Saturday, May 9, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ತಮಿಳುನಾಡಿನಲ್ಲಿ ಸರ್ಕಾರ ರಚನೆ ಕಸರತ್ತು: ಬಹುಮತ ಸಾಬೀತುಪಡಿಸಿದರೆ ಮಾತ್ರ ವಿಜಯ್‌ಗೆ ಅವಕಾಶ ಎಂದ ರಾಜ್ಯಪಾಲ ಅರ್ಲೇಕರ್

    ಅಕ್ಕಿ ಗೋದಾಮುವೊಂದರ ಸಾಂದರ್ಭಿಕ ಚಿತ್ರ.

    ದೇಶದ ಆಹಾರ ಭದ್ರತೆ ಭದ್ರ: ಬಫರ್ ಸ್ಟಾಕ್‌ಗಿಂತ ಮೂರು ಪಟ್ಟು ಹೆಚ್ಚು ಧಾನ್ಯ ಸಂಗ್ರಹ

    ಬೆಂಗಳೂರು: ರಾಜ್ಯ ಸರ್ಕಾರದ ಮೊದಲ ಹೈಟೆಕ್ ಆರೋಗ್ಯ ತುರ್ತು ಕಾರ್ಯಾಚರಣೆ ಕೇಂದ್ರ (HEOC) ಲೋಕಾರ್ಪಣೆ

    ಬುಲೆಟ್ ರೈಲು ಯೋಜನೆ: ಅಹಮದಾಬಾದ್‌ನಲ್ಲಿ 22 ದಿನಗಳಲ್ಲಿ 5 ಬೃಹತ್ ‘ಪೋರ್ಟಲ್ ಬೀಮ್’ ಅಳವಡಿಕೆ

    Assembly Election-2026 Results | ಪಂಚ ರಾಜ್ಯಗಳ ಚುನಾವಣಾ ಕದನ: ಅಸ್ಸಾಂ, ಬಂಗಾಳದಲ್ಲಿ ಕೇಸರಿ ಅಲೆ, ತಮಿಳುನಾಡಿನಲ್ಲಿ ‘ದಳಪತಿ’ ವಿಜಯ್ ಅಬ್ಬರ

    H5N1 | ತುಮಕೂರಿನಲ್ಲಿ ನವಿಲುಗಳಿಗೆ ಹಕ್ಕಿಜ್ವರ ದೃಢ: ಹೈ ಅಲರ್ಟ್ ಘೋಷಿಸಿದ ಜಿಲ್ಲಾಡಳಿತ

    Operation White Strike | ಮುಂಬೈನಲ್ಲಿ ಎನ್‌ಸಿಬಿ ಮೆಗಾ ಆಪರೇಷನ್: ₹1,745 ಕೋಟಿ ಮೌಲ್ಯದ 349 ಕೆಜಿ ಕೊಕೇನ್ ಜಪ್ತಿ

    ಮೊಬೈಲ್‌ಗೆ ಬಂತೇ ತುರ್ತು ಎಚ್ಚರಿಕೆ ಸಂದೇಶ? ಆತಂಕ ಬೇಡ, ಇದು ಕೇಂದ್ರ ಸರ್ಕಾರದ ಹೈಟೆಕ್ ‘ಟೆಸ್ಟ್’

    ಇನ್ನು ಟೋಲ್ ಪ್ಲಾಜಾಗಳಲ್ಲಿ ಕಾಯುವ ಕಿರಿಕಿರಿ ಇಲ್ಲ: ದೇಶದ ಮೊದಲ ‘ತಡೆರಹಿತ ಟೋಲ್’ ವ್ಯವಸ್ಥೆಗೆ ನಿತಿನ್ ಗಡ್ಕರಿ ಚಾಲನೆ

  • Bengaluru Focus

    ಬೆಂಗಳೂರು ವೈರ್ ರಿಯಾಲಿಟಿ ಚೆಕ್: “ಕಸದ ಆಫೀಸಿನ” ಹಿತ್ತಲೇ ಗಬ್ಬು; ಊರಿಗೆ ಬುದ್ಧಿ ಹೇಳುವ ಬಿಎಸ್‌ಡಬ್ಲ್ಯುಎಂಎಲ್‌ಗೆ ಸ್ವಚ್ಛತೆ  ಮರೆತೇ ಹೋಯಿತೇ?

