Thursday, June 18, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ಕರ್ನಾಟಕದಲ್ಲಿ ತೀವ್ರ ಜಲಕ್ಷಾಮ: ಶೇ. 21ರಷ್ಟು ಮಳೆ ಕೊರತೆ, 14 ಪ್ರಮುಖ ಜಲಾಶಯಗಳಲ್ಲಿ ಕೇವಲ 23% ನೀರು ಸಂಗ್ರಹ

    ​ರೈಲ್ವೆ ಪದೋನ್ನತಿ ಪರೀಕ್ಷೆಯಲ್ಲಿ ಕನ್ನಡಿಗರಿಗೆ ವಂಚನೆ: ಜೂನ್ 25ರಂದು ತೀವ್ರ ಹೋರಾಟದ ಎಚ್ಚರಿಕೆ ನೀಡಿದ ಕರವೇ

    Kartavya App | ರಾಜ್ಯ ಸರ್ಕಾರದಿಂದ ಎಐ ಕ್ರಾಂತಿ: ನೌಕರರ ಪಕ್ಕಾ ಹಾಜರಾತಿಗೆ ಬಂತು ‘ಕರ್ತವ್ಯ’ ಆ್ಯಪ್: ಕೆಲಸಕ್ಕೆ ಚಕ್ಕರ್ ಹಾಕಲು ಬ್ರೇಕ್

    ಶಬರಿಮಲೆ ಯಾತ್ರೆ ಕೈಗೊಂಡ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ: ಇಂದು ಪಡಿಪೂಜೆ, ಪುಷ್ಪಾಭಿಷೇಕ

    Breaking News | ಅಮೆರಿಕ-ಇರಾನ್ ಐತಿಹಾಸಿಕ ಶಾಂತಿ ಒಪ್ಪಂದ: ಜೂ. 19ರಂದು ಜಿನೇವಾದಲ್ಲಿ ಅಧಿಕೃತ ಸಹಿ

    ಬಿಡದಿ ಟೌನ್‌ಶಿಪ್: ಸಿಎಂ ಡಿಕೆಶಿ ವಿರುದ್ಧ ಹೆಚ್.ಡಿ. ಕುಮಾರಸ್ವಾಮಿ ಆಕ್ರೋಶ, ರಿಯಲ್ ಎಸ್ಟೇಟ್ ಮಾಫಿಯಾ ಆರೋಪ

    ಕರ್ನಾಟಕ ಪೊಲೀಸ್ ಇಲಾಖೆ ಮೇಲ್ದರ್ಜೆಗೆ ಸಿಎಂ ಡಿ.ಕೆ. ಶಿವಕುಮಾರ್ ಮೆಗಾ ಪ್ಲಾನ್: ಕೇಂದ್ರ ಗೃಹ ಸಚಿವರಿಗೆ ಮನವಿ

    ವೈದ್ಯಕೀಯ ಲೋಕದ ಅದ್ವಿತೀಯ ಸಾಧನೆ: ವಯಸ್ಸಾಗುವಿಕೆಯನ್ನು ತಡೆಯುವ ಔಷಧದ ಮೊದಲ ಮಾನವ ಪ್ರಯೋಗ ಯಶಸ್ವಿ

    ಬೆಂಗಳೂರಿನ ಗೊರಗುಂಟೆಪಾಳ್ಯದಲ್ಲಿ ಭೀಕರ ಅಪಘಾತ: ಬ್ರೇಕ್ ಫೇಲಾದ ಗ್ಯಾಸ್ ಲಾರಿ ಡಿಕ್ಕಿ, ಬೈಕ್ ಸವಾರ ದಂಪತಿ ಸ್ಥಳದಲ್ಲೇ ಸಾವು

  • Bengaluru Focus

    ಕೆ.ಆರ್. ಮಾರುಕಟ್ಟೆಯಲ್ಲಿ ವಿಶೇಷ ವಿನ್ಯಾಸದ ಮಾರಾಟ ಸ್ಥಳ ನಿಗದಿ; ಮಧ್ಯವರ್ತಿಗಳಿಗೆ ಬಾಡಿಗೆ ನೀಡದಿರಿ, ಆಯುಕ್ತ ಜಗದೀಶ್ ಖಡಕ್ ಎಚ್ಚರಿಕೆ

