Thursday, September 24, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    IAS Transfer | ರಾಜ್ಯದಲ್ಲಿ ಹಲವು ಐಎಎಸ್ ಅಧಿಕಾರಿಗಳ ದಿಢೀರ್ ವರ್ಗಾವಣೆ: ಡಿಸಿಎಂ ಕಾರ್ಯದರ್ಶಿಯಾಗಿ ರಾಕೇಶ್ ಕುಮಾರ್ ನಿಯೋಜನೆ

    ಕಸ್ತೂರಿ ರಂಗನ್ ವರದಿ: ಗ್ರಾಮ ಮಟ್ಟದಲ್ಲಿ ಭೌತಿಕ ಸರ್ವೇಗೆ ಕೇಂದ್ರಕ್ಕೆ 1 ವರ್ಷ ಕಾಲಾವಕಾಶ ಕೋರಿಕೆ; ವಿಧಾನಸಭೆಯಲ್ಲಿ ಸರ್ವಾನುಮತದ ನಿರ್ಣಯ ಅಂಗೀಕಾರ

    ಬೆಂಗಳೂರಿನ 135 ಕೆರೆಗಳಿಗೆ ಮರುಜೀವ: 7 ಜಿಲ್ಲೆಗಳ 500 ಕೆರೆ ಅಭಿವೃದ್ಧಿಗೆ ₹150 ಕೋಟಿ

    ಎಲ್ ಪಿಜಿ ಸಿಲಿಂಡರ್ ಸಾಂದರ್ಭಿಕ ಚಿತ್ರ

    ​ಎಲ್‌ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ಅಕ್ಟೋಬರ್ 1ರಿಂದ ಹೊಸ ನಿಯಮ ಜಾರಿ

    Power News | ಭಾರತ್ ಎಲೆಕ್ಟ್ರಿಕ್ ಮೊಬಿಲಿಟಿ ಸೂಚ್ಯಂಕ: ದೇಶದಲ್ಲೇ ಕರ್ನಾಟಕಕ್ಕೆ 3ನೇ ಸ್ಥಾನ

    ಗ್ರಾಮಠಾಣಾ ಆಸ್ತಿಗಳಿಗೆ ನ.1ರಿಂದ ಮನೆ ಬಾಗಿಲಿಗೇ ಇ-ಸ್ವತ್ತು ಖಾತೆ: ಈಶ್ವರ ಖಂಡ್ರೆ ಸೂಚನೆ

    ಮಂಗಳೂರಿನಲ್ಲಿ ಮೊದಲ ಸಚಿವ ಸಂಪುಟ ಸಭೆ: ₹32,611 ಕೋಟಿ ಯೋಜನೆಗಳಿಗೆ ಅನುಮೋದನೆ: ತುಳು ಎರಡನೇ ಹೆಚ್ಚುವರಿ ಆಡಳಿತ ಭಾಷೆಯಾಗಿ ಘೋಷಣೆ

    Breaking News | ನವೆಂಬರ್ ಅಂತ್ಯಕ್ಕೆ ತುಮಕೂರಿಗೆ ಎತ್ತಿನಹೊಳೆ ನೀರು: ಸಚಿವ ಚಲುವರಾಯಸ್ವಾಮಿ ಭರವಸೆ

    ಮೆಕ್ಕಾ ವಾಯುಪ್ರದೇಶದ ಬಳಿ ಹೌತಿ ಡ್ರೋನ್ ಹೊಡೆದುರುಳಿಸಿದ ಸೌದಿ ಅರೇಬಿಯಾ: ಪವಿತ್ರ ಕ್ಷೇತ್ರಗಳ ರಕ್ಷಣೆ ‘ರೆಡ್ ಲೈನ್’ ಎಂದ ರಿಯಾದ್

