Sunday, September 20, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire
    ಎಲ್ ಪಿಜಿ ಸಿಲಿಂಡರ್ ಸಾಂದರ್ಭಿಕ ಚಿತ್ರ

    ​ಎಲ್‌ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ಅಕ್ಟೋಬರ್ 1ರಿಂದ ಹೊಸ ನಿಯಮ ಜಾರಿ

    Power News | ಭಾರತ್ ಎಲೆಕ್ಟ್ರಿಕ್ ಮೊಬಿಲಿಟಿ ಸೂಚ್ಯಂಕ: ದೇಶದಲ್ಲೇ ಕರ್ನಾಟಕಕ್ಕೆ 3ನೇ ಸ್ಥಾನ

    ಗ್ರಾಮಠಾಣಾ ಆಸ್ತಿಗಳಿಗೆ ನ.1ರಿಂದ ಮನೆ ಬಾಗಿಲಿಗೇ ಇ-ಸ್ವತ್ತು ಖಾತೆ: ಈಶ್ವರ ಖಂಡ್ರೆ ಸೂಚನೆ

    ಮಂಗಳೂರಿನಲ್ಲಿ ಮೊದಲ ಸಚಿವ ಸಂಪುಟ ಸಭೆ: ₹32,611 ಕೋಟಿ ಯೋಜನೆಗಳಿಗೆ ಅನುಮೋದನೆ: ತುಳು ಎರಡನೇ ಹೆಚ್ಚುವರಿ ಆಡಳಿತ ಭಾಷೆಯಾಗಿ ಘೋಷಣೆ

    Breaking News | ನವೆಂಬರ್ ಅಂತ್ಯಕ್ಕೆ ತುಮಕೂರಿಗೆ ಎತ್ತಿನಹೊಳೆ ನೀರು: ಸಚಿವ ಚಲುವರಾಯಸ್ವಾಮಿ ಭರವಸೆ

    ಮೆಕ್ಕಾ ವಾಯುಪ್ರದೇಶದ ಬಳಿ ಹೌತಿ ಡ್ರೋನ್ ಹೊಡೆದುರುಳಿಸಿದ ಸೌದಿ ಅರೇಬಿಯಾ: ಪವಿತ್ರ ಕ್ಷೇತ್ರಗಳ ರಕ್ಷಣೆ ‘ರೆಡ್ ಲೈನ್’ ಎಂದ ರಿಯಾದ್

    ಯುಪಿಐ ಡಿಜಿಟಲ್ ವಹಿವಾಟಿನ ಸಾಂದರ್ಭಿಕ ಚಿತ್ರ

    UPI ವಹಿವಾಟಿಗೆ ಹೊಸ ನಿಯಮ: ಯಾರಿಗೆ ಶುಲ್ಕ? ಯಾರಿಗೆ ಉಚಿತ? ಇಲ್ಲಿದೆ ಸಂಪೂರ್ಣ ವಿವರ

    ಕೋಲ್ಕತ್ತಾದ ಲೆನಿನ್, ಕಾರ್ಲ್ ಮಾರ್ಕ್ಸ್ ರಸ್ತೆಗಳ ಹೆಸರು ಬದಲು? ಪಶ್ಚಿಮ ಬಂಗಾಳ ಸರ್ಕಾರದಿಂದ ಸಿದ್ಧತೆ

    Technology News | ಈಗ, ಕೂತಲ್ಲೇ ವಿಶ್ವ ಸುತ್ತಿ: Live ಕ್ಯಾಮ್ ಮ್ಯಾಪ್ ಮೂಲಕ ಜಗತ್ತನ್ನು ಕಣ್ತುಂಬಿಕೊಳ್ಳಿ!!

  • Bengaluru Focus

    ಕೇವಲ 30 ನಿಮಿಷದಲ್ಲಿ ಕಟ್ಟಡ ನಕ್ಷೆ ಮಂಜೂರಾತಿ: ‘ನಂಬಿಕೆ ನಕ್ಷೆ 2.0’ ಲೋಕಾರ್ಪಣೆ!

