Thursday, August 6, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire
    ಕೆಎಸ್ ಆರ್ ಟಿಸಿ ಕೇಂದ್ರ ಕಚೇರಿ ಸಾಂದರ್ಭಿಕ ಚಿತ್ರ

    ಕೆಎಸ್‌ಆರ್‌ಟಿಸಿಯಿಂದ ‘ಬೆಂಗಳೂರು-ಜೋಗ ಜಲಪಾತ’ ಪ್ಯಾಕೇಜ್ ಟೂರ್ ಆ.8ರಿಂದ ಆರಂಭ: ವೇಳಾಪಟ್ಟಿ, ಪ್ರಯಾಣದರ ವಿವರ ಇಲ್ಲಿದೆ

    ಪೆಟ್ರೋಲ್ ಬಂಕ್ ಸಾಂದರ್ಭಿಕ ಚಿತ್ರ

    ವಿಮೆ ಇಲ್ಲದ ವಾಹನಗಳಿಗೆ ಪೆಟ್ರೋಲ್, ಡೀಸೆಲ್ ಇಲ್ಲ: ಸುಪ್ರೀಂ ಕೋರ್ಟ್ ಪೈಲೆಟ್ ಯೋಜನೆ ರೂಪಿಸಲು ಕೇಂದ್ರಕ್ಕೆ ಸೂಚನೆ

    Science News | ಪ್ರೊ. ಅನ್ನಪೂರ್ಣಿ ಸುಬ್ರಮಣ್ಯಂಗೆ ‘ಕಾಸ್ಪಾರ್ ವಿಕ್ರಮ್ ಸಾರಾಭಾಯ್’ ಪ್ರಶಸ್ತಿ: ಈ ಗೌರವ ಪಡೆದ ಮೊದಲ ಭಾರತೀಯ ಮಹಿಳೆ

    ರಾಜ್ಯದಲ್ಲಿ ಅತಿವೃಷ್ಟಿ ಹಾಗೂ ಬರ ಪರಿಸ್ಥಿತಿ: ಪರಿಶೀಲನೆಗೆ ಜಿಲ್ಲಾವಾರು ಸಚಿವರ ನೇಮಕ

    ಡಿ.ಕೆ. ಶಿವಕುಮಾರ್ ಸಂಪುಟ ವಿಸ್ತರಣೆ: ಇಂದು 20 ನೂತನ ಸಚಿವರ ಪ್ರಮಾಣ ವಚನ, ಇಲ್ಲಿದೆ ಎಐಸಿಸಿ ಅಧಿಕೃತ ಪಟ್ಟಿ

    ಕರುನಾಡಲ್ಲಿ ವರುಣನ ಆರ್ಭಟ: ಭರ್ತಿಯಾಗುತ್ತಿರುವ ಜಲಾಶಯಗಳು, ಮೈದುಂಬಿ ಹರಿಯುತ್ತಿರುವ ನದಿಗಳು

    BDA News | ಬಿಡಿಎ ಲಂಚಾವತಾರ: ಎನ್‌ಪಿಕೆಎಲ್ ರೈತರಿಗೆ ನಿವೇಶನ ನೀಡಲು ಲಂಚ ಕೇಳಿದ ಎಇಇ, ನೋಟಿಸ್ ಜಾರಿ

    KEA ಗ್ರಾಮ ಆಡಳಿತ ಅಧಿಕಾರಿ ಹುದ್ದೆ: ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ

    ​ಪೇಪರ್ ಲೀಕ್ ತಡೆಗೆ ಹೊಸ ಅಸ್ತ್ರ: ಸಂಸತ್ತಿನಲ್ಲಿ ಅಂಗೀಕಾರಗೊಂಡಿತು ಕಠಿಣ ವಿಧೇಯಕ

  • Bengaluru Focus

    GBA News | ​ಕೆ.ಆರ್. ಮಾರುಕಟ್ಟೆ, ವಿಕ್ಟೋರಿಯಾ ಆಸ್ಪತ್ರೆ ಬಳಿಯ ಫುಟ್‌ಪಾತ್ ಒತ್ತುವರಿ ತೆರವು: 223 ಅಕ್ರಮ ಅಂಗಡಿಗಳ ನೆಲಸಮ

