Sunday, June 14, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ಕರ್ನಾಟಕ ಪೊಲೀಸ್ ಇಲಾಖೆ ಮೇಲ್ದರ್ಜೆಗೆ ಸಿಎಂ ಡಿ.ಕೆ. ಶಿವಕುಮಾರ್ ಮೆಗಾ ಪ್ಲಾನ್: ಕೇಂದ್ರ ಗೃಹ ಸಚಿವರಿಗೆ ಮನವಿ

    ವೈದ್ಯಕೀಯ ಲೋಕದ ಅದ್ವಿತೀಯ ಸಾಧನೆ: ವಯಸ್ಸಾಗುವಿಕೆಯನ್ನು ತಡೆಯುವ ಔಷಧದ ಮೊದಲ ಮಾನವ ಪ್ರಯೋಗ ಯಶಸ್ವಿ

    ಬೆಂಗಳೂರಿನ ಗೊರಗುಂಟೆಪಾಳ್ಯದಲ್ಲಿ ಭೀಕರ ಅಪಘಾತ: ಬ್ರೇಕ್ ಫೇಲಾದ ಗ್ಯಾಸ್ ಲಾರಿ ಡಿಕ್ಕಿ, ಬೈಕ್ ಸವಾರ ದಂಪತಿ ಸ್ಥಳದಲ್ಲೇ ಸಾವು

    ಪೆಟ್ರೋಲ್ ಬಂಕ್ ಸಾಂದರ್ಭಿಕ ಚಿತ್ರ

    Good News | ವಾಹನ ಸವಾರರ ಗಮನಕ್ಕೆ: ಇ-20, ಇ-30 ಎಥೆನಾಲ್ ಮಿಶ್ರಿತ ಪೆಟ್ರೋಲ್ ಮೇಲಿನ ಅಬಕಾರಿ ಸುಂಕ ರದ್ದುಪಡಿಸಿದ ಕೇಂದ್ರ ಸರ್ಕಾರ

    ಚುನಾವಣೆಗೆ ಮುನ್ನ ‘ಗೃಹಲಕ್ಷ್ಮಿ’, ಈಗ ‘ಅನರ್ಹ ಲಕ್ಷ್ಮಿ’: ಗ್ಯಾರಂಟಿ ಹಾಗೂ ‘ಬ್ರ್ಯಾಂಡ್ ಬೆಂಗಳೂರು’ ವೈಫಲ್ಯದ ವಿರುದ್ಧ ಬಿಜೆಪಿ ತೀವ್ರ ವಾಗ್ದಾಳಿ

    ವೈಜಾಗ್ ಸ್ಟೀಲ್ ಪ್ಲಾಂಟ್ ದುರಂತ: ಸ್ಥಳಕ್ಕೆ ಎಚ್.ಡಿ.ಕುಮಾರಸ್ವಾಮಿ ಭೇಟಿ, ಮೃತರ ಕುಟುಂಬಕ್ಕೆ ತಲಾ ₹25 ಲಕ್ಷ ಪರಿಹಾರ ಘೋಷಣೆ

    ಬೆಸ್ಕಾಂ ಕೇಂದ್ರ ಕಚೇರಿ (ಸಾಂದರ್ಭಿಕ ಚಿತ್ರ)

    Bescom News | ಬೆಸ್ಕಾಂನ 20 ಪಟ್ಟಣಗಳಲ್ಲಿ ಜೂನ್ 10ರಿಂದ 30ರವರೆಗೆ ಆನ್‌ಲೈನ್ ಸೇವೆ ಸ್ಥಗಿತ: ಕಾರಣವೇನು?

