Monday, April 27, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ಕೆ.ಎ.ಎಸ್. ಅಧಿಕಾರಿಗಳ ಸಂಘದ ಕಟ್ಟಡಕ್ಕೆ ಆಧುನಿಕ ಸ್ಪರ್ಶ: ₹15.23 ಕೋಟಿ ವೆಚ್ಚದಲ್ಲಿ ನವೀಕೃತಗೊಂಡ ಆಡಳಿತ ಸೌಧ

    ಶ್ವೇತಭವನದ ಔತಣಕೂಟದಲ್ಲಿ ಗುಂಡಿನ ಸದ್ದು: ಕೂದಲೆಳೆ ಅಂತರದಲ್ಲಿ ಪಾರಾದ ಡೊನಾಲ್ಡ್ ಟ್ರಂಪ್ ದಂಪತಿ

    BIG EXCLUSIVE| ಜನಗಣತಿ ಜಿದ್ದಾಜಿದ್ದಿ; ಜಿಬಿಎ ಅಧಿಕಾರಿಗಳು Vs ಸಚಿವಾಲಯ ಸಂಘ – ರಾಜ್ಯದ 43 ಇಲಾಖೆಗಳು ಬಂದ್ ಆಗುವ ಭೀತಿ!

    ಸರ್ಕಾರಿ ಆಸ್ಪತ್ರೆಗಳಲ್ಲಿ ಮೊಣಕಾಲು ಮತ್ತು ಸೊಂಟದ ಕೀಲು ಬದಲಿ ಶಸ್ತ್ರಚಿಕಿತ್ಸೆಗಳಿಗೆ ಬಲ: ರೋಗಿಗಳಿಗೆ ಮನೆಬಾಗಿಲಲ್ಲೇ ಗುಣಮಟ್ಟದ ಚಿಕಿತ್ಸೆ

    ಎಸ್‌ಎಸ್‌ಎಲ್‌ಸಿ ಫಲಿತಾಂಶ 2026: ಇತಿಹಾಸದಲ್ಲೇ ಮೊದಲು! 94.10% ರಷ್ಟು ಅಭೂತಪೂರ್ವ ಫಲಿತಾಂಶ; ಬಾಲಕಿಯರದ್ದೇ ಮೇಲುಗೈ

    KSIC News | ಮೈಸೂರು ರೇಷ್ಮೆ ಪರಂಪರೆಗೆ ಮಹಾ ಜಯ: ಕೆಎಸ್‌ಐಸಿ ಭೂಮಿ ಹಸ್ತಾಂತರ ಆದೇಶ ರದ್ದು

    IMPORTANT NEWS | ಭೂಪರಿವರ್ತನೆ ಇನ್ನು ಸುಲಭ: 30 ದಿನಗಳಲ್ಲಿ ವಿಲೇವಾರಿಯಾಗದಿದ್ದರೆ ‘ಪರಿಭಾವಿತ ಭೂಪರಿವರ್ತನೆ’  ಭಾಗ್ಯ

    Vidhana Soudha

    RDPR NEWS | ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಗ್ರಾಮೀಣ ಭಾಗದ ಶೈಕ್ಷಣಿಕ ಕಾರ್ಯಗಳಿಗೆ‌ 501 ಕೋಟಿ ರೂ. ಅನುದಾನ ಬಿಡುಗಡೆ

    ಸಂಭ್ರಮದ ಪಾರ್ಟಿಯಲ್ಲಿ ದುರಂತ: ಗಂಟಲಲ್ಲಿ ಚಿಕನ್ ಮೂಳೆ ಸಿಲುಕಿ ಯುವಕ ಸಾವು

  • Bengaluru Focus

    ಕೆ.ಎ.ಎಸ್. ಅಧಿಕಾರಿಗಳ ಸಂಘದ ಕಟ್ಟಡಕ್ಕೆ ಆಧುನಿಕ ಸ್ಪರ್ಶ: ₹15.23 ಕೋಟಿ ವೆಚ್ಚದಲ್ಲಿ ನವೀಕೃತಗೊಂಡ ಆಡಳಿತ ಸೌಧ

