Wednesday, April 29, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    KSDL News | ಕೆಎಸ್‌ಡಿಎಲ್ ಇತಿಹಾಸದಲ್ಲೇ ಅಭೂತಪೂರ್ವ ದಾಖಲೆ: ₹2,016 ಕೋಟಿ ವಹಿವಾಟು, ₹507 ಕೋಟಿ ಲಾಭ

    ಕೆ.ಎ.ಎಸ್. ಅಧಿಕಾರಿಗಳ ಸಂಘದ ಕಟ್ಟಡಕ್ಕೆ ಆಧುನಿಕ ಸ್ಪರ್ಶ: ₹15.23 ಕೋಟಿ ವೆಚ್ಚದಲ್ಲಿ ನವೀಕೃತಗೊಂಡ ಆಡಳಿತ ಸೌಧ

    ಶ್ವೇತಭವನದ ಔತಣಕೂಟದಲ್ಲಿ ಗುಂಡಿನ ಸದ್ದು: ಕೂದಲೆಳೆ ಅಂತರದಲ್ಲಿ ಪಾರಾದ ಡೊನಾಲ್ಡ್ ಟ್ರಂಪ್ ದಂಪತಿ

    BIG EXCLUSIVE| ಜನಗಣತಿ ಜಿದ್ದಾಜಿದ್ದಿ; ಜಿಬಿಎ ಅಧಿಕಾರಿಗಳು Vs ಸಚಿವಾಲಯ ಸಂಘ – ರಾಜ್ಯದ 43 ಇಲಾಖೆಗಳು ಬಂದ್ ಆಗುವ ಭೀತಿ!

    ಸರ್ಕಾರಿ ಆಸ್ಪತ್ರೆಗಳಲ್ಲಿ ಮೊಣಕಾಲು ಮತ್ತು ಸೊಂಟದ ಕೀಲು ಬದಲಿ ಶಸ್ತ್ರಚಿಕಿತ್ಸೆಗಳಿಗೆ ಬಲ: ರೋಗಿಗಳಿಗೆ ಮನೆಬಾಗಿಲಲ್ಲೇ ಗುಣಮಟ್ಟದ ಚಿಕಿತ್ಸೆ

    ಎಸ್‌ಎಸ್‌ಎಲ್‌ಸಿ ಫಲಿತಾಂಶ 2026: ಇತಿಹಾಸದಲ್ಲೇ ಮೊದಲು! 94.10% ರಷ್ಟು ಅಭೂತಪೂರ್ವ ಫಲಿತಾಂಶ; ಬಾಲಕಿಯರದ್ದೇ ಮೇಲುಗೈ

    KSIC News | ಮೈಸೂರು ರೇಷ್ಮೆ ಪರಂಪರೆಗೆ ಮಹಾ ಜಯ: ಕೆಎಸ್‌ಐಸಿ ಭೂಮಿ ಹಸ್ತಾಂತರ ಆದೇಶ ರದ್ದು

    IMPORTANT NEWS | ಭೂಪರಿವರ್ತನೆ ಇನ್ನು ಸುಲಭ: 30 ದಿನಗಳಲ್ಲಿ ವಿಲೇವಾರಿಯಾಗದಿದ್ದರೆ ‘ಪರಿಭಾವಿತ ಭೂಪರಿವರ್ತನೆ’  ಭಾಗ್ಯ

    Vidhana Soudha

    RDPR NEWS | ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಗ್ರಾಮೀಣ ಭಾಗದ ಶೈಕ್ಷಣಿಕ ಕಾರ್ಯಗಳಿಗೆ‌ 501 ಕೋಟಿ ರೂ. ಅನುದಾನ ಬಿಡುಗಡೆ

  • Bengaluru Focus

    BW SPECIAL | ಜಾತಿಗಣತಿ ಸಮೀಕ್ಷಕರಿಗೆ ಸಂಪೂರ್ಣವಾಗಿ ಸಿಕ್ಕಿಲ್ಲ ಗೌರವ ಧನ: ಈಗಿನ ಜನಗಣತಿ ಕಾರ್ಯಕ್ಕೆ ಬರಲು ಹಿಂದೇಟು? ಉಳಿದ ಅನುದಾನದ ಹಣ ಎಲ್ಲಿ ಹೋಯ್ತು?

    ಕೆ.ಎ.ಎಸ್. ಅಧಿಕಾರಿಗಳ ಸಂಘದ ಕಟ್ಟಡಕ್ಕೆ ಆಧುನಿಕ ಸ್ಪರ್ಶ: ₹15.23 ಕೋಟಿ ವೆಚ್ಚದಲ್ಲಿ ನವೀಕೃತಗೊಂಡ ಆಡಳಿತ ಸೌಧ

    ಬನ್ನೇರುಘಟ್ಟ, ಮುತ್ಯಾಲಮಡುವಿಗೆ ಕೆಎಸ್‌ಟಿಡಿಸಿ ಹವಾನಿಯಂತ್ರಿತ ಬಸ್ ಪ್ರವಾಸ ಆರಂಭ

    ಕರ್ನಾಟಕ ಕೆಎಎಸ್ ಅಧಿಕಾರಿಗಳ ಸಂಘದ ಕಟ್ಟಡದ ಸಾಂದರ್ಭಿಕ ಚಿತ್ರ. (ಕೃಪೆ : KASOA)

