Sunday, April 26, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    BIG EXCLUSIVE| ಜನಗಣತಿ ಜಿದ್ದಾಜಿದ್ದಿ; ಜಿಬಿಎ ಅಧಿಕಾರಿಗಳು Vs ಸಚಿವಾಲಯ ಸಂಘ – ರಾಜ್ಯದ 43 ಇಲಾಖೆಗಳು ಬಂದ್ ಆಗುವ ಭೀತಿ!

    ಸರ್ಕಾರಿ ಆಸ್ಪತ್ರೆಗಳಲ್ಲಿ ಮೊಣಕಾಲು ಮತ್ತು ಸೊಂಟದ ಕೀಲು ಬದಲಿ ಶಸ್ತ್ರಚಿಕಿತ್ಸೆಗಳಿಗೆ ಬಲ: ರೋಗಿಗಳಿಗೆ ಮನೆಬಾಗಿಲಲ್ಲೇ ಗುಣಮಟ್ಟದ ಚಿಕಿತ್ಸೆ

    ಎಸ್‌ಎಸ್‌ಎಲ್‌ಸಿ ಫಲಿತಾಂಶ 2026: ಇತಿಹಾಸದಲ್ಲೇ ಮೊದಲು! 94.10% ರಷ್ಟು ಅಭೂತಪೂರ್ವ ಫಲಿತಾಂಶ; ಬಾಲಕಿಯರದ್ದೇ ಮೇಲುಗೈ

    KSIC News | ಮೈಸೂರು ರೇಷ್ಮೆ ಪರಂಪರೆಗೆ ಮಹಾ ಜಯ: ಕೆಎಸ್‌ಐಸಿ ಭೂಮಿ ಹಸ್ತಾಂತರ ಆದೇಶ ರದ್ದು

    IMPORTANT NEWS | ಭೂಪರಿವರ್ತನೆ ಇನ್ನು ಸುಲಭ: 30 ದಿನಗಳಲ್ಲಿ ವಿಲೇವಾರಿಯಾಗದಿದ್ದರೆ ‘ಪರಿಭಾವಿತ ಭೂಪರಿವರ್ತನೆ’  ಭಾಗ್ಯ

    Vidhana Soudha

    RDPR NEWS | ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಗ್ರಾಮೀಣ ಭಾಗದ ಶೈಕ್ಷಣಿಕ ಕಾರ್ಯಗಳಿಗೆ‌ 501 ಕೋಟಿ ರೂ. ಅನುದಾನ ಬಿಡುಗಡೆ

    ಸಂಭ್ರಮದ ಪಾರ್ಟಿಯಲ್ಲಿ ದುರಂತ: ಗಂಟಲಲ್ಲಿ ಚಿಕನ್ ಮೂಳೆ ಸಿಲುಕಿ ಯುವಕ ಸಾವು

    Wildlife News | ಬನ್ನೇರುಘಟ್ಟಕ್ಕೆ ದಕ್ಷಿಣ ಆಫ್ರಿಕಾದ ‘ಸಿವಂಗಿ’ಗಳು (ಚೀತಾ) ಆಗಮನ; ಚಾರಣಿಗರ ಸುರಕ್ಷತೆಗೆ ಹೊಸ ಕಠಿಣ ‘SOP’ ಬಿಡುಗಡೆ

    ಹೆಸರಘಟ್ಟದ ಮತ್ಕೂರು ಗ್ರಾಮದ ಕೋಳಿ ಸಾಕಾಣಿಕೆ ತರಬೇತಿ ಕೇಂದ್ರದಲ್ಲಿ ಎಚ್5ಎನ್1 ಹಕ್ಕಿಜ್ವರ ಭೀತಿ ಹಿನ್ನಲೆಯಲ್ಲಿ ಪಶುಪಾಲನೆ ಇಲಾಖೆ ನೇತೃತ್ವದಲ್ಲಿ ವೈಜ್ಞಾನಿಕವಾಗಿ ವಿಲೇವಾರಿ ಮಾಡಿದ್ದಾರೆ.

