Sunday, June 14, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ಕರ್ನಾಟಕ ಪೊಲೀಸ್ ಇಲಾಖೆ ಮೇಲ್ದರ್ಜೆಗೆ ಸಿಎಂ ಡಿ.ಕೆ. ಶಿವಕುಮಾರ್ ಮೆಗಾ ಪ್ಲಾನ್: ಕೇಂದ್ರ ಗೃಹ ಸಚಿವರಿಗೆ ಮನವಿ

    ವೈದ್ಯಕೀಯ ಲೋಕದ ಅದ್ವಿತೀಯ ಸಾಧನೆ: ವಯಸ್ಸಾಗುವಿಕೆಯನ್ನು ತಡೆಯುವ ಔಷಧದ ಮೊದಲ ಮಾನವ ಪ್ರಯೋಗ ಯಶಸ್ವಿ

    ಬೆಂಗಳೂರಿನ ಗೊರಗುಂಟೆಪಾಳ್ಯದಲ್ಲಿ ಭೀಕರ ಅಪಘಾತ: ಬ್ರೇಕ್ ಫೇಲಾದ ಗ್ಯಾಸ್ ಲಾರಿ ಡಿಕ್ಕಿ, ಬೈಕ್ ಸವಾರ ದಂಪತಿ ಸ್ಥಳದಲ್ಲೇ ಸಾವು

    ಪೆಟ್ರೋಲ್ ಬಂಕ್ ಸಾಂದರ್ಭಿಕ ಚಿತ್ರ

    Good News | ವಾಹನ ಸವಾರರ ಗಮನಕ್ಕೆ: ಇ-20, ಇ-30 ಎಥೆನಾಲ್ ಮಿಶ್ರಿತ ಪೆಟ್ರೋಲ್ ಮೇಲಿನ ಅಬಕಾರಿ ಸುಂಕ ರದ್ದುಪಡಿಸಿದ ಕೇಂದ್ರ ಸರ್ಕಾರ

    ಚುನಾವಣೆಗೆ ಮುನ್ನ ‘ಗೃಹಲಕ್ಷ್ಮಿ’, ಈಗ ‘ಅನರ್ಹ ಲಕ್ಷ್ಮಿ’: ಗ್ಯಾರಂಟಿ ಹಾಗೂ ‘ಬ್ರ್ಯಾಂಡ್ ಬೆಂಗಳೂರು’ ವೈಫಲ್ಯದ ವಿರುದ್ಧ ಬಿಜೆಪಿ ತೀವ್ರ ವಾಗ್ದಾಳಿ

    ವೈಜಾಗ್ ಸ್ಟೀಲ್ ಪ್ಲಾಂಟ್ ದುರಂತ: ಸ್ಥಳಕ್ಕೆ ಎಚ್.ಡಿ.ಕುಮಾರಸ್ವಾಮಿ ಭೇಟಿ, ಮೃತರ ಕುಟುಂಬಕ್ಕೆ ತಲಾ ₹25 ಲಕ್ಷ ಪರಿಹಾರ ಘೋಷಣೆ

    ಬೆಸ್ಕಾಂ ಕೇಂದ್ರ ಕಚೇರಿ (ಸಾಂದರ್ಭಿಕ ಚಿತ್ರ)

    Bescom News | ಬೆಸ್ಕಾಂನ 20 ಪಟ್ಟಣಗಳಲ್ಲಿ ಜೂನ್ 10ರಿಂದ 30ರವರೆಗೆ ಆನ್‌ಲೈನ್ ಸೇವೆ ಸ್ಥಗಿತ: ಕಾರಣವೇನು?

    Philippines Earthquake | ಫಿಲಿಪೈನ್ಸ್‌ನಲ್ಲಿ 7.8 ತೀವ್ರತೆಯ ಭೀಕರ ಭೂಕಂಪ: 15 ಸಾವು, ಸುನಾಮಿ ಎಚ್ಚರಿಕೆ

    ವಿಧಾನಸೌಧದಿಂದ ಸಿಲ್ಕ್ ಇನ್ಸ್ಟಿಟ್ಯೂಟ್ ವರೆಗೆ ಮೆಟ್ರೋದಲ್ಲಿ ಸಿಎಂ ಡಿಕೆಶಿ ಪ್ರಯಾಣ: ಸ್ವಕ್ಷೇತ್ರ ಕನಕಪುರ ಜನತೆಗೆ ಕೃತಜ್ಞತಾ ಸಮರ್ಪಣೆ