    ​ರೈಲ್ವೆ ಪದೋನ್ನತಿ ಪರೀಕ್ಷೆಯಲ್ಲಿ ಕನ್ನಡಿಗರಿಗೆ ವಂಚನೆ: ಜೂನ್ 25ರಂದು ತೀವ್ರ ಹೋರಾಟದ ಎಚ್ಚರಿಕೆ ನೀಡಿದ ಕರವೇ

    ಖ್ಯಾತ ಗಾಯಕಿ ಸೂರ್ಯಗಾಯತ್ರಿ ಸಂಗೀತ ಕಾರ್ಯಾಗಾರ ಯಶಸ್ವಿ: 45 ಕಲಾಭಿಮಾನಿಗಳಿಗೆ ಒಲಿದ ಅಪೂರ್ವ ಗಾಯನಾನುಭವ

    #OpenStreetsBengaluru | ಬೆಂಗಳೂರು ವಾಹನಗಳಿಗಷ್ಟೇ ಅಲ್ಲ, ಜನರಿಗಾಗಿಯೂ ಇದೆ: ‘ಓಪನ್ ಸ್ಟ್ರೀಟ್ಸ್’ ಅಭಿಯಾನಕ್ಕೆ ಸಂಸದ ತೇಜಸ್ವಿ ಸೂರ್ಯ ಕರೆ

    ಬಿಡದಿ ಟೌನ್‌ಶಿಪ್: ಸಿಎಂ ಡಿಕೆಶಿ ವಿರುದ್ಧ ಹೆಚ್.ಡಿ. ಕುಮಾರಸ್ವಾಮಿ ಆಕ್ರೋಶ, ರಿಯಲ್ ಎಸ್ಟೇಟ್ ಮಾಫಿಯಾ ಆರೋಪ

    ಬೆಂಗಳೂರಿನಲ್ಲಿ “ರೈಸ್ ಕಾನ್ ಕ್ಲೇವ್- 2026” ಉದ್ಘಾಟನೆ: ‘ವಿಕಸಿತ ಭಾರತ 2047’ಕ್ಕೆ ವಿಜ್ಞಾನ ಮತ್ತು ನಾವೀನ್ಯತೆಯೇ ಆಧಾರ – ಡಾ. ಜಿತೇಂದ್ರ ಸಿಂಗ್

    ಬನ್ನೇರುಘಟ್ಟ ಜೈವಿಕ ಉದ್ಯಾನವನ: ದಕ್ಷಿಣ ಆಫ್ರಿಕಾದ ಚೀತಾಗಳ ದರ್ಶನ, ಜೊತೆಗೆ ಮುದ್ದಾದ ಜೆಬ್ರಾ, ನೀರುಕುದುರೆ ಮರಿಗಳ ಕಲರವ!

    GBA News | ಬೆಂಗಳೂರು ಪಶ್ಚಿಮ ಮತ್ತು ದಕ್ಷಿಣ ಪಾಲಿಕೆ: ಪಾದಚಾರಿ ಮಾರ್ಗ, ತ್ಯಾಜ್ಯ ನಿರ್ವಹಣೆ ಹಾಗೂ ಮೂಲಸೌಕರ್ಯಕ್ಕೆ ಒತ್ತು

    ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ 28ನೇ ಘಟಿಕೋತ್ಸವ: 72 ಸಾವಿರ ಪದವಿ, 103 ಚಿನ್ನದ ಪದಕ ಪ್ರದಾನ

  • Public interest
  • BW Special
  • Life Style
  • Photo Gallery
  • Video
No Result
View All Result

Home BW Special

BW SPECIAL | ಪುಣ್ಯಕೋಟಿ ದತ್ತು ಯೋಜನೆಗೆ ರಾಜ್ಯದಲ್ಲಿ ನೀರಸ ಪ್ರತಿಕ್ರಿಯೆ : ಅನಧಿಕೃತ ಜಾನುವಾರು ಸಾಗಣೆ ನಿಯಂತ್ರಣಕ್ಕೆ ಮತ್ತಷ್ಟು ಬಿಗಿಕ್ರಮ!!