    Philippines Earthquake | ಫಿಲಿಪೈನ್ಸ್‌ನಲ್ಲಿ 7.8 ತೀವ್ರತೆಯ ಭೀಕರ ಭೂಕಂಪ: 15 ಸಾವು, ಸುನಾಮಿ ಎಚ್ಚರಿಕೆ

    ವಿಧಾನಸೌಧದಿಂದ ಸಿಲ್ಕ್ ಇನ್ಸ್ಟಿಟ್ಯೂಟ್ ವರೆಗೆ ಮೆಟ್ರೋದಲ್ಲಿ ಸಿಎಂ ಡಿಕೆಶಿ ಪ್ರಯಾಣ: ಸ್ವಕ್ಷೇತ್ರ ಕನಕಪುರ ಜನತೆಗೆ ಕೃತಜ್ಞತಾ ಸಮರ್ಪಣೆ

  • Bengaluru Focus

    ಬನ್ನೇರುಘಟ್ಟ ಜೈವಿಕ ಉದ್ಯಾನವನ: ದಕ್ಷಿಣ ಆಫ್ರಿಕಾದ ಚೀತಾಗಳ ದರ್ಶನ, ಜೊತೆಗೆ ಮುದ್ದಾದ ಜೆಬ್ರಾ, ನೀರುಕುದುರೆ ಮರಿಗಳ ಕಲರವ!

    GBA News | ಬೆಂಗಳೂರು ಪಶ್ಚಿಮ ಮತ್ತು ದಕ್ಷಿಣ ಪಾಲಿಕೆ: ಪಾದಚಾರಿ ಮಾರ್ಗ, ತ್ಯಾಜ್ಯ ನಿರ್ವಹಣೆ ಹಾಗೂ ಮೂಲಸೌಕರ್ಯಕ್ಕೆ ಒತ್ತು

    ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ 28ನೇ ಘಟಿಕೋತ್ಸವ: 72 ಸಾವಿರ ಪದವಿ, 103 ಚಿನ್ನದ ಪದಕ ಪ್ರದಾನ

    ಕಡ್ಡಾಯ ಕಚೇರಿ ಹಾಜರಾತಿಗೆ ಐಟಿ ಉದ್ಯೋಗಿಗಳ ವಿರೋಧ: ಬೆಂಗಳೂರಿನ ಗಗನಕ್ಕೇರುತ್ತಿದೆ ಮನೆ ಬಾಡಿಗೆ, ಇಲ್ಲಿದೆ ರಿಯಲ್ ಎಸ್ಟೇಟ್ ವಿಶ್ಲೇಷಣೆ

    ಎಚ್‌ಎಸ್‌ಆರ್ ಲೇಔಟ್ ನಿವಾಸಿಗಳಿಗೆ ಸಿಹಿಸುದ್ದಿ: 184 ಮರಗಳ ಮಾರಣಹೋಮಕ್ಕೆ ಬ್ರೇಕ್ ಹಾಕಿದ ಬಿಡಿಎ

    ವಿಧಾನಸೌಧದಿಂದ ಸಿಲ್ಕ್ ಇನ್ಸ್ಟಿಟ್ಯೂಟ್ ವರೆಗೆ ಮೆಟ್ರೋದಲ್ಲಿ ಸಿಎಂ ಡಿಕೆಶಿ ಪ್ರಯಾಣ: ಸ್ವಕ್ಷೇತ್ರ ಕನಕಪುರ ಜನತೆಗೆ ಕೃತಜ್ಞತಾ ಸಮರ್ಪಣೆ

  • Public interest
  • BW Special
  • Life Style
  • Photo Gallery
  • Video
No Result
View All Result

Home Bengaluru Focus

Lalbagh Flower Show | ಆಗಸ್ಟ್ 8ರಿಂದ 241ನೇ ಫಲಪುಷ್ಪ ಪ್ರದರ್ಶನಕ್ಕಾಗಿ ಸಿಂಗಾರಗೊಳ್ಳುತ್ತಿದೆ ಲಾಲ್ ಬಾಗ್ : ಲಕ್ಷಾಂತರ ಹೂಗಳಲ್ಲಿದ್ದಾರೆ ಬಾಬಾ ಸಾಹೇಬ್ ಅಂಬೇಡ್ಕರ್

ಇದೇ‌ ಆಗಸ್ಟ್ 19 ರವರೆಗೆ ಫಲಪುಷ್ಪ ಪ್ರದರ್ಶನ ಆರಂಭ | ಡಾ.ಬಿ.ಆರ್.ಅಂಬೇಡ್ಕರ್ ರವರ ವಿಷಯಾಧಾರಿತ ಫಲಪುಷ್ಪ ಪ್ರದರ್ಶನದ ಉದ್ಘಾಟನೆಗೆ ಅಂಬೇಡ್ಕರ್ ರವರ ಮೊಮ್ಮಗ ಡಾ.ಭೀಮರಾವ್ ಯಶವಂತ ಅಂಬೇಡ್ಕರ್ ಅವರನ್ನು ಆಹ್ವಾನಿಸಿದ ತೋಟಗಾರಿಕಾ ಇಲಾಖೆ.

