Sunday, September 13, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    Technology News | ಈಗ, ಕೂತಲ್ಲೇ ವಿಶ್ವ ಸುತ್ತಿ: Live ಕ್ಯಾಮ್ ಮ್ಯಾಪ್ ಮೂಲಕ ಜಗತ್ತನ್ನು ಕಣ್ತುಂಬಿಕೊಳ್ಳಿ!!

    ಪಿಡಬ್ಲ್ಯೂಡಿ ಲಂಚದ ಹಣ ಆಫ್ರಿಕಾದ ಚಿನ್ನದ ಗಣಿಗೆ?: ಸತೀಶ್ ಜಾರಕಿಹೊಳಿ ವಿರುದ್ಧ ಆರ್. ಅಶೋಕ್ ಗಂಭೀರ ಆರೋಪ

    ದೆಹಲಿಯಲ್ಲಿ ಬ್ರಿಕ್ಸ್‌ ಶೃಂಗಸಭೆ: ಕೊಳಗೇರಿಗೆ ಪರದೆ ಕಟ್ಟಿ ಬಡತನ ಮರೆಮಾಚುವ ಯತ್ನಕ್ಕೆ ಆಕ್ರೋಶ

    ಎಸ್ಐಆರ್: ನೋಟಿಸ್ ಪಡೆದ ಹಿರಿಯರು, ಅಸ್ವಸ್ಥರ ಪರವಾಗಿ ಕುಟುಂಬದ ವಯಸ್ಕ ಸದಸ್ಯರು ಹಾಜರಾಗಲು ಚುನಾವಣಾ ಆಯೋಗ ಅನುಮತಿ

    KSRTC WhatsApp ಟಿಕೆಟ್ ಬುಕ್ಕಿಂಗ್ ಆರಂಭ: ಮೊಬೈಲ್‌ನಲ್ಲೇ 4 ಸಾರಿಗೆ ನಿಗಮಗಳ ಸೇವೆ ಲಭ್ಯ

    BIS Hallmark | ​ಚೆನ್ನೈನಲ್ಲಿ ಹಾಲ್‌ಮಾರ್ಕ್ ಇಲ್ಲದ ಬರೋಬ್ಬರಿ 804 ಗ್ರಾಂ ಚಿನ್ನಾಭರಣ ವಶ: ಬಿಐಎಸ್ ತಂಡದಿಂದ ದಾಳಿ: ಚಿನ್ನಾಭರಣ ಅಸಲಿತನ ಹೇಗೆ ಚೆಕ್ ಮಾಡೋದು ಗೊತ್ತಾ?

    CM DK Shivakumar Open Letter | ಅಧಿಕಾರಕ್ಕಿಂತ ಹೊಣೆಗಾರಿಕೆ ದೊಡ್ಡದು: 100 ದಿನ ಪೂರೈಸಿದ ಸಿಎಂ ಡಿ.ಕೆ. ಶಿವಕುಮಾರ್ ಬಹಿರಂಗ ಪತ್ರ

    Free Coaching | ಮುಖ್ಯಮಂತ್ರಿ ವಿದ್ಯಾರ್ಥಿ ಸಹಾಯ ಹಸ್ತ: 90,000 ಅಭ್ಯರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ಆನ್‌ಲೈನ್ ಕೋಚಿಂಗ್

    ಪಿಡಬ್ಲ್ಯುಡಿ ಸಚಿವ ಸತೀಶ್ ಜಾರಕಿಹೊಳಿಗೆ ಇಡಿ ಶಾಕ್: 25ಕ್ಕೂ ಹೆಚ್ಚು ಕಡೆ ದಾಳಿ

  • Bengaluru Focus

    Bescom News | ​ಸಾರ್ವಜನಿಕ ಗಣೇಶೋತ್ಸವ: ಬೆಸ್ಕಾಂ ಕಟ್ಟುನಿಟ್ಟಿನ ಸುರಕ್ಷತಾ ಮಾರ್ಗಸೂಚಿ ಪ್ರಕಟ