  • Bengaluru Focus

    STUDY REPORT | ಬೆಂಗಳೂರು ಸಂಚಾರ ನರಕ: ಶಾಲಾ ಮಕ್ಕಳ ಬಾಲ್ಯ ಕಸಿದುಕೊಳ್ಳುತ್ತಿದೆ ನಗರದ ರಸ್ತೆಗಳು

    IAS Transfer | ರಾಜ್ಯದಲ್ಲಿ ಹಲವು ಐಎಎಸ್ ಅಧಿಕಾರಿಗಳ ದಿಢೀರ್ ವರ್ಗಾವಣೆ: ಡಿಸಿಎಂ ಕಾರ್ಯದರ್ಶಿಯಾಗಿ ರಾಕೇಶ್ ಕುಮಾರ್ ನಿಯೋಜನೆ

    ಬೆಂಗಳೂರಿನ 135 ಕೆರೆಗಳಿಗೆ ಮರುಜೀವ: 7 ಜಿಲ್ಲೆಗಳ 500 ಕೆರೆ ಅಭಿವೃದ್ಧಿಗೆ ₹150 ಕೋಟಿ

    GBA News | ​ಬೆಂಗಳೂರಿಗರಿಗೆ ‘ಇ-ಆಸ್ತಿ 2.0’ ಡಿಜಿಟಲ್ ಕೊಡುಗೆ; ಅಕ್ರಮ ಕಟ್ಟಡಗಳಿಗೆ ಆಯುಕ್ತರ ಚಾಟಿ

    BW SPECIAL | ಖಜಾನೆ ಖಾಲಿ: ಬೆಂಗಳೂರಿನಲ್ಲಿ ಆಸ್ತಿ ಖಾತಾ, ತೆರಿಗೆಗೆ ‘ಸಾಫ್ಟ್‌ವೇರ್ ಶುಲ್ಕ’ ಬಾಸುಂಡೆ; ಕನ್ನಡಿಗರ ಜೇಬಿಗೆ ಕಾಂಗ್ರೆಸ್ ಸರ್ಕಾರ ಕತ್ತರಿ

    Bunts Sangha | ಬೆಂಗಳೂರು ಬಂಟರ ಸಂಘ ಚುನಾವಣೆ: ಅಧ್ಯಕ್ಷರಾಗಿ ದೀಪಕ್ ಶೆಟ್ಟಿ, ​ಉಪಾಧ್ಯಕ್ಷರಾಗಿ ಮಧುಕರ್ ಶೆಟ್ಟಿ ಆಯ್ಕೆ

    ಕೇವಲ 30 ನಿಮಿಷದಲ್ಲಿ ಕಟ್ಟಡ ನಕ್ಷೆ ಮಂಜೂರಾತಿ: ‘ನಂಬಿಕೆ ನಕ್ಷೆ 2.0’ ಲೋಕಾರ್ಪಣೆ!

    Power News | ಭಾರತ್ ಎಲೆಕ್ಟ್ರಿಕ್ ಮೊಬಿಲಿಟಿ ಸೂಚ್ಯಂಕ: ದೇಶದಲ್ಲೇ ಕರ್ನಾಟಕಕ್ಕೆ 3ನೇ ಸ್ಥಾನ

    ​ಜೆ.ಪಿ. ನಗರದಿಂದ ಗೊಟ್ಟಿಗೆರೆವರೆಗೆ ಶೇ. 34 ರಷ್ಟು ಬೀದಿ ದೀಪ ಬಂದ್; ​ಕತ್ತಲಲ್ಲಿ ರಸ್ತೆಗಳು; ಸಚಿವ ಕೃಷ್ಣ ಬೈರೇಗೌಡ ದಿಢೀರ್ ರಾತ್ರಿ ರೌಂಡ್ಸ್

  • Public interest
  • BW Special
  • Life Style
  • Photo Gallery
  • Video
No Result
View All Result

