Wednesday, July 29, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ಆ. 15ರಿಂದ ಸ್ವಿಗ್ಗಿ ಸೇವೆ ಸ್ಥಗಿತ? ಆನ್‌ಲೈನ್ ಆಹಾರ ನೀಡಿಕೆ ಸಂಸ್ಥೆ ವಿರುದ್ಧ ಬೆಂಗಳೂರು ಹೋಟೆಲುಗಳ ಸಂಘದ ಖಡಕ್ ಎಚ್ಚರಿಕೆ

    1200 ಬೋರ್‌ವೆಲ್‌ಗಳಿಗೆ ಮರುಜೀವ: ತಮಿಳುನಾಡು ಐಎಎಸ್ ಅಧಿಕಾರಿಗೆ ನಟ ಮಾಧವನ್ ಸಲಾಂ

    Indian billionaires Increased | ಭಾರತದಲ್ಲಿ ಬಿಲಿಯನೇರ್‌ಗಳ ಸಂಖ್ಯೆ 4 ಪಟ್ಟು ಹೆಚ್ಚಳ: 576ಕ್ಕೆ ಏರಿಕೆ

    BIG BREAKING NEWS | ಮೇಕೆದಾಟು ಯೋಜನೆ: ನೆರೆ ರಾಜ್ಯಗಳ ಒಪ್ಪಿಗೆ ಅಗತ್ಯವಿಲ್ಲ, ಕೇಂದ್ರ ಸರ್ಕಾರದ ಸ್ಪಷ್ಟನೆ

    ಈ ವಾರವೇ ಸಚಿವ ಸಂಪುಟ ವಿಸ್ತರಣೆ ಪೂರ್ಣ: ಸಿಎಂ ಡಿ.ಕೆ. ಶಿವಕುಮಾರ್

    BW SPECIAL | ಆತಂಕಕಾರಿ ಮಟ್ಟಕ್ಕೆ ಕುಸಿದ ಜಲಾಶಯಗಳ ನೀರು: ಬೆಂಗಳೂರಿಗೆ ಎದುರಾಗಲಿದ್ಯಾ ಜಲಕಂಟಕ?

    Kargil Vijay Diwas | ಕಾರ್ಗಿಲ್ ವಿಜಯ್ ದಿವಸ್: ದೇಶದ ವೀರ ಯೋಧರಿಗೆ ಪ್ರಧಾನಿ ನಮನ

    ನೀಟ್ ವಿವಾದ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ

    ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹಿಸಿ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ತೀವ್ರ; ಪರೀಕ್ಷಾ ಅಕ್ರಮದ ಹಿನ್ನೆಲೆಯಲ್ಲಿ ಎನ್‌ಟಿಎಯಿಂದ 47 ಅಧಿಕಾರಿಗಳ ವಜಾ

  • Bengaluru Focus
    BWSSB Head Office

    BWSSB News | ಬೆಂಗಳೂರು: ಜು. 31ರಂದು ಈ ಪ್ರದೇಶಗಳಲ್ಲಿ 15 ಗಂಟೆ ಕಾವೇರಿ ನೀರು ಇರಲ್ಲ

    ಈ ವಾರವೇ ಸಚಿವ ಸಂಪುಟ ವಿಸ್ತರಣೆ ಪೂರ್ಣ: ಸಿಎಂ ಡಿ.ಕೆ. ಶಿವಕುಮಾರ್

    GBA News | ಬೆಂಗಳೂರಲ್ಲಿ ವಾರ್ನಿಂಗ್ ಇಲ್ಲ, ಎಲ್ಲೆಂದ್ರಲ್ಲಿ ಕಸ ಎಸೆದ್ರೆ ನೇರವಾಗಿ ಬೀಳುತ್ತೆ ಎಫ್ಐಆರ್!!