    BIG BREAKING | ₹15 ಕೋಟಿ ಸುರಿದ ಬೆನ್ನಲ್ಲೇ ಬಿಡಿಎ ಕೇಂದ್ರ ಕಚೇರಿ ಪಾರಂಪರಿಕ ಕಟ್ಟಡ ಕೆಡವಲು ಸಂಚು: ನೌಕರರ ತೀವ್ರ ಆಕ್ರೋಶ

    GBA News | ಬೆಂಗಳೂರು ರಸ್ತೆ ಗುಂಡಿಗಳಿಗೆ ₹2 ಕೋಟಿಯ ‘ಜೆಟ್ ಪ್ಯಾಚರ್’ ಮುಲಾಮು: ಶಾಶ್ವತ ಪರಿಹಾರವೇ, ಕೇವಲ ಬೂಟಾಟಿಕೆಯೇ?

    ಎಸ್ಐಆರ್: ನೋಟಿಸ್ ಪಡೆದ ಹಿರಿಯರು, ಅಸ್ವಸ್ಥರ ಪರವಾಗಿ ಕುಟುಂಬದ ವಯಸ್ಕ ಸದಸ್ಯರು ಹಾಜರಾಗಲು ಚುನಾವಣಾ ಆಯೋಗ ಅನುಮತಿ

    BWSSB News | ಬೆಂಗಳೂರಿನಲ್ಲಿ ತ್ಯಾಜ್ಯ ನೀರು ಸಂಸ್ಕರಣೆಗೆ ಬಿಗಿಯಾದ ಕ್ರಮ: KSPCB, ಜಲಮಂಡಳಿಗೆ ಸಚಿವ ರಾಮಲಿಂಗಾರೆಡ್ಡಿ ಗಡುವು

    KSRTC WhatsApp ಟಿಕೆಟ್ ಬುಕ್ಕಿಂಗ್ ಆರಂಭ: ಮೊಬೈಲ್‌ನಲ್ಲೇ 4 ಸಾರಿಗೆ ನಿಗಮಗಳ ಸೇವೆ ಲಭ್ಯ

    BW SPECIAL | ಬೆಂಗಳೂರಿಗೆ ಆಡಳಿತ ಗ್ರಹಣ: ಮೇಯರ್, ಕಾರ್ಪೊರೇಟರ್‌ಗಳಿಲ್ಲದೆ 6 ವರ್ಷ ಪೂರ್ಣ

    ಪಿಡಬ್ಲ್ಯುಡಿ ಸಚಿವ ಸತೀಶ್ ಜಾರಕಿಹೊಳಿಗೆ ಇಡಿ ಶಾಕ್: 25ಕ್ಕೂ ಹೆಚ್ಚು ಕಡೆ ದಾಳಿ

    ಓಲಾ, ಊಬರ್ ಗೂ ಬಿಎಂಟಿಸಿ ಲೈವ್ ಟ್ರ್ಯಾಕಿಂಗ್ ಆಪ್: ಮೆಟ್ರೋಗೆ 200 ಮಿನಿ ಎಸಿ ಬಸ್ ಸಂಪರ್ಕ

  • Public interest
  • BW Special
  • Life Style
  • Photo Gallery
  • Video
No Result
View All Result

Home Bengaluru Focus

BW SPECIAL | ಕಬ್ಬನ್‌ ಪಾರ್ಕ್‌ನಲ್ಲಿ ನವೀಕೃತ ‘ನಮ್ಮ ಬೆಂಗಳೂರು ಅಕ್ವೇರಿಯಂ’: ಜಲಸಂಪತ್ತಿನ ವಿಸ್ಮಯ ಲೋಕ ನಿಮ್ಮನ್ನು ಕೈ ಬೀಸಿ ಕರೆಯುತ್ತಿದೆ

