Sunday, April 26, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ಶ್ವೇತಭವನದ ಔತಣಕೂಟದಲ್ಲಿ ಗುಂಡಿನ ಸದ್ದು: ಕೂದಲೆಳೆ ಅಂತರದಲ್ಲಿ ಪಾರಾದ ಡೊನಾಲ್ಡ್ ಟ್ರಂಪ್ ದಂಪತಿ

    BIG EXCLUSIVE| ಜನಗಣತಿ ಜಿದ್ದಾಜಿದ್ದಿ; ಜಿಬಿಎ ಅಧಿಕಾರಿಗಳು Vs ಸಚಿವಾಲಯ ಸಂಘ – ರಾಜ್ಯದ 43 ಇಲಾಖೆಗಳು ಬಂದ್ ಆಗುವ ಭೀತಿ!

    ಸರ್ಕಾರಿ ಆಸ್ಪತ್ರೆಗಳಲ್ಲಿ ಮೊಣಕಾಲು ಮತ್ತು ಸೊಂಟದ ಕೀಲು ಬದಲಿ ಶಸ್ತ್ರಚಿಕಿತ್ಸೆಗಳಿಗೆ ಬಲ: ರೋಗಿಗಳಿಗೆ ಮನೆಬಾಗಿಲಲ್ಲೇ ಗುಣಮಟ್ಟದ ಚಿಕಿತ್ಸೆ

    ಎಸ್‌ಎಸ್‌ಎಲ್‌ಸಿ ಫಲಿತಾಂಶ 2026: ಇತಿಹಾಸದಲ್ಲೇ ಮೊದಲು! 94.10% ರಷ್ಟು ಅಭೂತಪೂರ್ವ ಫಲಿತಾಂಶ; ಬಾಲಕಿಯರದ್ದೇ ಮೇಲುಗೈ

    KSIC News | ಮೈಸೂರು ರೇಷ್ಮೆ ಪರಂಪರೆಗೆ ಮಹಾ ಜಯ: ಕೆಎಸ್‌ಐಸಿ ಭೂಮಿ ಹಸ್ತಾಂತರ ಆದೇಶ ರದ್ದು

    IMPORTANT NEWS | ಭೂಪರಿವರ್ತನೆ ಇನ್ನು ಸುಲಭ: 30 ದಿನಗಳಲ್ಲಿ ವಿಲೇವಾರಿಯಾಗದಿದ್ದರೆ ‘ಪರಿಭಾವಿತ ಭೂಪರಿವರ್ತನೆ’  ಭಾಗ್ಯ

    Vidhana Soudha

    RDPR NEWS | ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಗ್ರಾಮೀಣ ಭಾಗದ ಶೈಕ್ಷಣಿಕ ಕಾರ್ಯಗಳಿಗೆ‌ 501 ಕೋಟಿ ರೂ. ಅನುದಾನ ಬಿಡುಗಡೆ

    ಸಂಭ್ರಮದ ಪಾರ್ಟಿಯಲ್ಲಿ ದುರಂತ: ಗಂಟಲಲ್ಲಿ ಚಿಕನ್ ಮೂಳೆ ಸಿಲುಕಿ ಯುವಕ ಸಾವು

    Wildlife News | ಬನ್ನೇರುಘಟ್ಟಕ್ಕೆ ದಕ್ಷಿಣ ಆಫ್ರಿಕಾದ ‘ಸಿವಂಗಿ’ಗಳು (ಚೀತಾ) ಆಗಮನ; ಚಾರಣಿಗರ ಸುರಕ್ಷತೆಗೆ ಹೊಸ ಕಠಿಣ ‘SOP’ ಬಿಡುಗಡೆ

  • Bengaluru Focus

    Science Research News | ಧ್ಯಾನದಿಂದ ಮೆದುಳಿನ ಶಕ್ತಿ ವೃದ್ಧಿ: ವಯಸ್ಸಾಗುವಿಕೆಗೆ ಬ್ರೇಕ್ ಹಾಕಲಿದೆ ಐಐಎಸ್‌ಸಿ ಸಂಶೋಧನೆ!

