Friday, April 24, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ಸರ್ಕಾರಿ ಆಸ್ಪತ್ರೆಗಳಲ್ಲಿ ಮೊಣಕಾಲು ಮತ್ತು ಸೊಂಟದ ಕೀಲು ಬದಲಿ ಶಸ್ತ್ರಚಿಕಿತ್ಸೆಗಳಿಗೆ ಬಲ: ರೋಗಿಗಳಿಗೆ ಮನೆಬಾಗಿಲಲ್ಲೇ ಗುಣಮಟ್ಟದ ಚಿಕಿತ್ಸೆ

    ಎಸ್‌ಎಸ್‌ಎಲ್‌ಸಿ ಫಲಿತಾಂಶ 2026: ಇತಿಹಾಸದಲ್ಲೇ ಮೊದಲು! 94.10% ರಷ್ಟು ಅಭೂತಪೂರ್ವ ಫಲಿತಾಂಶ; ಬಾಲಕಿಯರದ್ದೇ ಮೇಲುಗೈ

    KSIC News | ಮೈಸೂರು ರೇಷ್ಮೆ ಪರಂಪರೆಗೆ ಮಹಾ ಜಯ: ಕೆಎಸ್‌ಐಸಿ ಭೂಮಿ ಹಸ್ತಾಂತರ ಆದೇಶ ರದ್ದು

    IMPORTANT NEWS | ಭೂಪರಿವರ್ತನೆ ಇನ್ನು ಸುಲಭ: 30 ದಿನಗಳಲ್ಲಿ ವಿಲೇವಾರಿಯಾಗದಿದ್ದರೆ ‘ಪರಿಭಾವಿತ ಭೂಪರಿವರ್ತನೆ’  ಭಾಗ್ಯ

    Vidhana Soudha

    RDPR NEWS | ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಗ್ರಾಮೀಣ ಭಾಗದ ಶೈಕ್ಷಣಿಕ ಕಾರ್ಯಗಳಿಗೆ‌ 501 ಕೋಟಿ ರೂ. ಅನುದಾನ ಬಿಡುಗಡೆ

    ಸಂಭ್ರಮದ ಪಾರ್ಟಿಯಲ್ಲಿ ದುರಂತ: ಗಂಟಲಲ್ಲಿ ಚಿಕನ್ ಮೂಳೆ ಸಿಲುಕಿ ಯುವಕ ಸಾವು

    Wildlife News | ಬನ್ನೇರುಘಟ್ಟಕ್ಕೆ ದಕ್ಷಿಣ ಆಫ್ರಿಕಾದ ‘ಸಿವಂಗಿ’ಗಳು (ಚೀತಾ) ಆಗಮನ; ಚಾರಣಿಗರ ಸುರಕ್ಷತೆಗೆ ಹೊಸ ಕಠಿಣ ‘SOP’ ಬಿಡುಗಡೆ

    ಹೆಸರಘಟ್ಟದ ಮತ್ಕೂರು ಗ್ರಾಮದ ಕೋಳಿ ಸಾಕಾಣಿಕೆ ತರಬೇತಿ ಕೇಂದ್ರದಲ್ಲಿ ಎಚ್5ಎನ್1 ಹಕ್ಕಿಜ್ವರ ಭೀತಿ ಹಿನ್ನಲೆಯಲ್ಲಿ ಪಶುಪಾಲನೆ ಇಲಾಖೆ ನೇತೃತ್ವದಲ್ಲಿ ವೈಜ್ಞಾನಿಕವಾಗಿ ವಿಲೇವಾರಿ ಮಾಡಿದ್ದಾರೆ.

    ಬೆಂಗಳೂರಿನಲ್ಲಿ ಹಕ್ಕಿಜ್ವರ ಭೀತಿ: 7400ಕ್ಕೂ ಅಧಿಕ ಕೋಳಿಗಳ ಹನನ; ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದ ಆರೋಗ್ಯ ಸಚಿವ

    ಲೋಕಾಯುಕ್ತ ಕಚೇರಿಯ ಸಾಂದರ್ಭಿಕ ಚಿತ್ರ

    Karnataka Lokayukta | ಕರ್ನಾಟಕ ಲೋಕಾಯುಕ್ತಕ್ಕೆ 40ರ ಸಂಭ್ರಮ: ಏಪ್ರಿಲ್ 18ರಂದು ಸಾರ್ಥಕ ಪಯಣದ ಕಾರ್ಯಕ್ರಮ

