Thursday, September 24, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    IAS Transfer | ರಾಜ್ಯದಲ್ಲಿ ಹಲವು ಐಎಎಸ್ ಅಧಿಕಾರಿಗಳ ದಿಢೀರ್ ವರ್ಗಾವಣೆ: ಡಿಸಿಎಂ ಕಾರ್ಯದರ್ಶಿಯಾಗಿ ರಾಕೇಶ್ ಕುಮಾರ್ ನಿಯೋಜನೆ

    ಕಸ್ತೂರಿ ರಂಗನ್ ವರದಿ: ಗ್ರಾಮ ಮಟ್ಟದಲ್ಲಿ ಭೌತಿಕ ಸರ್ವೇಗೆ ಕೇಂದ್ರಕ್ಕೆ 1 ವರ್ಷ ಕಾಲಾವಕಾಶ ಕೋರಿಕೆ; ವಿಧಾನಸಭೆಯಲ್ಲಿ ಸರ್ವಾನುಮತದ ನಿರ್ಣಯ ಅಂಗೀಕಾರ

    ಬೆಂಗಳೂರಿನ 135 ಕೆರೆಗಳಿಗೆ ಮರುಜೀವ: 7 ಜಿಲ್ಲೆಗಳ 500 ಕೆರೆ ಅಭಿವೃದ್ಧಿಗೆ ₹150 ಕೋಟಿ

    ಎಲ್ ಪಿಜಿ ಸಿಲಿಂಡರ್ ಸಾಂದರ್ಭಿಕ ಚಿತ್ರ

    ​ಎಲ್‌ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ಅಕ್ಟೋಬರ್ 1ರಿಂದ ಹೊಸ ನಿಯಮ ಜಾರಿ

    Power News | ಭಾರತ್ ಎಲೆಕ್ಟ್ರಿಕ್ ಮೊಬಿಲಿಟಿ ಸೂಚ್ಯಂಕ: ದೇಶದಲ್ಲೇ ಕರ್ನಾಟಕಕ್ಕೆ 3ನೇ ಸ್ಥಾನ

    ಗ್ರಾಮಠಾಣಾ ಆಸ್ತಿಗಳಿಗೆ ನ.1ರಿಂದ ಮನೆ ಬಾಗಿಲಿಗೇ ಇ-ಸ್ವತ್ತು ಖಾತೆ: ಈಶ್ವರ ಖಂಡ್ರೆ ಸೂಚನೆ

    ಮಂಗಳೂರಿನಲ್ಲಿ ಮೊದಲ ಸಚಿವ ಸಂಪುಟ ಸಭೆ: ₹32,611 ಕೋಟಿ ಯೋಜನೆಗಳಿಗೆ ಅನುಮೋದನೆ: ತುಳು ಎರಡನೇ ಹೆಚ್ಚುವರಿ ಆಡಳಿತ ಭಾಷೆಯಾಗಿ ಘೋಷಣೆ

    Breaking News | ನವೆಂಬರ್ ಅಂತ್ಯಕ್ಕೆ ತುಮಕೂರಿಗೆ ಎತ್ತಿನಹೊಳೆ ನೀರು: ಸಚಿವ ಚಲುವರಾಯಸ್ವಾಮಿ ಭರವಸೆ

    ಮೆಕ್ಕಾ ವಾಯುಪ್ರದೇಶದ ಬಳಿ ಹೌತಿ ಡ್ರೋನ್ ಹೊಡೆದುರುಳಿಸಿದ ಸೌದಿ ಅರೇಬಿಯಾ: ಪವಿತ್ರ ಕ್ಷೇತ್ರಗಳ ರಕ್ಷಣೆ ‘ರೆಡ್ ಲೈನ್’ ಎಂದ ರಿಯಾದ್

  • Bengaluru Focus

    STUDY REPORT | ಬೆಂಗಳೂರು ಸಂಚಾರ ನರಕ: ಶಾಲಾ ಮಕ್ಕಳ ಬಾಲ್ಯ ಕಸಿದುಕೊಳ್ಳುತ್ತಿದೆ ನಗರದ ರಸ್ತೆಗಳು

