Wednesday, August 5, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    Science News | ಪ್ರೊ. ಅನ್ನಪೂರ್ಣಿ ಸುಬ್ರಮಣ್ಯಂಗೆ ‘ಕಾಸ್ಪಾರ್ ವಿಕ್ರಮ್ ಸಾರಾಭಾಯ್’ ಪ್ರಶಸ್ತಿ: ಈ ಗೌರವ ಪಡೆದ ಮೊದಲ ಭಾರತೀಯ ಮಹಿಳೆ

    ರಾಜ್ಯದಲ್ಲಿ ಅತಿವೃಷ್ಟಿ ಹಾಗೂ ಬರ ಪರಿಸ್ಥಿತಿ: ಪರಿಶೀಲನೆಗೆ ಜಿಲ್ಲಾವಾರು ಸಚಿವರ ನೇಮಕ

    ಡಿ.ಕೆ. ಶಿವಕುಮಾರ್ ಸಂಪುಟ ವಿಸ್ತರಣೆ: ಇಂದು 20 ನೂತನ ಸಚಿವರ ಪ್ರಮಾಣ ವಚನ, ಇಲ್ಲಿದೆ ಎಐಸಿಸಿ ಅಧಿಕೃತ ಪಟ್ಟಿ

    ಕರುನಾಡಲ್ಲಿ ವರುಣನ ಆರ್ಭಟ: ಭರ್ತಿಯಾಗುತ್ತಿರುವ ಜಲಾಶಯಗಳು, ಮೈದುಂಬಿ ಹರಿಯುತ್ತಿರುವ ನದಿಗಳು

    BDA News | ಬಿಡಿಎ ಲಂಚಾವತಾರ: ಎನ್‌ಪಿಕೆಎಲ್ ರೈತರಿಗೆ ನಿವೇಶನ ನೀಡಲು ಲಂಚ ಕೇಳಿದ ಎಇಇ, ನೋಟಿಸ್ ಜಾರಿ

    KEA ಗ್ರಾಮ ಆಡಳಿತ ಅಧಿಕಾರಿ ಹುದ್ದೆ: ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ

    ​ಪೇಪರ್ ಲೀಕ್ ತಡೆಗೆ ಹೊಸ ಅಸ್ತ್ರ: ಸಂಸತ್ತಿನಲ್ಲಿ ಅಂಗೀಕಾರಗೊಂಡಿತು ಕಠಿಣ ವಿಧೇಯಕ

    ಆ. 15ರಿಂದ ಸ್ವಿಗ್ಗಿ ಸೇವೆ ಸ್ಥಗಿತ? ಆನ್‌ಲೈನ್ ಆಹಾರ ನೀಡಿಕೆ ಸಂಸ್ಥೆ ವಿರುದ್ಧ ಬೆಂಗಳೂರು ಹೋಟೆಲುಗಳ ಸಂಘದ ಖಡಕ್ ಎಚ್ಚರಿಕೆ

    1200 ಬೋರ್‌ವೆಲ್‌ಗಳಿಗೆ ಮರುಜೀವ: ತಮಿಳುನಾಡು ಐಎಎಸ್ ಅಧಿಕಾರಿಗೆ ನಟ ಮಾಧವನ್ ಸಲಾಂ

  • Bengaluru Focus

    Science News | ಪ್ರೊ. ಅನ್ನಪೂರ್ಣಿ ಸುಬ್ರಮಣ್ಯಂಗೆ ‘ಕಾಸ್ಪಾರ್ ವಿಕ್ರಮ್ ಸಾರಾಭಾಯ್’ ಪ್ರಶಸ್ತಿ: ಈ ಗೌರವ ಪಡೆದ ಮೊದಲ ಭಾರತೀಯ ಮಹಿಳೆ

    ಸರ್ಕಾರಕ್ಕೆ 1 ಕೋಟಿ ರೂ. ಡಿವಿಡೆಂಡ್ ನೀಡಿದ ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್

    GBA News | ಶಾಂತಿನಗರ ಇಇ ಕಚೇರಿಯಲ್ಲಿ 9 ಕೋಟಿ ರೂ.ಗಳ ಕಂಪ್ಯೂಟರ್ ಬಿಲ್ ಹಗರಣ: ಲೋಕಾಯುಕ್ತಕ್ಕೆ ದೂರು

