Sunday, September 20, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    Power News | ಭಾರತ್ ಎಲೆಕ್ಟ್ರಿಕ್ ಮೊಬಿಲಿಟಿ ಸೂಚ್ಯಂಕ: ದೇಶದಲ್ಲೇ ಕರ್ನಾಟಕಕ್ಕೆ 3ನೇ ಸ್ಥಾನ

    ಗ್ರಾಮಠಾಣಾ ಆಸ್ತಿಗಳಿಗೆ ನ.1ರಿಂದ ಮನೆ ಬಾಗಿಲಿಗೇ ಇ-ಸ್ವತ್ತು ಖಾತೆ: ಈಶ್ವರ ಖಂಡ್ರೆ ಸೂಚನೆ

    ಮಂಗಳೂರಿನಲ್ಲಿ ಮೊದಲ ಸಚಿವ ಸಂಪುಟ ಸಭೆ: ₹32,611 ಕೋಟಿ ಯೋಜನೆಗಳಿಗೆ ಅನುಮೋದನೆ: ತುಳು ಎರಡನೇ ಹೆಚ್ಚುವರಿ ಆಡಳಿತ ಭಾಷೆಯಾಗಿ ಘೋಷಣೆ

    Breaking News | ನವೆಂಬರ್ ಅಂತ್ಯಕ್ಕೆ ತುಮಕೂರಿಗೆ ಎತ್ತಿನಹೊಳೆ ನೀರು: ಸಚಿವ ಚಲುವರಾಯಸ್ವಾಮಿ ಭರವಸೆ

    ಮೆಕ್ಕಾ ವಾಯುಪ್ರದೇಶದ ಬಳಿ ಹೌತಿ ಡ್ರೋನ್ ಹೊಡೆದುರುಳಿಸಿದ ಸೌದಿ ಅರೇಬಿಯಾ: ಪವಿತ್ರ ಕ್ಷೇತ್ರಗಳ ರಕ್ಷಣೆ ‘ರೆಡ್ ಲೈನ್’ ಎಂದ ರಿಯಾದ್

    ಯುಪಿಐ ಡಿಜಿಟಲ್ ವಹಿವಾಟಿನ ಸಾಂದರ್ಭಿಕ ಚಿತ್ರ

    UPI ವಹಿವಾಟಿಗೆ ಹೊಸ ನಿಯಮ: ಯಾರಿಗೆ ಶುಲ್ಕ? ಯಾರಿಗೆ ಉಚಿತ? ಇಲ್ಲಿದೆ ಸಂಪೂರ್ಣ ವಿವರ

    ಕೋಲ್ಕತ್ತಾದ ಲೆನಿನ್, ಕಾರ್ಲ್ ಮಾರ್ಕ್ಸ್ ರಸ್ತೆಗಳ ಹೆಸರು ಬದಲು? ಪಶ್ಚಿಮ ಬಂಗಾಳ ಸರ್ಕಾರದಿಂದ ಸಿದ್ಧತೆ

    Technology News | ಈಗ, ಕೂತಲ್ಲೇ ವಿಶ್ವ ಸುತ್ತಿ: Live ಕ್ಯಾಮ್ ಮ್ಯಾಪ್ ಮೂಲಕ ಜಗತ್ತನ್ನು ಕಣ್ತುಂಬಿಕೊಳ್ಳಿ!!

    ಪಿಡಬ್ಲ್ಯೂಡಿ ಲಂಚದ ಹಣ ಆಫ್ರಿಕಾದ ಚಿನ್ನದ ಗಣಿಗೆ?: ಸತೀಶ್ ಜಾರಕಿಹೊಳಿ ವಿರುದ್ಧ ಆರ್. ಅಶೋಕ್ ಗಂಭೀರ ಆರೋಪ

