Saturday, May 9, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ತಮಿಳುನಾಡಿನಲ್ಲಿ ಸರ್ಕಾರ ರಚನೆ ಕಸರತ್ತು: ಬಹುಮತ ಸಾಬೀತುಪಡಿಸಿದರೆ ಮಾತ್ರ ವಿಜಯ್‌ಗೆ ಅವಕಾಶ ಎಂದ ರಾಜ್ಯಪಾಲ ಅರ್ಲೇಕರ್

    ಅಕ್ಕಿ ಗೋದಾಮುವೊಂದರ ಸಾಂದರ್ಭಿಕ ಚಿತ್ರ.

    ದೇಶದ ಆಹಾರ ಭದ್ರತೆ ಭದ್ರ: ಬಫರ್ ಸ್ಟಾಕ್‌ಗಿಂತ ಮೂರು ಪಟ್ಟು ಹೆಚ್ಚು ಧಾನ್ಯ ಸಂಗ್ರಹ

    ಬೆಂಗಳೂರು: ರಾಜ್ಯ ಸರ್ಕಾರದ ಮೊದಲ ಹೈಟೆಕ್ ಆರೋಗ್ಯ ತುರ್ತು ಕಾರ್ಯಾಚರಣೆ ಕೇಂದ್ರ (HEOC) ಲೋಕಾರ್ಪಣೆ

    ಬುಲೆಟ್ ರೈಲು ಯೋಜನೆ: ಅಹಮದಾಬಾದ್‌ನಲ್ಲಿ 22 ದಿನಗಳಲ್ಲಿ 5 ಬೃಹತ್ ‘ಪೋರ್ಟಲ್ ಬೀಮ್’ ಅಳವಡಿಕೆ

    Assembly Election-2026 Results | ಪಂಚ ರಾಜ್ಯಗಳ ಚುನಾವಣಾ ಕದನ: ಅಸ್ಸಾಂ, ಬಂಗಾಳದಲ್ಲಿ ಕೇಸರಿ ಅಲೆ, ತಮಿಳುನಾಡಿನಲ್ಲಿ ‘ದಳಪತಿ’ ವಿಜಯ್ ಅಬ್ಬರ

    H5N1 | ತುಮಕೂರಿನಲ್ಲಿ ನವಿಲುಗಳಿಗೆ ಹಕ್ಕಿಜ್ವರ ದೃಢ: ಹೈ ಅಲರ್ಟ್ ಘೋಷಿಸಿದ ಜಿಲ್ಲಾಡಳಿತ

    Operation White Strike | ಮುಂಬೈನಲ್ಲಿ ಎನ್‌ಸಿಬಿ ಮೆಗಾ ಆಪರೇಷನ್: ₹1,745 ಕೋಟಿ ಮೌಲ್ಯದ 349 ಕೆಜಿ ಕೊಕೇನ್ ಜಪ್ತಿ

    ಮೊಬೈಲ್‌ಗೆ ಬಂತೇ ತುರ್ತು ಎಚ್ಚರಿಕೆ ಸಂದೇಶ? ಆತಂಕ ಬೇಡ, ಇದು ಕೇಂದ್ರ ಸರ್ಕಾರದ ಹೈಟೆಕ್ ‘ಟೆಸ್ಟ್’

    ಇನ್ನು ಟೋಲ್ ಪ್ಲಾಜಾಗಳಲ್ಲಿ ಕಾಯುವ ಕಿರಿಕಿರಿ ಇಲ್ಲ: ದೇಶದ ಮೊದಲ ‘ತಡೆರಹಿತ ಟೋಲ್’ ವ್ಯವಸ್ಥೆಗೆ ನಿತಿನ್ ಗಡ್ಕರಿ ಚಾಲನೆ

  • Bengaluru Focus

    BW SPECIAL | ಬೆಂಗಳೂರು ಬ್ಯುಸಿನೆಸ್ ಕಾರಿಡಾರ್‌ ಪ್ಯಾಕೇಜ್-1: ಜೂನ್‌ನಿಂದ ಕಾಮಗಾರಿ ಆರಂಭ ಸಾಧ್ಯತೆ