2022 ಜುಲೈ ನಿಂದ ಜಾರಿಗೆ ಬಂದ ಪುಣ್ಯಕೋಟಿ ದತ್ತು ಯೋಜನೆ | ರಾಜ್ಯದಲ್ಲಿ ಅನಧಿಕೃತವಾಗಿ ಗೋವುಗಳ ಸಾಗಾಣಿಕೆ ತಡೆಗಟ್ಟಲು ಹಾಗೂ ಪಶು ಸಂಗೋಪನೆ ಮತ್ತು ಕೃಷಿ ಚಟುವಟಿಕೆಗಳಿಗೆ ಮಾತ್ರ ರೈತರು ಸಾಗಾಣಿಕೆ ಮಾಡಲು ಪಶುಸಂಗೋಪನಾ ಇಲಾಖೆಯಿಂದ ಸದ್ಯದಲ್ಲೇ ಅಧಿಕೃತ ವೆಬ್ ಸೈಟಿಗೆ ಚಾಲನೆ

by Bengaluru Wire Desk
February 4, 2023
in BW Special, Public interest
Reading Time: 2 mins read
0
ಉಡುಪಿ ಶ್ರೀಕೃಷ್ಣ ಮಠದ ಗೋಶಾಲೆಯ ಸಾಂದರ್ಭಿಕ ಚಿತ್ರ (ಕೃಪೆ : ವಿಕಿಪೀಡಿಯಾ)

ಉಡುಪಿ ಶ್ರೀಕೃಷ್ಣ ಮಠದ ಗೋಶಾಲೆಯ ಸಾಂದರ್ಭಿಕ ಚಿತ್ರ (ಕೃಪೆ : ವಿಕಿಪೀಡಿಯಾ)

ಬೆಂಗಳೂರು, ಜ.31 www.bengaluruwire.com : ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆಯಾದ ಬಳಿಕ ಕಳೆದ ವರ್ಷ ಜುಲೈನಲ್ಲಿ ಅನುಷ್ಠಾನಕ್ಕೆ ಬಂದ “ಕರ್ನಾಟಕ ಪುಣ್ಯಕೋಟಿ ದತ್ತು ಯೋಜನೆ”( Karnataka Cow Adoption Scheme)ಯಡಿ 23,229 ಜಾನುವಾರುಗಳು ನೊಂದಣೆಯಾಗಿದೆ.  ಆದರೆ ಈವರೆಗೆ ರಾಜ್ಯದಲ್ಲಿ ಕೇವಲ 175 ಮಂದಿ ಸಾರ್ವಜನಿಕರು ಗೋವುಗಳನ್ನು ದತ್ತು ತೆಗೆದುಕೊಂಡಿದ್ದಾರೆ. ಈ ಮೂಲಕ ಪುಣ್ಯಕೋಟಿ ಯೋಜನೆಯಡಿ ಜಾನುವರುಗಳನ್ನು ದತ್ತು ತೆಗೆದುಕೊಳ್ಳುವ ಬಗ್ಗೆ ನಾಗರೀಕರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

ರಾಜ್ಯದಲ್ಲಿ ಹೀಗೆ 174 ಜಾನುವಾರುಗಳನ್ನು ಸಾರ್ವಜನಿಕರು ದತ್ತು ಸ್ವೀಕರಿಸಿದ್ದರಿಂದ 18,12,250 ರೂ. ಹಣವನ್ನು ಪಶು ಸಂಗೋಪನಾ ಇಲಾಖೆ(Animal Husbandry Department) ಸಂಗ್ರಹಿಸಿದೆ.  2,075 ಜಾನುವಾರುಗಳಿಗೆ 4,22,532 ರೂ. ದೇಣಿಗೆ (Donation)ಯನ್ನು ನೀಡಿರುತ್ತಾರೆ ಹಾಗು 426 ಜಾನುವಾರುಗಳಿಗೆ ಆಹಾರಕ್ಕಾಗಿ ದೇಣಿಗೆ ನೀಡಿದ್ದಾರೆ. 