  • Bengaluru Focus

    ಬೆಂಗಳೂರಿನಲ್ಲಿ “ರೈಸ್ ಕಾನ್ ಕ್ಲೇವ್- 2026” ಉದ್ಘಾಟನೆ: ‘ವಿಕಸಿತ ಭಾರತ 2047’ಕ್ಕೆ ವಿಜ್ಞಾನ ಮತ್ತು ನಾವೀನ್ಯತೆಯೇ ಆಧಾರ – ಡಾ. ಜಿತೇಂದ್ರ ಸಿಂಗ್

    ಬನ್ನೇರುಘಟ್ಟ ಜೈವಿಕ ಉದ್ಯಾನವನ: ದಕ್ಷಿಣ ಆಫ್ರಿಕಾದ ಚೀತಾಗಳ ದರ್ಶನ, ಜೊತೆಗೆ ಮುದ್ದಾದ ಜೆಬ್ರಾ, ನೀರುಕುದುರೆ ಮರಿಗಳ ಕಲರವ!

    GBA News | ಬೆಂಗಳೂರು ಪಶ್ಚಿಮ ಮತ್ತು ದಕ್ಷಿಣ ಪಾಲಿಕೆ: ಪಾದಚಾರಿ ಮಾರ್ಗ, ತ್ಯಾಜ್ಯ ನಿರ್ವಹಣೆ ಹಾಗೂ ಮೂಲಸೌಕರ್ಯಕ್ಕೆ ಒತ್ತು

    ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ 28ನೇ ಘಟಿಕೋತ್ಸವ: 72 ಸಾವಿರ ಪದವಿ, 103 ಚಿನ್ನದ ಪದಕ ಪ್ರದಾನ

    ಕಡ್ಡಾಯ ಕಚೇರಿ ಹಾಜರಾತಿಗೆ ಐಟಿ ಉದ್ಯೋಗಿಗಳ ವಿರೋಧ: ಬೆಂಗಳೂರಿನ ಗಗನಕ್ಕೇರುತ್ತಿದೆ ಮನೆ ಬಾಡಿಗೆ, ಇಲ್ಲಿದೆ ರಿಯಲ್ ಎಸ್ಟೇಟ್ ವಿಶ್ಲೇಷಣೆ

    ಎಚ್‌ಎಸ್‌ಆರ್ ಲೇಔಟ್ ನಿವಾಸಿಗಳಿಗೆ ಸಿಹಿಸುದ್ದಿ: 184 ಮರಗಳ ಮಾರಣಹೋಮಕ್ಕೆ ಬ್ರೇಕ್ ಹಾಕಿದ ಬಿಡಿಎ

  • Public interest
  • BW Special
  • Life Style
  • Photo Gallery
  • Video
No Result
View All Result

Home News Wire

MUDRA SCHME | ಮುದ್ರಾ ಯೋಜನೆಯಲ್ಲಿ ನೀವು ಹೇಗೆ ಸಾಲ ಪಡೆಯಬಹುದು? ಇಲ್ಲಿದೆ ಸಂಪೂರ್ಣ ಮಾಹಿತಿ

ಪಿಎಂಎಂವೈ ಯೋಜನೆಯಡಿ ಏಳು ವರ್ಷಗಳಲ್ಲಿ 34.42 ಕೋಟಿ ಸಾಲ ಖಾತೆಗಳಿಗೆ 18.60 ಲಕ್ಷ ಕೋಟಿ ರೂ. ಸಾಲ ಮಂಜೂರು

by Bengaluru Wire Desk
April 8, 2022
in News Wire, Public interest
Reading Time: 1 min read
0

ನವದೆಹಲಿ, (www.bengaluruwire.com) : ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಪ್ರಧಾನಮಂತ್ರಿ ಮುದ್ರಾ ಯೋಜನೆ (PMMY) ಯಡಿ ಕಳೆದ 7 ವರ್ಷಗಳಲ್ಲಿ 34.42 ಕೋಟಿಗಿಂತ ಹೆಚ್ಚಿನ ಸಾಲ ಖಾತೆಗಳಿಗೆ 18.60 ಲಕ್ಷ ಕೋಟಿ ರೂ. ಸಾಲ ಮಂಜೂರು ಮಾಡಲಾಗಿದೆ ಎಂದು ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.