    BW EXCLUSIVE | ಬೆಂಗಳೂರಿನ BSWML ಸಾವಿರ ಕೋಟಿ ಅಕ್ರಮ ಆರೋಪ – ಕಸದ ಟೆಂಡರ್ ರದ್ಧತಿಗೆ, ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮುಖ್ಯ ಕಾರ್ಯದರ್ಶಿಗೆ ಪತ್ರ

    GBA News | ಬೆಂಗಳೂರಿಗರಿಗೆ ಬಿಗ್ ರಿಲೀಫ್: ಇ-ಖಾತಾ ಅರ್ಜಿಯಲ್ಲಿ ತಪ್ಪಾಗಿದ್ದರೆ ನೀವೇ ಹಿಂಪಡೆಯಬಹುದು

    ಬಿಡಿಎ ನೌಕರರ ಸಂಘದ ಹೆಸರಿನಲ್ಲಿ ವಂಚನೆ: ಖಾಸಗಿ ವ್ಯಕ್ತಿಗೆ ಅಕ್ರಮ ನಿವೇಶನ ಹಂಚಿಕೆ, ಎಫ್‌ಐಆರ್ ದಾಖಲು

    ವಿಂಡ್ ಟನಲ್ ಕೆಳಸೇತುವೆ ಕಾಮಗಾರಿ 3 ತಿಂಗಳಲ್ಲಿ ಪೂರ್ಣಗೊಳಿಸಿ: ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಗಡುವು

    ಬಿಡಿಎ ನೂತನ ಎಂಜಿನಿಯರ್ ಸದಸ್ಯರಾಗಿ ಪ್ರವೀಣ್ ಲಿಂಗಯ್ಯ ನೇಮಕ; ಸವಾಲುಗಳ ಬೆಟ್ಟದ ಮುಂದೆ ಹೊಸ ‘ಸಾರಥಿ’

    GBA Head Office Image

    ಜಿಬಿಎ ಚುನಾವಣೆ: ಮೇ 8ರಂದು ವಿಧಾನಸೌಧದಲ್ಲಿ ಮಹತ್ವದ ಸಭೆ; ಶೀಘ್ರದಲ್ಲೇ 5 ನಗರ ಪಾಲಿಕೆಗಳಿಗೆ ಮತದಾನ ದಿನಾಂಕ ಘೋಷಣೆ?

    ಕೆ.ಆರ್. ವೃತ್ತದ ಕೆಳಸೇತುವೆ ಜಲಾವೃತ: ಪಾಲಿಕೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಲೋಕಾಯುಕ್ತ ಗರಂ

    GBA News | ಬೆಂಗಳೂರು ಮಳೆಗಾಲದ ಮುನ್ನೆಚ್ಚರಿಕೆ: ಅವಘಡ ತಡೆಗೆ ಪಾಲಿಕೆ ಅಧಿಕಾರಿಗಳಿಗೆ ಆಯುಕ್ತರ ಕಟ್ಟುನಿಟ್ಟಿನ ಸೂಚನೆ

  • Public interest
  • BW Special
  • Life Style
  • Photo Gallery
  • Video
No Result
View All Result

Home Bengaluru Focus

“ಮಳೆ ನೀರುಗಾಲುವೆ ಕಾಮಗಾರಿ ನಡೆಯುತ್ತಿರುವ ಕಡೆ ಚೇಂಬರ್ಸ್ ಗಳ ಬಳಿ ಬ್ಯಾರಿಕೇಡಿಂಗ್ ಅಳವಡಿಸಿ”

ವರ್ಷಾಂತ್ಯಕ್ಕೆ ಜೆಪಿನಗರ ಸುತ್ತಮುತ್ತಲ ಪ್ರದೇಶದ ಮಳೆ ನೀರುಗಾಲುವೆ ಕಾಮಗಾರಿ ಪೂರ್ಣಗೊಳಿಸಿ : ಮಹೇಶ್ವರ್ ರಾವ್

by Bengaluru Wire Desk
June 30, 2025
in Bengaluru Focus
Reading Time: 1 min read
0

ಬೆಂಗಳೂರು: ಜೂ.30 www.bengaluruwire.com: ನಗರದ ಜೆಪಿ ನಗರದ ಸಿಂಧೂರ ಕಲ್ಯಾಣ ಮಂಟಪದ ಸುತ್ತಮುತ್ತಲಿನ ಪ್ರದೇಶದಲ್ಲಿ ಪ್ರವಾಹ ತಡೆಯಲು ಕೈಗೆತ್ತಿಕೊಂಡಿರುವ ಮಳೆ ನೀರುಗಾಲುವೆ ಕಾಮಗಾರಿಯನ್ನು ವರ್ಷಾಂತ್ಯಕ್ಕೆ ಪೂರ್ಣಗೊಳಿಸಲು ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. 