    GBA News | ಬೆಂಗಳೂರು ದಕ್ಷಿಣ ಪಾಲಿಕೆ ಅಭಿವೃದ್ಧಿಗೆ ತಜ್ಞರ ಸಲಹಾ ಸಮಿತಿ ರಚನೆ: ಆಯುಕ್ತ ಕೆ.ಎನ್. ರಮೇಶ್

    ಬೆಂಗಳೂರಿನ ಅಭಿವೃದ್ಧಿಗೆ ‘Airport’ ಅಡ್ಡಿ: ಕಟ್ಟಡಗಳ ಎತ್ತರ ನಿರ್ಬಂಧ ಸಡಿಲಿಕೆಗೆ ರಾಜನಾಥ್ ಸಿಂಗ್‌ಗೆ ಡಿ.ಕೆ. ಶಿವಕುಮಾರ್ ಮನವಿ

    GBA News | ಪಶ್ಚಿಮ ಬೆಂಗಳೂರಿಗರಿಗೆ ಸಿಹಿ ಸುದ್ದಿ: ಗೋವಿಂದರಾಜನಗರದಲ್ಲಿ ಶೀಘ್ರವೇ 100 ಹಾಸಿಗೆಗಳ ‘ಜಯದೇವ’ ಘಟಕ ಉದ್ಘಾಟನೆ

    ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ‘ಜನಿವಾರ’ ವಿವಾದ: ವಿದ್ಯಾರ್ಥಿಗಳ ಧಾರ್ಮಿಕ ಹಕ್ಕಿಗೆ ಚ್ಯುತಿ? ಮೂವರು ಸಸ್ಪೆಂಡ್!!

     ‘ಅಣ್ಣಾವ್ರ’ 97ನೇ ಜನ್ಮದಿನೋತ್ಸವ: ದೊಡ್ಮನೆ ಕುಟುಂಬ ಹಾಗೂ ಅಭಿಮಾನಿಗಳಿಂದ ಭಕ್ತಿಯ ನಮನ

    ಎಸ್‌ಎಸ್‌ಎಲ್‌ಸಿ ಫಲಿತಾಂಶ 2026: ಇತಿಹಾಸದಲ್ಲೇ ಮೊದಲು! 94.10% ರಷ್ಟು ಅಭೂತಪೂರ್ವ ಫಲಿತಾಂಶ; ಬಾಲಕಿಯರದ್ದೇ ಮೇಲುಗೈ

    ಕಾಲೇಜು ಕ್ಯಾಂಪಸ್‌ಗಳಲ್ಲಿ ಮತ್ತೆ ಚುನಾವಣಾ ರಂಗು: ವಿದ್ಯಾರ್ಥಿ ಸಂಘಗಳ ಚುನಾವಣೆ ನಡೆಸಲು ಸರ್ಕಾರ ಮುಂದು

    GBA News | ಇಬ್ಲೂರು ಜಂಕ್ಷನ್ ಸಂಚಾರ ದಟ್ಟಣೆಗೆ ಮುಕ್ತಿ: ಹೆಚ್ಚುವರಿ ಮೇಲ್ಸೇತುವೆ ನಿರ್ಮಾಣಕ್ಕೆ ಜಿಬಿಎ ಮುಂದು

  • Public interest
  • BW Special
  • Life Style
  • Photo Gallery
  • Video
No Result
View All Result

Home BW Special

#SaveSahakaraSarige | Video News | ಮಲೆನಾಡಿನ ಜನರ ಬದುಕಿನ ಬಂಡಿಯಾಗಿದ್ದ ಬಸ್ಸಿನ ರಿಯಲ್ ಸ್ಟೋರಿ : “ರೈಟ್… ರೈಟ್….!!

ಮಲೆನಾಡು ಭಾಗದ 100 ವರ್ಷಗಳ ಸಾರಿಗೆ ಇತಿಹಾಸದ ಪರಿಚಯವನ್ನು ತಮ್ಮ “ರೈಟ್.....ರೈಟ್” ಎಂಬ 49.25 ನಿಮಿಷಗಳ ಸಾಕ್ಷ್ಯಾಚಿತ್ರದಲ್ಲಿ ಅನಾವರಣ ಗೊಳಿಸಿದ್ದಾರೆ ಪ್ರತಿಭಾನ್ವಿತ ಪತ್ರಕರ್ತ, ಬ್ಲಾಗರ್, ಲೇಖಕ ಹಾಗೂ ಕಲಾವಿದ ಸುಘೋಷ್ ನಿಗಳೆ.

by Bengaluru Wire Desk
August 3, 2024
in BW Special, News Wire, Public interest
Reading Time: 2 mins read
1
ರೈಟ್... ರೈಟ್....ಡಾಕ್ಯುಮೆಂಟರಿಯ ಸಾಂದರ್ಭಿಕ ಚಿತ್ರ.