    ಬೆಂಗಳೂರಿನಲ್ಲಿ ಹಕ್ಕಿಜ್ವರ ಭೀತಿ: 7400ಕ್ಕೂ ಅಧಿಕ ಕೋಳಿಗಳ ಹನನ; ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದ ಆರೋಗ್ಯ ಸಚಿವ

  • Bengaluru Focus

    GBA News | ಬೆಂಗಳೂರು ದಕ್ಷಿಣ ಪಾಲಿಕೆ ಅಭಿವೃದ್ಧಿಗೆ ತಜ್ಞರ ಸಲಹಾ ಸಮಿತಿ ರಚನೆ: ಆಯುಕ್ತ ಕೆ.ಎನ್. ರಮೇಶ್

    ಬೆಂಗಳೂರಿನ ಅಭಿವೃದ್ಧಿಗೆ ‘Airport’ ಅಡ್ಡಿ: ಕಟ್ಟಡಗಳ ಎತ್ತರ ನಿರ್ಬಂಧ ಸಡಿಲಿಕೆಗೆ ರಾಜನಾಥ್ ಸಿಂಗ್‌ಗೆ ಡಿ.ಕೆ. ಶಿವಕುಮಾರ್ ಮನವಿ

    GBA News | ಪಶ್ಚಿಮ ಬೆಂಗಳೂರಿಗರಿಗೆ ಸಿಹಿ ಸುದ್ದಿ: ಗೋವಿಂದರಾಜನಗರದಲ್ಲಿ ಶೀಘ್ರವೇ 100 ಹಾಸಿಗೆಗಳ ‘ಜಯದೇವ’ ಘಟಕ ಉದ್ಘಾಟನೆ

    ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ‘ಜನಿವಾರ’ ವಿವಾದ: ವಿದ್ಯಾರ್ಥಿಗಳ ಧಾರ್ಮಿಕ ಹಕ್ಕಿಗೆ ಚ್ಯುತಿ? ಮೂವರು ಸಸ್ಪೆಂಡ್!!

     ‘ಅಣ್ಣಾವ್ರ’ 97ನೇ ಜನ್ಮದಿನೋತ್ಸವ: ದೊಡ್ಮನೆ ಕುಟುಂಬ ಹಾಗೂ ಅಭಿಮಾನಿಗಳಿಂದ ಭಕ್ತಿಯ ನಮನ

    ಎಸ್‌ಎಸ್‌ಎಲ್‌ಸಿ ಫಲಿತಾಂಶ 2026: ಇತಿಹಾಸದಲ್ಲೇ ಮೊದಲು! 94.10% ರಷ್ಟು ಅಭೂತಪೂರ್ವ ಫಲಿತಾಂಶ; ಬಾಲಕಿಯರದ್ದೇ ಮೇಲುಗೈ

    ಕಾಲೇಜು ಕ್ಯಾಂಪಸ್‌ಗಳಲ್ಲಿ ಮತ್ತೆ ಚುನಾವಣಾ ರಂಗು: ವಿದ್ಯಾರ್ಥಿ ಸಂಘಗಳ ಚುನಾವಣೆ ನಡೆಸಲು ಸರ್ಕಾರ ಮುಂದು

    GBA News | ಇಬ್ಲೂರು ಜಂಕ್ಷನ್ ಸಂಚಾರ ದಟ್ಟಣೆಗೆ ಮುಕ್ತಿ: ಹೆಚ್ಚುವರಿ ಮೇಲ್ಸೇತುವೆ ನಿರ್ಮಾಣಕ್ಕೆ ಜಿಬಿಎ ಮುಂದು

    BWSSB News | ತ್ಯಾಜ್ಯವೇ ಈಗ ಜಲಮಂಡಳಿಯ ‘ಚಿನ್ನ’: ಬೆಂಗಳೂರಿನಲ್ಲಿ ಕೊಳಚೆ ನೀರಿನಿಂದ ದೇಶದಲ್ಲೇ ದೊಡ್ಡ ಪ್ರಮಾಣದಲ್ಲಿ ಬಯೋ-ಗ್ಯಾಸ್ ಉತ್ಪಾದನೆ

  • Public interest
  • BW Special
  • Life Style
  • Photo Gallery
  • Video
No Result
View All Result

Home Bengaluru Focus

BW EXCLUSIVE | BBMP Concrete Road | ದುಡ್ಡಿನಾಸೆಗೆ ಚೆನ್ನಾಗಿದ್ದ ಕಬ್ಬನ್ ಪೇಟೆ ಕಾಂಕ್ರೀಟ್ ರಸ್ತೆ ಚಿಂದಿ ಚಿಂದಿ…!! ರಸ್ತೆ ಅಭಿವೃದ್ಧಿ ಹೆಸರಲ್ಲಿ ನಡೆಯುತ್ತಿದ್ಯಾ ಹಗಲು ದರೋಡೆ?

