ಬೆಂಗಳೂರು, ಆ.03 www.bengaluruwire.com : ರಾಜ್ಯ ರಾಜಕೀಯದಲ್ಲಿ ಹಲವು ದಿನಗಳಿಂದ ನಡೆದಿರುವ ತೀವ್ರ ಹಗ್ಗಜಗ್ಗಾಟ ಹಾಗೂ ಸಮಾಲೋಚನೆಗಳ ನಂತರ, ಕೊನೆಗೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸಂಪುಟಕ್ಕೆ ನೂತನ ಸಚಿವರನ್ನು ಸೇರ್ಪಡೆಗೊಳಿಸಲು ಮುಹೂರ್ತ ಫಿಕ್ಸ್ ಆಗಿದೆ.
ಇಂದು (ಆಗಸ್ಟ್ 03) ಸಂಜೆ 4 ಗಂಟೆಗೆ ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ನಡೆಯಲಿದ್ದು, ಈ ಕುರಿತು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಮುಖ್ಯಮಂತ್ರಿಗಳ ಕಚೇರಿಯಿಂದ ರಾಜಭವನಕ್ಕೆ ಈಗಾಗಲೇ ಅಧಿಕೃತ ಮಾಹಿತಿ ರವಾನಿಸಲಾಗಿದೆ. ಸಂಪುಟ ಸೇರಲಿರುವ ನಾಯಕರ ಕುರಿತು ಎಐಸಿಸಿ (AICC) ಅಧಿಕೃತ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಕೆ.ಸಿ. ವೇಣುಗೋಪಾಲ್ ಅವರಿಂದ ಪಟ್ಟಿ ಹಸ್ತಾಂತರ:
ಕಾಂಗ್ರೆಸ್ ಹೈಕಮಾಂಡ್ ಜೊತೆಗಿನ ದೀರ್ಘ ಚರ್ಚೆಯ ಬಳಿಕ ಪ್ರಾದೇಶಿಕ ಹಾಗೂ ಜಾತಿ ಸಮತೋಲನವನ್ನು ಆಧರಿಸಿ ಈ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ.

ಬಿಡುಗಡೆಯಾಗಿರುವ ದಾಖಲೆಯ ಅನುಸಾರ, ಕಾಂಗ್ರೆಸ್ ಪಕ್ಷದ ರಾಜ್ಯ ಉಸ್ತುವಾರಿ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು, ಸಚಿವ ಸಂಪುಟ ವಿಸ್ತರಣೆಯಲ್ಲಿ ಸ್ಥಾನ ಪಡೆದಿರುವ ಒಟ್ಟು 20 ಶಾಸಕರ ಹೆಸರಿರುವ ಪಟ್ಟಿಯನ್ನು ಅಧಿಕೃತವಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ರವಾನಿಸಿದ್ದಾರೆ.
ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದ ನಂತರ ನೂತನ ಸಚಿವರಿಗೆ ಖಾತೆ ಹಂಚಿಕೆ ಪ್ರಕ್ರಿಯೆ ನಡೆಯಲಿದ್ದು, ಶೀಘ್ರದಲ್ಲೇ ಅಧಿಕೃತ ಆದೇಶ ಹೊರಬೀಳಲಿದೆ.
ಸಂಪುಟ ಸೇರಲಿರುವ 20 ನೂತನ ಸಚಿವರ ಪಟ್ಟಿ ಇಲ್ಲಿದೆ:
ಪಿ. ಎಂ. ನರೇಂದ್ರಸ್ವಾಮಿ
ಶಿವರಾಜ್ ತಂಗಡಗಿ
ರುದ್ರಪ್ಪ ಲಮಾಣಿ
ಕೆ. ಎಸ್. ಬಸವಂತಪ್ಪ
ಬಿ. ನಾಗೇಂದ್ರ
ಟಿ. ರಘುಮೂರ್ತಿ
ಬಿ. ಝಡ್. ಜಮೀರ್ ಅಹ್ಮದ್ ಖಾನ್
ರಿಜ್ವಾನ್ ಅರ್ಷದ್
ಸಂತೋಷ್ ಲಾಡ್
ಮಧು ಬಂಗಾರಪ್ಪ
ಪುಟ್ಟರಂಗಶೆಟ್ಟಿ
ಎಸ್.ಎಸ್.ಮಲ್ಲಿಕಾರ್ಜುನ್
ಡಾ. ಅಜಯ್ ಸಿಂಗ್
ಎನ್. ಚಲುವರಾಯ ಸ್ವಾಮಿ
ಕೆ. ಎಂ. ಶಿವಲಿಂಗೇಗೌಡ
ಎಚ್. ಸಿ. ಬಾಲಕೃಷ್ಣ
ಗಾಯತ್ರಿ ಶಾಂತೇಗೌಡ
ಬಸವರಾಜ್ ರಾಯರೆಡ್ಡಿ
ವಿಜಯಾನಂದ ಕಾಶಪ್ಪನವರ್
ಲಕ್ಷ್ಮಣ್ ಸವದಿ
ವಿಧಾನಮಂಡಲದ ಪ್ರಮುಖ ಹುದ್ದೆಗಳಿಗೂ ಹೈಕಮಾಂಡ್ ಒಪ್ಪಿಗೆ:
ಸಚಿವರ ಪಟ್ಟಿಯ ಜೊತೆಗೆ, ವಿಧಾನಸಭೆ ಮತ್ತು ವಿಧಾನಪರಿಷತ್‌ನ ಪ್ರಮುಖ ಹುದ್ದೆಗಳಿಗೂ ಎಐಸಿಸಿ ಅಧ್ಯಕ್ಷರು ಅನುಮೋದನೆ ನೀಡಿದ್ದಾರೆ:
ವಿಧಾನಸಭೆ ಸ್ಪೀಕರ್: ಜಿ. ಎಸ್. ಪಾಟೀಲ್
ವಿಧಾನಸಭೆ ಉಪಸಭಾಧ್ಯಕ್ಷ: ಎ. ಎಸ್. ಪೊನ್ನಣ್ಣ
ವಿಧಾನಪರಿಷತ್ ಸಭಾಪತಿ: ಸಲೀಂ ಅಹ್ಮದ್
ವಿಧಾನಪರಿಷತ್ ಉಪಸಭಾಪತಿ: ಉಮಾಶ್ರೀ





