    ಕೆ.ಎ.ಎಸ್. ಅಧಿಕಾರಿಗಳ ಸಂಘದ ನವೀಕರಿಸಿದ ಕಟ್ಟಡ ಉದ್ಘಾಟನೆ: ಏ. 27ಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ

    Science Research News | ಧ್ಯಾನದಿಂದ ಮೆದುಳಿನ ಶಕ್ತಿ ವೃದ್ಧಿ: ವಯಸ್ಸಾಗುವಿಕೆಗೆ ಬ್ರೇಕ್ ಹಾಕಲಿದೆ ಐಐಎಸ್‌ಸಿ ಸಂಶೋಧನೆ!

    GBA News | ಬೆಂಗಳೂರು ದಕ್ಷಿಣ ಪಾಲಿಕೆ ಅಭಿವೃದ್ಧಿಗೆ ತಜ್ಞರ ಸಲಹಾ ಸಮಿತಿ ರಚನೆ: ಆಯುಕ್ತ ಕೆ.ಎನ್. ರಮೇಶ್

    ಬೆಂಗಳೂರಿನ ಅಭಿವೃದ್ಧಿಗೆ ‘Airport’ ಅಡ್ಡಿ: ಕಟ್ಟಡಗಳ ಎತ್ತರ ನಿರ್ಬಂಧ ಸಡಿಲಿಕೆಗೆ ರಾಜನಾಥ್ ಸಿಂಗ್‌ಗೆ ಡಿ.ಕೆ. ಶಿವಕುಮಾರ್ ಮನವಿ

    GBA News | ಪಶ್ಚಿಮ ಬೆಂಗಳೂರಿಗರಿಗೆ ಸಿಹಿ ಸುದ್ದಿ: ಗೋವಿಂದರಾಜನಗರದಲ್ಲಿ ಶೀಘ್ರವೇ 100 ಹಾಸಿಗೆಗಳ ‘ಜಯದೇವ’ ಘಟಕ ಉದ್ಘಾಟನೆ

    ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ‘ಜನಿವಾರ’ ವಿವಾದ: ವಿದ್ಯಾರ್ಥಿಗಳ ಧಾರ್ಮಿಕ ಹಕ್ಕಿಗೆ ಚ್ಯುತಿ? ಮೂವರು ಸಸ್ಪೆಂಡ್!!

  • Public interest
  • BW Special
  • Life Style
  • Photo Gallery
  • Video
No Result
View All Result

Home Bengaluru Focus

BW SPECIAL | BBMP KANNADA | ಬಿಬಿಎಂಪಿ ಕೌನ್ಸಿಲ್ ಕನ್ ಫ್ಯೂಸ್ ನಿರ್ಣಯ : ಹೈರಾಣಾದ ಕನ್ನಡದ ಶಾಲೆಗಳು – ಕನ್ನಡದ ಸಂಘ ಸಂಸ್ಥೆಗಳು

“ಪ್ರಸಕ್ತ ಗುತ್ತಿಗೆ ದರದ ಶೇ.10ರಷ್ಟು ಶುಲ್ಕ ಹೆಚ್ಚಳ” ಎಂಬ ಪದದ ಬದಲಿಗೆ “ಪ್ರಸಕ್ತ ಮಾರ್ಗಸೂಚಿ ದರದ ಶೇ.10ರಷ್ಟು” ಎಂಬ ಶಬ್ದ ಸೇರ್ಪಡೆಯಿಂದ ಲಕ್ಷ ಲಕ್ಷ ರೂ. ಗುತ್ತಿಗೆ ಮೊತ್ತ ಕಟ್ಟಬೇಕಿದ್ದ ಕನ್ನಡ ಸಂಸ್ಥೆಗಳು | ತಿದ್ದುಪಡಿ ನಿರ್ಣಯ ಕೈಗೊಳ್ಳಲು ಕನ್ನಡ ಹೋರಾಟಗಾರರು- ಜನಪ್ರತಿನಿಧಿಗಳಿಂದ ಒತ್ತಡ | ತಪ್ಪು ಸರಿಪಡಿಸಲು ಸರ್ಕಸ್

by Bengaluru Wire Desk
January 12, 2023
in Bengaluru Focus, BW Special
Reading Time: 2 mins read
0
ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಬೆಂಗಳೂರು, (www.bengaluruwire.com) : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಸದಸ್ಯರ ಕೊನೆಯ ಕೌನ್ಸಿಲ್ ಸಭೆಯಲ್ಲಿ ಕೈಗೊಂಡ ಒಂದು ಎಡವಟ್ಟು ಹಾಗೂ ಕಣ್ ತಪ್ಪಿನ ನಿರ್ಣಯದಿಂದಾಗಿ ಬೆಂಗಳೂರಿನ ಪಾಲಿಕೆ ನಿವೇಶನದ ಗುತ್ತಿಗೆ ಪಡೆದ  ಕನ್ನಡ ಸಂಘ ಸಂಸ್ಥೆಗಳು, ಕನ್ನಡ ಶಾಲೆಗಳು ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ದುಬಾರಿ ಗುತ್ತಿಗೆ ಶುಲ್ಕ ಕಟ್ಟುವ ಅನಿವಾರ್ಯ ಪರಿಸ್ಥಿತಿಗೆ ಬಂದು ತಲುಪಿದ ವಿಷಯ ತಡವಾಗಿ ಬೆಳಕಿಗೆ ಬಂದಿದೆ.