    ಜ್ಞಾನಭಾರತಿ ಕ್ಯಾಂಪಸ್‌ನಲ್ಲಿ ಅಪಘಾತ: ಚಿಕಿತ್ಸೆ ಫಲಿಸದೆ ವಿವಿ ವಿದ್ಯಾರ್ಥಿನಿ ಮಾನಸ ಸಾವು

    ಸರ್ಕಾರಕ್ಕೆ 1 ಕೋಟಿ ರೂ. ಡಿವಿಡೆಂಡ್ ನೀಡಿದ ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್

    GBA News | ಶಾಂತಿನಗರ ಇಇ ಕಚೇರಿಯಲ್ಲಿ 9 ಕೋಟಿ ರೂ.ಗಳ ಕಂಪ್ಯೂಟರ್ ಬಿಲ್ ಹಗರಣ: ಲೋಕಾಯುಕ್ತಕ್ಕೆ ದೂರು

    ಗಾಂಧಿನಗರ: ‘ಬೆಂಗಳೂರು ಪೇಟೆ’ ಪ್ರದೇಶದಲ್ಲಿ ಅಗ್ನಿ ಅವಘಡ ನಿಯಂತ್ರಣಕ್ಕೆ ನಗರದ ಪ್ರಥಮ ‘ಫೈರ್ ಹೈಡ್ರೆಂಟ್’ ವ್ಯವಸ್ಥೆ ಲೋಕಾರ್ಪಣೆ

    ಮತದಾರರ ಪಟ್ಟಿ ಪರಿಶೀಲನೆ ಸಾಂದರ್ಭಿಕ ಚಿತ್ರ

    GBA News | ಮತದಾರರ ಪಟ್ಟಿ ಪರಿಷ್ಕರಣೆ: ಆಗಸ್ಟ್ 8 ಕಡೇ ದಿನ, ಸಮಸ್ಯೆ ಇದ್ದರೆ 1950ಗೆ ಕರೆ ಮಾಡಿ

    GBA News | ​ಕಗ್ಗದಾಸಪುರದಲ್ಲಿ ಟ್ರಾಫಿಕ್ ಜಾಮ್‌ಗೆ ಮುಕ್ತಿ: ಪೂರ್ವ ಪಾಲಿಕೆಯಿಂದ ಇ.ಇ.ಎಫ್.ಸಿ ಯೋಜನೆ ಯಶಸ್ವಿ

  • Public interest
  • BW Special
  • Life Style
  • Photo Gallery
  • Video
No Result
View All Result

Home Bengaluru Focus

BW SPECIAL | BENGALURU RAIN | ಬೆಂಗಳೂರಿಗರೇ ATTENTION….!

ಅಕ್ಟೋಬರ್ ತಿಂಗಳ ಮೊದಲ 8 ದಿನದಲ್ಲಿ ಅತಿ ಭಾರೀ ಮಳೆಯಾಗಿದೆ !! | ಶೇ.104ರಷ್ಟು ಅತಿಹೆಚ್ಚು ಮಳೆಯು ಪಶ್ಚಿಮ ವಲಯದಲ್ಲಿ ಸುರಿದಿದೆ | 2021ರಲ್ಲಿ ಒಂದೇ ದಿನ ಅತಿಹೆಚ್ಚು ಮಳೆಯಾಗಿದ್ದು ನಾಗರಬಾವಿಯಲ್ಲಿ | ಮುಂದಿನ ಮೂರು- ನಾಲ್ಕು ದಿನ ಸಿಲಿಕಾನ್ ಸಿಟಿಯಲ್ಲಿ ಭಾರೀ ಮಳೆ ಸಾಧ್ಯತೆ |

