Saturday, June 13, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ಕರ್ನಾಟಕ ಪೊಲೀಸ್ ಇಲಾಖೆ ಮೇಲ್ದರ್ಜೆಗೆ ಸಿಎಂ ಡಿ.ಕೆ. ಶಿವಕುಮಾರ್ ಮೆಗಾ ಪ್ಲಾನ್: ಕೇಂದ್ರ ಗೃಹ ಸಚಿವರಿಗೆ ಮನವಿ

    ವೈದ್ಯಕೀಯ ಲೋಕದ ಅದ್ವಿತೀಯ ಸಾಧನೆ: ವಯಸ್ಸಾಗುವಿಕೆಯನ್ನು ತಡೆಯುವ ಔಷಧದ ಮೊದಲ ಮಾನವ ಪ್ರಯೋಗ ಯಶಸ್ವಿ

    ಬೆಂಗಳೂರಿನ ಗೊರಗುಂಟೆಪಾಳ್ಯದಲ್ಲಿ ಭೀಕರ ಅಪಘಾತ: ಬ್ರೇಕ್ ಫೇಲಾದ ಗ್ಯಾಸ್ ಲಾರಿ ಡಿಕ್ಕಿ, ಬೈಕ್ ಸವಾರ ದಂಪತಿ ಸ್ಥಳದಲ್ಲೇ ಸಾವು

    ಪೆಟ್ರೋಲ್ ಬಂಕ್ ಸಾಂದರ್ಭಿಕ ಚಿತ್ರ

    Good News | ವಾಹನ ಸವಾರರ ಗಮನಕ್ಕೆ: ಇ-20, ಇ-30 ಎಥೆನಾಲ್ ಮಿಶ್ರಿತ ಪೆಟ್ರೋಲ್ ಮೇಲಿನ ಅಬಕಾರಿ ಸುಂಕ ರದ್ದುಪಡಿಸಿದ ಕೇಂದ್ರ ಸರ್ಕಾರ

    ಚುನಾವಣೆಗೆ ಮುನ್ನ ‘ಗೃಹಲಕ್ಷ್ಮಿ’, ಈಗ ‘ಅನರ್ಹ ಲಕ್ಷ್ಮಿ’: ಗ್ಯಾರಂಟಿ ಹಾಗೂ ‘ಬ್ರ್ಯಾಂಡ್ ಬೆಂಗಳೂರು’ ವೈಫಲ್ಯದ ವಿರುದ್ಧ ಬಿಜೆಪಿ ತೀವ್ರ ವಾಗ್ದಾಳಿ

    ವೈಜಾಗ್ ಸ್ಟೀಲ್ ಪ್ಲಾಂಟ್ ದುರಂತ: ಸ್ಥಳಕ್ಕೆ ಎಚ್.ಡಿ.ಕುಮಾರಸ್ವಾಮಿ ಭೇಟಿ, ಮೃತರ ಕುಟುಂಬಕ್ಕೆ ತಲಾ ₹25 ಲಕ್ಷ ಪರಿಹಾರ ಘೋಷಣೆ

    ಬೆಸ್ಕಾಂ ಕೇಂದ್ರ ಕಚೇರಿ (ಸಾಂದರ್ಭಿಕ ಚಿತ್ರ)

    Bescom News | ಬೆಸ್ಕಾಂನ 20 ಪಟ್ಟಣಗಳಲ್ಲಿ ಜೂನ್ 10ರಿಂದ 30ರವರೆಗೆ ಆನ್‌ಲೈನ್ ಸೇವೆ ಸ್ಥಗಿತ: ಕಾರಣವೇನು?

    Philippines Earthquake | ಫಿಲಿಪೈನ್ಸ್‌ನಲ್ಲಿ 7.8 ತೀವ್ರತೆಯ ಭೀಕರ ಭೂಕಂಪ: 15 ಸಾವು, ಸುನಾಮಿ ಎಚ್ಚರಿಕೆ

    ವಿಧಾನಸೌಧದಿಂದ ಸಿಲ್ಕ್ ಇನ್ಸ್ಟಿಟ್ಯೂಟ್ ವರೆಗೆ ಮೆಟ್ರೋದಲ್ಲಿ ಸಿಎಂ ಡಿಕೆಶಿ ಪ್ರಯಾಣ: ಸ್ವಕ್ಷೇತ್ರ ಕನಕಪುರ ಜನತೆಗೆ ಕೃತಜ್ಞತಾ ಸಮರ್ಪಣೆ

  • Bengaluru Focus

    ಬನ್ನೇರುಘಟ್ಟ ಜೈವಿಕ ಉದ್ಯಾನವನ: ದಕ್ಷಿಣ ಆಫ್ರಿಕಾದ ಚೀತಾಗಳ ದರ್ಶನ, ಜೊತೆಗೆ ಮುದ್ದಾದ ಜೆಬ್ರಾ, ನೀರುಕುದುರೆ ಮರಿಗಳ ಕಲರವ!