 ಕನ್ನಡ ಭಾಷೆ, ನಾಡು, ನುಡಿ, ನೆಲದ ಸಂಸ್ಕೃತಿ ಅಭಿವೃದ್ಧಿಗೆ ಕಟಿಬದ್ಧವಾಗಿರುವ ಕನ್ನಡ ಸಂಘ ಸಂಸ್ಥೆಗಳು ಹಾಗೂ ಕನ್ನಡ ಶಾಲೆಗಳಿಗೆ ಗುತ್ತಿಗೆ ನೀಡಿರುವ ನಿವೇಶನ, ಕಟ್ಟಡಗಳ ವಾರ್ಷಿಕ ಗುತ್ತಿಗೆ ಶುಲ್ಕವನ್ನು ಪ್ರಸ್ತುತ ಮಾರುಕಟ್ಟೆ ದರದ ಶೇ.2ರಷ್ಟು ನಿಗಧಿಪಡಿಸಬೇಕೆಂಬ ಬಿಬಿಎಂಪಿ ಕೌನ್ಸಿಲ್ ನಿರ್ಣಯಕ್ಕೆ ಕನ್ನಡ ಸಂಘ ಸಂಸ್ಥೆಗಳ ತೀವ್ರ ಒತ್ತಡಕ್ಕೆ ಪಾಲಿಕೆಯು ಮಣಿದಿದ್ದು, ಪ್ರಸಕ್ತ ನೀಡುತ್ತಿರುವ ದರಕ್ಕಿಂತ ಶೇ.10ರಷ್ಟು ಶುಲ್ಕ ಹೆಚ್ಚಳ ಮಾಡಿ ಗುತ್ತಿಗೆ ನವೀಕರಣ ಮಾಡಿಕೊಡುವ ಬಗ್ಗೆ ಸದ್ಯದಲ್ಲೇ ತಿದ್ದುಪಡಿ ನಿರ್ಣಯ ಕೈಗೊಳ್ಳಲಿದೆ.

ಈ ಕುರಿತ ಪ್ರಸ್ತಾವಿತ ಕಡತವೀಗ ಬಿಬಿಎಂಪಿ ಆಸ್ತಿ ವಿಭಾಗದಿಂದ, ಪಾಲಿಕೆ ಮುಖ್ಯ ಆಯುಕ್ತರ ಕಚೇರಿಗೆ ರವಾನೆಯಾಗಿದ್ದು, ಮುಖ್ಯ ಆಯುಕ್ತರು ಈ ಕಡತಕ್ಕೆ ಸದ್ಯದಲ್ಲೇ ಅನುಮೋದನೆ ನೀಡಿ, ಆಡಳಿತಗಾರರಾದ ರಾಕೇಶ್ ಸಿಂಗ್ ಈ ಸಂಬಂಧ ಕೌನ್ಸಿಲ್ ನಿರ್ಣಯ ಕೈಗೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಪಾಲಿಕೆ ಆಡಳಿತಗಾರರ ಮುಂದೆ ನಿರ್ಣಯಕ್ಕಾಗಿ ಮಂಡಿಸಿದ ಟಿಪ್ಪಣಿ ದಾಖಲೆ

ಬೆಂಗಳೂರಿನ ಬಿಬಿಎಂಪಿ ವ್ಯಾಪ್ತಿಯಲ್ಲಿ ಕನ್ನಡ ನಾಡು, ನುಡಿ- ಸಂಸ್ಕೃತಿಯ ಅಭಿವೃದ್ಧಿಗಾಗಿ ಮೀಸಲಿರುವ ಸಂಘ ಸಂಸ್ಥೆಗಳು, ಹಾಗೂ ಕನ್ನಡ ಶಾಲೆಗಳಿಗೆ 5 ರಿಂದ 30 ವರ್ಷದ ವರೆಗೆ ಪಾಲಿಕೆಯು ತನ್ನ ನಿವೇಶನ, ಕಟ್ಟಡಗಳನ್ನು ಗುತ್ತಿಗೆಗೆ ನೀಡಲಾಗಿತ್ತು. ಕನ್ನಡ ಸಾಹಿತ್ಯ ಪರಿಷತ್ತು, ಗುಟ್ಟಹಳ್ಳಿಯಲ್ಲಿರುವ ಉದಯಭಾನು ಕಲಾಸಂಘ, ಬಸವನಗುಡಿಯಲ್ಲಿರುವ ಬಿಎಂಶ್ರೀ ಪ್ರತಿಷ್ಠಾನ, ಕಟ್ಟೆ ಬಳಗ, ಮನೋನಂದನ ಸೇರಿದಂತೆ ಹಲವು ಸಂಘಸಂಸ್ಥೆಗಳು, ಕನ್ನಡ ಶಾಲೆಗಳು ಸೇರಿದಂತೆ ಹತ್ತು ಹಲವು ಆಸ್ತಿಗಳನ್ನು ಪಾಲಿಕೆಯು ಗುತ್ತಿಗೆ ಆಧಾರದ ಮೇಲೆ ಹಸ್ತಾಂತರಿಸಿದ್ದವು. ಈ ಯಾವುದೇ ಸಂಸ್ಥೆಗಳು ಲಾಭದಾಯಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿಲ್ಲ.