  • Bengaluru Focus

    Power News | ಭಾರತ್ ಎಲೆಕ್ಟ್ರಿಕ್ ಮೊಬಿಲಿಟಿ ಸೂಚ್ಯಂಕ: ದೇಶದಲ್ಲೇ ಕರ್ನಾಟಕಕ್ಕೆ 3ನೇ ಸ್ಥಾನ

    ​ಜೆ.ಪಿ. ನಗರದಿಂದ ಗೊಟ್ಟಿಗೆರೆವರೆಗೆ ಶೇ. 34 ರಷ್ಟು ಬೀದಿ ದೀಪ ಬಂದ್; ​ಕತ್ತಲಲ್ಲಿ ರಸ್ತೆಗಳು; ಸಚಿವ ಕೃಷ್ಣ ಬೈರೇಗೌಡ ದಿಢೀರ್ ರಾತ್ರಿ ರೌಂಡ್ಸ್

    GBA Head Office Image

    GBA News | ಬೆಂಗಳೂರು : ಜಿಬಿಎ ವ್ಯಾಪ್ತಿಯಲ್ಲಿ ಇ-ಖಾತಾ ಸೇವೆಗಳು ಮತ್ತಷ್ಟು ಸುಲಭ; ಸೆ. 21ರಿಂದ ‘ಇ-ಆಸ್ತಿ 2.0’ ನೂತನ ಇ-ಖಾತಾ ವ್ಯವಸ್ಥೆ ಜಾರಿ

    ಬೆಸ್ಕಾಂ ಕೇಂದ್ರ ಕಚೇರಿ (ಸಾಂದರ್ಭಿಕ ಚಿತ್ರ)

    Bescom News | ಬೆಸ್ಕಾಂ ಗ್ರಾಹಕರ ಗಮನಕ್ಕೆ: ಈ 20 ಪಟ್ಟಣಗಳಲ್ಲಿ 2 ದಿನ ಆನ್‌ಲೈನ್‌ ಸೇವೆಗಳು ಬಂದ್

    ಕನಕಪುರ ಹಾಸ್ಟೆಲ್‌ಗೆ ಡಿಕೆಶಿ ದಿಢೀರ್ ಭೇಟಿ: ವಿದ್ಯಾರ್ಥಿಗಳ ಜೊತೆ ಊಟ ಸವಿದ ಸಿಎಂ

    CREATOR: gd-jpeg v1.0 (using IJG JPEG v80), quality = 82?

    ಬೆಂಗಳೂರಿನ ಎಲ್ಲೆಡೆ ಗಣೇಶ ಚತುರ್ಥಿ ಸಂಭ್ರಮಾಚರಣೆ : 42 ಕೆರೆಯ ಕಲ್ಯಾಣಿಗಳು, 659 ಮೊಬೈಲ್ ಟ್ಯಾಂಕ್‌ಗಳ ಮೂರ್ತಿಗಳ ವಿಸರ್ಜನೆಗೆ ಅವಕಾಶ

    Bescom News | ​ಸಾರ್ವಜನಿಕ ಗಣೇಶೋತ್ಸವ: ಬೆಸ್ಕಾಂ ಕಟ್ಟುನಿಟ್ಟಿನ ಸುರಕ್ಷತಾ ಮಾರ್ಗಸೂಚಿ ಪ್ರಕಟ

    BIG BREAKING | ₹15 ಕೋಟಿ ಸುರಿದ ಬೆನ್ನಲ್ಲೇ ಬಿಡಿಎ ಕೇಂದ್ರ ಕಚೇರಿ ಪಾರಂಪರಿಕ ಕಟ್ಟಡ ಕೆಡವಲು ಸಂಚು: ನೌಕರರ ತೀವ್ರ ಆಕ್ರೋಶ

    GBA News | ಬೆಂಗಳೂರು ರಸ್ತೆ ಗುಂಡಿಗಳಿಗೆ ₹2 ಕೋಟಿಯ ‘ಜೆಟ್ ಪ್ಯಾಚರ್’ ಮುಲಾಮು: ಶಾಶ್ವತ ಪರಿಹಾರವೇ, ಕೇವಲ ಬೂಟಾಟಿಕೆಯೇ?

