Monday, August 3, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ಡಿ.ಕೆ. ಶಿವಕುಮಾರ್ ಸಂಪುಟ ವಿಸ್ತರಣೆ: ಇಂದು 20 ನೂತನ ಸಚಿವರ ಪ್ರಮಾಣ ವಚನ, ಇಲ್ಲಿದೆ ಎಐಸಿಸಿ ಅಧಿಕೃತ ಪಟ್ಟಿ

    ಕರುನಾಡಲ್ಲಿ ವರುಣನ ಆರ್ಭಟ: ಭರ್ತಿಯಾಗುತ್ತಿರುವ ಜಲಾಶಯಗಳು, ಮೈದುಂಬಿ ಹರಿಯುತ್ತಿರುವ ನದಿಗಳು

    BDA News | ಬಿಡಿಎ ಲಂಚಾವತಾರ: ಎನ್‌ಪಿಕೆಎಲ್ ರೈತರಿಗೆ ನಿವೇಶನ ನೀಡಲು ಲಂಚ ಕೇಳಿದ ಎಇಇ, ನೋಟಿಸ್ ಜಾರಿ

    KEA ಗ್ರಾಮ ಆಡಳಿತ ಅಧಿಕಾರಿ ಹುದ್ದೆ: ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ

    ​ಪೇಪರ್ ಲೀಕ್ ತಡೆಗೆ ಹೊಸ ಅಸ್ತ್ರ: ಸಂಸತ್ತಿನಲ್ಲಿ ಅಂಗೀಕಾರಗೊಂಡಿತು ಕಠಿಣ ವಿಧೇಯಕ

    ಆ. 15ರಿಂದ ಸ್ವಿಗ್ಗಿ ಸೇವೆ ಸ್ಥಗಿತ? ಆನ್‌ಲೈನ್ ಆಹಾರ ನೀಡಿಕೆ ಸಂಸ್ಥೆ ವಿರುದ್ಧ ಬೆಂಗಳೂರು ಹೋಟೆಲುಗಳ ಸಂಘದ ಖಡಕ್ ಎಚ್ಚರಿಕೆ

    1200 ಬೋರ್‌ವೆಲ್‌ಗಳಿಗೆ ಮರುಜೀವ: ತಮಿಳುನಾಡು ಐಎಎಸ್ ಅಧಿಕಾರಿಗೆ ನಟ ಮಾಧವನ್ ಸಲಾಂ

    Indian billionaires Increased | ಭಾರತದಲ್ಲಿ ಬಿಲಿಯನೇರ್‌ಗಳ ಸಂಖ್ಯೆ 4 ಪಟ್ಟು ಹೆಚ್ಚಳ: 576ಕ್ಕೆ ಏರಿಕೆ

    BIG BREAKING NEWS | ಮೇಕೆದಾಟು ಯೋಜನೆ: ನೆರೆ ರಾಜ್ಯಗಳ ಒಪ್ಪಿಗೆ ಅಗತ್ಯವಿಲ್ಲ, ಕೇಂದ್ರ ಸರ್ಕಾರದ ಸ್ಪಷ್ಟನೆ

  • Bengaluru Focus

    ಗಾಂಧಿನಗರ: ‘ಬೆಂಗಳೂರು ಪೇಟೆ’ ಪ್ರದೇಶದಲ್ಲಿ ಅಗ್ನಿ ಅವಘಡ ನಿಯಂತ್ರಣಕ್ಕೆ ನಗರದ ಪ್ರಥಮ ‘ಫೈರ್ ಹೈಡ್ರೆಂಟ್’ ವ್ಯವಸ್ಥೆ ಲೋಕಾರ್ಪಣೆ