    IAS Transfer | ರಾಜ್ಯದಲ್ಲಿ ಹಲವು ಐಎಎಸ್ ಅಧಿಕಾರಿಗಳ ದಿಢೀರ್ ವರ್ಗಾವಣೆ: ಡಿಸಿಎಂ ಕಾರ್ಯದರ್ಶಿಯಾಗಿ ರಾಕೇಶ್ ಕುಮಾರ್ ನಿಯೋಜನೆ

    ಬೆಂಗಳೂರಿನ 135 ಕೆರೆಗಳಿಗೆ ಮರುಜೀವ: 7 ಜಿಲ್ಲೆಗಳ 500 ಕೆರೆ ಅಭಿವೃದ್ಧಿಗೆ ₹150 ಕೋಟಿ

    GBA News | ​ಬೆಂಗಳೂರಿಗರಿಗೆ ‘ಇ-ಆಸ್ತಿ 2.0’ ಡಿಜಿಟಲ್ ಕೊಡುಗೆ; ಅಕ್ರಮ ಕಟ್ಟಡಗಳಿಗೆ ಆಯುಕ್ತರ ಚಾಟಿ

    BW SPECIAL | ಖಜಾನೆ ಖಾಲಿ: ಬೆಂಗಳೂರಿನಲ್ಲಿ ಆಸ್ತಿ ಖಾತಾ, ತೆರಿಗೆಗೆ ‘ಸಾಫ್ಟ್‌ವೇರ್ ಶುಲ್ಕ’ ಬಾಸುಂಡೆ; ಕನ್ನಡಿಗರ ಜೇಬಿಗೆ ಕಾಂಗ್ರೆಸ್ ಸರ್ಕಾರ ಕತ್ತರಿ

    Bunts Sangha | ಬೆಂಗಳೂರು ಬಂಟರ ಸಂಘ ಚುನಾವಣೆ: ಅಧ್ಯಕ್ಷರಾಗಿ ದೀಪಕ್ ಶೆಟ್ಟಿ, ​ಉಪಾಧ್ಯಕ್ಷರಾಗಿ ಮಧುಕರ್ ಶೆಟ್ಟಿ ಆಯ್ಕೆ

    ಕೇವಲ 30 ನಿಮಿಷದಲ್ಲಿ ಕಟ್ಟಡ ನಕ್ಷೆ ಮಂಜೂರಾತಿ: ‘ನಂಬಿಕೆ ನಕ್ಷೆ 2.0’ ಲೋಕಾರ್ಪಣೆ!

    Power News | ಭಾರತ್ ಎಲೆಕ್ಟ್ರಿಕ್ ಮೊಬಿಲಿಟಿ ಸೂಚ್ಯಂಕ: ದೇಶದಲ್ಲೇ ಕರ್ನಾಟಕಕ್ಕೆ 3ನೇ ಸ್ಥಾನ

    ​ಜೆ.ಪಿ. ನಗರದಿಂದ ಗೊಟ್ಟಿಗೆರೆವರೆಗೆ ಶೇ. 34 ರಷ್ಟು ಬೀದಿ ದೀಪ ಬಂದ್; ​ಕತ್ತಲಲ್ಲಿ ರಸ್ತೆಗಳು; ಸಚಿವ ಕೃಷ್ಣ ಬೈರೇಗೌಡ ದಿಢೀರ್ ರಾತ್ರಿ ರೌಂಡ್ಸ್

  • Public interest
  • BW Special
  • Life Style
  • Photo Gallery
  • Video
No Result
View All Result

Home News Wire

BIG BREAKING NEWS | ಮೇಕೆದಾಟು ಯೋಜನೆ: ನೆರೆ ರಾಜ್ಯಗಳ ಒಪ್ಪಿಗೆ ಅಗತ್ಯವಿಲ್ಲ, ಕೇಂದ್ರ ಸರ್ಕಾರದ ಸ್ಪಷ್ಟನೆ

ರಾಜ್ಯಸಭೆಯಲ್ಲಿ ತಮಿಳುನಾಡು ಸಂಸದರ ಪ್ರಶ್ನೆಗೆ ಜಲಶಕ್ತಿ ಸಚಿವಾಲಯದ ಉತ್ತರ; ಸಿಎಂ ಡಿ.ಕೆ. ಶಿವಕುಮಾರ್ ದೆಹಲಿ ಭೇಟಿ ಬೆನ್ನಲ್ಲೇ ಕರ್ನಾಟಕಕ್ಕೆ ಬಿಗ್ ರಿಲೀಫ್.