  • Public interest
  • BW Special
  • Life Style
  • Photo Gallery
  • Video
No Result
View All Result

Home Bengaluru Focus

KMF Milk Production | ಭೀಕರ ಬಿಸಿಲು- ಬರದಲ್ಲೂ ಪ್ರತಿನಿತ್ಯ ರಾಜ್ಯದಲ್ಲಿ ಹರಿಯುತ್ತಿದೆ ಕ್ಷೀರಸಾಗರ !! : ಕೆಎಂಎಫ್ ನಿಂದ ಹೊಸ ದಾಖಲೆ ; ಸರಾಸರಿ 80.74 ಲಕ್ಷ ಲೀ. ಹಾಲು ಉತ್ಪಾದನೆ

ಬರವಿದ್ದರೂ ಹೈನುಗಾರಿಕೆ ರೈತರಿಗೆ ನಿರಂತರ ಆದಾಯ ಮೂಲ | ಬೇಸಿಗೆ ಬಿಸಿಯ ನಡುವೆ ಕೆಎಂಎಫ್ ಐಸ್ ಕ್ರೀಮ್ ಮಾರಾಟ ಶೇ.40ರಷ್ಟು ಏರಿಕೆ

by Bengaluru Wire Desk
April 30, 2024
in Bengaluru Focus, BW Special, Public interest
Reading Time: 1 min read
0

ಬೆಂಗಳೂರು, ಏ.30 www.bengaluruwire.com : ರಾಜ್ಯದಲ್ಲಿ ಭೀಕರ ಬರದ ನಡುವೆಯೂ ಕೆಎಂಎಫ್ ಹಾಲು ಉತ್ಪಾದನೆ (Milk Production) ಹಾಗೂ ಮಾರಾಟ (Sales)ದಲ್ಲಿ ಕೆಎಂಎಫ್ (Karnataka Milk Federation) ಹೊಸ ದಾಖಲೆ ಸೃಷ್ಟಿಸಿದೆ.

ರಾಜ್ಯದಲ್ಲಿ ಬೇಸಿಗೆ ಕಾಲ(Summer)ದಲ್ಲೂ ಹಾಲು ಉತ್ಪಾದನೆಯಲ್ಲಿ ಕೆಎಂಎಫ್ ಹೊಸ ಸಾಧನೆ ಮಾಡಿದೆ. ಕಳೆದ ವರ್ಷ ಏಪ್ರಿಲ್ 27ಕ್ಕೆ (77.33 ಲಕ್ಷ ಲೀ.) ಹೋಲಿಸಿದರೆ ಈ ಬಾರಿ (82.12 ಲಕ್ಷ ಲೀ.) ಶೇ.6ರಷ್ಟು ಹಾಲು ಉತ್ಪಾದನೆ ಹೆಚ್ಚಳವಾಗಿದೆ. ಹಾಲು ಉತ್ಪಾದನೆ ಮಾತ್ರವಲ್ಲದೆ ಮಾರಾಟ 51 ಲಕ್ಷ ಲೀ.‌ ನಷ್ಟಾಗಿದೆ.

2023ರಲ್ಲಿ ಜನವರಿಯಿಂದ ಏಪ್ರಿಲ್ 27ರ ತನಕ ರಾಜ್ಯದಲ್ಲಿ ಪ್ರತಿದಿನ ಸರಾಸರಿಯಾಗಿ 75.60 ಲಕ್ಷ ಲೀ. ಹಾಲು ಉತ್ಪಾದನೆಯಾಗುತ್ತಿದ್ದರೆ, 2024 ಇಸವಿಯಲ್ಲಿ ಜನವರಿ ಆರಂಭದಿಂದ ಏಪ್ರಿಲ್ 27ರ ತನಕ 80.74 ಲಕ್ಷ ಲೀ. ಹಾಲು ಉತ್ಪಾದನೆಯಾಗಿದೆ. ಅಂದರೆ ಕಳೆದ ವರ್ಷಕ್ಕೆ ಹೋಲಿಸಿದರೆ ಸರಾಸರಿಯಾಗಿ ಶೇ.7ರಷ್ಟು ಅಂದರೆ 5.14 ಲಕ್ಷ ಲೀ. ಹಾಲು ಉತ್ಪಾದನೆಯಲ್ಲಿ ಹೆಚ್ಚಳವಾಗಿದೆ.