ಆಕ್ವಾಸ್ಕೇಪಿಂಗ್‌ ಕಲೆಯಿಂದ ಪ್ರವಾಸಿಗರನ್ನು ಸೆಳೆಯುತ್ತಿರುವ ಮನಮೋಹಕ ಲೋಕ | ಅಮೆಜಾನ್ ನದಿಯಲ್ಲಿ ಕಂಡುಬರುವ ಕೆಂಪು ಹೊಟ್ಟೆಯ ಪಿರಾನ್ಹಾ, ಸಹ್ಯಾದ್ರಿಯ ನೇತ್ರಾಣಿ ದ್ವೀಪಗಳಲ್ಲಿನ ಮೀನು ಸೇರಿದಂತೆ ನೂರಾರು ಪ್ರಭೇದಗಳನ್ನು ಇಲ್ಲಿ ಪ್ರದರ್ಶಿಸಲಾಗಿದೆ

by Bengaluru Wire Desk
June 15, 2025
in Bengaluru Focus, Life Style
Reading Time: 2 mins read
0

ಬೆಂಗಳೂರು, ಜೂ.15 www.bengaluruwire.com : ಬಣ್ಣ ಬಣ್ಣದ ಮೀನುಗಳು ಅಕ್ವೇರಿಯಂ ಕಣ್ಣಿನ ಮುಂದೆ ಸಂಚರಿಸುತ್ತಿದ್ದರೆ ಹಾಯ್ ಅನ್ನಿಸುತ್ತೆ. ಇದೇ ಕಾರಣಕ್ಕೆ ಬೆಂಗಳೂರಿನಲ್ಲಿ ಲಕ್ಷಾಂತರ ಮನೆಗಳಲ್ಲಿ ಅಲಂಕಾರಿಕ ಮೀನುಗಳನ್ನು ವಿವಿಧ ಬಗೆಯ ಅಕ್ವೇರಿಯಂಗಳಲ್ಲಿ ಸಾಕುತ್ತಾ ಆನಂದ ಪಡುತ್ತಾರೆ. ಒಂದೇ ಕಡೆ ಸಮುದ್ರ, ನದಿ, ಸರೋವರ, ವಿದೇಶ ತಳಿಯ ಹಲವು ಪ್ರಬೇಧದ ಈ ಜಲಚರಗಳನ್ನು ನೋಡಬೇಕೆಂದರೆ ‘ನಮ್ಮ ಬೆಂಗಳೂರು ಅಕ್ವೇರಿಯಂ’ ಭೇಟಿ ನೀಡಬಹುದು.

ಕಸ್ತೂರಬಾ ರಸ್ತೆಯ ಕಬ್ಬನ್‌ ಉದ್ಯಾನದ ಆವರಣದಲ್ಲಿ, ಸುಮಾರು ₹14 ಕೋಟಿ ವೆಚ್ಚದಲ್ಲಿ ನವೀಕರಣಗೊಂಡು ಹೊಸ ರೂಪದಲ್ಲಿ ಮರುಜನ್ಮ ಪಡೆದಿರುವ ‘ನಮ್ಮ ಬೆಂಗಳೂರು ಅಕ್ವೇರಿಯಂ’ (ಹಿಂದಿನ ಸರ್ಕಾರಿ ಮತ್ಸ್ಯಾಲಯ) ಈಗ ಪ್ರವಾಸಿಗರ ಪ್ರಮುಖ ಆಕರ್ಷಣೆಯಾಗಿದೆ. ಕಳೆದ  ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದಲ್ಲಿ (ಪಿಪಿಪಿ) ‘ನಮ್ಮ ಬೆಂಗಳೂರು ಅಕ್ವೇರಿಯಂ’ ಎಂಬ ಖಾಸಗಿ ಸಂಸ್ಥೆಯು ಈ ಐತಿಹಾಸಿಕ ಮತ್ಸ್ಯಾಲಯಕ್ಕೆ ಆಧುನಿಕ ಸ್ಪರ್ಶ ನೀಡಿದ್ದು, ಇದು ಬೆಂಗಳೂರಿನ ಹೊಸ ಹೆಗ್ಗುರುತಾಗಿ ರೂಪುಗೊಂಡಿದೆ.