ಪುಣ್ಯಕೋಟಿ ವೆಬ್ ಪೋರ್ಟಲ್ ನಲ್ಲಿ ನೋಂದಣಿಯಾಗಿರುವ ಗೋಶಾಲೆಯೊಂದರ ಸಾಂದರ್ಭಿಕ ಚಿತ್ರ

ಗೋಹತ್ಯೆ(cow slaughter) ನಿಷೇಧದ ಬಳಿಕ ರಾಜ್ಯದಲ್ಲಿ ಹಲವು ಗೋಶಾಲೆಗಳ ಮೂಲಕ ಗೋವುಗಳ ರಕ್ಷಣೆ ಮಾಡಲಾಗುತ್ತಿದೆ.  ಆದರೆ ಗೋವುಗಳ ರಕ್ಷಣೆ ಮತ್ತು ನಿರ್ವಹಣೆ ಕಷ್ಟವಾಗಿರುವ ಹಿನ್ನೆಲೆಯಲ್ಲಿ ಖಾಸಗಿ ಸಂಸ್ಥೆಗಳು ಮತ್ತು ಸಾರ್ವಜನಿಕರ ಸಹಕಾರ ಪಡೆಯಲು ಪಶು ಸಂಗೋಪನಾ ಇಲಾಖೆ(Animal Husbandry Department) “ಪುಣ್ಯಕೋಟಿ ದತ್ತು ಯೋಜನೆ”ಯನ್ನು ಜಾರಿಗೆ ತಂದಿತ್ತು. ಈ ಯೋಜನೆಯ ಮೂಲಕ ಸರ್ಕಾರಿ ಮತ್ತು ಖಾಸಗಿ ಗೋಶಾಲೆಗಳಲ್ಲಿರುವ ಗೋವುಗಳನ್ನು ಸಾರ್ವಜನಿಕರು ನೇರವಾಗಿ ದತ್ತು ಪಡೆಯಬಹುದು.

ಸರ್ಕಾರ ಆರಂಭ ಮಾಡಿರುವ https://punyakoti.karahvs.in/  ವೆಬ್ ಸೈಟ್(Website) ಮೂಲಕ ನೊಂದಣಿ (Register) ಮಾಡಿಸಿಕೊಂಡು, ಗೋವುಗಳನ್ನು ದತ್ತು ಪಡೆಯಲು, ದೇಣಿಗೆ ನೀಡಲು ಹಾಗೂ ರಾಸುಗಳಿಗೆ ಆಹಾರ ವಿತರಣೆಗೆ ಹಣ ನೀಡಲು ಅವಕಾಶ ಕಲ್ಪಿಸಿತ್ತು. ಆದರೆ ಸಾರ್ವಜನಿಕರು ಗೋವುಗಳನ್ನು ದತ್ತು ಪಡೆಯಲು, ದೇಣಿಗೆ ನೀಡಲು ಆಸಕ್ತಿ ತೋರದಿರುವುದು ಈ ಅಂಕಿ-ಅಂಶಗಳಿಂದ ತಿಳಿದು ಬಂದಿದೆ.

ಪುಣ್ಯಕೋಟಿ ವೆಬ್ ಪೋರ್ಟಲ್ ನಲ್ಲಿ 215 ಗೋಶಾಲೆ ನೋಂದಣಿ :

ರಾಜ್ಯದಲ್ಲಿ ಒಟ್ಟಾರೆ 300 ಗೋಶಾಲೆಗಳಿದ್ದು, ಅವುಗಳ ಪೈಕಿ 270 ಖಾಸಗಿ ಗೋಶಾಲೆಗಳು ಹಾಗೂ 30 ಸರ್ಕಾರಿ ಗೋಶಾಲೆಗಳಿವೆ (ಅವುಗಳ ಪೈಕಿ 9 ಗೋಶಾಲೆಗಳ ನಿರ್ಮಾಣ ಕಾರ್ಯ ವಿವಿಧ ಹಂತದಲ್ಲಿದೆ). ಈ ಖಾಸಗಿ ಮತ್ತು ಸರ್ಕಾರಿ ಗೋಶಾಲೆಗಳಲ್ಲಿ ಒಟ್ಟಾರೆ 44,000 ಜಾನುವಾರುಗಳಿವೆ. ಪ್ರಸ್ತುತ ಪುಣ್ಯಕೋಟಿ Web Portal ನಲ್ಲಿ 215 ಗೋಶಾಲೆಗಳು ನೊಂದಣೆಯಾಗಿದ್ದು, ಅವುಗಳಲ್ಲಿ 183 ಗೋಶಾಲೆಗಳು ಸಕ್ರಿಯವಾಗಿದ್ದು, 23,229 ಜಾನುವಾರುಗಳು ನೊಂದಣೆಯಾಗಿರುತ್ತವೆ ಎಂದು ಪಶುಸಂಗೋಪನಾ ಇಲಾಖೆ ಅಧಿಕಾರಿಗಳು ಬೆಂಗಳೂರು ವೈರ್ ಗೆ ಖಚಿತಪಡಿಸಿದ್ದಾರೆ.