    ಆರೋಗ್ಯ ಸಚಿವ ​ಯು.ಟಿ. ಖಾದರ್‌ಗೆ ಅಮೆರಿಕದ ಪ್ರತಿಷ್ಠಿತ ‘ಗ್ಲೋಬಲ್ ಸಿವಿಕ್ ಲೀಡರ್‌ಶಿಪ್’ ಅಂತಾರಾಷ್ಟ್ರೀಯ ಪ್ರಶಸ್ತಿ

    Vidhana Soudha

    GBA News | ​ಜಿಬಿಎ ವ್ಯಾಪ್ತಿಯಲ್ಲಿ ಹೊಸದಾಗಿ ‘ಎ’ ಖಾತಾ ಪಡೆಯುವ ಶುಲ್ಕ ಶೇ.2ಕ್ಕೆ ಕಡಿತಗೊಳಿಸಿದ ಸರ್ಕಾರ

    ಜಕ್ಕೂರು ವೈಮಾನಿಕ ತರಬೇತಿ ಶಾಲೆ ಲೈಸೆನ್ಸ್‌ ನವೀಕರಣ: ಮೈಸೂರು, ಹಾಸನದಲ್ಲಿ ಸ್ಯಾಟಲೈಟ್ ಬೇಸ್

    ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹಿಸಿ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ತೀವ್ರ; ಪರೀಕ್ಷಾ ಅಕ್ರಮದ ಹಿನ್ನೆಲೆಯಲ್ಲಿ ಎನ್‌ಟಿಎಯಿಂದ 47 ಅಧಿಕಾರಿಗಳ ವಜಾ

    GBA News | ಶಿವಾಜಿನಗರ ಫುಟ್‌ಪಾತ್ ತೆರವು: ಹಲ್ಲೆಗೊಳಗಾದರೂ ಎದೆಗುಂದದೆ ಕರ್ತವ್ಯ ಮೆರೆದ ಅಧಿಕಾರಿಗಳಿಗೆ ಸಚಿವ ಕೃಷ್ಣ ಬೈರೇಗೌಡ ಸನ್ಮಾನ

    PM E-Drive | ಪಿಎಂ ಇ-ಡ್ರೈವ್: ಜು.27ರಂದು ಚಾರ್ಜ್ ಪಾಯಿಂಟ್ ಅಪರೇಟರ್‌ಗಳ ಸಮಾಲೋಚನಾ ಸಭೆ ಕರೆದ ಬೆಸ್ಕಾಂ

  • Public interest
  • BW Special
  • Life Style
  • Photo Gallery
  • Video
No Result
View All Result

Home Bengaluru Focus

Technology News | ಬೆಂಗಳೂರಿನಲ್ಲಿ ಐಫೋನ್ 17 ಉತ್ಪಾದನೆಗೆ ಚಾಲನೆ: ಭಾರತದ ಎಲೆಕ್ಟ್ರಾನಿಕ್ಸ್ ಕನಸಿಗೆ ಹೊಸ ದಿಕ್ಕು

ತೈವಾನ್ ಮೂಲದ ಫಾಕ್ಸ್‌ಕಾನ್‌ನಿಂದ ದೇವನಹಳ್ಳಿ ಘಟಕದಲ್ಲಿ ಐಫೋನ್ ತಯಾರಿಕೆ ಆರಂಭ; ಆಪಲ್‌ನ ಉತ್ಪಾದನಾ ಜಾಲದಲ್ಲಿ ಭಾರತದ ಪಾತ್ರದ ವಿಸ್ತರಣೆ

by Bengaluru Wire Desk
August 19, 2025
in Bengaluru Focus, Life Style, Public interest
Reading Time: 1 min read
0

ಬೆಂಗಳೂರು, ಆ.19 www.bengaluruwire.com : ಜಾಗತಿಕ ಎಲೆಕ್ಟ್ರಾನಿಕ್ಸ್ ಉತ್ಪಾದನೆಯಲ್ಲಿ ಭಾರತ ಮಹತ್ವದ ಹೆಜ್ಜೆ ಇಟ್ಟಿದ್ದು, ತೈವಾನ್‌ನ ಪ್ರಮುಖ ಎಲೆಕ್ಟ್ರಾನಿಕ್ಸ್ ತಯಾರಿಕಾ ಕಂಪನಿ ಫಾಕ್ಸ್‌ಕಾನ್ ಬೆಂಗಳೂರಿನ ದೇವನಹಳ್ಳಿಯಲ್ಲಿ ತನ್ನ ಹೊಸ ಘಟಕದಲ್ಲಿ ಐಫೋನ್ 17 ಉತ್ಪಾದನೆಯನ್ನು ಅಧಿಕೃತವಾಗಿ ಆರಂಭಿಸಿದೆ. ಇದು ಭಾರತವನ್ನು ಭವಿಷ್ಯದ “ಜಾಗತಿಕ ಐಫೋನ್ ರಾಜಧಾನಿ”ಯಾಗಿ ರೂಪಿಸುವ ಕನಸಿಗೆ ಮತ್ತಷ್ಟು ಬಲ ತುಂಬಿದೆ.