ವಿಸ್ಮಯಕಾರಿ ಜಲಜಗತ್ತು: ಪ್ರಮುಖ ಆಕರ್ಷಣೆಗಳು :

ನವೀಕೃತ ಅಕ್ವೇರಿಯಂ 300ಕ್ಕೂ ಹೆಚ್ಚು ಮೀನು ಪ್ರಬೇಧಗಳು, 350 ಸಸ್ಯ ಪ್ರಬೇಧಗಳು ಮತ್ತು 30 ಜಾತಿಯ ಅಕಶೇರುಕಗಳ ಸಂಗ್ರಹವನ್ನು ಹೊಂದಿದೆ. ಅಮೆಜಾನ್ ನದಿಯಲ್ಲಿ ಕಂಡುಬರುವ ಕೆಂಪು ಹೊಟ್ಟೆಯ ಪಿರಾನ್ಹಾಗಳು (Red Belly Piranhas), ಲಿಪ್‌ಸ್ಟಿಕ್ ನಾಸೊ ಟ್ಯಾಂಗ್‌ಗಳು (Lipstick Naso Tangs), ಬಿದಿರಿನ ಶಾರ್ಕ್‌ಗಳು (Bamboo Sharks) ಮತ್ತು ಕ್ವೀನ್ ಕೋರಿಸ್ (Queen Coris) ನಂತಹ ವಿಲಕ್ಷಣ ಪ್ರಭೇದಗಳು ಇಲ್ಲಿ ಮುಖ್ಯ ಆಕರ್ಷಣೆಯಾಗಿವೆ. ಅಲ್ಲದೆ, ನಕ್ಷತ್ರ ಮೀನು (starfish), ರೀಫ್ ಲೋಬ್‌ಸ್ಟರ್‌ಗಳು (reef lobsters) ಮತ್ತು ಜೆಲ್ಲಿ ಮೀನುಗಳ (jellyfish) ಒಂದು ಶ್ರೇಣಿಯೂ ಇಲ್ಲಿ ಪ್ರದರ್ಶನಕ್ಕಿದೆ. 

70,000 ಲೀಟರ್ ಸಾಮರ್ಥ್ಯದ ಮೆರೈನ್ ಟನಲ್ ಅಕ್ವೇರಿಯಂ:

ಮತ್ಸಾಲಯ ಕಟ್ಟಡದ ಆವರಣದಲ್ಲಿ 70,000 ಲೀಟರ್ ಸಾಮರ್ಥ್ಯದ ಉಪ್ಪು ನೀರಿನ  ಅಂತರರಾಷ್ಟ್ರೀಯ ಮಟ್ಟದ ಟನಲ್ ಅಕ್ವೇರಿಯಂ ನಿರ್ಮಿಸಲಾಗಿದೆ. ಇದು ರಾಜ್ಯದ ಮೊದಲ ಶಾಶ್ವತ ಟನಲ್ ಅಕ್ವೇರಿಯಂ ಆಗಿದೆ. ಸ್ಕೂಬಾ ಡೈವಿಂಗ್ ಮೂಲಕ ಸಮುದ್ರದಾಳಕ್ಕೆ ಇಳಿಯುವವರಿಗೆ ಆಗುವಂತಹ ಅನುಭವ ಇಲ್ಲಿ ಭೇಟಿಕೊಡುವ ಪ್ರೇಕ್ಷಕರಿಗೆ ಅನುಭವವಾಗಲಿದೆ. 

