Monday, June 22, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ಬೆಂಗಳೂರು: ಯಂಟಗಾನಹಳ್ಳಿ ಕೆರೆಗೆ ವೈದ್ಯಕೀಯ ತ್ಯಾಜ್ಯ ಸುರಿದ ಖಾಸಗಿ ಕ್ಲಿನಿಕ್ ವೈದ್ಯನ ವಿರುದ್ಧ ಎಫ್.ಐ.ಆರ್. ದಾಖಲು

    Science News | ​ಮುಂಗಾರಿನಾಟ: ಮಹಾರಾಷ್ಟ್ರದಲ್ಲಿ ಒಣಹವೆ, ಆದರೆ ರಾಜಸ್ಥಾನದ ಮರುಭೂಮಿಯಲ್ಲಿ ಭಾರಿ ಮಳೆ

    ಸೈಬರ್ ಕ್ರೈಮ್ ಕುರಿತ ಸಾಂದರ್ಭಿಕ ಚಿತ್ರ

    ಸೈಬರ್ ವಂಚಕರಿಗೆ ಸಿಂಹಸ್ವಪ್ನವಾದ ಕರ್ನಾಟಕ ಪೊಲೀಸ್: ಕೋಟ್ಯಂತರ ರೂಪಾಯಿ ಉಳಿಸಲು ಬ್ಯಾಂಕ್ ಖಾತೆಗಳು ಬ್ಲಾಕ್

    ಟಾಟಾ ಪವರ್ ಅರ್ಜಿಗಳು ಸಂಪೂರ್ಣ ಆಂಗ್ಲಮಯ: ಕನ್ನಡಿಗರ ಭಾಷಾ ಹಕ್ಕಿಗೆ ಧಕ್ಕೆ,  ಡಾ. ಪುರುಷೋತ್ತಮ ಬಿಳಿಮಲೆ ಕೆಇಆರ್‌ಸಿಗೆ ಪತ್ರ

    Vidhana Soudha

    IAS Transfer | ರಾಜ್ಯದಲ್ಲಿ 13 ಐಎಎಸ್ ಅಧಿಕಾರಿಗಳ ವರ್ಗಾವಣೆ

    Viral Video | 25 ಸಾವಿರದ ಆಫೀಸ್ ಕೆಲಸಕ್ಕೆ ಗುಡ್‌ಬೈ ಹೇಳಿ ಕ್ಯಾಬ್ ಡ್ರೈವರ್ ಆದ ಯುವಕ; ಈಗ ಈತನ ತಿಂಗಳ ಗಳಿಕೆ 1 ಲಕ್ಷ ರೂ.!

    ಎನ್‌ಎಸ್‌ಇಯಿಂದ ₹30,000 ಕೋಟಿ ಮೊತ್ತದ ಐಪಿಒ ಸಲ್ಲಿಕೆ: ಇದು ಭಾರತದ ಅತಿದೊಡ್ಡ ಸಾರ್ವಜನಿಕ ಷೇರು ವಿತರಣೆ

    ಕರ್ನಾಟಕದಲ್ಲಿ ತೀವ್ರ ಜಲಕ್ಷಾಮ: ಶೇ. 21ರಷ್ಟು ಮಳೆ ಕೊರತೆ, 14 ಪ್ರಮುಖ ಜಲಾಶಯಗಳಲ್ಲಿ ಕೇವಲ 23% ನೀರು ಸಂಗ್ರಹ

    ​ರೈಲ್ವೆ ಪದೋನ್ನತಿ ಪರೀಕ್ಷೆಯಲ್ಲಿ ಕನ್ನಡಿಗರಿಗೆ ವಂಚನೆ: ಜೂನ್ 25ರಂದು ತೀವ್ರ ಹೋರಾಟದ ಎಚ್ಚರಿಕೆ ನೀಡಿದ ಕರವೇ

  • Bengaluru Focus

    ಬೆಂಗಳೂರು: ಯಂಟಗಾನಹಳ್ಳಿ ಕೆರೆಗೆ ವೈದ್ಯಕೀಯ ತ್ಯಾಜ್ಯ ಸುರಿದ ಖಾಸಗಿ ಕ್ಲಿನಿಕ್ ವೈದ್ಯನ ವಿರುದ್ಧ ಎಫ್.ಐ.ಆರ್. ದಾಖಲು