    Power News | ಭಾರತ್ ಎಲೆಕ್ಟ್ರಿಕ್ ಮೊಬಿಲಿಟಿ ಸೂಚ್ಯಂಕ: ದೇಶದಲ್ಲೇ ಕರ್ನಾಟಕಕ್ಕೆ 3ನೇ ಸ್ಥಾನ

    ​ಜೆ.ಪಿ. ನಗರದಿಂದ ಗೊಟ್ಟಿಗೆರೆವರೆಗೆ ಶೇ. 34 ರಷ್ಟು ಬೀದಿ ದೀಪ ಬಂದ್; ​ಕತ್ತಲಲ್ಲಿ ರಸ್ತೆಗಳು; ಸಚಿವ ಕೃಷ್ಣ ಬೈರೇಗೌಡ ದಿಢೀರ್ ರಾತ್ರಿ ರೌಂಡ್ಸ್

    GBA Head Office Image

    GBA News | ಬೆಂಗಳೂರು : ಜಿಬಿಎ ವ್ಯಾಪ್ತಿಯಲ್ಲಿ ಇ-ಖಾತಾ ಸೇವೆಗಳು ಮತ್ತಷ್ಟು ಸುಲಭ; ಸೆ. 21ರಿಂದ ‘ಇ-ಆಸ್ತಿ 2.0’ ನೂತನ ಇ-ಖಾತಾ ವ್ಯವಸ್ಥೆ ಜಾರಿ

    ಬೆಸ್ಕಾಂ ಕೇಂದ್ರ ಕಚೇರಿ (ಸಾಂದರ್ಭಿಕ ಚಿತ್ರ)

    Bescom News | ಬೆಸ್ಕಾಂ ಗ್ರಾಹಕರ ಗಮನಕ್ಕೆ: ಈ 20 ಪಟ್ಟಣಗಳಲ್ಲಿ 2 ದಿನ ಆನ್‌ಲೈನ್‌ ಸೇವೆಗಳು ಬಂದ್

    ಕನಕಪುರ ಹಾಸ್ಟೆಲ್‌ಗೆ ಡಿಕೆಶಿ ದಿಢೀರ್ ಭೇಟಿ: ವಿದ್ಯಾರ್ಥಿಗಳ ಜೊತೆ ಊಟ ಸವಿದ ಸಿಎಂ

    CREATOR: gd-jpeg v1.0 (using IJG JPEG v80), quality = 82?

    ಬೆಂಗಳೂರಿನ ಎಲ್ಲೆಡೆ ಗಣೇಶ ಚತುರ್ಥಿ ಸಂಭ್ರಮಾಚರಣೆ : 42 ಕೆರೆಯ ಕಲ್ಯಾಣಿಗಳು, 659 ಮೊಬೈಲ್ ಟ್ಯಾಂಕ್‌ಗಳ ಮೂರ್ತಿಗಳ ವಿಸರ್ಜನೆಗೆ ಅವಕಾಶ

    Bescom News | ​ಸಾರ್ವಜನಿಕ ಗಣೇಶೋತ್ಸವ: ಬೆಸ್ಕಾಂ ಕಟ್ಟುನಿಟ್ಟಿನ ಸುರಕ್ಷತಾ ಮಾರ್ಗಸೂಚಿ ಪ್ರಕಟ

    BIG BREAKING | ₹15 ಕೋಟಿ ಸುರಿದ ಬೆನ್ನಲ್ಲೇ ಬಿಡಿಎ ಕೇಂದ್ರ ಕಚೇರಿ ಪಾರಂಪರಿಕ ಕಟ್ಟಡ ಕೆಡವಲು ಸಂಚು: ನೌಕರರ ತೀವ್ರ ಆಕ್ರೋಶ

  • Public interest
  • BW Special
  • Life Style
  • Photo Gallery
  • Video
No Result
View All Result

