Tuesday, August 4, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ಡಿ.ಕೆ. ಶಿವಕುಮಾರ್ ಸಂಪುಟ ವಿಸ್ತರಣೆ: ಇಂದು 20 ನೂತನ ಸಚಿವರ ಪ್ರಮಾಣ ವಚನ, ಇಲ್ಲಿದೆ ಎಐಸಿಸಿ ಅಧಿಕೃತ ಪಟ್ಟಿ

    ಕರುನಾಡಲ್ಲಿ ವರುಣನ ಆರ್ಭಟ: ಭರ್ತಿಯಾಗುತ್ತಿರುವ ಜಲಾಶಯಗಳು, ಮೈದುಂಬಿ ಹರಿಯುತ್ತಿರುವ ನದಿಗಳು

    BDA News | ಬಿಡಿಎ ಲಂಚಾವತಾರ: ಎನ್‌ಪಿಕೆಎಲ್ ರೈತರಿಗೆ ನಿವೇಶನ ನೀಡಲು ಲಂಚ ಕೇಳಿದ ಎಇಇ, ನೋಟಿಸ್ ಜಾರಿ

    KEA ಗ್ರಾಮ ಆಡಳಿತ ಅಧಿಕಾರಿ ಹುದ್ದೆ: ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ

    ​ಪೇಪರ್ ಲೀಕ್ ತಡೆಗೆ ಹೊಸ ಅಸ್ತ್ರ: ಸಂಸತ್ತಿನಲ್ಲಿ ಅಂಗೀಕಾರಗೊಂಡಿತು ಕಠಿಣ ವಿಧೇಯಕ

    ಆ. 15ರಿಂದ ಸ್ವಿಗ್ಗಿ ಸೇವೆ ಸ್ಥಗಿತ? ಆನ್‌ಲೈನ್ ಆಹಾರ ನೀಡಿಕೆ ಸಂಸ್ಥೆ ವಿರುದ್ಧ ಬೆಂಗಳೂರು ಹೋಟೆಲುಗಳ ಸಂಘದ ಖಡಕ್ ಎಚ್ಚರಿಕೆ

    1200 ಬೋರ್‌ವೆಲ್‌ಗಳಿಗೆ ಮರುಜೀವ: ತಮಿಳುನಾಡು ಐಎಎಸ್ ಅಧಿಕಾರಿಗೆ ನಟ ಮಾಧವನ್ ಸಲಾಂ

    Indian billionaires Increased | ಭಾರತದಲ್ಲಿ ಬಿಲಿಯನೇರ್‌ಗಳ ಸಂಖ್ಯೆ 4 ಪಟ್ಟು ಹೆಚ್ಚಳ: 576ಕ್ಕೆ ಏರಿಕೆ

    BIG BREAKING NEWS | ಮೇಕೆದಾಟು ಯೋಜನೆ: ನೆರೆ ರಾಜ್ಯಗಳ ಒಪ್ಪಿಗೆ ಅಗತ್ಯವಿಲ್ಲ, ಕೇಂದ್ರ ಸರ್ಕಾರದ ಸ್ಪಷ್ಟನೆ

  • Bengaluru Focus

    GBA News | ಶಾಂತಿನಗರ ಇಇ ಕಚೇರಿಯಲ್ಲಿ 9 ಕೋಟಿ ರೂ.ಗಳ ಕಂಪ್ಯೂಟರ್ ಬಿಲ್ ಹಗರಣ: ಲೋಕಾಯುಕ್ತಕ್ಕೆ ದೂರು

    ಗಾಂಧಿನಗರ: ‘ಬೆಂಗಳೂರು ಪೇಟೆ’ ಪ್ರದೇಶದಲ್ಲಿ ಅಗ್ನಿ ಅವಘಡ ನಿಯಂತ್ರಣಕ್ಕೆ ನಗರದ ಪ್ರಥಮ ‘ಫೈರ್ ಹೈಡ್ರೆಂಟ್’ ವ್ಯವಸ್ಥೆ ಲೋಕಾರ್ಪಣೆ

