Sunday, October 25, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ಚಿಕ್ಕಬಳ್ಳಾಪುರದಲ್ಲಿ ಬೆಳ್ಳಂಬೆಳಗ್ಗೆ ಲಘು ಭೂಕಂಪನ: 2.9 ತೀವ್ರತೆ ದಾಖಲು

    ಸಂಸತ್ ಆವರಣದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಮತ್ತು 202ನೇ ವಿಜಯೋತ್ಸವದ ಸಂಭ್ರಮ

    ‘ಆಲಿಸು ಕಂದಾ’: 200 ಮಕ್ಕಳಿಗೆ ಉಚಿತ ಕಾಕ್ಲಿಯರ್ ಇಂಪ್ಲಾಂಟ್ ಭಾಗ್ಯ

    ಮೈಸೂರು ನಂದಿಧ್ವಜ ಪೂಜೆಗೆ ಸಚಿವರ ಪ್ರವೇಶಕ್ಕೆ ತಡೆ: ವಿಚಾರಣೆಗೆ ಸಿಎಂ ಆದೇಶ; ದೆಹಲಿಯಲ್ಲಿ ಬರಗಾಲ, ನೀರಾವರಿ ಯೋಜನೆಗಳ ಚರ್ಚೆ

    ಶಿವಮೊಗ್ಗ ದಸರಾದಲ್ಲಿ ಭಾರೀ ಅವಾಂತರ: ಬೆಳ್ಳಿ ಅಂಬಾರಿ ಹೊತ್ತಿದ್ದ ‘ಸೋಮಣ್ಣ’ ಆನೆ ದಿಢೀರ್ ಓಟ, ಅಂಬಾರಿ ಧ್ವಂಸ

    ಬೆಂಗಳೂರು ದಕ್ಷಿಣದಲ್ಲಿ ಸಂಜೆ ವೇಳೆಯೂ ಕಸ ಸಂಗ್ರಹಣೆ ಆರಂಭ: ಉದ್ಯೋಗಿಗಳಿಗೆ ಬಿಗ್ ರಿಲೀಫ್

    ಅಲೆಯಲ್ಲಿ ಕೊಚ್ಚಿಹೋಗುತ್ತಿದ್ದರೂ ಮಗುವನ್ನು ಗಮನಿಸದೆ ರೀಲ್ಸ್ ಮಾಡಿದ ದಂಪತಿ: ವಿಡಿಯೋ ವೈರಲ್!

    Defence News | ಹಿಮಾಲಯ ಸೀಳಿ 16,700 ಅಡಿ ಎತ್ತರದಲ್ಲಿ ‘ನಿಮ್ಮು–ಪದಮ್–ದಾರ್ಚಾ’ ರಸ್ತೆ ಲೋಕಾರ್ಪಣೆ: ಇತಿಹಾಸ ಬರೆದ ಬಿಆರ್‌ಒ

    ಮೈಸೂರು ದಸರಾದಲ್ಲಿ ಐತಿಹಾಸಿಕ ಕಂಬಳ ಉದ್ಘಾಟಿಸಿದ ಸಿಎಂ ಡಿ.ಕೆ. ಶಿವಕುಮಾರ್: ದಸರಾ ರೀಲ್ಸ್ ಸ್ಪರ್ಧೆ ಘೋಷಣೆ

  • Bengaluru Focus

    ಚಿಕ್ಕಬಳ್ಳಾಪುರದಲ್ಲಿ ಬೆಳ್ಳಂಬೆಳಗ್ಗೆ ಲಘು ಭೂಕಂಪನ: 2.9 ತೀವ್ರತೆ ದಾಖಲು

    ‘ಗೋಲ್ಡನ್ ಚಾರಿಯಟ್’ 2026–27ರ ಐಷಾರಾಮಿ ಯಾತ್ರೆಗೆ ಸಿಎಂ ಡಿ.ಕೆ. ಶಿವಕುಮಾರ್ ಹಸಿರು ನಿಶಾನೆ

    ರೆಸ್ಯೂಮ್‌ನಲ್ಲಿ ‘ಕನ್ನಡ’ ಇದ್ರೆ ಕೆಲಸಕ್ಕಿಲ್ಲ ಜಾಗ! ತವರಿನಲ್ಲೇ ಕನ್ನಡಿಗರಿಗೆ ಉದ್ಯೋಗ ವಂಚನೆ: ಸರ್ಕಾರಕ್ಕೆ ಮಹಿಳೆಯ ಖಡಕ್ ಸವಾಲು