Home Bengaluru Focus

Namma Metro Phase-3 | ಒಆರ್ ಆರ್ ರಸ್ತೆಯಲ್ಲಿ‌ ಬಿಬಿಎಂಪಿ ಪ್ರಸ್ತಾವಿತ ಮೇಲ್ಸೇತುವೆ – ನಮ್ಮ‌ ಮೆಟ್ರೊ ಫೇಸ್-3 ಮಾರ್ಗ ನಿರ್ಮಾಣಕ್ಕೆ ತೊಡಕು

ಬಿಬಿಎಂಪಿ ಮತ್ತು ಬಿಎಂಆರ್ ಸಿಎಲ್ ನಡುವಣ ಪ್ರಸ್ತಾವಿತ ಮಾರ್ಗದಲ್ಲಿ ಸಂಯೋಜಿತವಾಗಿ ಯೋಜನೆ ಜಾರಿಗೆ, ಸಭೆಯಲ್ಲಿ ಸಹಮತ | ಸಮಸ್ಯೆ ಬಗೆಹರಿಸಲು ನಿರ್ಧಾರ

by Bengaluru Wire Desk
June 30, 2022
in Bengaluru Focus, BW Special, Public interest
Reading Time: 2 mins read
0
ನಮ್ಮ ಮೆಟ್ರೊ ರೈಲಿನ ಸಾಂದರ್ಭಿಕ ಚಿತ್ರ

ನಮ್ಮ ಮೆಟ್ರೊ ರೈಲಿನ ಸಾಂದರ್ಭಿಕ ಚಿತ್ರ

ಬೆಂಗಳೂರು, ಜೂ.30 www.bengaluruwire.com :
ನಮ್ಮ ಮೆಟ್ರೊ ಮೂರನೇ ಹಂತದ ಪ್ರಸ್ತಾವಿತ ಯೋಜನೆ ಮಾರ್ಗದಲ್ಲಿಯೇ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (BBMP) ಎರಡು ಮೇಲ್ಸೇತುವೆ ಯೋಜನೆಯು ಬರುತ್ತಿರುವುದು ಎರಡೂ ಸಂಸ್ಥೆಗಳಿಗೆ ತಲೆನೋವಾಗಿ ಪರಿಣಮಿಸಿದೆ.

ಬೆಂಗಳೂರು ಮೆಟ್ರೊ ರೈಲು ನಿಗಮ (BMRCL) ಮೂರನೇ ಹಂತದಲ್ಲಿ 44.65 ಕಿ.ಮೀ ಉದ್ದದ ಒಟ್ಟು ಎರಡು ಕಾರಿಡಾರ್ ಬರುತ್ತಿದೆ. ಹೊಸಹಳ್ಳಿಯಿಂದ ಕಡಬಗೆರೆ ವರೆಗಿನ 12.5 ಕಿ.ಮೀ ಮೆಟ್ರೊ ಮಾರ್ಗ ಹಾಗೂ ಜೆ.ಪಿನಗರ 4ನೇ ಹಂತದಿಂದ ಕೆಂಪಾಪುರದವರೆಗಿನ 32.15 ಕಿ.ಮೀ ಮಾರ್ಗ ಬರಲಿದೆ.

ನಮ್ಮ ಮೆಟ್ರೊ ಫೇಸ್-3 ಮಾರ್ಗದ ನೀಲನಕ್ಷೆ (ಪ್ರಾತಿನಿಧಿಕ ಚಿತ್ರ)