ರಾಜಧಾನಿ ಬೆಂಗಳೂರಿನಲ್ಲಿ ಏ.27ರಂದು 14.29 ಲಕ್ಷ ಲೀಟರ್ ಹಾಲು, ಹಾಸನದಲ್ಲಿ ನಿತ್ಯ 12.33 ಲಕ್ಷ ಲೀಟರ್, ಮಂಡ್ಯ 9.25 ಲಕ್ಷ ಲೀಟರ್, ಕೋಲಾರದಲ್ಲಿ ನಿತ್ಯ 10.22 ಲಕ್ಷ ಲೀಟರ್​​, ತುಮಕೂರಿನಲ್ಲಿ 7.72 ಲಕ್ಷ ಲೀಟರ್​, ಮೈಸೂರಿನಲ್ಲಿ 7.50 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ.

ಬರವಿದ್ದರೂ ಹೈನುಗಾರಿಕೆ ರೈತರಿಗೆ ನಿರಂತರ ಆದಾಯ ಮೂಲ :

ರಾಜ್ಯದಲ್ಲಿ ಬೇಸಿಗೆ ಪರಿಣಾಮ ಹಸಿರು ಮೇವು ಹಾಗೂ ನೀರಿಗೆ ಹಲವು ಭಾಗಗಳಲ್ಲಿ ಕೊರತೆಯಿದೆ. ಆದರೆ ಇದರ ನಡುವೆ ಹಾಲು ಉತ್ಪಾದನೆಯಲ್ಲಿ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿರುವುದು ಎಲ್ಲರಲ್ಲೂ ಹುಬ್ಬೇರುವಂತೆ ಮಾಡಿದೆ. ಪರಿಣಾಮ ರಾಜ್ಯದಲ್ಲಿ ಕೆಎಂಎಫ್ ಹಾಲಿನ ಹೊಳೆಯೇ ಹರಿಸಿದೆ. ಸಾಮಾನ್ಯವಾಗಿ ಬೇಸಿಗೆ ಸಮಯದಲ್ಲಿ ಹಾಲಿನ ಉತ್ಪಾದನೆ ಕಡಿಮೆಯಾಗುತ್ತದೆ. ಆದರೆ ಈ ಬಾರಿ ಕೆಎಂಎಫ್​​ ಹಾಲಿನ ಉತ್ಪಾದನೆ ಕುಸಿಯದಂತೆ ಹಲವು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿತ್ತು. ಇದರ ಪರಿಣಾಮವಾಗಿ ತೀವ್ರ ಬರಗಾಲ ನಡುವೆಯೂ ಹಾಲಿನ ಉತ್ಪಾದನೆ ದಾಖಲೆ ಪ್ರಮಾಣದಲ್ಲಿ ಹೆಚ್ಚಳವಾಗಿದೆ ಎನ್ನುತ್ತಾರೆ ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಜಗದೀಶ್.