by Bengaluru Wire Desk
August 2, 2024
in Bengaluru Focus, Public interest
Reading Time: 2 mins read
0

ಬೆಂಗಳೂರು, ಆ.2 www.bengaluruwire.com : ಸ್ವಾತಂತ್ರ್ಯೋತ್ಸವ (Independence Day) ಅಂಗವಾಗಿ ಈ ಬಾರಿ ರಾಜಧಾನಿಯ ಲಾಲ್‌ಬಾಗ್‌ನಲ್ಲಿ ಹಲವು ವಿಶೇಷತೆಗಳನ್ನು ಹೊಂದಿರುವ 214ನೇ ಫಲಪುಷ್ಪ ಪ್ರದರ್ಶನಕ್ಕೆ (Lalbagh Flower Show) ಭರದಿಂದ ಸಿದ್ಧತೆಗಳು ನಡೆದಿದೆ. ಇದೇ‌ ಆಗಸ್ಟ್ 8ರಿಂದ 19 ರವರೆಗೆ ಫಲಪುಷ್ಪ ಪ್ರದರ್ಶನ ಜನರನ್ನು ಆಕರ್ಷಿಸಲಿದೆ.

ಈ ಬಾರಿಯ ಥೀಮ್‌ ಹಾಗೂ ವಿಶೇಷ ಆಕರ್ಷಣೆ ಏನೆಂದರೆ, ಸಂವಿಧಾನ ಶಿಲ್ಪಿ ಡಾ.ಬಿಆರ್‌ ಅಂಬೇಡ್ಕರ್‌ (Dr BR Ambedkar) ಅವರ ಜೀವನಗಾಥೆಯನ್ನು ಫಲಪುಷ್ಪ ಹಾಗೂ ಲಕ್ಷಾಂತರ ಅಲಂಕಾರಿಕ ಸಸ್ಯಗಳಿಂದ ಸಿದ್ಧಪಡಿಸುವ ಕೆಲಸ ನಡೆಯುತ್ತಿದ್ದು, ಲಾಲ್ ಬಾಗಿನ ಗಾಜಿನ ಮನೆ ಅಪರೂಪದ ಸುಂದರಿಯಂತೆ ಕಂಗೊಳಿಸಲು ಸಜ್ಜಾಗುತ್ತಿದೆ.

ಈ ವರ್ಷ ಸುಮಾರು 50 ಮಾದರಿಯ ಪ್ರದರ್ಶನಕ್ಕೆ ಸಲಹೆಗಳು ಬಂದಿದ್ದು ಅಂತಿಮವಾಗಿ ಅಂಬೇಡ್ಕರ್ ಅವರ ಥೀಮ್ ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಹಿಂದೆ ಭಕ್ತಿ ಭಂಡಾರಿ ಬಸವಣ್ಣ ಮತ್ತು ಹೆಮ್ಮೆಯ ನಟ ಪುನೀತ್ ರಾಜ್ ಕುಮಾರ್ ಅವರ ವಿಷಯಾಧಾರಿತ ಫಲಪುಷ್ಪ ಪ್ರದರ್ಶನ ನಡೆದಿತ್ತು. 

ಫಲಪುಷ್ಪ ಪ್ರದರ್ಶನಕ್ಕೆ ಸಿದ್ಧವಾಗುತ್ತಿದೆ ಐತಿಹಾಸಿಕ ಉದ್ಯಾನವನ ಲಾಲ್ ಬಾಗ್.