ಜೆ.ಪಿನಗರ 4ನೇ ಹಂತದಲ್ಲಿನ ಮೆಟ್ರೊ ರೈಲು ಮಾರ್ಗವು ಪಾಲಿಕೆಯ ಹೊರವರ್ತುಲ ರಸ್ತೆಯಲ್ಲೇ ಸಾಗುವುದರಿಂದ ಅದೇ ಮಾರ್ಗದಲ್ಲಿ ಬಿಬಿಎಂಪಿಯು ನಿರ್ಮಿಸಲು ಯೋಜಿಸುತ್ತಿರುವ ಸಾರಕ್ಕಿ ಜಂಕ್ಷನ್ ಹಾಗೂ ಇಟ್ಟಮಡು ಜಂಕ್ಷನ್ ಬಳಿಯ ಎರಡು ಮೇಲ್ಸೇತುವೆಗಳು ಮೆಟ್ರೊ ರೈಲು ಮಾರ್ಗ ಹಾಗೂ ಪಾಲಿಕೆಯ ಫ್ಲೈಓವರ್ ಕಾಮಗಾರಿಗಳಿಗೆ ಪರಸ್ಪರ ತೊಡಕಾಗಲಿದೆ.

ಈ ಹಿನ್ನಲೆಯಲ್ಲಿ ಜು.27ರಂದು ಪಾಲಿಕೆ ಕೇಂದ್ರ ಕಚೇರಿಯಲ್ಲಿ ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹಾಗೂ ನಮ್ಮ ಮೆಟ್ರೋ ವ್ಯವಸ್ಥಾಪಕ ನಿರ್ದೇಶಕರಾದ ಅಂಜುಂ ಪರ್ವೇಜ್ ನೇತೃತ್ವದಲ್ಲಿ ಗಹನ ಚರ್ಚೆ ನಡೆಯಿತು.

ತುಷಾರ್ ಗಿರಿನಾಥ್ ಐಎಎಸ್

“ಬಿಬಿಎಂಪಿಯು ಪ್ರಸ್ತಾವಿತ ಮೇಲ್ಸೇತುವೆ ನಿರ್ಮಾಣ ಸ್ಥಳದಲ್ಲಿಯೇ ಮೆಟ್ರೋ 3ನೇ ಹಂತದ ಯೋಜನೆಯ ರೈಲು ಮಾರ್ಗವು ಬರುತ್ತಿರುವ ಹಿನ್ನಲೆಯಲ್ಲಿ ಎರಡೂ ಸಂಸ್ಥೆಗಳಿಗೆ ಅನುಕೂಲವಾಗುವ ರೀತಿಯಲ್ಲಿ ಏನೆಲ್ಲಾ ಮಾಡಬಹುದು? ಎಂಬ ಬಗ್ಗೆ ಪಾಲಿಕೆ ಅಧಿಕಾರಿಗಳು ಹಾಗೂ ಮೆಟ್ರೊ ಅಧಿಕಾರಿಗಳು ಈ ಸಭೆಯಲ್ಲಿ ಸುಧೀರ್ಘ ಚರ್ಚೆ ನಡೆಸಿದ್ದೇವೆ. ಭವಿಷ್ಯದಲ್ಲಿ ಹೊರವರ್ತುಲ ರಸ್ತೆಯಲ್ಲಿ ಸುಗಮ ವಾಹನ ಸಂಚಾರ ಹಾಗೂ ಮೆಟ್ರೊ‌ ರೈಲು ಸಂಚಾರಕ್ಕೆ ಅನುವಾಗುವ ರೀತಿಯಲ್ಲಿ ಅಗತ್ಯ ವ್ಯವಸ್ಥೆ ಮಾಡಿಕೊಳ್ಳುತ್ತೇವೆ.”