  • Bengaluru Focus

    GBA News | ಪಶ್ಚಿಮ ಬೆಂಗಳೂರಿಗರಿಗೆ ಸಿಹಿ ಸುದ್ದಿ: ಗೋವಿಂದರಾಜನಗರದಲ್ಲಿ ಶೀಘ್ರವೇ 100 ಹಾಸಿಗೆಗಳ ‘ಜಯದೇವ’ ಘಟಕ ಉದ್ಘಾಟನೆ

    ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ‘ಜನಿವಾರ’ ವಿವಾದ: ವಿದ್ಯಾರ್ಥಿಗಳ ಧಾರ್ಮಿಕ ಹಕ್ಕಿಗೆ ಚ್ಯುತಿ? ಮೂವರು ಸಸ್ಪೆಂಡ್!!

     ‘ಅಣ್ಣಾವ್ರ’ 97ನೇ ಜನ್ಮದಿನೋತ್ಸವ: ದೊಡ್ಮನೆ ಕುಟುಂಬ ಹಾಗೂ ಅಭಿಮಾನಿಗಳಿಂದ ಭಕ್ತಿಯ ನಮನ

    ಎಸ್‌ಎಸ್‌ಎಲ್‌ಸಿ ಫಲಿತಾಂಶ 2026: ಇತಿಹಾಸದಲ್ಲೇ ಮೊದಲು! 94.10% ರಷ್ಟು ಅಭೂತಪೂರ್ವ ಫಲಿತಾಂಶ; ಬಾಲಕಿಯರದ್ದೇ ಮೇಲುಗೈ

    ಕಾಲೇಜು ಕ್ಯಾಂಪಸ್‌ಗಳಲ್ಲಿ ಮತ್ತೆ ಚುನಾವಣಾ ರಂಗು: ವಿದ್ಯಾರ್ಥಿ ಸಂಘಗಳ ಚುನಾವಣೆ ನಡೆಸಲು ಸರ್ಕಾರ ಮುಂದು

    GBA News | ಇಬ್ಲೂರು ಜಂಕ್ಷನ್ ಸಂಚಾರ ದಟ್ಟಣೆಗೆ ಮುಕ್ತಿ: ಹೆಚ್ಚುವರಿ ಮೇಲ್ಸೇತುವೆ ನಿರ್ಮಾಣಕ್ಕೆ ಜಿಬಿಎ ಮುಂದು

    BWSSB News | ತ್ಯಾಜ್ಯವೇ ಈಗ ಜಲಮಂಡಳಿಯ ‘ಚಿನ್ನ’: ಬೆಂಗಳೂರಿನಲ್ಲಿ ಕೊಳಚೆ ನೀರಿನಿಂದ ದೇಶದಲ್ಲೇ ದೊಡ್ಡ ಪ್ರಮಾಣದಲ್ಲಿ ಬಯೋ-ಗ್ಯಾಸ್ ಉತ್ಪಾದನೆ

    ಬಿಟ್‌ಕಾಯಿನ್ ಹಗರಣದ ಕಿಚ್ಚು: ಶಾಸಕ ಎನ್.ಎ. ಹ್ಯಾರಿಸ್ ಮತ್ತು ಪುತ್ರರ ನಿವಾಸದ ಮೇಲೆ ಇಡಿ ದಾಳಿ, ಪರಿಶೀಲನೆ

    CLEA Conference | ಬೆಂಗಳೂರು ಘೋಷಣೆ: 2047ರ ವೇಳೆಗೆ ಸುಸ್ಥಿರ ಇಂಧನ ಮತ್ತು ಇಂಧನ ನ್ಯಾಯಕ್ಕೆ ಸಂಕಲ್ಪ

  • Public interest
  • BW Special
  • Life Style
  • Photo Gallery
  • Video
No Result
View All Result

Home BW Special

#BirdWildlife | ದಾಂಡೇಲಿ ಮಳೆ ಕಾಡುಗಳಲ್ಲಿನ ವಿಶಿಷ್ಟ ಬಾನಾಡಿ ಲೋಕ…!