    ಗಾಂಧಿನಗರ: ‘ಬೆಂಗಳೂರು ಪೇಟೆ’ ಪ್ರದೇಶದಲ್ಲಿ ಅಗ್ನಿ ಅವಘಡ ನಿಯಂತ್ರಣಕ್ಕೆ ನಗರದ ಪ್ರಥಮ ‘ಫೈರ್ ಹೈಡ್ರೆಂಟ್’ ವ್ಯವಸ್ಥೆ ಲೋಕಾರ್ಪಣೆ

    ಮತದಾರರ ಪಟ್ಟಿ ಪರಿಶೀಲನೆ ಸಾಂದರ್ಭಿಕ ಚಿತ್ರ

    GBA News | ಮತದಾರರ ಪಟ್ಟಿ ಪರಿಷ್ಕರಣೆ: ಆಗಸ್ಟ್ 8 ಕಡೇ ದಿನ, ಸಮಸ್ಯೆ ಇದ್ದರೆ 1950ಗೆ ಕರೆ ಮಾಡಿ

    GBA News | ​ಕಗ್ಗದಾಸಪುರದಲ್ಲಿ ಟ್ರಾಫಿಕ್ ಜಾಮ್‌ಗೆ ಮುಕ್ತಿ: ಪೂರ್ವ ಪಾಲಿಕೆಯಿಂದ ಇ.ಇ.ಎಫ್.ಸಿ ಯೋಜನೆ ಯಶಸ್ವಿ

    Lokayukta News | ಪಾಲಿಕೆಯೇ ಟಿಪ್ಪರ್ ಖರೀದಿಸಿ ಕಸ ವಿಲೇವಾರಿ ಮಾಡಲಿ: 5 ನಗರ ಪಾಲಿಕೆಗಳಿಗೆ ಲೋಕಾಯುಕ್ತರ ಖಡಕ್ ಸೂಚನೆ

    BDA News | ಬಿಡಿಎ ಲಂಚಾವತಾರ: ಎನ್‌ಪಿಕೆಎಲ್ ರೈತರಿಗೆ ನಿವೇಶನ ನೀಡಲು ಲಂಚ ಕೇಳಿದ ಎಇಇ, ನೋಟಿಸ್ ಜಾರಿ

    ಆಗಸ್ಟ್ 1 ರಿಂದ ಬೆಂಗಳೂರಿನಲ್ಲಿ ‘ತ್ಯಾಜ್ಯದಿಂದ ಸ್ವಾತಂತ್ರ್ಯ’ ಅಭಿಯಾನ: 22 ಸಾವಿರ ಟನ್ ಪಾರಂಪರಿಕ ಕಸ ತೆರವು

  • Public interest
  • BW Special
  • Life Style
  • Photo Gallery
  • Video
No Result
View All Result

Home Bengaluru Focus

“ವೃಂದ ಮತ್ತು ನೇಮಕಾತಿ ನಿಯಮ” ಗಾಳಿಗೆ ತೂರಿದ ಮುಖ್ಯ ಆಯುಕ್ತ ಗೌರವ್ ಗುಪ್ತಾ : ಎನ್.ಆರ್. ರಮೇಶ್ ಗಂಭೀರ ಆರೋಪ

ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತರಿಂದ ನಿರಂತರ ಕಾನೂನು ಬಾಹಿರ ಕಾರ್ಯದ ಆರೋಪ | ಟಿಇಸಿ ಇಇ ನೇಮಕಾತಿ ತಾತ್ಕಾಲಿಕ ಕ್ರಮವಷ್ಟೆ ಎಂದು ಸಮರ್ಥಿಸಿಕೊಂಡ ಗೌರವ್ ಗುಪ್ತಾ

by Bengaluru Wire Desk
September 4, 2021
in Bengaluru Focus
Reading Time: 2 mins read
0
ಬಿಬಿಎಂಪಿ ಕೇಂದ್ರ ಕಚೇರಿ, ಸಾಂದರ್ಭಿಕ ಚಿತ್ರ