    GBA News | ಬೆಂಗಳೂರು ಪಶ್ಚಿಮ ಮತ್ತು ದಕ್ಷಿಣ ಪಾಲಿಕೆ: ಪಾದಚಾರಿ ಮಾರ್ಗ, ತ್ಯಾಜ್ಯ ನಿರ್ವಹಣೆ ಹಾಗೂ ಮೂಲಸೌಕರ್ಯಕ್ಕೆ ಒತ್ತು

    ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ 28ನೇ ಘಟಿಕೋತ್ಸವ: 72 ಸಾವಿರ ಪದವಿ, 103 ಚಿನ್ನದ ಪದಕ ಪ್ರದಾನ

    ಕಡ್ಡಾಯ ಕಚೇರಿ ಹಾಜರಾತಿಗೆ ಐಟಿ ಉದ್ಯೋಗಿಗಳ ವಿರೋಧ: ಬೆಂಗಳೂರಿನ ಗಗನಕ್ಕೇರುತ್ತಿದೆ ಮನೆ ಬಾಡಿಗೆ, ಇಲ್ಲಿದೆ ರಿಯಲ್ ಎಸ್ಟೇಟ್ ವಿಶ್ಲೇಷಣೆ

    ಎಚ್‌ಎಸ್‌ಆರ್ ಲೇಔಟ್ ನಿವಾಸಿಗಳಿಗೆ ಸಿಹಿಸುದ್ದಿ: 184 ಮರಗಳ ಮಾರಣಹೋಮಕ್ಕೆ ಬ್ರೇಕ್ ಹಾಕಿದ ಬಿಡಿಎ

    ವಿಧಾನಸೌಧದಿಂದ ಸಿಲ್ಕ್ ಇನ್ಸ್ಟಿಟ್ಯೂಟ್ ವರೆಗೆ ಮೆಟ್ರೋದಲ್ಲಿ ಸಿಎಂ ಡಿಕೆಶಿ ಪ್ರಯಾಣ: ಸ್ವಕ್ಷೇತ್ರ ಕನಕಪುರ ಜನತೆಗೆ ಕೃತಜ್ಞತಾ ಸಮರ್ಪಣೆ

  • Public interest
  • BW Special
  • Life Style
  • Photo Gallery
  • Video
No Result
View All Result

Home BW Special

BW REALITY CHECK | ಕುಂದಾಪುರ ರೈಲು ನಿಲ್ದಾಣಕ್ಕೆ ಸಾರ್ವಜನಿಕ ಸಾರಿಗೆ ಕೊರತೆ : ಖಾಸಗಿ ಆಟೋ- ಟ್ಯಾಕ್ಸಿಗಳದ್ದೇ ದರ್ಬಾರ್!!

ಮೂಗಿಗಿಂತ ಮೂಗಿತ ಭಾರ ಎನ್ನುವಂತೆ ಕುಂದಾಪುರದಿಂದ ರೈಲ್ವೇ ಪ್ರಯಾಣಕ್ಕಿಂತ ರೈಲ್ವೇ ಸ್ಟೇಷನ್ ಗೆ ಬರುವುದೇ ದುಬಾರಿ | 1998ರಲ್ಲಿ ಆರಂಭವಾದ ರೈಲ್ವೆ ಸ್ಟೇಷನ್ ಗೆ ಪ್ರಯಾಣಿಕರ ಬೇಡಿಕೆಗೆ ತಕ್ಕಷ್ಟು ರೈಲುಗಳ ಸಂಖ್ಯೆಯಿಲ್ಲ | ಉಡುಪಿ ಜಿಲ್ಲೆಗೆ ರಾಜ್ಯದ ಪ್ರಮುಖ ಸ್ಥಳಗಳಿಂದ ರೈಲುಗಳ ಕೊರತೆಯಿದೆ

by Bengaluru Wire Desk
October 9, 2024
in BW Special, Public interest
Reading Time: 3 mins read
0
Kundapura Railway Station

ಕುಂದಾಪುರ ರೈಲ್ವೆ ನಿಲ್ದಾಣದ ಮುಂಭಾಗ ಹಾಗೂ ರೈಲು ನಿಲ್ದಾಣದ ದೃಶ್ಯ

ಕುಂದಾಪುರ, ಅ.09 www.bengaluruwire.com : ಕೊಂಕಣ ರೈಲ್ವೇ ವಿಭಾಗಕ್ಕೆ ಸೇರುವ ಕುಂದಾಪುರ ರೈಲ್ವೇ ಸ್ಟೇಷನ್ 1998ರಲ್ಲಿ ಸ್ಥಾಪನೆಯಾಗಿ, ಪ್ರಸ್ತುತ ಪ್ರತಿದಿನ ಸರಾಸರಿಯಾಗಿ 34 (17 ಬರುವ- 17 ಹೋಗುವ) ಪ್ರಯಾಣಿಕ‌ ರೈಲು ಓಡಾಟ ನಡೆಸುತ್ತಿದ್ದರೂ ಈ ರೈಲು ನಿಲ್ದಾಣ ತಲುಪುವುದು ಸಾಗರದ ಮಧ್ಯೆ ದ್ವೀಪವನ್ನು ತಲುಪಿದಂತೆ.