Home Bengaluru Focus

Bangalore Heavy Rain Warning | ರಾಜಧಾನಿಯಲ್ಲಿ ಇಂದು ಮತ್ತು ನಾಳೆ ಸಾಧಾರಣದಿಂದ ಭಾರೀ ಮಳೆ ಸಾಧ್ಯತೆ…! ; ಗಾಳಿಮಳೆ ಸಂದರ್ಭ ಅನಗತ್ಯವಾಗಿ ಸಂಚರಿಸದಂತೆ ತಜ್ಞರ ಎಚ್ಚರಿಕೆ

ನಗರದಲ್ಲಿ ಗುರುವಾರ ರಾತ್ರಿ ಸರಾಸರಿ 26 ಮಿ.ಮೀ ಮಳೆಯಾಗಿದೆ | ನಗರದ ರಾಜಕಾಲುವೆಗಳಲ್ಲಿದೆ 127 ಮಳೆನೀರು ಮಟ್ಟ ಮಾಪನ ಸೆನ್ಸರ್ ಗಳು | ನಗರದಲ್ಲಿ 96 ಮಳೆಹಾನಿ ಸ್ಥಳಗಳಿವೆ ಎಚ್ಚರ

by Bengaluru Wire Desk
April 15, 2022
in Bengaluru Focus, News Wire
Reading Time: 1 min read
0
ಮಳೆಯ ಸಾಂದರ್ಭಿಕ ಚಿತ್ರ

ಮಳೆಯ ಸಾಂದರ್ಭಿಕ ಚಿತ್ರ

ಬೆಂಗಳೂರು, (www.bengaluruwire.com) : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಳೆದ ಎರಡು ದಿನಗಳಿಂದ ಭಾರೀ ಮಳೆಯಾಗಿದ್ದು, ಇಂದು ಮತ್ತು ನಾಳೆ ಕೂಡ ಸಾಧಾರಣದಿಂದ ಭಾರೀ ಮಳೆಯಾಗಲಿದೆ ಎಂದು ಹವಾಮಾನ ತಜ್ಞರು ಮುನ್ಸೂಚನೆ ನೀಡಿದ್ದಾರೆ.

ವಿಧರ್ಭದಿಂದ ರಾಜ್ಯದ ಒಳನಾಡು ಪ್ರದೇಶಗಳಲ್ಲಿ ಟರ್ಫ್ ಕಂಡು ಬಂದಿದೆ. ಇದರಿಂದ ಆ ಭಾಗಗಳಲ್ಲಿ ವಾಯುಭಾರತ ಕುಸಿತದಿಂದ ಅತ್ತ ಕಡೆ ಮೋಡದ ಚಲನೆಯಿರಲಿದೆ. ಅಲ್ಲದೆ ಅರಬ್ಬೀ ಸಮುದ್ರದಲ್ಲಿ ಮೇಲ್ಮೈ ಸುಳಿಗಾಳಿ ಎದ್ದಿರುವ ಕಾರಣ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡು ಪ್ರದೇಶಗಳಲ್ಲಿ ಶುಕ್ರವಾರ ಮತ್ತು ಶನಿವಾರ ಚದುರಿದ ಮತ್ತೆ ಕೆಲವೆಡೆ ವ್ಯಾಪಕ ಮಳೆಯಾಗಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ(KSNDMC)ದ ಮಾಜಿ ನಿರ್ದೇಶಕ ಹಾಗೂ ಹವಾಮಾನ ತಜ್ಞ ಶ್ರೀನಿವಾಸ ರೆಡ್ಡಿ ಬೆಂಗಳೂರು ವೈರ್ ಗೆ ತಿಳಿಸಿದ್ದಾರೆ.