“ಬರಗಾಲದಿಂದಾಗಿ ರೈತರಿಗೆ ಆದಾಯದ ಮೂಲವಿಲ್ಲ. ನಿರಂತರವಾಗಿ ಆದಾಯ ಬರುವ ಮೂಲವೆಂದರೆ ಅದು ಹೈನುಗಾರಿಕೆಯೊಂದೇ. ಹೀಗಾಗಿ ರೈತರು ಹೈನುಗಾರಿಕೆ (Dairy farming) ಮೇಲೆ ಹೆಚ್ಚು ಗಮನಕೊಟ್ಟಿದ್ದಾರೆ. ರಾಜ್ಯದಲ್ಲಿ ಒಟ್ಟಾರೆ 25 ಲಕ್ಷ ಮಂದಿ ಹೈನುಗಾರರಿದ್ದಾರೆ. ಆ ಪೈಕಿ ಕೆಎಂಎಫ್ ಗೆ ಹಾಲು ಹಾಕುವ ಹೈನುಗಾರರ ಪ್ರಮಾಣ 8.5 ಲಕ್ಷ ದಿಂದ 9 ಲಕ್ಷವಿದೆ. ಕೆಎಂಎಫ್ ಪ್ರತಿ ಲೀ. ಗೆ 33 ರೂ. ಹಣ ನೀಡುತ್ತದೆ. ಸರ್ಕಾರವು ಪ್ರತಿ ಲೀ. ಹಾಲಿಗೆ 5 ರೂ.‌ಸಹಾಯಧನ (Subsidy) ನೀಡುತ್ತದೆ. ಅಲ್ಲಿಗೆ ಒಟ್ಟಾರೆ ರೈತರಿಗೆ ಪ್ರತಿ ಲೀಟರ್ ಗೆ 39 ರೂ.‌ ಸಿಗುತ್ತಿದೆ. ಈ ಬರ ಪರಿಸ್ಥಿತಿಯಲ್ಲೂ ಉತ್ತಮ ಹಾಗೂ ನಿರಂತರ ಆದಾಯ ಮೂಲ ಆಗಿರುವ ಕಾರಣ ಹಾಲು ಉತ್ಪಾದನೆಗೆ ರೈತರು ಶ್ರಮಿಸಿರುವ ಕಾರಣ ಹಾಲು ಸಂಗ್ರಹ ಹೆಚ್ಚಳವಾಗಿರುವ ಸಾಧ್ಯತೆಯಿದೆ” ಎಂದು ಅವರು ಬೆಂಗಳೂರು ವೈರ್ ಗೆ ಹೇಳಿದ್ದಾರೆ.

ಬೇಸಿಗೆಯಲ್ಲಿ ಈ ಬಾರಿ ಪ್ರತಿ ದಿನ ಒಂದು ಕೋಟಿ ಲೀಟರ್ ಹಾಲು ಉತ್ಪಾದನೆ ಗುರಿಯನ್ನು ಕೆಎಂಎಫ್ ಇಟ್ಟುಕೊಂಡಿತ್ತು.‌ ಆ ನಿಟ್ಟಿನಲ್ಲಿ ಹಲವು ಪರಿಣಾಮಕಾರಿ ಕ್ರಮ ಹಾಗೂ ಯೋಜನೆ  ಕೈಗೊಂಡ ಪರಿಣಾಮ ಕ್ಷೀರ ಉತ್ಪಾದನೆಯಲ್ಲಿ ಏರಿಕೆಯಾಗಿದೆ.

ಕೆಎಂಎಫ್ ಐಸ್ ಕ್ರೀಮ್ ಮಾರಾಟ ಶೇ.40ರಷ್ಟು ಏರಿಕೆ :