by Bengaluru Wire Desk
July 27, 2026
in News Wire, Public interest
Reading Time: 1 min read
0

ನವದೆಹಲಿ, ಜು.27 www.bengaluruwire.com: ರಾಜ್ಯದ ಬಹುನಿರೀಕ್ಷಿತ ಮೇಕೆದಾಟು ಯೋಜನೆ ವಿಚಾರದಲ್ಲಿ ಕರ್ನಾಟಕಕ್ಕೆ ಭಾರಿ ಮುನ್ನಡೆ ಸಿಕ್ಕಿದೆ. ಮೇಕೆದಾಟು ಜಲಾಶಯ ನಿರ್ಮಾಣಕ್ಕೆ ಕರ್ನಾಟಕವು ತಮಿಳುನಾಡು, ಕೇರಳ ಹಾಗೂ ಪುದುಚೆರಿಯಂತಹ ಕೆಳ ಹರಿವಿನ ರಾಜ್ಯಗಳ ಒಪ್ಪಿಗೆ ಪಡೆಯುವ ಅಗತ್ಯವಿಲ್ಲ ಎಂದು ಕೇಂದ್ರ ಜಲಶಕ್ತಿ ಸಚಿವಾಲಯ ಸ್ಪಷ್ಟಪಡಿಸಿದೆ.

​ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನವದೆಹಲಿಯ ಕರ್ನಾಟಕ ಭವನದಲ್ಲಿ ಇಂದು ರಾಜ್ಯದ ಸಂಸತ್ ಸದಸ್ಯರ ಜೊತೆ ಮಹತ್ವದ ಸಭೆ ನಡೆಸಿ, ರಾಜ್ಯದ ಬರದ ಪರಿಸ್ಥಿತಿ ಹಾಗೂ ಕಾವೇರಿ, ಮೇಕೆದಾಟು, ಮಹದಾಯಿ, ಕೃಷ್ಣ ಸೇರಿದಂತೆ ಪ್ರಮುಖ ನೀರಾವರಿ ಯೋಜನೆಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಇದೇ ದಿನ ಕೇಂದ್ರ ಸರ್ಕಾರದಿಂದ ಈ ಮಹತ್ವದ ಸ್ಪಷ್ಟನೆ ಹೊರಬಿದ್ದಿರುವುದು ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ರಾಜ್ಯದ ಇಚ್ಛಾಶಕ್ತಿಗೆ ಮತ್ತಷ್ಟು ಬಲ ನೀಡಿದೆ.

ರಾಜ್ಯಸಭೆಯಲ್ಲಿ ನೀಡಿದ ಲಿಖಿತ ಉತ್ತರದ ಪ್ರತಿ.

​ರಾಜ್ಯಸಭೆಯಲ್ಲಿ ಕೇಂದ್ರದ ಉತ್ತರ:

ಜುಲೈ 27, 2026 ರಂದು ರಾಜ್ಯಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ತಮಿಳುನಾಡಿನ ಸಂಸದ ಡಾ. ಅನ್ಬುಮಣಿ ರಾಮದಾಸ್ ಅವರು ಕಾವೇರಿ ನದಿಗೆ ಅಡ್ಡಲಾಗಿ ಯಾವುದೇ ರಚನೆ ನಿರ್ಮಿಸಲು ಕೆಳ ಹರಿವಿನ ರಾಜ್ಯಗಳ ಒಪ್ಪಿಗೆ ಪಡೆಯಬೇಕೆಂಬ 2018 ರ ಸುಪ್ರೀಂ ಕೋರ್ಟ್ ಆದೇಶದ ಬಗ್ಗೆ ಮತ್ತು ಮೇಕೆದಾಟು ಯೋಜನೆಗೆ ಕರ್ನಾಟಕ ಒಪ್ಪಿಗೆ ಪಡೆದಿದೆಯೇ ಎಂದು ಪ್ರಶ್ನಿಸಿದ್ದರು. ಇದಕ್ಕೆ ಜಲಶಕ್ತಿ ಖಾತೆ ರಾಜ್ಯ ಸಚಿವ ರಾಜ್ ಭೂಷಣ್ ಚೌಧರಿ ಅವರು ಲಿಖಿತ ಉತ್ತರ ನೀಡಿದ್ದಾರೆ.