ಹಕ್ಕಿಗಳ ನಿನಾದ ಎಂತಹ ಕಲ್ಲು ಹೃದಯವನ್ನು ಅರೆಕ್ಷಣ ತನ್ನೆಡೆ ಸೆಳೆಯದೆ ಇರದು..!

by Bengaluru Wire Desk
December 4, 2022
in BW Special, Others
Reading Time: 1 min read
0

ಹಕ್ಕಿಗಳ ಲೋಕದಲ್ಲಿ ವಿಹರಿಸುವವರಿಗೇ ಗೊತ್ತು ಅವುಗಳ ಹಾರಾಟ, ಜೀವನಕ್ರಮವನ್ನು ಆಸ್ವಾದಿಸುವ ಮಜಾ. ಒಂದು ಕ್ಷಣಕ್ಕೆ ಕಂಡರೂ ಕಾಣದಂತೆ ತನ್ನ ಅಮಿತ ಸೌಂದರ್ಯವನ್ನು ತೋರಿಸಿ ಆಕಾಶದಲ್ಲಿ ತೇಲುತ್ತಾ, ಮರಗಿಡಗಳ ಟೊಂಗೆಗಳ ಮೇಲೆ ಕೂತು ಆಹಾರವನ್ನರಿಸುವ ಪರಿ ಎಂತಹವರಲ್ಲೂ ಕುತೂಹಲ ಮೂಡಿಸದೇ ಇರದು. ಅಂತಹ ಕೆಲವು ಹಕ್ಕಿಗಳ ಪರಿಚಯವನ್ನು ನಿಮ್ಮ ಬೆಂಗಳೂರು ವೈರ್ ನಲ್ಲಿ ತಿಳಿಸುತ್ತಿದ್ದೇವೆ.

ಪಶ್ಚಿಮ ಘಟ್ಟಗಳ ಸರಹದ್ದಿನಲ್ಲಿರುವ ದಾಂಡೇಲಿ ವಿಶಿಷ್ಟ ಕಾಡುಗಳಲ್ಲಿ ಕಂಡು ಬರುವ ಮಲಬಾರ್ ಪೈಡ್ ಹಾರ್ನ್ ಬಿಲ್, ಕಾಪರ್ಸ್ಮಿತ್ ಬಾರ್ಬಿಟ್, ಪ್ಯಾರಡೈಸ್ ಫ್ಲೈ ಕ್ಯಾಚರ್ ಹಾಗೂ ಇಂಡಿಯನ್ ಗ್ರೇ ಹಾರ್ನ್ ಬಿಲ್ ಗಳ ಚಿತ್ರವನ್ನು ಹವ್ಯಾಸಿ ಫೊಟೊಗ್ರಾಫರ್ ಅನಂತ ಬಾಯರಿ ತಮ್ಮ ಕ್ಯಾಮರಾದಲ್ಲಿ ಸುಂದರವಾಗಿ ಸೆರೆ ಹಿಡಿದಿದ್ದಾರೆ.

ಮಲಬಾರ್ ಪೈಡ್ ಹಾರ್ನ್ ಬಿಲ್ ಹಕ್ಕಿ

ಮಲಬಾರ್ ಪೈಡ್ ಹಾರ್ನ್ ಬಿಲ್ (Malabar Pied Hornbill) ಕನ್ನಡದಲ್ಲಿ‌ ಮಲೆದಾಸ ಮಂಗಟ್ಟೆ ಎಂದು ಕರೆಯುವ ಇದು ಪಶ್ಚಿಮ ಘಟ್ಟಗಳಿಗೆ ಸೀಮಿತವಾಗಿದೆ ಎಂದು ಅದರ ಹೆಸರು ಸೂಚಿಸಿದರೂ, ಇದು ಮಧ್ಯ ಹಾಗೂ ಪೂರ್ವ ಭಾರತದ ಎರಡು ಪ್ರದೇಶಗಳಲ್ಲಿ ಕಂಡುಬರುತ್ತದೆ. ಅಲ್ಲದೆ ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು ಮತ್ತು ಕೇರಳದ ಭಾಗಗಳಲ್ಲಿ ಪಶ್ಚಿಮ ಘಟ್ಟಗಳ ಕಾಡುಗಳಲ್ಲಿನ ಇವುಗಳ ವಾಸಸ್ಥಾನವಾಗಿದೆ. ಈ ಹಕ್ಕಿಗಳು 65 ರಿಂದ 92 ಸೆಂ.ಮೀ ಉದ್ದ ಹಾಗೂ ಸುಮಾರು ಒಂದು ಕೆಜಿ ಭಾರವಿರುತ್ತದೆ.