ಈ ಬಾರಿಯ ಬೇಸಿಗೆ ಬಿಸಿಗೆ ಜನರು ತಂಪು ಪಾನೀಯ ಹಾಗೂ ಐಸ್ ಕ್ರೀಮ್ ಸೇವನೆಗೆ ಹೆಚ್ಚು ಒತ್ತು ಕೊಡುತ್ತಿದ್ದಾರೆ. ಹೀಗಾಗಿ ಕೆಎಂಎಫ್ ಐಸ್ ಕ್ರೀಮ್ ಮಾರಾಟವು ಕಳೆದ ವರ್ಷ ಪ್ರತಿದಿನ 16,000 ಲೀ. ಮಾರಾಟಕ್ಕೆ ಹೋಲಿಸಿದರೆ ಈ ಬಾರಿ 25,000 ಲೀ. ಗೆ ಹೆಚ್ಚಾಗಿದೆ. ಅಂದರೆ ಐಸ್ ಕ್ರೀಮ್ ಮಾರಾಟ ಶೇ.40ರಷ್ಟು ಹೆಚ್ಚಾಗಿದೆ. ಕೆಎಂಎಫ್ ಬಳಿ ಸದ್ಯ ಫ್ಯಾಮಿಲಿ ಪ್ಯಾಕ್, ಕೋನ್‌ ಸೇರಿದಂತೆ  35-40 ರೀತಿಯ ಉತ್ಪನ್ನಗಳಿವೆ ಎಂದು ಅವರು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಎಮ್ಮೆ ಹಾಲಿಗೆ ಬೇಡಿಕೆ ಕುಸಿತ :

ಕಳೆದ ಮೂರು ತಿಂಗಳ ಹಿಂದಷ್ಟೇ ಕರ್ನಾಟಕ ಹಾಲು ಒಕ್ಕೂಟ ರಾಜ್ಯಾಧ್ಯಂತ ಎಮ್ಮೆ ಹಾಲು ಮಾರಾಟಕ್ಕೆ ಚಾಲನೆ ನೀಡಿತ್ತು. ಆದರೆ ಇದಾದ ನಾಲ್ಕೇ ತಿಂಗಳಿಗೆ ಬೆಂಗಳೂರಿನಲ್ಲಿ ಮಾತ್ರ ಎಮ್ಮೆ ಹಾಲು ಬೇಡಿಕೆ ಇಲ್ಲದ ಕಾರಣ ಮಾರಾಟ ಸ್ಥಗಿತಗೊಳಿಸಲು ಚಿಂತನೆ ನಡೆಸಿದೆ. ಕಳೆದ ವರ್ಷ ಡಿಸೆಂಬರ್ ತಿಂಗಳಿಂದ ಎಮ್ಮೆ ಹಾಲು ಮಾರುಕಟ್ಟೆಗೆ ಕೆಎಂಎಫ್​ ಬಿಡುಗಡೆ ಮಾಡಿತ್ತು. ಎಮ್ಮೆ ಹಾಲಿಗೆ ಗ್ರಾಹಕರಿಂದ ಬೇಡಿಕೆ ಕುಸಿತ ಆಗಿರುವುದು ಕೆಎಂಎಫ್​ ಈ ನಿರ್ಧಾರಕ್ಕೆ ಕಾರಣ. ಆದರೆ ರಾಜ್ಯದಲ್ಲಿ ನಿತ್ಯ ಒಟ್ಟಾರೆ 1 ಲಕ್ಷ ಲೀಟರ್ ಎಮ್ಮೆ ಹಾಲು ಉತ್ಪಾದನೆಯಾಗುತ್ತಿದ್ದು, ಉತ್ತರ ಕರ್ನಾಟಕ, ಮಹಾರಾಷ್ಟ್ರ ಭಾಗಕ್ಕೆ ಎಮ್ಮೆ ಹಾಲು ಎಂದಿನಂತೆ ಪೂರೈಕೆಯಾಗುತ್ತಿದೆ ಎಂದು ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ.

Sharing is Caring

  • Share on WhatsApp (Opens in new window) WhatsApp
  • Print (Opens in new window) Print
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Share on LinkedIn (Opens in new window) LinkedIn

Like this:

Like Loading…
WhatsApp Join our WhatsApp Channel
Previous Post

Video News | ನಿಯಂತ್ರಣ ತಪ್ಪಿದ ಕೇಂದ್ರ ಗೃಹ ಸಚಿವ ಅಮಿತ್ ಷಾ ಕೂತಿದ್ದ ಹೆಲಿಕಾಪ್ಟರ್ : ಸ್ವಲ್ಪದರಲ್ಲೇ ಬಚಾವ್!! ; ಯಾವುದೇ ಸಮಸ್ಯೆಯಾಗಿಲ್ಲ ಎಂದ ಸರ್ಕಾರ

