Saturday, July 18, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    Central Election Commission | ಚುನಾವಣಾ ಆಯೋಗದಿಂದ ಅಖಿಲ ಭಾರತ ಮಾಧ್ಯಮ ಸಮ್ಮೇಳನ: ಪಾರದರ್ಶಕತೆಗೆ ‘ಇಸಿಐನೆಟ್’ ಮತ್ತು 100% ವೆಬ್‌ಕಾಸ್ಟಿಂಗ್‌ಗೆ ಒತ್ತು

    ಕೇವಲ 5 ರೂ.ಗೆ ದೇಶದ ಮೊದಲ ಹೈಡ್ರೋಜನ್ ರೈಲಿನಲ್ಲಿ ಪ್ರಯಾಣ: ಜಿಂದ್-ಸೋನಿಪತ್ ಮಾರ್ಗದ ಟೈಮ್‌ಟೇಬಲ್ ಸಹಿತ ಸಂಪೂರ್ಣ ಮಾಹಿತಿ ಇಲ್ಲಿದೆ

    ಕೇಂದ್ರ ಚುನಾವಣಾ ಆಯೋಗದ ಕಚೇರಿ - ಸಾಂದರ್ಭಿಕ ಚಿತ್ರ

    ಕರ್ನಾಟಕ ಮತದಾರರ ಪಟ್ಟಿಯ ಪರಿಷ್ಕರಣೆ: ಎಸ್‌ಐಆರ್ ಗಡುವು ವಿಸ್ತರಣೆ, ರಾಜ್ಯದಲ್ಲಿ ಶೇ. 95.58 ರಷ್ಟು ನಮೂನೆ ಹಂಚಿಕೆ

    Defence News | ಕಾರ್ಗಿಲ್ ವಿಜಯ್ ದಿವಸ್ 2026: ದೆಹಲಿಯಿಂದ ಕಾರ್ಗಿಲ್‌ಗೆ ಬೈಕ್ ರ್ಯಾಲಿ; ಚಾಲನೆ ನೀಡಿದ ರಕ್ಷಣಾ ಸಚಿವ

    ಆದಾಯ ತೆರಿಗೆ ವಂಚಕರ ಪಾಲಿಗೆ ಸಿಂಹಸ್ವಪ್ನ, ರಂಗಭೂಮಿ ಸವ್ಯಸಾಚಿ: ಐಆರ್‌ಎಸ್ ಅಧಿಕಾರಿ ಜಯರಾಮ್ ರಾಯಪುರ ಎಂಬ ಬಹುಮುಖ ಪ್ರತಿಭೆ

    S Janaki Passed Away |  ಖ್ಯಾತ ಗಾಯಕಿ ಎಸ್. ಜಾನಕಿ ಇನ್ನಿಲ್ಲ: ಹೃದಯಾಘಾತದಿಂದ ‘ಗಾನಕೋಗಿಲೆ’ ವಿಧಿವಶ: ಪ್ರಧಾನಿ ಮೋದಿ ತೀವ್ರ ಸಂತಾಪ

    National Anthem New Guidelines | ರಾಷ್ಟ್ರಗೀತೆ ಮತ್ತು ರಾಷ್ಟ್ರೀಯ ಗೀತೆ ನಿಯಮ: ಕೇಂದ್ರ ಗೃಹ ಸಚಿವಾಲಯದಿಂದ ಹೊಸ ಮಾರ್ಗಸೂಚಿ ಪ್ರಕಟ 

    ಕಾವೇರಿ ವಿವಾದ: ಸಿಎಂ ಡಿ.ಕೆ. ಶಿವಕುಮಾರ್ ವಿರುದ್ಧ ಆರ್. ಅಶೋಕ್ ತೀವ್ರ ವಾಗ್ದಾಳಿ, ಕೆಆರ್‌ಎಸ್ ಮುತ್ತಿಗೆ ಎಚ್ಚರಿಕೆ

    Power News | ಎಲ್ ನಿನೋ ಎದುರಿಸಲು ಇಂಧನ ಇಲಾಖೆ ಸಜ್ಜು: ಸಮರ್ಪಕ ವಿದ್ಯುತ್ ಪೂರೈಕೆಗೆ ಕಾರ್ಯತಂತ್ರ

  • Bengaluru Focus

    ಬೆಂಗಳೂರು: ಆಸ್ತಿಯ ಸಂಪೂರ್ಣ ಹಕ್ಕು ಮಾಲೀಕರಿಗಿರಬೇಕು, ಅಪಾರ್ಟ್‌ಮೆಂಟ್ ನಿವಾಸಿಗಳ ಜೊತೆ ಸಿಎಂ ಡಿ.ಕೆ.ಶಿವಕುಮಾರ್ ಸಂವಾದ