300 ಎಕರೆಗಳ ವಿಶಾಲ ಪ್ರದೇಶದಲ್ಲಿ ₹25,000 ಕೋಟಿ (ಸುಮಾರು $2.8 ಶತಕೋಟಿ) ಹೂಡಿಕೆಯೊಂದಿಗೆ ಸ್ಥಾಪಿಸಲಾದ ಈ ಘಟಕವು ಚೀನಾದ ಹೊರಗೆ ಫಾಕ್ಸ್‌ಕಾನ್‌ನ ಎರಡನೇ ಅತಿ ದೊಡ್ಡ ಉತ್ಪಾದನಾ ಘಟಕವಾಗಿದೆ. ಈ ಬೆಳವಣಿಗೆಯನ್ನು ಕರ್ನಾಟಕದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಅವರು ತಮ್ಮ ಅಧಿಕೃತ ‘ಎಕ್ಸ್’ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಪಾಟೀಲ್ ಅವರು, ಈ ಘಟಕ ಕೇವಲ ಐಫೋನ್‌ಗಳ ಜೋಡಣೆಗೆ ಸೀಮಿತವಾಗಿಲ್ಲ; ಇದು ಕರ್ನಾಟಕವನ್ನು ಜಾಗತಿಕ ಎಲೆಕ್ಟ್ರಾನಿಕ್ಸ್ ತಯಾರಿಕಾ ಕೇಂದ್ರವಾಗಿ ಸ್ಥಾಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂದು ಹೇಳಿದರು. ಇದರಿಂದ ಸಾವಿರಾರು ಉದ್ಯೋಗಗಳು ಸೃಷ್ಟಿಯಾಗಲಿದ್ದು, ಪೂರೈಕೆ ಸರಪಳಿ ಬಲಗೊಳ್ಳಲಿದೆ ಮತ್ತು ಭಾರತದ ರಫ್ತು ಮಹತ್ವಾಕಾಂಕ್ಷೆಗಳಿಗೆ ಉತ್ತೇಜನ ದೊರೆಯಲಿದೆ ಎಂದರು. 

ಫಾಕ್ಸ್‌ಕಾನ್‌ನ ಈ ಹೊಸ ಘಟಕವು ಚೆನ್ನೈನಲ್ಲಿ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಅದರ ಘಟಕಕ್ಕೆ ಪೂರಕವಾಗಿದ್ದು, ಚೀನಾದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿ, ಜಾಗತಿಕ ಬೇಡಿಕೆಗಳನ್ನು ಪೂರೈಸಲು ಆಪಲ್‌ಗೆ ನೆರವಾಗಲಿದೆ.

ಪ್ರಾರಂಭದಲ್ಲಿ ಕಾರ್ಮಿಕರ ಕೊರತೆ ಸೇರಿದಂತೆ ಕೆಲವು ಸವಾಲುಗಳಿದ್ದರೂ, ಅವುಗಳನ್ನು ಯಶಸ್ವಿಯಾಗಿ ನಿವಾರಿಸಿ, ಫಾಕ್ಸ್‌ಕಾನ್ ಈಗ ಬೆಂಗಳೂರನ್ನು ಜಾಗತಿಕ ಐಫೋನ್ ನಕ್ಷೆಯಲ್ಲಿ ಸೇರಿಸಲು ಸಿದ್ಧವಾಗಿದೆ. ಆಪಲ್ ಸಿಇಒ ಟಿಮ್ ಕುಕ್ ಅವರ ಪ್ರಕಾರ, ಜೂನ್ 2025 ರ ಹೊತ್ತಿಗೆ ಅಮೆರಿಕದಲ್ಲಿ ಮಾರಾಟವಾದ ಐಫೋನ್‌ಗಳ ಗಣನೀಯ ಪಾಲು ಭಾರತದಲ್ಲಿ ತಯಾರಾಗಿವೆ.