ಲಾಲ್ ಬಾಗ್ ನಲ್ಲಿ ಹಮ್ಮಿಕೊಳ್ಳಲಾಗಿರುವ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ರವರ ವಿಷಯಾಧಾರಿತ ಫಲಪುಷ್ಪ ಪ್ರದರ್ಶನದ ಉದ್ಘಾಟನೆಗೆ ಅಂಬೇಡ್ಕರ್ ರವರ ಮೊಮ್ಮಗ ಡಾ.ಭೀಮರಾವ್ ಯಶವಂತ ಅಂಬೇಡ್ಕರ್ (ಯಶವಂತರಾವ್ ಅಂಬೇಡ್ಕ‌ರ್ ರವರ ಪುತ್ರ) ರವರನ್ನು ಮುಂಬೈನ ದಾದರ್ ನಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ರವರ ಅಧಿಕೃತ ನಿವಾಸ ‘ರಾಜ್ ಗೃಹ’ದಲ್ಲಿ ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರಾದ ಡಾ.ಎಂ. ಜಗದೀಶ್ ಹಾಗೂ ತೋಟಗಾರಿಕೆ ಉಪ ನಿರ್ದೇಶಕಿ ಜಿ.ಕುಸುಮ ಅವರು ತೋಟಗಾರಿಕೆ ಇಲಾಖೆಯ ಪರವಾಗಿ ಆತ್ಮೀಯವಾಗಿ ಆಮಂತ್ರಿಸಿದ್ದಾರೆ.

ತದನಂತರ ದಾದರ್ ನ ಕಡಲಂಚಿನಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ರವರ ಚೈತ್ಯ ಭೂಮಿಗೆ ತೆರಳಿ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಭಾರತೀಯ ಬೌದ್ಧ ಮಹಾಸಭಾದ ಕರ್ನಾಟಕ ರಾಜ್ಯ ಉಸ್ತುವಾರಿ ಮಲ್ಲಿಕಾರ್ಜುನ ಭಾಲ್ಕಿ ಹಾಗೂ ರಾಜ್ಯಾಧ್ಯಕ್ಷರಾದ ಎಂ.ಸಿ.ಶಿವರಾಜ್ ರವರು ಜೊತೆಗಿದ್ದರು. 

ಬೆಂಗಳೂರಿನ ಲಾಲ್‌ಬಾಗ್​​ನಲ್ಲಿ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ನಡೆಯುವ ಫಲಪುಷ್ಪ ಪ್ರದರ್ಶನ (Lalbagh Flower Show) ವೀಕ್ಷಿಸಲು ಲಕ್ಷಾಂತರ ಜನರು ಕಾತುರದಿಂದ ಕಾಯುತ್ತಿದ್ದಾರೆ. ಪ್ರತಿ ವರ್ಷ ವಿಭಿನ್ನ ಥೀಮ್​​ನಲ್ಲಿ ಫ್ಲವರ್ ಶೋ ಆಯೋಜಿಸುವ ಮೂಲಕ ಲಾಲ್‌ಬಾಗ್‌ ಅಸಂಖ್ಯಾತ ಜನರನ್ನು ಆಕರ್ಷಿಸುತ್ತಲೇ ಬಂದಿದೆ.

ಗಾಜಿನ ಮನೆಯಲ್ಲಿ ಹೂಕುಂಡಗಳಿಂದ ಅಂಬೇಡ್ಕರ್ ಪುತ್ಥಳಿ ಹಾಗೂ ಅವರ ಜೀವನಗಾಥೆ ಪ್ರದರ್ಶನಕ್ಕೆ ನಡೆಯುತ್ತಿದೆ ಭರದ ಸಿದ್ಧತೆ.