ರಾಜ್ಯ ಸರ್ಕಾರದ ಪುಣ್ಯಕೋಟಿ ದತ್ತು ಯೋಜನೆ ವೆಬ್ ಪೋರ್ಟಲ್ ಚಿತ್ರ

ಗೋಹತ್ಯೆ ನಿಷೇಧ ಕಾಯ್ದೆಯ ಬಳಿಕ 1,329 ಎಫ್ ಐಆರ್ :

ಕರ್ನಾಟಕ ಗೋ ಹತ್ಯೆ ನಿಯಂತ್ರಣ ಮತ್ತು ಜಾನುವಾರು ಸಂರಕ್ಷಣೆ (ಗೋ ಹತ್ಯೆ ನಿಷೇಧ) ಕಾಯ್ದೆಯು 2021ರ ಮೇ ತಿಂಗಳಿನಿಂದ ಜಾರಿಗೆ ಬಂದಿದ್ದು, ಗೋಹತ್ಯೆ ನಿಷೇದ ಕಾಯ್ದೆ ಜಾರಿಗೆ ಬಂದಾಗಿನಿಂದ ಕಾಯ್ದೆ ಉಲ್ಲಂಘಿಸಿದವರ ವಿರುದ್ಧ 30 ಜಿಲ್ಲೆಗಳಿಂದ 1,329 ಎಫ್ ಐಆರ್ (FIR) ದಾಖಲಾಗಿದ್ದು 8,465 ಜಾನುವಾರುಗಳನ್ನು ರಕ್ಷಿಸಲಾಗಿದೆ. ಗೋಹತ್ಯೆ ಕಾಯ್ದೆ ಜಾರಿಗೆ ತಂದ ನಂತರ ರಾಜ್ಯದಲ್ಲಿ ಅನಧಿಕೃತವಾಗಿ ಗೋವುಗಳ ಸಾಗಾಣಿಕೆ ತಡೆಗಟ್ಟಲು ಹಾಗೂ ಪಶು ಸಂಗೋಪನೆ ಮತ್ತು ಕೃಷಿ ಚಟುವಟಿಕೆಗಳಿಗೆ ಮಾತ್ರ ರೈತರು ಜಾನುವಾರು ಸಾಗಾಣಿಕೆ ಮಾಡಲು ಇಲಾಖೆಯು ಆನ್ ಲೈನ್  ತಂತ್ರಾಂಶವನ್ನು (https://animaltrans.karahvs.in)  ಅಭಿವೃದ್ಧಿ ಪಡಿಸಿದ್ದು, ಶೀಘ್ರದಲ್ಲಿಯೇ ಲೋಕಾರ್ಪಣೆಗೊಳಿಸಲು ಪಶುಸಂಗೋಪನಾ ಇಲಾಖೆಯು ನಿರ್ಧರಿಸಿದೆ.

ಸರ್ಕಾರಿ ಗೋಶಾಲೆಗಳ ನಿರ್ಮಾಣ, ಅನುದಾನದ ವಿವರ :