    ಬೆಂಗಳೂರಿನಲ್ಲಿ ಕಸದಲ್ಲೂ ಕಾಸು ಹೊಡೆಯುವ ದಂಧೆ: ಕಾಂಗ್ರೆಸ್ ವಿರುದ್ಧ ಆರ್. ಅಶೋಕ್ ಆಕ್ರೋಶ

    ಗುತ್ತಿಗೆ, ಹೊರಗುತ್ತಿಗೆ ನೌಕರರಿಗೂ ಇನ್ಮುಂದೆ ‘ಕರ್ತವ್ಯ’ ಆ್ಯಪ್ ಹಾಜರಾತಿ ಕಡ್ಡಾಯ: ಆ್ಯಪ್ ಬಳಸದಿದ್ದರೆ ವೇತನ ಕಡಿತ

    ಸಕಾಲ ಸೇವೆ ವಿಳಂಬಕ್ಕೆ ಅಧಿಕಾರಿಗಳಿಗೆ 1,500 ರೂ. ದಂಡ: ಸುಳ್ಳು ದೂರು ಕೊಟ್ಟರೆ ನಾಗರಿಕರಿಗೂ ತಪ್ಪಿದ್ದಲ್ಲ ಬರೆ

  • Public interest
  • BW Special
  • Life Style
  • Photo Gallery
  • Video
No Result
View All Result

Home News Wire

ಶ್ರೀ ಸಿದ್ದೇಶ್ವರ ಸ್ವಾಮೀಜಿ ನಡೆದಾಡಿದ ನಾಡಿನಲ್ಲಿ ಫೆ.4 ಮತ್ತು 5 ರಂದು 37ನೇ ಪತ್ರಕರ್ತರ ರಾಜ್ಯ ಸಮ್ಮೇಳನ

ಈ ಬಾರಿ ಸಮ್ಮೇಳನದಲ್ಲಿ 3 ಗೋಷ್ಠಿಗಳ ಆಯೋಜನೆ | ಈ ಸಮ್ಮೇಳನದಲ್ಲಿ ಐದು ಸಾವಿರಕ್ಕೂ ಅಧಿಕ ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆ

by Bengaluru Wire Desk
January 31, 2023
in News Wire
Reading Time: 1 min read
0
37ನೇ ರಾಜ್ಯ ಪತ್ರಕರ್ತರ ಸಮ್ಮೇಳನದ ಲಾಂಛನ

37ನೇ ರಾಜ್ಯ ಪತ್ರಕರ್ತರ ಸಮ್ಮೇಳನದ ಲಾಂಛನ

ಬೆಂಗಳೂರು, ಜ.31 www.bengaluruwire.com : ಬಸವನಾಡು, ಗೊಮ್ಮಟ ಬೀಡು, ಶ್ರೀ ಸಿದ್ದೇಶ್ವರ ಸ್ವಾಮೀಜಿ ಕಾರ್ಯಕ್ಷೇತ್ರ ವಿಜಯಪುರದಲ್ಲಿ ಫೆಬ್ರವರಿ 4 ಮತ್ತು 5 ರಂದು ಶನಿವಾರ ಮತ್ತು ಭಾನುವಾರ ಎರಡು ದಿನ 37ನೇ ರಾಜ್ಯ ಪತ್ರಕರ್ತರ ಸಮ್ಮೇಳನ ನಡೆಯಲಿದೆ.

ಈ ಕುರಿತಂತೆ ಬೆಂಗಳೂರು ವೈರ್ ಜೊತೆ ಮಾತನಾಡುತ್ತಾ, ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ (ಕೆಯುಡಬ್ಲ್ಯೂಜೆ) ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಸಮ್ಮೇಳನ ಐತಿಹಾಸಿಕ ವಿಜಯಪುರ ನಗರದಲ್ಲಿ ಪ್ರಪ್ರಥಮ ಬಾರಿಗೆ ಪತ್ರಕರ್ತರ ರಾಜ್ಯ ಸಮ್ಮೇಳನ ಆಯೋಜಿಸಲಾಗಿದೆ. ಗಡಿಭಾಗದಲ್ಲಿ ನಡೆಯುವ ಈ ಸಮ್ಮೇಳನ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ ಎಂದರು.

