Friday, April 24, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ಸರ್ಕಾರಿ ಆಸ್ಪತ್ರೆಗಳಲ್ಲಿ ಮೊಣಕಾಲು ಮತ್ತು ಸೊಂಟದ ಕೀಲು ಬದಲಿ ಶಸ್ತ್ರಚಿಕಿತ್ಸೆಗಳಿಗೆ ಬಲ: ರೋಗಿಗಳಿಗೆ ಮನೆಬಾಗಿಲಲ್ಲೇ ಗುಣಮಟ್ಟದ ಚಿಕಿತ್ಸೆ

    ಎಸ್‌ಎಸ್‌ಎಲ್‌ಸಿ ಫಲಿತಾಂಶ 2026: ಇತಿಹಾಸದಲ್ಲೇ ಮೊದಲು! 94.10% ರಷ್ಟು ಅಭೂತಪೂರ್ವ ಫಲಿತಾಂಶ; ಬಾಲಕಿಯರದ್ದೇ ಮೇಲುಗೈ

    KSIC News | ಮೈಸೂರು ರೇಷ್ಮೆ ಪರಂಪರೆಗೆ ಮಹಾ ಜಯ: ಕೆಎಸ್‌ಐಸಿ ಭೂಮಿ ಹಸ್ತಾಂತರ ಆದೇಶ ರದ್ದು

    IMPORTANT NEWS | ಭೂಪರಿವರ್ತನೆ ಇನ್ನು ಸುಲಭ: 30 ದಿನಗಳಲ್ಲಿ ವಿಲೇವಾರಿಯಾಗದಿದ್ದರೆ ‘ಪರಿಭಾವಿತ ಭೂಪರಿವರ್ತನೆ’  ಭಾಗ್ಯ

    Vidhana Soudha

    RDPR NEWS | ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಗ್ರಾಮೀಣ ಭಾಗದ ಶೈಕ್ಷಣಿಕ ಕಾರ್ಯಗಳಿಗೆ‌ 501 ಕೋಟಿ ರೂ. ಅನುದಾನ ಬಿಡುಗಡೆ

    ಸಂಭ್ರಮದ ಪಾರ್ಟಿಯಲ್ಲಿ ದುರಂತ: ಗಂಟಲಲ್ಲಿ ಚಿಕನ್ ಮೂಳೆ ಸಿಲುಕಿ ಯುವಕ ಸಾವು

    Wildlife News | ಬನ್ನೇರುಘಟ್ಟಕ್ಕೆ ದಕ್ಷಿಣ ಆಫ್ರಿಕಾದ ‘ಸಿವಂಗಿ’ಗಳು (ಚೀತಾ) ಆಗಮನ; ಚಾರಣಿಗರ ಸುರಕ್ಷತೆಗೆ ಹೊಸ ಕಠಿಣ ‘SOP’ ಬಿಡುಗಡೆ

    ಹೆಸರಘಟ್ಟದ ಮತ್ಕೂರು ಗ್ರಾಮದ ಕೋಳಿ ಸಾಕಾಣಿಕೆ ತರಬೇತಿ ಕೇಂದ್ರದಲ್ಲಿ ಎಚ್5ಎನ್1 ಹಕ್ಕಿಜ್ವರ ಭೀತಿ ಹಿನ್ನಲೆಯಲ್ಲಿ ಪಶುಪಾಲನೆ ಇಲಾಖೆ ನೇತೃತ್ವದಲ್ಲಿ ವೈಜ್ಞಾನಿಕವಾಗಿ ವಿಲೇವಾರಿ ಮಾಡಿದ್ದಾರೆ.