    ಮತದಾರರ ಪಟ್ಟಿ ಪರಿಶೀಲನೆ ಸಾಂದರ್ಭಿಕ ಚಿತ್ರ

    GBA News | ಮತದಾರರ ಪಟ್ಟಿ ಪರಿಷ್ಕರಣೆ: ಆಗಸ್ಟ್ 8 ಕಡೇ ದಿನ, ಸಮಸ್ಯೆ ಇದ್ದರೆ 1950ಗೆ ಕರೆ ಮಾಡಿ

    GBA News | ​ಕಗ್ಗದಾಸಪುರದಲ್ಲಿ ಟ್ರಾಫಿಕ್ ಜಾಮ್‌ಗೆ ಮುಕ್ತಿ: ಪೂರ್ವ ಪಾಲಿಕೆಯಿಂದ ಇ.ಇ.ಎಫ್.ಸಿ ಯೋಜನೆ ಯಶಸ್ವಿ

    Lokayukta News | ಪಾಲಿಕೆಯೇ ಟಿಪ್ಪರ್ ಖರೀದಿಸಿ ಕಸ ವಿಲೇವಾರಿ ಮಾಡಲಿ: 5 ನಗರ ಪಾಲಿಕೆಗಳಿಗೆ ಲೋಕಾಯುಕ್ತರ ಖಡಕ್ ಸೂಚನೆ

    BDA News | ಬಿಡಿಎ ಲಂಚಾವತಾರ: ಎನ್‌ಪಿಕೆಎಲ್ ರೈತರಿಗೆ ನಿವೇಶನ ನೀಡಲು ಲಂಚ ಕೇಳಿದ ಎಇಇ, ನೋಟಿಸ್ ಜಾರಿ

    ಆಗಸ್ಟ್ 1 ರಿಂದ ಬೆಂಗಳೂರಿನಲ್ಲಿ ‘ತ್ಯಾಜ್ಯದಿಂದ ಸ್ವಾತಂತ್ರ್ಯ’ ಅಭಿಯಾನ: 22 ಸಾವಿರ ಟನ್ ಪಾರಂಪರಿಕ ಕಸ ತೆರವು

    ​ಬೆಳ್ಳಂದೂರು ಎಸ್‌ಟಿಪಿ ಪ್ರಕರಣ: ತನಿಖೆ ಮುಂದುವರಿಕೆ, ಕಾರ್ಮಿಕರ ಸುರಕ್ಷತೆಗೆ ಜಲಮಂಡಳಿ ಒತ್ತು

    BWSSB Head Office

    BWSSB News | ಬೆಂಗಳೂರು: ಜು. 31ರಂದು ಈ ಪ್ರದೇಶಗಳಲ್ಲಿ 15 ಗಂಟೆ ಕಾವೇರಿ ನೀರು ಇರಲ್ಲ

  • Public interest
  • BW Special
  • Life Style
  • Photo Gallery
  • Video
No Result
View All Result

Home News Wire

ಉಕ್ರೇನ್ ನಲ್ಲಿ ಮೃತಪಟ್ಟ ವಿದ್ಯಾರ್ಥಿ ನವೀನ್ ಪಾರ್ಥಿವ ಶರೀರ ಬೆಂಗಳೂರಿಗೆ : ಯುದ್ಧಪೀಡಿತ ರಾಷ್ಟ್ರದಿಂದ ಭಾರತಕ್ಕೆ ಶವ ತಂದಿದ್ದು ಹೇಗೆ ಗೊತ್ತಾ?

ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ನವೀನ್ ಮೃತದೇಹ ಬರಮಾಡಿಕೊಂಡು ಅಂತಮ ನಮನ ಸಲ್ಲಿಸಿದ ಸಿಎಂ ಬಸವರಾಜ ಬೊಮ್ಮಾಯಿ

by Bengaluru Wire Desk
March 21, 2022
in News Wire
Reading Time: 1 min read
0

ಬೆಂಗಳೂರು, (www.bengaluruwire.com) : ಉಕ್ರೇನ್ ನಿಂದ ನವೀನ್ ಮೃತ ದೇಹವನ್ನು ತರುವ ಅಸಾಧ್ಯವಾದ ಕೆಲಸವನ್ನು ಪ್ರಧಾನಿ ನರೇಂದ್ರ ಮೋದಿಯವರ ಭಗೀರಥ ಪ್ರಯತ್ನದಿಂದ ಸಾಧಿಸಿ, ಐತಿಹಾಸಿಕ ಕೆಲಸವನ್ನು ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ನವೀನ್ ಮೃತದೇಹವನ್ನು ಸೋಮವಾರ ಮುಂಜಾನೆ ಬರಮಾಡಿಕೊಂಡ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.