​”16.02.2018 ರ ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ, ಕಾವೇರಿ ನದಿಗೆ ಅಡ್ಡಲಾಗಿ ಯಾವುದೇ ರಚನೆಯನ್ನು ನಿರ್ಮಿಸಲು ಕರ್ನಾಟಕವು ತಮಿಳುನಾಡು, ಕೇರಳ ಮತ್ತು ಪುದುಚೇರಿಯಂತಹ ಇತರ ರಾಜ್ಯಗಳ ಒಪ್ಪಿಗೆಯನ್ನು ಪಡೆಯಬೇಕು ಎಂಬ ಉಲ್ಲೇಖ ಎಲ್ಲೂ ಇಲ್ಲ” ಎಂದು ಸಚಿವರು ತಮ್ಮ ಉತ್ತರದಲ್ಲಿ (meke.pdf) ಸ್ಪಷ್ಟವಾಗಿ ತಿಳಿಸಿದ್ದಾರೆ.

​ಕಾವೇರಿ ಜಲ ವಿವಾದ ನ್ಯಾಯಾಧಿಕರಣದ (CWDT) 2007 ರ ತೀರ್ಪಿನ 18 ನೇ ಷರತ್ತನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ. ಇದರ ಅನ್ವಯ, ನ್ಯಾಯಾಧಿಕರಣದ ಆದೇಶಕ್ಕೆ ವಿರುದ್ಧವಾಗಿರದೇ, ತನ್ನ ಗಡಿಯೊಳಗೆ ನೀರಿನ ಬಳಕೆಯನ್ನು ನಿಯಂತ್ರಿಸುವ ಅಥವಾ ಅದರ ಪ್ರಯೋಜನವನ್ನು ಪಡೆಯುವ ಯಾವುದೇ ರಾಜ್ಯದ ಹಕ್ಕನ್ನು ಈ ತೀರ್ಪು ನಿರ್ಬಂಧಿಸುವುದಿಲ್ಲ ಎಂಬುದನ್ನು ಸುಪ್ರೀಂ ಕೋರ್ಟ್ ಪುನರುಚ್ಚರಿಸಿದೆ ಎಂದು ಕೇಂದ್ರ ಸರ್ಕಾರ ಸದನಕ್ಕೆ ಮಾಹಿತಿ ನೀಡಿದೆ.

​ಯೋಜನೆಯ ಪ್ರಸ್ತುತ ಸ್ಥಿತಿ:

ಕರ್ನಾಟಕ ಸರ್ಕಾರವು 2019 ರಲ್ಲಿ ಸಲ್ಲಿಸಿದ್ದ ಮೇಕೆದಾಟು ಸಮತೋಲನ ಜಲಾಶಯ ಮತ್ತು ಕುಡಿಯುವ ನೀರಿನ ಯೋಜನೆಯ ವಿವರವಾದ ಯೋಜನಾ ವರದಿಯನ್ನು (DPR) ಪ್ರಾಧಿಕಾರಕ್ಕೆ ಹಿಂದಿರುಗಿಸಲಾಗಿದೆ. ಸಿಡಬ್ಲ್ಯುಡಿಟಿ (CWDT) ತೀರ್ಪು ಮತ್ತು ಅಸ್ತಿತ್ವದಲ್ಲಿರುವ ಕೇಂದ್ರ ಜಲ ಆಯೋಗದ (CWC) ಮಾರ್ಗಸೂಚಿಗಳ ಅನ್ವಯ ಪರಿಷ್ಕೃತ ಡಿಪಿಆರ್ ಸಲ್ಲಿಸುವಂತೆ ಸೂಚಿಸಲಾಗಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.

​ಒಟ್ಟಾರೆಯಾಗಿ, ಮೇಕೆದಾಟು ಯೋಜನೆ ವಿಚಾರದಲ್ಲಿ ಕೇಂದ್ರದ ಈ ಲಿಖಿತ ಹೇಳಿಕೆ ತಮಿಳುನಾಡಿನ ಆಕ್ಷೇಪಗಳಿಗೆ ಬ್ರೇಕ್ ಹಾಕಿದ್ದು, ಯೋಜನೆಗೆ ಶೀಘ್ರ ಅನುಮತಿ ಸಿಗುವ ನಿಟ್ಟಿನಲ್ಲಿ ಕರ್ನಾಟಕದ ಹೋರಾಟಕ್ಕೆ ಆನೆಬಲ ತಂದಿದೆ.