    ಬನ್ನೇರುಘಟ್ಟ, ಮುತ್ಯಾಲಮಡುವಿಗೆ ಕೆಎಸ್‌ಟಿಡಿಸಿ ಹವಾನಿಯಂತ್ರಿತ ಬಸ್ ಪ್ರವಾಸ ಆರಂಭ

    ಕರ್ನಾಟಕ ಕೆಎಎಸ್ ಅಧಿಕಾರಿಗಳ ಸಂಘದ ಕಟ್ಟಡದ ಸಾಂದರ್ಭಿಕ ಚಿತ್ರ. (ಕೃಪೆ : KASOA)

    ಕೆ.ಎ.ಎಸ್. ಅಧಿಕಾರಿಗಳ ಸಂಘದ ನವೀಕರಿಸಿದ ಕಟ್ಟಡ ಉದ್ಘಾಟನೆ: ಏ. 27ಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ

    Science Research News | ಧ್ಯಾನದಿಂದ ಮೆದುಳಿನ ಶಕ್ತಿ ವೃದ್ಧಿ: ವಯಸ್ಸಾಗುವಿಕೆಗೆ ಬ್ರೇಕ್ ಹಾಕಲಿದೆ ಐಐಎಸ್‌ಸಿ ಸಂಶೋಧನೆ!

    GBA News | ಬೆಂಗಳೂರು ದಕ್ಷಿಣ ಪಾಲಿಕೆ ಅಭಿವೃದ್ಧಿಗೆ ತಜ್ಞರ ಸಲಹಾ ಸಮಿತಿ ರಚನೆ: ಆಯುಕ್ತ ಕೆ.ಎನ್. ರಮೇಶ್

    ಬೆಂಗಳೂರಿನ ಅಭಿವೃದ್ಧಿಗೆ ‘Airport’ ಅಡ್ಡಿ: ಕಟ್ಟಡಗಳ ಎತ್ತರ ನಿರ್ಬಂಧ ಸಡಿಲಿಕೆಗೆ ರಾಜನಾಥ್ ಸಿಂಗ್‌ಗೆ ಡಿ.ಕೆ. ಶಿವಕುಮಾರ್ ಮನವಿ

    GBA News | ಪಶ್ಚಿಮ ಬೆಂಗಳೂರಿಗರಿಗೆ ಸಿಹಿ ಸುದ್ದಿ: ಗೋವಿಂದರಾಜನಗರದಲ್ಲಿ ಶೀಘ್ರವೇ 100 ಹಾಸಿಗೆಗಳ ‘ಜಯದೇವ’ ಘಟಕ ಉದ್ಘಾಟನೆ

    ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ‘ಜನಿವಾರ’ ವಿವಾದ: ವಿದ್ಯಾರ್ಥಿಗಳ ಧಾರ್ಮಿಕ ಹಕ್ಕಿಗೆ ಚ್ಯುತಿ? ಮೂವರು ಸಸ್ಪೆಂಡ್!!

     ‘ಅಣ್ಣಾವ್ರ’ 97ನೇ ಜನ್ಮದಿನೋತ್ಸವ: ದೊಡ್ಮನೆ ಕುಟುಂಬ ಹಾಗೂ ಅಭಿಮಾನಿಗಳಿಂದ ಭಕ್ತಿಯ ನಮನ

  • Public interest
  • BW Special
  • Life Style
  • Photo Gallery
  • Video
No Result
View All Result

Home BW Special

India Top 7 Special Forces | ದೇಶದ ಭದ್ರತಾ ಪಡೆಗಳಲ್ಲಿ ಈ 7ಖತರ್ ನಾಕ್ ವಿಶೇಷ ಪಡೆಗಳ ಕಾರ್ಯಾಚರಣೆ ಹೇಗಿರುತ್ತೆ? ಇಲ್ಲಿದೆ ಕುತೂಹಕಾರಿ ಸುದ್ದಿ