2021-22 ನೇ ಸಾಲಿನಲ್ಲಿ ರಾಜ್ಯದಲ್ಲಿ 30 ಸರ್ಕಾರಿ ಗೋಶಾಲೆಗಳನ್ನು ಸ್ಥಾಪಿಸಲು ರೂ.15 ಕೋಟಿಯನ್ನು ನೀಡಲಾಗಿದೆ. 2022-23 ನೇ ಸಾಲಿನಲ್ಲಿ ರಾಜ್ಯದಲ್ಲಿ ಹೆಚ್ಚುವರಿಯಾಗಿ 70 ಸರ್ಕಾರಿ ಗೋಶಾಲೆಗಳನ್ನು ಸ್ಥಾಪಿಸಲು ಹಾಗೂ 2021-22 ನೇ ಸಾಲಿನ 30 ಸರ್ಕಾರಿ ಗೋಶಾಲೆಗಳ ಮುಂದುವರಿದ ಕಾಮಗಾರಿಗಾಗಿ   50 ಕೋಟಿ ರೂ. ಹಣವನ್ನು ಪಶುಸಂಗೋಪನಾ ಇಲಾಖೆಯು ಒದಗಿಸಿದೆ. 2021-22 ನೇ ಸಾಲಿನ 20 ಸರ್ಕಾರಿ ಗೋಶಾಲೆಗಳು ಕಾರ್ಯರಂಭ ಮಾಡುತ್ತಿವೆ. ಉಳಿದ 10 ಗೋಶಾಲೆಗಳ ಕಾಮಗಾರಿಯು ಅಂತಿಮ ಹಂತದಲ್ಲಿದೆ. 2022-23 ನೇ ಸಾಲಿನಲ್ಲಿ 31 ಗೋಶಾಲೆಗಳಿಗೆ ಜಮೀನು ಮಂಜೂರಾಗಿದ್ದು, 21 ಗೋಶಾಲೆಗಳ ಕಾಮಗಾರಿಗೆ ಪ್ರತಿ ಗೋಶಾಲೆಗೆ 50 ಲಕ್ಷ ರೂ. ನಂತೆ  10.50 ಕೋಟಿ ರೂ.ಗಳ ಅನುದಾನವನ್ನು ಬಿಡುಗಡೆ ಮಾಡಲಾಗಿದೆ. ಉಳಿದ 27 ಗೋಶಾಲೆಗಳಿಗೆ ಜಮೀನು ಗುರುತಿಸಿದ್ದು, ಇಲಾಖೆಗೆ ಹಸ್ತಾಂತರ ಮಾಡಿಕೊಳ್ಳಲಾಗುತ್ತಿದೆ. 12 ಗೋಶಾಲೆಗಳಿಗೆ ಸೂಕ್ತ ಜಮೀನು ಗುರುತಿಸಲಾಗುತ್ತಿದೆ ಎಂದು ಪಶುಸಂಗೋಪನಾ ಇಲಾಖೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ವಿಧಾನಸೌಧದ ಸಾಂದರ್ಭಿಕ ಚಿತ್ರ

ಗೋಮಾತಾ ಸಹಕಾರ ಸಂಘದ ಸ್ಥಾಪನೆ :

ಪಿಂಜಿರಾಪೋಲ್ ಯೋಜನೆಯಡಿ 97 ಖಾಸಗಿ ಗೋಶಾಲೆಗಳಲ್ಲಿನ ಜಾನುವಾರುಗಳ ನಿರ್ವಹಣೆಗೆ 1.62 ಕೋಟಿ ರೂ.ಗಳನ್ನು ಹಾಗೂ ಪೋಲಿಸ್ ಇಲಾಖೆಯಿಂದ ಜಪ್ತಿ ಮಾಡಿದ ಜಾನುವಾರುಗಳ ನಿರ್ವಹಣೆಗೆ 64 ಖಾಸಗಿ ಗೋಶಾಲೆಗಳಿಗೆ 92.4 ಲಕ್ಷ ರೂ.ಗಳ ಅನುದಾನವನ್ನು ಬಿಡುಗಡೆ ಮಾಡಲಾಗಿದೆ. ರಾಜ್ಯದಲ್ಲಿರುವ ಎಲ್ಲಾ ಗೋಶಾಲೆಗಳನ್ನು ಸಂಘಟಿಸಲು ಹಾಗೂ ಅವುಗಳನ್ನು ಆರ್ಥಿಕವಾಗಿ ಸಬಲಗೊಳಿಸಲು “ಗೋಮಾತಾ ಸಹಕಾರ ಸಂಘದ ಸ್ಥಾಪನೆ” ಮಾಡಲು ಗೋಶಾಲೆಗಳಿಂದ ಷೇರುಗಳನ್ನು ಸಂಗ್ರಹಿಸಿ, ನೋಂದಣಿಗೆ ಸಹಕಾರ ಇಲಾಖೆಗೆ ಸಲ್ಲಿಸಲಾಗಿದೆ. ಮುಂದಿನ ದಿನಗಳಲ್ಲಿ ಗೋಶಾಲೆಯಲ್ಲಿ ತಯಾರು ಮಾಡುವ ಗೋ ಉತ್ಪನ್ನಗಳನ್ನು ಸಹಕಾರ ಸಂಘದ ಮೂಲಕ ಮಾರಾಟಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹಿರಿಯ ಅಧಿಕಾರಿಯೊಬ್ಬರು ಬೆಂಗಳೂರು ವೈರ್ ಗೆ ತಿಳಿಸಿದ್ದಾರೆ.