2017-18ನೇ ಸಾಲಿನಲ್ಲಿ ಕಾಂಕ್ರಿಟ್ ರಸ್ತೆ ಹಾಕಲಾಗಿದೆ ಎಂದು ಮಾಜಿ ಶಾಸಕ ಆರ್.ವಿ.ದೇವರಾಜ್ ಹೇಳುತ್ತಿದ್ದರೆ, ವಾರ್ಡ್ ಎಂಜಿನಿಯರ್ ಸತ್ಯ ಈ ರಸ್ತೆಗೆ 15 ವರ್ಷದ ಹಿಂದೆ ಕಾಂಕ್ರಿಟ್ ಹಾಕಲಾಗಿತ್ತು ಅಂತಿದ್ದಾರೆ. ಇಬ್ಬರ ವಾದ ಏನೇ ಇರಲಿ ಸುಸ್ಥಿತಿಯಲ್ಲಿರುವ ಕಾಂಕ್ರಿಟ್ ರಸ್ತೆ ಅಗೆದಿದ್ದಾರೂ ಯಾಕೆ?

by Bengaluru Wire Desk
March 2, 2024
in Bengaluru Focus, BW Special, Public interest
Reading Time: 1 min read
0
ಧರ್ಮರಾಯಸ್ವಾಮಿ ದೇವಸ್ಥಾನ ವಾರ್ಡ್ ನಲ್ಲಿನ ಕಬ್ಬನ್ ಪೇಟೆ 11ನೇ ಅಡ್ಡರಸ್ತೆಯಲ್ಲಿನ ಸುಸ್ಥಿತಿಯಲ್ಲಿದ್ದ ಕಾಂಕ್ರಿಟ್ ರಸ್ತೆಯನ್ನು ಗುತ್ತಿಗೆದಾರರು ಜೆಸಿಬಿಯಿಂದ ಅಗೆದು ಹಾಕಿರುವುದು.

ಧರ್ಮರಾಯಸ್ವಾಮಿ ದೇವಸ್ಥಾನ ವಾರ್ಡ್ ನಲ್ಲಿನ ಕಬ್ಬನ್ ಪೇಟೆ 11ನೇ ಅಡ್ಡರಸ್ತೆಯಲ್ಲಿನ ಸುಸ್ಥಿತಿಯಲ್ಲಿದ್ದ ಕಾಂಕ್ರಿಟ್ ರಸ್ತೆಯನ್ನು ಗುತ್ತಿಗೆದಾರರು ಜೆಸಿಬಿಯಿಂದ ಅಗೆದು ಹಾಕಿರುವುದು.

ಬೆಂಗಳೂರು, ಮಾ.02 www.bengaluruwire.com : ಬೃಹತ್ ಬೆಂಗಳೂರು ಕೇಂದ್ರ ಕಚೇರಿ ಕೂಗಳತೆ ದೂರುದಲ್ಲಿ ಚೆನ್ನಾಗಿರೋ ಗಟ್ಟುಮುಟ್ಟಾದ ಕಬ್ಬನ್ ಪೇಟೆ ಅಡ್ಡರಸ್ತೆಯಲ್ಲಿ ಹಾಕಿದ್ದ ಕಾಂಕ್ರಿಟ್ ರಸ್ತೆಯನ್ನು ಅಗೆದು ಅದೇ ಜಾಗದಲ್ಲಿ ಹೊಸ ಕಾಂಕ್ರಿಟ್ ರಸ್ತೆ ಮಾಡೋ ದುಸ್ಸಾಹಸಕ್ಕೆ ಬಿಬಿಎಂಪಿಯ ಎಂಜಿನಿಯರ್ ಗಳು ಮುಂದಾಗಿರೋದನ್ನು ಖುದ್ದು ಬೆಂಗಳೂರು ವೈರ್ ಜಿಪಿಎಸ್ ಆಧಾರಿತ ಚಿತ್ರದೊಂದಿಗೆ ಸೆರೆ ಹಿಡಿದಿದೆ.

