Saturday, October 17, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ಕೆಆರ್‌ಎಸ್‌ನಲ್ಲಿ ಎರಡನೇ ವರ್ಷದ ಕಾವೇರಿ ಮಾತೆಗೆ ಆರತಿ ಕಾರ್ಯಕ್ರಮಕ್ಕೆ ಅದ್ಧೂರಿ ಚಾಲನೆ: ಭಕ್ತಿಭಾವದಲ್ಲಿ ಮಿಂದೆದ್ದ ಬೃಂದಾವನ

    ಹಾರುವ ‘ಟೆಸ್ಲಾ ರೋಡ್‌ಸ್ಟರ್’ ಕಾರು ಅನಾವರಣ: ಗಾಳಿಯಲ್ಲಿ ಪಲ್ಟಿ ಹೊಡೆದು ಸೇಫ್ ಲ್ಯಾಂಡಿಂಗ್

    ಹಬ್ಬದ ಸೀಸನ್‌ನಲ್ಲಿ ಆಹಾರ ಸುರಕ್ಷತಾ ಇಲಾಖೆ ಭರ್ಜರಿ ಕಾರ್ಯಾಚರಣೆ: 80 ಸಿಹಿ ತಿಂಡಿ ಮಳಿಗೆಗಳ ಮೇಲೆ ದಾಳಿ, 10 ಘಟಕಗಳಿಗೆ ನೋಟಿಸ್

    ಪ್ರತಿವರ್ಷ ಅಕ್ಟೋಬರ್ 21ಕ್ಕೆ ‘ಶ್ರೀ ಮಧ್ವಾಚಾರ್ಯ ಜಯಂತಿ’: ರಾಜ್ಯ ಸರ್ಕಾರದಿಂದ ಅಧಿಕೃತ ಆದೇಶ

    ಭಾರತೀಯ ನ್ಯಾಯಾಂಗ ವ್ಯವಸ್ಥೆಯಲ್ಲಿ ನವೀನ ಕ್ರಾಂತಿ: ಕ್ರಿಮಿನಲ್ ಕೇಸ್ ಇತ್ಯರ್ಥಕ್ಕೆ ಕೇಂದ್ರದ ಮಾಸ್ಟರ್ ಪ್ಲ್ಯಾನ್ ಏನು ಗೊತ್ತಾ?

    ಜೆಡಿಎಸ್ ಸೋಶಿಯಲ್ ಮೀಡಿಯಾ ಹುಡುಗನನ್ನು ಪೊಲೀಸ್ ವಶಕ್ಕೆ: ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಕಿಡಿ

    Railway News | ಹಾಸನಾಂಬ ಜಾತ್ರೆ: ಬೆಂಗಳೂರು-ಹಾಸನ ನಡುವೆ ವಿಶೇಷ ರೈಲು ಸೇವೆ ಆರಂಭ

    CREATOR: gd-jpeg v1.0 (using IJG JPEG v62), quality = 82?

    ಬಿಹಾರದಲ್ಲಿ ಭೀಕರ ದುರಂತ: ಗಂಗಾ ನದಿಯಲ್ಲಿ ದೋಣಿ ಮುಳುಗಿ 14 ಮಕ್ಕಳು ಜಲಸಮಾಧಿ?

    ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ

    ಎಸ್‌ಸಿ-ಎಸ್‌ಟಿ ಮೀಸಲಾತಿ ರದ್ದು: ಬಿಜೆಪಿ ಅವಸರವೇ ಕಾರಣ ಎಂದ ಮಾಜಿ ಸಿಎಂ ಸಿದ್ದರಾಮಯ್ಯ

  • Bengaluru Focus

    ಕರ್ನಾಟಕದ ನೂತನ ರಾಜ್ಯಪಾಲರಾಗಿ ಸುಧಾ ಯಾದವ್ ನೇಮಕ

    ಆಸ್ಪತ್ರೆ ಬಿಲ್ ಬಾಕಿ: ಮೃತದೇಹ ನೀಡದಿದ್ದರೆ ಕಠಿಣ ಕಾನೂನು ಕ್ರಮ

    BW Special | ಖಜಾನೆ ಖಾಲಿ, ಜನರಿಗೆ ಬೆಲೆ ಏರಿಕೆ ಬರೆ; ಸಚಿವರು-ಸಂಸದರ ಐಷಾರಾಮಿ ಕಾರಿಗೆ ₹31 ಲಕ್ಷ ಗಿಫ್ಟ್!