    GBA Head Office Image

    GBA News | ಬೆಂಗಳೂರಿನಲ್ಲಿ ಇ-ಖಾತಾ ಸೇವೆ ಮತ್ತಷ್ಟು ಸುಲಭ: 6 ವಾರಗಳಲ್ಲಿ 6,169 ಅರ್ಜಿಗಳ ಯಶಸ್ವಿ ವಿಲೇವಾರಿ

    ಬಿಡದಿ ಟೌನ್‌ಶಿಪ್ ವಿರೋಧಿ ರೈತರ ಹೋರಾಟ 450 ದಿನಕ್ಕೆ: ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ  ನಾಳೆ ಬೃಹತ್ ಪಾದಯಾತ್ರೆ 

    Defence News | ಬೆಂಗಳೂರು: ಎಎಸ್‌ಸಿ ಸೆಂಟರ್‌ನಲ್ಲಿ 8ನೇ ಬ್ಯಾಚ್‌ನ ಅಗ್ನಿವೀರರ ನಿರ್ಗಮನ ಪಥಸಂಚಲನ ಸಂಪನ್ನ

    ಸೈಬರ್ ಕ್ರೈಮ್ ಕುರಿತ ಸಾಂದರ್ಭಿಕ ಚಿತ್ರ

    ಸೈಬರ್ ವಂಚಕರಿಗೆ ಸಿಂಹಸ್ವಪ್ನವಾದ ಕರ್ನಾಟಕ ಪೊಲೀಸ್: ಕೋಟ್ಯಂತರ ರೂಪಾಯಿ ಉಳಿಸಲು ಬ್ಯಾಂಕ್ ಖಾತೆಗಳು ಬ್ಲಾಕ್

    BMTC News | ಕಿಲ್ಲರ್ ಬಿಎಂಟಿಸಿಗೆ ಮತ್ತೊಂದು ಬಲಿ: ಮಂಗನಹಳ್ಳಿ ಕ್ರಾಸ್ ಬಳಿ ಎಲೆಕ್ಟ್ರಿಕ್ ಬಸ್ ಹರಿದು ಪಾದಚಾರಿ ಸಾವು: ರಸ್ತೆ ಉಬ್ಬು ಅಳವಡಿಕೆಗೆ ಆಗ್ರಹ

    BWSSB News | ವರ್ತೂರು ಎಸ್‌ಟಿಪಿ ದುರ್ಘಟನೆ: 40 ಅಡಿ ಆಳದ ಟ್ಯಾಂಕ್‌ಗೆ ಬಿದ್ದು ಇಬ್ಬರು ಕಾರ್ಮಿಕರು ಸಾವು, ಕಾರ್ಯಾಚರಣೆಗೆ ಎನ್‌ಡಿಆರ್‌ಎಫ್ ಸಾಥ್

    Vidhana Soudha

    IAS Transfer | ರಾಜ್ಯದಲ್ಲಿ 13 ಐಎಎಸ್ ಅಧಿಕಾರಿಗಳ ವರ್ಗಾವಣೆ

    GBA News | ಗ್ರೇಟರ್ ಬೆಂಗಳೂರು: ಕಸದ ಸಮಸ್ಯೆ ನಿವಾರಣೆಗೆ ಕಟ್ಟುನಿಟ್ಟಿನ ಕ್ರಮ, ವಾರ್ಡ್ ರಸ್ತೆಗಳ ಅಭಿವೃದ್ಧಿಗೆ ₹2000 ಕೋಟಿ ಅನುದಾನ

  • Public interest
  • BW Special
  • Life Style
  • Photo Gallery
  • Video
No Result
View All Result

Home Bengaluru Focus

#Ejipura Flyover | ಅರ್ಧಕ್ಕೆ ನಿಂತಿದ್ದ ಈಜಿಪುರ ಫ್ಲೈ ಓವರ್ ಮುಂದಿನ ವರ್ಷಕ್ಕೆ ರೆಡಿ….!