ಉಕ್ರೇನ್ ಸುತ್ತಲಿನ ಎಲ್ಲಾ ದೇಶಗಳ ಸಂಪರ್ಕವನ್ನು ಬೆಳೆಸಿ ರಾಜತಾಂತ್ರಿಕವಾಗಿ ವಿಮಾನನಿಲ್ದಾಣದಲ್ಲಿ ವಿಶೇಷ ವಿಮಾನಗಳಿಗೆ ಅನುಮತಿ ಪಡೆದು ಕರೆತರಲಾಗಿದೆ. ಇಡೀ ಪ್ರಕ್ರಿಯೆ ಸಮನ್ವಯದ ಆಧಾರದ ಮೇಲೆಯೇ ಆಗಿದೆ. ನವೀನ್ ವೈದ್ಯಕೀಯ ಶಿಕ್ಷಣ ಮುಗಿಸಿ ಹಿಂದಿರುಗುವ ವೇಳೆಗೆ ಅವನ ತಂದೆತಾಯಿಗಳು ಬರಮಾಡಿಕೊಳ್ಳಬೇಕಿತ್ತು. ಆದರೆ ನವೀನ್ ಮೃತದೇಹವನ್ನು ಬರಮಾಡಿಕೊಳ್ಳಬೇಕಿರುವುದು ಅತ್ಯಂತ ನೋವಿನ ಸಂಗತಿ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ನವೀನ್ ಮೃತದೇಹ

ನವೀನ್ ಮೃತದೇಹ ರಾಜ್ಯಕ್ಕೆ ತಂದಿದ್ದು ಹೇಗೆ? :

ಅಂತ್ಯಕ್ರಿಯೆಗೆಂದೇ ಇರುವ Funeral Agents ನ್ನು ಸಂಪರ್ಕಿಸಿ, ದೇಹವನ್ನು ಪಡೆಯಲಾಗಿತ್ತು. ನಂತರ ಎಂಬಾಲ್ಮಿಂಗ್ (embalming) ಮಾಡಲು ಸಾಧ್ಯವಾಯಿತು. ಶವಾಗಾರದ ಬಳಿ ಇನ್ನೂ ಶೆಲ್ಲಿಂಗ್ ನಡೆಯುತ್ತಿದ್ದರೂ ಅಲ್ಲಿಂದ ವಾರ್ಸೊವಾಕ್ಕೆ ತಂದು ಅಲ್ಲಿ ಪುನಃ ಜಿಂಕ್ ಕೋಟಿಂಗ್ ಮಾಡಿ ದುಬೈಗೆ ತಂದು, ಅಲ್ಲಿಂದ ಬೆಂಗಳೂರಿಗೆ ತರಲಾಗಿದೆ. ಪ್ರಧಾನ ಮಂತ್ರಿಗಳಿಗೆ ಈಗಾಗಲೇ ಧನ್ಯವಾದಗಳನ್ನು ಹೇಳಲಾಗಿದೆ. ಅಸಾಧ್ಯವಾಗಿರುವ ಕೆಲಸವನ್ನು ಅವರ ಭಗೀರಥ ಪ್ರಯತ್ನದಿಂದ ಸಾಧ್ಯವಾಗಿದೆ. ಕನ್ನಡಿಗರ ಪರವಾಗಿ ಅವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದರು.

ಲಿಬಿಯಾದಲ್ಲಿಯೂ ಐಎಸ್ ಐ ದಾಳಿ ಮಾಡಿದಾಗಲೂ ಭಾರತೀಯರನ್ನು ತೆರವು ಮಾಡಲಾಗಿತ್ತು. ದೇಶದ ಶಕ್ತಿ ಏನು ಎನ್ನುವದು ಇಂಥ ಸಂದರ್ಭಗಳಲ್ಲಿ ತಿಳಿಯುತ್ತದೆ ಎಂದರು.

