Tuesday, August 4, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ರಾಜ್ಯದಲ್ಲಿ ಅತಿವೃಷ್ಟಿ ಹಾಗೂ ಬರ ಪರಿಸ್ಥಿತಿ: ಪರಿಶೀಲನೆಗೆ ಜಿಲ್ಲಾವಾರು ಸಚಿವರ ನೇಮಕ

    ಡಿ.ಕೆ. ಶಿವಕುಮಾರ್ ಸಂಪುಟ ವಿಸ್ತರಣೆ: ಇಂದು 20 ನೂತನ ಸಚಿವರ ಪ್ರಮಾಣ ವಚನ, ಇಲ್ಲಿದೆ ಎಐಸಿಸಿ ಅಧಿಕೃತ ಪಟ್ಟಿ

    ಕರುನಾಡಲ್ಲಿ ವರುಣನ ಆರ್ಭಟ: ಭರ್ತಿಯಾಗುತ್ತಿರುವ ಜಲಾಶಯಗಳು, ಮೈದುಂಬಿ ಹರಿಯುತ್ತಿರುವ ನದಿಗಳು

    BDA News | ಬಿಡಿಎ ಲಂಚಾವತಾರ: ಎನ್‌ಪಿಕೆಎಲ್ ರೈತರಿಗೆ ನಿವೇಶನ ನೀಡಲು ಲಂಚ ಕೇಳಿದ ಎಇಇ, ನೋಟಿಸ್ ಜಾರಿ

    KEA ಗ್ರಾಮ ಆಡಳಿತ ಅಧಿಕಾರಿ ಹುದ್ದೆ: ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ

    ​ಪೇಪರ್ ಲೀಕ್ ತಡೆಗೆ ಹೊಸ ಅಸ್ತ್ರ: ಸಂಸತ್ತಿನಲ್ಲಿ ಅಂಗೀಕಾರಗೊಂಡಿತು ಕಠಿಣ ವಿಧೇಯಕ

    ಆ. 15ರಿಂದ ಸ್ವಿಗ್ಗಿ ಸೇವೆ ಸ್ಥಗಿತ? ಆನ್‌ಲೈನ್ ಆಹಾರ ನೀಡಿಕೆ ಸಂಸ್ಥೆ ವಿರುದ್ಧ ಬೆಂಗಳೂರು ಹೋಟೆಲುಗಳ ಸಂಘದ ಖಡಕ್ ಎಚ್ಚರಿಕೆ

    1200 ಬೋರ್‌ವೆಲ್‌ಗಳಿಗೆ ಮರುಜೀವ: ತಮಿಳುನಾಡು ಐಎಎಸ್ ಅಧಿಕಾರಿಗೆ ನಟ ಮಾಧವನ್ ಸಲಾಂ

    Indian billionaires Increased | ಭಾರತದಲ್ಲಿ ಬಿಲಿಯನೇರ್‌ಗಳ ಸಂಖ್ಯೆ 4 ಪಟ್ಟು ಹೆಚ್ಚಳ: 576ಕ್ಕೆ ಏರಿಕೆ

  • Bengaluru Focus

    ಸರ್ಕಾರಕ್ಕೆ 1 ಕೋಟಿ ರೂ. ಡಿವಿಡೆಂಡ್ ನೀಡಿದ ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್

    GBA News | ಶಾಂತಿನಗರ ಇಇ ಕಚೇರಿಯಲ್ಲಿ 9 ಕೋಟಿ ರೂ.ಗಳ ಕಂಪ್ಯೂಟರ್ ಬಿಲ್ ಹಗರಣ: ಲೋಕಾಯುಕ್ತಕ್ಕೆ ದೂರು

    ಗಾಂಧಿನಗರ: ‘ಬೆಂಗಳೂರು ಪೇಟೆ’ ಪ್ರದೇಶದಲ್ಲಿ ಅಗ್ನಿ ಅವಘಡ ನಿಯಂತ್ರಣಕ್ಕೆ ನಗರದ ಪ್ರಥಮ ‘ಫೈರ್ ಹೈಡ್ರೆಂಟ್’ ವ್ಯವಸ್ಥೆ ಲೋಕಾರ್ಪಣೆ