ನಗರದ ದಕ್ಷಿಣ ವಲಯ ವ್ಯಾಪ್ತಿಯಲ್ಲಿ ಇಂದು ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ವೇಳೆ ಮಾತನಾಡಿದ ಅವರು, ಜೆ.ಪಿ. ನಗರ ಸಿಂಧೂರ ಕಲ್ಯಾಣ ಮಂಟಪದಿಂದ ಕೆ-210 ಗೆ ಸಂಪರ್ಕ ಕಲ್ಪಿಸಲು 1.3 ಕಿ.ಮೀ ಉದ್ದದ ಮಳೆ ನೀರುಗಾಲುವೆ ಕಾಮಗಾರಿಯನ್ನು ಕೈಗೆತ್ತಿಕೊಂಡಿದ್ದು, ಶೀಘ್ರ ಕಾಮಗಾರಿ ಪೂರ್ಣಗೊಳಿಸಿ ಈ ಪ್ರದೇಶದಲ್ಲಿ ಪ್ರವಾಹ ಆಗುವುದನ್ನು ತಪ್ಪಿಸಲು ತಿಳಿಸಿದರು.

ಮಳೆ ನೀರುಗಾಲುವೆ ಕಾಮಗಾರಿ ನಡೆಯುತ್ತಿರುವ ಕಡೆ ಸುರಕ್ಷತೆಯ ದೃಷ್ಟಿಯಿಂದ ಚೇಂಬರ್ಸ್ ಗಳ ಬಳಿ ಬ್ಯಾರಿಕೇಡಿಂಗ್ ಅಳವಡಿಸಿ ಯಾವುದೇ ರೀತಿಯ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು. ಮಳೆ ನೀರುಗಾಲುವೆ ಕಾಮಗಾರಿ ನಡೆಯುತ್ತಿರುವ ಕಡೆ ಪಾದಚಾರಿ ಮಾರ್ಗವನ್ನು ಸರಿಯಾಗಿ ನಿರ್ವಹಣೆ ಮಾಡುವಂತೆ ಸೂಚನೆ ನೀಡಿದರು.

ಹೊರ ವರ್ತುಲ ರಸ್ತೆಯ ರಸ್ತೆಬದಿ ಚರಂಡಿಗಳಲ್ಲಿ ಹೂಳೆತ್ತಿ ಸ್ವಚ್ಛತೆ ಕಾಪಾಡಬೇಕು. ಚರಂಡಿಗಳಿಂದ ತೆಗೆದ ಹೂಳನ್ನು ಸ್ಥಳದಲ್ಲಿಯೇ ಬಿಡದೆ ಕೂಡಲೇ ವಿಲೇವಾರಿ ಮಾಡುವ ಕೆಲಸ ಮಾಡಬೇಕು. ಇದರಿಂದ ಮಳೆಯಾಗುವ ವೇಳೆ ರಸ್ತೆ ಮೇಲೆ ನೀರು ನಿಲ್ಲುವ ಸಂಭವ ಎದುರಾಗುವುದಿಲ್ಲ ಎಂದು ತಿಳಿಸಿದರು. 

ಜೈವಿಕ ಅನಿಲ ಘಟಕ ಪರಿಶೀಲನೆ:

ಜಯನಗರ 3ನೇ ಬ್ಲಾಕ್‌ನಲ್ಲಿರುವ ಘನತ್ಯಾಜ್ಯ ಜೈವಿಕ ಅನಿಲ ಘಟಕಕ್ಕೆ ಭೇಟಿ ನೀಡಿ ಪರಿಶೀಲಿಸಲಾಯಿತು. ಸದರಿ ಘಟಕವು 5 ಟನ್ ಸಾಮರ್ಥ್ಯವಿದ್ದು, ಇದೇ ರೀತಿ ನಗರದ ಇತರೆ ಕಡೆಯೂ ಘಟಕಗಳನ್ನು ಸ್ಥಾಪಿಸುವ ಸಲುವಾಗಿ ಸೂಕ್ತ ಸ್ಥಳಗಳನ್ನು ಗುರುತಿಸಿದರೆ ಕೆ.ಆರ್. ಮಾರುಕಟ್ಟೆಯಂತಹ ಪ್ರದೇಶಗಳಲ್ಲಿ ತ್ಯಾಜ್ಯ ನಿರ್ವಹಣಾ ಸಮಸ್ಯೆಗಳನ್ನು ಪರಿಹರಿಸಬಹುದೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. 