    BW SPECIAL | ಬೆಂಗಳೂರು ಬ್ಯುಸಿನೆಸ್ ಕಾರಿಡಾರ್‌ ಪ್ಯಾಕೇಜ್-1: ಜೂನ್‌ನಿಂದ ಕಾಮಗಾರಿ ಆರಂಭ ಸಾಧ್ಯತೆ

    BW EXCLUSIVE | ಬೆಂಗಳೂರಿನ BSWML ಸಾವಿರ ಕೋಟಿ ಅಕ್ರಮ ಆರೋಪ – ಕಸದ ಟೆಂಡರ್ ರದ್ಧತಿಗೆ, ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮುಖ್ಯ ಕಾರ್ಯದರ್ಶಿಗೆ ಪತ್ರ

    GBA News | ಬೆಂಗಳೂರಿಗರಿಗೆ ಬಿಗ್ ರಿಲೀಫ್: ಇ-ಖಾತಾ ಅರ್ಜಿಯಲ್ಲಿ ತಪ್ಪಾಗಿದ್ದರೆ ನೀವೇ ಹಿಂಪಡೆಯಬಹುದು

    ಬಿಡಿಎ ನೌಕರರ ಸಂಘದ ಹೆಸರಿನಲ್ಲಿ ವಂಚನೆ: ಖಾಸಗಿ ವ್ಯಕ್ತಿಗೆ ಅಕ್ರಮ ನಿವೇಶನ ಹಂಚಿಕೆ, ಎಫ್‌ಐಆರ್ ದಾಖಲು

    ವಿಂಡ್ ಟನಲ್ ಕೆಳಸೇತುವೆ ಕಾಮಗಾರಿ 3 ತಿಂಗಳಲ್ಲಿ ಪೂರ್ಣಗೊಳಿಸಿ: ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಗಡುವು

    ಬಿಡಿಎ ನೂತನ ಎಂಜಿನಿಯರ್ ಸದಸ್ಯರಾಗಿ ಪ್ರವೀಣ್ ಲಿಂಗಯ್ಯ ನೇಮಕ; ಸವಾಲುಗಳ ಬೆಟ್ಟದ ಮುಂದೆ ಹೊಸ ‘ಸಾರಥಿ’

    GBA Head Office Image

    ಜಿಬಿಎ ಚುನಾವಣೆ: ಮೇ 8ರಂದು ವಿಧಾನಸೌಧದಲ್ಲಿ ಮಹತ್ವದ ಸಭೆ; ಶೀಘ್ರದಲ್ಲೇ 5 ನಗರ ಪಾಲಿಕೆಗಳಿಗೆ ಮತದಾನ ದಿನಾಂಕ ಘೋಷಣೆ?

    ಕೆ.ಆರ್. ವೃತ್ತದ ಕೆಳಸೇತುವೆ ಜಲಾವೃತ: ಪಾಲಿಕೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಲೋಕಾಯುಕ್ತ ಗರಂ

  • Public interest
  • BW Special
  • Life Style
  • Photo Gallery
  • Video
No Result
View All Result

Home Bengaluru Focus

Thug Life | ಕಮಲ್ ಹಾಸನ್ ‘ಥಗ್ ಲೈಫ್’ ಚಿತ್ರಕ್ಕೆ ಕರ್ನಾಟಕದಲ್ಲಿ ಬಿಡುಗಡೆ ಭಾಗ್ಯವಿಲ್ಲ : ಕ್ಷಮೆ ಕೇಳಲು ನಿರಾಕರಿಸಿದ ನಟ