    ಮತದಾರರ ಪಟ್ಟಿ ಪರಿಶೀಲನೆ ಸಾಂದರ್ಭಿಕ ಚಿತ್ರ

    GBA News | ಮತದಾರರ ಪಟ್ಟಿ ಪರಿಷ್ಕರಣೆ: ಆಗಸ್ಟ್ 8 ಕಡೇ ದಿನ, ಸಮಸ್ಯೆ ಇದ್ದರೆ 1950ಗೆ ಕರೆ ಮಾಡಿ

    GBA News | ​ಕಗ್ಗದಾಸಪುರದಲ್ಲಿ ಟ್ರಾಫಿಕ್ ಜಾಮ್‌ಗೆ ಮುಕ್ತಿ: ಪೂರ್ವ ಪಾಲಿಕೆಯಿಂದ ಇ.ಇ.ಎಫ್.ಸಿ ಯೋಜನೆ ಯಶಸ್ವಿ

    Lokayukta News | ಪಾಲಿಕೆಯೇ ಟಿಪ್ಪರ್ ಖರೀದಿಸಿ ಕಸ ವಿಲೇವಾರಿ ಮಾಡಲಿ: 5 ನಗರ ಪಾಲಿಕೆಗಳಿಗೆ ಲೋಕಾಯುಕ್ತರ ಖಡಕ್ ಸೂಚನೆ

    BDA News | ಬಿಡಿಎ ಲಂಚಾವತಾರ: ಎನ್‌ಪಿಕೆಎಲ್ ರೈತರಿಗೆ ನಿವೇಶನ ನೀಡಲು ಲಂಚ ಕೇಳಿದ ಎಇಇ, ನೋಟಿಸ್ ಜಾರಿ

    ಆಗಸ್ಟ್ 1 ರಿಂದ ಬೆಂಗಳೂರಿನಲ್ಲಿ ‘ತ್ಯಾಜ್ಯದಿಂದ ಸ್ವಾತಂತ್ರ್ಯ’ ಅಭಿಯಾನ: 22 ಸಾವಿರ ಟನ್ ಪಾರಂಪರಿಕ ಕಸ ತೆರವು

    ​ಬೆಳ್ಳಂದೂರು ಎಸ್‌ಟಿಪಿ ಪ್ರಕರಣ: ತನಿಖೆ ಮುಂದುವರಿಕೆ, ಕಾರ್ಮಿಕರ ಸುರಕ್ಷತೆಗೆ ಜಲಮಂಡಳಿ ಒತ್ತು

  • Public interest
  • BW Special
  • Life Style
  • Photo Gallery
  • Video
No Result
View All Result

Home News Wire

ACB RAIDS IN KARNATAKA | ಎಸಿಬಿ ಪೊಲೀಸರ ದಾಳಿಗೆ ಹೆದರಿ ಕಸದ ಡಬ್ಬಿಗೆ ಚಿನ್ನ- ಬೆಳ್ಳಿ ಆಭರಣ ಎಸೆದಿದ್ದ ಭ್ರಷ್ಟ ಅಧಿಕಾರಿ

ರಾಜ್ಯಾದ್ಯಂತ ಎಸಿಬಿ ಅಧಿಕಾರಿಗಳ ವ್ಯಾಪಕ ಕಾರ್ಯಾಚರಣೆ- 18 ಭ್ರಷ್ಟ ಅಧಿಕಾರಿಗಳ ಮೇಲೆ ದಾಳಿ |ಹುಡುಕಿದಷ್ಟು ಸಿಗುತ್ತಿದೆ ಭ್ರಷ್ಟ ಅಧಿಕಾರಿಗಳ ಚರ- ಸ್ಥಿರಾಸ್ತಿ | ಕೆಜಿಗಟ್ಟಲೆ ಚಿನ್ನ, ಬೆಳ್ಳಿ ಆಭರಣ – ಗಟ್ಟಿಗಳ ಪತ್ತೆ |ಕೋಟ್ಯಾಂತರ ರೂಪಾಯಿ ಬೆಲೆಬಾಳುವ ಆಸ್ತಿ- ಪಾಸ್ತಿ ದಾಖಲೆಗಳ ಬಗ್ಗೆ ಎಸಿಬಿ ಅಧಿಕಾರಿಗಳಿಂದ ಶೋಧ