    ಬೆಂಗಳೂರಿನಲ್ಲಿ ಹಕ್ಕಿಜ್ವರ ಭೀತಿ: 7400ಕ್ಕೂ ಅಧಿಕ ಕೋಳಿಗಳ ಹನನ; ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದ ಆರೋಗ್ಯ ಸಚಿವ

    ಲೋಕಾಯುಕ್ತ ಕಚೇರಿಯ ಸಾಂದರ್ಭಿಕ ಚಿತ್ರ

    Karnataka Lokayukta | ಕರ್ನಾಟಕ ಲೋಕಾಯುಕ್ತಕ್ಕೆ 40ರ ಸಂಭ್ರಮ: ಏಪ್ರಿಲ್ 18ರಂದು ಸಾರ್ಥಕ ಪಯಣದ ಕಾರ್ಯಕ್ರಮ

  • Bengaluru Focus

     ‘ಅಣ್ಣಾವ್ರ’ 97ನೇ ಜನ್ಮದಿನೋತ್ಸವ: ದೊಡ್ಮನೆ ಕುಟುಂಬ ಹಾಗೂ ಅಭಿಮಾನಿಗಳಿಂದ ಭಕ್ತಿಯ ನಮನ

    ಎಸ್‌ಎಸ್‌ಎಲ್‌ಸಿ ಫಲಿತಾಂಶ 2026: ಇತಿಹಾಸದಲ್ಲೇ ಮೊದಲು! 94.10% ರಷ್ಟು ಅಭೂತಪೂರ್ವ ಫಲಿತಾಂಶ; ಬಾಲಕಿಯರದ್ದೇ ಮೇಲುಗೈ

    ಕಾಲೇಜು ಕ್ಯಾಂಪಸ್‌ಗಳಲ್ಲಿ ಮತ್ತೆ ಚುನಾವಣಾ ರಂಗು: ವಿದ್ಯಾರ್ಥಿ ಸಂಘಗಳ ಚುನಾವಣೆ ನಡೆಸಲು ಸರ್ಕಾರ ಮುಂದು

    GBA News | ಇಬ್ಲೂರು ಜಂಕ್ಷನ್ ಸಂಚಾರ ದಟ್ಟಣೆಗೆ ಮುಕ್ತಿ: ಹೆಚ್ಚುವರಿ ಮೇಲ್ಸೇತುವೆ ನಿರ್ಮಾಣಕ್ಕೆ ಜಿಬಿಎ ಮುಂದು

    BWSSB News | ತ್ಯಾಜ್ಯವೇ ಈಗ ಜಲಮಂಡಳಿಯ ‘ಚಿನ್ನ’: ಬೆಂಗಳೂರಿನಲ್ಲಿ ಕೊಳಚೆ ನೀರಿನಿಂದ ದೇಶದಲ್ಲೇ ದೊಡ್ಡ ಪ್ರಮಾಣದಲ್ಲಿ ಬಯೋ-ಗ್ಯಾಸ್ ಉತ್ಪಾದನೆ

    ಬಿಟ್‌ಕಾಯಿನ್ ಹಗರಣದ ಕಿಚ್ಚು: ಶಾಸಕ ಎನ್.ಎ. ಹ್ಯಾರಿಸ್ ಮತ್ತು ಪುತ್ರರ ನಿವಾಸದ ಮೇಲೆ ಇಡಿ ದಾಳಿ, ಪರಿಶೀಲನೆ

    CLEA Conference | ಬೆಂಗಳೂರು ಘೋಷಣೆ: 2047ರ ವೇಳೆಗೆ ಸುಸ್ಥಿರ ಇಂಧನ ಮತ್ತು ಇಂಧನ ನ್ಯಾಯಕ್ಕೆ ಸಂಕಲ್ಪ

    BW Special | ಸರ್.ಎಂ.ವಿಶ್ವೇಶ್ವರಯ್ಯ ಬಡಾವಣೆ ನಿವಾಸಿಗಳಿಗೆ ಆಸ್ತಿ ತೆರಿಗೆ ಸಂಕಷ್ಟ: ಬಿಡಿಎ – ಜಿಬಿಎ ಗೊಂದಲದಲ್ಲಿ ಶೇ.5 ರಿಯಾಯಿತಿ ಮರೀಚಿಕೆ

    GBA NEWS | “ಗ್ರೇಟರ್ ಬೆಂಗಳೂರು” ಪಾಲಿಕೆ ಚುನಾವಣೆ ಮತ್ತಷ್ಟು ವಿಳಂಬ: ಸೆಪ್ಟೆಂಬರ್ ವರೆಗೆ ಕಾಲಾವಕಾಶ ಕೋರಿದ ಸರ್ಕಾರ