ಸಾಮಾನ್ಯವಾಗಿ ಮುಂಗಾರು ಪೂರ್ವ ಮಳೆಯು ಭಾರೀ ಗಾಳಿ, ಗುಡುಗು- ಮಿಂಚು ಹಾಗೂ ಅಬ್ಬರಿಸಿ ಮಳೆಯಾಗುವ ಕಾರಣ ಆ ಸಂದರ್ಭದಲ್ಲಿ ರಸ್ತೆಯಲ್ಲಿ ಹಾಗೂ ಹೊರಗಡೆ ಸಂಚರಿಸದಿರುವುದೇ ಉತ್ತಮ ಎಂದು ಅವರು ನಗರದ ಜನತೆಗೆ ಎಚ್ಚರಿಕೆಯನ್ನು ನೀಡಿದ್ದಾರೆ.

ಬೆಂಗಳೂರಿನಲ್ಲಿ ಪ್ರತಿವರ್ಷವೂ ಮುಂಗಾರು ಪೂರ್ವ ಮಳೆಗೂ ಮುನ್ನವೇ ಮರದ ಹಳೆಯ ರೆಂಬೆಕೊಂಬೆ, ದುರ್ಬಲ ಮರಗಳನ್ನು ಕಡಿದು ಹಾಕುವುದು, ರಾಜಕಾಲುವೆ, ವಾರ್ಡ್ ನಲ್ಲಿನ ಮಳೆ ನೀರು ಮೋರಿಗಳಲ್ಲಿನ ಹೂಳುಗಳನ್ನು ತೆರವುಗೊಳಿಸುವ ಕಾಮಗಾರಿಯನ್ನು ಪೂರ್ಣಗೊಳಿಸಬೇಕು. ಅಲ್ಲದೆ ಪಾದಚಾರಿ ಮಾರ್ಗಗಳಲ್ಲಿ ಹಾಳಾದ ಸಿಮೆಂಟ್ ಸ್ಲಾಬ್ ಗಳನ್ನು ಬದಲಾಯಿಸಬೇಕು. ಆದರೆ ಈ ವಿಚಾರದಲ್ಲಿ ಬಿಬಿಎಂಪಿಯೂ ಪ್ರತಿಬಾರಿಯೂ ಎಡುವುತ್ತಲೇ ಇದೆ. ಹಾಗಾಗಿ ತಗ್ಗು ಪ್ರದೇಶಗಳಲ್ಲಿ ಮಳೆ ನೀರು ನುಗ್ಗುವ ಸಮಸ್ಯೆ ಮಾತ್ರ ಇತ್ಯರ್ಥವಾಗಿಲ್ಲ. ರಾಜಕಾಲುವೆ ಸಂಪರ್ಕಿಸುವ ಮೋರಿಗಳಿಗೆ ರಸ್ತೆಯಲ್ಲಿ ಹರಿಯುವ ನೀರು ಹೋಗದ ಕಾರಣ ಮೇಲ್ಬಾಗದಲ್ಲಿ ನೀರು ನಿಂತು ಅವಘಡಗಳು ಸಂಭವಿಸುತ್ತಿರುತ್ತೆ.

ನಗರದಲ್ಲಿ ಇನ್ನೆರಡು ದಿನ ಮುಂಗಾರು ಪೂರ್ವ ಮಳೆಯಾಗುವ ಹಿನ್ನಲೆಯಲ್ಲಿ ಬಿಬಿಎಂಪಿಯು ಕೈಗೊಳ್ಳಲಿರುವ ಕ್ರಮಗಳ ಕುರಿತಂತೆ ಪಾಲಿಕೆ ಮುಖ್ಯ ಆಯುಕ್ತ ಗೌರವ್ ಗುಪ್ತಾ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಪ್ರತಿಕ್ರಿಯೆಗೆ ಲಭ್ಯರಾಗಲಿಲ್ಲ.