ಯೋಜನೆಯ 7ನೇ ವಾರ್ಷಿಕೋತ್ಸವ ಆಚರಿಸುತ್ತಿರುವ ಸಂದರ್ಭದಲ್ಲಿ ಶುಕ್ರವಾರ ಇಲ್ಲಿ ಮಾತನಾಡಿದ ಅವರು, ಆದಾಯ ಸೃಜಿಸುವ ಉದ್ಯಮ ಚಟುವಟಿಕೆಗಳ ಸೃಷ್ಟಿಗಾಗಿ ಈ ಯೋಜನೆ ಕೋಟ್ಯಾಂತರ ಭಾರತೀಯರಿಗೆ ಸಹಾಯಕವಾಗಿದೆ.

ಮುದ್ರಾ ಯೋಜನೆಯು ವಿಶೇಷವಾಗಿ ಸಣ್ಣ ಉದ್ಯಮಗಳಿಗೆ ಅನುಕೂಲಕರ ವಾತಾವರಣ ಸೃಷ್ಟಿಸಲು ಮತ್ತು ತಳಮಟ್ಟದಲ್ಲಿ ವಿಪುಲ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಸಹಾಯ ಮಾಡುತ್ತಿದೆ. ಶೇ.68 ಕ್ಕಿಂತ ಹೆಚ್ಚಿನ ಸಾಲ ಖಾತೆಗಳನ್ನು ಮಹಿಳೆಯರಿಗೆ ಮಂಜೂರು ಮಾಡಲಾಗಿದೆ. ಯೋಜನೆಯ ಪ್ರಾರಂಭದಿಂದಲೂ ಯಾವುದೇ ಸಾಲ ಪಡೆಯದ ಹೊಸ ಉದ್ಯಮಿಗಳಿಗೆ ಶೇ.22 ಸಾಲ ನೀಡಲಾಗಿದೆ ಎಂದರು.

ಮುದ್ರಾ ಯೋಜನೆಯ ಎಲ್ಲಾ ಫಲಾನುಭವಿಗಳನ್ನು ಅಭಿನಂದಿಸಿದ ಅವರು, ಇದುವರೆಗೆ ಮಂಜೂರಾಗಿರುವ ಒಟ್ಟು ಸಾಲಗಳಲ್ಲಿ ಎಸ್.ಸಿ, ಎಸ್.ಟಿ ಮತ್ತು ಒಬಿಸಿ ವರ್ಗಕ್ಕೆ ಶೇ.51 ರಷ್ಟು ಸಾಲ ವಿತರಿಸಲಾಗಿದೆ ಎಂದು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.

ಈ ಸಂದರ್ಭದಲ್ಲಿ ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಡಾ. ಭಗವತ್ ಕಿಸನ್‌ ರಾವ್ ಕರಾಡ್ ಮಾತನಾಡಿ, ಸಣ್ಣ, ಅತಿಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳಿಗೆ ಯಾವುದೇ ತೊಂದರೆ ಆಗದಂತೆ, ಅಡಚಣೆ ಮುಕ್ತ ರೀತಿಯಲ್ಲಿ ಸಾಂಸ್ಥಿಕ ಸಾಲ ಒದಗಿಸುವುದು ಪ್ರಧಾನ ಮಂತ್ರಿ ಮುದ್ರಾ ಯೋಜನೆ ಆರಂಭದ ಹಿಂದಿನ ಪ್ರೇರಕ ಶಕ್ತಿಯಾಗಿದೆ ಎಂದರು.