    ಮತದಾರರ ಪಟ್ಟಿ ಪರಿಶೀಲನೆ ಸಾಂದರ್ಭಿಕ ಚಿತ್ರ

    GBA News | ಮತದಾರರ ಪಟ್ಟಿ ಪರಿಷ್ಕರಣೆ: ಆಗಸ್ಟ್ 8 ಕಡೇ ದಿನ, ಸಮಸ್ಯೆ ಇದ್ದರೆ 1950ಗೆ ಕರೆ ಮಾಡಿ

    GBA News | ​ಕಗ್ಗದಾಸಪುರದಲ್ಲಿ ಟ್ರಾಫಿಕ್ ಜಾಮ್‌ಗೆ ಮುಕ್ತಿ: ಪೂರ್ವ ಪಾಲಿಕೆಯಿಂದ ಇ.ಇ.ಎಫ್.ಸಿ ಯೋಜನೆ ಯಶಸ್ವಿ

    Lokayukta News | ಪಾಲಿಕೆಯೇ ಟಿಪ್ಪರ್ ಖರೀದಿಸಿ ಕಸ ವಿಲೇವಾರಿ ಮಾಡಲಿ: 5 ನಗರ ಪಾಲಿಕೆಗಳಿಗೆ ಲೋಕಾಯುಕ್ತರ ಖಡಕ್ ಸೂಚನೆ

    BDA News | ಬಿಡಿಎ ಲಂಚಾವತಾರ: ಎನ್‌ಪಿಕೆಎಲ್ ರೈತರಿಗೆ ನಿವೇಶನ ನೀಡಲು ಲಂಚ ಕೇಳಿದ ಎಇಇ, ನೋಟಿಸ್ ಜಾರಿ

    ಆಗಸ್ಟ್ 1 ರಿಂದ ಬೆಂಗಳೂರಿನಲ್ಲಿ ‘ತ್ಯಾಜ್ಯದಿಂದ ಸ್ವಾತಂತ್ರ್ಯ’ ಅಭಿಯಾನ: 22 ಸಾವಿರ ಟನ್ ಪಾರಂಪರಿಕ ಕಸ ತೆರವು

    ​ಬೆಳ್ಳಂದೂರು ಎಸ್‌ಟಿಪಿ ಪ್ರಕರಣ: ತನಿಖೆ ಮುಂದುವರಿಕೆ, ಕಾರ್ಮಿಕರ ಸುರಕ್ಷತೆಗೆ ಜಲಮಂಡಳಿ ಒತ್ತು

    BWSSB Head Office

    BWSSB News | ಬೆಂಗಳೂರು: ಜು. 31ರಂದು ಈ ಪ್ರದೇಶಗಳಲ್ಲಿ 15 ಗಂಟೆ ಕಾವೇರಿ ನೀರು ಇರಲ್ಲ

    ಈ ವಾರವೇ ಸಚಿವ ಸಂಪುಟ ವಿಸ್ತರಣೆ ಪೂರ್ಣ: ಸಿಎಂ ಡಿ.ಕೆ. ಶಿವಕುಮಾರ್

  • Public interest
  • BW Special
  • Life Style
  • Photo Gallery
  • Video
No Result
View All Result

Home Bengaluru Focus

Nehru Planetarium New Show On Sun And Its Family | ಸೌರವ್ಯೂಹದ ಖಗೋಳ ಪ್ರವಾಸಕ್ಕೆ ಸಿದ್ಧರಾಗಿ : ನೆಹರು ಪ್ಲಾನಿಟೋರಿಯಂ ನಲ್ಲಿ ಮೇ.9ರಿಂದ ಹೊಸ ಆಕಾಶ ಮಂದಿರ ಪ್ರದರ್ಶನ ಆರಂಭ