ಕಬ್ಬನ್ ಪೇಟೆ ಸುತ್ತಮುತ್ತಲಿನ ಸ್ಥಳಗಳಲ್ಲಿ 2017-18ನೇ ಸಾಲಿನಲ್ಲಿ ಕಾಂಕ್ರಿಟ್ ರಸ್ತೆಯನ್ನು ಹಾಕಲಾಗಿತ್ತು. ಆದರೂ ಬಿಡಬ್ಲ್ಯುಎಸ್ಎಸ್ ಬಿಯವರು ಇತ್ತೀಚೆಗೆ ಪೈಪ್ ಅಳವಡಿಕೆಗಾಗಿ ಎರಡೂವರೆ ಅಡಿಯಷ್ಟು ಅಗಲದಲ್ಲಿ ರಸ್ತೆ ಗುಂಡಿ ತೋಡಿ ಪುನಃ ಅಲ್ಲಿನ ಕಾಂಕ್ರಿಟ್ ರಸ್ತೆಯನ್ನು ಕಾಂಕ್ರಿಟ್ ಹಾಕಿ ಮುಚ್ಚಿದ್ದರು. ಆದರೆ ಇದನ್ನೇ ಪಿಳ್ಳೆ ನೆಪ ಮಾಡಿಕೊಂಡ ಬಿಬಿಎಂಪಿಯ ಎಂಜಿನಿಯರ್ ಗಳು, ಗುತ್ತಿಗಾರರೊಂದಿಗೆ ಶಾಮೀಲಾಗಿ ಚೆನ್ನಾಗಿರೋ ರಸ್ತೆಯನ್ನು ಜೆಸಿಬಿಯಿಂದ ಕಿತ್ತು ಹಾಕಿದ್ದಾರೆ. ಮೊದಲೇ ಚಿಕ್ಕಪೇಟೆ, ಅಕ್ಕಿಬೇಟೆ, ಬಳೆಪೇಟೆ, ತರಗುಪೇಟೆ, ನಗರ್ತಪೇಟೆಯಂತಹ ಬೆಂಗಳೂರಿನ ಅತಿ ಹಳೆಯ ಪ್ರದೇಶದಲ್ಲಿ ಐದಾರು ಅಡಿಯಿಂದ 15-20 ಅಡಿಯಷ್ಟು ಕಿಷ್ಕಿಂಧೆಯಂತಹ ರಸ್ತೆಗಳೇ ಹೆಚ್ಚು. ಕಬ್ಬನ್ ಪೇಟೆ ಸುತ್ತಮುತ್ತಲಲ್ಲಿ ಈಗಾಗಲೇ ಹಿಂದಿನ ಚಿಕ್ಕಪೇಟೆ ಶಾಸಕರಾದ ಆರ್.ವಿ.ದೇವರಾಜ್ 2017-18ರಲ್ಲೇ ಕಾಂಕ್ರಿಟ್ ರಸ್ತೆಯನ್ನು ಹಾಕಿಸಿದ್ದರು. ಇದನ್ನು ಖುದ್ದು ಅವರೇ ಬೆಂಗಳೂರು ವೈರ್ ಗೆ ತಿಳಿಸಿದ್ದಾರೆ.

“ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಧರ್ಮರಾಯಸ್ವಾಮಿ ದೇವಸ್ಥಾನ ವಾರ್ಡ್ ನಲ್ಲಿ 2017-18ನೇ ಸಾಲಿನಲ್ಲಿ ಒಳಚರಂಡಿ ಪೈಪ್, ಪ್ರತಿ ಮನೆಗೆ ಕುಡಿಯಲು ಬೋರ್ ವೆಲ್ ಸಂಪರ್ಕ ಹಾಗೂ ಕಾಂಕ್ರೀಟ್ ರಸ್ತೆ ಮಾಡಲಾಗಿದೆ. ಈ ರಸ್ತೆಗಳು ಕನಿಷ್ಠ 10-15 ವರ್ಷ ಬಾಳಿಕೆ ಬರುತ್ತೆ. ಆದರೆ ಈಗ ಮತ್ತೆ ಬೆಂಗಳೂರು ಜಲಮಂಡಳಿ ಒಳಚರಂಡಿ ಪೈಪ್ ಹಾಕಿದ ಮೇಲೆ ಕಾಂಕ್ರಿಟ್ ಹಾಕಿ ರಸ್ತೆ ಸರಿ ಮಾಡಿದ್ದಾರೆ. ಆದರೆ ಪುನಃ ಆ ರಸ್ತೆಯನ್ನು ಸಂಪೂರ್ಣವಾಗಿ ಅಗೆದು ಹೊಸದಾಗಿ ಕಾಂಕ್ರಿಟ್ ಹಾಕುವ ಅಗತ್ಯವೇನಿತ್ತು? ಕಾಂಟ್ರಾಕ್ಟರ್, ಎಂಜಿನಿಯರ್ ಗಳು ಜನರ ಹಣ ಲೂಟಿ ಮಾಡಲು ಹೀಗೆ ಮಾಡ್ತಿದ್ದಾರೆ. ಇವರ ಮೇಲೆ ಮುಖ್ಯ ಆಯುಕ್ತರು ಕ್ರಮ ಕೈಗೊಳ್ಳಬೇಕು” ಎಂದು ಚಿಕ್ಕಪೇಟೆಯ ಮಾಜಿ ಶಾಸಕರಾದ ಆರ್.ವಿ.ದೇವರಾಜ್ ಆಗ್ರಹಿಸಿದ್ದಾರೆ.