by Bengaluru Wire Desk
October 8, 2021
in Bengaluru Focus, BW Special, Public interest
Reading Time: 2 mins read
1
ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಬೆಂಗಳೂರು, (www.bengaluruwire.com)  : ರಾಜಧಾನಿ ಬೆಂಗಳೂರಿನಲ್ಲಿ ವಾರ್ಷಿಕ ಮಳೆಯ ಪ್ರಮಾಣದಲ್ಲಿ ಅತಿಹೆಚ್ಚು ಮಳೆಯಾಗುವ ತಿಂಗಳು ಸೆಪ್ಟೆಂಬರ್. ಆದರೆ ಈ ಬಾರಿ ಸೆಪ್ಟೆಂಬರ್ ಇಡೀ ತಿಂಗಳಲ್ಲಿ ಸಾಮಾನ್ಯ ಮಳೆ ವಾಡಿಕೆ ಸರಾಸರಿ ಪ್ರಮಾಣಕ್ಕಿಂತ ಕಡಿಮೆ ಮಳೆಯಾಗಿತ್ತು. ಆದರೆ ಅಕ್ಟೋಬರ್ ತಿಂಗಳಲ್ಲಿ 1ನೇ ತಾರೀಖಿನಿಂದ 8ನೇ ತಾರೀಖಿನವರೆಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ 8 ವಲಯಗಳಲ್ಲಿ ಯಲಹಂಕ ಹೊರತುಪಡಿಸಿ ಉಳಿದ ಜೋನ್ ಗಳಲ್ಲಿ ಹೆಚ್ಚಿಗಿಂತ ಭಾರೀ ಮಳೆಯಾಗಿರುವ ಬಗ್ಗೆ ವರದಿಯಾಗಿದೆ.

ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (ಕೆಎಸ್ ಎನ್ ಡಿಎಮ್ ಸಿ) ನೀಡಿರುವ ಮಾಹಿತಿಯಲ್ಲಿ ಈ ವಿಷಯ ಬಹಿರಂಗವಾಗಿದೆ. ಕಳೆದ ಎಂಟು ದಿನದಲ್ಲಿ ಬೆಂಗಳೂರು ಪಶ್ಚಿಮ ವಲಯದಲ್ಲಿ ಅಕ್ಟೋಬರ್ ನಲ್ಲಿ ಸಾಮಾನ್ಯವಾಗಿ 53 ಮಿಲಿ ಮೀಟರ್ ಮಳೆಯಾದರೆ ಈ ಅವಧಿಯಲ್ಲಿ 107 ಮಿ.ಮೀ ಮಳೆಯಾಗಿ ಶೇ.104ರಷ್ಟು ಅತಿಹೆಚ್ಚು ಮಳೆಯಾಗಿರುವುದು ದಾಖಲಾಗಿದೆ. ಯಾವ ಯಾವ ಬಿಬಿಎಂಪಿ ವಲಯದಲ್ಲಿ ಕಳೆದ 8 ದಿನದಲ್ಲಿ ಎಷ್ಟೆಷ್ಟು ಪ್ರಮಾಣದ ಮಳೆಯಾಗಿದೆ ಎಂಬುದನ್ನು ಈ ಕೆಳಕಂಡಂತೆ ನೀಡಲಾಗಿದೆ.