ಬಿಬಿಎಂಪಿ ಕೇಂದ್ರ ಕಚೇರಿ, ಸಾಂದರ್ಭಿಕ ಚಿತ್ರ

ಬೆಂಗಳೂರು, (www.bengaluruwire.com) :
“ನೀರಾವರಿ ಇಲಾಖೆ” ಯಿಂದ ಪಾಲಿಕೆಗೆ ನಿಯೋಜನೆಗೊಂಡ ಪ್ರಭಾರಿ ಸಹಾಯಕ ಎಂಜನಿಯರ್ ಅಶೋಕ್ ಬಾಗಿ ಅವರನ್ನು “ವೃಂದ ಮತ್ತು ನೇಮಕಾತಿ ನಿಯಮ” ಗಳಿಗೆ ವಿರುದ್ಧವಾಗಿ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮುಖ್ಯ ಆಯುಕ್ತ ಗೌರವ್ ಗುಪ್ತಾ, ಲಂಚ ಹಣ ಪಡೆದು ಆಯಕಟ್ಟಿನ ಸ್ಥಳಕ್ಕೆ ನೇಮಕ ಮಾಡಿದ್ದಾರೆ ಎಂದು ಬೆಂಗಳೂರು ದಕ್ಷಿಣ ನಗರ ಜಿಲ್ಲೆ ಬಿಜೆಪಿ ಅಧ್ಯಕ್ಷ ಎನ್.ಆರ್.ರಮೇಶ್ ಗಂಭೀರ ಆರೋಪ ಮಾಡಿದ್ದಾರೆ.

ಅಶೋಕ್ ಬಾಗಿ ರವರನ್ನು ರಸ್ತೆಗಳ ಮೂಲಭೂತ ಸೌಕರ್ಯಗಳ ಇಲಾಖೆಯ ಮುಖ್ಯ ಅಭಿಯಂತರರಾಗಿರುವ ಬಿ. ಎಸ್. ಪ್ರಹ್ಲಾದ್ ರವರ ಶಿಫಾರಸ್ಸಿನಂತೆ ಪಾಲಿಕೆಯಲ್ಲಿ ನೂರಾರು ಕೋಟಿ ರೂ. ಕಾಮಗಾರಿ ನಡೆಯುತ್ತಿರುವ ಸಂಚಾರಿ ಎಂಜಿನಿಯರಿಂಗ್ ಕೋಶ (ಟ್ರಾಫಿಕ್ ಎಂಜಿನಿಯರಿಂಗ್ ಸೆಲ್) ದ ಕಾರ್ಯಪಾಲಕ ಅಭಿಯಂತರರಾಗಿ ಅಧಿಕ ಪ್ರಭಾರದಲ್ಲಿ ನಿಯೋಜನೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

ಎನ್.ಆರ್.ರಮೇಶ್, ಬಿಜೆಪಿ ಬೆಂಗಳೂರು ದಕ್ಷಿಣ ನಗರ ಜಿಲ್ಲೆ ಅಧ್ಯಕ್ಷ

ವಾಸ್ತವವಾಗಿ ಯಾವುದೇ ಒಬ್ಬ ಅಧಿಕಾರಿಯ ವರ್ಗಾವಣೆಯನ್ನು ಅಥವಾ ಯಾವುದೇ ಒಂದು ಹುದ್ದೆಗೆ ನಿಯೋಜನೆ ಮಾಡಬೇಕಾದ ಪ್ರಕ್ರಿಯೆಗೆ ಸಂಬಂಧಿಸಿದಂತೆ ಮುಖ್ಯ ಆಯುಕ್ತರ ಅಧೀನದಲ್ಲಿರುವ ಆಡಳಿತ ವಿಭಾಗದ ಸಂಬಂಧಪಟ್ಟ ಗುಮಾಸ್ತರು ಕಡತವನ್ನು ತಯಾರಿಸುತ್ತಾರೆ.

ಮೊದಲು ಆಡಳಿತ ಶಾಖೆಯ ಸಹಾಯಕ ಆಯುಕ್ತರು, ನಂತರ ಆಡಳಿತ ಉಪ ಆಯುಕ್ತರು, ಆನಂತರ ಆಡಳಿತ ವಿಭಾಗದ ವಿಶೇಷ ಆಯುಕ್ತರಿಂದ ಅನುಮೋದನೆ ಪಡೆದು ಅಂತಿಮವಾಗಿ ಮುಖ್ಯ ಆಯುಕ್ತರ ಅನುಮೋದನೆ ಪಡೆದುಕೊಳ್ಳಬೇಕಿರುವುದು ಕಡ್ಡಾಯವಾಗಿರುತ್ತದೆ.