ಗೋಶಾಲೆಗಳು ಆತ್ಮ ನಿರ್ಬರವಾಗಲು ಗೋ ಶಾಲೆಗಳಲ್ಲಿ ಉತ್ಪಾದನೆಯಾಗುವ ತ್ಯಾಜ್ಯಗಳಿಂದ ಎರೆಹುಳು ಘಟಕಗಳಿಗೆ ಪ್ರತಿ ಘಟಕಕ್ಕೆ 45 ಸಾವಿರ ರೂ.ನಂತೆ 25 ಘಟಕಗಳಿಗೆ ಅನುದಾನ ನೀಡಲಾಗಿದೆ. ಗೋ ಉತ್ಪನ್ನಗಳ ತಾಂತ್ರಿಕತೆ ಮತ್ತು ಪ್ರಾಮಾಣಿಕರಣದ ಅಭಿವೃದ್ದಿಗಾಗಿ ಶಿವಮೊಗ್ಗದಲ್ಲಿನ ಪಶು ವೈದ್ಯಕೀಯ ಕಾಲೇಜಿನಲ್ಲಿ ಸಂಶೋಧನಾ ಕೋಶವನ್ನು ಸ್ಥಾಪಿಸಲು 36.97 ಲಕ್ಷ ರೂ. ಅನುದಾನ ನೀಡಲಾಗಿದೆ.

ಸರ್ಕಾರಿ ನೌಕರರ ಸಂಘದ ಅಧ್ಯಕ್ಷರು ಏನಂತಾರೆ? :

“ಕಳೆದ ವರ್ಷ ಅಕ್ಟೋಬರ್ ಮತ್ತು ನವೆಂಬರ್ ತಿಂಗಳಿನಲ್ಲಿ ಸರ್ಕಾರಿ ನೌಕರರಿಂದ ಎ- ವೃಂದದ ಅಧಿಕಾರಿಗಳು 11 ಸಾವಿರ, ಬಿ- ವೃಂದದ ಅಧಿಕಾರಿಗಳಿಂದ 4 ಸಾವಿರ ಹಾಗೂ ಸಿ- ವೃಂದದ ಅಧಿಕಾರಿಗಳಿಂದ 400 ರೂ. ಆ ತಿಂಗಳ ಸಂಬಳದಲ್ಲಿ ಕಡಿತಗೊಳಿಸಲು ಸರ್ಕಾರಕ್ಕೆ ಒಪ್ಪಿಗೆ ಪತ್ರ ನೀಡಿದ್ದೆವು. ಅದರಂತೆ ಸರ್ಕಾರಕ್ಕೆ ಸರ್ಕಾರಿ ನೌಕರರ ಸಂಬಳದಿಂದ 40 ಕೋಟಿ ರೂ. ಸಂದಾಯವಾಗಿದೆ. ಶೇ.90ರಷ್ಟು ಅಧಿಕಾರಿ, ನೌಕರರು ದೇಣಿಗೆ ನೀಡಿದ್ದಾರೆ. ಆ ಮೂಲಕ “ಪುಣ್ಯಕೋಟಿ ದತ್ತು ಯೋಜನೆ”ಯಡಿ ಸಾವಿರಾರು ಜಾನುವಾರುಗಳನ್ನು ದತ್ತುಪಡೆಯಲು ಸಹಾಯ ಮಾಡಿದ ತೃಪ್ತಿ ನಮಗೆ ಲಭಿಸಿದೆ. ಮುಂದೆ ಈ ದತ್ತು ಯೋಜನೆಗೆ ಹಣ ನೀಡುವ ಆಲೋಚನೆಯಿಲ್ಲ ಸದ್ಯಕ್ಕಿಲ್ಲ.”