  • Public interest
  • BW Special
  • Life Style
  • Photo Gallery
  • Video
No Result
View All Result

Home Bengaluru Focus

ಬೆಂಗಳೂರಿನಲ್ಲಿ ತ್ಯಾಜ್ಯ ನಿರ್ವಹಣೆಗೆ ಬಿಗಿ ಕ್ರಮ: ದೂರು ಇತ್ಯರ್ಥಕ್ಕೆ ವಾಟ್ಸಾಪ್ ಚಾಟ್‌ಬಾಟ್, ಆಟೋ ಟಿಪ್ಪರ್‌ ಸಮಯ ಪರಿಷ್ಕರಣೆಯಿಂದ ಹಾಜರಾತಿ ಹೆಚ್ಚಳ

ಏಕಬಳಕೆ ಪ್ಲಾಸ್ಟಿಕ್ ವಿರುದ್ಧ ಕಠಿಣ ಕ್ರಮ ಮುಂದುವರಿಕೆ

by Bengaluru Wire Desk
September 12, 2025
in Bengaluru Focus
Reading Time: 1 min read
0

ಬೆಂಗಳೂರು, ಸೆ.12 www.bengaluruwire.com : ನಗರದ ಘನತ್ಯಾಜ್ಯ ನಿರ್ವಹಣೆಯನ್ನು ಮತ್ತಷ್ಟು ಸುಧಾರಿಸುವ ನಿಟ್ಟಿನಲ್ಲಿ ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತ (ಬಿ.ಎಸ್.ಡಬ್ಲ್ಯು.ಎಂ.ಎಲ್) ಮಹತ್ವದ ಕ್ರಮಗಳನ್ನು ಕೈಗೊಂಡಿದೆ. 

ನಾಗರಿಕರ ದೂರುಗಳನ್ನು ತ್ವರಿತವಾಗಿ ಪರಿಹರಿಸಲು ವಾಟ್ಸಾಪ್ ಚಾಟ್‌ಬಾಟ್ ಸೇವೆ ಜಾರಿಗೊಳಿಸಿರುವುದು, ಆಟೋ ಟಿಪ್ಪರ್‌ಗಳ ಹಾಜರಾತಿ ಹೆಚ್ಚಿಸಲು ಸಮಯ ಪರಿಷ್ಕರಿಸಿರುವುದು ಮತ್ತು ಏಕಬಳಕೆ ಪ್ಲಾಸ್ಟಿಕ್ ವಿರುದ್ಧದ ಕಾರ್ಯಾಚರಣೆಯನ್ನು ತೀವ್ರಗೊಳಿಸಿರುವುದು ಈ ಕ್ರಮಗಳಲ್ಲಿ ಪ್ರಮುಖವಾಗಿವೆ. ಈ ಎಲ್ಲ ಬದಲಾವಣೆಗಳ ಕುರಿತು ಬಿ.ಎಸ್.ಡಬ್ಲ್ಯು.ಎಂ.ಎಲ್ ಸಿಇಒ ಕರೀಗೌಡ ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.

ವಾಟ್ಸಾಪ್ ಮೂಲಕ ದೂರು ಪರಿಹಾರಕ್ಕೆ ವೇಗ :

ನಗರದಲ್ಲಿ ತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದಂತೆ ನಾಗರಿಕರ ಕುಂದುಕೊರತೆಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಲು ಹೊಸ ವ್ಯವಸ್ಥೆ ಜಾರಿಗೆ ತರಲಾಗಿದೆ. ಡಿಜಿಟಲ್ ದೂರು ಪರಿಹಾರ ವೇದಿಕೆಯಾದ ವಾಟ್ಸಾಪ್ ಚಾಟ್‌ಬಾಟ್ ಸಂಖ್ಯೆ 9448197197 ಅನ್ನು ಪ್ರಾರಂಭಿಸಲಾಗಿದ್ದು, ಸಾರ್ವಜನಿಕರು ತಮ್ಮ ದೂರುಗಳನ್ನು ದಿನದ 24 ಗಂಟೆಯೂ ನೇರವಾಗಿ ದಾಖಲಿಸಲು ಅವಕಾಶ ಕಲ್ಪಿಸಲಾಗಿದೆ‌ ಎಂದರು.