ರೈಟ್... ರೈಟ್....ಡಾಕ್ಯುಮೆಂಟರಿಯ ಸಾಂದರ್ಭಿಕ ಚಿತ್ರ.

ಬೆಂಗಳೂರು, ಆ.3 www.bengaluruwire.com : ಆ ಬಸ್ ಕೇವಲ ಬಸ್ ಮಾತ್ರ ಆಗಿರಲಿಲ್ಲ. ಸಾವಿರಾರು ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ, ವಿಶೇಷಚೇತನರಿಗೆ, ಸ್ವಾತಂತ್ರ್ಯಯೋಧರಿಗೆ ಸಂಪರ್ಕ ಸೇತುವೆಯಾಯಿತು. ಅಷ್ಟೇ ಅಲ್ಲ ಅಂಚೆ ಇಲಾಖೆಯ ಕಾಗದ ಪತ್ರ ಹಾಗೂ ಪಾರ್ಸೆಲ್ ಗಳನ್ನು ದೂರದ ಊರುಗಳಿಗೆ ತಲುಪಿಸಲು ಬೆನ್ನೆಲುಬಾಯಿತು. ಇದರಲ್ಲಿ ಪ್ರಯಾಣಿಸುತ್ತಿದ್ದವರು ಕೇವಲ ಪ್ರಯಾಣಿಕರಾಗಿರಲಿಲ್ಲ. ಇದೊಂದು ಸಾರಿಗೆ ಮನೆಯಾಗಿತ್ತು. ಬಸ್ ಗಳು ಈ ಮನೆಯ ಸದಸ್ಯರಾಗಿದ್ದರು. ಚಾಲಕ ನಿರ್ವಾಹಕರೇ ಮನೆಯ ಯಜಮಾನರಾಗಿದ್ದರು. ಪ್ರಯಾಣಿಕರೆಲ್ಲ ಅತಿಥಿ- ಅಭ್ಯಾಗತರಾಗಿದ್ದರು.

ಇದ್ಯಾವುದಿದು ಕೇಳಲು ವಿಚಿತ್ರವಾಗಿದೆಯಲ್ಲಾ,….ಈಗಿನ ಕಾಲದಲ್ಲಿ ಬಸ್ ಇಷ್ಟೆಲ್ಲಾ ಸೌಲಭ್ಯಗಳನ್ನು ಒದಗಿಸಿ ಜನರ ದೈನಂದಿನ ಅಗತ್ಯಗಳನ್ನು ಪೂರೈಸುತ್ತಾ ಅಂತಾ ಮೂಗಿನ ಮೇಲೆ ಬೆರಳಿಡುವಂತಿದೆ ಅಲ್ವಾ? ಈ ಎಲ್ಲಾ ಅಂಶಗಳು ಮಲೆನಾಡು ಭಾಗದ ಜನರ ಪಾಲಿಗೆ ಅಕ್ಷರಶಃ ನಿಜವಾಗಿತ್ತು. 1991ರಲ್ಲಿ ಹಲವು ಹೋರಾಟಗಳ ಫಲವಾಗಿ ಕಾರ್ಮಿಕರಿಂದಲೇ ಜನ್ಮ ತಾಳಿದ ಸಹಕಾರ ಸಾರಿಗೆ ಟಿಸಿಎಸ್ (TCS) ಅಂತಲೇ ಜನರ ಬಾಯಲ್ಲಿ ಜನಜನಿತವಾಗಿತ್ತು. ಕೊಪ್ಪ-ಶೃಂಗೇರಿ-ತೀರ್ಥಹಳ್ಳಿ-ಚಿಕ್ಕಮಗಳೂರು-ಶಿವಮೊಗ್ಗ ಹೀಗೆ ಮಲೆನಾಡು ಭಾಗದ ಹಳ್ಳಿ ಹಳ್ಳಿಗಳ ಮೂಲೆ ಮೂಲೆಗಳಲ್ಲೂ ಸಂಚರಿಸಿ ಜನರ ಜೀವನಾಡಿಯಾಗಿತ್ತು. ಕೇವಲ ನಾಲ್ಕು ಬಸ್ ಗಳಿಂದ ಜನ್ಮ ತಾಳಿದ ಸಹಕಾರ ಸಾರಿಗೆ 25 ವರ್ಷಗಳಲ್ಲಿ 76 ಬಸ್ ಗಳಿಗೆ ಏರಿಕೆಯಾಯಿತು. ಏಷ್ಯಾ ಖಂಡದಲ್ಲೇ ಸಹಕಾರ ತತ್ವದಡಿಯಲ್ಲಿ ಆರಂಭವಾದ ಮೊದಲ ಸಾರಿಗೆ ಎಂಬ ಪ್ರಖ್ಯಾತಿಗೆ ಕೊಪ್ಪದ ಈ ಸಹಕಾರ ಸಾರಿಗೆ ಸಂಸ್ಥೆ  ಸದ್ಯ ಕಣ್ಣುಮುಚ್ಚಿದೆ.