ಕನ್ನಡ ಸಂಘ ಸಂಸ್ಥೆ- ಶಾಲೆಗಳಿಗೆ ಮಾರಕವಾಗಿದ್ದ ಕೌನ್ಸಿಲ್ ಕಣ್ ತಪ್ಪಿನ ನಿರ್ಣಯ :

ಬಿಬಿಎಂಪಿಯಲ್ಲಿ ಈ ಹಿಂದೆ 18-08-2020ರ ಪಾಲಿಕೆ ಸಭೆಯಲ್ಲಿ “ಕನ್ನಡ ಸಂಘಸಂಸ್ಥೆಗಳು, ಕನ್ನಡ ಶಾಲೆಗಳು ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ನಿವೇಶನ ಗುತ್ತಿಗೆ ಅವಧಿ ಮುಕ್ತಾಯಗೊಂಡು ಗುತ್ತಿಗೆ ನವೀಕರಣಕ್ಕೆ ಬಂದಾಗ ಯಾವುದೇ ಪರಭಾರೆ ಮಾಡದಂತೆ ಷರತ್ತು ವಿಧಿಸಿ, ಅದೇ ಸಂಸ್ಥೆಗಳಿಗೆ ಗುತ್ತಿಗೆ ನವೀಕರಣ ಮಾಡಲು ಆಯುಕ್ತರು ಅಗತ್ಯ ಕ್ರಮವಹಿಸುವುದು” ಎಂದು ಸಭೆ (ವಿಷಯ ಸಂಖ್ಯೆ : 18(230)/2020-21) ಸರ್ವಾನುಮತದಿಂದ ತೀರ್ಮಾನಿಸಿತ್ತು.

ಆದರೆ ಇದೇ ವಿಷಯವಾಗಿ 8ನೇ ಸೆಪ್ಟೆಂಬರ್ 2020ರ ರಂದು ಪಾಲಿಕೆ ಸದಸ್ಯರ ಕೊನೆಯ ಕೌನ್ಸಿಲ್ ಸಭೆಯಲ್ಲಿ (ವಿಷಯ ಸಂಖ್ಯೆ : 16(279)/2020-21), ಕನ್ನಡ ಸಂಘಸಂಸ್ಥೆಗಳು, ಕನ್ನಡ ಶಾಲೆಗಳ ಗುತ್ತಿಗೆ ನವೀಕರಣ ಸಂದರ್ಭದಲ್ಲಿ “ಪ್ರಸ್ತುತ ನೀಡುತ್ತಿರುವ ದರಕ್ಕಿಂತ ಶೇ.10ರಷ್ಟು ಹೆಚ್ಚಿನ ಶುಲ್ಕ ವಿಧಿಸುವಂತೆ” ಎಂದು ನಿರ್ಣಯ ಕೈಗೊಳ್ಳುವ ಬದಲು ಗೊಂದಲಕ್ಕೊಳಗಾಗಿ ಆತುರಾತುರವಾಗಿ “ಸರ್ಕಾರದ ಮಾರ್ಗಸೂಚಿ ದರದ ವಾರ್ಷಿಕ ಶೇ.10ರಷ್ಟು” (Present Government Guidence Value 10%) ಶುಲ್ಕ ವಿಧಿಸಿ ಗುತ್ತಿಗೆ ನವೀಕರಣ ಮಾಡಿಕೊಡುವಂತೆ ಎಂದು ತಪ್ಪಾಗಿ ಬಿಬಿಎಂಪಿ ಕೌನ್ಸಿಲ್‌ ನಿರ್ಣಯ ಕೈಗೊಂಡಿತ್ತು. ಇದಕ್ಕೆ ಆಗ ಮಾಜಿ ಮೇಯರ್ ಗಳು ಹಾಗೂ ಹಲವು ಕನ್ನಡ ಪರ ಸಂಘ-ಸಂಸ್ಥೆಗಳಿಂದ ತೀವ್ರ ವಿರೋಧ ಕಂಡು ಬಂದಿತ್ತು.