ಆದರೆ, ಈ ಪ್ರಕರಣದಲ್ಲಿ ಆಡಳಿತ ವಿಭಾಗದಿಂದ ಕಡತವು ಮಂಡನೆಯಾಗಿಲ್ಲ. ಬದಲಿಗೆ ರಸ್ತೆಗಳ ಮೂಲಭೂತ ಸೌಕರ್ಯಗಳ ಇಲಾಖೆಯ ಚೀಫ್ ಎಂಜಿನಿಯರ್ ಪ್ರಹ್ಲಾದ್ ತಮ್ಮ ಪರಮ ಶಿಷ್ಯ ಅಶೋಕ್ ಬಾಗಿಯನ್ನ ಕರೆತರಲು ಸ್ವತಃ ತಾವೇ ತಯಾರಿಸಿದ ಟಿಪ್ಪಣಿ ಹಾಳೆಗಳ ಕಡತವನ್ನು ನೇರವಾಗಿ ತೆಗೆದುಕೊಂಡು ಮುಖ್ಯ ಆಯುಕ್ತರ ಬಳಿ ಅನುಮೋದನೆ ಪಡೆದಿದ್ದಾರೆ. ಇದು ಹಲವಾರು ಅನುಮಾನಗಳಿಗೆ ಮತ್ತು ಮುಖ್ಯ ಆಯುಕ್ತರ ಕಾನೂನು ಬಾಹಿರ ನಡೆಗೆ ಪ್ರಮುಖ ಸಾಕ್ಷಿಯಾಗಿರುತ್ತದೆ ಎಂದು ಎನ್.ಆರ್.ರಮೇಶ್ ತಿಳಿಸಿದ್ದಾರೆ.

ಈ ಪ್ರಕರಣದಲ್ಲಿ ಅಶೋಕ್ ಬಾಗಿ ರವರಿಂದ ಬಿ.ಎಸ್. ಪ್ರಹ್ಲಾದ್ ರವರ ಮೂಲಕ ಲಕ್ಷಾಂತರ ರೂಪಾಯಿ ಅಕ್ರಮ ಹಣವನ್ನು ಮುಖ್ಯ ಆಯುಕ್ತ ಗೌರವ್ ಗುಪ್ತಾ ಪಡೆದಿರುವುದೂ ಕೂಡ ಅತ್ಯಂತ ಸ್ಪಷ್ಟವಾಗಿದೆ ಎಂದು ಹೇಳಿದ್ದಾರೆ.

“ಎರವಲು ಸೇವಾ ನಿಯಮ” ಗಳಂತೆ ಪಾಲಿಕೆಯಲ್ಲಿ ಮೂರು ವರ್ಷಗಳು ಸಂಪೂರ್ಣವಾಗಿರುವ ಅಧಿಕಾರಿಗಳನ್ನು ಅವರ ಮಾತೃ ಇಲಾಖೆಗೆ ವಾಪಸ್ಸು ಕಳುಹಿಸಬೇಕೆಂಬ ನಿಯಮವಿದೆ. ಕೇವಲ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಮಾತ್ರವೇ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಎರವಲು ಸೇವೆ ಅಡಿಯಲ್ಲಿ ನಿಯೋಜನೆಗೊಳ್ಳಬೇಕು. “ವೃಂದ ಮತ್ತು ನೇಮಕಾತಿ ನಿಯಮ” ಗಳ ಅನ್ವಯ ಈ ಅವಕಾಶವಿದ್ದರೂ, ಹಲವಾರು ಗುರುತರ ಆರೋಪಗಳನ್ನು ಎದುರಿಸುತ್ತಿರುವ ನೀರಾವರಿ ಇಲಾಖೆಯ ಎಂಜಿನಿಯರ್ ಅಶೋಕ್ ಬಾಗಿ ರವರನ್ನು ಟ್ರಾಫಿಕ್ ಎಂಜನಿಯರಿಂಗ್ ಸೆಲ್ ನಲ್ಲಿ ನಿಯೋಜನೆಗೊಳಿಸಲಾಗಿದೆ. 

ಗುತ್ತಿಗೆ ಕಾಮಗಾರಿ ಬಿಲ್ ನಲ್ಲೂ ಭ್ರಷ್ಟಾಚಾರ?