– ತುಷಾರ್ ಗಿರಿನಾಥ್, ಬಿಬಿಎಂಪಿ ಮುಖ್ಯ ಆಯುಕ್ತರು

ಎರಡು ಮೇಲ್ಸೇತುವೆಗಳ ನಿರ್ಮಾಣಕ್ಕೆ ಯೋಜನೆ ಸಿದ್ಧವಾಗಿದ್ದು ಕೆಲವೇ ದಿನಗಳಲ್ಲಿ ಈ ಯೋಜನೆ ನಿರ್ಮಾಣ ಆರಂಭವಾಗಬೇಕಿತ್ತು. ಆದರೆ ಇದೇ ಒಆರ್ ಆರ್ ಮಾರ್ಗದಲ್ಲಿ ಫೇಸ್-3 ಮೆಟ್ರೊ ರೈಲು ಮಾರ್ಗ ಬರುತ್ತಿರುವುದರಿಂದ ಬಿಬಿಎಂಪಿ ಹಾಗೂ ಮೆಟ್ರೋ ಜಂಟಿಯಾಗಿ ಒಂದೇ ಸ್ಥಳದಲ್ಲಿ ಸಂಯೋಜಿತವಾಗಿ (Integrated) ಎರಡು ಯೋಜನೆಗಳನ್ನು ನಿರ್ಮಾಣ ಮಾಡಲು ಪಾಲಿಕೆಯಲ್ಲಿ ನಡೆದ ಸಭೆಯಲ್ಲಿ ಸಮ್ಮತಿಸಿವೆ. ಹೀಗಾಗಿ ಈ ಎರಡು ಮೇಲ್ಸೇತುವೆಗಳ ವಿನ್ಯಾಸ ಬದಲಾವಣೆಗೆ ಒಳಪಡಲಿದೆ.

ಅಂಜುಮ್ ಪರ್ವೇಜ್ ಐಎಎಸ್

“ಮೆಟ್ರೋ ಎರಡನೇ ಹಂತದಲ್ಲಿ ಜಯದೇವ ಆಸ್ಪತ್ರೆ ಬಳಿಯಲ್ಲಿ ನಿರ್ಮಾಣವಾಗುತ್ತಿರುವ ಬಹುಹಂತದ ಮೇಲ್ಸೇತುವೆ ರೀತಿಯಲ್ಲಿ ವಾಹನ ಮತ್ತು ಮೆಟ್ರೊ ರೈಲು ಸಂಚರಿಸುವಂತೆ ಮೇಲ್ಸೇತುವೆ ವಿನ್ಯಾಸವನ್ನು ಸಾರಕ್ಕಿ ಜಂಕ್ಷನ್ ಹಾಗೂ ಇಟ್ಟಮಡು ಜಂಕ್ಷನ್ ಫ್ಲೈಓವರ್ ನಲ್ಲಿ ಅಳವಡಿಸಿಕೊಳ್ಳಲು ಚಿಂತನೆಯಿದೆ. ಈಗಾಗಲೇ ಪ್ರಸ್ತಾವಿತ ಫೇಸ್-3 ಮೆಟ್ರೊ ರೈಲು ಮಾರ್ಗ ಬರುತ್ತಿರುವ ಹಾಗೂ ಪಾಲಿಕೆ ಮೇಲ್ಸೇತುವೆ ಎರಡೂ ಸಂಧಿಸುವ ಸ್ಥಳದಲ್ಲಿ ಸಮೀಕ್ಷೆ ಕಾರ್ಯ ನಡೆಯುತ್ತಿದೆ. ಎರಡು ಸಂಸ್ಥೆಗಳಿಗೆ ಅನುಕೂಲವಾಗುವಂತೆ ಕ್ರಮ ಕೈಗೊಳ್ಳಲಿದ್ದೇವೆ.”

– ಅಂಜುಮ್ ಪರ್ವೇಜ್, ವ್ಯವಸ್ಥಾಪಕ ನಿರ್ದೇಶಕರು, ಬಿಎಂಆರ್ ಸಿಎಲ್

ಪ್ರಸ್ತಾವಿತ ಎರಡು ಮೇಲ್ಸೇತುವೆಗಳ ವಿವರ ಹೀಗಿದೆ :