ಒಂದು ಕಾಲದಲ್ಲಿ ಮಲೆನಾಡಿನ ಸಾರಿಗೆ ಜೀವನಾಡಿಯಾಗಿದ್ದ ಹಸಿರಿನ ವಯ್ಯಾರಿ ಟಿಸಿಎಸ್ ಬಸ್ಸಿನ ಆಗಿನ ಮತ್ತು ಈಗಿನ ಸ್ಥಿತಿ.

ಕುಂಭದ್ರೋಣ ಮಳೆಯ ನಡುವೆ ತಿರುವಿನ ಹಾದಿ :

ಮಲೆನಾಡಿನ ಕುಂಭದ್ರೋಣ ಮಳೆ, ಮಣ್ಣು ಬಿದ್ದ ಹಳ್ಳಿಯ ರಸ್ತೆಗಳು, ಹಠಾತ್ತನೇ ಎದುರಾಗುವ ತಿರುವಿರುವ ದಾರಿಗಳು, ದುರ್ಗಮ ಕಾಡಿನ ನಡುವೆ ಸಂಚರಿಸುತ್ತಾ ಸಾವಿರಾರು ಜನರ ಬದುಕಿಗೆ ಆಸರೆಯಾಗಿದ್ದ ಕೊಪ್ಪದ ಸಹಕಾರ ಸಾರಿಗೆ ಸಂಸ್ಥೆ ಆರಂಭಗೊಂಡು ಅದು ಜನ ಜೀವನದ ಭಾಗವಷ್ಟರ ಮಟ್ಟಿಗೆ ಬೆಳೆದ ಪರಿಯನ್ನು, ಕೊನೆಗೆ ಸಂಸ್ಥೆಯೊಳಗಿನ ವಿವಿಧ ರೀತಿಯ ಬೆಳವಣಿಗೆಗಳಿಂದಾಗಿ ನಷ್ಟದ ಹಾದಿ ಹಿಡಿದು ಕೊನೆಗೆ ಹೇಗೆ ಅಳಿವು ಹೊಂದಿ, ಪುನಶ್ಚೇತನಕ್ಕಾಗಿ ಕಾಯುತ್ತಿರುವ ಹಂತದವರೆಗಿನ ಸುಧೀರ್ಘ ಪರಿಯನ್ನು ಸುಘೋಷ್ ನಿಗಳೆ ( Sughosh Nigale) ಎಂಬುವರು ಸುಮಾರು ಒಂದು ವರ್ಷಗಳ ಕಾಲ ತಮ್ಮ ಬಿಡುವಿಲ್ಲದ ಕಾರ್ಯಗಳ ನಡುವೆ ಇಡೀ ಮಲೆನಾಡು ಭಾಗದ 100 ವರ್ಷಗಳ ಸಾರಿಗೆ ಇತಿಹಾಸದ ಪರಿಚಯವನ್ನು ತಮ್ಮ “ರೈಟ್…..ರೈಟ್” ಎಂಬ 49.25 ನಿಮಿಷಗಳ ಸಾಕ್ಷ್ಯಾಚಿತ್ರದಲ್ಲಿ ಅನಾವರಣ ಗೊಳಿಸಿದ್ದಾರೆ.