ಅಷ್ಟರ ಮಟ್ಟಿಗೆ ಪ್ರಯಾಣಿಕರು ಈ ರೈಲು ನಿಲ್ದಾಣ ತಲುಪಲು ನೇರವಾದ ಹಾಗೂ ಸೂಕ್ತ ಸಾರ್ವಜನಿಕ ಸಮೂಹ ಸಾರಿಗೆಯಿಲ್ಲದೆ ಹರಸಾಹಸ ಪಡಬೇಕು. ಕುಂದಾಪುರ ಬಸ್ ನಿಲ್ದಾಣ ಅಥವಾ ರಾಷ್ಟ್ರೀಯ ಹೆದ್ದಾರಿ ಬಳಿಯ ಬಸ್ರೂರು ಮೂರು ಕೈನಿಂದ ಒಂದೋ ದುಬಾರಿ ಹಣ ಕೊಟ್ಟು ಆಟೋ, ಟ್ಯಾಕ್ಸಿಯಲ್ಲಿ ಈ ರೈಲ್ವೆ ಸ್ಟೇಷನ್ ತಲುಪಬೇಕು. ಕುಂದಾಪುರ ಬಸ್ ನಿಲ್ದಾಣದಿಂದ ಎರಡು ಪ್ಲಾಟ್ ಫಾರಮ್ ಗಳನ್ನು ಹೊಂದಿರುವ ಈ ರೈಲು ನಿಲ್ದಾಣ 7 ಕಿ.ಮೀ ದೂರವಿದೆ.

ಸಣ್ಣ ಪ್ರಮಾಣದ ರೈಲ್ವೇ ನಿಲ್ದಾಣವಾದರೂ ಪ್ರಯಾಣಿಕರಿಗೆ ಕೊರತೆಯಿಲ್ಲ.

ಬೆಳಗಿನ ಹೊತ್ತು 7 ರ ತನಕ ಈ‌ ನಿಲ್ದಾಣಕ್ಕೆ ಬರುವ ಮಾರ್ಗದಲ್ಲಿ ಬಸ್ ಓಡಾಟ ಇರುವುದಿಲ್ಲ. ಆನಂತರ ರಾತ್ರಿ 8 ಗಂಟೆಯ ಮೇಲೆ ಈ ನಿಲ್ದಾಣದ ಕಡೆ ಬಸ್ ಓಡಾಟ ಗಂಟೆಗೊಂದು ಅಂತ 9 ಗಂಟೆಯ ತನಕವಷ್ಟೆ ಲಭ್ಯವಿರುತ್ತೆ. ಕುಂದಾಪುರದಿಂದ ಬಸ್ರೂರು, ಕಂಡ್ಲೂರು, ಹಂಪಾರು, ಸಿದ್ದಾಪುರ, ಶಂಕರನಾರಾಯಣ ಮತ್ತಿತರ ಕಡೆ ಹೋಗುವ ಖಾಸಗಿ ಬಸ್‌ಗಳಿದ್ದರೂ ಅವು ರೈಲ್ವೇ ನಿಲ್ದಾಣದ ತನಕ ಬರುವುದಿಲ್ಲ. ಮುಖ್ಯರಸ್ತೆಯಿಂದ ರೈಲ್ವೇ ನಿಲ್ದಾಣಕ್ಕೆ ಹೋಗುವ ಮೂಡಲಕಟ್ಟೆ ವೃತ್ತದ ಬಳಿ ಬಸ್ ಇಳಿದರೂ ಅಲ್ಲಿಂದ ಪ್ರಯಾಣಿಕರು ಪುನಃ ಕಾಲ್ನಡಿಗೆಯಲ್ಲೇ ಮುಕ್ಕಾಲು ಕಿ.ಮೀ ನಡೆದೇ ಹೋಗಬೇಕು. ಸರಿಯಾಗಿ ಸಮೂಹ ಸಾರಿಗೆ ವ್ಯವಸ್ಥೆಯಿಲ್ಲದೆ  ಬಡ- ಮಧ್ಯಮ ವರ್ಗದವರು, ಹಿರಿಯ ನಾಗರೀಕರು ಎರಡು ದಶಕಗಳಿಂದಲೂ ಈ ಸಮಸ್ಯೆ ಎದುರಿಸುತ್ತಿದ್ದಾರೆ. ಬೆಂಗಳೂರಿನ ಮೆಟ್ರೊ ರೈಲು ವ್ಯವಸ್ಥೆಯಲ್ಲಿರುವಂತೆ ಲಾಸ್ಟ್ ಮೈಲ್ ಕನೆಕ್ಟಿವಿಟಿ (ಕೊನೆಯ ಹಂತದ ವರೆಗೂ ಸಂಪರ್ಕ ಸೇವೆ) ಪರಿಕಲ್ಪನೆ ಕುಂದಾಪುರ, ಉಡುಪಿ ರೈಲು ನಿಲ್ದಾಣಗಳಲ್ಲಿ ಜಾರಿಗೆ ಬಂದರೆ ಒಳಿತು.