    BDA News | ಬಿಡಿಎಯಿಂದ ಗುಡ್ ನ್ಯೂಸ್: ಶಿವರಾಮ ಕಾರಂತ ಬಡಾವಣೆ ನಿವೇಶನ ಹಂಚಿಕೆಗೆ ಶೀಘ್ರದಲ್ಲೇ ಅರ್ಜಿ ಆಹ್ವಾನ

    ರಾಜ್ಯಕ್ಕೆ ಬಂಡವಾಳ ಹರಿವು: ಕೋಲ್ಕತ್ತಾದಲ್ಲಿ ಸಚಿವ ಎಂ.ಬಿ. ಪಾಟೀಲ ರೋಡ್‌ ಶೋ

    ಬೆಂಗಳೂರು ಟ್ರಾಫಿಕ್‌ಗೆ ಮಾಸ್ಟರ್ ಪ್ಲಾನ್: ಸಿಟಿ ಒಳಗೆ ಬರುವ 600 ಪೆಟ್ರೋಲ್ ಟ್ಯಾಂಕರ್‌ಗಳ ದಿಕ್ಕು ಬದಲಿಸಲು ಎನ್ಐಪಿಡಿಎ ಮನವಿ

    39 ಅಗತ್ಯ ಔಷಧಗಳ ಬೆಲೆ ಕಡಿತ: ಬಿಪಿ, ಶುಗರ್, ಹಾರ್ಟ್ ರೋಗಿಗಳಿಗೆ ಕೇಂದ್ರದಿಂದ ಭರ್ಜರಿ ರಿಲೀಫ್

    ಬೆಂಗಳೂರು ಪಶ್ಚಿಮ ನಗರ ಪಾಲಿಕೆ: ಬೃಹತ್ ತ್ಯಾಜ್ಯ ಉತ್ಪಾದಕರಿಗೆ ಖಡಕ್ ಎಚ್ಚರಿಕೆ ನೀಡಿದ ಆಯುಕ್ತರು

    BUWJ Pressday-2026 | ತಂತ್ರಜ್ಞಾನ ಯುಗದಲ್ಲಿ ಪತ್ರಕರ್ತರು ಬದಲಾಗುವುದು ಅನಿವಾರ್ಯ: ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ

    ಬೆಂಗಳೂರು ವಿವಿ ನೂತನ ಕುಲಪತಿಯಾಗಿ ಪ್ರೊ.ಸಿ.ಶಿವರಾಜು ಅಧಿಕಾರ ಸ್ವೀಕಾರ

    ಕಾವೇರಿ ವಿವಾದ: ಸಿಎಂ ಡಿ.ಕೆ. ಶಿವಕುಮಾರ್ ವಿರುದ್ಧ ಆರ್. ಅಶೋಕ್ ತೀವ್ರ ವಾಗ್ದಾಳಿ, ಕೆಆರ್‌ಎಸ್ ಮುತ್ತಿಗೆ ಎಚ್ಚರಿಕೆ

  • Public interest
  • BW Special
  • Life Style
  • Photo Gallery
  • Video
No Result
View All Result

Home Life Style

ಮೆಸ್ಸಿ ಅಂದ್ರೆ ಬರೀ ಗ್ರೇಟ್ ಪ್ಲೇಯರ್ ಅಲ್ಲ..ಗ್ರೇಟೆಸ್ಟ್ ಲೀಡರ್..! ಅರ್ಜೆಂಟಿನಾ ನಾಲ್ಕನೇ ಬಾರಿ ಪ್ರಶಸ್ತಿ ಗೆಲ್ಲುತ್ತಾ?

by Bengaluru Wire Desk
July 17, 2026
in Life Style, Public interest
Reading Time: 2 mins read
0

– ವಿಶೇಷ ಲೇಖನ : ಸನತ್ ರೈ, ಹಿರಿಯ ಕ್ರೀಡಾ ಪತ್ರಕರ್ತರು    

ಗೆಟ್‍ರೆಡಿ..!

ಜುಲೈ 19, 2026..! (ಜು.20 ಭಾರತ ಕಾಲಮಾನ) ಫಿಫಾ ವಿಶ್ವಕಪ್‍ನ ಸೂಪರ್ ಸಂಡೆಯ ಅಲ್ಟಿಮೇಟ್ ಫೈನಲ್ ಮ್ಯಾಚ್..! ಇಂತಹ ಪಂದ್ಯ ಈ ಹಿಂದೆ ಬಂದಿಲ್ಲ. ಮುಂದೆ ಬರುತ್ತೋ ಇಲ್ವೋ ಅನ್ನೋದು ಗೊತ್ತಿಲ್ಲ.   