ಈ ಹೊಸ ವ್ಯವಸ್ಥೆ ಸಾಕಷ್ಟು ಯಶಸ್ವಿಯಾಗಿದ್ದು, ಆಗಸ್ಟ್ 2025 ರಲ್ಲಿ ಸ್ವೀಕರಿಸಿದ 1,483 ದೂರುಗಳ ಪೈಕಿ 1,464 (ಶೇ. 99) ದೂರುಗಳನ್ನು ಇತ್ಯರ್ಥಪಡಿಸಲಾಗಿದೆ. ಸೆಪ್ಟೆಂಬರ್ 2025 ರಿಂದ ಈವರೆಗೆ ಸ್ವೀಕರಿಸಿದ 515 ದೂರುಗಳಲ್ಲಿ 423 (ಶೇ. 82) ದೂರುಗಳನ್ನು ಪರಿಹರಿಸಲಾಗಿದೆ ಎಂದು ಕರೀಗೌಡ ಅವರು ತಿಳಿಸಿದರು. ಇದನ್ನೂ ಓದಿ : ಬೆಂಗಳೂರು: ನಮ್ಮ ಮೆಟ್ರೋ ಮೂಲಕ ಕೇವಲ 20 ನಿಮಿಷಗಳಲ್ಲಿ ಹೃದಯ ಸಾಗಾಟ, ಮತ್ತೊಂದು ಜೀವಕ್ಕೆ ಜೀವದಾನ

ಈ ವ್ಯವಸ್ಥೆಯು ನಾಗರಿಕರಿಗೆ ಅನುಕೂಲವಾಗಿದ್ದು, ದೂರುಗಳಿಗೆ ತ್ವರಿತವಾಗಿ ಸ್ಪಂದಿಸಲು ಸಹಕಾರಿಯಾಗಿದೆ. ಇದಲ್ಲದೆ, ಟೋಲ್‌ಫ್ರೀ ಸಹಾಯವಾಣಿ (1533) ಮತ್ತು ನಮ್ಮ ಬೆಂಗಳೂರು ಮೊಬೈಲ್ ಅಪ್ಲಿಕೇಶನ್ ಮೂಲಕವೂ ದೂರು ದಾಖಲಿಸಲು ಅವಕಾಶವಿದೆ.

ಆಟೋ ಟಿಪ್ಪರ್ ವಾಹನ ಸಮಯ ಪರಿಷ್ಕರಣೆ : ಆಟೋ ಟಿಪ್ಪರ್‌ಗಳ ಹಾಜರಾತಿಯಲ್ಲಿ ಗಣನೀಯ ಏರಿಕೆ

ನಗರದ ಸ್ವಚ್ಛತಾ ಕಾರ್ಯಗಳನ್ನು ಸುಧಾರಿಸಲು ಮತ್ತು ಸಾರ್ವಜನಿಕರಿಗೆ ಅನುಕೂಲವಾಗುವಂತೆ ಆಟೋ ಟಿಪ್ಪರ್ ವಾಹನಗಳ ಸಮಯವನ್ನು ಪರಿಷ್ಕರಿಸಲಾಗಿದೆ. ಆಗಸ್ಟ್ 25ರಿಂದ ವಾಹನಗಳ ಸ್ಕ್ಯಾನಿಂಗ್ ಸಮಯವನ್ನು ಬೆಳಗ್ಗೆ 5:30 ರಿಂದ 6:30 ರವರೆಗೆ ನಿಗದಿಪಡಿಸಲಾಗಿದೆ. ಈ ಹಿಂದಿದ್ದ ಬೆಳಗ್ಗೆ 6:00 ರಿಂದ 7:30 ರವರೆಗಿನ ಸಮಯವನ್ನು ಒಂದು ಗಂಟೆ ಮುಂಚಿತಗೊಳಿಸಿರುವುದರಿಂದ ಆಟೋ ಟಿಪ್ಪರ್‌ಗಳು ಸಾರ್ವಜನಿಕರ ದೈನಂದಿನ ಚಟುವಟಿಕೆಗಳಿಗೂ ಮುನ್ನವೇ ತ್ಯಾಜ್ಯ ಸಂಗ್ರಹಿಸಲು ಸಾಧ್ಯವಾಗಿದೆ.