ಕಳೆದ ಎರಡು ಮೂರು ವರ್ಷಗಳಿಂದ ತಮ್ಮ ಪಾಲಿನ ಹಣದ ಬಿಡುಗಡೆಗಾಗಿ ಗುತ್ತಿಗೆದಾರರು ಸರದಿಯಲ್ಲಿ ಕಾಯುತ್ತಿದ್ದಾರೆ. ಆದರೆ ಇಲ್ಲಿ ಜೇಷ್ಠತೆ (ಹಿರಿತನ) ಯನ್ನು ಕಡೆಗಣಿಸಿ ಹತ್ತಾರು ಮಂದಿ ಪ್ರಭಾವಿ ಗುತ್ತಿಗೆದಾರರಿಗೆ ಜೇಷ್ಠತೆ ಇಲ್ಲದಿದ್ದರೂ ಸಹ ವಿಶೇಷ ಮಂಜೂರಾತಿ (ಸ್ಪೆಷಲ್ ಎಲ್ ಒಸಿ) ಎಂಬ ಹೆಸರಿನಲ್ಲಿ ನೂರಾರು ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಮುಖ್ಯ ಆಯುಕ್ತರು ನೇರವಾಗಿ ಭ್ರಷ್ಟಾಚಾರಗಳಲ್ಲಿ ತೊಡಗಿಕೊಂಡಿರುವುದು ಅತ್ಯಂತ ಸ್ಪಷ್ಟವಾಗಿದೆ ಎಂದು ಎನ್.ಆರ್.ರಮೇಶ್ ಆರೋಪಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಕಾನೂನು ಬಾಹಿರವಾಗಿ ಟಿಇಸಿ ಕಾರ್ಯಪಾಲಕ ಅಭಯಂತರರಾಗಿ ಅಶೋಕ್ ಬಾಗಿ ರವರನ್ನು ನಿಯೋಜನೆ ಮಾಡಿರುವ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ, ಪಾಲಿಕೆ ಆಡಳಿತ ಉಪ ಆಯುಕ್ತ ಲಿಂಗ ಮೂರ್ತಿ, ಚೀಫ್ ಎಂಜಿನಿಯರ್ ಬಿ. ಎಸ್. ಪ್ರಹ್ಲಾದ್ ಹಾಗೂ ಅಶೋಕ್ ಬಾಗಿ ರವರ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳದಲ್ಲಿ  ದಾಖಲಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಅಲ್ಲದೆ ನಿರಂತರವಾಗಿ ಹಲವಾರು ಅಕ್ರಮಗಳಲ್ಲಿ ಬಾಗಿಯಾಗಿರುವ ಗೌರವ್ ಗುಪ್ತ ರವರನ್ನು ಪಾಲಿಕೆಯ ಮುಖ್ಯ ಆಯುಕ್ತರ ಹುದ್ದೆಯಿಂದ ಬದಲಿಸಿ, ಅರ್ಹರಾದ ಹಿರಿಯ ಅಧಿಕಾರಿಯನ್ನು ಪಾಲಿಕೆಯ ಮುಖ್ಯ ಆಯುಕ್ತರ ಹುದ್ದೆಗೆ ನಿಯೋಜಿಸಲು ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ರಮೇಶ್ ಪತ್ರ ಬರೆದು ಆಗ್ರಹಿಸಿದ್ದಾರೆ.

  • ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ

ತಮ್ಮ ನಿರ್ಧಾರ ಸಮರ್ಥಿಸಿಕೊಂಡ ಮುಖ್ಯ ಆಯುಕ್ತ ಗೌರವ್ ಗುಪ್ತಾ :