ನಿಬ್ಬೆರಗಾಗಿಸುವ ಬುಧ ಗ್ರಹದ ಬರಡಾದ ನೆಲ, ದಟ್ಟವಾದ ಮೋಡಗಳಿಂದ ಆವೃತವಾಗಿರುವ ಶುಕ್ರ ಗ್ರಹದ ಮೇಲೆ, ಅತ್ಯಂತ ಕುತೂಹಲಕಾರಿ ಕೆಂಪು ಗ್ರಹ- ಮಂಗಳ, ಬೃಹತ್ ಗಾತ್ರದ ಗುರು ಗ್ರಹ, ಮನೋಹರವಾದ ಉಂಗುರ ವ್ಯವಸ್ಥೆಯಿಂದ ಕೂಡಿರುವ ಶನಿ ಗ್ರಹ ಮತ್ತಿತರ ಸೌರವ್ಯೂಹ ಖಗೋಳ ಕೌತುಕ ಸ್ಕೈ ಥಿಯೇಟರ್ ನಲ್ಲಿ ಅನಾವರಣವಾಗಲಿದೆ.

by Bengaluru Wire Desk
May 8, 2024
in Bengaluru Focus, Public interest
Reading Time: 2 mins read
0
ಸ್ಕೈ ಥಿಯೇಟರ್ ಮಂದಿರದ ಸಾಂದರ್ಭಿಕ ಚಿತ್ರ.

ಸ್ಕೈ ಥಿಯೇಟರ್ ಮಂದಿರದ ಸಾಂದರ್ಭಿಕ ಚಿತ್ರ.

ಬೆಂಗಳೂರು, ಮೇ.08 www.bengaluruwire.com : ಆಕಾಶ ಎಂದರೆ ಅದು ಕುತೂಹಲಗಳ ಆಗರ. ಸೂರ್ಯ, ಅದರ ಸುತ್ತ ಸುತ್ತುವ ಗ್ರಹಗಳು, ನಕ್ಷತ್ರ, ಕ್ಷುದ್ರಗ್ರಹಗಳು, ಆಕಾಶ ಕಾಯಗಳು ಹೀಗೆ ಒಂದಾ ಎರಡಾ ಪ್ರತಿಯೊಂದರ ಹಿಂದೆಯೂ ಗತಕಾಲದ ಪುರಾಣ, ಇತಿಹಾಸ, ದಂತಕಥೆಗಳು, ವೈಜ್ಞಾನಿಕ ಯುಗದಲ್ಲಿ ಖಗೋಳ ಸಂಶೋಧನೆಗಳು ನಡೆದಿವೆ.

ಇವೆಲ್ಲದರ ಬಗ್ಗೆ ಚರ್ಚಿಸುತ್ತಾ ಚಿತ್ರ, ದೃಶ್ಯ ಸಹಿತ ಮಾಹಿತಿಗಳು, ಅದ್ಭುತ ಆನಿಮೇಶನ್ ಗಳನ್ನು ಒಳಗೊಂಡ “ನಮ್ಮ ಸೂರ್ಯ ಹಾಗೂ ಅದರ ಪರಿವಾರ” ಎಂಬ ಕುರಿತ ನೂತನ ಆಕಾಶ ಮಂದಿರ ಪ್ರದರ್ಶನವನ್ನು ನಾಳೆಯಿಂದ (ಮೇ.9) ಜವಾಹರಲಾಲ್ ನೆಹರು ಪ್ಲಾನಿಟೋರಿಯಂ ನಲ್ಲಿ ಆರಂಭಿಸಲಾಗುತ್ತಿದೆ.