ಕನ್ನಡ ವಿರೋಧಿ ಹೇಳಿಕೆ: ಹೈಕೋರ್ಟ್ ತರಾಟೆ ಬಳಿಕವೂ ಕಮಲ್ ಮಾತು ಬದಲಿಸಲಿಲ್ಲ; ತಣ್ಣಗಾಗದ ಕನ್ನಡಿಗರ ಆಕ್ರೋಶ

by Bengaluru Wire Desk
June 3, 2025
in Bengaluru Focus, News Wire, Public interest
Reading Time: 1 min read
0

ಬೆಂಗಳೂರು, ಜೂ.03 www.bengaluruwire.com : “ತಮಿಳಿನಿಂದ ಕನ್ನಡ ಭಾಷೆ ಹುಟ್ಟಿದ್ದು” ಎಂಬ ಅಪ್ರಬುದ್ಧ ಹೇಳಿಕೆ ನೀಡಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದ ನಟ ಕಮಲ್ ಹಾಸನ್ ಕನ್ನಡಿಗರ ಕ್ಷಮೆ ಕೋರದ ಕಾರಣ, ಅವರ ನೂತನ ಚಿತ್ರ “ಥಗ್ ಲೈಫ್” ಅನ್ನು ರಾಜ್ಯದಲ್ಲಿ ಬಿಡುಗಡೆಯಾಗುತ್ತಿಲ್ಲ.

ಇದರೊಂದಿಗೆ, ವಿವಾದಿತ ಹೇಳಿಕೆಗೆ ಕ್ಷಮೆ ಯಾಚಿಸುವುದಿಲ್ಲ ಎಂಬ ಪರೋಕ್ಷ ಸಂದೇಶವನ್ನೂ ರವಾನಿಸಿದ್ದಾರೆ. ಕರ್ನಾಟಕ ಹೈಕೋರ್ಟ್ ಇಂದು ತರಾಟೆಗೆ ತೆಗೆದುಕೊಂಡ ಬಳಿಕವೂ ತಮ್ಮ ನಿಲುವನ್ನು ಬದಲಾಯಿಸದಿರುವುದು ಮತ್ತಷ್ಟು ಚರ್ಚೆಗೆ ಗ್ರಾಸವಾಗಿದೆ.

ʼಥಗ್‌ ಲೈಫ್‌ʼ ಸಿನಿಮಾ ಹಂಚಿಕೆ ಮತ್ತು ಬಿಡುಗಡೆಗೆ ಅಗತ್ಯ ಬಂದೋಬಸ್ತ್‌ ಒದಗಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ರಾಜ್‌ಕಮಲ್‌ ಫಿಲ್ಮ್ಸ್‌ ಇಂಟರ್‌ನ್ಯಾಷನಲ್‌ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿ ನಾರಾಯಣ್‌ ಅವರು ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ಇಂದು (ಬುಧವಾರ) ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠವು ನಟ ಕಮಲ್ ಹಾಸನ್ ಅವರನ್ನು ತರಾಟೆಗೆ ತೆಗೆದುಕೊಂಡಿತು. “ಮೊದಲು ಕನ್ನಡಿಗರ ಕ್ಷಮೆ ಕೇಳಿ” ಎಂದು ಖಡಕ್ ಸೂಚನೆ ನೀಡಿದ ನ್ಯಾಯಾಲಯ, “ನೀವೇನು ಇತಿಹಾಸಜ್ಞರಲ್ಲ ಭಾಷೆಯ ಬಗ್ಗೆ ಹೇಳುವುದಕ್ಕೆ” ಎಂಬುದಾಗಿ ಚಾಟಿ ಬೀಸಿತು.