ರಾಜ್ಯದ ಬೇರೆ- ಬೇರೆ ಜಿಲ್ಲೆಗಳಿಂದ ಆಗಮಿಸುವ ಪ್ರತಿನಿಧಿಗಳಿಗೆ ಊಟ, ವಸತಿ ವ್ಯವಸ್ಥೆ ಅಚ್ಚುಕಟ್ಟಾಗಿ ಮಾಡಿ ಒಳ್ಳೆಯ ಆತಿಥ್ಯ ನೀಡಿದರೆ ಬೇರೆ ಜಿಲ್ಲೆಗಳಿಂದ ಬಂದ ಪ್ರತಿನಿಧಿಗಳು ಈ ಜಿಲ್ಲೆಯ ಬಗ್ಗೆ  ಮನದಲ್ಲಿ ಸವಿನೆನಪು ಇಟ್ಟುಕೊಂಡು ತಮ್ಮೂರಿಗೆ ಹೋಗುವರು. ಈ ಸಮ್ಮೇಳನ ನಮ್ಮ ಮನೆಯ ಕಾರ್ಯಕ್ರಮವೆಂದು ತಿಳಿದು ಎಲ್ಲರೂ ಉತ್ಸಾಹದಿಂದ ಒಗ್ಗೂಡಿ ಕೆಲಸ ಮಾಡುವ ಮೂಲಕ ಸಮ್ಮೇಳನದ ಯಶಸ್ಸಿಗೆ ಕಾರಣರಾಗಬೇಕು ಎಂದು ಅವರು ಹೇಳಿದರು.

ಜ್ಞಾನಯೋಗಾಶ್ರಮದ ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರು ಲಿಂಗೈಕ್ಯರಾದ ಹಿನ್ನೆಲೆಯಲ್ಲಿ ಜ.9 ಮತ್ತು 10‌ರಂದು ನಡೆಯಬೇಕಿದ್ದ ಸಮ್ಮೇಳನವನ್ನು  ಮುಂದೂಡಲಾಗಿತ್ತು. ಮುಖ್ಯಮಂತ್ರಿ ಸಮ್ಮತಿಯೊಂದಿಗೆ ಇದೇ ಫೆ.4 ಮತ್ತು 5 ರಂದು ಸಮ್ಮೇಳನ ದಿನಾಂಕ ನಿಗದಿ ಮಾಡಲಾಗಿದೆ. ಶ್ರೀ ಸಿದ್ಧೇಶ್ವರ ಶ್ರೀಗಳು ಈ ಸಮ್ಮೇಳನದ ಸಾನಿಧ್ಯ ವಹಿಸಲು ಸಂತೋಷದಿಂದ ಒಪ್ಪಿಕೊಂಡು ಸಮ್ಮೇಳನ ಗಡಿಭಾಗದಲ್ಲಿ ಯಶಸ್ವಿಯಾಗಿ ನಡೆಯಲಿ ಎಂದು ಶುಭ ಹಾರೈಸಿದ್ದರು. ಅವರ ಸಾನಿಧ್ಯದಲ್ಲಿ ಈ ಸಮ್ಮೇಳನ ನಡೆಯಬೇಕಾಗಿತ್ತು. ಆದರೆ ಅವರು ನಮ್ಮನ್ನಗಲಿರುವುದು ನಮಗೆಲ್ಲ ತುಂಬಾ ದುಃಖವನ್ನುಂಟು ಮಾಡಿದೆ ಎಂದು ತಿಳಿಸಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಲಾಂಛನದ ಸಾಂದರ್ಭಿಕ ಚಿತ್ರ