– ಷಡಕ್ಷರಿ, ರಾಜ್ಯಾಧ್ಯಕ್ಷ, ಕರ್ನಾಟಕ ಸರ್ಕಾರಿ ನೌಕರರ ಸಂಘ

“ಬೆಂಗಳೂರು ವೈರ್” ಸೋಶಿಯಲ್ ಮೀಡಿಯಾ ಪೇಜ್ ಹಾಗೂ Google News ಗಳಿಗೆ Subscribe ಆಗಲು Facebook, Telegram, Twitter, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

WhatsApp Join our WhatsApp Channel
Previous Post

#AssemblyElection2023 | ಮತದಾರರಿಗೆ ಆಮಿಷ ಒಡ್ಡುವ ವಿಡಿಯೋ ಮಾಡಿ ಕಳಿಸಿದರೆ 5 ಸಾವಿರ ಇನಾಮು ; ಕೆಆರ್ ಎಸ್ ಪಕ್ಷದ ಓಪನ್ ಆಫರ್!!

Next Post

ಶ್ರೀ ಸಿದ್ದೇಶ್ವರ ಸ್ವಾಮೀಜಿ ನಡೆದಾಡಿದ ನಾಡಿನಲ್ಲಿ ಫೆ.4 ಮತ್ತು 5 ರಂದು 37ನೇ ಪತ್ರಕರ್ತರ ರಾಜ್ಯ ಸಮ್ಮೇಳನ

Next Post
37ನೇ ರಾಜ್ಯ ಪತ್ರಕರ್ತರ ಸಮ್ಮೇಳನದ ಲಾಂಛನ

ಶ್ರೀ ಸಿದ್ದೇಶ್ವರ ಸ್ವಾಮೀಜಿ ನಡೆದಾಡಿದ ನಾಡಿನಲ್ಲಿ ಫೆ.4 ಮತ್ತು 5 ರಂದು 37ನೇ ಪತ್ರಕರ್ತರ ರಾಜ್ಯ ಸಮ್ಮೇಳನ

ಬಹುಮಹಡಿ ಕಟ್ಟಡದ ಸಾಂದರ್ಭಿಕ ಚಿತ್ರ

#AirShow2023 | ಏರ್ ಶೋ 2023ರ ಹಿನ್ನಲೆ : ಬೃಹತ್ ಕಟ್ಟಡಗಳ ಕ್ರೇನ್ ಎತ್ತರ ತಗ್ಗಿಸಲು ಬಿಬಿಎಂಪಿ ಖಡಕ್ ಸೂಚನೆ

Please login to join discussion

Like Us on Facebook

Follow Us on Twitter

Recent News

BW SPECIAL| 2 ಲಕ್ಷಕ್ಕೂ ಅಧಿಕ ಸರ್ಕಾರಿ ನೌಕರರಿಂದ ‘ಕರ್ತವ್ಯ’ ಆ್ಯಪ್‌ ಕಡೆಗಣನೆ: 7 ದಿನದ ಗಡುವು ನೀಡಿದ ಸರ್ಕಾರ

June 17, 2026

ಕರ್ನಾಟಕದಲ್ಲಿ ತೀವ್ರ ಜಲಕ್ಷಾಮ: ಶೇ. 21ರಷ್ಟು ಮಳೆ ಕೊರತೆ, 14 ಪ್ರಮುಖ ಜಲಾಶಯಗಳಲ್ಲಿ ಕೇವಲ 23% ನೀರು ಸಂಗ್ರಹ

June 17, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

BW SPECIAL| 2 ಲಕ್ಷಕ್ಕೂ ಅಧಿಕ ಸರ್ಕಾರಿ ನೌಕರರಿಂದ ‘ಕರ್ತವ್ಯ’ ಆ್ಯಪ್‌ ಕಡೆಗಣನೆ: 7 ದಿನದ ಗಡುವು ನೀಡಿದ ಸರ್ಕಾರ

June 17, 2026

ಕರ್ನಾಟಕದಲ್ಲಿ ತೀವ್ರ ಜಲಕ್ಷಾಮ: ಶೇ. 21ರಷ್ಟು ಮಳೆ ಕೊರತೆ, 14 ಪ್ರಮುಖ ಜಲಾಶಯಗಳಲ್ಲಿ ಕೇವಲ 23% ನೀರು ಸಂಗ್ರಹ

June 17, 2026

Space News | ಬಾನಂಗಳದಲ್ಲಿ ಇಂದು ವಿಸ್ಮಯ: ಗುರು, ಶುಕ್ರನ ನಡುವೆ ಬಾಲಚಂದ್ರನ ದರ್ಶನ, ಬರಿಗಣ್ಣಿನಿಂದಲೇ ಕಣ್ತುಂಬಿಕೊಳ್ಳಿ

June 17, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group