ಈ ಬದಲಾವಣೆಯ ಪರಿಣಾಮವಾಗಿ, ಆಟೋ ಟಿಪ್ಪರ್‌ಗಳ ಹಾಜರಾತಿಯಲ್ಲಿ ಗಣನೀಯ ಪ್ರಗತಿ ಕಂಡುಬಂದಿದೆ. ಆಗಸ್ಟ್ 2025 ರಲ್ಲಿ ಶೇ. 84 ರಷ್ಟಿದ್ದ ಹಾಜರಾತಿಯು ಪ್ರಸ್ತುತ ಶೇ. 95 ಕ್ಕೆ ಏರಿಕೆಯಾಗಿದೆ. ಇದರಿಂದ ನಿವಾಸಿಗಳು ಕೆಲಸಕ್ಕೆ ಹೊರಡುವ ಮುನ್ನವೇ ತ್ಯಾಜ್ಯವನ್ನು ವಿಲೇವಾರಿ ಮಾಡಲು ಅನುಕೂಲವಾಗಿದೆ.

ಏಕಬಳಕೆ ಪ್ಲಾಸ್ಟಿಕ್ ವಿರುದ್ಧ ದಂಡ ಪ್ರಯೋಗ :

ನಗರವನ್ನು ಪ್ಲಾಸ್ಟಿಕ್ ಮುಕ್ತವನ್ನಾಗಿ ಮಾಡುವ ನಿಟ್ಟಿನಲ್ಲಿ ಬಿ.ಎಸ್.ಡಬ್ಲ್ಯು.ಎಂ.ಎಲ್. ನಿರಂತರ ಕಾರ್ಯಾಚರಣೆ ನಡೆಸುತ್ತಿದೆ. ಕಳೆದ ಅಕ್ಟೋಬರ್‌ನಿಂದ ಈವರೆಗೆ ಸುಮಾರು 24.57 ಟನ್ ಏಕಬಳಕೆ ಪ್ಲಾಸ್ಟಿಕ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಇದಕ್ಕಾಗಿ ಒಟ್ಟು ರೂ. 38 ಲಕ್ಷ ದಂಡ ವಿಧಿಸಲಾಗಿದೆ ಎಂದು ಕರೀಗೌಡ ಅವರು ತಿಳಿಸಿದ್ದಾರೆ.

ಪ್ಲಾಸ್ಟಿಕ್ ಉತ್ಪಾದಕರು, ಸಗಟು ಹಾಗೂ ಚಿಲ್ಲರೆ ಮಾರಾಟಗಾರರ ಮೇಲೆ ದಾಳಿ ನಡೆಸಲು 27 ತಂಡಗಳನ್ನು ರಚಿಸಲಾಗಿದ್ದು, ಈ ತಂಡಗಳು ವಾರಕ್ಕೆ ಐದು ದಿನಗಳ ಕಾಲ ಕಾರ್ಯಾಚರಣೆ ನಡೆಸುತ್ತಿವೆ. 281 ಸಗಟು ವ್ಯಾಪಾರಿಗಳಿಂದ ರೂ. 19.66 ಲಕ್ಷ ಮತ್ತು 2,842 ಚಿಲ್ಲರೆ ವ್ಯಾಪಾರಿಗಳಿಂದ ರೂ. 18.41 ಲಕ್ಷ ದಂಡ ವಸೂಲಿ ಮಾಡಲಾಗಿದೆ. ಪ್ಲಾಸ್ಟಿಕ್ ಮಾಲಿನ್ಯ ತಡೆಗಟ್ಟಲು ಸಹಕರಿಸುವಂತೆ ಸಾರ್ವಜನಿಕರಲ್ಲಿ ಅವರು ಮನವಿ ಮಾಡಿದ್ದು, ಶಾಪಿಂಗ್‌ಗೆ ಹೋಗುವಾಗ ಬಟ್ಟೆ ಅಥವಾ ಪೇಪರ್ ಬ್ಯಾಗ್‌ಗಳನ್ನು ಬಳಸುವಂತೆ ತಿಳಿಸಿದ್ದಾರೆ.