ರೈಲು ನಿಲ್ದಾಣ ಹೋಗುವ ಮಾರ್ಗದಲ್ಲಿ ಬೀದಿ ದೀಪ- ರಸ್ತೆಗುಂಡಿ ಸಮಸ್ಯೆ :

ರೈಲು ನಿಲ್ದಾಣದ ಮುಂಭಾಗ ವಿದ್ಯುತ್ ದೀಪಗಳಿವೆ, ಆದರೆ ರೈಲ್ವೆ ಸ್ಟೇಷನ್ ಸಂಪರ್ಕಿಸುವ ಭಾಗದಲ್ಲಿ ಯಾವಾಗಲೂ ಕಾರ್ಗತ್ತಲು.

ಮೂಡಲಕಟ್ಟೆ ವೃತ್ತದಲ್ಲಿ ಆಟೋ ಸ್ಟ್ಯಾಂಡ್ ಕೂಡ ಇಲ್ಲ. ರಾತ್ರಿ ಹೊತ್ತು ಹಾಗೂ ಬೆಳಗಿನ ಜಾವ ಈ ಸ್ಟೇಷನ್ ಗೆ ಬಂದು ಹೋಗಲು ಖಾಸಗಿ ಆಟೋ, ಟ್ಯಾಕ್ಸಿ ಬಿಟ್ಟರೆ ಬೇರೆ ಗತಿಯಿಲ್ಲ. ಸ್ವಂತ ವಾಹನ ಇದ್ದವರೂ ರೈಲ್ವೆ ನಿಲ್ದಾಣಕ್ಕೆ ಬಂದರೂ ಆ ಮಾರ್ಗದಲ್ಲಿ ರಾತ್ರಿ ಹೊತ್ತು ಕತ್ತಲ ಮಧ್ಯೆ ಬರುವುದು ಅಷ್ಟು ಸುರಕ್ಷಿತವಿಲ್ಲ. ಕುಂದಾಪುರದಿಂದ ರೈಲ್ವೇ ನಿಲ್ದಾಣ ಮಾರ್ಗದತ್ತ ತೆರಳಲು ರಸ್ತೆ ಬದಿಯಲ್ಲಿ ಬೀದಿ ದೀಪದ ವ್ಯವಸ್ಥೆಯಿಲ್ಲ, ಹಳ್ಳಬಿದ್ದ ರಸ್ತೆಯಲ್ಲೇ ಪ್ರಯಾಣಿಕರು ಸಾಗಬೇಕು. ಬೆಂಗಳೂರು ಮತ್ತಿತರ ಊರುಗಳಿಂದ ಹಣ ಉಳಿಸಲೆಂದು ರೈಲಲ್ಲಿ ಹೋಗಿ ಬರುವ ಮಧ್ಯಮ ವರ್ಗ, ಬಡವರಿಗೆ ಕುಂದಾಪುರ ರೈಲ್ವೇ ಸ್ಟೇಷನ್ ನಿಂದ ಕುಂದಾಪುರಕ್ಕೆ ಹೋಗಿಬರುವುದು ದುಬಾರಿಯೇ. ಪ್ರತಿದಿನ ಸಾವಿರಾರು ಸಂಖ್ಯೆಯಲ್ಲಿ ಸಂಚರಿಸುವ ರೈಲ್ವೆ ಸ್ಟೇಷನ್ ನಲ್ಲಿ ಖಾಸಗಿ ಜಾಹೀರಾತು ಹಾವಳಿ, ಮುಚ್ಚಿದ ವಿಶ್ರಾಂತಿ ಕೊಠಡಿ, ಶುಚಿತ್ವವಿಲ್ಲದ ಶೌಚಾಲಯ, ಏರು-ತಗ್ಗಿನ ಪ್ಲಾಟ್ ಫಾರಮ್ ಈ ರೈಲ್ವೇ ಸ್ಟೇಷನ್ ನಲ್ಲಿ ನಿರ್ವಹಣೆ ಕೊರತೆಯನ್ನು ಎತ್ತಿ ತೋರಿಸುತ್ತಿದೆ.

ಕುಂದಾಪುರ ರೈಲ್ವೆ ನಿಲ್ದಾಣದಲ್ಲಿ ಖಾಸಗಿ ಆಟೋ- ಟ್ಯಾಕ್ಸಿಗಳದ್ದೇ ದರ್ಬಾರ್.