ಸಾಲ ವಿತರಣೆ ಕುರಿತು ಮಾತನಾಡಿದ ಅವರು, ನೀತಿ ಆಯೋಗ ಗುರುತಿಸಿರುವಂತೆ ಪಿಎಂಎಂವೈ ಯೋಜನೆಯಡಿ ಸಾಲ ಸೌಲಭ್ಯಗಳ ಕೊರತೆಯಿಂದ ಬಳಲುತ್ತಿರುವ ಆಕಾಂಕ್ಷಿತ ಜಿಲ್ಲೆಗಳಲ್ಲಿ ಹೆಚ್ಚುತ್ತಿರುವ ಫಲಾನುಭವಿಗಳ ಸಾಲ ಬೇಡಿಕೆಯನ್ನು ಪೂರೈಸಲು ಮತ್ತು ವಿಸ್ತರಿಸಲು ಸಾಧ್ಯವಾಗಿದೆ. ಈ ಯೋಜನೆಯು ಸಾಲದ ಒಳಹರಿವು ಸಕ್ರಿಯಗೊಳಿಸುತ್ತಿದೆ ಎಂದು ಸಚಿವರು ತಿಳಿಸಿದರು.

ಪಿಎಂಎಂವೈ ಯೋಜನೆ ಯಾರಿಗಾಗಿ?

ಪಿಎಂಎಂವೈ ಯೋಜನೆಯ ವಿವಿಧ ಉಪಕ್ರಮಗಳ ಮೂಲಕ ಉದಯೋನ್ಮುಖ ಉದ್ಯಮಶೀಲರಿಂದ ಹಿಡಿದು ಶ್ರಮಿಕ ರೈತಾಪಿ ಜನರ ತನಕ ಎಲ್ಲಾ ಪಾಲುದಾರರ ಹಣಕಾಸಿನ ಅಗತ್ಯಗಳ ಮೇಲೆ ಗಮನ ಕೇಂದ್ರೀಕರಿಸಲಾಗುತ್ತಿದೆ. ಸೌಲಭ್ಯಗಳಿಂದ ಸಂಪೂರ್ಣ ವಂಚಿತರಾದ ಮತ್ತು ಇಲ್ಲಿಯವರೆಗೆ ಸಾಮಾಜಿಕವಾಗಿ, ಆರ್ಥಿಕವಾಗಿ ನಿರ್ಲಕ್ಷ್ಯಕ್ಕೆ ಒಳಗಾದ ವರ್ಗಗಳಿಗೆ ಹಣಕಾಸು ನೆರವು ನೀಡುವ ಪ್ರಮುಖ ಉಪಕ್ರಮ ಇದಾಗಿದೆ.

ಈ ಯೋಜನೆ ಪ್ರಾರಂಭವಾಗಿದ್ದು ಯಾವಾಗ?

ಪಿಎಂಎಂವೈ ಯೋಜನೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 2015 ಏಪ್ರಿಲ್ 8ರಂದು ವಿದ್ಯುಕ್ತವಾಗಿ ಆರಂಭಿಸಿದರು. 10 ಲಕ್ಷ ರೂ.ವರೆಗಿನ ಸಾಲವನ್ನು ಒದಗಿಸಲು ಪ್ರಾರಂಭಿಸಿದರು. ಕಾರ್ಪೊರೇಟ್ ಯೇತರ ಮತ್ತು ಕೃಷಿಯೇತರ ಸಣ್ಣ ಮತ್ತು ಅತಿಸಣ್ಣ ಉದ್ದಿಮೆಗಳಿಗೆ ಈ ಯೋಜನೆಯಡಿ 10 ಲಕ್ಷ ರೂ. ವರೆಗೆ ಸಾಲ ವಿತರಿಸಲಾಗುತ್ತಿದೆ.

ಪಿಎಂಎಂವೈ ಯೋಜನೆಯ ಪ್ರಮುಖಾಂಶಗಳು:

ಪಿಎಂಎಂವೈ ಅಡಿ 10 ಲಕ್ಷ ರೂ. ತನಕ ಸಾಲ ಸೌಲಭ್ಯ ಒದಗಿಸಲಾಗುತ್ತಿದೆ. ಸಾಲ ನೀಡುವ ಸದಸ್ಯ ಸಂಸ್ಥೆಗಳು ಅಂದರೆ; ಬ್ಯಾಂಕ್‌ಗಳು, ಬ್ಯಾಂಕಿಂಗ್ ಯೇತರ ಹಣಕಾಸು ಕಂಪನಿಗಳು (ಎನ್‌ಬಿಎಫ್‌ಸಿಗಳು), ಸಣ್ಣ ಹಣಕಾಸು ಸಂಸ್ಥೆಗಳು(ಎಂಎಫ್‌ಐಗಳು), ಇತರೆ ಹಣಕಾಸು ಮಧ್ಯವರ್ತಿ ಸಂಸ್ಥೆಗಳ ಮೂಲಕ 3 ವರ್ಗಗಳಲ್ಲಿ ಅಂದರೆ ಶಿಶು, ಕಿಶೋರ್ ಮತ್ತು ತರುಣ್ ಅಡಿ, ಉದ್ದಿಮೆಗಳ ಬೆಳವಣಿಗೆಯ ಹಂತ, ಅಭಿವೃದ್ಧಿ ಮತ್ತು ಹಣಕಾಸಿನ ಅಗತ್ಯಗಳನ್ನು ಆಧರಿಸಿ, ಸಾಲ ಒದಗಿಸಲಾಗುತ್ತಿದೆ.