WhatsApp Join our WhatsApp Channel
Previous Post

ಬೆಂಗಳೂರು: ನಮ್ಮ ಮೆಟ್ರೋ ಮೂಲಕ ಕೇವಲ 20 ನಿಮಿಷಗಳಲ್ಲಿ ಹೃದಯ ಸಾಗಾಟ, ಮತ್ತೊಂದು ಜೀವಕ್ಕೆ ಜೀವದಾನ

Next Post

Sharavathi Pumped Storage | ಪರಿಸರಕ್ಕೆ ಧಕ್ಕೆಯಾಗದಂತೆ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ: ಸಚಿವ ಕೆ.ಜೆ.ಜಾರ್ಜ್

Next Post

Sharavathi Pumped Storage | ಪರಿಸರಕ್ಕೆ ಧಕ್ಕೆಯಾಗದಂತೆ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ: ಸಚಿವ ಕೆ.ಜೆ.ಜಾರ್ಜ್

Video News | ಹಾಸನದಲ್ಲಿ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಭೀಕರ ಅಪಘಾತ- 9 ಬಲಿ, ಮೃತರ ಕುಟುಂಬಗಳಿಗೆ ತಲಾ ₹5 ಲಕ್ಷ ಪರಿಹಾರ ಘೋಷಿಸಿದ ಸಿಎಂ

Please login to join discussion

Like Us on Facebook

Follow Us on Twitter

Recent News

 ‘ಅಣ್ಣಾವ್ರ’ 97ನೇ ಜನ್ಮದಿನೋತ್ಸವ: ದೊಡ್ಮನೆ ಕುಟುಂಬ ಹಾಗೂ ಅಭಿಮಾನಿಗಳಿಂದ ಭಕ್ತಿಯ ನಮನ

April 24, 2026

BWSSB News | ಬೆಂಗಳೂರು ನಗರದಾದ್ಯಂತ ಸಮರ್ಪಕ ಕುಡಿಯುವ ನೀರು ಪೂರೈಕೆ: ಜಲಮಂಡಳಿ ಅಧ್ಯಕ್ಷರ ಖುದ್ದು ಪರಿಶೀಲನೆ

April 24, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

 ‘ಅಣ್ಣಾವ್ರ’ 97ನೇ ಜನ್ಮದಿನೋತ್ಸವ: ದೊಡ್ಮನೆ ಕುಟುಂಬ ಹಾಗೂ ಅಭಿಮಾನಿಗಳಿಂದ ಭಕ್ತಿಯ ನಮನ

April 24, 2026

BWSSB News | ಬೆಂಗಳೂರು ನಗರದಾದ್ಯಂತ ಸಮರ್ಪಕ ಕುಡಿಯುವ ನೀರು ಪೂರೈಕೆ: ಜಲಮಂಡಳಿ ಅಧ್ಯಕ್ಷರ ಖುದ್ದು ಪರಿಶೀಲನೆ

April 24, 2026

ಸರ್ಕಾರಿ ಆಸ್ಪತ್ರೆಗಳಲ್ಲಿ ಮೊಣಕಾಲು ಮತ್ತು ಸೊಂಟದ ಕೀಲು ಬದಲಿ ಶಸ್ತ್ರಚಿಕಿತ್ಸೆಗಳಿಗೆ ಬಲ: ರೋಗಿಗಳಿಗೆ ಮನೆಬಾಗಿಲಲ್ಲೇ ಗುಣಮಟ್ಟದ ಚಿಕಿತ್ಸೆ

April 23, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group