ಅವು ಸಾಮಾನ್ಯವಾಗಿ ತೊರೆಗಳು ಮತ್ತು ಸಣ್ಣ ನದಿಗಳ ಸಮೀಪವಿರುವ ಕಾಡುಗಳಲ್ಲಿ ಈ ಮಂಗಟ್ಟೆ ಹಕ್ಕಿ ಕಂಡುಬರುತ್ತವೆ. ಮಳೆಕಾಡಿನ ಅಂಚುಗಳು ಮತ್ತು ಪತನಶೀಲ ಕಾಡುಪ್ರದೇಶಗಳು, 300 ಮೀ ವರೆಗಿನ ಎತ್ತರದ ಪ್ರತ್ಯೇಕವಾಗಿರುವ ಹಣ್ಣಿನ ಮರಗಳಿಗೆ ಭೇಟಿ ನೀಡುತ್ತದೆ.

ಈ ಮಂಗಟ್ಟೆ ಪಕ್ಷಿಯನ್ನು ನೋಡಲು ಉತ್ತಮ ಸ್ಥಳಗಳೆಂದರೆ ಕರ್ನಾಟಕದ ಬಂಡೀಪುರ, ನಾಗರಹೊಳೆ, ದಾಂಡೇಲಿ ಹಾಗೂ ಮಧ್ಯಪ್ರದೇಶದ ಸಾತ್ಪುರ ಹುಲಿ ಸಂರಕ್ಷಿತ ಪ್ರದೇಶವಾಗಿದೆ.

ಬೂದು ಬಣ್ಣದ ಮಂಗಟೆಹಕ್ಕಿ

ಇಂಡಿಯನ್ ಗ್ರೇ ಹಾರ್ನ್ ಬಿಲ್ :
ಇನ್ನು ಭಾರತೀಯ ಗ್ರೇ ಹಾರ್ನ್ ಬಿಲ್ (Indian Grey Hornbill) ಅಥವಾ ಕನ್ನಡದಲ್ಲಿ ಇದನ್ನು ಕಂದು/ಬೂದು ಬಣ್ಣದ ಮಂಗಟ್ಟೆಹಕ್ಕಿ, ಕಲದಾಲ ಹಕ್ಕಿ ಎಂದು ಕರೆಯುತ್ತಾರೆ. ಪಶ್ಚಿಮ ಘಟ್ಟಗಳ ಎತ್ತರದ ಆರ್ದ್ರ ಕಾಡುಗಳಲ್ಲಿ ಮಾತ್ರ ಇವು ಕಂಡುಬರುತ್ತದೆ. ಇವುಗಳ ಗಾತ್ರ: 45 ಸೆಂ.ಮೀವಿರುತ್ತೆ. ಗಂಡು ಹಕ್ಕಿ ಸುಮಾರು 238-240 ಗ್ರಾಂ. ತೂಕ ಹೊಂದಿರುತ್ತದೆ. ಅವುಗಳ ಉದ್ದ ಕೇವಲ 60 ಸೆಂ.ಮೀ ಆಗಿರುತ್ತೆ. ಇವುಗಳು ವಿನಾಶದಂಚಿನಲ್ಲಿರುವ ಹಕ್ಕಿಗಳಾಗಿದೆ.

ಈ ಹಾರ್ನ್ ಬಿಲ್ ಭಾರತಕ್ಕೆ ಸ್ಥಳೀಯವಾಗಿದೆ ಮತ್ತು ನೈಋತ್ಯ ಭಾರತದ ಪಶ್ಚಿಮ ಘಟ್ಟಗಳಲ್ಲಿ ಕಂಡುಬರುತ್ತದೆ. ನಿತ್ಯಹರಿದ್ವರ್ಣ ಮತ್ತು ಪತನಶೀಲ ಕಾಡುಗಳಲ್ಲಿ ಕಂಡುಬರುತ್ತದೆ, ನದಿ ಪ್ರದೇಶದ ಆಸುಪಾಸು ಮತ್ತು ತಗ್ಗು ಪ್ರದೇಶಗಳಲ್ಲಿಯೂ ಕಂಡುಬರುತ್ತದೆ. ದಟ್ಟವಾದ ಮರಗಳ ಹೊದಿಕೆಯನ್ನು ಹೊಂದಿರುವ ಕಾಡುಗಳಲ್ಲಿ ಭಾರತೀಯ ಕಂದು ಮತ್ತು ಬೂದು ಬಣ್ಣದ ಮಂಗಟ್ಟೆ ಹಕ್ಕಿಗಳು ಕಂಡುಬರುತ್ತದೆ.