ಇಂದು ಮಧ್ಯಾಹ್ನ ನ್ಯಾಯಾಲಯಕ್ಕೆ ಮಾಹಿತಿ ನೀಡಿರುವ ಕಮಲ್ ಪರ ವಕೀಲರು, ಥಗ್ ಲೈಫ್ ಸಿನಿಮಾದ ನಿರ್ಮಾಪಕರು, ಸಿನಿಮಾ ಅನ್ನು ರಾಜ್ಯದಲ್ಲಿ ಬಿಡುಗಡೆ ಮಾಡದೇ ಇರಲು ನಿರ್ಧರಿಸಿದ್ದಾರೆ. ಅಲ್ಲದೆ, ಫಿಲಂ ಚೇಂಬರ್ ಜೊತೆಗೆ ನಿರ್ಮಾಪಕರು ಚರ್ಚೆ ನಡೆಸಲು ಸಿದ್ಧವಿದ್ದಾರೆ ಎಂದು ನ್ಯಾಯಾಲಯಕ್ಕೆ ಹೇಳಿದ್ದಾರೆ. ಥಗ್ ಲೈಫ್ ಚಿತ್ರ ಜೂನ್ 5ಕ್ಕೆ ಬಿಡುಗಡೆ ಆಗಬೇಕಿತ್ತು. ಈ ಕುರಿತ ಅರ್ಜಿಯನ್ನು ಜೂನ್ 10ಕ್ಕೆ ಮುಂದೂಡಿ ನ್ಯಾಯಾಲಯ ಆದೇಶಿಸಿದೆ. ಆದ್ದರಿಂದ ಥಗ್ ಲೈಫ್ ಚಿತ್ರ ರಾಜ್ಯದಲ್ಲಿ ಬಿಡುಗಡೆಗೆ ಹಿನ್ನಡೆಯಾಗಿದೆ.

ಕಮಲ್ ಹಾಸನ್ ಅವರ ವಿವಾದಿತ ಹೇಳಿಕೆಯ ಬಳಿಕ, ಕರ್ನಾಟಕ ಚಲನಚಿತ್ರ ವಾಣಿಜ್ಯ ಸಂಘಟನೆ ಮತ್ತು ವಿವಿಧ ಕನ್ನಡಪರ ಸಂಘಟನೆಗಳು ನಟ ಕ್ಷಮೆ ಕೇಳಬೇಕೆಂದು ಆಗ್ರಹಿಸಿದ್ದವು. ಅಲ್ಲದೆ, “ಥಗ್ ಲೈಫ್” ಚಿತ್ರವನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡಲು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದವು.

ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಿಗೆ, ನಟ ಕಮಲಹಾಸನ್ ಬರೆದ ಪತ್ರದಲ್ಲಿ ತಾವು ಯಾವ ಸಂದರ್ಭದಲ್ಲಿ ಕನ್ನಡ ಭಾಷೆ ಬಗ್ಗೆ ಹೇಳಿಕೆ ನೀಡಿದ್ದು ಮತ್ತು ತಮಗೆ ಕನ್ನಡ ಭಾಷೆ ಮೇಲೆ ಅಗೌರವ ಇಲ್ಲ, ಬದಲಿಗೆ ಪ್ರೀತಿಯಿದೆ ಎಂದು ಸಮರ್ಥನೆ ಕೊಟ್ಟಿದ್ದಾರೆ. ಆದರೆ ಕ್ಷಮೆಯಾಚನೆ ಬಗ್ಗೆ ಎಲ್ಲಿಯೂ ತಿಳಿಸಿಲ್ಲ.

ಜಲ,ನೆಲದ ವಿಷಯದಲ್ಲಿ ರಾಜಿಯಿಲ್ಲ, ಕಮಲಹಾಸನ್ ಕ್ಷಮಾಪಣೆ ಹೇಳಬೇಕು ನಾವು ಬಿಡುವುದಿಲ್ಲ. ಅಂತಿಮವಾಗಿ ಕನ್ನಡ ಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಕರ್ನಾಟಕ ಬಂದ್ ಕರೆ ನೀಡಲಾಗುವುದು. ಕಮಲಹಾಸನ್ ಕರ್ನಾಟಕ್ಕೆ ಬರಬಾರದು, ಬಹಿಷ್ಕಾರ ಮಾಡಲಾಗುವುದು ಎಂದು ವಾಟಾಳ್ ಪಕ್ಷದ ವಾಟಾಳ್ ನಾಗರಾಜ್ ಹೇಳಿದ್ದಾರೆ. ಈ ಬೆಳವಣಿಗೆಯು ಕನ್ನಡ ನೆಲದಲ್ಲಿ ಕನ್ನಡದ ಅಸ್ಮಿತೆಗೆ ಧಕ್ಕೆ ತರುವ ಯಾವುದೇ ಪ್ರಯತ್ನವನ್ನು ಸಹಿಸುವುದಿಲ್ಲ ಎಂಬುದಕ್ಕೆ ಮತ್ತೊಂದು ಉದಾಹರಣೆಯಾಗಿದೆ.