ಸಾರಕ್ಕಿ ಜಂಕ್ಷನ್ ಬಳಿಯ ಮೇಲ್ಸೇತುವೆ ನಕ್ಷೆ

ಜೆಪಿನಗರ ಬಳಿಯ ಸಾರಕ್ಕಿ ಜಂಕ್ಷನ್ ನಲ್ಲಿ ಪಾಲಿಕೆಯು ಮುಖ್ಯಮಂತ್ರಿಗಳ ನವ ನಗರೋತ್ಥಾನ ಅನುದಾನದಡಿ120 ಕೋಟಿ ರೂ. ವೆಚ್ಚದಲ್ಲಿ ಸಾರಕ್ಕಿ ಜಂಕ್ಷನ್, 36, 35 ಹಾಗೂ 33ನೇ ಮುಖ್ಯರಸ್ತೆ ಮತ್ತು ಇಲಿಯಾಸ್ ನಗರ ಜಂಕ್ಷನ್ ವರೆಗೆ ಟ್ರಾಫಿಲ್ ಸಿಗ್ನಲ್ ರಹಿತ ಸುಲಲಿತ ವಾಹನ ಸಂಚಾರಕ್ಕಾಗಿ 1.36 ಕಿ.ಮೀ ಉದ್ದದ ನಾಲ್ಕು ಲೇನ್ ಗಳ ಮೇಲ್ಸೇತುವೆ ನಿರ್ಮಿಸಲು ಪಾಲಿಕೆಯು‌ ಯೋಜನೆ ರೂಪಿಸಿತ್ತು. ಈ ಯೋಜನೆ ಪೂರ್ಣಗೊಂಡಲ್ಲಿ ಈ 5 ಜಂಕ್ಷನ್ ಗಳಲ್ಲಿನ ಸಂಚಾರದ ಒತ್ತಡ ಶೇ.60ರಷ್ಟು ಕಡಿಮೆಯಾಗಿ ದಟ್ಟಣೆ ಅವಧಿಯಲ್ಲಿ 20 ನಿಮಿಷದಷ್ಟು ಸಮಯ ಉಳಿತಾಯವಾಗಲಿದೆ.

ಇಟ್ಟಮಡು ಮೇಲ್ಸೇತುವೆ ನಕ್ಷೆ

ಅದೇ ರೀತಿ ಕತ್ರಿಗುಪ್ಪೆ ಬಳಿಯಲ್ಲಿ ಮುಖ್ಯಮಂತ್ರಿಗಳ ನಗರೋತ್ಥಾನ ಅನುದಾನದಡಿ 152 ಕೋಟಿ ರೂ. ವೆಚ್ಚದಲ್ಲಿ ಇಟ್ಟಮಡು ಜಂಕ್ಷನ್, ಫುಡ್ ವರ್ಲ್ಡ್ ಹಾಗೂ ಕಾಮಾಕ್ಯ ಜಂಕ್ಷನ್ ಮಾರ್ಗದಲ್ಲಿ 1.56 ಕಿ.ಮೀ ಉದ್ದದ 4 ಲೇನ್ ಗಳ ಮೇಲ್ಸೇತುವೆ ನಿರ್ಮಿಸಲು ಪಾಲಿಕೆಯು ಸಮಗ್ರ ಯೋಜನಾ ವರದಿಯನ್ನು (DPR) ತಯಾರಿಸಿತ್ತು. ಈ ಯೋಜನೆ ಪೂರ್ಣಗೊಂಡಲ್ಲಿ ಮೈಸೂರು ರಸ್ತೆ ಹಾಗೂ ಬನ್ನೇರುಘಟ್ಟ ರಸ್ತೆ ಸಂಪರ್ಕಿಸುವ ಪ್ರಮುಖ ಕೊಂಡಿಯಾಗಿರುವ ಈ ಸ್ಥಳದಲ್ಲಿ ಟ್ರಾಫಿಕ್ ಜಂಜಾಟವು ಶೇ.67ರಷ್ಟು ಕಡಿಮೆಯಾಗಿ ಈ ಭಾಗದಲ್ಲಿ ಸಂಚರಿಸುವ ಅವಧಿಯು 18 ನಿಮಿಷ ಉಳಿತಾಯವಾಗುತ್ತದೆ ಎಂದು ಡಿಪಿಆರ್ ನಲ್ಲಿ ತಿಳಿಸಲಾಗಿದೆ.