ಬಿಬಿಎಂಪಿ ವಲಯ  ವಾಡಿಕೆ ಮಳೆ (ಮಿ.ಮೀ ಗಳಲ್ಲಿ)ವಾಸ್ತವವಾಗಿ ಮಳೆಯಾದ ಪ್ರಮಾಣ% ಶೇಕಡವಾರು ಹೆಚ್ಚು ಮಳೆಯಾದ ಪ್ರಮಾಣಮಳೆಯಾದ ಪ್ರಮಾಣದ ವರ್ಗ
ಪಶ್ಚಿಮ53107104ಅತಿ ಹೆಚ್ಚು
ರಾಜರಾಜೇಶ್ವರಿ ನಗರ5811190ಅತಿ ಹೆಚ್ಚು
ಬೆಂಗಳೂರು ದಕ್ಷಿಣ589766ಅತಿ ಹೆಚ್ಚು
ದಾಸರಹಳ್ಳಿ538663ಅತಿ ಹೆಚ್ಚು
ಪೂರ್ವ577633ಹೆಚ್ಚು
ಮಹದೇವಪುರ607424ಹೆಚ್ಚು
ಬೊಮ್ಮನಹಳ್ಳಿ455727ಹೆಚ್ಚು
ಯಲಹಂಕ50526ಸಾಮಾನ್ಯ

ಕೇವಲ ಎಂಟು ದಿನಗಳಲ್ಲಿ ಸಿಲಿಕಾನ್ ಸಿಟಿಯಲ್ಲಿ ಸರಾಸರಿಯಾಗಿ 113.4 ಮಿ.ಮೀನಷ್ಟು ಮಳೆಯಾಗಿದೆ. ಈ ಅವಧಿಯಲ್ಲಿ ವರುಣನ ಆರ್ಭಟ ಹೆಚ್ಚಾದ ಕಾರಣ ಬೆಂಗಳೂರಿನ ತಗ್ಗು ಪ್ರದೇಶದಲ್ಲಿನ ಮನೆಗಳಿಗೆ ನೀರು ನುಗ್ಗುವ, ಹಲವು ರಸ್ತೆಗಳಲ್ಲಿ ನೀರು ನಿಂತು ಸರಾಗ ವಾಹನ ಸಂಚಾರಕ್ಕೆ ಸಾಕಷ್ಟು ತೊಂದರೆಯಾಗಿದೆ. ಕೆಲಸ ಮುಗಿಸಿ ಮನೆಗೆ ತೆರಳುವ ಸಾರ್ವಜನಿಕರಂತೂ ಸಾಕಷ್ಟು ಪರದಾಡಿರುವುದನ್ನು ಕಾಣಬಹುದಿತ್ತು.

ಬಿಬಿಎಂಪಿ 8 ವಲಯಗಳಲ್ಲಿ ಅತ್ಯಧಿಕ ಮಳೆಯಾದ ಬಗ್ಗೆ ಕೆಎ,ಸ್ಎನ್ ಡಿಎಂಸಿ ಕೇಂದ್ರದ ಅಧಿಕೃತ ಮಾಹಿತಿಯ ದಾಖಲೆ

ಅದೂ ಅಲ್ಲದೆ ಇದೇ ಅಕ್ಟೋಬರ್ 4ರ ಸೋಮವಾರದಂದು ನಾಗರಬಾವಿಯಲ್ಲಿ 117 ಮಿ.ಮೀನಷ್ಟು ಮಳೆಯಾಗಿದ್ದು, 2021ರ ವರ್ಷದಲ್ಲಿ ರಾಜಧಾನಿಯಲ್ಲಿ ಅತಿಹೆಚ್ಚು ಮಳೆ ಬಿದ್ದ ಸ್ಥಳವಾಗಿದೆ. ಸಾಮಾನ್ಯವಾಗಿ ಬೆಂಗಳೂರಿನ ವಾರ್ಷಿಕ ಸರಾಸರಿ ಮಳೆಯ ಪ್ರಮಾಣ 986 ಮಿ.ಮೀ ಆಗಿದೆ. ಸೆಪ್ಟೆಂಬರ್ ತಿಂಗಳು ಅತಿಹೆಚ್ಚು ಒದ್ದೆಯ ತಿಂಗಳು (ಸರಾಸರಿ 211.5 ಮಿ.ಮೀ) ಅಂದರೆ ಮಳೆಯಾಗುವ ಅವಧಿಯಾದರೆ, ಜನವರಿ ತಿಂಗಳು ಶುಷ್ಕ ವಾತಾವರಣವಿರುವ ಕಾಲ (ಸರಾಸರಿ 2.00 ಮಿ.ಮೀ) ಎಂದು ಹವಾಮಾನ ಇಲಾಖೆ ಪರಿಗಣಿಸಿದೆ. ಈ ವರ್ಷದ ಸೆಪ್ಟೆಂಬರ್ ನಲ್ಲಿ ಯಲಹಂಕ ಹೊರತುಪಡಿಸಿದರೆ ಉಳಿದ ಬಿಬಿಎಂಪಿಯ ಏಳು ವಲಯ ವ್ಯಾಪ್ತಿಯಲ್ಲಿ 211.5 ಮಿ.ಮೀನಷ್ಟು ವಾಡಿಕೆ ಮಳೆಗಿಂತ ಅತಿ ಕಡಿಮೆ ಮಳೆಯಾಗಿರುವುದನ್ನು ಕೆಎಸ್ ಎನ್ ಡಿಎಮ್ ಸಿ ಖಚಿತಪಡಿಸಿದೆ.