ಒಬ್ಬ ಮಾಜಿ ಮತ್ತು ಹಿರಿಯ ಶಾಸಕರು ಮತ್ತು ಮಾಜಿ ಸಚಿವರು ಆಗಿದ್ದ ಆರ್.ವಿ.ದೇವರಾಜ್ ಅವರೇ ಹೇಳುವಂತೆ ತಾವು ಹಾಕಿಸಿದ್ದ ಕಾಂಕ್ರಿಟ್ ರಸ್ತೆ ಕನಿಷ್ಠ ಪಕ್ಷ 10 ರಿಂದ 15 ವರ್ಷ ಬಾಳಿಕೆ ಬರುತ್ತದೆ ಎಂದು ಹೇಳಿದ್ದಾರೆ. ಈ ಬಗ್ಗೆ ಬಿಬಿಎಂಪಿಯ ಧರ್ಮರಾಯಸ್ವಾಮಿ ದೇವಸ್ಥಾನ ವಾರ್ಡ್ ಸಹಾಯಕ ಎಂಜಿನಿಯರ್ ಸತ್ಯ ಅವರನ್ನು ಕೇಳಿದ್ರೆ, “ಕಬ್ಬನ್ ಪೇಟೆಯಲ್ಲಿನ 11 ಅಡ್ಡರಸ್ತೆ ಹಾಗೂ ಸುತ್ತಮುತ್ತ ಕಡೆಗಳಲ್ಲಿ 15 ವರ್ಷಗಳ ಹಿಂದೆ ಕಾಂಕ್ರಿಟ್ ರಸ್ತೆ ಹಾಕಲಾಗಿತ್ತು. ಆನಂತರ ಬೆಂಗಳೂರು ಜಲಮಂಡಳಿ ಪೈಪ್ ಹಾಕಲು ಅಗೆದು ಆನಂತರ ಸರಿಯಾಗಿ ಕಾಂಕ್ರಿಟ್ ಹಾಕಿಲ್ಲ. ಹಾಗಾಗಿ 11ನೇ ಅಡ್ಡರಸ್ತೆಗೆ ಪುನಃ ಕಾಂಕ್ರಿಟ್ ಹಾಕಲಾಗುತ್ತಿದೆ” ಎಂದು ಜಾರಿ ಕೊಂಡರು. ಬಳಿಕ ಬೆಂಗಳೂರು ವೈರ್ ಹೆಚ್ಚಿನ ಮಾಹಿತಿ ನೀಡುವಂತೆ, ಈ ರಸ್ತೆಗಳ ರಸ್ತೆ ಇತಿಹಾಸದ ಮಾಹಿತಿಯನ್ನು ನೀಡುವಂತೆ ಸಂಪರ್ಕಿಸಿದರೂ, ಅವರಾಗಲಿ, ಅವರ ಮೇಲಿನ ಅಧಿಕಾರಿಗಳಾದ ಎಇಇ ಪ್ರದೀಪ್ ಕುಮಾರ್, ಚಿಕ್ಕಪೇಟೆ ವಿಭಾಗದ ಇಇ ಯರ್ರಪ್ಪಾ ರೆಡ್ಡಿ ಹಾಗೂ ಸಿಇ ರಾಜೇಶ್ ಕೂಡ ಈ ಬಗ್ಗೆ ಸ್ಪಂದಿಸಿಲ್ಲ.