ಯಾಕಂದ್ರೆ ಇದು, ಫಿಫಾ ಫುಟ್‍ಬಾಲ್ ಇತಿಹಾಸದ ಮಹೋನ್ನತ ಸಂಗ್ರಾಮ. ಫಿಫಾ ಫುಟ್‍ಬಾಲ್ ಪರಂಪರೆಯನ್ನು ಹಸ್ತಾಂತರ ಮಾಡುವ ಐತಿಹಾಸಿಕ ದಿನಕ್ಕೆ ಸಾಕ್ಷಿಯಾಗುವ ಮಹಾಸಮರ..! ಇಲ್ಲಿ ಯಾರು ಗೆಲ್ತಾರೆ ಅನ್ನೋದು ಮುಖ್ಯವಲ್ಲ. ಯಾರು ಗೆದ್ರೂ, ಯಾರು ಸೋತ್ರೂ,. ಅದೊಂದು ಚರಿತ್ರೆ ಸೃಷ್ಟಿಸುವ ಸಮಯ..!  

ಹೌದು, ಇದು ಆಧುನಿಕ ಫುಟ್‍ಬಾಲ್ ಮಹಾರಾಜನ ಫಿಫಾ ವಿಶ್ವಕಪ್‍ನ ಕಟ್ಟಕಡೆಯ ಪಂದ್ಯ..! ಇನ್ನೊಂದೆಡೆ ಫಿಫಾ ವಿಶ್ವಕಪ್‍ನ ಭವಿಷ್ಯದ ಮಹಾರಾಜನ ಮೊದಲ ಫೈನಲ್ ಮ್ಯಾಚ್..!.

ಇದೆಂಥಾ ಕಾಕತಾಳಿಯ ಅಲ್ವಾ..? ಅಂದು ಆತ ಫುಟ್‍ಬಾಲ್ ಜಗತ್ತಿನ  ಯುವರಾಜನಾಗಿದ್ದ. ಐದು ತಿಂಗಳ ಪುಟಾಣಿ ಮಗುವಿನ ಹಣೆಗೆ ಮುತ್ತಿಟ್ಟು ಆಶೀರ್ವಾದ ಮಾಡಿದ್ದ.  ಆತನ ಕೈಯಿಂದಲೇ ಬಾತ್ ಟಬ್‍ನಲ್ಲಿ ಸ್ನಾನ ಮಾಡಿಸಿದ್ದ. ಇಂದು ಅದೇ ಮಗು ಜಾಗತಿಕ ಫುಟ್‍ಬಾಲ್‍ನ ಯುವರಾಜನಾಗಿದ್ದಾನೆ. ಅಂದು ಅನುಗ್ರಹ ಮಾಡಿದ್ದ ಯುವರಾಜ ಇಂದು ಫುಟ್‍ಬಾಲ್ ಲೋಕದ ಮಹಾರಾಜನಾಗಿದ್ದಾನೆ.

ಲಿಯೋನಾಲ್ ಮೆಸ್ಸಿ ವರ್ಸಸ್ ಲ್ಯಾಮಿನೆ ಯಮಲ್:

ನೆನಪಿಟ್ಟುಕೊಳ್ಳಿ.. ಈ ಬಾರಿಯ ಫಿಫಾ ವಿಶ್ವಕಪ್ ಫೈನಲ್ ಮ್ಯಾಚ್ ಅಂದ್ರೆ ಅದು ಸ್ಪೇನ್ ವರ್ಸಸ್ ಅರ್ಜೆಂಟಿನಾ ಅಲ್ಲ.. ಬದಲಾಗಿ ಮಹಾರಾಜ ವರ್ಸಸ್ ಯುವರಾಜ…! ಲಿಯೋನಾಲ್ ಮೆಸ್ಸಿ ವರ್ಸಸ್ ಲ್ಯಾಮಿನೆ ಯಮಲ್..!