ವೃತ್ತಿಪರ ಪತ್ರಕರ್ತರಾಗಿ ವೃತ್ತಿ ಆರಂಭಿಸಿ, ಕನ್ನಡದ ಹಲವು ನಾಟಕ, ಧಾರಾವಾಹಿಗಳಲ್ಲಿ ನಟಿಸುತ್ತಾ ಲೇಖಕ ಹಾಗೂ ಬ್ಲಾಗರ್ ಆಗಿ ಗುರುತಿಸಿಕೊಂಡಿರುವ ಸುಘೋಷ್ ನಿಗಳೆ ತಮ್ಮ “ಕಾಶಿಯಸ್ ಮೈಂಡ್” ( Cautiousmind ) ಬ್ಯಾನರ್ ಅಡಿಯಲ್ಲಿ. ನಿರ್ಮಾಣ, ನಿರ್ದೇಶನ, ಸಾಹಿತ್ಯ, ಹಿನ್ನೆಲೆ ಧ್ವನಿ ನೀಡಿ ಈ ಅತ್ಯುತ್ತಮ ಡಾಕ್ಯುಮೆಂಟರಿಯನ್ನು ಹೊರತಂದಿದ್ದಾರೆ. ಒಟ್ಟಿನಲ್ಲಿ ಕೊಪ್ಪದ, ಮಲೆನಾಡಿನ ಹೆಮ್ಮೆಯ ಸಹಕಾರ ಸಾರಿಗೆ ಸಂಸ್ಥೆ, 29 ವರ್ಷಗಳ ಕಾಲ ವೈಭವದಿಂದ ನಡೆದ ಸಂಸ್ಥೆ ಇಂದು ಮುಚ್ಚಿದೆ. ಸಹಕಾರ ಸಾರಿಗೆ ಹುಟ್ಟಿದ, ಬೆಳೆದ, ಅವನತಿಗೊಂಡ ಕಥನವೇ ಈ ರೈಟ್…ರೈಟ್ ಸಾಕ್ಷ್ಯಾಚಿತ್ರ. ಇತ್ತೀಚೆಗಷ್ಟೇ ಈ ಸಾಕ್ಷ್ಯಾಚಿತ್ರದ ಬೆಂಗಳೂರಿನ ಸುಚಿತ್ರ ಪುರ್ವಂಕರ ಸಿನಿಮಾ ಅಕಾಡೆಮಿಯಲ್ಲಿ ಪ್ರಿಯರ್ ಶೋ ಪ್ರದರ್ಶನಗೊಂಡಾಗ, ಪ್ರೇಕ್ಷಕರಿಂದ ಉತ್ತಮ ಅಭಿಪ್ರಾಯ ವ್ಯಕ್ತವಾಗಿತ್ತು.

ಪತ್ರಕರ್ತ ಹಾಗೂ ರೈಟ್ ರೈಟ್ ಸಾಕ್ಷ್ಯಾಚಿತ್ರದ ನಿರ್ಮಾಣಕಾರ ಸುಘೋಷ್ ನಿಗಳೆ.

ಸಾಕ್ಷ್ಯಾಚಿತ್ರ ನೋಡಿದವರು ಏನಂತಾರೆ? :

ಇದೀಗ ಯೂಟ್ಯೂಬ್ ನಲ್ಲಿ ಅಪಲೋಡ್ ಮಾಡಿದ್ದು, ಯೂಟ್ಯೂಬ್ ಖಾತೆದಾರರು ಈ ಸಾಕ್ಷ್ಯಾಚಿತ್ರದ ಬಗ್ಗೆ ಸಕಾರಾತ್ಮಕ ಅಭಿಪ್ರಾಯ, ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದಾರೆ.