ತಮ್ಮ ಮೇಲೆ ಬಂದಿರೋ ಆರೋಪಕ್ಕೆ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಬೆಂಗಳೂರು ವೈರ್ ಗೆ  ಪ್ರತಿಕ್ರಿಯಿಸಿದ್ದು, ಎನ್.ಆರ್.ರಮೇಶ್ ಅವರ ಆರೋಪಕ್ಕೆ ಪ್ರತಿಕ್ರಿಯೆ ನೀಡಲ್ಲ. ಟಿಇಸಿ ಸೆಲ್ ಕಾರ್ಯಪಾಲಕ ಅಭಿಯಂತರರ ಹುದ್ದೆಯಲ್ಲಿದ್ದವರು ನಿವೃತ್ತಿಯಾಗಿದ್ದರು. ಆ ತೆರವಾದ ಸ್ಥಾನಕ್ಕೆ ಆ ವಿಭಾಗದ ಚೀಫ್ ಎಂಜಿನಿಯರ್, ಸೂಕ್ತ ವ್ಯಕ್ತಿಯನ್ನು ತಾತ್ಕಾಲಿಕವಾಗಿ ನೇಮಿಸಿದ್ದಾರೆ. ಆಡಳಿತ ವಿಭಾಗ ತದನಂತರ ಟಿಇಸಿ ಸೆಲ್ ನ ಇಇ ಹುದ್ದೆಗೆ ಖಾಯಂ ಆಗಿ ನೇಮಕ ಮಾಡಲಿದೆ. ಯಾವುದೇ ನೇಮಕಾತಿ ಆಗಿದ್ದರೂ ಅಭಿವೃದ್ಧಿ ದೃಷ್ಟಿಯಿಂದ ಆಗಿರುತ್ತೆ ಎಂದು ಅವರು ಹೇಳಿದ್ದಾರೆ.

WhatsApp Join our WhatsApp Channel
Previous Post

ಬಿಬಿಎಂಪಿಯ ಕೋವಿಡ್ ಸೆರೋ ಸಮೀಕ್ಷೆ ಅಪೂರ್ಣ, ಸಂಪೂರ್ಣವಾಗಿ ಆಧಾರವಾಗಿಟ್ಟುಕೊಳ್ಳಲಾಗದು : ತಜ್ಞರ ಅಭಿಮತ

Next Post

ಕರೋನಾ ಸೋಂಕಿನ ಮಧ್ಯೆಯೂ ಭರ್ಜರಿ ಮದ್ಯ ಮಾರಾಟ…!

Next Post
ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ (ಸಾಂದರ್ಭಿಕ ಚಿತ್ರ)

ಕರೋನಾ ಸೋಂಕಿನ ಮಧ್ಯೆಯೂ ಭರ್ಜರಿ ಮದ್ಯ ಮಾರಾಟ...!

ವಾರ್ಡ್ ಗೊಂದರಂತೆ ಸಾರ್ವಜನಿಕ ಗಣೇಶ ಮೂರ್ತಿ ಸ್ಥಾಪನೆಗೆ ಅವಕಾಶ - ಬಿಬಿಎಂಪಿ ವಿಧಿಸಿದ ಷರತ್ತುಗಳಿಗೆ ಗಣೇಶೋತ್ಸವ ಸಂಘಟಕರಿಂದ ಆಕ್ಷೇಪ

Please login to join discussion

Like Us on Facebook

Follow Us on Twitter

Recent News

Science News | ಪ್ರೊ. ಅನ್ನಪೂರ್ಣಿ ಸುಬ್ರಮಣ್ಯಂಗೆ ‘ಕಾಸ್ಪಾರ್ ವಿಕ್ರಮ್ ಸಾರಾಭಾಯ್’ ಪ್ರಶಸ್ತಿ: ಈ ಗೌರವ ಪಡೆದ ಮೊದಲ ಭಾರತೀಯ ಮಹಿಳೆ

August 4, 2026

ಸರ್ಕಾರಕ್ಕೆ 1 ಕೋಟಿ ರೂ. ಡಿವಿಡೆಂಡ್ ನೀಡಿದ ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್

August 4, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

Science News | ಪ್ರೊ. ಅನ್ನಪೂರ್ಣಿ ಸುಬ್ರಮಣ್ಯಂಗೆ ‘ಕಾಸ್ಪಾರ್ ವಿಕ್ರಮ್ ಸಾರಾಭಾಯ್’ ಪ್ರಶಸ್ತಿ: ಈ ಗೌರವ ಪಡೆದ ಮೊದಲ ಭಾರತೀಯ ಮಹಿಳೆ

August 4, 2026

ಸರ್ಕಾರಕ್ಕೆ 1 ಕೋಟಿ ರೂ. ಡಿವಿಡೆಂಡ್ ನೀಡಿದ ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್

August 4, 2026

ರಾಜ್ಯದಲ್ಲಿ ಅತಿವೃಷ್ಟಿ ಹಾಗೂ ಬರ ಪರಿಸ್ಥಿತಿ: ಪರಿಶೀಲನೆಗೆ ಜಿಲ್ಲಾವಾರು ಸಚಿವರ ನೇಮಕ

August 4, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group