ಒಟ್ಟು 40 ನಿಮಿಷಗಳ “ನಮ್ಮ ಸೂರ್ಯ ಹಾಗೂ ಅದರ ಪರಿವಾರ” ಎಂಬ ಆಕಾಶ ಮಂದಿರ ಪ್ರದರ್ಶನದಲ್ಲಿ ಸೌರವ್ಯೂಹದ ಸಮಸ್ತ ಕಾಯಗಳ ಖಗೋಳೀಯ ಪ್ರವಾಸಕ್ಕೆ ಕುಳಿತಲ್ಲಿಂದಲೇ ದೃಕ್ ಶ್ರವಣ ಪ್ರದರ್ಶನದ ಮೂಲಕ ಕರೆದೊಯ್ಯುವ ವ್ಯವಸ್ಥೆಯನ್ನು ನೆಹರು ಪ್ಲಾನಿಟೋರಿಯಂ ವಿಜ್ಞಾನಿಗಳು ಮಾಡಿದ್ದಾರೆ. ನಮ್ಮ ಸೂರ್ಯ ಮತ್ತು ಅದರ ಕುಟುಂಬದ ಸದಸ್ಯರುಗಳ ಕುರಿತ ಹಲವು ಆಸಕ್ತಿದಾಯಕ ಅಂಶಗಳನ್ನು ಪರಿಚಯಿಸುವ ಪ್ರಯತ್ನ ಇದಾಗಿದೆ ಎಂದು ಪ್ಲಾನಿಟೋರಿಯಂನ ನಿರ್ದೇಶಕ ಡಾ.ಬಿ.ಆರ್.ಗುರುಪ್ರಸಾದ್ ಹೇಳಿದ್ದಾರೆ.

ಸೌರವ್ಯೂಹದ ಗ್ರಹಗಳ ಚಿತ್ರ.

ನಮ್ಮ ಸೌರವ್ಯೂಹದ ಎಂಟು ಗ್ರಹಗಳ ಕುರಿತಾದ ಆಸಕ್ತಿದಾಯಕ ವಿಚಾರಗಳು, ಕ್ಷುದ್ರ ಗ್ರಹಗಳು, ಕೈಪರ್ ಪಟ್ಟಿಯ ಕಾಯಗಳು, ‘ಊರ್ಟ್ ಮೋಡ’ ದಿಂದ ಬರುವ ಧೂಮಕೇತುಗಳು, ಇತ್ಯಾದಿ ಕುತೂಹಲಕಾರಿ ವಿಷಯಗಳನ್ನು ರಮಣೀಯ ದೃಶ್ಯಾವಳಿಗಳು ಮತ್ತು ಅದ್ಭುತ ಅನಿಮೇಶನ್ ಗಳ ಮೂಲಕ ಈ ಪ್ರದರ್ಶನದಲ್ಲಿ ಪ್ರಸ್ತುತಪಡಿಸಲಾಗಿದೆ. ಚಂದ್ರ, ಮಂಗಳಗ್ರಹ ಮತ್ತು ಸೂರ್ಯ, ಈ ಆಕಾಶಕಾಯಗಳನ್ನು ಹಾಗೂ ವಿಶ್ವವನ್ನು ಅನ್ವೇಷಿಸುವುದಕ್ಕೆ ಸಂಬಂಧಿಸಿದಂತೆ ಕಳೆದ ಎರಡು ದಶಕಗಳಲ್ಲಿ ಭಾರತ ಮಾಡಿರುವ ಪ್ರಮುಖವಾದ ಸಾಧನೆಗಳ ಹಿನ್ನೆಲೆಯಲ್ಲಿ “ನಮ್ಮ ಸೂರ್ಯ ಹಾಗೂ ಅದರ ಪರಿವಾರ” ಆಕಾಶ ಮಂದಿರ ಪ್ರದರ್ಶನವು ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತದೆ.

ಸೌರವ್ಯೂಹದ ನಿಬ್ಬೆರಗಾಗಿಸುವ ಮಾಹಿತಿ ಕಣಜ :