@user-fg9zw1wq8w  ಎಂಬ ಯೂಟ್ಯೂಬ್ ಬಳಕೆದಾರರು ,“ರೈಟ್…..ರೈಟ್” ಸಾಕ್ಷ್ಯಾಚಿತ್ರದ ಬಗ್ಗೆ ನೆಟ್ಟಿನಗರ ಕೆಲವೊಂದು ಅನಿಸಿಕೆ, ಅಭಿಪ್ರಾಯಗಳು ಹೀಗಿದೆ : ತುಂಬಾ ಚನ್ನಾಗಿ ನಮ್ಮೂರಿನ ಹೆಮ್ಮೆ ಆಗಿದ್ದ ಸಹಕಾರ ಸಾರಿಗೆ ಸಂಸ್ಥೆಯ ವೈಭವನ್ನ ಹಾಗೂ ಸಂಸ್ಥೆ ತನ್ನ ಕಛೇರಿಗೇ ಬೀಗ ಹಾಕುವವರೆಗೆ ಹಾಗೆಯೇ ಹಾಕಿದ ಬೀಗ ವನ್ನ ತೆರೆಯಲು ಇರುವ ಸವಾಲುಗಳನ್ನ ತುಂಬಾ ಚೆನ್ನಾಗಿ ವಿಶ್ಲೇಸಿದ್ದೀರಿ…  ನಿಮ್ಮೆಲ್ಲಾ ಮಾಹಿತಿಗೆ ಧನ್ಯವಾದಗಳು. ಏನೇ ಆಗಲಿ ನಮ್ಮ ಕೊಪ್ಪದ ಊರಿನ ವೈಭವ ಆದಷ್ಟು ಬೇಗ ಮರುಕಳಿಸಲಿ… ನನಗೂ ಕೂಡ ಸಹಕಾರ ಸಾರಿಗೆಯ ಬಸ್ ಪಾಸ್ ಕಾಲೇಜು ವಿದ್ಯಾಭ್ಯಾಸವನ್ನ ಪೂರ್ಣಗೊಳಿಸಲು.. (ಸಹಕಾರ ಸಾರಿಗೆ )ಸಹಕರಿಸಿತ್ತು…” ಎಂದು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ಬೆಂಗಳೂರಿನ ಸುಚಿತ್ರ ಪುರ್ವಂಕರ ಸಿನಿಮಾ ಅಕಾಡೆಮಿಯಲ್ಲಿ ಪ್ರಿಮಿಯರ್ ಶೋ ಪ್ರದರ್ಶನ ಏರ್ಪಡಿಸಿದ ಸಂದರ್ಭ

ಇನ್ನು ಮತ್ತೊಂದು ಖಾತೆದಾರರಾದ @udayakumar7834 “ರೈಟ್….ರೈಟ್ ನಿಂದ ಸ್ಟಾಪ್ ಸ್ಟಾಪ್ ವರೆಗೆ ನಮ್ಮೂರಿನ ಹೆಮ್ಮೆಯ ಸಹಕಾರ ಸಾರಿಗೆ ಕುರಿತಾದ ಸಾಕ್ಷ್ಯಚಿತ್ರ ಬಹಳ ಸುಂದರವಾಗಿ ಮೂಡಿಬಂದಿದೆ. ಸಹಕಾರ ಸಾರಿಗೆ ಸಂಸ್ಥೆಯ ಉಗಮ..ಏಳ್ಗೆ…ಮತ್ತು  ಅವಸಾನ ಎಲ್ಲವನ್ನೂ ವಿಷಯಾಧಾರಿತವಾಗಿ ಬಿತ್ತರಿಸಲಾಗಿದೆ. ಪೀಠಿಕೆಯಾಗಿ ಕೊಪ್ಪ ಹಾಗೂ ಮಲೆನಾಡಿನ ಸೊಬಗನ್ನು ಚಿತ್ರೀಕರಿಸಿರುವುದು ಸಾಕ್ಷ್ಯಚಿತ್ರಕ್ಕೆ ಮೆರುಗನ್ನು ನೀಡಿದೆ. ಈ ಸಂಸ್ಥೆಗೂ ಮುಂಚಿನ ಶಂಕರ್ ಟ್ರಾನ್ಸ್ ಪೋರ್ಟ್ ಮತ್ತು ಶಾರದಾ ಮೋಟಾರ್ಸ್ ವಿಚಾರಗಳು ಉಲ್ಲೇಖನೀಯ.  ನಮ್ಮ ಕುಟುಂಬದ ಹಿರಿಯರಾದ ದಿವಂಗತ ಮಾಧವರಾಯರ ಹೆಸರು ಪ್ರಸ್ತಾಪವಾಗಿದ್ದು ಸಂತಸ ತಂದಿದೆ. ಶಂಕರ್ ಟ್ರಾನ್ಸ್ ಪೋರ್ಟ್ ನ ಮಾಲೀಕರಾಗಿದ್ದ ಕೊಪ್ಪದ ಹೆಮ್ಮೆಯ ಶ್ರೀಯುತ ರಮೇಶರಾವ್ ರವರ ಸಂದರ್ಶನವಿದ್ದಿದ್ದರೆ ಒಳ್ಳೆಯದಿತ್ತು.”