    ದೇವನಹಳ್ಳಿ ತಹಶೀಲ್ದಾರ್ ಕಚೇರಿಗೆ ಡಿಸಿಎಂ ಪರಮೇಶ್ವರ್ ದಿಢೀರ್ ಭೇಟಿ: ದಾಖಲೆ ನಿರ್ವಹಣೆ ನಿರ್ಲಕ್ಷಿಸಿದ ಅಧಿಕಾರಿ ಅಮಾನತು

    KSRTC News | ದಸರಾ ಹಬ್ಬಕ್ಕೆ ಕೆಎಸ್‌ಆರ್‌ಟಿಸಿಯಿಂದ 3,000ಕ್ಕೂ ಹೆಚ್ಚು ಹೆಚ್ಚುವರಿ ಬಸ್ ಸೇವೆ

  • Public interest
  • BW Special
  • Life Style
  • Photo Gallery
  • Video
No Result
View All Result

Home News Wire

ಕೆಆರ್‌ಎಸ್‌ನಲ್ಲಿ ಎರಡನೇ ವರ್ಷದ ಕಾವೇರಿ ಮಾತೆಗೆ ಆರತಿ ಕಾರ್ಯಕ್ರಮಕ್ಕೆ ಅದ್ಧೂರಿ ಚಾಲನೆ: ಭಕ್ತಿಭಾವದಲ್ಲಿ ಮಿಂದೆದ್ದ ಬೃಂದಾವನ

ಅಕ್ಟೋಬರ್ 21ರವರೆಗೆ ನಡೆಯಲಿರುವ ಧಾರ್ಮಿಕ, ಸಾಂಸ್ಕೃತಿಕ ವೈಭವ; ಪ್ರವಾಸಿಗರಿಗೆ ಉಚಿತ ಪ್ರವೇಶ ಹಾಗೂ ಪ್ರಸಾದ ವ್ಯವಸ್ಥೆ.

by Bengaluru Wire Desk
October 17, 2026
in News Wire, Photo Gallery, Public interest
Reading Time: 1 min read
0

​ಶ್ರೀರಂಗಪಟ್ಟಣ(ಕೆಆರ್‌ಎಸ್), ಅ.17 www.bengaluruwire.com: ದಕ್ಷಿಣ ಭಾರತದ ಹೆಮ್ಮೆಯ ಧಾರ್ಮಿಕ ಉತ್ಸವವಾಗಿ ಗುರುತಿಸಿಕೊಂಡಿರುವ ಎರಡನೇ ವರ್ಷದ ‘ಕಾವೇರಿ ಆರತಿ’ ಮಹೋತ್ಸವಕ್ಕೆ ಕೃಷ್ಣರಾಜಸಾಗರ (KRS) ಜಲಾಶಯದ ಬೃಂದಾವನದಲ್ಲಿ ಶುಕ್ರವಾರ ಸಂಜೆ ಸಾಂಪ್ರದಾಯಿಕ ಹಾಗೂ ಭಕ್ತಿಭಾವದ ಚಾಲನೆ ದೊರೆಯಿತು.

​ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ದಂಪತಿ ಹಾಗೂ ಜಲಸಂಪನ್ಮೂಲ ಮತ್ತು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಎನ್. ಚಲುವರಾಯಸ್ವಾಮಿ ಅವರು ಕಾವೇರಿ ಮಾತೆಗೆ ಶಾಸ್ತ್ರೋಕ್ತವಾಗಿ ಪುಷ್ಪಾರ್ಚನೆ ಮಾಡಿ, ದೀಪ ಬೆಳಗುವ ಮೂಲಕ ಈ ಐತಿಹಾಸಿಕ ಕಾರ್ಯಕ್ರಮಕ್ಕೆ ವಿದ್ಯುಕ್ತವಾಗಿ ನಾಂದಿ ಹಾಡಿದರು.