ಉದ್ಯೋಗ ಸೃಷ್ಟಿಗೆ ಆದ್ಯತೆ :

ದೇವನಹಳ್ಳಿ ಘಟಕದಲ್ಲಿ ಸುಮಾರು 30,000 ಕಾರ್ಮಿಕರಿಗೆ ವಸತಿ ವ್ಯವಸ್ಥೆ ಒದಗಿಸುವ ಬೃಹತ್ ವಸತಿಗೃಹಗಳನ್ನು ನಿರ್ಮಿಸಲಾಗುತ್ತಿದೆ. ಇದು ಭಾರತದಲ್ಲಿಯೇ ಈ ರೀತಿಯ ಅತಿದೊಡ್ಡ ಕಾರ್ಮಿಕ ವಸತಿಗೃಹವಾಗಿದೆ. ಇಲ್ಲಿನ ಉದ್ಯೋಗಿಗಳಲ್ಲಿ ಶೇ. 50 ರಿಂದ 80 ರಷ್ಟು ಮಹಿಳಾ ಕಾರ್ಮಿಕರು ಇರಲಿದ್ದಾರೆ ಎಂದು ಅಂದಾಜಿಸಲಾಗಿದೆ.

ಪ್ರಾರಂಭಿಕ ಹಂತದಲ್ಲಿ, ಡಿಸೆಂಬರ್ 2025 ರ ವೇಳೆಗೆ ಸುಮಾರು 1 ಲಕ್ಷ ಐಫೋನ್‌ಗಳನ್ನು ಉತ್ಪಾದಿಸುವ ನಿರೀಕ್ಷೆಯಿದೆ. ಮುಂದಿನ ಎರಡನೇ ಹಂತದಲ್ಲಿ ವಾರ್ಷಿಕವಾಗಿ ಹೆಚ್ಚುವರಿ 5 ಮಿಲಿಯನ್ ಐಫೋನ್‌ಗಳ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಲು ಫಾಕ್ಸ್‌ಕಾನ್ ಯೋಜನೆ ರೂಪಿಸಿದೆ.

ಐಫೋನ್ ತಯಾರಿಕಾ ಹಬ್ ಆಗುವತ್ತ ದಾಪುಗಾಲು :

ಇನ್ನು ಸಂಶೋಧನಾ ಸಂಸ್ಥೆ ಸೈಬರ್ ಮೀಡಿಯಾ ರಿಸರ್ಚ್ ಪ್ರಕಾರ, ಭಾರತದಿಂದ ಐಫೋನ್ ರಫ್ತುಗಳು (ಭಾರತದಿಂದ ವಿದೇಶಕ್ಕೆ ಕಳುಹಿಸಲಾದ ಐಫೋನ್‌ಗಳು) 22.88 ಮಿಲಿಯನ್ (2 ಕೋಟಿ 28 ಲಕ್ಷ) ಯೂನಿಟ್‌ಗಳಿಗೆ ಏರಿಕೆಯಾಗಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ (ಜನವರಿಯಿಂದ ಜೂನ್​ವರೆಗೆ), ಭಾರತದಲ್ಲಿ ಐಫೋನ್ ತಯಾರಿಕೆಯ ಸಂಖ್ಯೆ 15.05 ಮಿಲಿಯನ್ (1 ಕೋಟಿ 50 ಲಕ್ಷ) ಆಗಿತ್ತು. ಅಂದರೆ, ವಾರ್ಷಿಕ ಆಧಾರದ ಮೇಲೆ ಇದು ಶೇ.52ರಷ್ಟು ಹೆಚ್ಚಾಗಿದೆ.

ಇನ್ನು ಈ ವರ್ಷದ ಜೂನ್​ವರೆಗೆ ದೇಶದಲ್ಲಿ 2.39 ಕೋಟಿ ಐಫೋನ್‌ಗಳನ್ನು ತಯಾರಿಸಲಾಗಿದೆ. ಅಮೆರಿಕದಲ್ಲಿ ಮಾರಾಟವಾಗುವ ಐಫೋನ್‌ಗಳಲ್ಲಿ ಶೇ.78ರಷ್ಟು ಭಾರತದಲ್ಲಿ ತಯಾರಾಗುತ್ತಿವೆ. ಮಾರುಕಟ್ಟೆ ಸಂಶೋಧಕ ಕ್ಯಾನಲಿಸ್ ಪ್ರಕಾರ, 2025ರ ಜನವರಿ ಮತ್ತು ಜೂನ್ ನಡುವೆ ಭಾರತದಲ್ಲಿ 23.9 ಮಿಲಿಯನ್ (2 ಕೋಟಿ 39 ಲಕ್ಷ) ಐಫೋನ್‌ಗಳನ್ನು ತಯಾರಿಸಲಾಗಿದ್ದು, ಇದು ಕಳೆದ ವರ್ಷಕ್ಕಿಂತ ಶೇ.53ರಷ್ಟು ಹೆಚ್ಚಾಗಿದೆ.