“ಸಹಕಾರ ಸಾರಿಗೆಯ ಸಂಕಷ್ಟ ಪರಿಹಾರಕ್ಕೆ ವಿಪ್ರ ನೌಕರರ ಸಂಘವೂ  ಸೇರಿದಂತೆ ಅನೇಕ ಸಂಘ ಸಂಸ್ಥೆಗಳು ಜನ ಪ್ರತಿನಿಧಿಗಳು ತಮ್ಮ ಕೈಲಾದ ಪ್ರಯತ್ನಗಳನ್ನು ಮಾಡಿದಾಗ್ಯೂ ಈ ನಮ್ಮ ಸಂಸ್ಥೆಯನ್ನು ಉಳಿಸಿಕೊಳ್ಳಲಾಗಲಿಲ್ಲ ಎಂಬ ಕೊರಗು ಎಲ್ಲರಿಗೂ ಇದೆ. ಸಹಕಾರ ಸಾರಿಗೆಯ ಬಸ್ಸುಗಳು ಇಲ್ಲದೇ ಕೊಪ್ಪ ಬಸ್ ನಿಲ್ದಾಣ ಬಿಕೋ ಎನ್ನುತ್ತಿದೆ. ಮಲೆನಾಡಿನ ರಸ್ತೆಗಳು ಸಾರಿಗೆ ಬಸ್ಸುಗಳು ಇವತ್ತು ಬರಬಹುದು ನಾಳೆ ಬರಬಹುದು ಎಂದು ಕಾಯುತ್ತಲೇ ಇವೆ. ನಿಮ್ಮ ಈ ಸಾಕ್ಷ್ಯಚಿತ್ರವನ್ನು ನೋಡಿ ಯಾರಾದರೂ ಮಹನೀಯರು ದೊಡ್ಡ ಮನಸ್ಸು ಮಾಡಿ ಹೆಮ್ಮೆಯ ಸಹಕಾರ ಸಾರಿಗೆಗೆ ಕಾಯಕಲ್ಪ ನೀಡುವಂತಾಗಲಿ ಎಂದು ಹೃದಯ ಪೂರ್ವಕವಾಗಿ ಆಶಿಸುತ್ತೇನೆ” ಎಂದು ಹೇಳಿದ್ದಾರೆ.

@vasudev8885 ಎಂಬುವರು, “ಸುಘೋಷ್ ಸಾರ್  ಮಲೆನಾಡಿನ ರಸ್ತೆ ರಾಜ ನ ಚಿತ್ರಣ  ಚೆನ್ನಾಗಿ ಮೂಡಿ ಬಂದಿದೆ” ಎಂದು ಹೇಳಿದ್ದಾರೆ.

ಒಟ್ಟಾರೆ ಮಲೆನಾಡಿನ ಜನರ ವ್ಯಾಪಾರ- ವಹಿವಾಟು, ದೈನಂದಿನ ಓಡಾಟದ ಜೀವನ, ಶಾಲೆ- ಕಾಲೇಜು ವಿದ್ಯಾರ್ಥಿಗಳ ಮಿತ್ರನಾಗಿ ಹಳ್ಳಿಯ ಮುಗ್ಧ ಜನರ ಬದುಕಿ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಕಾರಣವಾದ ಕೊಪ್ಪದ ಸಹಕಾರ ಸಾರಿಗೆ ಸಂಸ್ಥೆ ಟಿಸಿಎಸ್ ಮತ್ತೆ ಆರಂಭವಾಗಲು ಸರ್ಕಾರದ ಸಹಾಯ ಹಸ್ತ ಶೀಘ್ರದಲ್ಲೇ ದೊರೆಯಬೇಕು ಎಂಬ ಆಗ್ರಹವು ಎಲ್ಲೆಡೆಯಿಂದ ವ್ಯಕ್ತವಾಗಿದೆ. ಈ ನಿಟ್ಟಿನಲ್ಲಿ ಯಶಸ್ಸಾದರೆ ಸುಘೋಷ್ ನಿಗಳೆಯವರು ನಿರ್ಮಿಸಿದ “ರೈಟ್…..ರೈಟ್” ಡಾಕ್ಯುಮೆಂಟರಿ ಸಾರ್ಥಕತೆ ಪಡೆದುಕೊಳ್ಳುತ್ತದೆ.