ಕಾರ್ಯಾದೇಶದಲ್ಲಿನ ಅವಧಿ ಮುಗಿದು 3 ತಿಂಗಳಾದರೂ ಕಾಮಗಾರಿ ಮುಗಿಸಿಲ್ಲ ಯಾಕೆ?:

ಈ ವಿಷಯದ ಬಗ್ಗೆ ಬೆಂಗಳೂರು ವೈರ್ ಮತ್ತಷ್ಟು ತನಿಖೆ ನಡೆಸಲು ಮುಂದಾದಾಗ, ಧರ್ಮರಾಯಸ್ವಾಮಿ ದೇವಸ್ಥಾನ ವಾರ್ಡ್ ನಲ್ಲಿನ ಪ್ರಸ್ತುತ ಅಗೆದಿರುವ ರಸ್ತೆಯೂ ಸೇರಿದಂತೆ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಲ್ಲಿನ ಕೆಂಪೇಗೌಡನಗರ ಉಪವಿಭಾಗದಲ್ಲಿ ಸಮಗ್ರ ರಸ್ತೆ, ಚರಂಡಿ, ಫುಟ್ ಪಾತ್ ಮತ್ತು ಪಾರ್ಕ್ ಅಭಿವೃದ್ಧಿಪಡಿಸಲು ಎಸ್.ಕೆ.ಕೇಶವಮೂರ್ತಿ ಎಂಬ ಗುತ್ತಿಗೆದಾರರಿಗೆ ಮೇಯರ್ ಅನುದಾನದ ಅಡಿಯಲ್ಲಿ 4.35 ಕೋಟಿ ರೂ. (4,35,69,408 ರೂ.) ಮೊತ್ತದ ಕಾರ್ಯಾದೇಶವನ್ನು (ಕಾರ್ಯಾದೇಶ ನಂಬರ್ :  EE (CKP)/Online WO/155/22-23 Dated 23/03/2023) ಬಿಬಿಎಂಪಿ ಚಿಕ್ಕಪೇಟೆ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ 23-03-2023ರಂದು ನೀಡಿದ್ದು, ಈ ಕಾರ್ಯಗಳೆನ್ನೆಲ್ಲಾ 8 ತಿಂಗಳಲ್ಲಿ ಮುಗಿಸುವಂತೆ ತಿಳಿಸಿದ್ದಾರೆ. ಈ ವರ್ಕ್ ಆರ್ಡರ್ ನಲ್ಲಿರುವಂತೆ 23-11-2023ರ ಒಳಗಾಗಿ ಸಂಪೂರ್ಣ ಕಾಮಗಾರಿಗಳನ್ನು ಎಸ್.ಕೆ.ಕೇಶವಮೂರ್ತಿ ಎಂಬ ಕಾಂಟ್ರಾಕ್ಟರ್ ಮಾಡಿ ಮುಗಿಸಬೇಕಿತ್ತು. ಆದರೆ ಇನ್ನೂ ಕೂಡ ಕಾಮಗಾರಿ ಪೂರ್ಣಗೊಳಿಸಿಲ್ಲದಿರುವುದು ಕಂಡು ಬಂದಿದೆ. ಅಂದರೆ ಕಾರ್ಯಾದೇಶದ ಸ್ಪಷ್ಟ ಉಲ್ಲಂಘನೆಯಾಗಿದೆ.

ಧರ್ಮರಾಯಸ್ವಾಮಿ ದೇವಸ್ಥಾನ ವಾರ್ಡ್ ರಸ್ತೆ ಇತಿಹಾಸ ಏನು ಹೇಳುತ್ತೆ? :