WhatsApp Join our WhatsApp Channel
Previous Post

ಬಾಲ್ಯ ವಿವಾಹ ನಿಷೇಧ ತಿದ್ದುಪಡಿ ವಿಧೇಯಕ ಅಂಗೀಕಾರ : ಅಪ್ರಾಪ್ತರಿಗೆ ನಿಶ್ಚಿತಾರ್ಥ ಮಾಡಿದರೂ ಕಾನೂನು ಕ್ರಮ

Next Post

ವನ್ಯಜೀವಿ ಸಂರಕ್ಷಕರ ಅರೆಬೆತ್ತಲೆ ಪ್ರತಿಭಟನೆ: ಬೇಡಿಕೆ ಈಡೇರಿಸಲು ಸರ್ಕಾರಕ್ಕೆ ಆಗ್ರಹ

Next Post

ವನ್ಯಜೀವಿ ಸಂರಕ್ಷಕರ ಅರೆಬೆತ್ತಲೆ ಪ್ರತಿಭಟನೆ: ಬೇಡಿಕೆ ಈಡೇರಿಸಲು ಸರ್ಕಾರಕ್ಕೆ ಆಗ್ರಹ

TTD News | ತಿರುಪತಿ ತಿಮ್ಮಪ್ಪನಿಗೆ ₹140 ಕೋಟಿ ಮೌಲ್ಯದ 121 ಕೆ.ಜಿ. ಚಿನ್ನ: ಅನಾಮಧೇಯ ಭಕ್ತನ ಕಾಣಿಕೆ

Please login to join discussion

Like Us on Facebook

Follow Us on Twitter

Recent News

ಆ. 15ರಿಂದ ಸ್ವಿಗ್ಗಿ ಸೇವೆ ಸ್ಥಗಿತ? ಆನ್‌ಲೈನ್ ಆಹಾರ ನೀಡಿಕೆ ಸಂಸ್ಥೆ ವಿರುದ್ಧ ಬೆಂಗಳೂರು ಹೋಟೆಲುಗಳ ಸಂಘದ ಖಡಕ್ ಎಚ್ಚರಿಕೆ

July 29, 2026

1200 ಬೋರ್‌ವೆಲ್‌ಗಳಿಗೆ ಮರುಜೀವ: ತಮಿಳುನಾಡು ಐಎಎಸ್ ಅಧಿಕಾರಿಗೆ ನಟ ಮಾಧವನ್ ಸಲಾಂ

July 29, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

ಆ. 15ರಿಂದ ಸ್ವಿಗ್ಗಿ ಸೇವೆ ಸ್ಥಗಿತ? ಆನ್‌ಲೈನ್ ಆಹಾರ ನೀಡಿಕೆ ಸಂಸ್ಥೆ ವಿರುದ್ಧ ಬೆಂಗಳೂರು ಹೋಟೆಲುಗಳ ಸಂಘದ ಖಡಕ್ ಎಚ್ಚರಿಕೆ

July 29, 2026

1200 ಬೋರ್‌ವೆಲ್‌ಗಳಿಗೆ ಮರುಜೀವ: ತಮಿಳುನಾಡು ಐಎಎಸ್ ಅಧಿಕಾರಿಗೆ ನಟ ಮಾಧವನ್ ಸಲಾಂ

July 29, 2026
BWSSB Head Office

BWSSB News | ಬೆಂಗಳೂರು: ಜು. 31ರಂದು ಈ ಪ್ರದೇಶಗಳಲ್ಲಿ 15 ಗಂಟೆ ಕಾವೇರಿ ನೀರು ಇರಲ್ಲ

July 28, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group