“ಬೆಂಗಳೂರು ವೈರ್” ಡಿಜಿಟಲ್ ವೆಬ್ ನ್ಯೂಸ್ ಪೋರ್ಟೆಲ್ಲಿನ ಸೋಶಿಯಲ್ ಮೀಡಿಯಾ ಪೇಜ್ ಹಾಗೂ Google News ಗಳಿಗೆ ಉಚಿತವಾಗಿ Subscribe ಆಗಲು Facebook, Telegram, Twitter, Youtube, Whatsup Channel ಗೆ ಜಾಯಿನ್ ಆಗಲು ಇವುಗಳ ಲಿಂಕ್ ಮೇಲೆ ಕ್ಲಿಕ್ ಮಾಡಿ.

Previous Post

PRCI STATE AWARD 2024 | ನಿಮ್ಮ ಬೆಂಗಳೂರು ವೈರ್ ಮುಡಿಗೆ,  ಭಾರತೀಯ ಸಾರ್ವಜನಿಕ ಸಂಪರ್ಕ ಮಂಡಳಿ 2024ರ “ರಾಜ್ಯ ಮಟ್ಟದ ಸಂವಹನ ಪ್ರಶಸ್ತಿ”ಯ ಕಿರೀಟ

Next Post

ದೊಡ್ಡಕಲ್ಲಸಂದ್ರ ಮೆಟ್ರೊ ನಿಲ್ದಾಣದಲ್ಲಿ ಹಳಿಗೆ ಹಾರಿ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಶರಣು ; 3 ಗಂಟೆ ಸಂಚಾರ ಸ್ಥಗಿತ

Next Post

ದೊಡ್ಡಕಲ್ಲಸಂದ್ರ ಮೆಟ್ರೊ ನಿಲ್ದಾಣದಲ್ಲಿ ಹಳಿಗೆ ಹಾರಿ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಶರಣು ; 3 ಗಂಟೆ ಸಂಚಾರ ಸ್ಥಗಿತ

Viral Video | ಬೆಂಗಳೂರು : ಆ ಕಳ್ಳ ಮನೆಯೊಳಗೆ ಹೊಕ್ಕಿ ಚಿನ್ನಾಭರಣ ಕಳ್ಳತನ ಮಾಡಿಲ್ಲ ; ಬಹಳ ಹುಡುಕಿ ಆತ ಕದ್ದು ಹೋಗಿದ್ದೇನು ಗೊತ್ತಾ?

Please login to join discussion

Like Us on Facebook

Follow Us on Twitter

Recent News

ಶ್ವೇತಭವನದ ಔತಣಕೂಟದಲ್ಲಿ ಗುಂಡಿನ ಸದ್ದು: ಕೂದಲೆಳೆ ಅಂತರದಲ್ಲಿ ಪಾರಾದ ಡೊನಾಲ್ಡ್ ಟ್ರಂಪ್ ದಂಪತಿ

April 26, 2026

Science Research News | ಧ್ಯಾನದಿಂದ ಮೆದುಳಿನ ಶಕ್ತಿ ವೃದ್ಧಿ: ವಯಸ್ಸಾಗುವಿಕೆಗೆ ಬ್ರೇಕ್ ಹಾಕಲಿದೆ ಐಐಎಸ್‌ಸಿ ಸಂಶೋಧನೆ!

April 26, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

ಶ್ವೇತಭವನದ ಔತಣಕೂಟದಲ್ಲಿ ಗುಂಡಿನ ಸದ್ದು: ಕೂದಲೆಳೆ ಅಂತರದಲ್ಲಿ ಪಾರಾದ ಡೊನಾಲ್ಡ್ ಟ್ರಂಪ್ ದಂಪತಿ

April 26, 2026

Science Research News | ಧ್ಯಾನದಿಂದ ಮೆದುಳಿನ ಶಕ್ತಿ ವೃದ್ಧಿ: ವಯಸ್ಸಾಗುವಿಕೆಗೆ ಬ್ರೇಕ್ ಹಾಕಲಿದೆ ಐಐಎಸ್‌ಸಿ ಸಂಶೋಧನೆ!

April 26, 2026

GBA News | ಬೆಂಗಳೂರು ದಕ್ಷಿಣ ಪಾಲಿಕೆ ಅಭಿವೃದ್ಧಿಗೆ ತಜ್ಞರ ಸಲಹಾ ಸಮಿತಿ ರಚನೆ: ಆಯುಕ್ತ ಕೆ.ಎನ್. ರಮೇಶ್

April 25, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group