Sharing is Caring

  • Share on WhatsApp (Opens in new window) WhatsApp
  • Print (Opens in new window) Print
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Share on LinkedIn (Opens in new window) LinkedIn

Like this:

Like Loading…
WhatsApp Join our WhatsApp Channel
Previous Post

ಈ ವಾರವೇ ಸಚಿವ ಸಂಪುಟ ವಿಸ್ತರಣೆ ಪೂರ್ಣ: ಸಿಎಂ ಡಿ.ಕೆ. ಶಿವಕುಮಾರ್

Next Post

ಸ್ಪೈಡರ್ ಮ್ಯಾನ್ ಹೊಸ ಚಿತ್ರಕ್ಕೆ ಸೆನ್ಸಾರ್ ಮಂಡಳಿ ಕತ್ತರಿ: 8 ಸೆಕೆಂಡ್ ಲಿಪ್-ಲಾಕ್ ದೃಶ್ಯಕ್ಕೆ ಕತ್ತರಿ

Next Post

ಸ್ಪೈಡರ್ ಮ್ಯಾನ್ ಹೊಸ ಚಿತ್ರಕ್ಕೆ ಸೆನ್ಸಾರ್ ಮಂಡಳಿ ಕತ್ತರಿ: 8 ಸೆಕೆಂಡ್ ಲಿಪ್-ಲಾಕ್ ದೃಶ್ಯಕ್ಕೆ ಕತ್ತರಿ

Indian billionaires Increased | ಭಾರತದಲ್ಲಿ ಬಿಲಿಯನೇರ್‌ಗಳ ಸಂಖ್ಯೆ 4 ಪಟ್ಟು ಹೆಚ್ಚಳ: 576ಕ್ಕೆ ಏರಿಕೆ

Please login to join discussion

Like Us on Facebook

Follow Us on Twitter

Recent News

STUDY REPORT | ಬೆಂಗಳೂರು ಸಂಚಾರ ನರಕ: ಶಾಲಾ ಮಕ್ಕಳ ಬಾಲ್ಯ ಕಸಿದುಕೊಳ್ಳುತ್ತಿದೆ ನಗರದ ರಸ್ತೆಗಳು

September 23, 2026

IAS Transfer | ರಾಜ್ಯದಲ್ಲಿ ಹಲವು ಐಎಎಸ್ ಅಧಿಕಾರಿಗಳ ದಿಢೀರ್ ವರ್ಗಾವಣೆ: ಡಿಸಿಎಂ ಕಾರ್ಯದರ್ಶಿಯಾಗಿ ರಾಕೇಶ್ ಕುಮಾರ್ ನಿಯೋಜನೆ

September 23, 2026
Bengaluru Wire, Kannada News, latest News in Kannada

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

STUDY REPORT | ಬೆಂಗಳೂರು ಸಂಚಾರ ನರಕ: ಶಾಲಾ ಮಕ್ಕಳ ಬಾಲ್ಯ ಕಸಿದುಕೊಳ್ಳುತ್ತಿದೆ ನಗರದ ರಸ್ತೆಗಳು

September 23, 2026

IAS Transfer | ರಾಜ್ಯದಲ್ಲಿ ಹಲವು ಐಎಎಸ್ ಅಧಿಕಾರಿಗಳ ದಿಢೀರ್ ವರ್ಗಾವಣೆ: ಡಿಸಿಎಂ ಕಾರ್ಯದರ್ಶಿಯಾಗಿ ರಾಕೇಶ್ ಕುಮಾರ್ ನಿಯೋಜನೆ

September 23, 2026

ಕಸ್ತೂರಿ ರಂಗನ್ ವರದಿ: ಗ್ರಾಮ ಮಟ್ಟದಲ್ಲಿ ಭೌತಿಕ ಸರ್ವೇಗೆ ಕೇಂದ್ರಕ್ಕೆ 1 ವರ್ಷ ಕಾಲಾವಕಾಶ ಕೋರಿಕೆ; ವಿಧಾನಸಭೆಯಲ್ಲಿ ಸರ್ವಾನುಮತದ ನಿರ್ಣಯ ಅಂಗೀಕಾರ

September 22, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group
%d