ರೈಲ್ವೇ ಪ್ರಯಾಣಕ್ಕಿಂತ ಆಟೋ- ಟ್ಯಾಕ್ಸಿ ದರ ದುಬಾರಿ :

ಉದಾಹರಣೆಗೆ ಕುಂದಾಪುರ ರೈಲ್ವೇ ನಿಲ್ದಾಣದಿಂದ ಬೆಂಗಳೂರಿಗೆ ಸಾಮಾನ್ಯ ವರ್ಗದ ರೈಲ್ವೇ ಟಿಕೆಟ್ 190 ರೂ.‌ ದರವಾದರೆ, ಕುಂದಾಪುರದ ಬಸ್ ಸ್ಟ್ಯಾಂಡ್ ಅಥವಾ ಬಸ್ರೂರು ಮೂರು ಕೈನಿಂದ ಕುಂದಾಪುರ ರೈಲ್ವೆ ಸ್ಟೇಷನ್ ಗೆ ಬರಲು ಆಟೋದಲ್ಲಾದರೆ ಬೆಳಗ್ಗೆ 4ರಿಂದ 6.30ರ ತನಕ ಆಟೋದವರು ಬರೋಬ್ಬರಿ 200 ರಿಂದ 250 ರೂ. ತನಕ ಮೀಟರ್ ಹಾಕದೆ ಬಾಡಿಗೆ ದರವನ್ನು ಪ್ರಯಾಣಿಕರಿಂದ ಮುಲಾಜಿಲ್ಲದೆ ವಸೂಲಿ ಮಾಡುತ್ತಾರೆ. ಬೇರೆ ಟೈಮಲ್ಲಾದರೆ 100 ರೂ. ಚಾರ್ಜ್ ಮಾಡುತ್ತಾರೆ. ಟ್ಯಾಕ್ಸಿಯವರದು ಇನ್ನೂ ಜಾಸ್ತಿ. ಕುಂದಾಪುರದಿಂದ ಬೆಂಗಳೂರಿಗೆ ಸಾಮಾನ್ಯ ದಿನಗಳಲ್ಲಿ ಕೆಎಸ್ ಆರ್ ಟಿಸಿ ಮತ್ತು ಖಾಸಗಿ ಬಸ್ ದರಗಳಲ್ಲಿ ಅಲ್ವಸ್ವಲ್ಪ ವ್ಯತ್ಯಾಸವಿರುತ್ತದೆ. ಆದರೆ ರೈಲ್ವೆ ಟಿಕೆಟ್ ದರಕ್ಕಿಂತ ಸಾಕಷ್ಟು ಹೆಚ್ಚಾಗಿರುತ್ತೆ. ವಿಶೇಷ ದಿನಗಳಲ್ಲಿ ಕೆಎಸ್ ಆರ್ ಟಿಸಿ ಬಸ್ ಟಿಕೆಟ್ ದರ ಕರ್ನಾಟಕ ಸಾರಿಗೆಯಲ್ಲಿ 529 ರೂ. ನಿಂದ ಪ್ರಾರಂಭವಾಗಿ (ಐಷಾರಾಮಿ ಬಸ್ ಅಂಬಾರಿ ಉತ್ಸವ್) 1,783 ರೂ. ತನಕವಿರುತ್ತೆ. ಖಾಸಗಿ ಬಸ್ ಗಳ ಟಿಕೆಟ್ ದರ 2,000 ರೂ. ತನಕ ಏರಿಕೆಯಾಗುತ್ತೆ ಎನ್ನುತ್ತಾರೆ ಆಗಾಗ ಬೆಂಗಳೂರಿಗೆ ಪ್ರಯಾಣಿಸುವ ಪ್ರಯಾಣಿಕ ಗಿರೀಶ್.

ಇದನ್ನೂ ಓದಿ : E-Khata | ಬಿಬಿಎಂಪಿ ವ್ಯಾಪ್ತಿಯಲ್ಲಿ ಇ-ಖಾತಾ ಮಾಡಿಸಲು ಯಾವುದೇ ಗಡುವಿಲ್ಲ : ಕೃಷ್ಣಭೈರೇಗೌಡ

ಪ್ರತಿದಿನ ಸರಾಸರಿ 25 ಪ್ರಯಾಣಿಕ ರೈಲುಗಳು ಬಂದು ಹೋಗುತ್ತವೆ :

ಕುಂದಾಪುರ ರೈಲ್ವೆ ನಿಲ್ದಾಣಕ್ಕೆ ಬಂದು ಹೋಗುವ ರೈಲುಗಳ ಪಟ್ಟಿ.