ಯಾವ ವರ್ಗಕ್ಕೆ ಎಷ್ಟು ಸಾಲ ಸೌಲಭ್ಯ?

ಶಿಶು: ಈ ವರ್ಗದಲ್ಲಿ 50,000 ರೂ. ತನಕ ಸಾಲ ಸೌಲಭ್ಯ ಒದಗಿಸಲಾಗುತ್ತಿದೆ.
ಕಿಶೋರ್: 50,000 ರೂ.ನಿಂದ 5 ಲಕ್ಷ ರೂ. ತನಕ ಸಾಲ ಒದಗಿಸಲಾಗುತ್ತಿದೆ.
ತರುಣ್: 5 ಲಕ್ಷ ರೂ.ನಿಂದ 10 ಲಕ್ಷ ರೂ. ತನಕ ಸಾಲ ನೀಡಲಾಗುತ್ತಿದೆ.

ಮುದ್ರಾ ಸಾಲ (Mudra Loan)ವನ್ನು ಹೇಗೆ ವಿನ್ಯಾಸಗೊಳಿಸಲಾಗಿದೆ?

ಹೊಸ ಪೀಳಿಗೆಯ ಆಕಾಂಕ್ಷಿತ ಯುವ ಸಮುದಾಯಕ್ಕೆ ಉದ್ಯಮಶೀಲತೆ ಉತ್ತೇಜಿಸುವ ಉದ್ದೇಶದೊಂದಿಗೆ, ಶಿಶು ವರ್ಗದ ಸಾಲಗಳಿಗೆ ಹೆಚ್ಚಿನ ಗಮನ ನೀಡಲಾಗುತ್ತಿದೆ. ನಂತರ ಕಿಶೋರ್ ಮತ್ತು ತರುಣ್ ವರ್ಗಗಳಿಗೆ ಆದ್ಯತೆ ನೀಡಲಾಗುತ್ತಿದೆ. ಶಿಶು, ಕಿಶೋರ್ ಮತ್ತು ತರುಣ್ ವರ್ಗಗಳ ಅಡಿ, ಸಣ್ಣ ಮತ್ತು ಅತಿಸಣ್ಣ ಉದ್ದಿಮೆ ವಲಯದ ಅಭಿವೃದ್ಧಿ ಮತ್ತು ಬೆಳವಣಿಗೆಯ ಚೌಕಟ್ಟಿನೊಳಗೆ ಮತ್ತು ಒಟ್ಟಾರೆ ಉದ್ದೇಶಗಳೊಂದಿಗೆ, ಉತ್ಪನ್ನಗಳನ್ನು ವಿವಿಧ ವಲಯಗಳು, ವ್ಯಾಪಾರ ಚಟುವಟಿಕೆಗಳ ಅವಶ್ಯಕತೆಗಳನ್ನು ಪೂರೈಸಲು ಸಾಧ್ಯವಾಗುವಂತೆ ಮುದ್ರಾ ಸಾಲವನ್ನು ಸಂಪೂರ್ಣ ವಿನ್ಯಾಸಗೊಳಿಸಲಾಗಿದೆ.