ಬಿಬಿಎಂಪಿ ಆಡಳಿತಗಾರರ 21-10-2021ರ ಕೌನ್ಸಿಲ್ ನಿರ್ಣಯ

ಬಳಿಕ ಆಡಳಿತಗಾರರ ನೇತೃತ್ವದ ಕೌನ್ಸಿಲ್ ಸಭೆಯು 2021ರ ಇಸವಿಯ ಅ.29ರಂದು  ( ವಿಷಯ ಸಂಖ್ಯೆ : 344/2021-22) ಕರೋನಾ ಸಾಂಕ್ರಾಮಿಕ ರೋಗದಿಂದ ಜರ್ಜರಿತವಾಗಿದ್ದ ಪಾಲಿಕೆಗೆ ಆರ್ಥಿಕ ಸಂಪನ್ಮೂಲ ಕ್ರೋಢೀಕರಣದ ದೃಷ್ಟಿಯಿಂದ, ಪಾಲಿಕೆಯ ಗುತ್ತಿಗೆ ಅವಧಿ ಮುಗಿದ ನಿವೇಶನಗಳ ನವೀಕರಣ ಸಂದರ್ಭದಲ್ಲಿ ಯಾವುದೇ ಷರತ್ತು ವಿಧಿಸದೆ “ಪ್ರಸಕ್ತ ಮಾರುಕಟ್ಟೆ ಬೆಲೆಯ ಶೇ. 2ರಷ್ಟು ಗುತ್ತಿಗೆ ಶುಲ್ಕ” (Present Market Rate 2%) ನಿಗದಿಪಡಿಸುವಂತೆ ನಿರ್ಣಯ ಕೈಗೊಂಡು ಸರ್ಕಾರಕ್ಕೆ ಕಳುಹಿಸಿಕೊಟ್ಟಿದ್ದರು. ಇವರೆಡೂ ಕೌನ್ಸಿಲ್ ನಿರ್ಣಯಗಳು, ಯಾವುದೇ ಲಾಭದ ಆಕಾಂಕ್ಷೆಯಿಲ್ಲದೆ ನಡೆಯುತ್ತಿರುವ ಕನ್ನಡ ಶಾಲೆಗಳು ಹಾಗೂ ಕನ್ನಡ ಸಂಘಸಂಸ್ಥೆಗಳಿಗೆ ಇವು ಮಾರಕವಾದ ನಿರ್ಣಯಗಳಾಗಿದ್ದವು.

“ಬಿಬಿಎಂಪಿಯ ಕೌನ್ಸಿಲ್ ಸಭೆಯಲ್ಲಿ ಕನ್ನಡದ ಭಾಷೆ, ಸಂಸ್ಕೃತಿ, ಶಾಲೆಗಳ ವಿಷಯದಲ್ಲಿ ಇಂತಹ ಗೊಂದಲಕಾರಿ ಹಾಗೂ ಅವೈಜ್ಞಾನಿಕ ನಿರ್ಧಾರದಿಂದ ಪಾಲಿಕೆಯ ನಿವೇಶನದಲ್ಲಿ ಗುತ್ತಿಗೆ ಪಡೆದ ಕನ್ನಡ ಸಂಘ ಸಂಸ್ಥೆಗಳು ಅನಿವಾರ್ಯವಾಗಿ ದುಬಾರಿ ಮೊತ್ತದ ಗುತ್ತಿಗೆ ಮೊತ್ತ ಪಾವತಿಸುವ ಅನಿವಾರ್ಯತೆ ಸಿಲುಕಿದ್ದು ನಿಜಕ್ಕೂ ದುರಂತ. ಈ ಕೂಡಲೇ ಆಗಿರುವ ಅನ್ಯಾಯವನ್ನು ಬಿಬಿಎಂಪಿ ಹಾಗೂ ರಾಜ್ಯ ಸರ್ಕಾರ ಸರಿಪಡಿಸಬೇಕಿದೆ. ಇಲ್ಲವಾದಲ್ಲಿ ಈ ಬಗ್ಗೆ ಉಗ್ರ ಹೋರಾಟ ಕೈಗೊಳ್ಳಲಾಗುವುದು.”

–              ಪ್ರವೀಣ್ ಶೆಟ್ಟಿ, ರಾಜ್ಯಾಧ್ಯಕ್ಷರು, ಕರ್ನಾಟಕ ರಕ್ಷಣಾ ವೇದಿಕೆ

ಮಾರುಕಟ್ಟೆ ಮೌಲ್ಯ ಆಧರಿಸಿದರೆ 500 ರೂ. ಕಟ್ಟುವ ಕಡೆ 6 ಲಕ್ಷ ಕಟ್ಟಬೇಕಿತ್ತು :