ಭಾರತದಲ್ಲಿ ಸಮರಾಂಗಣದಲ್ಲಿ ಸೆಣೆಸುವ, ಗೊರಿಲ್ಲಾ ಯುದ್ಧ, ಗಡಿ ಭದ್ರತೆಯ ವಿಶೇಷ ಕಾರ್ಯಾಚರಣೆ, ಭಯೋತ್ಪಾದಕರಿಂದ ಒತ್ತಯಾಳುಗಳ ರಕ್ಷಣೆ ಇನ್ನಿತರ ಕಾರ್ಯಗಳಿಗೆ ಆಯಾ ಕ್ಷೇತ್ರದಲ್ಲಿ ನಿಪುಣತೆಯನ್ನು ಸಾಧಿಸಿದ ವಿಶೇಷ ತರಬೇತಿ ಪಡೆದ ಪಡೆಗಳಿವೆ. ಆ ಪಡೆಯಲ್ಲಿನ ಕಮಾಂಡೋಗಳಿಗೆ ನೀಡುವ ತರಬೇತಿಯೇ ವಿಭಿನ್ನ.

by Bengaluru Wire Desk
November 25, 2023
in BW Special, Public interest
Reading Time: 2 mins read
0
ದೇಶದ ವಿಶೇಷ ಕಾರ್ಯಾಚರಣೆ ಪಡೆಯೊಂದರ ಸಾಂದರ್ಭಿಕ ಚಿತ್ರ.

ದೇಶದ ವಿಶೇಷ ಕಾರ್ಯಾಚರಣೆ ಪಡೆಯೊಂದರ ಸಾಂದರ್ಭಿಕ ಚಿತ್ರ.

ದೇಶದ ಭದ್ರತೆ ವಿಚಾರದಲ್ಲಿ ರಕ್ಷಣಾ ಪಡೆಗಳಲ್ಲಿ ವಿಶೇಷ ಕಾರ್ಯಾಚರಣೆ ನಡೆಸಲೆಂದೇ ಅತ್ಯಾಧುನಿಕ ಉಪಕರಣ, ಸಮರ ಕಲೆ, ಆಯಾ ಉದ್ದೇಶ ಸಾಫಲ್ಯಕ್ಕೆ ನಿಖರವಾಗಿ ಕಾರ್ಯಾಚರಣೆ ನಡೆಸುವ ಪಡೆಗಳಿವೆ. ಪ್ರತಿಯೊಂದು ವಿಶೇಷ ಪಡೆಗಳಿಗೂ ಮಿಲಿಟರಿ ಕಾರ್ಯಾಚರಣೆ ನಡೆಸಲು ಅದರದ್ದೇ ರೀತಿಯಲ್ಲಿ ವಿಶೇಷ ತರಬೇತಿ ನೀಡಿ ಸಜ್ಜುಗೊಳಿಸಲಾಗಿರುತ್ತದೆ.

20 ನೇ ಶತಮಾನದ ಆರಂಭದಲ್ಲಿ ವಿಶೇಷ ಪಡೆಗಳು ಹೊರಹೊಮ್ಮಿದವು.‌ ಅದರಲ್ಲೂ ಎರಡನೆಯ ಮಹಾಯುದ್ಧದ ಸಮಯದಲ್ಲಿನ ಗಮನಾರ್ಹ ಬೆಳವಣಿಗೆಯೊಂದಿಗೆ, ಹೋರಾಟದಲ್ಲಿ ತೊಡಗಿರುವ ಪ್ರತಿಯೊಂದು ಪ್ರಮುಖ ಸೈನ್ಯವು ಶತ್ರುಗಳ ನೆಲೆಯ ಹಿಂದೆ ವಿಶೇಷ ಕಾರ್ಯಾಚರಣೆಗಳಿಗೆ ಮೀಸಲಾಗಿ ರಚನೆಯಾದವು. ಯುದ್ಧಗಳು ನಡೆದ ಇತಿಹಾಸದುದ್ದಕ್ಕೂ ವಿಶೇಷ ಪಡೆಗಳು ಪ್ರಮುಖ ಪಾತ್ರವನ್ನು ವಹಿಸಿವೆ. “ಹಿಟ್ ಅಂಡ್ ರನ್” ಮತ್ತು ವಿಧ್ವಂಸಕತೆಯ ಮೂಲಕ ಶತ್ರು ಪಾಳೇಯ, ಭಯೋತ್ಪಾದಕ ಗುರಿಯನ್ನು ಅಡ್ಡಿಪಡಿಸುವ ಕಾರ್ಯಾಚರಣೆಯು, ಸಾಂಪ್ರದಾಯಿಕ ಯುದ್ಧಗಳಿಗಿಂತ ಹೆಚ್ಚಾಗಿತ್ತು. 