ನಿಬ್ಬೆರಗಾಗಿಸುವ ಬುಧ ಗ್ರಹದ ಬರಡಾದ ನೆಲ, ದಟ್ಟವಾದ ಮೋಡಗಳಿಂದ ಆವೃತವಾಗಿರುವ ಶುಕ್ರ ಗ್ರಹದ ಮೇಲೆ, ಜೀವಿಗಳನ್ನು ಪೋಷಿಸುತ್ತಿರುವ ಸುಂದರ ವಸುಂಧರೆ- ನಮ್ಮ ಭೂಮಿ, ಭೂಮಿಯ ಏಕೈಕ ನೈಸರ್ಗಿಕ ಉಪಗ್ರಹವಾದ ನಮ್ಮ ಚಂದ್ರ, ಅತ್ಯಂತ ಕುತೂಹಲಕಾರಿ ಕೆಂಪು ಗ್ರಹ- ಮಂಗಳ, ಬೃಹತ್ ಗಾತ್ರದ ಗುರು ಗ್ರಹ, ಮನೋಹರವಾದ ಉಂಗುರ ವ್ಯವಸ್ಥೆಯಿಂದ ಕೂಡಿರುವ ಶನಿ ಗ್ರಹ, ದೂರದ ಹಿಮದೈತ್ಯಗಳಾದ ಯುರೇನಸ್ ಮತ್ತು ನೆಪ್ಚೂನ್ ಗಳು – ನಮ್ಮ ಸೌರವ್ಯೂಹದ ಗ್ರಹಗಳಲ್ಲಿನ ಈ ವೈವಿಧ್ಯವನ್ನು ಆಕಾಶ ಮಂದಿರದ ಗೋಳದ ಮೇಲೆ ಆಸ್ವಾದಿಸುವ ಅನುಭವ ಈ ಪ್ರದರ್ಶನದಲ್ಲಿ ಸಿಗಲಿದೆ. ಈ ಗ್ರಹ ಪರಿವಾರದ ಒಡೆಯ ನಮ್ಮ ಸೂರ್ಯ. ಈ ಬೃಹತ್ ಅನಿಲ ಗೋಳದ ಹಲವು ಸ್ವಾರಸ್ಯಕರ ವಿಚಾರಗಳನ್ನು ಈ ಪ್ರದರ್ಶನದಲ್ಲಿ ಚರ್ಚಿಸಲಾಗಿದೆ. ನಮ್ಮ ಸೌರವ್ಯೂಹಕ್ಕೆ ಅಪರೂಪಕ್ಕೊಮ್ಮೆ ಬಂದು ಹೋಗುವ ಅತಿಥಿಗಳಾದ ಧೂಮಕೇತುಗಳ ಕುರಿತ ಹಲವು ಕುತೂಹಲಕಾರಿ ಅಂಶಗಳನ್ನೂ ಈ ಪ್ರದರ್ಶನ ಒಳಗೊಂಡಿದೆ.

ನೆಹರು ಪ್ಲಾನಿಟೋರಿಯಂ ನೂತನ ಪ್ರದರ್ಶನಕ್ಕೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ರಾಮನ್ ಸಂಶೋಧನಾ ಸಂಸ್ಥೆಯ ನಿರ್ದೇಶಕ ಪ್ರೊ.ತರುಣ್ ಸೌರದೀಪ್, ಇಸ್ರೋ ಮಾಜಿ ಅಧ್ಯಕ್ಷ ಎ.ಎಸ್.ಕಿರಣ್ ಕುಮಾರ್, ಪ್ಲಾನಿಟೋರಿಯಂನ ನಿರ್ದೇಶಕ ಡಾ.ಬಿ.ಆರ್.ಗುರುಪ್ರಸಾದ್ ಹಾಗೂ ಮಾಜಿ ನಿರ್ದೇಶಕ ಪ್ರಮೋದ್ ಗಲಗಲಿ ಮಾತನಾಡಿದರು.