​ಶಂಖನಾದ, ವೇದಮಂತ್ರಗಳೊಂದಿಗೆ ಗಂಗಾರತಿ ಮಾದರಿಯ ದೀಪ ನಮನ:

​ಶುಕ್ರವಾರ ರಾತ್ರಿ 7.09ರ ಸುಮಾರಿಗೆ ನಾದಸ್ವರದ ಮಂಗಳವಾದ್ಯದೊಂದಿಗೆ ಗಣ್ಯರನ್ನು ಬರಮಾಡಿಕೊಳ್ಳಲಾಯಿತು. ರಾತ್ರಿ 7.33ಕ್ಕೆ ಕಾವೇರಿ ಪ್ರತಿಮೆ ಬಳಿ ಕಂಬದ ದೀಪ ಬೆಳಗಿಸಿದ ಮುಖ್ಯಮಂತ್ರಿಗಳು ಹಾಗೂ ಸಚಿವರ ಕುಟುಂಬ, ನಾಡಿನ ಸಮೃದ್ಧಿಗಾಗಿ ಪ್ರಾರ್ಥಿಸಿತು. ಸರಿಯಾಗಿ ರಾತ್ರಿ 7.47ಕ್ಕೆ ದೋಣಿ ವಿಹಾರ ಕೇಂದ್ರದ ದಡದಲ್ಲಿ ವೈದಿಕರಿಂದ ಪೂಜಾ ಕೈಂಕರ್ಯಗಳು ಆರಂಭವಾದವು.

​ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ನಡೆದ ಈ ದೈವಿಕ ಕಾರ್ಯಕ್ರಮದಲ್ಲಿ ಎರಡು ವಿಶೇಷ ತಂಡಗಳು ಆರತಿ ನೆರವೇರಿಸಿದವು:

​ದಕ್ಷಿಣ ಭಾರತ ಶೈಲಿಯ ಆರತಿ: ಮೊದಲಿಗೆ ಧಾರ್ಮಿಕ ದತ್ತಿ ಇಲಾಖೆಯ ಕರ್ನಾಟಕದ ವೈದಿಕರ ತಂಡವು ಸುಮಾರು 30 ನಿಮಿಷಗಳ ಕಾಲ ಚಾಮರ ಸೇವೆ, ಧೂಪಾರತಿ, ಪುಷ್ಪಾರತಿ, ದೀಪಾರತಿ ಹಾಗೂ ಮಹಾಮಂಗಳಾರತಿಯನ್ನು ನೆರವೇರಿಸಿತು. ಭಕ್ತರಿಂದ ಸ್ವಯಂ ಸಂಕಲ್ಪ ಮಾಡಿಸಿ, ‘ಜಯ ಜಯ ಕಾವೇರಿ’ ಗಾಯನದೊಂದಿಗೆ ಶಂಖ-ಗಂಟೆಗಳ ನಾದ ಮೊಳಗಿಸಲಾಯಿತು.

​ವಾರಾಣಸಿ ಶೈಲಿಯ ಗಂಗಾರತಿ: ಬಳಿಕ ಕಾಶಿಯಿಂದ ಆಗಮಿಸಿದ್ದ ಓಂ ಮಿಶ್ರಾ ಮತ್ತು ತಂಡದವರು ವಾರಾಣಸಿಯ ಗಂಗಾರತಿ ಮಾದರಿಯಲ್ಲಿ ಕಾವೇರಿ ಮಾತೆಗೆ ಭವ್ಯ ದೀಪ ನಮನ ಸಲ್ಲಿಸಿದರು. ಸಹಸ್ರಾರು ಭಕ್ತರು ನದಿಯ ಒಡಲಿಗೆ ಪುಷ್ಪಾರ್ಚನೆ ಮಾಡಿ ಭಕ್ತಿ ಸಮರ್ಪಿಸಿದರು.