ಫೆ. 4 ರಂದು ಬೆಳಿಗ್ಗೆ 10.30ಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಸಮ್ಮೇಳನ ಉದ್ಘಾಟಿಸಲಿದ್ದಾರೆ. ಇದರಲ್ಲಿ ಸಚಿವರು, ಸ್ಥಳೀಯ ಶಾಸಕರು ಸಮ್ಮೇಳನದಲ್ಲಿ ಭಾಗವಹಿಸುವರು. ಫೆ.5 ಪ್ರತಿನಿಧಿಗಳ ಸಮಾವೇಶ ನಡೆಯುವುದು. ನಂತರ ಸಮಾರೋಪ ಸಮಾರಂಭ ಹಾಗೂ ಕೆಯುಡಬ್ಲ್ಯೂಜೆ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ ಜರುಗುವುದು. ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ಅವರು ಮುಖ್ಯ ಅತಿಥಿಯಾಗಿ ಆಗಮಿಸುವರು. ಉದ್ಘಾಟನೆ ಹಾಗೂ ಸಮಾರೋಪ ಸಮಾರಂಭದಲ್ಲಿ ಹಲವಾರು ಸಚಿವರು, ಸಂಸದರು, ಶಾಸಕರು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ.

ಈ ಬಾರಿ ಸಮ್ಮೇಳನದಲ್ಲಿ 3 ಗೋಷ್ಠಿಗಳನ್ನು ಆಯೋಜಿಸಲಾಗಿದೆ. ನವಮಾಧ್ಯಮ ಮತ್ತು ಪತ್ರಕರ್ತರು ಎಂಬ ವಿಷಯದ ಬಗ್ಗೆ ಒಂದು ಗೋಷ್ಠಿ ನಡೆದರೆ, ಸುದ್ದಿಮನೆ ಮತ್ತು ಮಹಿಳೆಯರು ಎಂಬ ವಿಷಯದ ಬಗ್ಗೆ ಮತ್ತೊಂದು ಗೋಷ್ಠಿ ನಡೆಯಲಿದೆ. ಗಡಿ ಭಾಗದ ಮಾಧ್ಯಮಗಳ ಪಾತ್ರ ಕುರಿತು ಈತನಕ ಚರ್ಚೆಗಳು ನಡೆದಿಲ್ಲ. ಈ ಹಿನ್ನೆಲೆಯಲ್ಲಿ ಗಡಿಭಾಗದಲ್ಲಿ ಮಾಧ್ಯಮ ಎಂಬ ವಿಷಯ ಕುರಿತು ವಿಶೇಷ ಗೋಷ್ಠಿಗಳನ್ನು ಏರ್ಪಡಿಸಲಾಗಿದೆ. ಸುದ್ದಿ ಮನೆಯಲ್ಲಿ ಪತ್ರಿಕಾ ವಿತರಕರು ಮಹತ್ವದ ಕೊಂಡಿಯಾಗಿದ್ದಾರೆ. ಆ ಕಾರಣಕ್ಕಾಗಿ ಪತ್ರಿಕಾ ವಿತರಕರ ಸಮಸ್ಯೆಗಳ ಕುರಿತು ಸಂವಾದ  ನಡೆಯಲಿದೆ ಎಂದು ಶಿವಾನಂದ ತಗಡೂರು ಅವರು ವಿವರಿಸಿದರು.

ಇದೇ ಸಮ್ಮೇಳನದಲ್ಲಿ ವಿಜಯಪುರ ಜಿಲ್ಲೆಯ ಹತ್ತು ಜನ ಹಿರಿಯ ಪತ್ರಕರ್ತರಿಗೆ ಗೌರವ ಸನ್ಮಾನವಿರುತ್ತದೆ. ಎರಡು ದಿನಗಳ ಈ ಸಮ್ಮೇಳನದಲ್ಲಿ ಐದು ಸಾವಿರಕ್ಕೂ ಅಧಿಕ ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆ ಇದೆ. ಈಗಾಗಲೇ ಎರಡೂವರೆ ಸಾವಿರ ಪತ್ರಕರ್ತರು ಪ್ರತಿನಿಧಿಗಳ ನೊಂದಾಯಿಸಿಕೊಂಡಿದ್ದಾರೆ ಎಂದರು.