by Bengaluru Wire Desk
March 16, 2022
in News Wire, Others
Reading Time: 2 mins read
0
ದಕ್ಷಿಣ ಕನ್ನಡದ ಕೆಪಿಟಿಸಿಎಲ್ ಎಇ ದಯಾ ಸುಂದರ್ ರಾಜು ಅವರ ಬಂಗಲೆ

ದಕ್ಷಿಣ ಕನ್ನಡದ ಕೆಪಿಟಿಸಿಎಲ್ ಎಇ ದಯಾ ಸುಂದರ್ ರಾಜು ಅವರ ಬಂಗಲೆ

ಬೆಂಗಳೂರು, (www.bengaluruwire.com) : ಭ್ರಷ್ಟ ಅಧಿಕಾರಿಗಳು ಇಂದು ಬೆಳ್ಳಂಬೆಳಗ್ಗೆ ಭ್ರಷ್ಟಾಚಾರ ನಿಗ್ರಹ ದಳ (ACB)ದ ಅಧಿಕಾರಿಗಳು ನಡೆಸಿರುವ ಕಾರ್ಯಾಚರಣೆಯಿಂದ ಕಂಗಾಲಾಗಿದ್ದಾರೆ. ಬೆಳಗ್ಗೆ ಬೆಳಗ್ಗೆ ರಾಜ್ಯದ ವಿವಿಧ ಜಿಲ್ಲೆಗಳ 18 ಸರ್ಕಾರಿ ಅಧಿಕಾರಿಗಳ ಮನೆ, ಕಚೇರಿ ಸೇರಿದಂತೆ 77 ಕಡೆಗಳಲ್ಲಿ 100ಕ್ಕೂ ಹೆಚ್ಚು ಅಧಿಕಾರಿಗಳು ಏಕ ಕಾಲಕ್ಕೆ ದಾಳಿ ಮಾಡಿ ಶೋಧ ಕಾರ್ಯ ನಡೆಸಿದ್ದಾರೆ.

ಸುಮಾರು 300 ಸಿಬ್ಬಂದಿಯ ಜೊತೆ ಶೋಧ ಕಾರ್ಯದ ವೇಳೆ ಭ್ರಷ್ಟ ಸರ್ಕಾರಿ ಅಧಿಕಾರಿಗಳ ಬಳಿ ಲಕ್ಷದಿಂದ ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಆಸ್ತಿ, ಒಡವೆ, ಚಿನ್ನಾಭರಣ, ಬೆಲೆ ಬಾಳುವ ವಸ್ತುಗಳು, ನಿವೇಶನ, ಕಟ್ಟಡ, ಕಾಂಪ್ಲೆಕ್ಸ್, ಮ್ಯೂಚೆಲ್ ಫಂಡ್ ಹೂಡಿಕೆ, ಕೃಷಿಭೂಮಿ ಸೇರಿದಂತೆ ವಿವಿಧ ರೀತಿ ಚರ-ಸ್ಥಿರಾಸ್ತಿಗಳನ್ನು ಎಸಿಬಿ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಹೊತ್ತು ಹೋದಂತೆ ಆ ಲಂಚಬಾಕ ಅಧಿಕಾರಿಗಳ ಆಸ್ತಿ-ಪಾಸ್ತಿಗಳನ್ನು ಕಂಡು ಕಾರ್ಯಾಚರಣೆ ನಡೆಸುತ್ತಿರುವ ಪೊಲೀಸರೇ ದಂಗುಬಡಿದು ಹೋಗಿದ್ದಾರೆ.