 90,000 ಲೀಟರ್ ಕೋಯಿ ಫಿಶ್ ಕೊಳ: 

ಮತ್ಸ್ಯಾಲಯದ ಹಿಂಭಾಗದಲ್ಲಿ 90,000 ಲೀಟರ್ ನೀರು ಸಂಗ್ರಹ ಸಾಮರ್ಥ್ಯದ ಜಪಾನ್ ಕೋಯಿ ಫಿಶ್‌ಗಳ ಕೊಳವನ್ನು ನಿರ್ಮಿಸಲಾಗಿದೆ. ಬಣ್ಣಬಣ್ಣದ ಕೋಯಿ ಫಿಶ್‌ಗಳನ್ನು ಇಲ್ಲಿ ನೀವು ವೀಕ್ಷಿಸಬಹುದು. ಪ್ರವಾಸಿಗರು  ಅಲ್ಲೇ ಮೀನುಗಳ ಆಹಾರವನ್ನು ಖರೀದಿಸಿ, ಅವುಗಳಿಗೆ ಹಾಕಲು ವ್ಯವಸ್ಥೆ ಕಲ್ಪಿಸಲಾಗಿದೆ.  ಜಪಾನಿನ ಸಂಸ್ಕೃತಿಯಲ್ಲಿ ಅದೃಷ್ಟ ಮತ್ತು ಸಮೃದ್ಧಿಯ ಸಂಕೇತವಾಗಿರುವ ಕೋಯಿ ಮೀನುಗಳು ಇಲ್ಲಿ ಪ್ರಮುಖ ಆಕರ್ಷಣೆಯಾಗಿವೆ.

ಆಕ್ವಾಸ್ಕೇಪಿಂಗ್‌ಗೆ ವಿಶೇಷ ಒತ್ತು :

ಕೆಂಪು ಹೊಟ್ಟೆಯ ಪಿರಾನ್ಹಾ ಮೀನುಗಳು.

ನವೀಕೃತ ಅಕ್ವೇರಿಯಂನಲ್ಲಿ ಆಕ್ವಾಸ್ಕೇಪಿಂಗ್‌ಗೆ ಹೆಚ್ಚಿನ ಮಹತ್ವ ನೀಡಲಾಗಿದೆ. ಮೊದಲ ಮಹಡಿ ಸಂಪೂರ್ಣವಾಗಿ ಆಕ್ವಾಸ್ಕೇಪಿಂಗ್ ಮತ್ತು ಕರ್ನಾಟಕದ ವೈವಿಧ್ಯಮಯ ಜಲ ಪರಿಸರ ವ್ಯವಸ್ಥೆಗಳಿಂದ ಪ್ರೇರಿತವಾದ ಥೀಮ್ ಪ್ರದರ್ಶನಗಳಿಗೆ ಮೀಸಲಾಗಿದೆ. ಸಹ್ಯಾದ್ರಿಯ ನೇತ್ರಾಣಿ ದ್ವೀಪಗಳಲ್ಲಿ ಕಂಡುಬರುವ ಮೀನಿನ ಪ್ರಭೇದಗಳನ್ನು ಇಲ್ಲಿನ ನೇಚರ್ ಮತ್ತು ಮರೀನ್ ಅಕ್ವೇರಿಯಂಗಳಲ್ಲಿ ಪ್ರದರ್ಶಿಸಲಾಗಿದೆ. ಪ್ರತಿಯೊಂದು ಅಕ್ವೇರಿಯಂನ ಮೇಲ್ಭಾಗದಲ್ಲಿ ಪ್ರದರ್ಶಿಸಲಾದ ಮೀನುಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಕನ್ನಡ ಮತ್ತು ಇಂಗ್ಲಿಷ್ ಫಲಕಗಳಲ್ಲಿ ಅಳವಡಿಸಲಾಗಿದೆ.