ಯಾವುದೇ ಭಯೋತ್ಪಾದಕ ಬೆದರಿಕೆಗಳಿಗೆ ಪ್ರತಿಕ್ರಿಯಿಸಲು ಮತ್ತು ಕಾರ್ಯಾಚರಣೆಯನ್ನು ಪೂರ್ಣಗೊಳಿಸಲು ಅಗತ್ಯವಾದ ಕ್ರಮಗಳನ್ನು ತೆಗೆದುಕೊಳ್ಳಲು ವಿಶೇಷ ಪಡೆಗಳು ಪರಿಣತಿಯನ್ನು ಹೊಂದಿವೆ. ನಮ್ಮ ದೇಶದಲ್ಲಿ ಪ್ರಮುಖವಾಗಿರುವ ಟಾಪ್-7 ವಿಶೇಷ ಪಡೆಗಳೆಂದರೆ

01. ಮೆರೈನ್ ಕಮಾಂಡೋಸ್ (Marine Commandos) :

ಮಾರ್ಕೋಸ್ (MARCOS), ಭಾರತೀಯ ನೌಕಾಪಡೆಯು 1987 ರಲ್ಲಿ ನೇರ ಕ್ರಮಗಳು, ವಿಶೇಷ ವಿಚಕ್ಷಣೆ, ಉಭಯ ಸ್ಥಳಗಳಿಂದ ಯುದ್ಧ (ಜಲ, ವಾಯು, ಭೂ ಸ್ಥಳಗಳಿಂದ ಕಾರ್ಯಾಚರಣೆ) ಮತ್ತು ಭಯೋತ್ಪಾದನೆ ನಿಗ್ರಹಕ್ಕಾಗಿ ಬೆಳೆಸಿದ ವಿಶೇಷ ಪಡೆಗಳ ಘಟಕವಾಗಿದೆ.

ಮಾರ್ಕೋಸ್ ನ ಮಿಲಿಟರಿ ತರಬೇತಿಯು ಪ್ರಾಯಶಃ ಪ್ರಪಂಚದಲ್ಲಿ ಅತ್ಯಂತ ಕಠಿಣ ಎನ್ನಲಾಗುತ್ತೆ. ಇಲ್ಲಿ ಕಮಾಂಡೋಗಳನ್ನು ದೈಹಿಕ ಮತ್ತು ಮಾನಸಿಕ ದೃಢತೆಗಾಗಿ ಪರೀಕ್ಷಿಸಲಾಗುತ್ತದೆ.  ಮಾರ್ಕೋಸ್ ಅನ್ನು “ದಾಡಿವಾಲಾ ಫೌಜ್” ಎಂದು ಕರೆಯಲಾಗುತ್ತದೆ. ಅಂದರೆ ನಾಗರಿಕ ಪ್ರದೇಶಗಳಲ್ಲಿ ಗಡ್ಡಧಾರಿ ವೇಷ ಹಾಕಿ ಕಾರ್ಯಾಚರಣೆ ನಡೆಸುವುದರಿಂದ  ಭಯೋತ್ಪಾದಕರು “ಗಡ್ಡಧಾರಿ ಸೈನ್ಯ” ಎಂದು ಹೇಳುತ್ತಾರೆ.

2. ರಾಷ್ಟ್ರೀಯ ಭದ್ರತಾ ಸಿಬ್ಬಂದಿ (National Security Guard) :