ಇನ್ನು ಹೊಸ ರಸ್ತೆ ಇತಿಹಾಸ 2.0ರಲ್ಲಿನ ಮಾಹಿತಿಯಂತೆ ಇಡೀ ಧರ್ಮರಾಯ ಸ್ವಾಮಿ ದೇವಸ್ಥಾನ ವಾರ್ಡ್ ನಲ್ಲಿ ಈ ಮೇಲಿನ ಕಾಮಗಾರಿ ಹೊರತುಪಡಿಸಿ, 2022-23 ಹಾಗೂ 2023-24ನೇ ಸಾಲಿನಲ್ಲಿ  ಒಟ್ಟು ನಾಲ್ಕು ಪ್ಯಾಕೇಜ್ ಗಳಲ್ಲಿ ಕಾಮಗಾರಿಗಳನ್ನು ನಾಲ್ಕು ಗುತ್ತಿಗೆದಾರರಿಗೆ ನೀಡಲಾಗಿದೆ. ಮೊದಲನೆಯದಾಗಿ 2022-23ನೇ ಸಾಲಿನಲ್ಲಿ ಪ್ಯಾಕೇಜ್-4ರಲ್ಲಿ 10 ಕೋಟಿ ವೆಚ್ಚದಲ್ಲಿ ರಸ್ತೆ, ಪಾರ್ಕ್, ಚರಂಡಿ, ಪಾದಚಾರಿ ಮಾರ್ಗದ ಸಮಗ್ರ ಅಭಿವೃದ್ಧಿಯನ್ನು ಬಂಬೂ ಬಜಾರ್, ಕುಂಬಾರಗುಂಡಿ, ಕಲಾಸಿಪಾಳ್ಯ ಹಾಗೂ ಸುತ್ತಮುತ್ತಲಿನ ಸ್ಥಳಗಳಲ್ಲಿ 103.14 ಮೀಟರ್ ಉದ್ದದ ಕಾಂಕ್ರಿಟನ್ನು 6 ರಸ್ತೆಗಳಲ್ಲಿ ಹಾಕಲಾಗಿದೆ ಎಂದು ರೋಡ್ ಹಿಸ್ಟರಿಯಲ್ಲಿದೆ. ಇನ್ನು 2022-23ರಲ್ಲಿ 21 ಲಕ್ಷದ ಕಾಮಗಾರಿಯಲ್ಲಿ ಕಲಾಸಿಪಾಳ್ಯ ಮತ್ತು ಕಲಾಸಿಪಾಳ್ಯ ಹೊಸ ವಿಸ್ತರಿತ ಪ್ರದೇಶದಲ್ಲಿ ಮಳೆ ಹಾಗೂ ಚರಂಡಿ ಹಾಗೂ ಒಟ್ಟು 65.60 ಮೀಟರ್ ಉದ್ದ 4 ಕಡೆಗಳಲ್ಲಿ ಕಾಂಕ್ರಿಟ್ ಹೊಸದಾಗಿ ರಸ್ತೆ ನಿರ್ಮಿಸಲಾಗಿದೆ. ಇನ್ನು ಪೋರ್ಟರ್ಸ್ ಕಾಲೋನಿ ಮತ್ತು ಗಂಗಮ್ಮ ಆಚಾರಿ ರಸ್ತೆಯಲ್ಲಿ 40 ಲಕ್ಷ ರೂ. ವೆಚ್ಚದಲ್ಲಿ 25 ರಸ್ತೆಗಳು ಕವರ್ ಆಗುವಂತೆ ಒಟ್ಟಾರೆ 427.65 ಮೀಟರ್ ಕಾಂಕ್ರಿಟ್ ರಸ್ತೆ, ಮಳೆ ನೀರು ಚರಂಡಿ ನಿರ್ಮಿಸಲಾಗಿದೆ. ಇನ್ನು 2023-24ನೇ ಸಾಲಿನಲ್ಲಿ 4 ಕಡೆಗಳಲ್ಲಿ 17.75 ಮೀಟರ್ ಉದ್ದದ ಮಳೆ ನೀರು ಮೋರಿಯನ್ನು 22 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ ಎಂದು ತಿಳಿಸುತ್ತದೆ.

ಒಟ್ಟಾರೆ ಧರ್ಮರಾಯಸ್ವಾಮಿ ದೇವಸ್ಥಾನ ವಾರ್ಡ್ ನಲ್ಲಿ ಚೆನ್ನಾಗಿರುವ ಕಬ್ಬನ್ ಪೇಟೆ ರಸ್ತೆ ಸೇರಿದಂತೆ ಇತರ ಕಡೆಗಳ ರಸ್ತೆ ಅಭಿವೃದ್ಧಿ ಹೆಸರಿನಲ್ಲಿ ನಡೆದ ಕಾಮಗಾರಿಗಳ ಕುರಿತಂತೆ ಬಿಬಿಎಂಪಿ ಮುಖ್ಯ ಆಯುಕ್ತರು ತನಿಖೆ ನಡೆಸಿದಲ್ಲಿ ಸತ್ಯ ಬಯಲಿಗೆ ಬರಲಿದೆ. ಚೆನ್ನಾಗಿರುವ ಕಾಂಕ್ರಿಟ್ ರಸ್ತೆಯನ್ನು ಕಿತ್ತು ಹಾಕಲು ಕಾರಣವಾಗಿರುವ ಪಾಲಿಕೆ ಅಧಿಕಾರಿಗಳು ಹಾಗೂ ಸಂಬಂಧಿಸಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕಿದೆ ಎಂಬುದು ಪ್ರಜ್ಞ ನಾಗರೀಕರ ಅಭಿಪ್ರಾಯವಾಗಿದೆ.