ಈ ವರ್ಷ ಕೂಡ ಸ್ವಾತಂತ್ರ್ಯ ದಿನಾಚರಣೆಯ ಸಲುವಾಗಿ ಲಾಲ್‌ಬಾಗ್​​ನಲ್ಲಿ ಸಂವಿಧಾನ ಶಿಲ್ಪಿ ಡಾ. ಬಿಆರ್ ಅಂಬೇಡ್ಕರ್ ಅವರ ಜೀವನ ಗಾಥೆಯನ್ನು ಬಿಂಬಿಸುವ ಪುಷ್ಪ ಪ್ರದರ್ಶನ ಆಯೋಜಿಸಲಾಗುತ್ತಿದ್ದು, ವಿದೇಶಿ ಹಾಗೂ ಸ್ವದೇಶಿ ಹೂಗಳಿಂದ ಈ ಬಾರಿಯ ಫಲಪುಷ್ಪ ಪ್ರದರ್ಶನ ಕಂಗೊಳಿಸಲಿದೆ. ಇದಕ್ಕೆ ಸುಮಾರು 3 ಕೋಟಿ ರೂಪಾಯಿ ವೆಚ್ಚವಾಗುತ್ತಿದೆ. ಈಗಾಗಲೇ ಸಿದ್ಧತೆಗಳನ್ನು ಆರಂಭವಾಗಿದ್ದು ಆಗಸ್ಟ್ 8 ರಿಂದ ಪ್ರದರ್ಶನ ಆರಂಭವಾಗುವ ಎರಡು ಮೂರು ದಿನದ ಮುಂಚೆ ಪೂರ್ವಸಿದ್ಧತಾ ಕಾರ್ಯಗಳು ಪೂರ್ಣವಾಗುತ್ತದೆ. 

ತರಹೇವಾರಿ ಹೂಗಳಿಂದ ಅಲಂಕಾರ :

ಸಾಮಾನ್ಯವಾಗಿ ಆಂಥೋರಿಯಂ, ಲಿಲ್ಲಿ, ಆರ್ಕಿಡ್, ಜರ್‌ಬೆರಾ, ಸೇವಂತಿಗೆ, ನಂದಿ ಗಿರಿಧಾಮದ ಇಂಪೇಷನ್ಸ್‌ ಹೂಗಳು, ರೆಡ್‌ಹಾಟ್‌ ಪೋಕರ್‌, ಆಲ್‌ಸ್ಟೋಮೇರಿಯನ್‌ ಲಿಲ್ಲಿ, ಪೂಷಿಯಾ, ಅಗಪಾಂಥಸ್‌, ಸೈಕ್ಲೋಮನ್‌, ಕ್ಯಾಲಾಲಿಲ್ಲಿ, ಸುಗಂಧ ರಾಜ ಮುಂತಾದ ಹೂಗಳಿಂದ ಅಂಬೇಡ್ಕರ್ ಅವರ ಪ್ರತಿಕೃತಿ ಅರಳಲಿದೆ. ಹತ್ತು ಹನ್ನೆರಡು ದೇಶಗಳಿಂದ ಹೂಗಳನ್ನು ತರಿಸಿಕೊಳ್ಳಲಾಗುತ್ತಿದೆ. ಕೊಲಂಬಿಯಾ, ನೆದರ್ ಲ್ಯಾಂಡ್ಸ್, ಬೆಲ್ಜಿಯಂ, ಕೀನ್ಯಾ, ಆಸ್ಟ್ರೇಲಿಯಾದಿಂದ ಹೂಗಳು ಲಾಲ್‌ಬಾಗ್‌ಗೆ ಆಗಮಿಸುತ್ತಿವೆ. ಹೂಗಳನ್ನು 12 ದಿನಗಳಿಗೂ ಹೆಚ್ಚು ಕಾಲ ಸಂರಕ್ಷಿಸಲು ಅನುವಾಗುವಂತೆ ನೀರು ಹಿಡಿದಿಡುವ ಸ್ಪಂಜ್ ಗಳನ್ನು ತಂದು ಸ್ಟ್ಯಾಂಡ್ ಗಳಲ್ಲಿ ಜೋಡಿಸುವ ಕಾರ್ಯ ನಡೆಯುತ್ತಿದೆ.

15 ಲಕ್ಷದಷ್ಟು ಹೂಗಳ ಬಳಕೆ :