ನೈಸರ್ಗಿಕವಾದ  ವಸ್ತುಗಳನ್ನು ಬಳಸಿ ಆಕರ್ಷಕವಾದ ಅಕ್ವೇರಿಯಂಗಳನ್ನು ರಚಿಸುವ ಕಲೆಯಾದ ಆಕ್ವಾಸ್ಕೇಪಿಂಗ್ ಬೆಂಗಳೂರಿನಲ್ಲಿ ಹೆಚ್ಚು ಜನಪ್ರಿಯವಾಗುತ್ತಿದೆ. ಈ ಪ್ರವೃತ್ತಿಯು ನೈಸರ್ಗಿಕ ವಸ್ತುಗಳು ಮತ್ತು ಜೀವಂತ ಸಸ್ಯಗಳನ್ನು ಬಳಸಿಕೊಂಡು ನದಿಪಾತ್ರಗಳು, ಹಚ್ಚ ಹಸಿರಿನ ಅರಣ್ಯಗಳು ಅಥವಾ ಶಾಂತ ದ್ವೀಪಗಳನ್ನು ಅನುಕರಿಸುವ ಸ್ವಯಂ-ನಿರ್ವಹಣಾ ಪರಿಸರ ವ್ಯವಸ್ಥೆಗಳನ್ನು ರಚಿಸುವ ಸುಸ್ಥಿರ ಅಭ್ಯಾಸಗಳಿಗೆ ಒತ್ತು ನೀಡುತ್ತದೆ. 

ನಮ್ಮ ಬೆಂಗಳೂರು ಅಕ್ವೇರಿಯಂನಲ್ಲಿ, ಸಂದರ್ಶಕರು ಇಲ್ಲಿನ ಬಗೆ ಬಗೆಯ ಅಕ್ವೇರಿಯ ಒಳಗಿನ ವಿನ್ಯಾಸಗಳನ್ನು ಮೆಚ್ಚುವುದಲ್ಲದೆ, ತಮ್ಮ ಮನೆಗಳಲ್ಲಿ ಈ ಆಕ್ವಾಸ್ಕೇಪ್‌ಗಳನ್ನು ಹೇಗೆ ನಿರ್ಮಿಸಬಹುದೆಂಬ ಬಗ್ಗೆ ಮಾರ್ಗದರ್ಶನವನ್ನೂ ಪಡೆಯುತ್ತಿದ್ದಾರೆ.

ವಿದೇಶಿ ಮೀನುಗಳ ಲೋಕ :

ನಮ್ಮ ಬೆಂಗಳೂರು ಅಕ್ವೇರಿಯಂ ಒಳಭಾಗದಲ್ಲಿ ವ್ಯವಸ್ಥಿತವಾಗಿ ಇಡಲಾದ ತರಹೇವಾರಿ ಅಕ್ವೇರಿಯಂಗಳನ್ನು ಬಹಳ ಕುತೂಹಲದಿಂದ ವೀಕ್ಷಿಸುತ್ತಿರುವ ಜನ.

ಎರಡನೇ ಅಂತಸ್ತಿನಲ್ಲಿ ವಿದೇಶಿ ಅಲಂಕಾರಿಕ ಮೀನುಗಳಿರುವ 60ಕ್ಕೂ ಹೆಚ್ಚು ವೈವಿಧ್ಯಮಯ ಅಕ್ವೇರಿಯಂಗಳು ಇವೆ. ಸಮುದ್ರದ ಆಳದಲ್ಲಿನ ಪರಿಸರವನ್ನು ಇಲ್ಲಿ ಚಿಕ್ಕ ಚಿಕ್ಕ ಅಕ್ವೇರಿಯಂಗಳಲ್ಲಿ ಮರು ನಿರ್ಮಿಸಲಾಗಿದ್ದು, ಆಯಾ ಪರಿಸರಕ್ಕೆ ಹೊಂದಿಕೊಳ್ಳುವಂತಹ ಮೀನುಗಳನ್ನು ಅದರಲ್ಲಿ ಪ್ರದರ್ಶಿಸಲಾಗಿದೆ. ಇದೆಲ್ಲದಕ್ಕೂ ಮುಕುಟದಂತೆ ಈ ಅಂತಸ್ತಿನ ಮಧ್ಯ ಭಾಗದಲ್ಲಿ ಒಂದು ಚಿಕ್ಕದಾದ ಕೃತಕ ಜಲಪಾತ ನಿರ್ಮಿಸಲಾಗಿದೆ. ಇಲ್ಲಿ ಭೇಟಿ ಕೊಡುವ ಪ್ರೇಕ್ಷಕರು ಇದರ ಮುಂಭಾಗದಲ್ಲಿ ನಿಂತುಕೊಂಡು ಸೆಲ್ಫಿ- ಫೋಟೊ ತೆಗೆಸಿಕೊಳ್ಳುತ್ತಾರೆ. ಇದು ಮಕ್ಕಳಿಗೆ ಹೆಚ್ಚು ಖುಷಿ ಕೊಡುವ ತಾಣವಾಗಿದೆ.