ಫುಟ್‍ಬಾಲ್ ಜಗತ್ತಿನಲ್ಲಿ ಮೆಸ್ಸಿ ನಾಮ ಸ್ಮರಣೆ ಯಾಕೆ..?:

ಮೆಸ್ಸಿ.. ಮೆಸ್ಸಿ.. ಮೆಸ್ಸಿ.. ಇದು ಫುಟ್‍ಬಾಲ್ ಜಗತ್ತಿನಲ್ಲಿ ಸದಾ ಮೊಳಗುವ ಮೂರಕ್ಷರದ ಮಂತ್ರ ಘೋಷದ ಪದಗಳು. ಈ ಹೆಸರು ಬರೀ ಅಪ್ಪಟ ಅಭಿಮಾನಿಗಳ ಬಾಯಲ್ಲಿ ನಲಿದಾಡುವ ಹೆಸರಲ್ಲ. ಪ್ರತಿಯೊಬ್ಬ ಫುಟ್‍ಬಾಲ್ ಅಭಿಮಾನಿಯ ಹೃದಯದಿಂದ ಕೇಳಿ ಬರುತ್ತಿರುವ ಉದ್ಗಾರ..!

ಯಾಕಂದ್ರೆ ಮೆಸ್ಸಿ ಬರೀ ಒಬ್ಬ ಆಟಗಾರನಲ್ಲ. ಗೋಲು ದಾಖಲಿಸುವ ಮೆಷಿನ್ ಕೂಡ ಅಲ್ಲ. ಕೌಶಲ್ಯಗಳಿಂದಲೇ ಮೋಡಿ ಮಾಡುವ  ಜಾದೂಗಾರನೂ ಅಲ್ಲ. ಕಾಲ್ಚೆಂಡಿನ ಜೊತೆ ನರ್ತಿಸುವ ನಾಟ್ಯಗಾರನೂ ಅಲ್ಲ. ಕೌಶಲ್ಯ ಹಾಗೂ  ಅದ್ಭುತ ಆಟದಿಂದಲೇ ಮೈದಾನದಲ್ಲಿ ಚಿತ್ತಾರ ಬಿಡಿಸುವ ಕಲೆಗಾರನೂ ಅಲ್ಲ. ಅದಕ್ಕಿಂತಲೂ ಹೆಚ್ಚಾಗಿ ಒಬ್ಬ ಅದ್ಭುತ ಟೀಮ್ ಪ್ಲೇಯರ್. ತಂಡಕ್ಕಾಗಿ ಸರ್ವಸ್ವವನ್ನು ಧಾರೆ ಎರೆಯುವ ನಿಸ್ವಾರ್ಥ ಟೀಮ್‍ಮೇಟ್.  ಸೋಲಿನ ದವಡೆಗೆ ಸಿಲುಕಿದ್ರೂ ಎದೆಗುಂದದೆ ಗೆಲುವಿನ ದಡ ಸೇರಿಸುವ ಅಪ್ರತಿಮ ನಾಯಕ. ಮೆಸ್ಸಿ ಅಂದ್ರೆ ಬರೀ ಗ್ರೇಟ್ ಪ್ಲೇಯರ್ ಅಲ್ಲ..ಗ್ರೇಟೆಸ್ಟ್ ಲೀಡರ್..!

ಇದಕ್ಕೆ ಅತ್ಯುತ್ತಮ ಉದಾಹರಣೆ.. ಫಿಫಾ ವಿಶ್ವಕಪ್‍ನ ಎರಡನೇ ಸೆಮಿಫೈನಲ್ ಮ್ಯಾಚ್. ಇಂಗ್ಲೆಂಡ್ ವಿರುದ್ದ ಅರ್ಜೆಂಟಿನಾದ ನಾಯಕ ಮೆಸ್ಸಿ ಆಡಿದ ರೀತಿಗೆ ಆತನನ್ನು ದ್ವೇಷ, ಟೀಕೆ ಮಾಡಿದವರು ಕೂಡ ಕೊಂಡಾಡಲೇಬೇಕು. ಕೊನೆ ಕ್ಷಣದಲ್ಲಿ ಆಂಗ್ಲರ ವಿರುದ್ಧ ಆಡಿದ ವೈಖರಿಗೆ ಹ್ಯಾಟ್ಸ್ ಅಪ್ ಹೇಳಲೇಬೇಕು. ಯಾರು ನಿರೀಕ್ಷೆ ಮಾಡದ ರೀತಿಯಲ್ಲಿ  ತಂಡ ಹಾಗೂ ಅಭಿಮಾನಿಗಳ ಮುಖದಲ್ಲಿ ನಗು ಮೂಡಿಸುವ ಸೈಲೆಂಟ್ ಕಿಲ್ಲರ್ ಈ ಮೆಸ್ಸಿ.!  