ನಗರದ ರಾಜಕಾಲುವೆಗಳಲ್ಲಿದೆ 127 ಮಳೆನೀರು ಮಟ್ಟ ಮಾಪನ ಸೆನ್ಸರ್ ಗಳು :

ಸಾಂದರ್ಭಿಕ ಚಿತ್ರ

ಬಿಬಿಎಂಪಿ ವ್ಯಾಪ್ತಿಯಲ್ಲಿ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವು 105 ಮಳೆ ಮಾಪನ ಕೇಂದ್ರವನ್ನು ಅಳವಡಿಸಿದೆ. ಅಲ್ಲದೆ ನಗರ ವಿವಿಧ ಕಡೆಗಳಲ್ಲಿ 12 ಹವಾಮಾನ ಮಾಪನ ಕೇಂದ್ರಗಳನ್ನು ನಿರ್ಮಿಸಿದೆ. ಇದು ಸಾಲದು ಎಂಬಂತೆ ಈ ಹಿಂದೆ ನಗರದಲ್ಲಿ ಪ್ರಮುಖ 27 ಸ್ಥಳಗಳ ರಾಜಕಾಲುವೆಯಲ್ಲಿ ಮಳೆನೀರು ಮಟ್ಟದ ಮಾಪನ ಮಾಡುವ ಸೆನ್ಸರ್ ಗಳನ್ನು ಹಾಕಿ ಅವುಗಳನ್ನು ಕೆಎಸ್ಎನ್ಎಂಡಿಸಿ ಕೇಂದ್ರಕ್ಕೆ ಸಂಪರ್ಕ ಕಲ್ಪಿಸಲಾಗಿತ್ತು. ಕಳೆದ  ಮೂರು ತಿಂಗಳ ಹಿಂದೆ ಮತ್ತೆ 100 ಕಡೆಗಳಲ್ಲಿ ಈ ರೀತಿಯ ಸೆನ್ಸರ್ ಅಳವಡಿಸಲಾಗಿದೆ. 804 ಕಿ.ಮೀ ಉದ್ದದ ಈ ರಾಜಕಾಲುವೆಗಳಲ್ಲಿ ಮಳೆ ನೀರಿನ ಮಟ್ಟ ಅಪಾಯಕಾರಿ ಮಟ್ಟದ ದಾಟಿದಲ್ಲಿ ಈ ಸೆನ್ಸಾರ್ ಗಳು ಕೆಎಸ್ಎನ್ಎಂಡಿಸಿ ಕೇಂದ್ರಕ್ಕೆ ಎಚ್ಚರಿಕೆಯ ಸಂದೇಶ ರವಾನಿಸಲಿದೆ. ವಾಸ್ತವ ಸಮಯದ ಆಧಾರದಲ್ಲಿ (Real Time Basis) ಸೌರವಿದ್ಯುತ್ ಆಧಾರಿತ ಈ ಸೆನ್ಸರ್ ಗಳು ಸಂದೇಶವನ್ನು ಕಳುಹಿಸಲಿದೆ. ಇವುಗಳನ್ನು ಆಧರಿಸಿ ಬಿಬಿಎಂಪಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದೆ.

ಗುರುವಾರ ರಾತ್ರಿ ಸರಾಸರಿ ಎಷ್ಟೆಷ್ಟು ಮಳೆಯಾಗಿದೆ ?