Previous Post

Slum Development Board Flats Allotment | ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ರಾಜ್ಯಾದ್ಯಂತ ಇಂದು 36,789 ಮನೆಗಳ ಲೋಕಾರ್ಪಣೆ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಸಾಂಕೇತಿಕವಾಗಿ ಹಕ್ಕುಪತ್ರ ವಿತರಣೆ

Next Post

Daroji Bear Sanctuary | ಕಮಲಾಪುರದ ದರೋಜಿ ಕರಡಿಧಾಮದಲ್ಲಿ ಹೊಸ ಅತಿಥಿಗಳ ಆಗಮನ : ಮರಿ ಕರಡಿಗಳ ಚಟುವಟಿಕೆಗೆ ಮನಸೋತ ಸಫಾರಿ ಪ್ರಿಯರು

Next Post

Daroji Bear Sanctuary | ಕಮಲಾಪುರದ ದರೋಜಿ ಕರಡಿಧಾಮದಲ್ಲಿ ಹೊಸ ಅತಿಥಿಗಳ ಆಗಮನ : ಮರಿ ಕರಡಿಗಳ ಚಟುವಟಿಕೆಗೆ ಮನಸೋತ ಸಫಾರಿ ಪ್ರಿಯರು

ಬಿಬಿಎಂಪಿ ಕೇಂದ್ರ ಕಚೇರಿ, ಸಾಂದರ್ಭಿಕ ಚಿತ್ರ

BBMP RRnagar Zone Illegal A Khata | ರಾಜರಾಜೇಶ್ವರಿ ನಗರ ವಲಯದಲ್ಲಿ ಬೃಹತ್ ಪ್ರಮಾಣದಲ್ಲಿ ನಕಲಿ “ಎ” ಖಾತಾ ಸೃಷ್ಟಿ ಆರೋಪ : ಲೋಕಾಯುಕ್ತ ಕಚೇರಿಯಲ್ಲಿ ದಾಖಲಾಯ್ತು ದೂರು

Please login to join discussion

Like Us on Facebook

Follow Us on Twitter

Recent News

GBA News | ಬೆಂಗಳೂರು ದಕ್ಷಿಣ ಪಾಲಿಕೆ ಅಭಿವೃದ್ಧಿಗೆ ತಜ್ಞರ ಸಲಹಾ ಸಮಿತಿ ರಚನೆ: ಆಯುಕ್ತ ಕೆ.ಎನ್. ರಮೇಶ್

April 25, 2026

BIG EXCLUSIVE| ಜನಗಣತಿ ಜಿದ್ದಾಜಿದ್ದಿ; ಜಿಬಿಎ ಅಧಿಕಾರಿಗಳು Vs ಸಚಿವಾಲಯ ಸಂಘ – ರಾಜ್ಯದ 43 ಇಲಾಖೆಗಳು ಬಂದ್ ಆಗುವ ಭೀತಿ!

April 25, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

GBA News | ಬೆಂಗಳೂರು ದಕ್ಷಿಣ ಪಾಲಿಕೆ ಅಭಿವೃದ್ಧಿಗೆ ತಜ್ಞರ ಸಲಹಾ ಸಮಿತಿ ರಚನೆ: ಆಯುಕ್ತ ಕೆ.ಎನ್. ರಮೇಶ್

April 25, 2026

BIG EXCLUSIVE| ಜನಗಣತಿ ಜಿದ್ದಾಜಿದ್ದಿ; ಜಿಬಿಎ ಅಧಿಕಾರಿಗಳು Vs ಸಚಿವಾಲಯ ಸಂಘ – ರಾಜ್ಯದ 43 ಇಲಾಖೆಗಳು ಬಂದ್ ಆಗುವ ಭೀತಿ!

April 25, 2026

ಬೆಂಗಳೂರಿನ ಅಭಿವೃದ್ಧಿಗೆ ‘Airport’ ಅಡ್ಡಿ: ಕಟ್ಟಡಗಳ ಎತ್ತರ ನಿರ್ಬಂಧ ಸಡಿಲಿಕೆಗೆ ರಾಜನಾಥ್ ಸಿಂಗ್‌ಗೆ ಡಿ.ಕೆ. ಶಿವಕುಮಾರ್ ಮನವಿ

April 24, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group