ಮೆಸ್ಸಿ ಬರೀ ಕೂಲ್ ಕ್ಯಾಪ್ಟನ್ ಮಾತ್ರವಲ್ಲ:

ಅಷ್ಟಕ್ಕೂ ಮೆಸ್ಸಿ ಬರೀ ಕೂಲ್ ಕ್ಯಾಪ್ಟನ್ ಮಾತ್ರವಲ್ಲ. ಸಂಯಮದಿಂದಲೇ  ಎದುರಾಳಿ ತಂಡವನ್ನು ಸೋಲಿಸುವ ನಿಪುಣ ಆಟಗಾರ. ಎದುರಾಳಿ ತಂಡದ ಅರ್ಭಟಕ್ಕೆ ಮೆಸ್ಸಿ ಒಂಚೂರು ತಲೆಕೆಡಿಸಿಕೊಳ್ಳುವುದಿಲ್ಲ. ಟೈಮ್ ಬಂದಾಗ ಸರಿಯಾಗಿಯೇ ಚೆಕ್‍ಮೆಟ್ ನೀಡುವ ಗ್ರ್ಯಾಂಡ್ ಮಾಸ್ಟರ್.  ಇನ್ನೇನೂ ಸೋಲು ನಿಶ್ಚಿತವಾಗಿದ್ರೂ ಕೊನೆ ಗಳಿಗೆಯಲ್ಲಿ ಗ್ಯಾಂಬಲ್ ಮಾಡುವ ಗ್ಯಾಂಬ್ಲರ್..! 

ನಿಜ, ಇಂಗ್ಲೆಂಡ್ ವಿರುದ್ದದ 2ನೇ ಸೆಮಿಫೈನಲ್‍ನಲ್ಲಿ ನಡೆದಿರುವುದು ಸಹ ಮೆಸ್ಸಿಯ ಚಾಣಕ್ಷ ಆಟ ಮತ್ತು  ಅರ್ಜೆಂಟಿನಾದ ಟೀಮ್ ಗೇಮ್. ಖಂಡಿತವಾಗಿಯೂ ಇದು ಮ್ಯಾಜಿಕ್ ಆಟವೂ ಅಲ್ಲ. ಅದೃಷ್ಟದಿಂದ ಒಲಿಸಿಕೊಂಡ ಗೆಲುವು ಅಲ್ಲ. ಗೆಲ್ಲಲೇಬೇಕು ಎಂಬ ದೃಢ ಸಂಕಲ್ಪಕ್ಕೆ ಸಿಕ್ಕ ಗೆಲುವು. ಗೆದ್ದೇ ಗೆಲ್ತೀವಿ ಅನ್ನೋ ಆತ್ಮವಿಶ್ವಾಸಕ್ಕೆ ದಕ್ಕಿದ ರೋಚಕ ಜಯ. 

ಅಂದ ಹಾಗೇ, ಸೆಮಿಫೈನಲ್ ಪಂದ್ಯ ಅಂದ್ರೆ ಹೇಳಬೇಕಾ..? ಸಹಜವಾಗಿ ಆರಂಭದಿಂದಲೇ ಜಿದ್ದಾಜಿದ್ದಿನ ಹೋರಾಟ. ಆದ್ರೂ ಇಂಗ್ಲೆಂಡ್ ವಿರುದ್ಧ ಅರ್ಜೆಂಟಿನಾ ಮೇಲುಗೈ ಸಾಧಿಸಿದ್ರೂ ಮೊದಲಾರ್ಧದಲ್ಲಿ ಗೋಲು ದಾಖಲಿಸಲು ಸಾಧ್ಯವಾಗಿಲ್ಲ. ಹೀಗಾಗಿ ಸಮಬಲದ ಹೋರಾಟಕ್ಕೆ ತೃಪ್ತಿಪಡಬೇಕಾಯ್ತು.

ಆದ್ರೆ ದ್ವಿತೀಯಾರ್ಧದ ಆರಂಭದಲ್ಲೇ  ಮೆಸ್ಸಿ ಟೀಮ್‍ನ ಲೆಕ್ಕಾಚಾರಗಳನ್ನು ಬುಡಮೇಲು ಮಾಡಲು ಬ್ರಿಟಿಷರು ಯಶಸ್ವಿಯಾದ್ರು. ಪಂದ್ಯದ 55ನೇ ನಿಮಿಷದಲ್ಲಿ ಇಂಗ್ಲೆಂಡ್‍ನ ಆಂಟನಿ ಗಾರ್ಡನ್ ಅದ್ಭುತ ಗೋಲು ದಾಖಲಿಸಿ ತಂಡಕ್ಕೆ  1-0 ಮುನ್ನಡೆ ಒದಗಿಸಿದ್ರು.