2017ರ ಮೇ 4ರಂದು ಕಾಮಗಾರಿ ಆರಂಭವಾಗಿ 2019ರ ನವೆಂಬರ್ 4ರ ವೇಳೆಗೆ ಕಾಮಗಾರಿ ಪೂರ್ಣವಾಗಬೇಕಿತ್ತು. ಆದರೆ ಈ ಕಾಮಗಾರಿಯು 5 ವರ್ಷವಾದರೂ ಪೂರ್ಣವಾಗಿಲ್ಲ

by Bengaluru Wire Desk
January 3, 2023
in Bengaluru Focus, Public interest
Reading Time: 1 min read
1
ಕೋರಮಂಗಲ ಈಜಿಪುರ ಮೇಲ್ಸೇತುವೆ ಕಾಮಗಾರಿ ಸ್ಧಗಿತಗೊಂಡಿರುವ ಸಾಂದರ್ಭಿಕ ಚಿತ್ರ

ಕೋರಮಂಗಲ ಈಜಿಪುರ ಮೇಲ್ಸೇತುವೆ ಕಾಮಗಾರಿ ಸ್ಧಗಿತಗೊಂಡಿರುವ ಸಾಂದರ್ಭಿಕ ಚಿತ್ರ

ಬೆಂಗಳೂರು, ಜ.03 www.bengaluruwire.com : ಕೋರಮಂಗಲ 100 ಅಡಿ ಮುಖ್ಯರಸ್ತೆಯಲ್ಲಿ ಅರ್ಧಕ್ಕೆ ನಿಂತಿದ್ದ 2.4 ಕಿ.ಮೀ ಉದ್ದದ ಈಜಿಪುರ ಮೇಲ್ಸೇತುವೆ (Ejipur Flyover) ಕಾಮಗಾರಿ ಮುಂದಿನ ವರ್ಷದ ವೇಳೆಗೆ ಸಂಪೂರ್ಣವಾಗಿ ಮುಗಿಯಲಿದೆ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಅಧಿಕಾರಿಗಳು ಕೋರಮಂಗಲ ನಿವಾಸಿಗಳಿಗೆ ಭರವಸೆ ನೀಡಿದ್ದಾರೆ.

ಮಂಗಳವಾರ ಕೋರಮಂಗಲದ ವಾರ್ಡ್ ಕಚೇರಿಯಲ್ಲಿ ಸ್ಥಳೀಯ ವಿವಿಧ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು, ನಿವಾಸಿಗಳೊಂದಿಗೆ ಬಿಬಿಎಂಪಿ ದಕ್ಷಿಣ ವಲಯದ ಜಂಟಿ ಆಯುಕ್ತ ಜಗದೀಶ್ ನಾಯಕ್ ಸಭೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ‘ಕೋರಮಂಗಲ 100 ಅಡಿ ಮುಖ್ಯರಸ್ತೆಯಲ್ಲಿ ಈಜಿಪುರ ಮುಖ್ಯರಸ್ತೆ –ಒಳವರ್ತುಲ ರಸ್ತೆ ಜಂಕ್ಷನ್ ನಿಂದ ಸೋನಿ ವರ್ಡ್ ಜಂಕ್ಷನ್ ಮಾರ್ಗವಾಗಿ ಕೇಂದ್ರಯ ಸದನ ಜಂಕ್ಷನ್ ವರೆಗೆ ಮೇಲ್ಸೇತುವೆ ನಿರ್ಮಾಣವಾಗುತ್ತಿರುವ ಬಾಕಿ ಕಾಮಗಾರಿಗೆ ನಿಯಮಾವಳಿಯಂತೆ ಟೆಂಡರ್ ಕರೆದು ಮುಂದಿನ ವರ್ಷದ ವೇಳೆಗೆ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಕೋರಮಂಗಲ ನಿವಾಸಿಗಳಿಗೆ ತಿಳಿಸಿದರು.