ಈ ಹಿಂದೆ ಕನ್ನಡ ಶಾಲೆಗಳು, ಕನ್ನಡ ಸಂಘ ಸಂಸ್ಥೆಗಳು ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರಕ್ಕೆ ನೀಡಿರುವ ನಿವೇಶನಗಳಿಗೆ ವಾರ್ಷಿಕ ಗುತ್ತಿಗೆ ಶುಲ್ಕ 500 ರೂಪಾಯಿ, 2,000 ರೂ., 3,000 ರೂ. ಈ ರೀತಿ ಅತಿ ಕಡಿಮೆ ಶುಲ್ಕವಿತ್ತು. ಆದರೆ ಅ.29ರಂದು ಪಾಲಿಕೆ ಆಡಳಿತಗಾರರು, ಸಂಬಂಧಿಸಿದ ಪಾಲಿಕೆ ಸ್ವತ್ತಿನ ಪ್ರಸಕ್ತ ಮಾರುಕಟ್ಟೆ ಮೌಲ್ಯದ ಶೇ.2ರಷ್ಟು ಗುತ್ತಿಗೆ ಮೊತ್ತವನ್ನು ಕಟ್ಟುವಂತೆ ನಿರ್ಣಯ ಕೈಗೊಂಡಿದ್ದರು. ಈ ನಿರ್ಣಯದ ಆಧರಿಸಿ ಉದಾಹರಣೆ ಮೂಲಕ ಹೇಳುವುದಾದರೆ, ಈ ಹಿಂದೆ ಕನ್ನಡ ಸಂಘಸಂಸ್ಥೆಗಳು, ಕನ್ನಡ ಶಾಲೆಗಳು 500 ರೂ. ವಾರ್ಷಿಕ ಗುತ್ತಿಗೆ ಶುಲ್ಕ ಕಟ್ಟುವ ಕಡೆ ಕನಿಷ್ಠ 6 ಲಕ್ಷ ರೂ. ಹಣ ಕಟ್ಟಬೇಕಾದ ಸಂದರ್ಭ ಎದುರಾಗುತ್ತಿತ್ತು.

ರಾ.ನಂ.ಚಂದ್ರಶೇಖರ್, ಕನ್ನಡದ ಹಿರಿಯ ಹೋರಾಟಗಾರ

“ವಾಣಿಜ್ಯ ಉದ್ದೇಶಕ್ಕಾಗಿ ಬಿಬಿಎಂಪಿಯಿಂದ ಗುತ್ತಿಗೆ ಪಡೆದ ಸಂಸ್ಥೆ ಅಥವಾ ವ್ಯಕ್ತಿಗಳಿಗೆ ಮಾರುಕಟ್ಟೆ ಮೌಲ್ಯದ ಆಧಾರದ ಮೇಲೆ ವಾರ್ಷಿಕ ಗುತ್ತಿಗೆ ಮೊತ್ತ ನಿಗಧಿ ಮಾಡಲಿ. ಆದರೆ ನಿಜವಾದ ಕನ್ನಡ ಸಂಘಗಳು, ಸಂಘಟನೆ, ಶಾಲೆಗಳಿಗೆ ಪ್ರಸ್ತುತ ಪಾವತಿಸುತ್ತಿರುವ ದರದಲ್ಲೇ ಗುತ್ತಿಗೆ ಮೊತ್ತ ನವೀಕರಣ ಮಾಡಬೇಕು. ಅಲ್ಲದೆ ಇಂತಹ ಲಾಭರಹಿತ ಉದ್ದೇಶದ ಸಂಸ್ಥೆಗಳಿಗೆ ವಾರ್ಷಿಕ ಗುತ್ತಿಗೆ ನವೀಕರಣದ ಬದಲು ಹತ್ತು ವರ್ಷಕೊಮ್ಮೆ ಗುತ್ತಿಗೆ ನವೀಕರಣ ಮಾಡುವ ಸೌಲಭ್ಯ ಕಲ್ಪಿಸಿದರೆ ಉತ್ತಮ. ಕೌನ್ಸಿಲ್ ಸಭೆಯು ಇಂತಹ ನಿರ್ಣಯ ಕೈಗೊಳ್ಳುವಾಗ ಸಾರ್ವಜನಿಕರ ಅಭಿಪ್ರಾಯ ಪಡೆಯಬೇಕಿತ್ತು.”

– ರಾ.ನಂ.ಚಂದ್ರಶೇಖರ್, ಕನ್ನಡದ ಹಿರಿಯ ಹೋರಾಟಗಾರರು

  ಬಿಬಿಎಂಪಿ ಕೌನ್ಸಿಲ್ ನಿರ್ಣಯಕ್ಕೆ ತಿದ್ದುಪಡಿ ಮಾಡಲು ಜನಪ್ರತಿನಿಧಿಗಳಿಂದ ಒತ್ತಡ :