ಸಂಪೂರ್ಣ ಮೂಲಸೌಕರ್ಯ ಮತ್ತು ಸುಸ್ಥಿರತೆ :

ಅಕ್ವೇರಿಯಂ ಆವರಣದಲ್ಲಿರುವ ಒಂದು ಚಿಲ್ಲರೆ ಮಾರಾಟ ಮಳಿಗೆಯು ಸಂದರ್ಶಕರಿಗೆ ಜಲಸಸ್ಯಗಳು, ಮೀನುಗಳು ಮತ್ತು ಸಲಕರಣೆಗಳನ್ನು ಖರೀದಿಸಲು ಅವಕಾಶ ನೀಡುತ್ತದೆ, ಇದು ಆಕ್ವಾಸ್ಕೇಪಿಂಗ್ ಪ್ರವೃತ್ತಿಗೆ ಮತ್ತಷ್ಟು ಉತ್ತೇಜನ ನೀಡುತ್ತದೆ. 1983ರಲ್ಲಿ 17,500 ಚದರಡಿಯಲ್ಲಿ ನಿರ್ಮಿಸಲಾದ ಈ ಮತ್ಸ್ಯಾಲಯದ ಹಳೆಯ ಕಟ್ಟಡ ವಿನ್ಯಾಸವನ್ನು ಹಾಗೇ ಉಳಿಸಿಕೊಂಡು ಅಭಿವೃದ್ಧಿಪಡಿಸಲಾಗಿದೆ. ‘ನಮ್ಮ ಬೆಂಗಳೂರು ಅಕ್ವೇರಿಯಂ‘ ಸಂಸ್ಥೆಯು ಮುಂದಿನ 30 ವರ್ಷಗಳವರೆಗೆ ಈ ಮತ್ಸ್ಯಾಲಯವನ್ನು ನಿರ್ವಹಣೆ ಮಾಡಲಿದೆ.

ಒಟ್ಟಾರೆ, ನವೀಕೃತ ‘ನಮ್ಮ ಬೆಂಗಳೂರು ಅಕ್ವೇರಿಯಂ’ ಕೇವಲ ಒಂದು ಪ್ರದರ್ಶನ ಸ್ಥಳವಾಗಿರದೆ, ಜಲಜೀವಶಾಸ್ತ್ರ, ಪರಿಸರ ಸಂರಕ್ಷಣೆ, ಮತ್ತು ಆಕ್ವಾಸ್ಕೇಪಿಂಗ್ ಕಲೆಯನ್ನು ಜನರಿಗೆ ಹತ್ತಿರವಾಗಿಸುವ ಒಂದು ಶೈಕ್ಷಣಿಕ ಮತ್ತು ಮನರಂಜನಾ ಕೇಂದ್ರವಾಗಿ ಹೊರಹೊಮ್ಮಿದೆ.

ನಗರದ ಜನತೆ, ಪ್ರವಾಸಿಗರು, ‘ನಮ್ಮ ಬೆಂಗಳೂರು ಅಕ್ವೇರಿಯಂ’ ಮೀನುಗಳ ವೀಕ್ಷಣೆಗೆ ವಾರದ ದಿನಗಳಲ್ಲಿ ಬೆಳಗ್ಗೆ 11ರಿಂದ ರಾತ್ರಿ 8 ಗಂಟೆಯವರೆಗೆ, ವಾರಾಂತ್ಯದಲ್ಲಿ ಬೆಳಗ್ಗೆ 9 ರಿಂದ ರಾತ್ರಿ 8 ಗಂಟೆಯವರೆಗೆ ಭೇಟಿ ನೀಡಬಹುದು.