ಈ ನೂತನ ಸ್ಕೈ ಥಿಯೇಟರ್ ಟೂರ್ (ಆಕಾಶ ಮಂದಿರ ಪ್ರದರ್ಶನ) ಕಾರ್ಯಕ್ರಮಕ್ಕೆ ಇಂದು ಚಾಲನೆ ದೊರೆಯಿತು. ಕಾರ್ಯಕ್ರಮದಲ್ಲಿ ರಾಮನ್ ಸಂಶೋಧನಾ ಸಂಸ್ಥೆಯ ನಿರ್ದೇಶಕ ಪ್ರೊ.ತರುಣ್ ಸೌರದೀಪ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರೆ, ಇಸ್ರೋ ಮಾಜಿ ಅಧ್ಯಕ್ಷ ಹಾಗೂ ಬೇಸ್ ಕೌನ್ಸಿಲ್ ಅಧ್ಯಕ್ಷರಾದ ಎ.ಎಸ್.ಕಿರಣ್ ಕುಮಾರ್ ಅಧ್ಯಕ್ಷತೆವಹಿಸಿದ್ದರು. ಇದೇ ಸಂದರ್ಭದಲ್ಲಿ ಇಬ್ಬರೂ ಅತಿಥಿಗಳು ಖಗೋಳ ವಿಜ್ಞಾನದ ಪ್ರಾಮುಖ್ಯತೆ ಬಗ್ಗೆ ತಿಳಿಸಿದರು. ನೆಹರು ಪ್ಲಾನಿಟೋರಿಯಂ ಮಾಜಿ ನಿರ್ದೇಶಕ ಪ್ರಮೋದ್ ಗಲಗಲಿಯವರು ಆಕಾಶ ಮಂದಿರದ ಪ್ರದರ್ಶನದ ಬಗ್ಗೆ ಮಾತನಾಡಿದರು.

ಪ್ರದರ್ಶನ ದಿನ ಮತ್ತು ಸಮಯ ಈ ರೀತಿಯಿದೆ :

ಪ್ರತಿದಿನ (ಪ್ರತಿ ಸೋಮವಾರ ಮತ್ತು ಪ್ರತಿ ತಿಂಗಳ ಎರಡನೇ ಮಂಗಳವಾರ ಹೊರತಾಗಿ) ಮಧ್ಯಾಹ್ನ 12.30ರಿಂದ 1.30ರ ತನಕ ಇಂಗ್ಲೀಷ್ ಪ್ರದರ್ಶನ, ಮಧ್ಯಾಹ್ನ 2.30ರಿಂದ 3.30ರ ವರೆಗಿನ ಅವಧಿಯಲ್ಲಿ ಕನ್ನಡ ಭಾಷೆಯಲ್ಲಿ ಈ ಆಕಾಶ ಮಂದಿರದ ಪ್ರದರ್ಶನ ಇರಲಿದೆ.

“ಬೆಂಗಳೂರು ವೈರ್” ಡಿಜಿಟಲ್ ವೆಬ್ ನ್ಯೂಸ್ ಪೋರ್ಟೆಲ್ಲಿನ ಸೋಶಿಯಲ್ ಮೀಡಿಯಾ ಪೇಜ್ ಹಾಗೂ Google News ಗಳಿಗೆ ಉಚಿತವಾಗಿ Subscribe ಆಗಲು Facebook, Telegram, Twitter, Dailyhunt, Youtube, Whatsup Channel ಗೆ ಜಾಯಿನ್ ಆಗಲು ಇವುಗಳ ಲಿಂಕ್ ಮೇಲೆ ಕ್ಲಿಕ್ ಮಾಡಿ.

WhatsApp Join our WhatsApp Channel
Previous Post

CBI Court | ಲಂಚ ಪ್ರಕರಣದಲ್ಲಿ ದೋಷಿ : ಜಿಎಸ್ ಟಿ ಅಧೀಕ್ಷರಾಗಿದ್ದವರಿಗೆ 3 ವರ್ಷ ಜೈಲು ಶಿಕ್ಷೆ, 5 ಲಕ್ಷ ರೂ. ದಂಡ ವಿಧಿಸಿದ ಸಿಬಿಐ ನ್ಯಾಯಾಲಯ