ಈ ಪಕ್ಷಿಯನ್ನು ನೋಡಲು ಉತ್ತಮ ಸ್ಥಳಗಳು: ತಮಿಳುನಾಡಿನ ಅನೈಮಲೈ ಹುಲಿ ಸಂರಕ್ಷಿತ ಪ್ರದೇಶ, ಕೇರಳದ ಪೆರಿಯಾರ್ ಮತ್ತು ಪರಂಬಿಕುಲಂ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕಂಡುಬರುತ್ತದೆ.

ಬಾಲದಂಡೆಯ ಹಕ್ಕಿ

ಇಂಡಿಯನ್ ಪ್ಯಾರಡೈಸ್ ಫ್ಲೈಕ್ಯಾಚರ್ ಹಕ್ಕಿಯ ವಿವರ
ಇಂಡಿಯನ್ ಪ್ಯಾರಡೈಸ್ ಫ್ಲೈಕ್ಯಾಚರ್ (Paradise fly catcher) ಕನ್ನಡದಲ್ಲಿ ಬಾಲದಂಡೆಯ ಹಕ್ಕಿ ಎಂದು ಕರೆಯುವ, ಮಧ್ಯಮ ಗಾತ್ರದ ಪ್ಯಾಸರೀನ್ ಪಕ್ಷಿ ಏಷ್ಯಾ ಖಂಡದ ಅಲ್ಲ ಕಂಡುಬರುವ ಹಕ್ಕಿಯಾಗಿದ್ದು ಸ್ಥಳೀಯವಾಗಿ ಇದು ವ್ಯಾಪಕವಾಗಿ ಕಂಡುಬರುತ್ತದೆ. ಈ ಬಾನಾಡಿಯ ಜಾಗತಿಕ ಜನಸಂಖ್ಯೆಯು ಸ್ಥಿರವೆಂದು ಪರಿಗಣಿಸಲ್ಪಟ್ಟಿರುವುದರಿಂದ, 2004 ರಿಂದ ಐಯುಸಿಎನ್ ರೆಡ್ ಲಿಸ್ಟ್‌ನಲ್ಲಿ ಕಡಿಮೆ ಕಾಳಜಿಯ ಹಕ್ಕಿ ಎಂದು ಪಟ್ಟಿ ಮಾಡಲಾಗಿದೆ. ಇದು ಭಾರತೀಯ ಉಪಖಂಡ, ಮಧ್ಯ ಏಷ್ಯಾ ಮತ್ತು ಮ್ಯಾನ್ಮಾರ್‌ ನಲ್ಲಿ ಕಂಡುಬರುತ್ತದೆ. ಬೇರೆ ಬೇರೆ ಪ್ರದೇಶದಲ್ಲಿ ವಿವಿಧ ಬಣ್ಣಗಳಲ್ಲಿರುತ್ತದೆ.

ಕುಟ್ರು ಹಕ್ಕಿಯ ಚಿತ್ರ

ಕಾಪರ್ಸ್ಮಿತ್ ಬಾರ್ಬಿಟ್ ಹಕ್ಕಿಯ ವಿವರ :
ಕಾಪರ್ಸ್ಮಿತ್ ಬಾರ್ಬಿಟ್ (Coppersmith Barbit) ಕನ್ನಡದಲ್ಲಿ ಕುಟ್ರುಹಕ್ಕಿ, ಚೋಂಬು ಕುಟ್ಟಿಗ ಹಕ್ಕಿ ಎಂದು ಕರೆಯುವ ಈ ಪುಟ್ಟ ಹಕ್ಕಿ ಕಡುಗೆಂಪು ಹಣೆ ಮತ್ತು ಗಂಟಲು ಹೊಂದಿರುವ ಏಷ್ಯಾದ ಬಾರ್ಬೆಟ್ ಬಾನಾಡಿಯಾಗಿದೆ. ಇದು ತಾಮ್ರಗಾರನು ಸುತ್ತಿಗೆಯಿಂದ ಲೋಹವನ್ನು ಹೊಡೆಯುವಂತೆಯೇ ಧ್ವನಿಸುವ ಮೆಟ್ರೋನಾಮಿಕ್ ಕರೆಗೆ ಹೆಸರುವಾಸಿಯಾಗಿದೆ. ಭಾರತೀಯ ಉಪಖಂಡ ಮತ್ತು ಆಗ್ನೇಯ ಏಷ್ಯಾದ ಭಾಗಗಳಲ್ಲಿ ವಾಸಿಸುವ ಈ ಪಕ್ಷಿಗಳು, ಗೂಡು ಕಟ್ಟಲು ಮರದೊಳಗೆ ರಂಧ್ರಗಳನ್ನು ಕೊರೆಯುತ್ತದೆ. ಇವು ಕೀಟಗಳನ್ನು, ವಿಶೇಷವಾಗಿ ರೆಕ್ಕೆಯ ಗೆದ್ದಲುಗಳನ್ನು ತಿನ್ನುತ್ತವೆ.