ಇದರಿಂದ ಅರ್ಜೆಂಟಿನಾ ಗಲಿಬಿಲಿಗೊಳ್ಳಲಿಲ್ಲ. ಬದಲಾಗಿ  ಎಚ್ಚೆತ್ತುಕೊಂಡಿತ್ತು. ಗೋಲು ದಾಖಲಿಸಲು ಆಂಗ್ಲರ ರಕ್ಷಣಾ ಕೋಟೆಯ ಮೇಲೆ ಮೆಸ್ಸಿ ಹುಡುಗರು ಸತತವಾಗಿ ದಾಳಿ ನಡೆಸಿದ್ರು. ಆದ್ರೆ ಯಶಸ್ವಿಯಾಗಲಿಲ್ಲ. ಇಂಗ್ಲೀಷರು ಕೂಡ ಅರ್ಜೆಂಟಿನಾದ ಗೋಲು ಗಳಿಸುವ ಧಾವಂತಕ್ಕೆ ಆಗಾಗ ಠಕ್ಕರ್ ಕೊಡುತ್ತಿದ್ದರು.

ಇನ್ನೇನು, ಅಮೋಘ ಆಟವನ್ನಾಡಿ ಸೋತ ಅರ್ಜೆಂಟಿನಾ…! 60 ವರ್ಷಗಳ ಬಳಿಕ ಫೈನಲ್ ಪ್ರವೇಶಿಸಿದ ಇಂಗ್ಲೆಂಡ್…! ಹೀಗೆ ಅಂದುಕೊಳ್ಳುವಷ್ಟರಲ್ಲಿ ಶುರುವಾಗಿದ್ದು ಮೆಸ್ಸಿಯ ಕಾಲ್ಚಳಕದ ಕರಾಮತ್ತು..! 

ನಿಗದಿತ ಪಂದ್ಯ ಮುಗಿಯಲು ಕೇವಲ ಐದು ನಿಮಿಷ ಬಾಕಿ ಇತ್ತು. ಇನ್ನೊಂದೆಡೆ ಮೆಸ್ಸಿಗೆ ಗೋಲು ಗಳಿಸುವ ಅವಕಾಶವನ್ನು ಇಂಗ್ಲೆಂಡ್‍ನ ಚೌಕಿದಾರರು ವಿಫಲಗೊಳಿಸುತ್ತಿದ್ದರು. ಮೂರು ನಾಲ್ಕು ಆಟಗಾರರು ಮೆಸ್ಸಿಯ ಸುತ್ತ ಚಕ್ರವ್ಯೂಹ ರಚಿಸಿ ಕಟ್ಟಿ ಹಾಕಿದ್ರು. ಇದನ್ನು ಅರಿತುಕೊಂಡ ಮೆಸ್ಸಿ ಪ್ಲ್ಯಾನ್ “ಬಿ”ಯತ್ತ ಹೆಜ್ಜೆಯನ್ನಿಟ್ಟ. ಹಾಗಾಗಿ ಸಹ ಆಟಗಾರರಿಗೆ ಗೋಲು ದಾಖಲಿಸುವ ಅವಕಾಶ ಕಲ್ಪಿಸಲು ಮುಂದಾದ. ಹೀಗೆ ಹಲವು ಬಾರಿ ಗೋಲು ಗಳಿಸುವ ಪ್ರಯತ್ನ ನಡೆಸಿದ್ರೂ ಪ್ರಯೋಜನವಾಗಲಿಲ್ಲ.

ಆದ್ರೆ 85ನೇ ನಿಮಿಷದಲ್ಲಿ ಮೆಸ್ಸಿಯ ಊಹೆ ತಪ್ಪಾಗಲಿಲ್ಲ. ಇಂಗ್ಲೆಂಡ್‍ನ ಕಾವಲುಗಾರರ ಜೊತೆ ಗುದ್ದಾಡಿಕೊಂಡು ನೀಡಿದ್ದ, ಅದ್ಭುತ ಪಾಸ್ ಅನ್ನು ಎನ್ಝೊ  ಫೆರ್ನಾಂಡಿಸ್ ಗೋಲಾಗಿ ಪರಿವರ್ತಿಸಿದ್ದ. ಅಲ್ಲಿಗೆ ಅಂತರ 1-1ರಿಂದ ಸಮಬಲಗೊಂಡಿತ್ತು. 