ಎಂಬಾಲ್ಮಿಂಗ್ ಅಂದರೇನು?

ಮೃತದೇಹವನ್ನು ಹಲವು ದಿನಗಳ ಕಾಲ ಕೊಳೆಯದಂತೆ ಸಂರಕ್ಷಿಸಲು ವೈದ್ಯ ವಿಜ್ಞಾನ ದಲ್ಲಿ ಕೆಲವೊಂದು ಸಂಕೀರ್ಣ ಪ್ರಕ್ರಿಯೆಗಳನ್ನು ಅನುಸರಿಸಿ ದೇಹ ಹಾಗೂ ಅದರ ಮುಖ ಕೆಡದಂತೆ ಮಾಡಲಾಗುತ್ತದೆ. ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಶವವನ್ನು ಕೊಂಡೊಯ್ಯುವಾಗ ಎಂಬಾಲ್ಮಿಂಗ್ ಮಾಡುವುದು ಕಡ್ಡಾಯವಾಗಿದೆ. ಭಾರತದಲ್ಲಿ ಹೈಪ್ರೊಫೈಲ್ ಮರಣ ಸಂಭವಿಸಿದಾಗ, ಅಪರಾಧಿಗಳು ಮೃತಪಟ್ಟಾಗ ಅಂತಹ ದೇಹಗಳನ್ನು ಎಂಬಾಲ್ಮಿಂಗ್ ಮಾಡಲಾಗುತ್ತದೆ. ಈ ಪ್ರಕ್ರಿಯೆ ಸಾಕಷ್ಟು ವೆಚ್ಚದಾಯಕವೂ ಹೌದು.

3 ವಾರಗಳ ಕಾಲ ನಡೆದ “ಆಪರೇಷನ್ ಗಂಗಾ” :

ಯುದ್ಧ ಭೂಮಿಯಿಂದಲೂ ಹಲವಾರು ವಿದ್ಯಾರ್ಥಿಗಳು ವಾಪಸ್ಸಾಗಿದ್ದಾರೆ. ದುರ್ದೈವವಶಾತ್ ನವೀನ್ ಮಿಸೈಲಿನ ಮೆಟಲ್ ಬಡಿದು ತೀರಿಹೋಗಿದ್ದಾನೆ. ನಮ್ಮ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕುಟುಂಬವನ್ನು ಸಂಪರ್ಕಿಸಿ ಧೈರ್ಯ ಹೇಳಿದ್ದರು. ಆಪರೇಷನ್ ಗಂಗಾ ನಲ್ಲಿ ಕರ್ನಾಟಕದ 62 ವಿದ್ಯಾರ್ಥಿಗಳು ಆಪರೇಷನ್ ಗಂಗಾ ಪ್ರಾರಂಭವಾಗುವ ಮುಂಚೆಯೇ ಬಂದಿದ್ದಾರೆ. 3 ವಾರಗಳ ಕಾಲ ನಡೆದ “ಆಪರೇಷನ್ ಗಂಗಾ” ಸುಲಭದ ಮಾತಲ್ಲ. ಬೇರೆ ಯಾವ ರಾಷ್ಟ್ರಗಳೂ ತನ್ನ ನಾಗರಿಕರನ್ನು ಕರೆಸುವ ಇಷ್ಟು ದೊಡ್ಡ ಪ್ರಯತ್ನ ವನ್ನು ಮಾಡಿಲ್ಲ. ಅವರವರ ಹಣೆಬರಹಕ್ಕೆ ಬಿಟ್ಟಿದ್ದರು ಎಂದರು.

ಕರ್ನಾಟಕದ 572 ವಿದ್ಯಾರ್ಥಿಗಳು ರಾಜ್ಯಕ್ಕೆ ವಾಪಸ್ :

ಇಡೀ ದೇಶದ 19000 ವಿದ್ಯಾರ್ಥಿಗಳನ್ನು ವಾಪಸ್ಸು ಕರೆತರಲಾಗಿದ್ದು, ಕರ್ನಾಟಕದ 572 ಜನ ಹಿಂದಿರುಗಿದ್ದಾರೆ.
ಪ್ರಧಾನ ಮಂತ್ರಿಗಳ ಕಚೇರಿ ಹಾಗೂ ವಿದೇಶಾಂಗ ಸಚಿವ ಜಯಶಂಕರ್ ಅವರೊಂದಿಗೂ ನಿರಂತರವಾಗಿ ಸಂಪರ್ಕದಲ್ಲಿದ್ದು, ಸಂಸತ್ ಸದಸ್ಯರೂ ಸಹ ಸಂಪರ್ಕದಲ್ಲಿದ್ದು ಪ್ರಯತ್ನ ಮಾಡಿದ್ದಾರೆ ಎಂದರು.