ಫ್ಲವರ್ ಶೋನಲ್ಲಿ 60ಕ್ಕೂ ಹೆಚ್ಚು ಜಾತಿಯ ಸುಮಾರು 15 ಲಕ್ಷದಷ್ಟು ಹೂಗಳನ್ನು ಬಳಕೆ ಮಾಡಿಕೊಳ್ಳುತ್ತಿದೆ. ಸದ್ಯ ಲಾಲ್ ಬಾಗ್ ಉದ್ಯಾನವನದ ತೋಟದಲ್ಲಿ 4 ಸಾವಿರಕ್ಕೂ ಹೆಚ್ಚು ವಿವಿಧ ಬಗೆಯ ಹೂಗಳನ್ನು ಸಿದ್ಧಮಾಡಿಕೊಳ್ಳಲಾಗುತ್ತಿದೆ. ಫ್ಲವರ್ ಶೋ ಅಲ್ಲದೆ ವಿವಿಧ ಬಗೆಯ ಆಕರ್ಷಕ ಬೋನ್ಸಾಯ್, ಇಕೆಬಾನ ಹಾಗೂ ತರಕಾರಿ ಕೆತ್ತನೆ ಪ್ರದರ್ಶನ, ತೋಟಗಳ ಸ್ಪರ್ಧೆ ಮತ್ತು ನಾನಾ ಹೂವಿನ ಜೋಡಣೆ ಕಲೆಗಳ ಪ್ರದರ್ಶನವೂ ಇರಲಿದೆ. 

ಪ್ರದರ್ಶನದ ಟಿಕೆಟ್ ದರ ಎಷ್ಟು?

ಫ್ಲವರ್ ಶೋ ಪ್ರದರ್ಶನ ಆಗಸ್ಟ್ 8ರಿಂದ 19 ರವರೆಗೆ ನಡೆಯಲಿದೆ. ಇದಕ್ಕೆ ಭೇಟಿ ನೀಡಿ ವೀಕ್ಷಿಸಲು ವಯಸ್ಕರಿಗೆ 80 ರೂ. ಹಾಗೂ ವಾರಾಂತ್ಯದಲ್ಲಿ 100 ರೂಪಾಯಿ ಪ್ರವೇಶ ದರ ನಿಗದಿಯಾಗಿದ್ದು, ಶಾಲಾ ಮಕ್ಕಳಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ. 

ಸ್ವಚ್ಛತೆಗೆ ಮೊದಲ ಆದ್ಯತೆ :

ಲಾಲ್‌ಬಾಗ್‌ನಲ್ಲಿ ಪೇಪರ್ ಬ್ಯಾಗ್‌ಗಳು ಮತ್ತು ಬಾಟಲ್ ನೀರನ್ನು ಸಹ ಅನುಮತಿಸಲಾಗುವುದಿಲ್ಲ. ಹೀಗಾಗಿ ಫ್ಲವರ್‌ ಶೋನಲ್ಲಿ ಪಾಲ್ಗೊಳ್ಳುವವರು ತಮ್ಮ ಸ್ವಂತ ಚೀಲಗಳು ಮತ್ತು ಮರುಬಳಕೆ ಮಾಡಬಹುದಾದ ಬಾಟಲಿಗಳನ್ನು ತರಲು ಒತ್ತಾಯಿಸಲಾಗಿದೆ. ನಾಡಿನ ಪ್ರಸಿದ್ಧ ಫಲಪುಷ್ಪ ಪ್ರದರ್ಶನನಕ್ಕೆ 12 ದಿನಗಳಲ್ಲಿ ಲಕ್ಷಾಂತರ ಜನರು ಆಗಮಿಸುವ ಹಿನ್ನಲೆಯಲ್ಲಿ ತೋಟಗಾರಿಕೆ ಇಲಾಖೆಯು ಸ್ವಚ್ಛತೆ ಕಾಪಾಡಲು ಮತ್ತು ಕಸದ ಬುಟ್ಟಿಗಳನ್ನು ನಿಗದಿತ ಸ್ಥಳಗಳಲ್ಲಿಟ್ಟು, ನಿಯಮಿತವಾಗಿ ಕಸ ತೆಗೆಯಲು ಹೆಚ್ಚಿನ ಸ್ವಚ್ಛತಾ ಕಾರ್ಮಿಕರನ್ನು ನೇಮಿಸಿದೆ. 