ಎಸಿಬಿ ದಾಳಿಗೆ ಹೆದರಿ ಕಸದ ಡಬ್ಬಿಗೆ ಚಿನ್ನ- ಬೆಳ್ಳಿ ಆಭರಣ ಎಸೆದ ಭ್ರಷ್ಟ ಅಧಿಕಾರಿ :

ಕಸದ ಡಬ್ಬಿಯಲ್ಲಿದ್ದ ಚಿನ್ನ- ಬೆಳ್ಳಿ ಆಭರಣ ಹಾಗೂ ನಗದು

ರಾಯಚೂರಿನ ಕೃಷ್ಣ ಜಲಭಾಗ್ಯ ನಿಗಮದ ಎಇಇ ಅಶೋಕ್ ರೆಡ್ಡಿ ಮನೆಗೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದಾಗ ಮನೆಯವರು ಬೆದರಿ, ತಮ್ಮ ಮನೆಯ ಕಸದ ಡಬ್ಬಕ್ಕೆ ನಗದು, ಚಿನ್ನಾಭರಣ, ಬೆಳ್ಳಿಯ ಆಭರಣಗಳನ್ನು ಪ್ಲಾಸ್ಟಿಕ್ ಚೀಲದಲ್ಲಿ ಸುತ್ತಿ ಬಿಸಾಡಿದ್ದರು. ಆದರೆ ಎಸಿಬಿ ದಳ ಪೊಲೀಸರು ಇದನ್ನು ಪತ್ತೆಹಚ್ಚಿ ಕವರ್ ಬಿಚ್ಚಿ ನೋಡಿದಾಗ ಅದರಲ್ಲಿ 7 ಲಕ್ಷ ನಗದು, 41 ತೊಲೆ ಚಿನ್ನ ಹಾಗೂ 60 ತೊಲೆ ಬೆಳ್ಳಿಯ ಆಭರಣಗಳು ಪತ್ತೆಯಾಯಿತು.

ಕಸದ ಡಬ್ಬಿಗೆ ಹಣ, ಚಿನ್ನ- ಬೆಳ್ಳಿ ಆಭರಣ ಕವರ್ ನಲ್ಲಿ ಸುತ್ತಿ ಎಸೆದಿರುವುದನ್ನು ಪತ್ತೆ ಹಚ್ಚಿದ ಎಸಿಬಿ ತಂಡ

ಇನ್ನು ಬಾದಾಮಿಯ ಅರಣ್ಯ ಇಲಾಖೆಯ ಆರ್ ಎಫ್ ಒ ಪಿ.ಶಿವಾನಂದ ಅವರ ಮನೆಯಲ್ಲಿ ನೋಟನ್ನು ಎಣಿಸುವ ಯಂತ್ರ ಹಾಗೂ 3 ಕೆಜಿ ಗಂಧದ ತುಂಡುಗಳು ಪತ್ತೆಯಾಗಿದೆ. ವಿಜಯಪುರ ನಿರ್ಮಿತಿ ಕೇಂದ್ರದ ವ್ಯವಸ್ಥಾಪಕ ಗೋಪಿನಾಥ್ ಎನ್.ಮಾಳಗಿ ಅವರ ಬಳಿ ಬರೋಬ್ಬರಿ ಕೋಟ್ಯಾಂತರ ರೂಪಾಯಿ ಹಣವನನ್ನು ಮ್ಯೂಚುವಲ್ ಫಂಡ್ ನಲ್ಲಿ ಹೂಡಿಕೆ ಮಾಡಿರುವುದು ಪತ್ತೆಯಾಗಿದೆ.