ಕೋರಮಂಗಲ ಬಿಬಿಎಂಪಿ ಕಚೇರಿಯಲ್ಲಿ ಈಜಿಪುರ ಮೇಲ್ಸೇತುವೆ ಕಾಮಗಾರಿ ಕುರಿತಂತೆ ವಿವಿಧ ನಾಗರೀಕ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳೊಂದಿಗೆ ಬಿಬಿಎಂಪಿ ಅಧಿಕಾರಿಗಳು ಮಂಗಳವಾರ ನಡೆಸಿದ ಸಭೆಯ ಚಿತ್ರ

ಇದೇ ವೇಳೆ ಕೋರಮಂಗಲ ಎಸ್.ಟಿ.ಬೆಡ್ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಾಜೇಂದ್ರ ಬಾಬು, ಹಿಂದೆ ಈಜಿಪುರ ಮೇಲ್ಸೇತುವೆ ಕಾಮಗಾರಿ ಕೈಗೊಂಡ ಸಿಂಪ್ಲೆಕ್ಸ್ ಸಂಸ್ಥೆಯು ಸೂಕ್ತ ರೀತಿ ಕಾಮಗಾರಿ ನಡೆಸದೆ ಅರ್ಧಕ್ಕೆ ನಿಲ್ಲಿಸಿದ್ದರಿಂದ ಈ ಭಾಗದಲ್ಲಾಗುತ್ತಿರುವ ಸಂಚಾರ ದಟ್ಟಣೆ ಹಾಗೂ ಅದರಿಂದ ಇಲ್ಲಿನ ನಾಗರೀಕರಿಗಾಗುತ್ತಿರುವ ಸಮಸ್ಯೆಗಳನ್ನು ಎಳೆಎಳೆಯಾಗಿ ಅಧಿಕಾರಿಗಳ ಎದುರು ಬಿಚ್ಚಿಟ್ಟರು.

ಇದಕ್ಕೆ ಪ್ರತಿಕ್ರಿಯಿಸಿದ ಬಿಬಿಎಂಪಿ ಕೇಂದ್ರ ಯೋಜನಾ ವಿಭಾಗದ ಮುಖ್ಯ ಎಂಜಿನಿಯರ್ ವಿನಾಯಕ್ ಸೂಗೂರ್, ಈಜಿಪುರ ಮೇಲ್ಸೇತುವೆ ಕಾಮಗಾರಿ ಈತನಕ ಶೇ.40ರಷ್ಟು ಪೂರ್ಣವಾಗಿದೆ. ಉಳಿದ ಶೇ.60ರಷ್ಟು ಕಾಮಗಾರಿಗೆ ಬಾಕಿಯಿದ್ದು, 144 ಕೋಟಿ ರೂ. ಯೋಜನಾ ಮೊತ್ತದಲ್ಲಿ ಟೆಂಡರ್ ಅನ್ನು ಮುಂದಿನ ವಾರ ಕರೆಯಲಾಗುವುದು. ಈ ಹಿಂದೆ ಕರೆದ ಟೆಂಡರ್ ನಲ್ಲಿ ಎರಡು ಕಂಪನಿಗಳು ಪಾಲ್ಗೊಂಡಿದ್ದವು. ಆದರೆ ತಾಂತ್ರಿಕ ಮೌಲ್ಯಮಾಪನದ ವೇಳೆ ಅನರ್ಹರಾಗಿದ್ದವು. ಹಾಗಾಗಿ ಈ ಬಾರಿ ಸೂಕ್ತ ಕಂಪನಿ ಟೆಂಡರ್ ನಲ್ಲಿ ಭಾಗವಹಿಸುವ ವಿಶ್ವಾಸವಿದೆ. ಮುಂದಿನ ತಿಂಗಳ ಫೆಬ್ರವರಿ 15ರ ಒಳಗಾಗಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸುತ್ತೇವೆ. ಬಳಿಕ 12 ರಿಂದ 15 ತಿಂಗಳಲ್ಲಿ ಮೇಲ್ಸೇತುವೆ ನಿರ್ಮಾಣ ಯೋಜನೆ ಪೂರ್ಣಗೊಳಿಸಲಾಗುತ್ತದೆ ಎಂದು ಹೇಳಿದರು.