ಉಳಿದಂತೆ ಪಾಲಿಕೆಯು ಕೆಂಗೇರಿಯಿಂದ ಮಾಗಡಿ ರಸ್ತೆವರೆಗಿನ ಹಳೆ ಹೊರವರ್ತುಲ ರಸ್ತೆಯಲ್ಲಿ ಐದು ಕಡೆ ಮೇಲ್ಸೇತುವೆ, ಕೆಳಸೇತುವೆ ನಿರ್ಮಿಸಲಿದೆ. ಈ ಯೋಜನೆಯ ಅನುಷ್ಠಾನಕ್ಕೆ ಯಾವುದೇ ಸಮಸ್ಯೆಯಿಲ್ಲ ಎಂದು ಪಾಲಿಕೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಎಚ್ಚೆತ್ತುಕೊಳ್ಳದಿದ್ದರೆ ಮೆಟ್ರೊ ಯೋಜನೆಗೆ ಆಗುತ್ತಿತ್ತು ತೊಂದರೆ :
ಪಾಲಿಕೆ ಒಂದೊಮ್ಮೆ ಮೇಲ್ಸೇತುವೆ ನಿರ್ಮಾಣ ಮಾಡಲು ಆರಂಭಿಸಿದ ನಂತರ ಮೆಟ್ರೊ ಕಾಮಗಾರಿ ಆರಂಭವಾಗಿದ್ದರೆ ರೈಲು ಮಾರ್ಗಕ್ಕೆ ಅಗತ್ಯವಾದ ಪಿಲ್ಲರ್ ಕಂಬ, ವಯಾಡಕ್ಟ್ ಅಳವಡಿಸಲು ಸಮಸ್ಯೆಯಾಗಿ ಯೋಜನೆ ಮತ್ತಷ್ಟು ವಿಳಂಬವಾಗುತ್ತಿತ್ತು. ಆದರೆ ಸಕಾಲದಲ್ಲಿ ಎರಡೂ ಸಂಸ್ಥೆಗಳು ಎಚ್ಚೆತ್ತುಕೊಂಡಿರುವುದು ಸಮಾಧಾನಕರ ವಿಷಯವಾಗಿದೆ.

ಒಟ್ಟಿನಲ್ಲಿ ನಮ್ಮ ಮೆಟ್ರೊ, ಬಿಬಿಎಂಪಿಯು ಎರಡು ಮೇಲ್ಸೇತುವೆ ನಿರ್ಮಾಣವಾಗುವ ಸ್ಥಳದಲ್ಲಿ ಜಯದೇವ ಆಸ್ಪತ್ರೆ ಬಳಿಯಲ್ಲಿ ನಿರ್ಮಿಸುತ್ತಿರುವ ರೀತಿಯಲ್ಲಿ ಡಬಲ್‌ಡೆಕರ್ ಮೇಲ್ಸೇತುವೆ ನಿರ್ಮಿಸುತ್ತಾ ಎಂಬುದನ್ನು ಕಾದು ನೋಡಬೇಕಾಗಿದೆ.

Sharing is Caring

  • Share on WhatsApp (Opens in new window) WhatsApp
  • Print (Opens in new window) Print
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Share on LinkedIn (Opens in new window) LinkedIn

Like this:

Like Loading…
WhatsApp Join our WhatsApp Channel
Previous Post

BESCOM EV Campaign And EV Expo | ರಾಜ್ಯ ಸರ್ಕಾರದಿಂದ ಜು.1ರಿಂದ ಒಂದು ವಾರ ವಿದ್ಯುತ್ ಚಾಲಿತ ವಾಹನಗಳ ಅಭಿಯಾನ

Next Post

Liquor Sales High In Karnataka | ಮೂರೇ ತಿಂಗಳಲ್ಲಿ 23 ಕೋಟಿ ಲೀ. ಮದ್ಯ ಮಾರಾಟ….! : ರಾಜ್ಯ ಸರ್ಕಾರದ ಖಜಾನೆಗೆ ಸೇರಿತು 7,500 ಕೋಟಿ ರೂ.