ರಾಷ್ಟ್ರೀಯ ಭದ್ರತಾ ಸಿಬ್ಬಂದಿ ಭಾರತದ ಪ್ರಧಾನ ಭಯೋತ್ಪಾದನಾ ನಿಗ್ರಹ ಪಡೆ.  ಎನ್ಎಸ್ ಜಿ ವಿಐಪಿಗಳಿಗೆ ಭದ್ರತೆಯನ್ನು ಒದಗಿಸುತ್ತದೆ. ವಿಧ್ವಂಸಕ ವಿರೋಧಿ ತಪಾಸಣೆಗಳನ್ನು ನಡೆಸುತ್ತದೆ ಮತ್ತು ದೇಶದ ಪ್ರಮುಖ ಸ್ಥಳಗಳಲ್ಲಿ ಭಯೋತ್ಪಾದಕ ಬೆದರಿಕೆಗಳನ್ನು ತಟಸ್ಥಗೊಳಿಸುವ ಜವಾಬ್ದಾರಿಯನ್ನು ಹೊಂದಿದೆ. ಈ ವಿಶೇಷ ಪಡೆಯ ಆಯ್ಕೆ ಪ್ರಕ್ರಿಯೆಯು ಸುಮಾರು ಶೇ.70-80 ರಷ್ಟು ಡ್ರಾಪ್ ಔಟ್ ದರವನ್ನು ಹೊಂದಿದೆ.  ಎನ್ ಎಸ್ ಜಿ ಯ 7500 ಸಿಬ್ಬಂದಿಯನ್ನು ವಿಶೇಷ ಕ್ರಿಯಾ ಗುಂಪು (SAG) ಮತ್ತು ವಿಶೇಷ ರೇಂಜರ್ಸ್ ಗುಂಪು (SRG) ಎಂಬುದಾಗಿ ಸಮಾನವಾಗಿ ವಿಂಗಡಿಸಲಾಗಿದೆ.

3. ಪ್ಯಾರಾಚ್ಯೂಟ್ ರೆಜಿಮೆಂಟ್ ವಿಶೇಷ ಪಡೆ :

ಪ್ಯಾರಾ SF (ವಿಶೇಷ ಪಡೆಗಳು) ಅನ್ನು 1966 ರಲ್ಲಿ ಭಾರತೀಯ ಸೇನೆಯು ಹುಟ್ಟುಹಾಕಿತು. ಪ್ಯಾರಾ ಕಮಾಂಡೋಗಳು ಭಾರತೀಯ ಸೇನೆಯ ಉನ್ನತ ತರಬೇತಿ ಪಡೆದ ಪ್ಯಾರಾಚೂಟ್ ರೆಜಿಮೆಂಟ್‌ನ ಭಾಗವಾಗಿರುತ್ತಾರೆ ಮತ್ತು ಭಾರತದ ವಿಶೇಷ ಪಡೆಯ ಘಟಕಗಳಲ್ಲಿನ ದೊಡ್ಡ ಭಾಗವಾಗಿದೆ. ಪ್ಯಾರಾಚ್ಯೂಟ್ ರೆಜಿಮೆಂಟ್ ನ ಮುಖ್ಯ ಗುರಿಯು ಶತ್ರುಗಳ ರೇಖೆಗಳ ಹಿಂದೆ ಸೈನಿಕರನ್ನು ಹಿಂದಿನಿಂದ ಆಕ್ರಮಣ ಮಾಡಲು ಮತ್ತು ಅವರ ಮೊದಲ ಸಾಲಿನ ರಕ್ಷಣೆಯನ್ನು ನಾಶಮಾಡಲು ಶೀಘ್ರವಾಗಿ ನಿಯೋಜಿಸಲಾಗುತ್ತದೆ.

4. ಗರುಡಾ ಕಮಾಂಡೋ ಫೋರ್ಸ್ (Garuda Commando Force) :

ಗರುಡಾ ಕಮಾಂಡೋ ಫೋರ್ಸ್ ಭಾರತೀಯ ವಾಯುಪಡೆಯ ವಿಶೇಷ ಪಡೆಗಳ ಘಟಕವಾಗಿದ್ದು 2004 ರಲ್ಲಿ ಸ್ಥಾಪಿಸಲಾಯಿತು. ಗರುಡಾ ಕಮಾಂಡೋ ತರಬೇತಿಯು ಎಲ್ಲಾ ಭಾರತೀಯ ವಿಶೇಷ ಪಡೆಗಳಲ್ಲಿ ಅತಿ ಧೀರ್ಘಾವಧಿ ತರಬೇತಿ ನೀಡುವ ಪಡೆಯಾಗಿದೆ. ಗರುಡಾ ಕಮಾಂಡೋ ಆಗಿ ಸಂಪೂರ್ಣ ಕಾರ್ಯಾಚರಣೆ ಅರ್ಹತೆ ಪಡೆಯುವ ಮೊದಲು ಆ ಸೈನಿಕನು ಒಟ್ಟು 3 ವರ್ಷಗಳ ಅವಧಿಯನ್ನು ಪೂರ್ಣಗೊಳಿಸಬೇಕಿದೆ.  ಗರುಡಾ ಕಮಾಂಡೋ ಫೋರ್ಸ್ ಪ್ರಸ್ತುತ ವಿಶೇಷ ಕಾರ್ಯಾಚರಣೆ ನಡೆಸುವ ಪಡೆಗಳಲ್ಲಿ ಅತ್ಯಂತ ಕಿರಿಯರನ್ನು ಹೊಂದಿದ ವಿಶೇಷ ಪಡೆಯಾಗಿದೆ