ಕುಂದಾಪುರ ರೈಲು ನಿಲ್ದಾಣವು ಕೊಂಕಣ ರೈಲು ನಿಗಮ ವಲಯ ವ್ಯಾಪ್ತಿಗೆ ಬರುತ್ತದೆ. ಈ ರೈಲು ನಿಲ್ದಾಣಕ್ಕೆ ಪ್ರತಿದಿನ ಸರಾಸರಿಯಾಗಿ 34 ಪ್ರಯಾಣಿಕ ರೈಲುಗಳು ಬಂದು ಹೋಗುತ್ತದೆ. ಹಾಗೆಯೇ ಆಗಾಗ ಸರಕು ಸಾಗಾಣಿಕೆ ರೈಲುಗಳ ಓಡಾಟವಿರುತ್ತದೆ. ಈ ರೈಲು ನಿಲ್ದಾಣವು ಕುಂದಾಪುರವನ್ನು ದೇಶದ ಇತರ ನಗರಗಳಾದ ನವದೆಹಲಿ, ಮುಂಬೈ, ಬೆಂಗಳೂರು, ಮೈಸೂರು, ಚೆನ್ನೈ, ತಿರುವನಂತಪುರಂ, ಕೊಚ್ಚಿನ್ ಇತ್ಯಾದಿಗಳಿಗೆ ಸಂಪರ್ಕಿಸುತ್ತದೆ. ಇದಲ್ಲದೆ ಉಡುಪಿ ಮತ್ತು ಭಟ್ಕಳವನ್ನು ನಡುವೆ ಸಂಪರ್ಕಿಸುತ್ತದೆ. ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ಮತ್ತು ಆನೆಗುಡ್ಡೆ ವಿನಾಯಕ ದೇವಸ್ಥಾನವನ್ನು ಸಂಪರ್ಕಿಸುವ ಪ್ರಮುಖ ರೈಲು ನಿಲ್ದಾಣವಾಗಿದೆ. ಇತರ ಯಾವುದೇ ನಿಲ್ದಾಣಗಳಿಗಿಂತ ವೇಗವಾಗಿ ಕೊಲ್ಲೂರು ತಲುಪುವಂತೆ ಮಾಡುವುದರಿಂದ ಇದನ್ನು ಕೇರಳ ಯಾತ್ರಿಕರು ಹೆಚ್ಚು ಬಳಸುತ್ತಾರೆ. ಕುಂದಾಪುರದಂತೆಯೇ ಬಾರಕೂರು ಮತ್ತು ಉಡುಪಿ ರೈಲು ನಿಲ್ದಾಣಕ್ಕೆ ತಲುಪಲು ಸಮೂಹ ಸಾರಿಗೆ ಸಂಪರ್ಕದ ಕೊರತೆ ಹಾಗೂ ರೈಲುಗಳ ಸಂಖ್ಯೆ ಕೊರತೆ ಎದ್ದು ಕಾಣುತ್ತದೆ.

ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ಭಾಗಗಳಿಂದ ಕುಂದಾಪುರಕ್ಕೆ ರೈಲುಗಳಿಲ್ಲ. ಇನ್ನೊಂದೆಡೆ ಈ ರೈಲ್ವೆ ನಿಲ್ದಾಣವನ್ನು ತಲುಪಲು ಸೂಕ್ತ ಸಮೂಹ ಸಾರಿಗೆಗಳಿಲ್ಲ. ಈ ಬಗ್ಗೆ ಇಷ್ಟು ವರ್ಷ ಈ ಭಾಗದಲ್ಲಿ ಜನಪ್ರತಿನಿಧಿಗಳಾಗಿರುವವರು ಆಸಕ್ತಿ ವಹಿಸಿದ್ದರೆ, ಕುಂದಾಪುರ ರೈಲು ನಿಲ್ದಾಣ ಇತರ ರೈಲು ನಿಲ್ದಾಣಗಳಿಗೆ ಮಾದರಿಯಾಗಿರುತ್ತಿತ್ತು. ಈ ಬಗ್ಗೆ ಕೇಂದ್ರ ರೈಲ್ವೆ ಮತ್ತು ಜಲ ಶಕ್ತಿ ರಾಜ್ಯ ಖಾತೆಯ ಸಚಿವರಾದ ವಿ.ಸೋಮಣ್ಣ, ಉಡುಪಿ ಮತ್ತು ಚಿಕ್ಕಮಗಳೂರು ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಅವರನ್ನು ಬೆಂಗಳೂರು ವೈರ್ ಸಂಪರ್ಕಿಸಲು ಪ್ರಯತ್ನಿಸಿದರೂ, ಪ್ರತಿಕ್ರಿಯೆಗೆ ಮೂವರೂ ಲಭ್ಯರಾಗಲಿಲ್ಲ.

ಇದೇ ಪ್ರಥಮ ಬಾರಿಗೆ ಎನ್ನುವಂತೆ ಉಡುಪಿ, ಕುಂದಾಪುರದ ಕರಾವಳಿಯ ಜನಕ್ಕೆ ಅ.10 ರಿಂದ 13 ತನಕ ಮೈಸೂರು, ಯಶವಂತಪುರದಿಂದ ಕುಂದಾಪುರ, ಕಾರವಾರದ ತನಕ ಎರಡು ಮಾರ್ಗಗಳಲ್ಲಿ ದಸರಾ ಪ್ರಯುಕ್ತ ವಿಶೇಷ ರೈಲು ಸೇವೆಗಳನ್ನು ಆರಂಭಿಸಲಾಗಿದೆ.