ನಂತರ ಶುರುವಾಗಿದ್ದು ಹೆಚ್ಚುವರಿ ಸಮಯದ ಆಟದ ಸಂಘರ್ಷ. ಒಂದು ಕಡೆ, ಮೈದಾನದಲ್ಲಿ ಮೆಸ್ಸಿಯ ಹೆಸರು ಝೆಂಕಾರದಂತೆ ಪ್ರತಿಧ್ವನಿಸುತ್ತಿತ್ತು. ಇನ್ನೊಂದೆಡೆ ಮೆಸ್ಸಿಗಾಗಿ ಮತ್ತೊಂದು ವಿಶ್ವಕಪ್ ಗೆಲ್ಲಬೇಕು ಎಂಬ ಅರ್ಜೆಂಟಿನಾ ಆಟಗಾರರ ಕೊನೆ ಕ್ಷಣದ ಆರ್ಭಟ ನಡೆಯುತ್ತಿತ್ತು.

ಪರಿಣಾಮ 92ನೇ ನಿಮಿಷದಲ್ಲಿ ಮೆಸ್ಸಿಯ ದುಬಾರಿ ಕಾಲಿನಿಂದ ಬಂದ ಮತ್ತೊಂದು ಅದ್ಭುತ ಪಾಸ್. ಈ ಬಾರಿ ಲೌಟಾರೊ ಮಾರ್ಟಿನೆಝ್ ಮಿಂಚಿನಂತೆ ನುಗ್ಗಿ ಎರಡನೇ ಗೋಲು ದಾಖಲಿಸಿ ಗೋಲಿನ ಅಂತರವನ್ನು 2-1ಕ್ಕೇರಿಸಿದ್ದ. ಆಗಲೇ ಅರ್ಜೆಂಟಿನಾದ ಗೆಲುವು ಕೂಡ ಖಚಿತವಾಯ್ತು.  

ಅರ್ಜೆಂಟಿನಾದ ಸಂಘಟಿತ ಆಟದ ಮುಂದೆ ಇಂಗ್ಲೆಂಡ್  ಮಂಡಿಯೂರಿತು:

ಕೊನೆಯ ಗಳಿಗೆಯಲ್ಲಿ ಉಭಯ ತಂಡಗಳು ಜಿದ್ದಾಜಿದ್ದಿನ ಹೋರಾಟ ನಡೆಸಿದ್ರೂ ಅರ್ಜೆಂಟಿನಾದ ಸಂಘಟಿತ ಆಟದ ಮುಂದೆ ಇಂಗ್ಲೆಂಡ್ ತಲೆಬಾಗಲೇಬೇಕಾಯ್ತು. 

ಈ ಮೂಲಕ ಅರ್ಜೆಂಟಿನಾ ಏಳನೇ ಬಾರಿ ಫಿಫಾ ವಿಶ್ವಕಪ್‍ನಲ್ಲಿ ಫೈನಲ್ ಪ್ರವೇಶಿಸಿದ್ದ ಸಾಧನೆ ಮಾಡಿದೆ. ಈಗಾಗಲೇ ಮೂರು ಬಾರಿ ಫಿಫಾ ವಿಶ್ವಕಪ್ ಮುಡಿಗೇರಿಸಿಕೊಂಡಿರುವ ಅರ್ಜೆಂಟಿನಾ ನಾಲ್ಕನೇ ಬಾರಿ ಪ್ರಶಸ್ತಿ ಗೆಲ್ಲುವ ಹಂಬಲದಲ್ಲಿದೆ. ಅಷ್ಟೇ ಅಲ್ಲ, ಮೆಸ್ಸಿ ನಾಯಕತ್ವದಲ್ಲಿ ಸತತ ಎರಡನೇ ಬಾರಿ ಟ್ರೋಫಿ ಗೆಲ್ಲುವ ಉಮೇದಿನಲ್ಲಿದೆ. 

ಒಟ್ಟಿನಲ್ಲಿ ಮೆಸ್ಸಿಯ ಫಿಫಾ ವಿಶ್ವಕಪ್ ಪ್ರಯಾಣ ಯಾವುದೇ ಕೊರತೆಗಳಿಲ್ಲದೆ ಅರ್ಥಪೂರ್ಣವಾಗಿ ಸಾಗುವ ಹಾದಿಯಲ್ಲಿದೆ. ಆದ್ರೆ ಯಮಲ್ ಎಂಬ ಸ್ಪೇನ್‍ನ ಅಪ್ರತಿಮ ಪ್ರತಿಭೆ ಮೆಸ್ಸಿಯ ಕಿರೀಟದ ಮೇಲೆ ಕಣ್ಣಿಟ್ಟಿದ್ದಾನೆ. ಯಾವುದಕ್ಕೂ ಫಿಫಾ ವಿಶ್ವಕಪ್ ಟ್ರೋಫಿ ಯಾರ ಮುಡಿಗೆ ಸೇರಿಕೊಳ್ಳುತ್ತೆ ಅನ್ನೋದು ಜುಲೈ 19 (ಜು.20 ಭಾರತೀಯ ಕಾಲಮಾನ)ರಂದು ನಿರ್ಧಾರವಾಗಲಿದೆ. ಕಾದು ನೋಡೋಣ..!  (Image Credit: FIFA)