ನಿರ್ಣಾಯಕವಾದ ವಾಯುಪಡೆಯ ನೆಲೆಗಳನ್ನು ರಕ್ಷಿಸುವ ಕರ್ತವ್ಯವನ್ನು ಈ ಗರುಡಾ ಪಡೆಗೆ ವಹಿಸಲಾಗಿದೆ. ಇದಲ್ಲದೆ ವಿಪತ್ತುಗಳ ಸಮಯದಲ್ಲಿ ರಕ್ಷಣಾ ಕಾರ್ಯಾಚರಣೆಯನ್ನು ನಡೆಸುವುದು ಮತ್ತು ವಾಯು ಕಾರ್ಯಾಚರಣೆಗಳಿಗೆ ಬೆಂಬಲವಾಗಿ ಕಾರ್ಯ ನಿರ್ವಹಿಸುವ ಜವಾಬ್ದಾರಿಯನ್ನು ಹೊಂದಿದೆ.

5. ಘಾತಕ್ ಪಡೆ (Ghathak Force) :

ಘಾತಕ್ ಫೋರ್ಸ್ ಒಂದು ಪದಾತಿದಳದ ತುಕಡಿಯಾಗಿದ್ದು, ಕೊಲ್ಲಲು ಹೋಗುತ್ತದೆ ಮತ್ತು ಬೆಟಾಲಿಯನ್‌ನ ಮುಂದೆ ಮುನ್ನುಗ್ಗುತ್ತದೆ. ಘಾತಕ್‌ ಅದೆಷ್ಟು ಸಮರ್ಥ ಕಮಾಂಡೊಗಳನ್ನು ಒಳಗೊಂಡ ಪಡೆ ಎಂದರೆ, ಚೀನಾದ ಮಾರ್ಷಲ್‌ ಆರ್ಟ್ಸ್ ತರಬೇತಿ ಪಡೆದ ಸೈನಿಕರು ಈ ಕಮಾಂಡೊಗಳ ಮುಂದೆ ಮಂಕಾಗುತ್ತಾರೆ.

ಭಾರತೀಯ ಸೇನೆಯಲ್ಲಿನ ಈ ಪದಾತಿ ದಳವು ಒಂದು ತುಕಡಿಯನ್ನು ಹೊಂದಿದ್ದು, ಇದರಲ್ಲಿನ ಸೈನಿಕರು ದೈಹಿಕವಾಗಿ ಹೆಚ್ಚು ಸದೃಢವಾಗಿರುತ್ತಾರೆ. ಮಾರ್ಷಲ್‌ ಆರ್ಟ್ಸ್ ತರಬೇತಿ ಪಡೆದಿರುವ ಕಮಾಂಡೊಗಳು, ಮಲ್ಲ ಯುದ್ಧದಲ್ಲೂ ಪ್ರವೀಣರು. 35 ಕೆ.ಜಿ ಭಾರ ಹೊತ್ತು 40 ಕಿ.ಮೀ ದೂರದವರೆಗೆ ಓಡುವ ಸಾಮರ್ಥ್ಯ ಈ ಕಮಾಂಡೊಗಳಿಗಿರುತ್ತದೆ. ವಿಶೇಷ ಕಾರ್ಯಾಚರಣೆ, ಯುದ್ಧದ ವೇಳೆ ಭಾರೀ ತೂಕದ ಶಸ್ತ್ರಾಸ್ತ್ರಗಳನ್ನು ಹೊತ್ತು ಮುನ್ನೆಲೆ­ಯಲ್ಲಿ ನಿಂತು ಹೋರಾಡುವುದು ಇದರ ಕೆಲಸ.