ವಿದ್ಯಾರ್ಥಿಗಳನ್ನು ಕರೆತರಲು 12 ಗಂಟೆಯಲ್ಲಿ ಟೋಲ್ ಫ್ರೀ ಆರಂಭ :

ಭಾರತಕ್ಕೆ ಸ್ಥಳಾಂತಗೊಂಡ ವಿದ್ಯಾರ್ಥಿಗಳನ್ನು ಬೆಂಗಳೂರು ಮಾತ್ರವಲ್ಲದೆ, ದೆಹಲಿ, ಗಜಿಯಾಬಾದ್, ಮುಂಬೈ ನಗರಗಳಿಂದ ಮನೆಗೆ ಮುಟ್ಟಿಸುವವರೆಗೂ ಕರ್ನಾಟಕ ಸರ್ಕಾರ ಕಾಳಜಿ ವಹಿಸಿದೆ. ಇದರಲ್ಲಿ ರಾಜ್ಯ ಸರ್ಕಾರದ ಪಾತ್ರವೂ ಹಿರಿದಿದೆ. ಮೊದಲಿಗೆ ವಾಟ್ಸಾಪ್ ಗುಂಪು ರಚಿಸಿ, ತಕ್ಷಣವೇ ವಿದ್ಯಾರ್ಥಿಗಳೊಂದಿಗೆ ಸಂಪರ್ಕ ಬೆಳೆಸಿ, ಧೈರ್ಯ ಹೇಳಿತು. ನಿರಂತರವಾಗಿ ಅವರ ಜೊತೆ ಸಂಪರ್ಕ ಸಾಧಿಸಲಾಗಿತ್ತು. ಟೋಲ್ ಫ್ರೀ ಸಂಖ್ಯೆಯನ್ನು 12 ತಾಸಿನೊಳಗೆ ಪ್ರಾರಂಭಿಸಿತು.

ಕೆಎಸ್ ಡಿಎ ಆಯುಕ್ತ ಮನೋಜ್ ರಾಜನ್ ಕಾರ್ಯಕ್ಕೆ ಶ್ಲಾಘನೆ :

ಮನೋಜ್ ರಾಜನ್ ಐಎಫ್ ಎಸ್

ಉಕ್ರೇನ್ ರಾಯಭಾರಿ ಕಚೇರಿಯೊಂದಿಗೆ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತ ಐ.ಎಫ್.ಎಸ್ ಅಧಿಕಾರಿ ಮನೋಜ್ ರಾಜನ್ ಅವರು ನಿರಂತರವಾಗಿ ಸಂಪರ್ಕದಲ್ಲಿದ್ದು, ಶ್ರಮವಹಿಸಿದ್ದಾರೆ. ಈ ಕಾರ್ಯಾಚರಣೆ ಯಲ್ಲಿ ಭಾಗಿಯಾದ ಅವರು ಸೇರಿದಂತೆ ಎಲ್ಲರಿಗೂ ಧನ್ಯವಾದಗಳು ಎಂದು ಹೇಳಿದರು.

ಉಕ್ರೇನ್ ಮತ್ತು ಪೊಲಾಂಡ್ ಅಧಿಕಾರಿಗಳಿಗೂ ಧನ್ಯವಾದಗಳನ್ನು ತಿಳಿಸಿದರು. ನವೀನ್ ನನ್ನು ಜೀವಂತವಾಗಿ ತರಲಾಗಲಿಲ್ಲ ಎಂಬ ದುಃಖ ಸದಾ ಇರುತ್ತದೆ. ಈಗ ಅವರ ಕುಟುಂಬದವರಿಗೆ ನೆರವು ನೀಡಲಾಗುವುದು. ಅವರೊಂದಿಗೆ ನಾವು ಇದ್ದೇವೆ. ಇಂಥ ಘಟನೆಗಳು ಮರುಕಳಿಸದಂತೆ ಭಗವಂತನಲ್ಲಿ ಪ್ರಾರ್ಥನೆ ಮಾಡಲು ಸಾಧ್ಯ. ಅವನ ಆತ್ಮಕ್ಕೆ ಶಾಂತಿ ದೊರೆಯಲಿ ಎಂದರು.