ಮೇಲ್ಸೇತುವೆಗೆ ಭೂಸ್ವಾಧೀನ ಬಾಕಿ :

ಸಭೆಯ ಬಳಿಕ ಬೆಂಗಳೂರು ವೈರ್ ಜೊತೆ ಮಾತನಾಡಿದ ಕೋರಮಂಗಲ ಎಸ್.ಟಿ.ಬೆಡ್ ಕ್ಷೇಮಾಭಿವೃದ್ಧಿ ಸಂಘದ ರಾಜೇಂದ್ರಬಾಬು, ಈಜಿಪುರ ಮೇಲ್ಸೇತುವೆ ಯೋಜನೆಯಲ್ಲಿ 4 ಜಾಗಗಳಲ್ಲಿ ಭೂ ಸ್ವಾಧೀನ ಬಾಕಿಯಿದೆ. ಅದಕ್ಕಾಗಿ ಬಿಬಿಎಂಪಿಯು 35 ಕೋಟಿ ರೂ. ಹಣ ಮೀಸಲಿಟ್ಟಿದೆ. ಈಗಾಗಲೇ ಪೂರ್ವಿಕ ಮೊಬೈಲ್ ಕಂಪನಿ ಹತ್ತಿರ, ಸೆಂಟ್ ಜಾನ್ ಆಸ್ಪತ್ರೆ ಆಡಿಟೋರಿಯಮ್ ಹತ್ತಿರ, ಈಜಿಪುರ ಸಿಗ್ನಲ್ 4 ಸಣ್ಣ ಆಸ್ತಿಗಳನ್ನು ಬಿಬಿಎಂಪಿ ಭೂಸ್ವಾಧೀನಪಡಿಸಿಕೊಳ್ಳಲು ಟಿಡಿಆರ್ ಅಥವಾ ಹಣ ಪಾವತಿ ಬಿಬಿಎಂಪಿ ಸಿದ್ಧವಿದೆ. ಇದಕ್ಕಾಗಿ ಭೂಸ್ವಾಧೀನ ಅಧಿಕಾರಿಯನ್ನು ನೇಮಕ ಮಾಡಿದ್ದೇವೆ. ಒಟ್ಟಾರೆ ಈಜಿಪುರ ಫ್ಲೈ ಓವರ್ ಸಿವಿಲ್ ಕಾಮಗಾರಿ, ಸಂಚಾರ ನಿರ್ವಹಣೆ, ಭೂಸ್ವಾಧೀನ ಪ್ರಕ್ರಿಯೆಗಳು ಎಲ್ಲವೂ ಪರ್ಯಾಯವಾಗಿ ನಡೆಯಲಿದೆ ಎಂದು ಸಭೆಯಲ್ಲಿ ಅಧಿಕಾರಿಗಳು ತಿಳಿಸಿದ್ದಾಗಿ ಅವರು ಹೇಳಿದರು.

ಅರ್ಧಕ್ಕೆ ನಿಂತಿರುವ ಕೋರಮಂಗಲ ಈಜಿಪುರ ಫ್ಲೈಓವರ್ ಕಾಮಗಾರಿ ಸ್ಥಳದಲ್ಲಿ ಸದಾ ವಾಹನ ದಟ್ಟಣೆಯಾಗುತ್ತಿರುವ ಸಾಂದರ್ಭಿಕ ಚಿತ್ರ

ಸದ್ಯ ದೊಮ್ಮಲೂರು ರಿಂಗ್ ರಸ್ತೆಯಲ್ಲಿ ಎಂಬೆಸಿ ಗಾಲ್ಫ್ ಲಿಂಕ್  ಸಾಫ್ಟ್ ವೇರ್ ಪಾರ್ಕ್ ನಲ್ಲಿ ಸುಮಾರು 25 ಸಾವಿರ ಕೆಲಸ ಮಾಡುತ್ತಾರೆ. ಅಲ್ಲಿಗೆ ದಿನನಿತ್ಯ ಕೆಲಸಕ್ಕಾಗಿ ಜನರು ವಾಹನದಲ್ಲಿ ಬಂದು ಹೋಗುವುದರಿಂದ ಇಂದಿರಾ ನಗರದಿಂದ ಕೋರಮಂಗಲ ಒಳವರ್ತುಲ ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಾಗಿದೆ. ಆದಷ್ಟು ಶೀಘ್ರವಾಗಿ ಯೋಜನೆ ಪೂರ್ಣಗೊಳಿಸಿದರೆ ಸ್ಥಳೀಯ ಹಾಗೂ ಸುತ್ತಮುತ್ತಲ ನಿವಾಸಿಗಳಿಗೆ ಅನುಕೂಲವಾಗಲಿದೆ ಎಂದು ಅವರು ತಿಳಿಸಿದ್ದಾರೆ.