WhatsApp Join our WhatsApp Channel
Previous Post

ಕೇವಲ 5 ರೂ.ಗೆ ದೇಶದ ಮೊದಲ ಹೈಡ್ರೋಜನ್ ರೈಲಿನಲ್ಲಿ ಪ್ರಯಾಣ: ಜಿಂದ್-ಸೋನಿಪತ್ ಮಾರ್ಗದ ಟೈಮ್‌ಟೇಬಲ್ ಸಹಿತ ಸಂಪೂರ್ಣ ಮಾಹಿತಿ ಇಲ್ಲಿದೆ

Next Post

Central Election Commission | ಚುನಾವಣಾ ಆಯೋಗದಿಂದ ಅಖಿಲ ಭಾರತ ಮಾಧ್ಯಮ ಸಮ್ಮೇಳನ: ಪಾರದರ್ಶಕತೆಗೆ ‘ಇಸಿಐನೆಟ್’ ಮತ್ತು 100% ವೆಬ್‌ಕಾಸ್ಟಿಂಗ್‌ಗೆ ಒತ್ತು

Next Post

Central Election Commission | ಚುನಾವಣಾ ಆಯೋಗದಿಂದ ಅಖಿಲ ಭಾರತ ಮಾಧ್ಯಮ ಸಮ್ಮೇಳನ: ಪಾರದರ್ಶಕತೆಗೆ 'ಇಸಿಐನೆಟ್' ಮತ್ತು 100% ವೆಬ್‌ಕಾಸ್ಟಿಂಗ್‌ಗೆ ಒತ್ತು

Please login to join discussion

Like Us on Facebook

Follow Us on Twitter

Recent News

Central Election Commission | ಚುನಾವಣಾ ಆಯೋಗದಿಂದ ಅಖಿಲ ಭಾರತ ಮಾಧ್ಯಮ ಸಮ್ಮೇಳನ: ಪಾರದರ್ಶಕತೆಗೆ ‘ಇಸಿಐನೆಟ್’ ಮತ್ತು 100% ವೆಬ್‌ಕಾಸ್ಟಿಂಗ್‌ಗೆ ಒತ್ತು

July 18, 2026

ಮೆಸ್ಸಿ ಅಂದ್ರೆ ಬರೀ ಗ್ರೇಟ್ ಪ್ಲೇಯರ್ ಅಲ್ಲ..ಗ್ರೇಟೆಸ್ಟ್ ಲೀಡರ್..! ಅರ್ಜೆಂಟಿನಾ ನಾಲ್ಕನೇ ಬಾರಿ ಪ್ರಶಸ್ತಿ ಗೆಲ್ಲುತ್ತಾ?

July 17, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

Central Election Commission | ಚುನಾವಣಾ ಆಯೋಗದಿಂದ ಅಖಿಲ ಭಾರತ ಮಾಧ್ಯಮ ಸಮ್ಮೇಳನ: ಪಾರದರ್ಶಕತೆಗೆ ‘ಇಸಿಐನೆಟ್’ ಮತ್ತು 100% ವೆಬ್‌ಕಾಸ್ಟಿಂಗ್‌ಗೆ ಒತ್ತು

July 18, 2026

ಮೆಸ್ಸಿ ಅಂದ್ರೆ ಬರೀ ಗ್ರೇಟ್ ಪ್ಲೇಯರ್ ಅಲ್ಲ..ಗ್ರೇಟೆಸ್ಟ್ ಲೀಡರ್..! ಅರ್ಜೆಂಟಿನಾ ನಾಲ್ಕನೇ ಬಾರಿ ಪ್ರಶಸ್ತಿ ಗೆಲ್ಲುತ್ತಾ?

July 17, 2026

ಕೇವಲ 5 ರೂ.ಗೆ ದೇಶದ ಮೊದಲ ಹೈಡ್ರೋಜನ್ ರೈಲಿನಲ್ಲಿ ಪ್ರಯಾಣ: ಜಿಂದ್-ಸೋನಿಪತ್ ಮಾರ್ಗದ ಟೈಮ್‌ಟೇಬಲ್ ಸಹಿತ ಸಂಪೂರ್ಣ ಮಾಹಿತಿ ಇಲ್ಲಿದೆ

July 16, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group