Next Post

BWSSB News | ಪರಿಸರ ಸ್ನೇಹಿ ಝೀರೋ ಬ್ಯಾಕ್ಟೀರಿಯಲ್ ತ್ಯಾಜ್ಯ ಸಂಸ್ಕರಿತ ನೀರು ತಂತ್ರಜ್ಞಾನ ಅಳವಡಿಸಿಕೊಂಡ ಜಲಮಂಡಳಿ : ಐಐಎಸ್ಸಿ ಸಹಯೋಗ

Next Post

BWSSB News | ಪರಿಸರ ಸ್ನೇಹಿ ಝೀರೋ ಬ್ಯಾಕ್ಟೀರಿಯಲ್ ತ್ಯಾಜ್ಯ ಸಂಸ್ಕರಿತ ನೀರು ತಂತ್ರಜ್ಞಾನ ಅಳವಡಿಸಿಕೊಂಡ ಜಲಮಂಡಳಿ : ಐಐಎಸ್ಸಿ ಸಹಯೋಗ

Maruti Suzuki Swift | ಹೊಸ ಮಾರುತಿ ಸ್ವಿಫ್ಟ್ ಮಾಡೆಲ್ ಕಾರು ಮೇ 9ಕ್ಕೆ ದೇಶದಲ್ಲಿ ಬಿಡುಗಡೆ : ಹಲವು ವಿಶೇಷತೆ ಹೊಂದಿದ ಕಾರು ನಿಮ್ಮ ಕೈಗೆಟಕುವ ಬೆಲೆಯಲ್ಲಿ!!

Please login to join discussion

Like Us on Facebook

Follow Us on Twitter

Recent News

Power News | ಭಾರತ್ ಎಲೆಕ್ಟ್ರಿಕ್ ಮೊಬಿಲಿಟಿ ಸೂಚ್ಯಂಕ: ದೇಶದಲ್ಲೇ ಕರ್ನಾಟಕಕ್ಕೆ 3ನೇ ಸ್ಥಾನ

September 19, 2026

ಗ್ರಾಮಠಾಣಾ ಆಸ್ತಿಗಳಿಗೆ ನ.1ರಿಂದ ಮನೆ ಬಾಗಿಲಿಗೇ ಇ-ಸ್ವತ್ತು ಖಾತೆ: ಈಶ್ವರ ಖಂಡ್ರೆ ಸೂಚನೆ

September 19, 2026
Bengaluru Wire, Kannada News, latest News in Kannada

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

Power News | ಭಾರತ್ ಎಲೆಕ್ಟ್ರಿಕ್ ಮೊಬಿಲಿಟಿ ಸೂಚ್ಯಂಕ: ದೇಶದಲ್ಲೇ ಕರ್ನಾಟಕಕ್ಕೆ 3ನೇ ಸ್ಥಾನ

September 19, 2026

ಗ್ರಾಮಠಾಣಾ ಆಸ್ತಿಗಳಿಗೆ ನ.1ರಿಂದ ಮನೆ ಬಾಗಿಲಿಗೇ ಇ-ಸ್ವತ್ತು ಖಾತೆ: ಈಶ್ವರ ಖಂಡ್ರೆ ಸೂಚನೆ

September 19, 2026

​ಜೆ.ಪಿ. ನಗರದಿಂದ ಗೊಟ್ಟಿಗೆರೆವರೆಗೆ ಶೇ. 34 ರಷ್ಟು ಬೀದಿ ದೀಪ ಬಂದ್; ​ಕತ್ತಲಲ್ಲಿ ರಸ್ತೆಗಳು; ಸಚಿವ ಕೃಷ್ಣ ಬೈರೇಗೌಡ ದಿಢೀರ್ ರಾತ್ರಿ ರೌಂಡ್ಸ್

September 19, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group
%d