Next Post
ಸೂಚನೆ : ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ (ಸಾಂದರ್ಭಿಕ ಚಿತ್ರ)

Liquor Sales High In Karnataka | ಮೂರೇ ತಿಂಗಳಲ್ಲಿ 23 ಕೋಟಿ ಲೀ. ಮದ್ಯ ಮಾರಾಟ....! : ರಾಜ್ಯ ಸರ್ಕಾರದ ಖಜಾನೆಗೆ ಸೇರಿತು 7,500 ಕೋಟಿ ರೂ.

HAL- BMTC #PushpakaVimana | ಪ್ರಾಜೆಕ್ಟ್ ಪುಷ್ಪಕ ವಿಮಾನ : ಒಂಟಿ ಹೋರಾಟದಿಂದ ಎಚ್ಎಎಲ್ ಗಾಗಿ 10 ಬಿಎಂಟಿಸಿ ಬಸ್ಸುಗಳ ಸೇವೆ ಒದಗಿಸಿದ ಸಾಮಾನ್ಯ ನೌಕರ !!

Please login to join discussion

Like Us on Facebook

Follow Us on Twitter

Recent News

STUDY REPORT | ಬೆಂಗಳೂರು ಸಂಚಾರ ನರಕ: ಶಾಲಾ ಮಕ್ಕಳ ಬಾಲ್ಯ ಕಸಿದುಕೊಳ್ಳುತ್ತಿದೆ ನಗರದ ರಸ್ತೆಗಳು

September 23, 2026

IAS Transfer | ರಾಜ್ಯದಲ್ಲಿ ಹಲವು ಐಎಎಸ್ ಅಧಿಕಾರಿಗಳ ದಿಢೀರ್ ವರ್ಗಾವಣೆ: ಡಿಸಿಎಂ ಕಾರ್ಯದರ್ಶಿಯಾಗಿ ರಾಕೇಶ್ ಕುಮಾರ್ ನಿಯೋಜನೆ

September 23, 2026
Bengaluru Wire, Kannada News, latest News in Kannada

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

STUDY REPORT | ಬೆಂಗಳೂರು ಸಂಚಾರ ನರಕ: ಶಾಲಾ ಮಕ್ಕಳ ಬಾಲ್ಯ ಕಸಿದುಕೊಳ್ಳುತ್ತಿದೆ ನಗರದ ರಸ್ತೆಗಳು

September 23, 2026

IAS Transfer | ರಾಜ್ಯದಲ್ಲಿ ಹಲವು ಐಎಎಸ್ ಅಧಿಕಾರಿಗಳ ದಿಢೀರ್ ವರ್ಗಾವಣೆ: ಡಿಸಿಎಂ ಕಾರ್ಯದರ್ಶಿಯಾಗಿ ರಾಕೇಶ್ ಕುಮಾರ್ ನಿಯೋಜನೆ

September 23, 2026

ಕಸ್ತೂರಿ ರಂಗನ್ ವರದಿ: ಗ್ರಾಮ ಮಟ್ಟದಲ್ಲಿ ಭೌತಿಕ ಸರ್ವೇಗೆ ಕೇಂದ್ರಕ್ಕೆ 1 ವರ್ಷ ಕಾಲಾವಕಾಶ ಕೋರಿಕೆ; ವಿಧಾನಸಭೆಯಲ್ಲಿ ಸರ್ವಾನುಮತದ ನಿರ್ಣಯ ಅಂಗೀಕಾರ

September 22, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group
%d