ಕೋಳಿ ಸಾಕಣೆ, ಡೈರಿ, ಜೇನು ಸಾಕಣೆ ಇತ್ಯಾದಿ ಕೃಷಿ ಸಂಬಂಧಿಸಿದ ಚಟುವಟಿಕೆಗಳು ಒಳಗೊಂಡಂತೆ ಉತ್ಪಾದನೆ(ತಯಾರಿಕೆ), ವ್ಯಾಪಾರ ಮತ್ತು ಸೇವಾ ವಲಯಗಳಲ್ಲಿ ಆದಾಯ ಸೃಜಿಸುವ ಚಟುವಟಿಕೆಗಳಿಗೆ ಹಣಕಾಸು ಒದಗಿಸುವ ಅವಧಿ ಸಾಲ ಮತ್ತು ದುಡಿಮೆ ಬಂಡವಾಳದ ಅಂಶಗಳನ್ನು ಪೂರೈಸಲು ಪಿಎಂಎಂವೈ ಯೋಜನೆ ಅಡಿ ಸಾಲಗಳನ್ನು ಒದಗಿಸಲಾಗುತ್ತಿದೆ.

ಸಾಲ ನೀಡುವ ಸಂಸ್ಥೆಗಳಿಂದ ಬಡ್ಡಿ ನಿರ್ಧಾರ :

ಆರ್ ಬಿ ಐ ಮಾರ್ಗಸೂಚಿಗಳ ಪ್ರಕಾರ, ಸಾಲ ನೀಡುವ ಸಂಸ್ಥೆಗಳು ಬಡ್ಡಿ ದರ ನಿರ್ಧರಿಸುತ್ತವೆ. ದುಡಿಮೆ ಬಂಡವಾಳಕ್ಕಾಗಿ ಸಾಲ ಪಡೆದ ಉದ್ಯಮಶೀಲರಿಗೆ ಅವಧಿ ನಿರ್ಧರಿಸಿ, ಇಡೀ ಸಾಲ ಮೊತ್ತಕ್ಕೆ ಬಡ್ಡಿ ವಿಧಿಸಲಾಗುತ್ತದೆ.
ಪ್ರಸಕ್ತ ಆರ್ಥಿಕ ಸಾಲಿನಲ್ಲಿ ಮಾ.25 ವರೆಗೆ ಅನ್ವಯವಾಗುವಂತೆ, ಪಿಎಂಎಂವೈ ಯೋಜನೆ ಅಡಿ 4.86 ಕೋಟಿ ಸಾಲ ಖಾತೆಗಳಿಗೆ 3.07 ಲಕ್ಷ ಕೋಟಿ ರೂ. ಸಾಲ ಮಂಜೂರಾತಿ ವಿಸ್ತರಿಸಲಾಗಿದೆ.

ಮುದ್ರಾ ಸಾಲ ಯೋಜನೆಯಲ್ಲಿ ಸಾಲ ವಿತರಣೆ ಹೇಗಾಗಿದೆ?

• ಒಟ್ಟು ಮಂಜೂರಾದ ಸಾಲಗಳ ಪೈಕಿ ಅಂದಾಜು 68% ಸಾಲಗಳನ್ನು ಮಹಿಳಾ ಉದ್ಯಮಿಗಳಿಗೆ ನೀಡಲಾಗಿದೆ.
ಪ್ರತಿ ಉದ್ಯಮಶೀಲರಿಗೆ ಮಂಜುರಾಗಿರುವ ಸರಾಸರಿ ಸಾಲ ಮೊತ್ತ 54,000 ರೂ.
• ಶಿಶು ವರ್ಗಕ್ಕೆ ಮಂಜೂರಾಗಿರುವ ಸಾಲ ಪ್ರಮಾಣ 86%.
• ನವ ಉದ್ಯಮಶೀಲರಿಗೆ ನೀಡಿರುವ ಸಾಲ ಪ್ರಮಾಣ 22%.
• ಎಸ್.ಸಿ, ಎಸ್.ಟಿ ಉದ್ಯಮಶೀಲರಿಗೆ ನೀಡಿರುವ ಸಾಲ 23%.
• ಒಬಿಸಿ ವರ್ಗಕ್ಕೆ ನೀಡಿರುವ ಸಾಲ 28%(ಎಸ್.ಸಿ, ಎಸ್.ಟಿ ಮತ್ತು ಒಬಿಸಿ ವರ್ಗಕ್ಕೆ ವಿತರಣೆ ಆಗಿರುವ ಒಟ್ಟು ಸಾಲ ಪ್ರಮಾಣ 51%).
• ಅಲ್ಪಸಂಖ್ಯಾತ ವರ್ಗಗಳ ಉದ್ಯಮಶೀಲರಿಗೆ ನೀಡಿರುವ ಸಾಲ ಪ್ರಮಾಣ 11%.

