ಕ್ಲಬ್ ನ 2024-25ನೇ ಸಾಲಿಗೆ ಚುನಾಯಿತರಾದ ಪಟ್ಟಿ ಈ ಕೆಳಕಂಡಂತಿದೆ :
ಆರ್. ಶ್ರೀಧರ್ – ಅಧ್ಯಕ್ಷರು

ಮೋಹನ್ ಕುಮಾರ್- ಉಪಾಧ್ಯಕ್ಷರು
ಶಿವಕುಮಾರ್ ಬೆಳ್ಳಿತಟ್ಟೆ- ಪ್ರಧಾನ ಕಾರ್ಯದರ್ಶಿ
ಜಿ.ವೈ. ಮಂಜುನಾಥ್- ಕಾರ್ಯದರ್ಶಿ
ಬಿ.ಎನ್. ಧರಣೇಶ್- ಜಂಟಿ ಕಾರ್ಯದರ್ಶಿ
ಜಿ. ಗಣೇಶ್- ಖಜಾಂಚಿ
ಕಾರ್ಯಕಾರಿ ಸಮಿತಿ:
* ಶಿವಣ್ಣ
* ಯಾಸಿರ್ ಮುಸ್ತಾಕ್
* ಮಮ್ತಾಜ್ ಆಲಿಮ್
* ಎ.ಎಚ್ ಶರಣಬಸಪ್ಪ
* ರೋಹಿಣಿ ವಿ. ಅಡಿಗ
*ಸಿ. ಆರ್. ಮಂಜುನಾಥ್
(ಮಹಿಳಾ ಮೀಸಲು ಕ್ಷೇತ್ರ)
* ಮಿನಿ ತೇಜಸ್ವಿನಿ




