Sharing is Caring

  • Share on WhatsApp (Opens in new window) WhatsApp
  • Print (Opens in new window) Print
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Share on LinkedIn (Opens in new window) LinkedIn

Like this:

Like Loading…
WhatsApp Join our WhatsApp Channel
Previous Post

ಶೇ.100 ಸಮೀಕ್ಷೆ ಪೂರ್ಣಗೊಳಿಸಲು ಮನೆಗಳಿಗೆ ಸ್ಟಿಕ್ಕರ್ ಅಂಟಿಸಿ: ಬಿಬಿಎಂಪಿ ವಲಯ ಆಯುಕ್ತ ಸುರಳ್ಕರ್ ವಿಕಾಸ್ ಕಿಶೋರ್

Next Post

ಸಾರಿಗೆ ಸಿಬ್ಬಂದಿ ಮೇಲಿನ ಹಲ್ಲೆ: ಕಠಿಣ ಕ್ರಮಕ್ಕೆ ಗೃಹ ಸಚಿವರಿಗೆ ರಾಮಲಿಂಗಾ ರೆಡ್ಡಿ ಪತ್ರ

Next Post
ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ.

ಸಾರಿಗೆ ಸಿಬ್ಬಂದಿ ಮೇಲಿನ ಹಲ್ಲೆ: ಕಠಿಣ ಕ್ರಮಕ್ಕೆ ಗೃಹ ಸಚಿವರಿಗೆ ರಾಮಲಿಂಗಾ ರೆಡ್ಡಿ ಪತ್ರ

UK F-35 Fighter Jet

ಬ್ರಿಟಿಷ್ ಎಫ್-35 ಫೈಟರ್ ಜೆಟ್ ತಿರುವನಂತಪುರಂನಲ್ಲಿ ತುರ್ತು ಭೂಸ್ಪರ್ಶ: ಭಾರತ-ಯುಕೆ ಸಹಕಾರಕ್ಕೆ ಸಾಕ್ಷಿ

Please login to join discussion

Like Us on Facebook

Follow Us on Twitter

Recent News

Bescom News | ​ಸಾರ್ವಜನಿಕ ಗಣೇಶೋತ್ಸವ: ಬೆಸ್ಕಾಂ ಕಟ್ಟುನಿಟ್ಟಿನ ಸುರಕ್ಷತಾ ಮಾರ್ಗಸೂಚಿ ಪ್ರಕಟ

September 13, 2026

Technology News | ಈಗ, ಕೂತಲ್ಲೇ ವಿಶ್ವ ಸುತ್ತಿ: Live ಕ್ಯಾಮ್ ಮ್ಯಾಪ್ ಮೂಲಕ ಜಗತ್ತನ್ನು ಕಣ್ತುಂಬಿಕೊಳ್ಳಿ!!

September 13, 2026
Bengaluru Wire, Kannada News, latest News in Kannada

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

Bescom News | ​ಸಾರ್ವಜನಿಕ ಗಣೇಶೋತ್ಸವ: ಬೆಸ್ಕಾಂ ಕಟ್ಟುನಿಟ್ಟಿನ ಸುರಕ್ಷತಾ ಮಾರ್ಗಸೂಚಿ ಪ್ರಕಟ

September 13, 2026

Technology News | ಈಗ, ಕೂತಲ್ಲೇ ವಿಶ್ವ ಸುತ್ತಿ: Live ಕ್ಯಾಮ್ ಮ್ಯಾಪ್ ಮೂಲಕ ಜಗತ್ತನ್ನು ಕಣ್ತುಂಬಿಕೊಳ್ಳಿ!!

September 13, 2026

ಪಿಡಬ್ಲ್ಯೂಡಿ ಲಂಚದ ಹಣ ಆಫ್ರಿಕಾದ ಚಿನ್ನದ ಗಣಿಗೆ?: ಸತೀಶ್ ಜಾರಕಿಹೊಳಿ ವಿರುದ್ಧ ಆರ್. ಅಶೋಕ್ ಗಂಭೀರ ಆರೋಪ

September 12, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group
%d