WhatsApp Join our WhatsApp Channel
Previous Post

BBMP NEWS | ಪತ್ರಕರ್ತರ ಚಿಕಿತ್ಸಾ ವೆಚ್ಚ ಭರಿಸಲು 2 ಕೋಟಿ ರೂ. ನಿಗದಿ – ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್ ಸಿಂಗ್

Next Post

Hyperbaric Oxygen therapy unit | ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಹತ್ತಾರು ವಿಧದ ಗಂಭೀರ ರೋಗಗಳಿಗೆ ರಾಮ ಬಾಣದಂತಹ ಚಿಕಿತ್ಸೆ ಸದ್ಯದಲ್ಲೇ ಲಭ್ಯ

Next Post

Hyperbaric Oxygen therapy unit | ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಹತ್ತಾರು ವಿಧದ ಗಂಭೀರ ರೋಗಗಳಿಗೆ ರಾಮ ಬಾಣದಂತಹ ಚಿಕಿತ್ಸೆ ಸದ್ಯದಲ್ಲೇ ಲಭ್ಯ

ಬಿಡಿಎ ಕೇಂದ್ರ ಕಚೇರಿ

BDA Dr.Shivram Karanth Layout News | ಬಿಡಿಎ ಡಾ.ಶಿವರಾಮ ಕಾರಂತ ಬಡಾವಣೆ : ಸುಪ್ರೀಂಕೋರ್ಟ್ ನಿಂದ 1475 ಕಟ್ಟಡಗಳಿಗೆ ಬಿಗ್ ರಿಲೀಫ್

Please login to join discussion

Like Us on Facebook

Follow Us on Twitter

Recent News

ಬೆಂಗಳೂರಿನಲ್ಲಿ “ರೈಸ್ ಕಾನ್ ಕ್ಲೇವ್- 2026” ಉದ್ಘಾಟನೆ: ‘ವಿಕಸಿತ ಭಾರತ 2047’ಕ್ಕೆ ವಿಜ್ಞಾನ ಮತ್ತು ನಾವೀನ್ಯತೆಯೇ ಆಧಾರ – ಡಾ. ಜಿತೇಂದ್ರ ಸಿಂಗ್

June 14, 2026

ಬನ್ನೇರುಘಟ್ಟ ಜೈವಿಕ ಉದ್ಯಾನವನ: ದಕ್ಷಿಣ ಆಫ್ರಿಕಾದ ಚೀತಾಗಳ ದರ್ಶನ, ಜೊತೆಗೆ ಮುದ್ದಾದ ಜೆಬ್ರಾ, ನೀರುಕುದುರೆ ಮರಿಗಳ ಕಲರವ!

June 13, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

ಬೆಂಗಳೂರಿನಲ್ಲಿ “ರೈಸ್ ಕಾನ್ ಕ್ಲೇವ್- 2026” ಉದ್ಘಾಟನೆ: ‘ವಿಕಸಿತ ಭಾರತ 2047’ಕ್ಕೆ ವಿಜ್ಞಾನ ಮತ್ತು ನಾವೀನ್ಯತೆಯೇ ಆಧಾರ – ಡಾ. ಜಿತೇಂದ್ರ ಸಿಂಗ್

June 14, 2026

ಬನ್ನೇರುಘಟ್ಟ ಜೈವಿಕ ಉದ್ಯಾನವನ: ದಕ್ಷಿಣ ಆಫ್ರಿಕಾದ ಚೀತಾಗಳ ದರ್ಶನ, ಜೊತೆಗೆ ಮುದ್ದಾದ ಜೆಬ್ರಾ, ನೀರುಕುದುರೆ ಮರಿಗಳ ಕಲರವ!

June 13, 2026

GBA News | ಬೆಂಗಳೂರು ಪಶ್ಚಿಮ ಮತ್ತು ದಕ್ಷಿಣ ಪಾಲಿಕೆ: ಪಾದಚಾರಿ ಮಾರ್ಗ, ತ್ಯಾಜ್ಯ ನಿರ್ವಹಣೆ ಹಾಗೂ ಮೂಲಸೌಕರ್ಯಕ್ಕೆ ಒತ್ತು

June 13, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group