ತ್ಯಾಜ್ಯ ಸಂಗ್ರಹಣಾ ಕೇಂದ್ರ ಪರಿಶೀಲನೆ:

ಅತ್ತಿಗುಪ್ಪೆ ವಾರ್ಡ್ ವ್ಯಾಪ್ತಿಯಲ್ಲಿ ಘನತ್ಯಾಜ್ಯ ಸಂಗ್ರಹಣಾ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ವೇಳೆ, ರಸ್ತೆ ಬದಿ, ಖಾಲಿ ಜಾಗಗಳಲ್ಲಿ ಕಸ ಸುರಿಯುವ ಸ್ಥಳ (ಬ್ಲಾಕ್ ಸ್ಪಾಟ್) ಆಗದಂತೆ ನೋಡಿಕೊಳ್ಳಬೇಕು. ಬ್ಲಾಕ್ ಸ್ಪಾಟ್ ಗಳು ಕಂಡುಬಂದರೆ ಕೂಡಲೆ ಅದನ್ನು ತೆರವುಗೊಳಿಸಿ ಮತ್ತೆ ಅಲ್ಲಿ ಬ್ಲಾಕ್ ಸ್ಪಾಟ್ ಆಗದಂತೆ ನೋಡಿಕೊಳ್ಳಲು ಮಾರ್ಷಲ್ ಮೇಲ್ವಿಚಾರಕರಿಗೆ ಸೂಚನೆ ನೀಡಿದರು. 

ವಿದ್ಯುತ್ ಚಿತಾಗಾರ ಪರಿಶೀಲನೆ:

ವಿಲ್ಸನ್ ಗಾರ್ಡನ್ ಬಳಿಯಿರುವ ವಿದ್ಯುತ್ ಚಿತಾಗಾರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುವ ವೇಳೆ, ಚಿತಾಗಾರದ ಸುತ್ತಲೂ ಸ್ವಚ್ಛತೆಯನ್ನು ಕಾಪಾಡಲು ತಿಳಿಸಿದರು.  2  ಫರ್ನೆಸ್ (ಹೆಣ ಸುಡುವ ಘಟಕ) ಗಳ ಪೈಕಿ 1 ಫರ್ನೆಸ್ ಕಾಮಗಾರಿ ಪ್ರಗತಿಯಲ್ಲಿದ್ದು, ಶೀಘ್ರ ಕಾಮಗಾರಿ ಪೂರ್ಣಗೊಳಿಸಲು ಸೂಚಿಸಿದರು.

ಅಂತ್ಯಕ್ರಿಯೆ ಮಾಡಲು ಬರುವವರಿಗಾಗಿ ಸ್ಥಳದಲ್ಲಿ ಸರಿಯಾದ ಮೂಲಭೂತ ಸೌಕರ್ಯಗಳ ವ್ಯವಸ್ಥೆ ಮಾಡಬೇಕು. ಅಲ್ಲದೇ ಹೆಚ್ಚುವರಿಗಾಗಿ 2 ಫರ್ನೆಸ್ ನಿರ್ಮಾಣ ಮಾಡಲು ಪ್ರಸ್ತಾವನೆ ಸಲ್ಲಿಸಲು ತಿಳಿಸಿದರು.  ಇದರ ಜೊತೆಗೆ ನಗರದಲ್ಲಿ ಸುಮ್ಮನಹಳ್ಳಿ ಬಳಿ ಮಾತ್ರ ಪ್ರಾಣಿಗಳ ಅಂತ್ಯಕ್ರಿತೆ ಮಾಡಲು ಚಿತಾಗಾರವಿದ್ದು, ಬೇರೆಡೆ ಸೂಕ್ತ ಜಾಗ ಹುಡಕಲು ಅಧಿಕಾರಿಗಳಿಗೆ ಸೂಚನೆ ನೀಡಿದರು. 