Previous Post

Wayanad Landslides | ವಯನಾಡ್ ಭೂಕುಸಿತ ಪೀಡಿತ ಸ್ಥಳದಲ್ಲಿ ಸೇನಾ ಕಾರ್ಯಾಚರಣೆ : ಸಂಪರ್ಕ ಕಡಿತಗೊಂಡ ಸ್ಥಳಕ್ಕೆ ರಾತ್ರಿ ಬೆಳಗಾಗುವುದರ ಒಳಗೆ ಸೇತುವೆ ನಿರ್ಮಿಸಿದ ಭಾರತೀಯ ಸೇನೆ!! ; ಮುಂದುವರೆದ ಶೋಧ ಕಾರ್ಯ

Next Post

PRCI STATE AWARD 2024 | ನಿಮ್ಮ ಬೆಂಗಳೂರು ವೈರ್ ಮುಡಿಗೆ,  ಭಾರತೀಯ ಸಾರ್ವಜನಿಕ ಸಂಪರ್ಕ ಮಂಡಳಿ 2024ರ “ರಾಜ್ಯ ಮಟ್ಟದ ಸಂವಹನ ಪ್ರಶಸ್ತಿ”ಯ ಕಿರೀಟ

Next Post

PRCI STATE AWARD 2024 | ನಿಮ್ಮ ಬೆಂಗಳೂರು ವೈರ್ ಮುಡಿಗೆ,  ಭಾರತೀಯ ಸಾರ್ವಜನಿಕ ಸಂಪರ್ಕ ಮಂಡಳಿ 2024ರ "ರಾಜ್ಯ ಮಟ್ಟದ ಸಂವಹನ ಪ್ರಶಸ್ತಿ"ಯ ಕಿರೀಟ

ರೈಟ್... ರೈಟ್....ಡಾಕ್ಯುಮೆಂಟರಿಯ ಸಾಂದರ್ಭಿಕ ಚಿತ್ರ.

#SaveSahakaraSarige | Video News | ಮಲೆನಾಡಿನ ಜನರ ಬದುಕಿನ ಬಂಡಿಯಾಗಿದ್ದ ಬಸ್ಸಿನ ರಿಯಲ್ ಸ್ಟೋರಿ : "ರೈಟ್... ರೈಟ್....!!

Please login to join discussion

Like Us on Facebook

Follow Us on Twitter

Recent News

ಬನ್ನೇರುಘಟ್ಟ ಜೈವಿಕ ಉದ್ಯಾನವನ: ದಕ್ಷಿಣ ಆಫ್ರಿಕಾದ ಚೀತಾಗಳ ದರ್ಶನ, ಜೊತೆಗೆ ಮುದ್ದಾದ ಜೆಬ್ರಾ, ನೀರುಕುದುರೆ ಮರಿಗಳ ಕಲರವ!

June 13, 2026

GBA News | ಬೆಂಗಳೂರು ಪಶ್ಚಿಮ ಮತ್ತು ದಕ್ಷಿಣ ಪಾಲಿಕೆ: ಪಾದಚಾರಿ ಮಾರ್ಗ, ತ್ಯಾಜ್ಯ ನಿರ್ವಹಣೆ ಹಾಗೂ ಮೂಲಸೌಕರ್ಯಕ್ಕೆ ಒತ್ತು

June 13, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

ಬನ್ನೇರುಘಟ್ಟ ಜೈವಿಕ ಉದ್ಯಾನವನ: ದಕ್ಷಿಣ ಆಫ್ರಿಕಾದ ಚೀತಾಗಳ ದರ್ಶನ, ಜೊತೆಗೆ ಮುದ್ದಾದ ಜೆಬ್ರಾ, ನೀರುಕುದುರೆ ಮರಿಗಳ ಕಲರವ!

June 13, 2026

GBA News | ಬೆಂಗಳೂರು ಪಶ್ಚಿಮ ಮತ್ತು ದಕ್ಷಿಣ ಪಾಲಿಕೆ: ಪಾದಚಾರಿ ಮಾರ್ಗ, ತ್ಯಾಜ್ಯ ನಿರ್ವಹಣೆ ಹಾಗೂ ಮೂಲಸೌಕರ್ಯಕ್ಕೆ ಒತ್ತು

June 13, 2026

ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ 28ನೇ ಘಟಿಕೋತ್ಸವ: 72 ಸಾವಿರ ಪದವಿ, 103 ಚಿನ್ನದ ಪದಕ ಪ್ರದಾನ

June 13, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group