ಮುಂದಿನ ಮೂರ್ನಾಲ್ಕು ದಿನದಲ್ಲಿ ಬೆಂಗಳೂರಿನಲ್ಲಿ ಭಾರೀ ಮಳೆ ಸಾಧ್ಯತೆ :

“ಇತ್ತೀಚೆಗೆ ತಮಿಳುನಾಡಿನ ಕರಾವಳಿ ಪ್ರದೇಶದ ಬಳಿ ಬಂಗಾಳಕೊಲ್ಲಿ ಸಮುದ್ರದ ಆಗ್ನೇಯ ಭಾಗದಲ್ಲಿ ಚಂಡಮಾರುತದ ಪರಿಣಾಮವಾಗಿ ದಕ್ಷಿಣ ಕರ್ನಾಟಕದಲ್ಲಿ ಉತ್ತಮ ಮಳೆಯಾಗಿದ್ದು, ಅದರ ಪರಿಣಾಮದಿಂದಾಗಿ ಬೆಂಗಳೂರಿನಲ್ಲೂ ಉತ್ತಮ ಮಳೆಯಾಗಿದೆ. ಮುಂದಿನ 3- 4 ದಿನದಲ್ಲಿ ಬೆಂಗಳೂರಿನಲ್ಲಿ ಸಾಮಾನ್ಯದಿಂದ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಅದರಲ್ಲೂ ಅಕ್ಟೋಬರ್ 10 ಹಾಗೂ 12ನೇ ತಾರೀಖು ನಗರದಲ್ಲಿ ಹೆಚ್ಚು ಮಳೆಯಾಗುವ ನಿರೀಕ್ಷೆಯಿದೆ.”

– ಗೀತಾ ಅಗ್ನಿಹೋತ್ರಿ, ಉಸ್ತುವಾರಿ ನಿರ್ದೇಶಕಿ, ಬೆಂಗಳೂರು ಹವಾಮಾನ ಇಲಾಖೆ

ಒಂಭತ್ತು ವರ್ಷಗಳಲ್ಲಿ (2013 ರಿಂದ 2021 ಅ.8ರ ತನಕ) ವಾರ್ಷಿಕವಾಗಿ ಅತಿಹೆಚ್ಚು ಮಳೆಯಾದ ಸ್ಥಳದ ವಿವರಗಳು ಈ ಕೆಳಕಂಡಂತಿದೆ :