​ಪ್ರತಿ ವರ್ಷವೂ ನಡೆಯಲಿದೆ ಕಾವೇರಿ ಆರತಿ: ಸಚಿವ ಎನ್. ಚಲುವರಾಯಸ್ವಾಮಿ:

​ವೇದಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಚಿವ ಎನ್. ಚಲುವರಾಯಸ್ವಾಮಿ, “ರೈತರ ಜೀವನಾಡಿಯಾದ ಕಾವೇರಿ ನದಿಗೆ ಆರತಿ ಸಮರ್ಪಿಸುವ ಮಹತ್ವದ ಕಲ್ಪನೆ ಸಿಎಂ ಡಿ.ಕೆ. ಶಿವಕುಮಾರ್ ಅವರದ್ದು. ಅನೇಕ ಸವಾಲುಗಳ ನಡುವೆ ಕಳೆದ ವರ್ಷ ಅವರೇ ಇದಕ್ಕೆ ಚಾಲನೆ ನೀಡಿದ್ದರು. ನಾಡಿನ ಜನರ ಒಳಿತಿಗಾಗಿ ಮತ್ತು ರೈತರು ನೆಮ್ಮದಿಯ ನಿಟ್ಟುಸಿರು ಬಿಡಲಿ ಎಂಬ ಉದ್ದೇಶದಿಂದ ಪ್ರತಿ ವರ್ಷವೂ ಕಾವೇರಿ ಆರತಿಯನ್ನು ನಡೆಸಲಾಗುವುದು” ಎಂದು ಘೋಷಿಸಿದರು.

​ಇದೇ ವೇಳೆ ವಿಪಕ್ಷಗಳ ವಿರುದ್ಧ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ ಅವರು, “ನಮ್ಮ ಸರ್ಕಾರ ದಿನದ 24 ಗಂಟೆಯೂ ಜನರ ಸೇವೆ ಮಾಡುತ್ತಿದೆ. ಆದರೆ, ಜನರಿಗೆ ಒಳ್ಳೆಯದನ್ನು ಮಾಡುವ ನಮ್ಮ ಅಭಿವೃದ್ಧಿ ಕಾರ್ಯಕ್ರಮಗಳು ಕೆಲವರ ಹೊಟ್ಟೆನೋವಿಗೆ ಕಾರಣವಾಗಿದ್ದು, ಅದಕ್ಕೂ ಅಡ್ಡಿಪಡಿಸುತ್ತಿದ್ದಾರೆ. ನಿನ್ನೆ ಸುರಿದ ಮಳೆ ಇಂದು ಕಾವೇರಿ ಆರತಿಗಾಗಿಯೇ ಬಿಡುವು ನೀಡಿರುವುದು ದೇವರ ಆಶೀರ್ವಾದಕ್ಕೆ ಸಾಕ್ಷಿ” ಎಂದರು.

​ಜಗಮಗಿಸಿದ ಬೃಂದಾವನ, ಕಳೆಗಟ್ಟಿದ ಜಾನಪದ ವೈಭವ:

​ನಾಡಹಬ್ಬ ದಸರಾ ಹಾಗೂ ಕಾವೇರಿ ಆರತಿ ಹಿನ್ನೆಲೆಯಲ್ಲಿ ಇಡೀ ಕೆಆರ್‌ಎಸ್ ಬೃಂದಾವನವು ಬಣ್ಣಬಣ್ಣದ ವಿದ್ಯುತ್ ದೀಪಗಳು, ಲೇಸರ್ ಬೆಳಕು ಮತ್ತು ಹೈಬೀಮ್ ಲೈಟ್‌ಗಳಿಂದ ಜಗಮಗಿಸುತ್ತಿದೆ.

​ರಾಜ್ಯದ ವಿವಿಧೆಡೆಗಳಿಂದ ಆಗಮಿಸಿದ್ದ ಮಹಿಳಾ ವೀರಗಾಸೆ, ಡೊಳ್ಳು ಕುಣಿತ, ಪೂಜಾ ಕುಣಿತ, ಕಂಸಾಳೆ, ಚೆಂಡೆ, ಕೊಂಬು-ಕಹಳೆ, ಕೀಲು ಕುದುರೆ ಸೇರಿದಂತೆ ಹತ್ತಾರು ಜಾನಪದ ಕಲಾತಂಡಗಳು ಹಾಗೂ ತುಳುನಾಡಿನ ದೈವಾರಾಧನೆ ಪ್ರದರ್ಶನಗಳು ಉತ್ಸವದ ಮೆರಗು ಹೆಚ್ಚಿಸಿದವು.