ಈ ವೇಳೆ ಬೆಂಗಳೂರು ದಕ್ಷಿಣ ವಲಯ ಆಯುಕ್ತರಾದ ದಿಗ್ವಿಜಯ್ ಬೋಡ್ಕೆ,  ಮುಖ್ಯ ಅಭಿಯಂತರರಾದ ರಾಜೇಶ್, ಕಾರ್ಯಪಾಲಕ ಅಭಿಯಂತರರು ಸೇರಿದಂತೆ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

WhatsApp Join our WhatsApp Channel
Previous Post

ಕಲಬುರಗಿ ರೊಟ್ಟಿ ಯಶಸ್ಸಿನ ಬಗ್ಗೆ ಪ್ರಧಾನಮಂತ್ರಿಗಳ ಮನ್ ಕಿ ಬಾತ್ ನಲ್ಲಿ ಪ್ರಸ್ತಾಪ

Next Post

ಕೆಆರ್‌ಎಸ್‌ನಲ್ಲಿ ಕಾವೇರಿಗೆ ಬಾಗಿನ: ವಿಪಕ್ಷಗಳಿಗೆ ಸಿಎಂ, ಡಿಸಿಎಂ ತಿರುಗೇಟು

Next Post

ಕೆಆರ್‌ಎಸ್‌ನಲ್ಲಿ ಕಾವೇರಿಗೆ ಬಾಗಿನ: ವಿಪಕ್ಷಗಳಿಗೆ ಸಿಎಂ, ಡಿಸಿಎಂ ತಿರುಗೇಟು

ಕವಿಕಾದಲ್ಲಿ ₹14 ಕೋಟಿ ವೆಚ್ಚದಲ್ಲಿ ವಿದ್ಯುತ್ ಪರಿವರ್ತಕ ದುರಸ್ತಿ ಕೇಂದ್ರ ಸ್ಥಾಪನೆ: ಸಚಿವ ಕೆ.ಜೆ.ಜಾರ್ಜ್

Please login to join discussion

Like Us on Facebook

Follow Us on Twitter

Recent News

BW SPECIAL | ಬೆಂಗಳೂರು ಬ್ಯುಸಿನೆಸ್ ಕಾರಿಡಾರ್‌ ಪ್ಯಾಕೇಜ್-1: ಜೂನ್‌ನಿಂದ ಕಾಮಗಾರಿ ಆರಂಭ ಸಾಧ್ಯತೆ

May 9, 2026

BW EXCLUSIVE | ಬೆಂಗಳೂರಿನ BSWML ಸಾವಿರ ಕೋಟಿ ಅಕ್ರಮ ಆರೋಪ – ಕಸದ ಟೆಂಡರ್ ರದ್ಧತಿಗೆ, ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮುಖ್ಯ ಕಾರ್ಯದರ್ಶಿಗೆ ಪತ್ರ

May 8, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

BW SPECIAL | ಬೆಂಗಳೂರು ಬ್ಯುಸಿನೆಸ್ ಕಾರಿಡಾರ್‌ ಪ್ಯಾಕೇಜ್-1: ಜೂನ್‌ನಿಂದ ಕಾಮಗಾರಿ ಆರಂಭ ಸಾಧ್ಯತೆ

May 9, 2026

BW EXCLUSIVE | ಬೆಂಗಳೂರಿನ BSWML ಸಾವಿರ ಕೋಟಿ ಅಕ್ರಮ ಆರೋಪ – ಕಸದ ಟೆಂಡರ್ ರದ್ಧತಿಗೆ, ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮುಖ್ಯ ಕಾರ್ಯದರ್ಶಿಗೆ ಪತ್ರ

May 8, 2026

ತಮಿಳುನಾಡಿನಲ್ಲಿ ಸರ್ಕಾರ ರಚನೆ ಕಸರತ್ತು: ಬಹುಮತ ಸಾಬೀತುಪಡಿಸಿದರೆ ಮಾತ್ರ ವಿಜಯ್‌ಗೆ ಅವಕಾಶ ಎಂದ ರಾಜ್ಯಪಾಲ ಅರ್ಲೇಕರ್

May 8, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group