ವರ್ಷಮಳೆಯಾದ ದಿನ& ತಿಂಗಳುಅತಿ ಹೆಚ್ಚು ಮಳೆ (ಮಿ.ಮೀಗಳಲ್ಲಿ)ಸ್ಥಳ
201325ನೇ ನವೆಂಬರ್147ಸಂಪಂಗಿರಾಮನಗರ
20149ನೇ ಅಕ್ಟೋಬರ್141ಹಂಪಿನಗರ
201517ನೇ ಆಗಸ್ಟ್198ಬೇಗೂರು
20162ನೇ ಜೂನ್111ಬೆಳ್ಳಂದೂರು
201715ನೇ ಆಗಸ್ಟ್182ಬಿಟಿಎಮ್ ಲೇಔಟ್
201824ನೇ ಸೆಪ್ಟೆಂಬರ್206ಹೆಮ್ಮಿಗೆಪುರ
20198ನೇ ಮೇ186ದೊಡ್ಡಬಿದರಕಲ್ಲು
202026ನೇ ಜೂನ್186ಕೆಂಗೇರಿ
20214ನೇ ಅಕ್ಟೋಬರ್117ನಾಗರಬಾವಿ

ಕಳೆದ 9 ವರ್ಷದಲ್ಲಿ ಒಂದೇ ದಿನ ಅತಿಹೆಚ್ಚು ಮಳೆಯಾದ ಸ್ಥಳ ಹೆಮ್ಮಿಗೆಪುರ :

ಬೆಂಗಳೂರಿನಲ್ಲಿ 2013ರಿಂದ 2021ರ ಒಂಭತ್ತು ವರ್ಷಗಳಲ್ಲಿ ಆಯಾ ವರ್ಷದಲ್ಲಿ ಅತಿಹೆಚ್ಚು ಮಳೆ ಬಿದ್ದ ಸ್ಥಳವನ್ನು ಗಮನಿಸುವುದಾದರೆ 2018ರಲ್ಲಿ ರಾಜರಾಜೇಶ್ವರಿನಗರ ವಲಯದ ಹೆಮ್ಮಿಗೆಪುರದಲ್ಲಿ 24ನೇ ಸೆಪ್ಟೆಂಬರ್ ರಂದು ಬರೋಬ್ಬರಿ 206 ಮಿ.ಮೀ ಮಳೆಯಾಗಿದ್ದು ಆ ವರ್ಷದಲ್ಲಿ ಅತಿಹೆಚ್ಚು ಮಳೆ ಬಿದ್ದ ದಿನವಾಗಿದೆ. ಅಲ್ಲದೆ ಒಂಭತ್ತು ವರ್ಷದಲ್ಲೇ ಅತಿಹೆಚ್ಚು ಮಳೆ ಬಿದ್ದ ದಿನ ಹಾಗೂ ಸ್ಥಳವಾಗಿದೆ. ಇನ್ನು ಹಂಪಿನಗರದಲ್ಲಿ ಈ 9 ವರ್ಷಗಳಲ್ಲಿ ಆಯಾ ವರ್ಷದಲ್ಲಿ ಅತಿಹೆಚ್ಚು ಮಳೆಯಾದ ಪ್ರಮಾಣದಲ್ಲಿ ಒಂದೇ ದಿನ ಅತಿ ಕಡಿಮೆ ಮಳೆಯಾಗಿದ್ದು 2014ರ ಅಕ್ಟೋಬರ್ 9ರಂದು ಎಂದು ಕೆಎಸ್ ಎನ್ ಡಿಎಮ್ ಸಿಯ ವರದಿಯಲ್ಲಿ ತಿಳಿಸಿದೆ.

ಈ ವರ್ಷದಲ್ಲೇ ಒಂದು ದಿನದಲ್ಲಿ ಅತಿಹೆಚ್ಚು ಮಳೆ ಸುರಿದಿದ್ದು 4ನೇ ಅಕ್ಟೋಬರ್ ರಂದು ನಾಗರಬಾವಿ (117 ಮಿ.ಮೀ)ಯಲ್ಲಿ ಎಂದು ವರದಿಯಲ್ಲಿ ಹೇಳಲಾಗಿದೆ. ಒಟ್ಟಾರೆ ಇನ್ನು ಮೂರ್ನಾಲ್ಕು ನಗರದಾದ್ಯಂತ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದ್ದು, ಬೆಂಗಳೂರಿನ ನಾಗರೀಕರು ಈ ಬಗ್ಗೆ ಜಾಗೃತೆವಹಿಸಬೇಕು ಎಂದು ಇಲಾಖೆಯ ಅಧಿಕಾರಿಗಳು ಸಲಹೆ ನೀಡಿದ್ದಾರೆ.