ಇಂತಹ ಸೈನಿಕರು ಮಾತ್ರ ಘಾತಕ್ ಪ್ಲಟೂನ್‌ಗೆ ಬರುತ್ತಾರೆ. ಅಲ್ಲದೆ, ಘಾತಕ್ ಸೈನಿಕರು ಉತ್ತಮ ತರಬೇತಿ ಪಡೆದಿರುತ್ತಾರೆ. ಶಸ್ತ್ರಸಜ್ಜಿತರಾಗಿರುತ್ತಾರೆ ಮತ್ತು ಭಯೋತ್ಪಾದಕ ದಾಳಿಗಳು, ಒತ್ತೆಯಾಳು ಸನ್ನಿವೇಶಗಳು, ಭಯೋತ್ಪಾದನೆ ನಿಗ್ರಹ ಮತ್ತು ಬಂಡಾಯ ಕಾರ್ಯಾಚರಣೆಗಳಂತಹ ಸಂದರ್ಭಗಳನ್ನು ನಿಭಾಯಿಸಲು ನಿಪುಣತೆ ಹೊಂದಿದವರಾಗಿದ್ದಾರೆ.

 6. ಕೋಬ್ರಾ ಪಡೆ (COBRA) :

ಭಾರತದಲ್ಲಿ ನಕ್ಸಲಿಸಂ ಅನ್ನು ಎದುರಿಸಲು ಅಭಿವೃದ್ಧಿಪಡಿಸಿದ ಕೇಂದ್ರೀಯ ಮೀಸಲಯ ಪೊಲೀಸ್ ಪಡೆ  (CRPF) ನ ವಿಶೇಷ ಘಟಕವಾಗಿ ಕೋಬ್ರಾ (ಕಮಾಂಡೋ ಬೆಟಾಲಿಯನ್ ಫಾರ್ ರೆಸಲ್ಯೂಟ್ ಆಕ್ಷನ್) ಪಡೆಯನ್ನು ರಚನೆ ಮಾಡಲಾಯಿತು.  ಗೆರಿಲ್ಲಾ ಯುದ್ಧ ಮಾದರಿಯಲ್ಲಿ ಪ್ರತ್ಯೇಕವಾಗಿ ತರಬೇತಿ ಪಡೆದ ಕೆಲವು ಭಾರತೀಯ ವಿಶೇಷ ಪಡೆಗಳಲ್ಲಿ ಇದು ಒಂದಾಗಿದೆ.  ಕೋಬ್ರಾ ಪಡೆಯು ವಿಶೇಷ ಕಾರ್ಯಾಚರಣೆ ನಡೆಸಿ, ಭಾರತದಿಂದ ಹಲವಾರು ನಕ್ಸಲೈಟ್ ಗುಂಪುಗಳನ್ನು ಯಶಸ್ವಿಯಾಗಿ ಹೊರಹಾಕಿದೆ.

 7. ವಿಶೇಷ ಗಡಿ ಪಡೆ (Special Frontier Force -SFF) :

ವಿಶೇಷ ಗಡಿನಾಡು ಪಡೆಯನ್ನು ಭಾರತೀಯ ಸೇನೆಯು 1962 ರಲ್ಲಿ ವಿಶೇಷ ಪಡೆಯಾಗಿ ಬೆಳೆಸಿತು. ಚೀನಾದೊಂದಿಗಿನ ಮತ್ತೊಂದು ಯುದ್ಧದ ಸಂದರ್ಭದಲ್ಲಿ ಚೀನಾದ ಗಡಿರೇಖೆಗಳ ಹಿಂದೆ ರಹಸ್ಯ ಕಾರ್ಯಾಚರಣೆ ನಡೆಸುವುದು ಇದರ ಉದ್ದೇಶವಾಗಿತ್ತು. ಇದಲ್ಲದೆ, ಎಸ್ ಎಫ್ ಎಫ್ ದೇಶದ ಬಾಹ್ಯ ಗುಪ್ತಚರ ಸಂಸ್ಥೆ ರಾ (RAW -ಸಂಶೋಧನೆ ಮತ್ತು ವಿಶ್ಲೇಷಣೆ ವಿಭಾಗ) ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಮೇಲಾಗಿ, ಇದು ಸಂಸದೀಯ ಕಾರ್ಯದರ್ಶಿಯಡಿಯಲ್ಲಿನ ರಕ್ಷಣಾ ಮಹಾ ನಿರ್ದೇಶಕರ ಮೂಲಕ ನೇರವಾಗಿ ಪ್ರಧಾನ ಮಂತ್ರಿಗೆ ವರದಿ ಮಾಡುತ್ತದೆ.