ಹೆಚ್ಚಿನ ರೈಲುಗಳ ನಿಯೋಜನೆ ಅತಿ ಜರೂರಾಗಬೇಕು :

ದಸರಾ, ದೀಪಾವಳಿ, ಏಪ್ರಿಲ್- ಮೇ ಸಂದರ್ಭದಲ್ಲಿ ಬೇರೆ ಕಡೆಗಳಲ್ಲಿ ವಿಶೇಷ ರೈಲು ಅಥವಾ ವಿಶೇಷ ಬೋಗಿಗಳನ್ನು ಹಾಕುವುದಿಲ್ಲ. ಇದೇ ಪ್ರಥಮ ಬಾರಿಗೆ ಮೈಸೂರು, ಯಶವಂತಪುರದಿಂದ ಕಾರವಾರದ ತನಕ ಅ.10 ರಿಂದ ನಾಲ್ಕು ದಿನ ವಿಶೇಷ ರೈಲು ನಿಯೋಜಿಸಲಾಗಿದೆ. ಇದು ಹೀಗೆ ಮುಂದುವರೆಯಬೇಕು. ಇಲ್ಲವಾದಲ್ಲಿ ಹಬ್ಬ ಹರಿದಿನಗಳಲ್ಲಿ ಸಾಮಾನ್ಯ ಜನರು, ವಿದ್ಯಾರ್ಥಿಗಳು ಬೆಂಗಳೂರು, ಮೈಸೂರು ಮತ್ತಿತರ ಊರುಗಳಿಂದ ನಮ್ಮ ಊರಿಗೆ ಬಂದು ಹೋಗಲು ಕಷ್ಟವಾಗುತ್ತದೆ. ಸಾಮಾನ್ಯ ಬೋಗಿಗಳಲ್ಲಿ ಸೀಟಿಲ್ಲದೆ ಜನರು ಕಿಕ್ಕಿರಿದು ಕಷ್ಟ ಪಟ್ಟೇ ಈ ರೈಲಿನಲ್ಲಿ ಬರುವಂತಾಗಿದೆ. ಹಬ್ಬ ಹಾಗೂ ವಿಶೇಷ ಸಂದರ್ಭದಲ್ಲಿ ಖಾಸಗಿ ಬಸ್, ಕೆಎಸ್ ಆರ್ ಟಿಸಿ ಬಸ್ ದರ ರೈಲಿನ ಟಿಕೆಟ್ ಗೆ ಹೋಲಿಸಿದರೆ ಹೆಚ್ಚಾಗಿರುತ್ತದೆ. ಹೀಗಾಗಿ ಉಡುಪಿ, ಕುಂದಾಪುರಕ್ಕೆ ಬೆಂಗಳೂರು ಹಾಗೂ ಪ್ರಮುಖ ಸ್ಥಳಗಳಿಂದ ಸಾಮಾನ್ಯ ಹಾಗೂ ವಿಶೇಷ ದಿನಗಳಲ್ಲಿ ಹೆಚ್ಚೆಚ್ಚು ರೈಲುಗಳನ್ನು ನಿಯೋಜಿಸಬೇಕು.

  • ಪ್ರಸಾದ್ ಕೆ.ಶೆಟ್ಟಿ, ರೈಲು ಪ್ರಯಾಣಿಕ

ಸಾರ್ವಜನಿಕ ಸಾರಿಗೆ ಕಲ್ಪಿಸಲು ಪ್ರಯತ್ನಿಸುತ್ತೇವೆ :

ಕುಂದಾಪುರ ಬಸ್ ನಿಲ್ದಾಣದಿಂದ ಬಸ್ರೂರು ಮತ್ತಿತರ ಕಡೆ ಹೋಗುವ ಬಸ್ ಗಳು ರೈಲ್ವೆ ನಿಲ್ದಾಣದ ಬಳಿ ನಿಲ್ಲಿಸಿ ಮುಂದು ಹೋಗಲು ಪ್ರಯಾಣಿಕರ ಸಂಖ್ಯೆ ಹಾಗೂ ಆದಾಯವನ್ನು ಖಾಸಗಿ ಬಸ್ ಮಾಲೀಕರು ಲೆಕ್ಕಾಚಾರ ಹಾಕುತ್ತಾರೆ. ಈ ಬಗ್ಗೆ ಖಾಸಗಿ ಬಸ್ ಮಾಲೀಕರ ಸಂಘದ ಜೊತೆ ಮಾತನಾಡಿ ಕುಂದಾಪುರ ರೈಲ್ವೆ ನಿಲ್ದಾಣಕ್ಕೆ ಕುಂದಾಪುರ ಬಸ್ ನಿಲ್ದಾಣದಿಂದ ಸಾರ್ವಜನಿಕ ಸಂಪರ್ಕ ಸಾರಿಗೆ ಕಲ್ಪಿಸಲು ಪ್ರಯತ್ನಿಸುತ್ತೇನೆ. ಸದ್ಯ ಈ ಭಾಗದಲ್ಲಿ ಹೆಚ್ಚು ಮಳೆ ಸುರಿಯುತ್ತಿದೆ. ಮಳೆ ನಿಂತ ಬಳಿಕ ರಸ್ತೆ ಗುಂಡಿ ಮುಚ್ಚಲು ಕ್ರಮ ಕೈಗೊಳ್ಳಲಾಗುವುದು. ಬೀದಿ ದೀಪದ ವ್ಯವಸ್ಥೆ ಬಗ್ಗೆ ಸಂಬಂಧಿಸಿದ ಅಧಿಕಾರಿಗಳ ಜೊತೆ ಮಾತನಾಡುತ್ತೇನೆ.