ಬುಧವಾರ ನಗರದಲ್ಲಿ ಸರಾಸರಿ 15 ಮಿಲಿ ಮೀಟರ್ ಮಳೆಯಾಗಿದ್ದರೆ, ನಿನ್ನೆ ರಾತ್ರಿಯಿಡೀ ನಗರದ ಹಲವೆಡೆ ಸರಾಸರಿಯಾಗಿ 25 ರಿಂದ 26 ಮಿಲಿ ಮೀಟರ್ ಮಳೆಯಾಗಿದೆ. ಆ ಪೈಕಿ ನಗರದ 14 ಕಡೆಗಳಲ್ಲಿ 40 ಮಿ.ಮೀಗಿಂತ ಹೆಚ್ಚು ಮಳೆಯಾಗಿದೆ. ಬಿಬಿಎಂಪಿ ವ್ಯಾಪ್ತಿಯ ನೈರುತ್ಯ ಭಾಗದಲ್ಲಿ ನಿನ್ನೆ ಹೆಚ್ಚು ಮಳೆಯಾಗಿದೆ. ವಿದ್ಯಾಪೀಠದಲ್ಲಿ ಅತಿಹೆಚ್ಚು ಅಂದರೆ 89.5 ಮಿ.ಮೀ, ಸಂಪಂಗಿರಾಮನಗರ 53.5 ಮಿ.ಮೀ, ಸಾರಕ್ಕಿ 62 ಮಿ.ಮೀ, ಬೊಮ್ಮನಹಳ್ಳಿಯ ಹಗದೂರಿನಲ್ಲಿ 45.5 ಮಿ.ಮೀ, ಬಿಳೆಕಳ್ಳಿ 45 ಮಿ.ಮೀ, ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ 45 ಮಿ.ಮೀ, ರಾಜರಾಜೇಶ್ವರ ನಗರದ ಪ್ರದೇಶದಲ್ಲಿ 43 ಮಿ.ಮೀ ಸೇರಿದಂತೆ ನಗರದ ಹಲವು ಕಡೆಗಳಲ್ಲಿ 30 ಮಿ.ಮೀಗಿಂತ ಹೆಚ್ಚು ಮಳೆಯಾಗಿದೆ.

ಕಾಮಾಕ್ಯ ಚಿತ್ರಮಂದಿರದ ಬಳಿ 62ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿ ಅಪಾರ ನಷ್ಟ :

ಆದ್ದರಿಂದ ತಗ್ಗು ಪ್ರದೇಶದ ಹಲವು ಮನೆಗಳಿಗೆ ನೀರು ನುಗ್ಗಿ ಅಪಾರ ನಷ್ಟವಾಗಿದೆ. ಕಾಮಾಕ್ಯ ಚಿತ್ರಮಂದಿರದ ಸುತ್ತಮುತ್ತ 62ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿ ಮನೆಯಲ್ಲಿಟ್ಟಿದ್ದ ದವಸ ಧಾನ್ಯಗಳು ಸೇರಿದಂತೆ ದಿನಬಳಕೆಯ ವಸ್ತುಗಳು ಹಾಳಾಗಿದೆ. ರಾತ್ರಿ ಸುರಿದ ಮಳೆಗೆ ಕಾಮಾಕ್ಯ ಬಳಿಯ ಬಿಎಂಟಿಸಿ ಬಸ್ ನಿಲ್ದಾಣದ ಗೋಡೆ ಕುಸಿದು ದ್ವಿತೀಯ ಹಂತದ ಮಳೆನೀರು ಕಾಲುವೆ ಮೇಲೆ ಬಿದ್ದು ನೀರು ಹರಿಯುವಿಕೆಗೆ ತೊಂದೆರೆಯಾಗಿ, ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ.

“ಬಿಬಿಎಂಪಿ ಬೃಹತ್ ನೀರುಗಾಲುವೆ ಅಧಿಕಾರಿಗಳು ವಿಷಯ ತಿಳಿದು ಇಂದು ಬೆಳಗ್ಗೆಯಿಂದಲೇ ಮಳೆ ನೀರುಗಾಲುವೆಗೆ ಅಡ್ಡಲಾಗಿದ್ದ ಕುಸಿದ ಗೋಡೆ ಹಾಗೂ ಬಿಡಿಎ ಅಳವಡಿಸಿದ್ದ ನೀರಿನ ಪೈಪ್ ಮತ್ತಿತರ ವಸ್ತುಗಳನ್ನು ತೆರವುಗೊಳಿಸಿ, ನೀರು ಹರಿಯುವಿಕೆಗೆ ಅನುವು ಮಾಡಿಕೊಡಲಾಗಿದೆ. ಈ ಹಿಂದೆ ನಗರದಲ್ಲಿ ಸುರಿದ ಮಹಾಮಳೆಯಾದಗಲೂ ಈ ಭಾಗದಲ್ಲಿ ತೊಂದರೆಯಾಗಿರಲಿಲ್ಲ. ಬಿಎಂಟಿಸಿ ಗೋಡೆ ಕುಸಿದಿದ್ದೆ ನಿನ್ನೆ ಹಲವು ಮನೆಗಳಿಗೆ ನೀರು ನುಗ್ಗಲು ಕಾರಣ” ಎಂದು ಬಿಬಿಎಂಪಿಯ ಬೃಹತ್ ನೀರುಗಾಲುವೆ ಪ್ರಧಾನ ಎಂಜಿನಿಯರ್ ಸುಗುಣ ಬೆಂಗಳೂರು ವೈರ್ ಗೆ ತಿಳಿಸಿದ್ದಾರೆ.