Next Post

Karnataka SSLC Results | ಎಸ್ ಎಸ್ ಎಲ್ ಸಿ ಫಲಿತಾಂಶ ಇಂದು ಪ್ರಕಟ : ವಿದ್ಯಾರ್ಥಿಗಳು, ಪೋಷಕರು ಪರೀಕ್ಷೆ ಫಲಿತಾಂಶ ಹೀಗೆ ನೋಡಬಹುದು

Next Post

Karnataka SSLC Results | ಎಸ್ ಎಸ್ ಎಲ್ ಸಿ ಫಲಿತಾಂಶ ಇಂದು ಪ್ರಕಟ : ವಿದ್ಯಾರ್ಥಿಗಳು, ಪೋಷಕರು ಪರೀಕ್ಷೆ ಫಲಿತಾಂಶ ಹೀಗೆ ನೋಡಬಹುದು

#Googlewallet | ಗೂಗಲ್ ವ್ಯಾಲೆಟ್ ಎಂಬ ನೂತನ ಅಪ್ಲಿಕೇಶನ್ ಭಾರತದಲ್ಲಿ ಬಿಡುಗಡೆ : ಗೂಗಲ್ ಕಲ್ಪಿಸಿರುವ ಸೌಲಭ್ಯಗಳೇನು ಗೊತ್ತಾ?

Please login to join discussion

Like Us on Facebook

Follow Us on Twitter

Recent News

ಗಾಂಧಿನಗರ: ‘ಬೆಂಗಳೂರು ಪೇಟೆ’ ಪ್ರದೇಶದಲ್ಲಿ ಅಗ್ನಿ ಅವಘಡ ನಿಯಂತ್ರಣಕ್ಕೆ ನಗರದ ಪ್ರಥಮ ‘ಫೈರ್ ಹೈಡ್ರೆಂಟ್’ ವ್ಯವಸ್ಥೆ ಲೋಕಾರ್ಪಣೆ

August 3, 2026

ಡಿ.ಕೆ. ಶಿವಕುಮಾರ್ ಸಂಪುಟ ವಿಸ್ತರಣೆ: ಇಂದು 20 ನೂತನ ಸಚಿವರ ಪ್ರಮಾಣ ವಚನ, ಇಲ್ಲಿದೆ ಎಐಸಿಸಿ ಅಧಿಕೃತ ಪಟ್ಟಿ

August 3, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

ಗಾಂಧಿನಗರ: ‘ಬೆಂಗಳೂರು ಪೇಟೆ’ ಪ್ರದೇಶದಲ್ಲಿ ಅಗ್ನಿ ಅವಘಡ ನಿಯಂತ್ರಣಕ್ಕೆ ನಗರದ ಪ್ರಥಮ ‘ಫೈರ್ ಹೈಡ್ರೆಂಟ್’ ವ್ಯವಸ್ಥೆ ಲೋಕಾರ್ಪಣೆ

August 3, 2026

ಡಿ.ಕೆ. ಶಿವಕುಮಾರ್ ಸಂಪುಟ ವಿಸ್ತರಣೆ: ಇಂದು 20 ನೂತನ ಸಚಿವರ ಪ್ರಮಾಣ ವಚನ, ಇಲ್ಲಿದೆ ಎಐಸಿಸಿ ಅಧಿಕೃತ ಪಟ್ಟಿ

August 3, 2026
ಮತದಾರರ ಪಟ್ಟಿ ಪರಿಶೀಲನೆ ಸಾಂದರ್ಭಿಕ ಚಿತ್ರ

GBA News | ಮತದಾರರ ಪಟ್ಟಿ ಪರಿಷ್ಕರಣೆ: ಆಗಸ್ಟ್ 8 ಕಡೇ ದಿನ, ಸಮಸ್ಯೆ ಇದ್ದರೆ 1950ಗೆ ಕರೆ ಮಾಡಿ

August 3, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group