ಬಾದಾಮಿಯ ಅರಣ್ಯ ಇಲಾಖೆ ಆರ್ ಎಫ್ ಒ ಮನೆಯಲ್ಲಿ ಕಂಡು ಬಂದ 3 ಕೆಜಿ ಗಂಧದ ತುಂಡು ಹಾಗೂ ಹಣ ಎಣಿಸುವ ಯಂತ್ರ

ಎಇ ಅಧಿಕಾರಿ ಮನೆಯಲ್ಲಿ ಐಷಾರಾಮಿ ಹೋಮ್ ಥಿಯೇಟರ್ :

ಐಷಾರಾಮಿ ಹೋಮ್ ಥಿಯೇಟರ್

ಇನ್ನು ಚಿಕ್ಕಮಗಳೂರಿನ ಲೋಕೋಪಯೋಗಿ ಇಲಾಖೆಯ ಎಇ ಗವಿರಂಗಪ್ಪ ತಮ್ಮ ಐಷಾರಾಮಿ ಮನೆಯಲ್ಲಿ ಭಾರೀ ಮೌಲ್ಯ ಹೋಮ್ ಥಿಯೇಟರ್ ಸೌಲಭ್ಯ ಕಲ್ಪಿಸಿಕೊಂಡಿದ್ದನ್ನು ಕಂಡು ಎಸಿಬಿ ಅಧಿಕಾರಿಗಳು ಹುಬ್ಬೇರಿಸಿದ್ದರು.

ಬೆಂಗಳೂರಿನ ಸಾರಿಗೆ ಮತ್ತು ರಸ್ತೆ ಸುರಕ್ಷತೆ ಇಲಾಖೆಯ ಹೆಚ್ಚುವರಿ ಆಯುಕ್ತ ಜೆ.ಜ್ಞಾನೇಂದ್ರ ಕುಮಾರ್ ಮನೆಯಲ್ಲಿ ಎಸಿಬಿ ಅಧಿಕಾರಿಗಳು 1.64 ಗ್ರಾಮ್ ಚಿನ್ನಾಭರಣ, 13.73 ಕೆಜಿ ಬೆಳ್ಳಿಯ ಆಭರಣ ಹಾಗೂ 2.24 ಲಕ್ಷ ನಗದು ಹಣವಿರುವುದನ್ನು ಪತ್ತೆಹಚ್ಚಿದ್ದಾರೆ.

ಸಾರಿಗೆ ಇಲಾಖೆ ಹೆಚ್ಚುವರಿ ಆಯುಕ್ತ ಜೆ.ಜ್ಞಾನೇಂದ್ರ ಕುಮಾರ್ ಅವರ ಮನೆಯಲ್ಲಿ ಸಿಕ್ಕ ಬೆಲೆ ಬಾಳುವ ಚಿನ್ನಾಭರಣ, ಸೀರೆ, ವಾಚ್, ನಗದು ಇತ್ಯಾದಿ

.ಎಸಿಬಿ ದಾಳಿಗೆ ಒಳಗಾದ ಅಧಿಕಾರಿಗಳ ಅಧಿಕಾರಿಗಳ ವಿವರ ಈ ಕೆಳಕಂಡಂತಿದೆ :