WhatsApp Join our WhatsApp Channel
Previous Post

ಶೀಘ್ರದಲ್ಲಿ ಕ್ಷೀರ ಸಮೃದ್ಧಿ ಬ್ಯಾಂಕ್ ಸ್ಥಾಪನೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

Next Post

#PradeepMehra Viral Video | ಈ ಯುವಕ ಭಾರತೀಯ ಸೇನೆ ಸೇರಲು “ಹೀಗೆ” ಮಾಡುತ್ತಿದ್ದಾನೆ : ದೇಶದಾದ್ಯಂತ ವೈರಲ್ ಆದ ಸ್ಪೂರ್ತಿ ನೀಡುವ ವಿಡಿಯೋ

Next Post

#PradeepMehra Viral Video | ಈ ಯುವಕ ಭಾರತೀಯ ಸೇನೆ ಸೇರಲು "ಹೀಗೆ" ಮಾಡುತ್ತಿದ್ದಾನೆ : ದೇಶದಾದ್ಯಂತ ವೈರಲ್ ಆದ ಸ್ಪೂರ್ತಿ ನೀಡುವ ವಿಡಿಯೋ

ACB RAID | ಬಿಡಿಎ ಬ್ರೋಕರ್, ಏಜಂಟ್ ಗಳ ಮನೆ ಮೇಲೆ ಎಸಿಬಿ ದಾಳಿಗೆ ಈ ಕಾರಣವಿತ್ತು...! ಹುಡುಕಿದಷ್ಟು ಕಂತೆ ಕಂತೆ ಹಣ, ಚಿನ್ನಾಭರಣ ಪತ್ತೆ

Please login to join discussion

Like Us on Facebook

Follow Us on Twitter

Recent News

GBA News | ಶಾಂತಿನಗರ ಇಇ ಕಚೇರಿಯಲ್ಲಿ 9 ಕೋಟಿ ರೂ.ಗಳ ಕಂಪ್ಯೂಟರ್ ಬಿಲ್ ಹಗರಣ: ಲೋಕಾಯುಕ್ತಕ್ಕೆ ದೂರು

August 4, 2026

PIB FACT CHECK | ​ಎಚ್ಚರ! ನಿರ್ಮಲಾ ಸೀತಾರಾಮನ್ ಅವರ AI ನಕಲಿ ವಿಡಿಯೋ ಬಳಸಿ ಹೂಡಿಕೆ ವಂಚನೆ

August 4, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

GBA News | ಶಾಂತಿನಗರ ಇಇ ಕಚೇರಿಯಲ್ಲಿ 9 ಕೋಟಿ ರೂ.ಗಳ ಕಂಪ್ಯೂಟರ್ ಬಿಲ್ ಹಗರಣ: ಲೋಕಾಯುಕ್ತಕ್ಕೆ ದೂರು

August 4, 2026

PIB FACT CHECK | ​ಎಚ್ಚರ! ನಿರ್ಮಲಾ ಸೀತಾರಾಮನ್ ಅವರ AI ನಕಲಿ ವಿಡಿಯೋ ಬಳಸಿ ಹೂಡಿಕೆ ವಂಚನೆ

August 4, 2026

ಗಾಂಧಿನಗರ: ‘ಬೆಂಗಳೂರು ಪೇಟೆ’ ಪ್ರದೇಶದಲ್ಲಿ ಅಗ್ನಿ ಅವಘಡ ನಿಯಂತ್ರಣಕ್ಕೆ ನಗರದ ಪ್ರಥಮ ‘ಫೈರ್ ಹೈಡ್ರೆಂಟ್’ ವ್ಯವಸ್ಥೆ ಲೋಕಾರ್ಪಣೆ

August 3, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group