ಹೀಗಾಗಿ ಈ ನಿರ್ಣಯಕ್ಕೆ ತಿದ್ದುಪಡಿ ನಿರ್ಣಯ ಕೈಗೊಳ್ಳಲು ನಿರ್ದೇಶಿಸಬೇಕು ಎಂದು ಮಾಜಿ ಮೇಯರ್ ಗಳಾದ ಕಟ್ಟೆ ಸತ್ಯ ನಾರಾಯಣ, ಎಸ್.ಕೆ.ನಟರಾಜ್, ಮಾಜಿ ಉಪ ಮೇಯರ್ ಎಸ್.ಹರೀಶ್, ನಗರದ ಶಾಸಕರು, ಸಚಿವರು ಸೇರಿದಂತೆ 16 ಮಂದಿ ಜನಪ್ರತಿನಿಧಿಗಳು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಪತ್ರ ನೀಡಿದ್ದರು. ಆ ಪತ್ರದಲ್ಲಿ ಕನ್ನಡ ಭಾಷೆಯ ಬೆಳವಣಿಗೆಗಾಗಿ ಶ್ರಮಿಸುವ ಸಂಸ್ಥೆಗಳಿಗೆ ಈಗಾಗಲೇ ಗುತ್ತಿಗೆ ನೀಡಿರುವ ಮೊತ್ತಕ್ಕೆ ಶೇ.10ರಷ್ಟು ಹೆಚ್ಚುವರಿಯಾಗಿ ಪಾವತಿಸಿಕೊಂಡು ಗುತ್ತಿಗೆ ಅವಧಿ ನವೀಕರಿಸುವಂತೆ ಕೋರಿದ್ದರು. ಈ ಪತ್ರ ಆಧರಿಸಿ ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್, ಈ ಹಿಂದೆ ಕೈಗೊಂಡ ಕೌನ್ಸಿಲ್ ನಿರ್ಣಯದ ಬಗ್ಗೆ ತಿದ್ದುಪಡಿ ನಿರ್ಣಯದ ಬಗ್ಗೆ ಸರ್ಕಾರಕ್ಕೆ ಸೂಕ್ತ ಪ್ರಸ್ತಾವನೆ ಸಲ್ಲಿಸಲು ನಗರಾಭಿವೃದ್ಧಿ ಇಲಾಖೆಗೆ 10-01-2022ರಂದು ಟಿಪ್ಪಣಿ ಪತ್ರ ಬರೆದು ಸೂಚಿಸಿದ್ದರು. ಈ ಹಿನ್ನಲೆಯಲ್ಲಿ ಬಿಬಿಎಂಪಿ ಆಸ್ತಿವಿಭಾಗದಿಂದ ಕಡತ ಸಿದ್ಧವಾಗಿ, ಬಿಬಿಎಂಪಿ ಆಯುಕ್ತರ ಮೂಲಕ ಪಾಲಿಕೆ ಆಡಳಿತಗಾರರಾದ ರಾಕೇಶ್ ಸಿಂಗ್ ಕಚೇರಿಗೆ ಬರಬೇಕಿದೆ.

“ಕನ್ನಡ ಸಾಹಿತ್ಯ ಪರಿಷತ್ತು, ಬಿ.ಎಂ.ಶ್ರೀ ಪ್ರತಿಷ್ಠಾನ, ಉದಯಭಾನು ಕಲಾಸಂಘ ಸೇರಿದಂತೆ ನಾನಾ ಕನ್ನಡ ಸಂಘ ಸಂಸ್ಥೆಗಳು, ಕನ್ನಡದ ಶಾಲೆಗಳಿಗೆ ಈಗಾಗಲೇ ಗುತ್ತಿಗೆಗೆ ನೀಡಿರುವ ಮೊತ್ತಕ್ಕೆ ಶೇ.10ರಷ್ಟು ಹೆಚ್ಚುವರಿಯಾಗಿ ಹಣ ಪಾವತಿಸಿಕೊಂಡು ಗುತ್ತಿಗೆ ನವೀಕರಣ ಮಾಡಿಕೊಡುವ ಬಗ್ಗೆ ಮುಖ್ಯಂತ್ರಿಗಳಿಗೆ ಮಾಜಿ ಮೇಯರ್ ಗಳು, ಉಪಮೇಯರ್, ಶಾಸಕರು, ಸಚಿವರು ಸೇರಿದಂತೆ 16 ಜನರು ಮನವಿಪತ್ರ ನೀಡಿದ್ದೇವೆ. ನಗರಾಭಿವೃದ್ಧಿ ಇಲಾಖೆಯಿಂದ ಬಿಬಿಎಂಪಿಗೆ ಈ ಸಂಬಂಧ ಸೂಕ್ತ ಕ್ರಮಕ್ಕಾಗಿ ಪತ್ರ ಬರೆದಿದೆ. ಸದ್ಯದಲ್ಲೇ ನಮ್ಮ ಬೇಡಿಕೆಗೆ ಬಿಬಿಎಂಪಿ ಆಡಳಿತಗಾರರು ಸ್ಪಂದಿಸುವುದಾಗಿ ಭರವಸೆ ನೀಡಿದ್ದಾರೆ.”