WhatsApp Join our WhatsApp Channel
Previous Post

BUILDING COLLAPSE | ಬೆಂಗಳೂರಿನಲ್ಲಿ ಮತ್ತೊಂದು ಬಹುಮಹಡಿ ಕಟ್ಟಡ ಕುಸಿತ

Next Post

ಕೋವಿಡ್-19 ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ಕುಟುಂಬದವರು ಪರಿಹಾರ ಪಡೆಯಲು ಹೀಗೆ ಮಾಡಿ

Next Post
ಬಿಬಿಎಂಪಿ ಕೇಂದ್ರ ಕಚೇರಿ, ಸಾಂದರ್ಭಿಕ ಚಿತ್ರ

ಕೋವಿಡ್-19 ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ಕುಟುಂಬದವರು ಪರಿಹಾರ ಪಡೆಯಲು ಹೀಗೆ ಮಾಡಿ

Manual Scavengers | ಸ್ಮಾರ್ಟ್ ಸಿಟಿ ಕಾಮಗಾರಿಯಲ್ಲಿ ಮಲ ಹೊರುವ ಪದ್ಧತಿ ಜೀವಂತ....!?

Please login to join discussion

Like Us on Facebook

Follow Us on Twitter

Recent News

GBA News | ​ಕೆ.ಆರ್. ಮಾರುಕಟ್ಟೆ, ವಿಕ್ಟೋರಿಯಾ ಆಸ್ಪತ್ರೆ ಬಳಿಯ ಫುಟ್‌ಪಾತ್ ಒತ್ತುವರಿ ತೆರವು: 223 ಅಕ್ರಮ ಅಂಗಡಿಗಳ ನೆಲಸಮ

August 5, 2026

ಜ್ಞಾನಭಾರತಿ ಕ್ಯಾಂಪಸ್‌ನಲ್ಲಿ ಅಪಘಾತ: ಚಿಕಿತ್ಸೆ ಫಲಿಸದೆ ವಿವಿ ವಿದ್ಯಾರ್ಥಿನಿ ಮಾನಸ ಸಾವು

August 5, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

GBA News | ​ಕೆ.ಆರ್. ಮಾರುಕಟ್ಟೆ, ವಿಕ್ಟೋರಿಯಾ ಆಸ್ಪತ್ರೆ ಬಳಿಯ ಫುಟ್‌ಪಾತ್ ಒತ್ತುವರಿ ತೆರವು: 223 ಅಕ್ರಮ ಅಂಗಡಿಗಳ ನೆಲಸಮ

August 5, 2026

ಜ್ಞಾನಭಾರತಿ ಕ್ಯಾಂಪಸ್‌ನಲ್ಲಿ ಅಪಘಾತ: ಚಿಕಿತ್ಸೆ ಫಲಿಸದೆ ವಿವಿ ವಿದ್ಯಾರ್ಥಿನಿ ಮಾನಸ ಸಾವು

August 5, 2026
ಕೆಎಸ್ ಆರ್ ಟಿಸಿ ಕೇಂದ್ರ ಕಚೇರಿ ಸಾಂದರ್ಭಿಕ ಚಿತ್ರ

ಕೆಎಸ್‌ಆರ್‌ಟಿಸಿಯಿಂದ ‘ಬೆಂಗಳೂರು-ಜೋಗ ಜಲಪಾತ’ ಪ್ಯಾಕೇಜ್ ಟೂರ್ ಆ.8ರಿಂದ ಆರಂಭ: ವೇಳಾಪಟ್ಟಿ, ಪ್ರಯಾಣದರ ವಿವರ ಇಲ್ಲಿದೆ

August 5, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group