  • ಎ.ಕಿರಣ್ ಕುಮಾರ್ ಕೂಡ್ಗಿ, ಶಾಸಕ, ಕುಂದಾಪುರ ವಿಧಾನಸಭಾ ಕ್ಷೇತ್ರ.

“ಬೆಂಗಳೂರು ವೈರ್” ಡಿಜಿಟಲ್ ವೆಬ್ ನ್ಯೂಸ್ ಪೋರ್ಟೆಲ್ಲಿನ ಸೋಶಿಯಲ್ ಮೀಡಿಯಾ ಪೇಜ್ ಹಾಗೂ Google News ಗಳಿಗೆ ಉಚಿತವಾಗಿ Subscribe ಆಗಲು Facebook, Telegram, Twitter, Youtube, Whatsup Channel ಗೆ ಜಾಯಿನ್ ಆಗಲು ಇವುಗಳ ಲಿಂಕ್ ಮೇಲೆ ಕ್ಲಿಕ್ ಮಾಡಿ.

WhatsApp Join our WhatsApp Channel
Previous Post

ರಾಜ್ಯ ಸರ್ಕಾರಿ ನೌಕರರ ಸಂಘದ ಆಡಳಿತಾಧಿಕಾರಿಯಾಗಿ ಸಿ.ಎನ್.ಮಂಜುನಾಥ್ ನೇಮಕ 

Next Post

ವ್ಯಾಪಾರದ ಜೊತೆಗೆ ಸಾಮಾಜಿಕ ಜವಾಬ್ದಾರಿಯ ಹೊಸ ಮಾನದಂಡ ರೂಪಿಸಿದ ರುವಾರಿ ರತನ್ ಟಾಟಾ ಇನ್ನಿಲ್ಲ

Next Post

ವ್ಯಾಪಾರದ ಜೊತೆಗೆ ಸಾಮಾಜಿಕ ಜವಾಬ್ದಾರಿಯ ಹೊಸ ಮಾನದಂಡ ರೂಪಿಸಿದ ರುವಾರಿ ರತನ್ ಟಾಟಾ ಇನ್ನಿಲ್ಲ

ಹೊಸ ಸಂಸತ್ ಭವನದ ಸಾಂದರ್ಭಿಕ ಚಿತ್ರ.

ದಸರಾ ಧಮಾಖಾ ; ಕೇಂದ್ರದಿಂದ ರಾಜ್ಯ ಸರ್ಕಾರಕ್ಕೆ 6,498 ಕೋಟಿ ರೂ. ತೆರಿಗೆ ಹಂಚಿಕೆ

Please login to join discussion

Like Us on Facebook

Follow Us on Twitter

Recent News

ಬನ್ನೇರುಘಟ್ಟ ಜೈವಿಕ ಉದ್ಯಾನವನ: ದಕ್ಷಿಣ ಆಫ್ರಿಕಾದ ಚೀತಾಗಳ ದರ್ಶನ, ಜೊತೆಗೆ ಮುದ್ದಾದ ಜೆಬ್ರಾ, ನೀರುಕುದುರೆ ಮರಿಗಳ ಕಲರವ!

June 13, 2026

GBA News | ಬೆಂಗಳೂರು ಪಶ್ಚಿಮ ಮತ್ತು ದಕ್ಷಿಣ ಪಾಲಿಕೆ: ಪಾದಚಾರಿ ಮಾರ್ಗ, ತ್ಯಾಜ್ಯ ನಿರ್ವಹಣೆ ಹಾಗೂ ಮೂಲಸೌಕರ್ಯಕ್ಕೆ ಒತ್ತು

June 13, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

ಬನ್ನೇರುಘಟ್ಟ ಜೈವಿಕ ಉದ್ಯಾನವನ: ದಕ್ಷಿಣ ಆಫ್ರಿಕಾದ ಚೀತಾಗಳ ದರ್ಶನ, ಜೊತೆಗೆ ಮುದ್ದಾದ ಜೆಬ್ರಾ, ನೀರುಕುದುರೆ ಮರಿಗಳ ಕಲರವ!

June 13, 2026

GBA News | ಬೆಂಗಳೂರು ಪಶ್ಚಿಮ ಮತ್ತು ದಕ್ಷಿಣ ಪಾಲಿಕೆ: ಪಾದಚಾರಿ ಮಾರ್ಗ, ತ್ಯಾಜ್ಯ ನಿರ್ವಹಣೆ ಹಾಗೂ ಮೂಲಸೌಕರ್ಯಕ್ಕೆ ಒತ್ತು

June 13, 2026

ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ 28ನೇ ಘಟಿಕೋತ್ಸವ: 72 ಸಾವಿರ ಪದವಿ, 103 ಚಿನ್ನದ ಪದಕ ಪ್ರದಾನ

June 13, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group