​ಪ್ರವಾಸಿಗರಿಗೆ ಉಚಿತ ಪ್ರವೇಶ ಮತ್ತು ಪ್ರಸಾದ:

​ಜಲಸಂಪನ್ಮೂಲ ಇಲಾಖೆ, ಕಾವೇರಿ ನೀರಾವರಿ ನಿಗಮ, ಧಾರ್ಮಿಕ ದತ್ತಿ ಇಲಾಖೆ, ಬೆಂಗಳೂರು ಜಲಮಂಡಳಿ ಹಾಗೂ ಮಂಡ್ಯ ಜಿಲ್ಲಾಡಳಿತ ಜಂಟಿಯಾಗಿ ಅಚ್ಚುಕಟ್ಟಾದ ವ್ಯವಸ್ಥೆ ಕಲ್ಪಿಸಿವೆ.

​ಇಂದಿನಿಂದ ಅಕ್ಟೋಬರ್ 21ರವರೆಗೆ ಪ್ರತಿದಿನ ಸಂಜೆ 6 ಗಂಟೆಯಿಂದ ಕಾವೇರಿ ಆರತಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ​ಕರ್ನಾಟಕ, ತಮಿಳುನಾಡು ಹಾಗೂ ಕೇರಳದಿಂದ ನಿತ್ಯ 8 ರಿಂದ 10 ಸಾವಿರ ಪ್ರವಾಸಿಗರು ಆಗಮಿಸುವ ನಿರೀಕ್ಷೆಯಿದ್ದು, ಎಲ್ಲರಿಗೂ ಉಚಿತ ಪ್ರವೇಶ ಕಲ್ಪಿಸಲಾಗಿದೆ. ​ಆಗಮಿಸುವ ಭಕ್ತರಿಗೆ ಮುಂದಿನ ಆರೂ ದಿನಗಳ ಕಾಲ ಉಚಿತ ಪ್ರಸಾದ (ಊಟ) ವ್ಯವಸ್ಥೆ ಮಾಡಲಾಗಿದೆ.

ಗಣ್ಯರ ಉಪಸ್ಥಿತಿ: ಕಾರ್ಯಕ್ರಮದಲ್ಲಿ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಆದಿಚುಂಚನಗಿರಿ ಮಠದ ಸೋಮೇಶ್ವರ ಸ್ವಾಮೀಜಿ, ಕೆಂಗೇರಿ ಒಕ್ಕಲಿಗರ ಮಠದ ಡಾ. ನಿಶ್ಚಲಾನಂದನಾಥ ಸ್ವಾಮೀಜಿ, ಕಾಗಿನೆಲೆ ಪೀಠದ ಶ್ರೀ ಶಿವಾನಂದಪುರಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಚಿವರಾದ ಪಿ.ಎಂ. ನರೇಂದ್ರಸ್ವಾಮಿ, ಶಿವಲಿಂಗೇಗೌಡ, ಸಂಸದ ಜಿ.ಸಿ. ಚಂದ್ರಶೇಖರ್, ಶಾಸಕರಾದ ರಮೇಶ್ ಬಂಡಿಸಿದ್ದೇಗೌಡ, ದರ್ಶನ್ ಪುಟ್ಟಣ್ಣಯ್ಯ, ಕೆ.ಎಂ. ಉದಯ್, ಎಂಎಲ್‌ಸಿಗಳಾದ ದಿನೇಶ್ ಗೂಳಿಗೌಡ, ಶಿವಣ್ಣ ಹಾಗೂ ಕಾವೇರಿ ನೀರಾವರಿ ನಿಗಮದ ಎಂಡಿ ಮಹೇಶ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

​ನಿತ್ಯ ಸಂಗೀತ ಸಂಜೆ: ಎಲ್ಲೆಲ್ಲೂ ಸಂಗೀತದ ಕಂಪು

​ಮೊದಲ ದಿನದ ವೇದಿಕೆ ಕಾರ್ಯಕ್ರಮದ ಬಳಿಕ ಗಾಯಕ ನವೀನ್ ಸಜ್ಜು ಮತ್ತು ತಂಡದವರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಮುಂದಿನ ದಿನಗಳ ಸಾಂಸ್ಕೃತಿಕ ಕಾರ್ಯಕ್ರಮಗಳ ವಿವರ ಇಲ್ಲಿದೆ:

​ಅಕ್ಟೋಬರ್ 17 (ಸಂಜೆ 7ಕ್ಕೆ): ದಿವ್ಯಾ ರಾಮಚಂದ್ರ ಮತ್ತು ತಂಡ

​ಅಕ್ಟೋಬರ್ 18: ಆಲ್ ಓಕೆ (All OK) ಮತ್ತು ತಂಡ

​ಅಕ್ಟೋಬರ್ 19: ಭಾಗ್ಯಶ್ರೀ ಗೌಡ ಮತ್ತು ತಂಡ

​ಅಕ್ಟೋಬರ್ 20: ಕಿಕ್ಕೇರಿ ಕೃಷ್ಣಮೂರ್ತಿ ಮತ್ತು ತಂಡ

​ಅಕ್ಟೋಬರ್ 21: ಕಂಬದ ರಂಗಯ್ಯ ಮತ್ತು ತಂಡ​

Sharing is Caring

  • Share on WhatsApp (Opens in new window) WhatsApp
  • Print (Opens in new window) Print
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Share on LinkedIn (Opens in new window) LinkedIn

Like this:

Like Loading…
WhatsApp Join our WhatsApp Channel
Previous Post

ಹಾರುವ ‘ಟೆಸ್ಲಾ ರೋಡ್‌ಸ್ಟರ್’ ಕಾರು ಅನಾವರಣ: ಗಾಳಿಯಲ್ಲಿ ಪಲ್ಟಿ ಹೊಡೆದು ಸೇಫ್ ಲ್ಯಾಂಡಿಂಗ್

Please login to join discussion

Like Us on Facebook

Follow Us on Twitter

Recent News

ಕೆಆರ್‌ಎಸ್‌ನಲ್ಲಿ ಎರಡನೇ ವರ್ಷದ ಕಾವೇರಿ ಮಾತೆಗೆ ಆರತಿ ಕಾರ್ಯಕ್ರಮಕ್ಕೆ ಅದ್ಧೂರಿ ಚಾಲನೆ: ಭಕ್ತಿಭಾವದಲ್ಲಿ ಮಿಂದೆದ್ದ ಬೃಂದಾವನ

October 17, 2026

ಹಾರುವ ‘ಟೆಸ್ಲಾ ರೋಡ್‌ಸ್ಟರ್’ ಕಾರು ಅನಾವರಣ: ಗಾಳಿಯಲ್ಲಿ ಪಲ್ಟಿ ಹೊಡೆದು ಸೇಫ್ ಲ್ಯಾಂಡಿಂಗ್

October 16, 2026
Bengaluru Wire, Kannada News, latest News in Kannada

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

ಕೆಆರ್‌ಎಸ್‌ನಲ್ಲಿ ಎರಡನೇ ವರ್ಷದ ಕಾವೇರಿ ಮಾತೆಗೆ ಆರತಿ ಕಾರ್ಯಕ್ರಮಕ್ಕೆ ಅದ್ಧೂರಿ ಚಾಲನೆ: ಭಕ್ತಿಭಾವದಲ್ಲಿ ಮಿಂದೆದ್ದ ಬೃಂದಾವನ

October 17, 2026

ಹಾರುವ ‘ಟೆಸ್ಲಾ ರೋಡ್‌ಸ್ಟರ್’ ಕಾರು ಅನಾವರಣ: ಗಾಳಿಯಲ್ಲಿ ಪಲ್ಟಿ ಹೊಡೆದು ಸೇಫ್ ಲ್ಯಾಂಡಿಂಗ್

October 16, 2026

ಹಬ್ಬದ ಸೀಸನ್‌ನಲ್ಲಿ ಆಹಾರ ಸುರಕ್ಷತಾ ಇಲಾಖೆ ಭರ್ಜರಿ ಕಾರ್ಯಾಚರಣೆ: 80 ಸಿಹಿ ತಿಂಡಿ ಮಳಿಗೆಗಳ ಮೇಲೆ ದಾಳಿ, 10 ಘಟಕಗಳಿಗೆ ನೋಟಿಸ್

October 16, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group
%d