  1. ಬಿ.ಕೆ.ಶಿವಕುಮಾರ್, ಹೆಚ್ಚುವರಿ ನಿರ್ದೇಶಕ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಖನಿಜ ಭವನ ಬೆಂಗಳೂರು
  2. ಜೆ.ಜ್ಞಾನೇಂದ್ರ ಕುಮಾರ್, ಹೆಚ್ಚುವರಿ ಆಯುಕ್ತರು, ರಸ್ತೆ ಸುರಕ್ಷತೆ, ಸಾರಿಗೆ ಇಲಾಖೆ, ಟಿಟಿಎಂಸಿ ಬಿಲ್ಡಿಂಗ್, ಶಾಂತಿನಗರ, ಬೆಂಗಳೂರು
  3. ವಿ.ರಾಕೇಶ್ ಕುಮಾರ್, ಉಪನಿರ್ದೇಶಕ, ನಗರ ಯೋಜನೆ ವಿಭಾಗ, ಬಿಡಿಎ, ಬೆಂಗಳೂರು
  4. ರಮೇಶ್ ಕನಕಟ್ಟೆ, ಆರ್ ಎಫ್ ಒ, ಸಾಮಾಜಿಕ ಅರಣ್ಯ, ಯಾದಗಿರಿ
  5. ಬಸವರಾಜ ಶೇಖರ್ ರೆಡ್ಡಿ ಪಾಟಿಲ್, ಇಂಜಿನಿಯರ್, ಕೌಜಳಗಿ ವಿಭಾಗ ಗೋಕಾಕ್
  6.  ಬಸವಕುಮಾರ್.ಎಸ್, ಶಿರಸ್ತೆದಾರ್,ಅಣ್ಣಿಗೇರಿ, ಜಿಲ್ಲಾಧಿಕಾರಿ ಕಚೇರಿ, ಗದಗ
  7.  ಗೋಪಿನಾಥ್ ಎನ್.ಮಾಳಗಿ, ವ್ಯವಸ್ಥಾಪಕ, ನಿರ್ಮಿತಿ ಕೇಂದ್ರ ವಿಜಯಪುರ
  8. ಶಿವಾನಂದ ಪಿ. ಶರಣಪ್ಪ, ಆರ್ ಎಫ್ ಒ, ಬಾದಾಮಿ,
  9. ಮಂಜುನಾಥ್, ಅಸಿಸ್ಟೆಂಟ್ ಕಮೀಷನರ್, ರಾಮನಗರ
  10.  ಶ್ರೀನಿವಾಸ್, ಜನರಲ್ ಮ್ಯಾನೇಜರ್ ಸಮಾಜ ಕಲ್ಯಾಣ ಇಲಾಖೆ
  11.  ಮಹೇಶ್ವರಪ್ಪ, ಜಿಲ್ಲಾ ಪರಿಸರ ಅಧಿಕಾರಿ, ದಾವಣಗೆರೆ
  12.  ಕೃಷ್ಣನ್, ಎಇ, ಎಪಿಎಂಸಿ ಹಾವೇರಿ
  13. ಚೆಲುವರಾಜ್, ಅಬಕಾರಿ ನಿರೀಕ್ಷಕ, ಗುಂಡ್ಲುಪೇಟೆ
  14. ಗಿರೀಶ್, ಸಹಾಯಕ ಇಂಜಿನಿಯರ್, ರಾಷ್ಟ್ರೀಯ ಹೆದ್ದಾರಿ
  15.  ಬಾಲಕೃಷ್ಣ, H.N., ಪೊಲೀಸ್ ಇನ್ಸ್ ಪೆಕ್ಟರ್, ವಿಜಯನಗರ ಪೊಲೀಸ್ ಠಾಣೆ, ಮೈಸೂರು
  16.  ಗವಿ ರಂಗಪ್ಪ, ಎಇ, ಲೋಕೋಪಯೋಗಿ ಇಲಾಖೆ, ಚಿಕ್ಕಮಗಳೂರು
  17.  ಅಶೋಕ ರೆಡ್ಡಿ ಪಾಟೀಲ್, ಎಇಇ, ಕೃಷ್ಣ ಜಲ ಭಾಗ್ಯ ನಿಗಮ, ರಾಯಚೂರು
  18.  ದಯಾ ಸುಂದರ್ ರಾಜು, ಎಇ, ಕೆಪಿಟಿಸಿಎಲ್, ದಕ್ಷಿಣ ಕನ್ನಡ

ಇನ್ನು, ಎಸಿಬಿ ಅಧಿಕಾರಿಗಳು ದಾಳಿ ವೇಳೆ ಏನೇನು ವಶಪಡಿಸಿಕೊಂಡಿದ್ದಾರೆ. ಎಷ್ಟು ಅಕ್ರಮ ಅಸ್ತಿ ಪತ್ತೆಯಾಗಿವೆ ಎಂಬುವುದರ ಸಂಪೂರ್ಣ ಮಾಹಿತಿ ಇನ್ನಷ್ಟೆ ತಿಳಿದು ಬರಬೇಕಿದೆ.