ಜಿಲ್ಲಾ ಸಂಘಗಳಿಗೆ ಪ್ರಶಸ್ತಿ:

ಕಾರ್ಯನಿರತ ಪತ್ರಕರ್ತರ ಸಂಘಗಳನ್ನು ಸಂಘಟನಾತ್ಮಕವಾಗಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ಅತ್ಯುತ್ತಮ ಜಿಲ್ಲಾ ಸಂಘ  ಪ್ರಶಸ್ತಿಯನ್ನು ಸ್ಥಾಪಿಸಿದ್ದು, ಇದರ ಮೊದಲ ಪ್ರಶಸ್ತಿಯು  ಸಮ್ಮೇಳನದಲ್ಲಿ ಸಾಂಘಿಕ ಚಟುವಟಿಕೆ ಮೂಲಕ ಉತ್ತಮ ಸಾಧನೆ ಮಾಡಿರುವ ಮೈಸೂರು ಜಿಲ್ಲಾ ಪತ್ರಕರ್ತರ ಸಂಘ, ಶಿವಮೊಗ್ಗ ಜಿಲ್ಲಾ ಸಂಘ ಹಾಗೂ ಯಾದಗಿರಿ ಜಿಲ್ಲಾ ಸಂಘಕ್ಕೆ ಪ್ರಶಸ್ತಿಯನ್ನು ನೀಡಲಾಗುವುದು. ಜಿಲ್ಲೆಯ ಎಲ್ಲ ತಾಲೂಕುಗಳ ಶಾಖೆಗಳೂ ಸಹ ಈ ಅವಧಿಯಲ್ಲಿ ನಡೆಸಿರುವ ರಚನಾತ್ಮಕ ಕಾರ್ಯಕ್ರಮಗಳು, ಜಿಲ್ಲಾ ಶಾಖೆಯೊಂದಿಗಿನ ನಿರಂತರ ಸಂಪರ್ಕ, ತಾಲೂಕು ಮಟ್ಟದಲ್ಲಿ ನಡೆಸಲಾದ ಕ್ರೀಡಾಕೂಟಗಳು, ಕಾರ್ಯಾಗಾರಗಳು, ಸಂವಾದಗಳು, ಪತ್ರಕರ್ತರ ಹಿತ ರಕ್ಷಣೆಯ ಕಾರ್ಯಚಟುವಟಿಕೆಗಳನ್ನು ಸಹ ಈ ಪ್ರಶಸ್ತಿಗಾಗಿ ಪರಿಗಣಿಸಲಾಗಿದೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಅಧ್ಯಕ್ಷರಾದ ಶಿವಾನಂದ ತಗಡೂರು, ಪ್ರಧಾನ ಕಾರ್ಯದರ್ಶಿ ಜಿ.ಸಿ. ಲೋಕೇಶ್ ತಿಳಿಸಿದ್ದಾರೆ.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪ್ರತಿಷ್ಟಿತ ಪ್ರಶಸ್ತಿಗೆ ಕಾರಣರಾದ ಹಿಂದಿನ ಸಾಲಿನ ಅಧ್ಯಕ್ಷರಾದ ಎನ್. ರವಿಕುಮಾರ್, ಪ್ರಧಾನ ಕಾರ್ಯದರ್ಶಿ ವೈದ್ಯ ಹಾಗೂ ಅಂದಿನ ಕಾರ್ಯಕಾರೀ ಮಂಡಳಿ, ಪ್ರಸ್ತುತ  ಪ್ರಧಾನ ಕಾರ್ಯದರ್ಶಿ ವಿ.ಟಿ. ಹಾಗೂ ಕಾರ್ಯಕಾರೀ ಮಂಡಳಿ, ಎಲ್ಲ ತಾಲೂಕುಗಳ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಕಾರ್ಯಕಾರಿ ಮಂಡಳಿಯ ಸದಸ್ಯರುಗಳಿಗೆ ಶಿವಮೊಗ್ಗದ ಜಿಲ್ಲಾ ಸಂಘದ ಅಧ್ಯಕ್ಷರಾದ ಕೆ.ವಿ.ಶಿವಕುಮಾರ್ ಅಭಿನಂದನೆ ಸಲ್ಲಿಸಿದ್ದಾರೆ.