– ಕಟ್ಟೆ ಸತ್ಯನಾರಾಯಣ, ಬಿಬಿಎಂಪಿ ಮಾಜಿ ಮೇಯರ್

ಒಟ್ಟಿನಲ್ಲಿ ಬೆಂಗಳೂರಿನಲ್ಲಿ ಕನ್ನಡ ಭಾಷೆಯು ಉಸಿರು ಕಟ್ಟುತ್ತಿರುವ ಸಂದರ್ಭದಲ್ಲಿ ಕನ್ನಡ ಭಾಷೆ, ಸಂಸ್ಕೃತಿಯನ್ನು ಉಳಿಸಿ ಬೆಳಸುವ ಕೆಲಸದಲ್ಲಿ ನಿರತರಾಗಿರುವ ಕನ್ನಡ ಸಂಘಸಂಸ್ಥೆಗಳು, ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕನ್ನಡ ಶಾಲೆಗಳ ನಿವೇಶನದ ಗುತ್ತಿಗೆ ಮೊತ್ತ ನಿಗಧಿಯಲ್ಲಿ ಎದ್ದಿರುವ ಗೊಂದಲಗಳಿಗೆ ಶೀಘ್ರದಲ್ಲೇ ತೆರೆ ಬೀಳುವ ನಿರೀಕ್ಷೆಯಿದೆ. ಈಗಾಗಲೇ ಗುತ್ತಿಗೆ ನೀಡಿರುವ ಮೊತ್ತಕ್ಕೆ ಶೇ.10ರಷ್ಟು ಹೆಚ್ಚುವರಿಯಾಗಿ ಪಾವತಿಸಿಕೊಂಡು ಗುತ್ತಿಗೆ ನವೀಕರಿಸುವ ನಿರ್ಧಾರ ನಗರದಲ್ಲಿರುವ ಕನ್ನಡದ ಸಂಘ ಸಂಸ್ಥೆಗಳಿಗೆ ನಿಜಕ್ಕೂ ಆವಶ್ಯಕವಾಗಿದೆ.

WhatsApp Join our WhatsApp Channel
Previous Post

Farmers IP SETS Get Solar Power | ರೈತರಿಗೆ ಹಗಲಿನ ವೇಳೆ ಗುಣಮಟ್ಟದ ಸೋಲಾರ್ ಪವರ್ – ಬೆಸ್ಕಾಂ ನೂತನ ಯೋಜನೆಗೆ ಸದ್ಯದಲ್ಲೇ ಟೆಂಡರ್

Next Post

Illegal Advt. In Bangalore | ಬಿಬಿಎಂಪಿ ವ್ಯಾಪ್ತಿಯಲ್ಲಿ ಅನಧಿಕೃತ ಜಾಹೀರಾತು ತೆರವು ನಿರಂತರ : ಮುಖ್ಯ ಆಯುಕ್ತ ಗೌರವ್ ಗುಪ್ತಾ

Next Post

Illegal Advt. In Bangalore | ಬಿಬಿಎಂಪಿ ವ್ಯಾಪ್ತಿಯಲ್ಲಿ ಅನಧಿಕೃತ ಜಾಹೀರಾತು ತೆರವು ನಿರಂತರ : ಮುಖ್ಯ ಆಯುಕ್ತ ಗೌರವ್ ಗುಪ್ತಾ

ಬೆಂಗಳೂರು ವೈರ್ ವರದಿ ಪರಿಣಾಮ

BW IMPACT | ರಾಜ್ಯಾದ್ಯಂತ ಹದ್ದುಬಸ್ತು ಶುಲ್ಕವನ್ನು ಇಳಿಕೆ ಮಾಡಿದ ಕಂದಾಯ ಇಲಾಖೆ

Please login to join discussion

Like Us on Facebook

Follow Us on Twitter

Recent News

KSDL News | ಕೆಎಸ್‌ಡಿಎಲ್ ಇತಿಹಾಸದಲ್ಲೇ ಅಭೂತಪೂರ್ವ ದಾಖಲೆ: ₹2,016 ಕೋಟಿ ವಹಿವಾಟು, ₹507 ಕೋಟಿ ಲಾಭ

April 28, 2026

BW SPECIAL | ಜಾತಿಗಣತಿ ಸಮೀಕ್ಷಕರಿಗೆ ಸಂಪೂರ್ಣವಾಗಿ ಸಿಕ್ಕಿಲ್ಲ ಗೌರವ ಧನ: ಈಗಿನ ಜನಗಣತಿ ಕಾರ್ಯಕ್ಕೆ ಬರಲು ಹಿಂದೇಟು? ಉಳಿದ ಅನುದಾನದ ಹಣ ಎಲ್ಲಿ ಹೋಯ್ತು?

April 28, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

KSDL News | ಕೆಎಸ್‌ಡಿಎಲ್ ಇತಿಹಾಸದಲ್ಲೇ ಅಭೂತಪೂರ್ವ ದಾಖಲೆ: ₹2,016 ಕೋಟಿ ವಹಿವಾಟು, ₹507 ಕೋಟಿ ಲಾಭ

April 28, 2026

BW SPECIAL | ಜಾತಿಗಣತಿ ಸಮೀಕ್ಷಕರಿಗೆ ಸಂಪೂರ್ಣವಾಗಿ ಸಿಕ್ಕಿಲ್ಲ ಗೌರವ ಧನ: ಈಗಿನ ಜನಗಣತಿ ಕಾರ್ಯಕ್ಕೆ ಬರಲು ಹಿಂದೇಟು? ಉಳಿದ ಅನುದಾನದ ಹಣ ಎಲ್ಲಿ ಹೋಯ್ತು?

April 28, 2026

ಕೆ.ಎ.ಎಸ್. ಅಧಿಕಾರಿಗಳ ಸಂಘದ ಕಟ್ಟಡಕ್ಕೆ ಆಧುನಿಕ ಸ್ಪರ್ಶ: ₹15.23 ಕೋಟಿ ವೆಚ್ಚದಲ್ಲಿ ನವೀಕೃತಗೊಂಡ ಆಡಳಿತ ಸೌಧ

April 27, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group