ಈಜಿಪುರ ಫ್ಲೈಓವರ್ ವಿಳಂಬಗತಿಯ ಹಿನ್ನಲೆ :

ಈಜಿಪುರ ಜಂಕ್ಷನ್, ಸೋನಿ ವರ್ಡ್ ಜಂಕ್ಷನ್, ಕೇಂದ್ರೀಯ ಸದನ, ಕೋರಮಂಗಲ 8ನೇ ಮುಖ್ಯರಸ್ತೆ, ಕೋರಮಂಗಲ 60 ಅಡಿ ರಸ್ತೆಯ ವೃತ್ತ, 5ನೇ ಬ್ಲಾಕ್ 1-ಎ ಕ್ರಾಸ್ ಜಂಕ್ಷನ್ ಹಾಗೂ ಬಿಡಿಎ ಜಂಕ್ಷನ್ ಗಳಲ್ಲಿ ಸಿಗ್ನಲ್ ದಾಟಲು ಜನರು ಸಾಕಷ್ಟು ಹರಸಾಹಸ ಪಡುತ್ತಿದ್ದರು. ಹಾಗಾಗಿ ಈ ಭಾಗದಲ್ಲಿ 2.4 ಕಿ.ಮೀ ಉದ್ದದ ಮೇಲ್ಸೇತುವೆ ನಿರ್ಮಿಸಲು ಬಿಬಿಎಂಪಿಯು ಯೋಜನೆ ರೂಪಿಸಿತ್ತು. ಅದರಂತೆ ಈ ಕಾಮಗಾರಿಯ ಗುತ್ತಿಗೆಯನ್ನು ಸಿಂಪ್ಲೆಕ್ಸ್ ಇನ್ ಫ್ರಾಸ್ಟ್ರೆಕ್ಚರ್ ಕಂಪನಿಯು ಪಡೆದುಕೊಂಡಿತ್ತು. 2017ರ ಮೇ 4ರಂದು ಕಾಮಗಾರಿ ಆರಂಭವಾಗಿ 2019ರ ನವೆಂಬರ್ 4ರ ವೇಳೆಗೆ ಕಾಮಗಾರಿ ಪೂರ್ಣವಾಗಬೇಕಿತ್ತು. ಆದರೆ ಈ ಕಾಮಗಾರಿಯು 5 ವರ್ಷವಾದರೂ ಪೂರ್ಣವಾಗಿಲ್ಲ. ಕಾಮಗಾರಿ ಕಾರಣಾಂತರಗಳಿಂದ ಸ್ಥಗಿತಗೊಂಡ ಮೇಲೆ ಈ ಯೋಜನೆ ಕುರಿತಂತೆ ಹೈಕೋರ್ಟ್ ನಲ್ಲಿ ಪ್ರಕರಣ ವಿಚಾರಣೆ ನಡೆದು, ಪುನಃ ಹೊಸದಾಗಿ ಟೆಂಡರ್ ಕರೆಯಲು ಕೋರ್ಟ್ ಸಮ್ಮತಿ ಸೂಚಿಸಿದ ಬಳಿಕ ಇದೀಗ ಬಿಬಿಎಂಪಿಯು ಬಾಕಿ ಕಾಮಗಾರಿಗೆ ಹೊಸದಾಗಿ ಕಾಮಗಾರಿ ಕರೆಯಲು ಪ್ರಕ್ರಿಯೆ ನಡೆಸಿದೆ.

ಕೋರಮಂಗಲದಲ್ಲಿನ ಬಿಬಿಎಂಪಿ ಎಂಜಿನಿಯರಿಂಗ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ, ಪಾಲಿಕೆ ದಕ್ಷಿಣ ವಲಯದ ಮುಖ್ಯ ಎಂಜಿನಿಯರ್ ಮೋಹನ್ ಕೃಷ್ಣ,  ಕೋರಮಂಗಲ ಕ್ಷೇಮಾಭಿವೃದ್ಧಿ ಸಂಘದ ವಿವಿಧ ಬ್ಲಾಕ್ ಗಳ ಅಧ್ಯಕ್ಷರುಗಳಾದ ನಿತಿನ್, ಪಾರ್ವತಿ, ನೀರಜ್ ಶೆಟ್ಟಿ, ಜಾನ್ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.