“ಬೆಂಗಳೂರು ವೈರ್” ಡಿಜಿಟಲ್ ವೆಬ್ ನ್ಯೂಸ್ ಪೋರ್ಟೆಲ್ಲಿನ ಸೋಶಿಯಲ್ ಮೀಡಿಯಾ ಪೇಜ್ ಹಾಗೂ Google News ಗಳಿಗೆ ಉಚಿತವಾಗಿ Subscribe ಆಗಲು Facebook, Telegram, Twitter, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Sharing is Caring

  • Share on WhatsApp (Opens in new window) WhatsApp
  • Print (Opens in new window) Print
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Share on LinkedIn (Opens in new window) LinkedIn

Like this:

Like Loading…
WhatsApp Join our WhatsApp Channel
Previous Post

BW SPECIAL | ಪುಣ್ಯಕೋಟಿ ದತ್ತು ಯೋಜನೆಗೆ ರಾಜ್ಯದಲ್ಲಿ ನೀರಸ ಪ್ರತಿಕ್ರಿಯೆ : ಅನಧಿಕೃತ ಜಾನುವಾರು ಸಾಗಣೆ ನಿಯಂತ್ರಣಕ್ಕೆ ಮತ್ತಷ್ಟು ಬಿಗಿಕ್ರಮ!!

Next Post

#AirShow2023 | ಏರ್ ಶೋ 2023ರ ಹಿನ್ನಲೆ : ಬೃಹತ್ ಕಟ್ಟಡಗಳ ಕ್ರೇನ್ ಎತ್ತರ ತಗ್ಗಿಸಲು ಬಿಬಿಎಂಪಿ ಖಡಕ್ ಸೂಚನೆ

Next Post
ಬಹುಮಹಡಿ ಕಟ್ಟಡದ ಸಾಂದರ್ಭಿಕ ಚಿತ್ರ

#AirShow2023 | ಏರ್ ಶೋ 2023ರ ಹಿನ್ನಲೆ : ಬೃಹತ್ ಕಟ್ಟಡಗಳ ಕ್ರೇನ್ ಎತ್ತರ ತಗ್ಗಿಸಲು ಬಿಬಿಎಂಪಿ ಖಡಕ್ ಸೂಚನೆ

ಕೇಂದ್ರ ಬಜೆಟ್ 2023-24 : ಮಧ್ಯಮ ವರ್ಗಕ್ಕೆ ತೆರಿಗೆ ರಿಲೀಫ್ ; ವೆಚ್ಚಕ್ಕೆ ಆದ್ಯತೆ - ವಿತ್ತೀಯ ಕೊರತೆ ಕಡಿತಕ್ಕೆ ಮನ್ನಣೆ

Please login to join discussion

Like Us on Facebook

Follow Us on Twitter

Recent News

ಚಿಕ್ಕಬಳ್ಳಾಪುರದಲ್ಲಿ ಬೆಳ್ಳಂಬೆಳಗ್ಗೆ ಲಘು ಭೂಕಂಪನ: 2.9 ತೀವ್ರತೆ ದಾಖಲು

October 24, 2026

‘ಗೋಲ್ಡನ್ ಚಾರಿಯಟ್’ 2026–27ರ ಐಷಾರಾಮಿ ಯಾತ್ರೆಗೆ ಸಿಎಂ ಡಿ.ಕೆ. ಶಿವಕುಮಾರ್ ಹಸಿರು ನಿಶಾನೆ

October 24, 2026
Bengaluru Wire, Kannada News, latest News in Kannada

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

ಚಿಕ್ಕಬಳ್ಳಾಪುರದಲ್ಲಿ ಬೆಳ್ಳಂಬೆಳಗ್ಗೆ ಲಘು ಭೂಕಂಪನ: 2.9 ತೀವ್ರತೆ ದಾಖಲು

October 24, 2026

‘ಗೋಲ್ಡನ್ ಚಾರಿಯಟ್’ 2026–27ರ ಐಷಾರಾಮಿ ಯಾತ್ರೆಗೆ ಸಿಎಂ ಡಿ.ಕೆ. ಶಿವಕುಮಾರ್ ಹಸಿರು ನಿಶಾನೆ

October 24, 2026

ಸಂಸತ್ ಆವರಣದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಮತ್ತು 202ನೇ ವಿಜಯೋತ್ಸವದ ಸಂಭ್ರಮ

October 23, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group
%d