WhatsApp Join our WhatsApp Channel
Previous Post

Hijab Row | ಹಿಜಾಬ್ ಪ್ರಕರಣ ಕುರಿತಂತೆ ಉಚ್ಚ ನ್ಯಾಯಾಲಯದ ತೀರ್ಪು ಪ್ರಕಟ ಹಿನ್ನಲೆ : ಮಕ್ಕಳ ಹಿತದೃಷ್ಟಿಯಿಂದ ಎಲ್ಲರೂ ಹೈಕೋರ್ಟ್ ಆದೇಶ ಪಾಲಿಸಬೇಕು –  ಸಿಎಂ ಬೊಮ್ಮಾಯಿ

Next Post

ISKCON Guru Purnima 2022 | ನಾಳೆ ಇಸ್ಕಾನ್ ನಲ್ಲಿ ಗುರುಪೂರ್ಣಿಮೆ ಆಚರಣೆ : 108 ನದಿಗಳ ಪವಿತ್ರ ಜಲದೊಂದಿಗೆ ವಿಗ್ರಹಗಳಿಗೆ ಮಹಾಭಿಷೇಕ

Next Post
ಬೆಂಗಳೂರಿನ ಇಸ್ಕಾನ್ ದೇವಸ್ಥಾನ

ISKCON Guru Purnima 2022 | ನಾಳೆ ಇಸ್ಕಾನ್ ನಲ್ಲಿ ಗುರುಪೂರ್ಣಿಮೆ ಆಚರಣೆ : 108 ನದಿಗಳ ಪವಿತ್ರ ಜಲದೊಂದಿಗೆ ವಿಗ್ರಹಗಳಿಗೆ ಮಹಾಭಿಷೇಕ

ಚಿತ್ರಕೃಪೆ : ಜೇಮ್ಸ್

JAMES FILM RELEASE | ಅಪ್ಪು ನೆನಪಿನಲ್ಲಿ ಬೇಸರದ ನಡುವೆ ಭರ್ಜರಿಯಾಗಿ ತೆರೆಕಂಡ ಜೇಮ್ಸ್ ಚಿತ್ರಕ್ಕೆ ಸಖತ್ ರೆಸ್ಪಾನ್ಸ್

Please login to join discussion

Like Us on Facebook

Follow Us on Twitter

Recent News

ಸರ್ಕಾರಕ್ಕೆ 1 ಕೋಟಿ ರೂ. ಡಿವಿಡೆಂಡ್ ನೀಡಿದ ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್

August 4, 2026

ರಾಜ್ಯದಲ್ಲಿ ಅತಿವೃಷ್ಟಿ ಹಾಗೂ ಬರ ಪರಿಸ್ಥಿತಿ: ಪರಿಶೀಲನೆಗೆ ಜಿಲ್ಲಾವಾರು ಸಚಿವರ ನೇಮಕ

August 4, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

ಸರ್ಕಾರಕ್ಕೆ 1 ಕೋಟಿ ರೂ. ಡಿವಿಡೆಂಡ್ ನೀಡಿದ ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್

August 4, 2026

ರಾಜ್ಯದಲ್ಲಿ ಅತಿವೃಷ್ಟಿ ಹಾಗೂ ಬರ ಪರಿಸ್ಥಿತಿ: ಪರಿಶೀಲನೆಗೆ ಜಿಲ್ಲಾವಾರು ಸಚಿವರ ನೇಮಕ

August 4, 2026

GBA News | ಶಾಂತಿನಗರ ಇಇ ಕಚೇರಿಯಲ್ಲಿ 9 ಕೋಟಿ ರೂ.ಗಳ ಕಂಪ್ಯೂಟರ್ ಬಿಲ್ ಹಗರಣ: ಲೋಕಾಯುಕ್ತಕ್ಕೆ ದೂರು

August 4, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group