WhatsApp Join our WhatsApp Channel
Previous Post

Online Gaming | ಆನ್ ಲೈನ್ ಗೇಮಿಂಗ್ ಗೆ ಕೇಂದ್ರ ಸರ್ಕಾರದ ಅಂಕುಶ….!

Next Post

BWSSB News | ಬೆಂಗಳೂರು ಜಲಮಂಡಳಿಯಲ್ಲಿ ಗ್ರಾಹಕರ ಬಿಲ್ ಹಣ ದುರ್ಬಳಕೆ : 13 ಮಂದಿ ಅಮಾನತು

Next Post
BWSSB Head Office

BWSSB News | ಬೆಂಗಳೂರು ಜಲಮಂಡಳಿಯಲ್ಲಿ ಗ್ರಾಹಕರ ಬಿಲ್ ಹಣ ದುರ್ಬಳಕೆ : 13 ಮಂದಿ ಅಮಾನತು

Online Use

Cyber Crime | ಬೆಂಗಳೂರಿನಲ್ಲಿ 2022ರ ಒಂದೇ ವರ್ಷ 8773 ಸೈಬರ್ ಕ್ರೈಮ್ ಪ್ರಕರಣ ದಾಖಲು…! ಹುಷಾರಾಗಿರಿ ನೀವು

Please login to join discussion

Like Us on Facebook

Follow Us on Twitter

Recent News

Technology News | ಆಪಲ್‌: 2026-27ರಲ್ಲಿ ಬರಲಿವೆ ಮಡಚುವ ಐಫೋನ್, AI ಗ್ಲಾಸ್ ಸೇರಿ ಹಲವು ಅಚ್ಚರಿಯ ಗ್ಯಾಜೆಟ್‌ಗಳು

June 22, 2026
ಅಯೋಧ್ಯೆಯ ಶ್ರೀ ರಾಮ ಮಂದಿರದಲ್ಲಿ ಅಲಂಕಾರಭೂಷಿತನಾಗಿ ವಿರಾಜಮಾನನಾಗಿರುವ ಬಾಲರಾಮ. (ಚಿತ್ರ ಕೃಪೆ : ಶ್ರೀ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್.)

ಸಿಎಂ ಯೋಗಿ ಆದಿತ್ಯನಾಥ್ ಕೈಸೇರಿದ ಅಯೋಧ್ಯೆ ಕಳ್ಳತನ ಹಾಗೂ ನಿಧಿ ದುರ್ಬಳಕೆ ಪ್ರಕರಣದ ಪ್ರಾಥಮಿಕ ತನಿಖಾ ವರದಿ

June 22, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

Technology News | ಆಪಲ್‌: 2026-27ರಲ್ಲಿ ಬರಲಿವೆ ಮಡಚುವ ಐಫೋನ್, AI ಗ್ಲಾಸ್ ಸೇರಿ ಹಲವು ಅಚ್ಚರಿಯ ಗ್ಯಾಜೆಟ್‌ಗಳು

June 22, 2026
ಅಯೋಧ್ಯೆಯ ಶ್ರೀ ರಾಮ ಮಂದಿರದಲ್ಲಿ ಅಲಂಕಾರಭೂಷಿತನಾಗಿ ವಿರಾಜಮಾನನಾಗಿರುವ ಬಾಲರಾಮ. (ಚಿತ್ರ ಕೃಪೆ : ಶ್ರೀ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್.)

ಸಿಎಂ ಯೋಗಿ ಆದಿತ್ಯನಾಥ್ ಕೈಸೇರಿದ ಅಯೋಧ್ಯೆ ಕಳ್ಳತನ ಹಾಗೂ ನಿಧಿ ದುರ್ಬಳಕೆ ಪ್ರಕರಣದ ಪ್ರಾಥಮಿಕ ತನಿಖಾ ವರದಿ

June 22, 2026

ಬೆಂಗಳೂರು: ಯಂಟಗಾನಹಳ್ಳಿ ಕೆರೆಗೆ ವೈದ್ಯಕೀಯ ತ್ಯಾಜ್ಯ ಸುರಿದ ಖಾಸಗಿ ಕ್ಲಿನಿಕ್ ವೈದ್ಯನ ವಿರುದ್ಧ ಎಫ್.ಐ.ಆರ್. ದಾಖಲು

June 21, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group