WhatsApp Join our WhatsApp Channel
Previous Post

BDA News | ಡಾ.ಶಿವರಾಮ ಕಾರಂತ ಬಡಾವಣೆಗೆ
ಜಮೀನು ನೀಡಿರುವ ರೈತರಿಗೆ ನಿವೇಶನ ಅರ್ಹತಾ ಪ್ರಮಾಣ ಪತ್ರ ಹಂಚಿಕೆ

Next Post

Bangalore Roads | ಪಾದರಾಯನಪುರ ರಸ್ತೆ ಅಗಲೀಕರಣ : ಇನ್ನು ಒಂದು ತಿಂಗಳಲ್ಲಿ 240 ಕೋಟಿ ರೂ. ವೆಚ್ಚದ ಕಾಮಗಾರಿ ಆರಂಭ

Next Post
ಪಾದರಾಯನಪುರ ರಸ್ತೆಯ ವಾಹನ ದಟ್ಟಣೆ ಸಾಂದರ್ಭಿಕ ಚಿತ್ರ

Bangalore Roads | ಪಾದರಾಯನಪುರ ರಸ್ತೆ ಅಗಲೀಕರಣ : ಇನ್ನು ಒಂದು ತಿಂಗಳಲ್ಲಿ 240 ಕೋಟಿ ರೂ. ವೆಚ್ಚದ ಕಾಮಗಾರಿ ಆರಂಭ

ರಕ್ಷಣಾ ಸಚಿವಾಲಯದ ಅಧಿಕಾರಿಗಳು ನಗರದಲ್ಲಿ ಸೋಮವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಮುಂಬರುವ ಏರ್ ಶೋ2023ರ ಪ್ರದರ್ಶನದ ಕುರಿತು ಚರ್ಚೆ ನಡೆಸಿದರು.

#AirShow2023 | ಏರ್ ಶೋ 2023 : ರಕ್ಷಣಾ ಸಚಿವಾಲಯದ ಅಧಿಕಾರಿಗಳಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ – ಏರ್ ಶೋ ಕುರಿತು ಚರ್ಚೆ

Please login to join discussion

Like Us on Facebook

Follow Us on Twitter

Recent News

GBA News | ಪಶ್ಚಿಮ ಬೆಂಗಳೂರಿಗರಿಗೆ ಸಿಹಿ ಸುದ್ದಿ: ಗೋವಿಂದರಾಜನಗರದಲ್ಲಿ ಶೀಘ್ರವೇ 100 ಹಾಸಿಗೆಗಳ ‘ಜಯದೇವ’ ಘಟಕ ಉದ್ಘಾಟನೆ

April 24, 2026

ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ‘ಜನಿವಾರ’ ವಿವಾದ: ವಿದ್ಯಾರ್ಥಿಗಳ ಧಾರ್ಮಿಕ ಹಕ್ಕಿಗೆ ಚ್ಯುತಿ? ಮೂವರು ಸಸ್ಪೆಂಡ್!!

April 24, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

GBA News | ಪಶ್ಚಿಮ ಬೆಂಗಳೂರಿಗರಿಗೆ ಸಿಹಿ ಸುದ್ದಿ: ಗೋವಿಂದರಾಜನಗರದಲ್ಲಿ ಶೀಘ್ರವೇ 100 ಹಾಸಿಗೆಗಳ ‘ಜಯದೇವ’ ಘಟಕ ಉದ್ಘಾಟನೆ

April 24, 2026

ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ‘ಜನಿವಾರ’ ವಿವಾದ: ವಿದ್ಯಾರ್ಥಿಗಳ ಧಾರ್ಮಿಕ ಹಕ್ಕಿಗೆ ಚ್ಯುತಿ? ಮೂವರು ಸಸ್ಪೆಂಡ್!!

April 24, 2026

 ‘ಅಣ್ಣಾವ್ರ’ 97ನೇ ಜನ್ಮದಿನೋತ್ಸವ: ದೊಡ್ಮನೆ ಕುಟುಂಬ ಹಾಗೂ ಅಭಿಮಾನಿಗಳಿಂದ ಭಕ್ತಿಯ ನಮನ

April 24, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group