ನಗರದಲ್ಲಿ 96 ಮಳೆಹಾನಿ ಸ್ಥಳಗಳಿವೆ ಎಚ್ಚರ :

ಸಾಂದರ್ಭಿಕ ಚಿತ್ರ

ಬಿಬಿಎಂಪಿ ವ್ಯಾಪ್ತಿಯಲ್ಲಿ ಈ ಹಿಂದೆ ಮಳೆಹಾನಿ ಸಂಭವಿಸಬಹುದಾದ 209 ಪ್ರದೇಶಗಳಿದ್ದವು. ಅಂತಹ ಸ್ಥಳಗಳಲ್ಲಿ ಹಂತ ಹಂತವಾಗಿ ಮಳೆಹಾನಿ ತಪ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಂಡು ಈ ಸಂಖ್ಯೆಯನ್ನು 96ಕ್ಕೆ ಇಳಿಸಲಾಗಿದೆ. ಸದ್ಯ ನಗರದಲ್ಲಿ 28 ಸ್ಥಳಗಳಲ್ಲಿ ಮಳೆಹಾನಿ ಸಂಭವಿಸುವ ಅಪಾಯಕಾರಿ ಸ್ಥಳಗಳಿದ್ದರೆ, ಮಳೆಯಾದರೆ ಸಾಮಾನ್ಯವಾಗಿ ಮಳೆಯಿಂದ ತೊಂದರೆಗೊಳಗಾಗಬಹುದಾದ 68 ಸ್ಥಗಳಿವೆ ಎಂದು ಬಿಬಿಎಂಪಿ ಅಧಿಕಾರಿ ಸುಗುಣ ಹೇಳಿದ್ದಾರೆ.

ಗುರುವಾರ ಸುರಿದ ಮಳೆಯಿಂದ ಓಕಳಿಪುರ ಕೆಳ ಸೇತುವೆ, ಶಿವಾನಂದ ವೃತ್ತ, ಮೆಜಿಸ್ಟಿಕ್ ಕೆಳಸೇತುವೆ, ಮಲ್ಲೇಶ್ವರ ಸಂಪಿಗೆ ರಸ್ತೆ, ಪೀಣ್ಯ, ಯಶವಂತಪುರ, ಜಾಲಹಳ್ಳಿ, ಹೆಬ್ಬಾಳ, ಆರ್.ಟಿ.ನಗರ, ಮಲ್ಲೇಶ್ವರ, ಶೇಷಾದ್ರಿಪುರ, ಶಿವಾಜಿನಗರ, ಎಂ.ಜಿ.ರಸ್ತೆ, ಅಶೋಕ್ ನಗರ, ಚಿಕ್ಕಪೇಟೆ, ಕಲಾಸಿಪಾಳ್ಯ, ಸಿಟಿ ಮಾರ್ಕೆಟ್ ಹಾಗೂ ಸುತ್ತಮುತ್ತ ಸ್ಥಳಗಳಲ್ಲಿ ಉತ್ತಮ ಮಳೆಯಾದ ಕಾರಣ ಹಲವು ಕಡೆಗಳಲ್ಲಿ ರಸ್ತೆಗಳಲ್ಲಿ ನೀರು ನಂತು ವಾಹನ ಸವಾರರು ರಸ್ತೆಗುಂಡಿ ತಿಳಿಯದೇ ಸರ್ಕಸ್ ಮಾಡಿಕೊಂಡು ವಾಹನ ಚಲಾಯಿಸುತ್ತಿದ್ದರು.