WhatsApp Join our WhatsApp Channel
Previous Post

PM Modi Flies In Tejas Fighter Jet | ತೇಜಸ್ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದ ಪ್ರಧಾನಿ ನರೇಂದ್ರ ಮೋದಿ!!

Next Post

BBMP IN NEPAL | ಬಿಬಿಎಂಪಿ ನೌಕರರ ಸಂಘದ ಕಮಾಲ್ ; ನೇಪಾಳದಲ್ಲಿ ಮೊಳಗಿತು ಕನ್ನಡ ಡಿಂಡಿಮ…!!

Next Post

BBMP IN NEPAL | ಬಿಬಿಎಂಪಿ ನೌಕರರ ಸಂಘದ ಕಮಾಲ್ ; ನೇಪಾಳದಲ್ಲಿ ಮೊಳಗಿತು ಕನ್ನಡ ಡಿಂಡಿಮ...!!

Health News | 1.5 Tesla MRI Machine | ವೈದ್ಯಕೀಯ ಕ್ಷೇತ್ರಕ್ಕೆ ಹೊಸ ದಿಕ್ಸೂಚಿ ; ಈ ಸ್ವದೇಶಿ ಎಂಆರ್ ಐ ಯಂತ್ರ ಬಂದಲ್ಲಿ ಪರೀಕ್ಷಾ ವೆಚ್ಚದಲ್ಲಿ ಭಾರೀ ಇಳಿಕೆ ಸಾಧ್ಯತೆ : ಬಡವರ ಚಿಕಿತ್ಸೆಗೆ ಅನುಕೂಲ

Please login to join discussion

Like Us on Facebook

Follow Us on Twitter

Recent News

ಕೆ.ಎ.ಎಸ್. ಅಧಿಕಾರಿಗಳ ಸಂಘದ ಕಟ್ಟಡಕ್ಕೆ ಆಧುನಿಕ ಸ್ಪರ್ಶ: ₹15.23 ಕೋಟಿ ವೆಚ್ಚದಲ್ಲಿ ನವೀಕೃತಗೊಂಡ ಆಡಳಿತ ಸೌಧ

April 27, 2026

ಬನ್ನೇರುಘಟ್ಟ, ಮುತ್ಯಾಲಮಡುವಿಗೆ ಕೆಎಸ್‌ಟಿಡಿಸಿ ಹವಾನಿಯಂತ್ರಿತ ಬಸ್ ಪ್ರವಾಸ ಆರಂಭ

April 27, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

ಕೆ.ಎ.ಎಸ್. ಅಧಿಕಾರಿಗಳ ಸಂಘದ ಕಟ್ಟಡಕ್ಕೆ ಆಧುನಿಕ ಸ್ಪರ್ಶ: ₹15.23 ಕೋಟಿ ವೆಚ್ಚದಲ್ಲಿ ನವೀಕೃತಗೊಂಡ ಆಡಳಿತ ಸೌಧ

April 27, 2026

ಬನ್ನೇರುಘಟ್ಟ, ಮುತ್ಯಾಲಮಡುವಿಗೆ ಕೆಎಸ್‌ಟಿಡಿಸಿ ಹವಾನಿಯಂತ್ರಿತ ಬಸ್ ಪ್ರವಾಸ ಆರಂಭ

April 27, 2026
ಕರ್ನಾಟಕ ಕೆಎಎಸ್ ಅಧಿಕಾರಿಗಳ ಸಂಘದ ಕಟ್ಟಡದ ಸಾಂದರ್ಭಿಕ ಚಿತ್ರ. (ಕೃಪೆ : KASOA)

ಕೆ.ಎ.ಎಸ್. ಅಧಿಕಾರಿಗಳ ಸಂಘದ ನವೀಕರಿಸಿದ ಕಟ್ಟಡ ಉದ್ಘಾಟನೆ: ಏ. 27ಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ

April 26, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group