WhatsApp Join our WhatsApp Channel
Previous Post

ಆಪರೇಷನ್ ಸಿಂಧೂರ್: ವಿಶೇಷ ಸಂಸತ್ ಅಧಿವೇಶನಕ್ಕೆ ಸರ್ಕಾರದ ನಕಾರ, ಜುಲೈನಲ್ಲಿ ಮಾನ್ಸೂನ್ ಅಧಿವೇಶನ

Next Post

ಬಿಟಿಎಂ ವಿಧಾನಸಭಾ ಕ್ಷೇತ್ರ : ಶಾಲಾ-ಕಾಲೇಜು 13000ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್- ಬ್ಯಾಗ್ ಹಂಚಿಕೆ

Next Post

ಬಿಟಿಎಂ ವಿಧಾನಸಭಾ ಕ್ಷೇತ್ರ : ಶಾಲಾ-ಕಾಲೇಜು 13000ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್- ಬ್ಯಾಗ್ ಹಂಚಿಕೆ

ಐಪಿಎಲ್ 2025 ಟ್ರೋಫಿ : 18 ವರ್ಷಗಳ ಕನಸು ನನಸು, RCB ಚಾಂಪಿಯನ್!

Please login to join discussion

Like Us on Facebook

Follow Us on Twitter

Recent News

ಬೆಂಗಳೂರು ವೈರ್ ರಿಯಾಲಿಟಿ ಚೆಕ್: “ಕಸದ ಆಫೀಸಿನ” ಹಿತ್ತಲೇ ಗಬ್ಬು; ಊರಿಗೆ ಬುದ್ಧಿ ಹೇಳುವ ಬಿಎಸ್‌ಡಬ್ಲ್ಯುಎಂಎಲ್‌ಗೆ ಸ್ವಚ್ಛತೆ  ಮರೆತೇ ಹೋಯಿತೇ?

May 9, 2026

BW SPECIAL | ಬೆಂಗಳೂರು ಬ್ಯುಸಿನೆಸ್ ಕಾರಿಡಾರ್‌ ಪ್ಯಾಕೇಜ್-1: ಜೂನ್‌ನಿಂದ ಕಾಮಗಾರಿ ಆರಂಭ ಸಾಧ್ಯತೆ

May 9, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

ಬೆಂಗಳೂರು ವೈರ್ ರಿಯಾಲಿಟಿ ಚೆಕ್: “ಕಸದ ಆಫೀಸಿನ” ಹಿತ್ತಲೇ ಗಬ್ಬು; ಊರಿಗೆ ಬುದ್ಧಿ ಹೇಳುವ ಬಿಎಸ್‌ಡಬ್ಲ್ಯುಎಂಎಲ್‌ಗೆ ಸ್ವಚ್ಛತೆ  ಮರೆತೇ ಹೋಯಿತೇ?

May 9, 2026

BW SPECIAL | ಬೆಂಗಳೂರು ಬ್ಯುಸಿನೆಸ್ ಕಾರಿಡಾರ್‌ ಪ್ಯಾಕೇಜ್-1: ಜೂನ್‌ನಿಂದ ಕಾಮಗಾರಿ ಆರಂಭ ಸಾಧ್ಯತೆ

May 9, 2026

BW EXCLUSIVE | ಬೆಂಗಳೂರಿನ BSWML ಸಾವಿರ ಕೋಟಿ ಅಕ್ರಮ ಆರೋಪ – ಕಸದ ಟೆಂಡರ್ ರದ್ಧತಿಗೆ, ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮುಖ್ಯ ಕಾರ್ಯದರ್ಶಿಗೆ ಪತ್ರ

May 8, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group