Sharing is Caring

  • Share on WhatsApp (Opens in new window) WhatsApp
  • Print (Opens in new window) Print
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Share on LinkedIn (Opens in new window) LinkedIn

Like this:

Like Loading…
WhatsApp Join our WhatsApp Channel
Previous Post

#Viral Video | ಶ್ರೀ ಸೀತಾರಾಮ ಕಲ್ಯಾಣ ಕಾರ್ಯಕ್ರಮದಲ್ಲಿ ಹನುಮ ದೇವರ ದರ್ಶನ!? ವಿಡಿಯೋ ವೈರಲ್

Next Post

Metro TBM- Lavi | ಎಂಜಿ ರಸ್ತೆ ಮೆಟ್ರೋ ಸುರಂಗ ಮಾರ್ಗದಿಂದ ಹೊರಬಂದ ಟಿಬಿಎಮ್ – ಲವಿ

Next Post

Metro TBM- Lavi | ಎಂಜಿ ರಸ್ತೆ ಮೆಟ್ರೋ ಸುರಂಗ ಮಾರ್ಗದಿಂದ ಹೊರಬಂದ ಟಿಬಿಎಮ್ - ಲವಿ

BBMP Office Fire Accident | ಬಿಬಿಎಂಪಿ ಚೀಫ್ ಎಂಜಿನಿಯರ್ ಕಚೇರಿಯಲ್ಲಿ ಅಗ್ನಿ ಆಕಸ್ಮಿಕ ; ಕಚೇರಿ ಕಡತಗಳು, ಪೀಠೋಪಕರಣ ಭಸ್ಮ

Please login to join discussion

Like Us on Facebook

Follow Us on Twitter

Recent News

BW SPECIAL | ಕಸ್ತೂರಿರಂಗನ್ ವರದಿ: ಪಶ್ಚಿಮ ಘಟ್ಟ ಸಂರಕ್ಷಣೆಗೆ ‘ಕರ್ನಾಟಕ ಪರ್ಯಾಯ ಮಾದರಿ’ ಮಂಡಿಸಿದ ಡಾ. ಪ್ರಕಾಶ್ ಕಮ್ಮರಡಿ

September 20, 2026

ಕೇವಲ 30 ನಿಮಿಷದಲ್ಲಿ ಕಟ್ಟಡ ನಕ್ಷೆ ಮಂಜೂರಾತಿ: ‘ನಂಬಿಕೆ ನಕ್ಷೆ 2.0’ ಲೋಕಾರ್ಪಣೆ!

September 20, 2026
Bengaluru Wire, Kannada News, latest News in Kannada

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

BW SPECIAL | ಕಸ್ತೂರಿರಂಗನ್ ವರದಿ: ಪಶ್ಚಿಮ ಘಟ್ಟ ಸಂರಕ್ಷಣೆಗೆ ‘ಕರ್ನಾಟಕ ಪರ್ಯಾಯ ಮಾದರಿ’ ಮಂಡಿಸಿದ ಡಾ. ಪ್ರಕಾಶ್ ಕಮ್ಮರಡಿ

September 20, 2026

ಕೇವಲ 30 ನಿಮಿಷದಲ್ಲಿ ಕಟ್ಟಡ ನಕ್ಷೆ ಮಂಜೂರಾತಿ: ‘ನಂಬಿಕೆ ನಕ್ಷೆ 2.0’ ಲೋಕಾರ್ಪಣೆ!

September 20, 2026
ಎಲ್ ಪಿಜಿ ಸಿಲಿಂಡರ್ ಸಾಂದರ್ಭಿಕ ಚಿತ್ರ

​ಎಲ್‌ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ಅಕ್ಟೋಬರ್ 1ರಿಂದ ಹೊಸ ನಿಯಮ ಜಾರಿ

September 20, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group
%d